Updated News From Kaup

ರೋಟರಿ ಕ್ಲಬ್ಗಳ ಸಂಯುಕ್ತ ಆಶ್ರಯದಲ್ಲಿ ಸೋಲಾರ್ ವಿದ್ಯುತ್ ಸಂಪರ್ಕ

Posted On: 02-09-2021 10:35AM

ಉಡುಪಿ : ರೋಟರಿ ಜಿಲ್ಲೆ 3150 ರ ಹೈದರಾಬಾದ್ ಕ್ಲಬ್ ಮತ್ತು ರೋಟರಿ ಜಿಲ್ಲೆ 3182 ರ ಕಲ್ಯಾಣಪುರ ಹಾಗೂ ಸೈಬ್ರಕಟ್ಟೆ ರೋಟರಿ ಸಂಸ್ಥೆಗಳ ವತಿಯಿಂದ ಪಕ್ಕಿಬೆಟ್ಟು ಗ್ರಾಮದ ನಿವಾಸಿಯಾದ ಲೀಲಾವತಿ ಗಾಣಿಗ ಇವರ ಮನೆಗೆ ಸೋಲಾರ್ ವಿದ್ಯುತ್ ದೀಪದ ವ್ಯವಸ್ಥೆಯನ್ನು ರೋಟರಿ ರೋಶ್ನಿ ಕಾರ್ಯಕ್ರಮದಡಿ ಒದಗಿಸಿಕೊಡಲಾಯಿತು.

ರೋಟರಿ ನಿಕಟಪೂರ್ವ ಜಿಲ್ಲಾ ಗವರ್ನರ್ ರಾಜಾರಾಂ ಭಟ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿವಿಧ ಕಾರಣಗಳಿಂದಾಗಿ ಇವತ್ತಿನವರೆಗೂ ವಿದ್ಯುತ್ ಬೆಳಕನ್ನು ಹೊಂದಲು ವಿಫಲರಾದ ಸುಮಾರು 65 ವಯೋಮಾನದ ಇವರು ಇಂದು ಸಣ್ಣ ನೆಮ್ಮದಿಯ ಬದುಕು ಕಾಣುವಂತಾಗಿದೆ ಎಂದು ಹೇಳಿ ಯಾವುದೇ ಭೌಗೋಳಿಕ ಮಿತಿ ಹೊಂದದ ರೋಟರಿಯ ಬಾಂಧವ್ಯ ಮತ್ತು ಸದಸ್ಯರುಗಳ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದರು.

ವೇದಿಕೆಯಲ್ಲಿ ಕಲ್ಯಾಣಪುರ ಹಾಗೂ ಸೈಬ್ರಕಟ್ಟೆ ರೋಟರಿ ಕ್ಲಬ್ ಗಳ ಅಧ್ಯಕ್ಷ ರಾದ ಶಂಭುಶಂಕರ್, ಪ್ರಸಾದ್ ಭಟ್, ಕಾರ್ಯದರ್ಶಿಗಳಾದ ಪ್ರಕಾಶ್, ಅಣ್ಣಯ್ಯ ದಾಸ್, ವಲಯ ಸೇನಾನಿಯವರುಗಳಾದ ಬ್ರಾಯನ್ ಡಿಸೋಜ, ವಿಜಯ್ ಕುಮಾರ್ ಶೆಟ್ಟಿ , ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಅಲೆನ್ ಲೂವಿಸ್, ಸತೀಶ್, ಬ್ಯಾಪ್ಟಿಸ್ಟ್ ಡಯಾಸ್ ಮತ್ತಿತರ ರೋಟರಿ ಗಣ್ಯರು ಉಪಸ್ಥಿತರಿದ್ದರು.

ಮಜೂರು : ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ವಾರ್ಷಿಕ ಹೂವಿನ ಪೂಜೆ

Posted On: 01-09-2021 04:17PM

ಕಾಪು : ಕಾಪು ತಾಲೂಕಿನ ಮಜೂರು, ಉಳಿಯಾರಗೋಳಿ, ಕರಂದಾಡಿ, ಪಂಜಿತ್ತೂರು, ಮಡುಂಬು, ಉಂಡಾರು ಗ್ರಾಮಗಳಿಗೆ ಸಂಬಂಧಿಸಿದ ಮಜೂರಿನ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ವಾರ್ಷಿಕ ಹೂವಿನ ಪೂಜೆಯು ಶನಿವಾರ (4-9-21) ಸಂಜೆ 3 ಗಂಟೆಗೆ ಜರಗಲಿದೆ. ಕೋವಿಡ್ ಮಾರ್ಗಸೂಚಿಯ ಅನ್ವಯದಂತೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ 3 ನೇ ಸ್ಥಾನದಲ್ಲಿ ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ

Posted On: 01-09-2021 01:27PM

ಉಡುಪಿ : ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ ಇಲ್ಲಿನ ವಿದ್ಯಾರ್ಥಿಗಳಾದ ಸಾತ್ವಿಕ್ ಪಿ ಭಟ್ 625 ರಲ್ಲಿ 625 ಮತ್ತು ಜೆರೊಹ್ಯಾಮ್ ಲೋಯ್ಡ್ ಮಾಬೆನ್ 625 ರಲ್ಲಿ 623 ದಾಖಲೆಯ ಅಂಕ ತೆಗೆದಿರುತ್ತಾರೆ.

ಪರೀಕ್ಷೆಗೆ ಹಾಜರಾದ 100 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 35 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು ಉಳಿದ ಮಕ್ಕಳು 60% ಕಿಂತ ಹೆಚ್ಚು ಅಂಕ ತೆಗೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.

ಫಲಿತಾಂಶದಲ್ಲಿ ಶಾಲೆಯು ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ 3 ನೇ ಸ್ಥಾನದಲ್ಲಿರುವುದು ಶಾಲೆಯ ಈ ಸಾಲಿನ ಸಾಧನೆಯಾಗಿರುತ್ತದೆ.

ಈ ಸಾಧನೆಗಾಗಿ ಎಲ್ಲಾ ವಿದ್ಯಾರ್ಥಿಗಳಿಗೂ, ಇದಕ್ಕೆ ತುಂಬಾ ಶ್ರಮವಹಿಸಿದ ಮುಖ್ಯ ಶಿಕ್ಷಕರು, ಮುಖ್ಯ ಶಿಕ್ಷಕಿ, ಶಿಕ್ಷಕ - ಶಿಕ್ಷಕಿಯರು ಹಾಗೂ ಶಿಕ್ಷಕೇತರ ವೃಂದದವರು ಹಾಗೂ ಮಕ್ಕಳ ಪೋಷಕರಿಗೆ ಶಾಲಾಡಳಿತ ಮಂಡಳಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ರೋಟರಿ ಕ್ಲಬ್ ಕಲ್ಯಾಣಪುರದ ವತಿಯಿಂದ ಸಹಾಯಧನ ವಿತರಣೆ

Posted On: 01-09-2021 01:20PM

ಉಡುಪಿ : ರೋಟರಿ ಕ್ಲಬ್ ಕಲ್ಯಾಣಪುರದ ವತಿಯಿಂದ ಮೂಡುಕುದ್ರು ಗ್ರಾಮದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಯಾದ ಪ್ರಥಮ್ ಇವರಿಗೆ ಶೈಕ್ಷಣಿಕ ಶುಲ್ಕ ಪಾವತಿ ಬಗ್ಗೆ ರೂಪಾಯಿ 12,000 ವನ್ನು ವಿತರಿಸಲಾಯಿತು. ಇವರು ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿರುತ್ತಾರೆ.

ಕ್ಲಬ್ ನ ಕೋಶಾಧಿಕಾರಿ ದಿವಾಕರ್ ರವರು ಚೆಕ್ ವಿತರಿಸಿದರು.

ಕ್ಲಬ್ ನ ಅಧ್ಯಕ್ಷ ಶಂಭುಶಂಕರ್, ಕಾರ್ಯದರ್ಶಿ ಪ್ರಕಾಶ್, ನಿಕಟಪೂರ್ವ ಅಧ್ಯಕ್ಷರಾದ ಡೆಸ್ಮಂಡ್ ವಾಸ್, ನಿಕಟಪೂರ್ವ ರೋಟರಿ ಜಿಲ್ಲಾ ಗವರ್ನರ್ ರಾಜಾರಾಂ ಭಟ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

ರೋಟರಿ ಕಲ್ಯಾಣಪುರ - ಮಹಿಳಾ ಸಮಾನತೆ ದಿನಾಚರಣೆ

Posted On: 01-09-2021 01:13PM

ಉಡುಪಿ : ಮಹಿಳಾ ಸಮಾನತೆ ದಿನವನ್ನು ಆಗಸ್ಟ್ 26 ರಂದು ರೋಟರಿ ಕ್ಲಬ್ ಕಲ್ಯಾಣಪುರದ ವಾರದ ಸಭೆಯಲ್ಲಿ ಆಚರಿಸಲಾಯಿತು. ಕ್ಲಬ್ ನ ನಿಯೋಜಿತ ಅಧ್ಯಕ್ಷೆ ಶಾರ್ಲೆಟ್ ಲೂವಿಸ್ ರವರು ಮಹಿಳಾ ಸಮಾನತೆ, ಹಕ್ಕು ಮತ್ತು ಸಾಮಾಜಿಕ ಮೌಲ್ಯದ ಬಗ್ಗೆ ಮಾಹಿತಿ ನೀಡಿದರು.

ಶಿಕ್ಷಣದ ಹಕ್ಕು ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಔದ್ಯೋಗಿಕ ರಂಗದಲ್ಲಿ ಮಹಿಳೆಯರ ಸವಾಲುಗಳ ಬಗ್ಗೆ ಮಾತನಾಡಿದರು.

ಈ ಸಂದರ್ಭ ಕ್ಲಬ್ ನ ಅಧ್ಯಕ್ಷ ಶಂಭುಶಂಕರ್, ಕಾರ್ಯದರ್ಶಿ ಪ್ರಕಾಶ್, ನಿಕಟಪೂರ್ವ ಅಧ್ಯಕ್ಷರಾದ ಡೆಸ್ಮಂಡ್ ವಾಸ್, ನಿಕಟಪೂರ್ವ ರೋಟರಿ ಜಿಲ್ಲಾ ಗವರ್ನರ್ ರಾಜಾರಾಂ ಭಟ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾಧಿಕಾರಿಯಾಗಿ ಸೇವೆಗೈದ ಜಿ. ಜಗದೀಶ್ ಅವರಿಗೆ ಬೀಳ್ಕೊಡುಗೆ

Posted On: 31-08-2021 10:17PM

ಉಡುಪಿ : ಜಿಲ್ಲಾಧಿಕಾರಿಯಾಗಿ 2 ವರ್ಷ ಸೇವೆ ಸಲ್ಲಿಸಿ ಪ್ರಸ್ತುತ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ಜಂಟಿ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡಿರುವ ಜಿ. ಜಗದೀಶ್ ಅವರಿಗೆ ಇಂದು ( 31-08-2021) ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಶಾಸಕರಾದ ಕೆ. ರಘುಪತಿ ಭಟ್ ರವರು ಭಾಗವಹಿಸಿ ಅವರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಉಡುಪಿ ನಗರ ಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ ಹಾಗೂ ಸಹಾಯಕ ಆಯುಕ್ತರಾದ ರಾಜು ಕೆ, ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು, ಜಿಲ್ಲಾ ಅರಣ್ಯಾಧಿಕಾರಿಗಳಾದ ಆಶಿಶ್ ರೆಡ್ಡಿ, ಕರಾವಳಿ ಕಾವಲು ಪಡೆ ಅಧೀಕ್ಷಕರಾದ ನಿಖಿಲ್, ಜಿಲ್ಲಾಧಿಕಾರಿಗಳ ಧರ್ಮಪತ್ನಿ ಸೌಮ್ಯ ಮತ್ತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಪು : ಯಶಸ್ವಿಯಾದ ಬೃಹತ್ ಲಸಿಕಾ ಅಭಿಯಾನ

Posted On: 31-08-2021 10:08PM

ಕಾಪು : ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು, ಕಾಪು ಶ್ರೀ ವೆಂಕಟರಮಣ, ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಜಿ ಎಸ್ ಬಿ ಫ್ರೆಂಡ್ಸ್ ಕಾಪು ಇವರ ಸಹಯೋಗದಲ್ಲಿ ಕಾಪು ಶ್ರೀ ಹಳೇ ಮಾರಿಯಮ್ಮ ಸಭಾಗ್ರಹದಲ್ಲಿ ಬೃಹತ್ ಲಸಿಕಾ ಅಭಿಯಾನವು ಯಶಸ್ವಿಯಾಗಿ ಜರಗಿತು.

ಈ ಸಂದರ್ಭದಲ್ಲಿ ಹಲವಾರು ಮಂದಿ ಲಸಿಕಾ ಅಭಿಯಾನದ ಪ್ರಯೋಜನ ಪಡೆದರು.

ನಮ್ಮ ಕಾಪು : ನಿಮ್ಮ ಸುದ್ದಿ - ನಮ್ಮ ವೆಬ್

Posted On: 31-08-2021 11:05AM

ನಮ್ಮ ಕಾಪು ಓದುಗರ ಅಪೇಕ್ಷೆಯ ಮೇರೆಗೆ ಇದೀಗ ರಾಜಕೀಯ ಸುದ್ದಿಯೂ ನಮ್ಮ ಕಾಪು ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಪ್ರಸರಣವಾಗಲಿದೆ. ತಮ್ಮ ಪಕ್ಷದ ಸುದ್ದಿ, ಜಾಹೀರಾತುಗಳನ್ನು ಸ್ವೀಕರಿಸಲಾಗುವುದು.

ನಿಮ್ಮೂರಿನ ಕಾರ್ಯಕ್ರಮಗಳ ವರದಿ, ಪ್ರತಿಭೆಗಳ ಪರಿಚಯ, ಲೇಖನಗಳನ್ನು ಕಳುಹಿಸಿ.

(ವಿ.ಸೂ : ರಾಜಕೀಯ ಸುದ್ದಿ, ಹುಟ್ಟು ಹಬ್ಬ, ಶುಭಾಶಯ ಇತ್ಯಾದಿ ಜಾಹೀರಾತುಗಳಿಗೆ ಶುಲ್ಕ ಅನ್ವಯ) ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 83109 13207

ರತ್ನಾವತಿ ಪ್ರಭು ನಿಧನ

Posted On: 31-08-2021 10:40AM

ಕಾಪು : ರತ್ನಾವತಿ ಪ್ರಭು 92,ಹೇರೂರು ಕಾಪು, 92, ಹೇರೂರು ಗ್ರಾಮದ ಅಡ್ಡೆಗುತ್ತು ಮನೆತನದ ದಿ.ಮೇಣ್ಪ ನಾಯಕ್ ಯಾನೆ ದೇವಪ್ಪ ಪ್ರಭುರವರ ಧರ್ಮಪತ್ನಿ ರತ್ನಾವತಿ ಪ್ರಭು (87) ರವರು ಅಲ್ಪಕಾಲದ ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ದಿನಾಂಕ ಆ.30 ಸೋಮವಾರ ಮಧ್ಯ ರಾತ್ರಿ ನಿಧನ ಹೊಂದಿದರು.

ಮೃತರು ಐವರು ಪುತ್ರರು, ಸೊಸೆಯಂದಿರು ಹಾಗೂ ಪೌತ್ರ ಪೌತ್ರಿಯರನ್ನು ಅಗಲಿದ್ದಾರೆ. ಅವರು ಶ್ರೀ ದುರ್ಗಾಪರಮೇಶ್ವರಿ ಖಾಸಾಗಿ ಹಿರಿಯ ಪ್ರಾರ್ಥಮಿಕ ಶಾಲೆ ಬಂಟಕಲ್ಲು ಇದರ ಮೊದಲ ಬ್ಯಾಚ್ ವಿದ್ಯಾರ್ಥಿನಿಯಾಗಿದ್ದರು.

ಬಂಟಕಲ್ : ಮಹಿಳೆಯ ಅನಾರೋಗ್ಯದ ಚಿಕಿತ್ಸೆಯ ವೆಚ್ಚಕ್ಕಾಗಿ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮನವಿ

Posted On: 31-08-2021 09:50AM

ಕಾಪು : ಸ್ತನದ ಕ್ಯಾನ್ಸರ್ ಹಾಗೂ ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿರುವ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಬಂಟಕಲ್ ನ ಮಹಿಳೆಯು ಯಾವುದೇ ಆದಾಯವಿಲ್ಲದೆ ತನ್ನ ಕುಟುಂಬವನ್ನು ನಡೆಸುತ್ತಿದ್ದಾರೆ.ಇವರಿಗೆ ಎರಡು ಹೆಣ್ಣುಮಕ್ಕಳು. ಒಬ್ಬಳು ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದರೆ ಮತ್ತೊಬ್ಬಳು ಡಿಗ್ರಿ ಮಾಡಬೇಕೆನ್ನುವ ಆಸೆ ಹೊತ್ತು ಮನೆಯಲ್ಲಿ ಇದ್ದಾಳೆ. ಈಕೆಯ ಗಂಡ ಅನಾರೋಗ್ಯದಿಂದಾಗಿ ಹಲವು ವರ್ಷದ ಹಿಂದೆ ಸಾವನ್ನಪ್ಪಿದರು. ಅದಾದ ನಂತರ ಈ‌ ಕುಟುಂಬವನ್ನು ಮುನ್ನಡೆಸುವ ಭಾರ ಈ ಮಹಿಳೆಯ ಮೇಲೆ‌ ಇತ್ತು.

ಆದರೆ ಇದೀಗ ಈಕೆಗೂ ಕೂಡ ಅನಾರೋಗ್ಯ ಬಂದ ಕಾರಣದಿಂದ ಈಕೆಯ ಚಿಕಿತ್ಸೆಯ ವೈದ್ಯಕೀಯ ಖರ್ಚನ್ನು ಭರಿಸಲು ಕೂಡ ಈಕೆಗೆ ಸಾಧ್ಯವಾಗುತ್ತಿಲ್ಲ. ಅಷ್ಟು ಮಾತ್ರವಲ್ಲದೆ ಮಳೆಗೆ ಸೋರುವಂತಹ ಮನೆ. ಅಷ್ಟು ಮಾತ್ರವಲ್ಲದೆ ವಿಷಜಂತುಗಳು ಬರಬಹುದೇನೋ ಎನ್ನುವ ರೀತಿಯಲ್ಲಿ ಇರುವ ಮನೆಯ ಬಾಗಿಲು ‌.ಇವೆಲ್ಲವನ್ನು ಕಂಡು ಒಮ್ಮೆ ಯಾರಿಗಾದರೂ ಬೇಸರವಾಗದಿರದು.

ಇವರ ಸದ್ಯದ ಪರಿಸ್ಥಿತಿಗೆ ಸಹಾಯವಾಗುವಂತೆ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇವರಿಗೆ 10,000/- ಚೆಕ್ ನೀಡಿ ಸ್ಪಂದನೆ ನೀಡಲಾಯಿತು. ಆದರೆ ಇವರ ಚಿಕಿತ್ಸೆಗೆ ಹಾಗೂ ಮನೆಯ ರಿಪೇರಿ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಲಕ್ಷ ಖರ್ಚುಗಳಿವೆ.

ಯಾರಾದರೂ ದಾನಿಗಳು ಇವರ ಸಮಸ್ಯೆಗೆ ನೆರವಾಗುವ ಮನಸ್ಸಿದ್ದಲ್ಲಿ ಈ ಕೆಳಗೆ ನೀಡಿರುವ ಎಕೌಂಟ್ ನಂಬರ್ ಗೆ ಧನ ಸಹಾಯ ಮಾಡಬಹುದು. Ac Num : 920020041710361 IFSC : UTIB0000181 Google pay or phone pay : https://rzp.Io/l/hasthapradhacti ~ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ (ರಿ.) https://www.hasthapradha.org