Updated News From Kaup
ಉಡುಪಿ ಹೆಲ್ಪ್ ಲೈನ್ 4 ನೇ ವಷ೯ದ ಸಂಭ್ರಮದ ಅಂಗವಾಗಿ ಕೃಷ್ಣಾನುಗ್ರಹ ಅನಾಥಾಶ್ರಮದಲ್ಲಿ ಮಕ್ಕಳಿಗೆ ಊಟ, ಉಪಾಹಾರ ಮತ್ತು ಕಿಟ್ ವಿತರಣೆ

Posted On: 09-09-2021 01:42PM
ಉಡುಪಿ : ಹಸಿದವರ ಬಾಳಿನ ಆಶಾಕಿರಣವಾದ ಉಡುಪಿ ಹೆಲ್ಪ್ ಲೈನ್ (ರಿ.)ನ 4ನೇಯ ವಷ೯ದ ಸಂಭ್ರಮದ ಅಂಗವಾಗಿ ಅನಾಥ ಮಕ್ಕಳ ಬಾಳಿನ ಆಶಾಕಿರಣವಾದ ಉಡುಪಿ ಯ ಸಂತೆಕಟ್ಟೆಯ ಕೃಷ್ಣಾನುಗ್ರಹ ಅನಾಥಾಶ್ರಮದಲ್ಲಿ ಮಕ್ಕಳಿಗೆ ಊಟ, ಚಹಾ-ತಿಂಡಿ, ಸಿಹಿತಿಂಡಿ, ಬಿಸ್ಕತ್, ಹಣ್ಣುಹಂಪಲು ನೀಡಿ ಮಕ್ಕಳ ಜೊತೆ ಆಚರಿಸಲಾಯಿತು. ಇದೇ ಸಂದರ್ಭ ಕೆ.ಜಿ ರೋಡ್ ಸಮೀಪ ದಿ ಸುಬ್ರಮಣ್ಯ ಆಚಾರ್ಯ ಅವರ ತಾಯಿಗೆ ಆಹಾರ ಸಾಮಗ್ರಿಗಳ ಕಿಟ್ ನೀಡಲಾಯಿತು.

ಈ ಸಂಧಭ೯ದಲ್ಲಿ ಸಮಾಜ ಸೇವಕ ಮಂಜುನಾಥ್ ಶೆಟ್ಟಿ ಮಣಿಪಾಲ್, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿಯ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್ ಅಡ್ಯಾರ್,ಆಕಾಶವಾಣಿ ಕಲಾವಿದೆ ಭಾರತಿ ಟಿ. ಕೆ, ಸಾಮಾಜಿಕ ಕಾಯ೯ಕತೆ೯ ಪ್ರೀತಿ ಕಲ್ಯಾಣಪುರ, ಸಮಾಜ ಸೇವಕಿ ಉಷಾ ಹೂಡೆ, ತೋನ್ಸೆ ಗ್ರಾಮ ಪಂಚಾಯತ್ ಸದಸ್ಯರಾದ ಕುಸುಮ ಗುಜ್ಜರುಬೆಟ್ಟು, ಯಶೋಧ ಕೆಮ್ಮಣ್ಣು, ವತ್ಸಲಾ ವಿನೋದ್ ಗುಜ್ಜರುಬೆಟ್ಟು, ಆಶಾ ಕೆಮ್ಮಣ್ಣು, ಉಡುಪಿ ಹೆಲ್ಪ್ ಲೈನ್ (ರಿ.) ಸಂಸ್ಥೆಯ ಪದಾಧಿಕಾರಿಗಳಾದ ಸುಧಾಕರ್ ಕಾಡೂರು,ನಿತಿನ್ ಆಚಾಯ೯ ಕಾಡೂರು, ರಪೀಕ್ ಕಲ್ಯಾಣಪುರ, ಮಹೇಶ್ ಪೂಜಾರಿ ಹೂಡೆ ಉಪಸ್ಥಿತರಿದರು.
ಪಡುಬಿದ್ರಿ : ಯುವವಾಹಿನಿ ಘಟಕದ ಪದಗ್ರಹಣ

Posted On: 09-09-2021 12:52PM
ಪಡುಬಿದ್ರಿ : ನಮಗಿಂತ ದುರ್ಬಲರನ್ನು ಅಣಕಿಸುವುದಕ್ಕಿಂತ ಅವರನ್ನು ನಮ್ಮೊಂದಿಗೆ ಜೊತೆಯಾಗಿಸುವ ಪ್ರಯತ್ನ ಮಾಡಬೇಕಾಗಿದೆ. ಸ್ವಾಭಿಮಾನದ ಬದುಕಿಗೆ ಮೌಲ್ಯಾಧಾರಿತ ಶಿಕ್ಷಣವು ಭೂಷಣ. ಅದ್ಧೂರಿತನ, ಜನ ಸೇರಿಸುವಿಕೆಯ ಅವಶ್ಯಕತೆಗಿಂತ ಕಾರ್ಯಕ್ರಮದ ಅರಿವು ಜನರಲ್ಲಿ ಮೂಡಿಸಬೇಕಾಗಿದೆ ಎಂದು ಯುವವಾಹಿನಿ (ರಿ.)ಕೇಂದ್ರ ಸಮಿತಿ, ಮಂಗಳೂರು ಇದರ ಅಧ್ಯಕ್ಷರಾದ ಡಾ|ರಾಜಾರಾಮ್ ಕೆ.ಬಿ. ಹೇಳಿದರು. ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರುಗಿದ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಭವಿಷ್ಯದ ,ರೂವಾರಿ ನಾವೇ, ಯಾವುದೇ ಕರ್ತವ್ಯವನ್ನು ಕೀಳಾಗಿ ಕಾಣದೆ, ಆರೋಗ್ಯಕ್ಕೆ ಮಹತ್ವ ನೀಡಿ ಜಾಗೃತರಾಗೋಣ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಘಟಕದ ಮುಂದಿನ ಕಾರ್ಯಯೋಜನೆಗಳಿಗೆ ಶುಭ ಹಾರೈಸಿದರು.

ಸನ್ಮಾನ : ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಘಟಕದ ಸುದೀಪ್ ಎಸ್. ಕೋಟ್ಯಾನ್, ಸ್ವಾತಿ, ಕ್ಷಮ್ಯ ಅಮೀನ್ ರನ್ನು ಸನ್ಮಾನಿಸಲಾಯಿತು. ಪದ ಪ್ರದಾನ, ಅಧಿಕಾರ ಹಸ್ತಾಂತರ : ಯುವವಾಹಿನಿ( ರಿ.)ಕೇಂದ್ರ ಸಮಿತಿ, ಮಂಗಳೂರು ಇದರ ಅಧ್ಯಕ್ಷರಾದ ಡಾ|ರಾಜಾರಾಮ್ ಕೆ.ಬಿ. ಪಡುಬಿದ್ರಿ ಯುವವಾಹಿನಿ ಘಟಕದ ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸಿದರು. ಘಟಕದ ಅಧ್ಯಕ್ಷರಾದ ಚಿತ್ರಾಕ್ಷಿ ಕೆ. ಕೋಟ್ಯಾನ್ ನೂತನ ಅಧ್ಯಕ್ಷರಾದ ಯಶೋದರಿಗೆ ಹಾಗೂ ಕಾರ್ಯದರ್ಶಿ ಶಾಶ್ವತ್ ಎಸ್. ಪೂಜಾರಿ ನೂತನ ಕಾರ್ಯದರ್ಶಿ ವಿಧಿತ್ ರವರಿಗೆ ಅಧಿಕಾರ ಹಸ್ತಾಂತರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಚಿತ್ರಾಕ್ಷಿ ಕೆ.ಕೋಟ್ಯಾನ್ ವಹಿಸಿದ್ದರು. ಈ ಸಂದರ್ಭ ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯದರ್ಶಿ ಅಶೋಕ್ ಕುಮಾರ್ ಪಡ್ಪು, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಯೋಗೀಶ್ ಪೂಜಾರಿ ಮಾದುಮನೆ, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಜಯರಾಮ್ ಕಾರಂದೂರು, ಪಡುಬಿದ್ರಿ ಬಿಲ್ಲವ ಸಂಘದ ಕೋಶಾಧಿಕಾರಿ ಅಶೋಕ್ ಪೂಜಾರಿ ಪಾದೆಬೆಟ್ಟು ಉಪಸ್ಥಿತರಿದ್ದರು. ಸುಜಾತ ಹರೀಶ್, ಡಾ| ಐಶ್ವರ್ಯ ಸಿ. ಅಂಚನ್ ಪ್ರಾರ್ಥಿಸಿ, ಘಟಕದ ಅಧ್ಯಕ್ಷರಾದ ಚಿತ್ರಾಕ್ಷಿ ಕೆ.ಕೋಟ್ಯಾನ್ ಸ್ವಾಗತಿಸಿ, ಶಾಶ್ವತ್ ಎಸ್. ಪೂಜಾರಿ ವರದಿ ವಾಚಿಸಿ, ಯೋಗೀಶ್ ಪೂಜಾರಿ ಮಾದುಮನೆ ನೂತನ ಪದಾಧಿಕಾರಿಗಳ ಪಟ್ಟಿ ವಾಚಿಸಿ, ನಿಶ್ಮಿತ ಪಿ. ಆರ್, ಸುಜಾತ ಪ್ರಸಾದ್, ಶಯನ ಕಾರ್ಯಕ್ರಮ ನಿರ್ವಹಿಸಿ, ನೂತನ ಕಾರ್ಯದರ್ಶಿ ವಿಧಿತ್ ವಂದಿಸಿದರು.
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುದ್ದು ಕೃಷ್ಣ, ರಾಧೆ- ಕೃಷ್ಣ, ಮತ್ತು ಯಶೋಧ-ಕೃಷ್ಣ ಸ್ಪರ್ಧಾ ಕಾರ್ಯಕ್ರಮ

Posted On: 09-09-2021 10:51AM
ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ , ಇನ್ನರ್ ವೀಲ್ ಕ್ಲಬ್ ಹಾಗು ರೋಟರಿ ಸಮುದಾಯದಳ ಇದರ ಜಂಟಿ ಸಹಯೋಗದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುದ್ದು ಕೃಷ್ಣ, ರಾಧೆ- ಕೃಷ್ಣ, ಮತ್ತು ಯಶೋಧ- ಕೃಷ್ಣ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿವಧೂತೆ ಗುಳಿಗೆ ನಾಟಕದಲ್ಲಿ ಗುಳಿಗನ ಪಾತ್ರ ನಿರ್ವಹಿಸಿದ ಕನ್ನಡ ಕಿರುತರೆ ಹಾಗು ಚಲನಚಿತ್ರ ನಟ ಸ್ವರಾಜ್ ಶೆಟ್ಟಿ ಹಾಗು ಚಲನಚಿತ್ರ ನಟಿ ನವ್ಯ ಪೂಜಾರಿರವರನ್ನು ಸಾನ್ಮನಿಸಲಾಯಿತು. ಒಟ್ಟು 80 ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ರೋಟರಿ ವಲಯ. ನಿಕಟ ಪೂರ್ವ ಸಹಾಯಕ ಗವರ್ನರ್ ನವೀನ್ ಅಮೀನ್ ಶಂಕರ್ ಪುರ , ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಅಡ್ವೆ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ ದೀಪಕ್ ಕೋಟ್ಯಾನ್ ಇನ್ನಾ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಕೇಸರಿ ಯುವರಾಜ್, ರೋಟರಿ ವಲಯ ಸಂಯೋಜಕ ರಮೀಜ್ ಹುಸೇನ್ ಪಡುಬಿದ್ರಿ ಗ್ರಾ.ಪಂ ಸದಸ್ಯರಾದ ಜ್ಯೋತಿ ಮೆನನ್ , ಶಶಿಕಲಾ, ಸುನಂದಾ ಸಾಲ್ಯಾನ್ ಕಾರ್ಯಕ್ರಮ ನಿರ್ದೇಶಕರಾದ ಗೀತಾ ಅರುಣ್, ಸ್ನೇಹ ಪ್ರವೀಣ್, ಸುಶ್ಮಿತಾ ಪಾದೆಬೆಟ್ಟು ಉಪಸ್ಥಿತರಿದ್ದರು.
ಮುದ್ದು ಕೃಷ್ಣ ಸ್ಪರ್ಧೆ ಯ ವಿಜೇತರು ವಿಭಾಗದಲ್ಲಿ ನಡೆದ ಸ್ಪರ್ಧೆ ಯಲ್ಲಿ ಮೂರು ವರ್ಷ ಕೆಳಗಿನವರ ವಿಭಾಗ, ( 0-3 ) ಪ್ರಥಮ ಪೂರ್ವಿ, ದ್ವಿತೀಯ ಸಮರ್ಥ ಮೂರರಿಂದ ಅರು ವರ್ಷ ದೊಳಗಿನ ವಿಭಾಗ ( 3- 6 ) ಪ್ರಥಮ-ಎಚ್. ಪ್ರರ್ಣಿಕಾ ಆಚಾರ್ಯ, ದ್ವಿತೀಯ- ಸಮನ್ವಿ ಎಸ್ ಕರ್ಕೇರ. ಆರು ವರ್ಷದಿಂದ ಹತ್ತು ವಿಭಾಗ ( 6- 10 ) ಪ್ರಥಮ-ಅನಿಕಾ ಭರತ್ ರಾಜ್, ದ್ವಿತೀಯ -ಪ್ರತೀಕ್ಷಾ ರಾಧೆ -ಕೃಷ್ಣ ಸ್ಪರ್ಧೆಯ ಮೂರು ವರ್ಷ ದಿಂದ ಅರು ವರ್ಷ ದೂಳಗಿನ ವಿಜೇತರು ( 3-6 ) ಪ್ರಥಮ - ವರ್ಷ ಮತ್ತು ಆರಾಧ್ಯ, ದ್ವಿತೀಯ- ಸ್ವರ ಮತ್ತು ಅವರ್ಥ್ ಆರು ವರ್ಷದಿಂದ ಹತ್ತು ವರ್ಷದೊಳಗಿನ ರಾಧೆ -ಕೃಷ್ಣ ಸ್ಪರ್ಧೆಯ ವಿಜೇತರು (6-10 ) ಪ್ರಥಮ- ಅನಿಕಾ ಮತ್ತು ಎಚ್. ಪ್ರರ್ಣಿಕಾ ಅಚಾರ್ಯ, ದ್ವಿತೀಯ -ಸುರಕ್ಷಿತಾ ಮತ್ತು ವೈಷ್ಣವಿ ಯಶೋಧ ಕೃಷ್ಣ ಸ್ಪರ್ಧೆಯ ವಿಜೇತರು ಪ್ರಥಮ-ದಿವ್ಯ ಮತ್ತು ಪ್ರಣಮ್ಯ, ದ್ವಿತೀಯ -ಸೌಂದರ್ಯ
ತೀರ್ಪುಗಾರರಾಗಿ ಚಿತ್ರನಟ ಸ್ವರಾಜ್ ಶೆಟ್ಟಿ, ಚಿತ್ರನಟಿ ನವ್ಯ ಪೂಜಾರಿ, ಭರತನಾಟ್ಯ ಕಲಾವಿದೆ ಮಂಗಳ ಕಿಶೋರ್ ಸಹಕರಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕೋರ್ಡಿನೇಟರ್ ನವೀನ್ ಚಂದ್ರ ಶೆಟ್ಟಿ, ಪಡುಬಿದ್ರಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ವೈ.ಸುಕುಮಾರ್ , ಕಟಪಾಡಿ ರೋಟರಿ ಸದಸ್ಯ ಸಂತೋಷ್ ಶೆಟ್ಟಿ, ಪಡುಬಿದ್ರಿ ಗ್ರಾ.ಪಂ.ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ, ಎರ್ಮಾಳು ಗ್ರಾ.ಪಂ. ಅಧ್ಯಕ್ಷೆ ಕಸ್ತೂರಿ ಪ್ರವೀಣ್, ಇನ್ನರ್ ವೀಲ್ ಅಧ್ಯಕ್ಷೆ ಅನಿತಾ ಬಿ.ವಿ ,ಕಾರ್ಯದರ್ಶಿ ಶುಭ ದಿನೇಶ್, ರೋಟರಿ ಸಮುದಾಯದಳ ಅಧ್ಯಕ್ಷೆ ಲಾವಣ್ಯ , ಕಾರ್ಯದರ್ಶಿ ಅದ್ವತ್ ಕುಮಾರ್ ಉಪಸ್ಥಿತರಿದ್ದರು.
ರೋಟರಿ ಅಧ್ಯಕ್ಷ ಮಹಮ್ಮದ್ ನಿಯಾಜ್ ಸ್ವಾಗತಿಸಿ, ಕಾರ್ಯದರ್ಶಿ ಬಿ.ಯಸ್ ಆಚಾರ್ಯ ವಂದಿಸಿ, ಸುಧಾಕರ್ ಕೆ , ಹಾಗು ಕಾರ್ತಿಕ್ ಮುಲ್ಕಿ, ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಮೂವರು ಗೌರವಾನ್ವಿತ ಶಿಕ್ಷಕರಿಗೆ ಗೌರವ ಸಮರ್ಪಣೆ

Posted On: 09-09-2021 10:13AM
ಉಡುಪಿ : ಕಲ್ಯಾಣಪುರ ರೋಟರಿ ಕ್ಲಬ್ ವತಿಯಿಂದ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ದಿನಕರ ಶೆಟ್ಟಿ, ಮತ್ತು ನಿವೃತ್ತ ಶಿಕ್ಷಕಿ ದೇವಕಿ ಎನ್. ಸರ್ಕಾರಿ ಪದವಿಪೂರ್ವ ಕಾಲೇಜು ಕೆಮ್ಮಣ್ಣು ಇಲ್ಲಿ ಉಪನ್ಯಾಸಕ ರಾಗಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀಪತಿ ಜೋಗಿ ಇವರುಗಳಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ನಿಕಟಪೂರ್ವ ಜಿಲ್ಲಾ ಗವರ್ನರ್ ರಾಜಾರಾಂ ಭಟ್, ಸಹಾಯಕ ಗವರ್ನರ್ ಪದ್ಮನಾಭ ಕಾಂಚನ್ ಆಗಮಿಸಿದ್ದರು. ಅಧ್ಯಾಪನ ವೃತ್ತಿಯು ಅತ್ಯಂತ ಹೆಮ್ಮೆಯ ಹಾಗೂ ಗೌರವದ ವೃತ್ತಿಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ರೋಟರಿ ಸಂಸ್ಥೆಯ ಸೇವೆ ಅಪಾರವಾದದ್ದು. ಪುಸ್ತಕ ವಿತರಣೆ, ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಕಂಪ್ಯೂಟರ್ ವಿತರಣೆ, ಶಾಲಾ ಕಟ್ಟಡದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಅಗತ್ಯ ಪರಿಕರಗಳ ವಿತರಣೆ ಮತ್ತು ಅಧ್ಯಾಪಕರುಗಳಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಗಳಂತಹ ಕಾರ್ಯಕ್ರಮಗಳ ಅನುಷ್ಠಾನ ಮಾಡುತ್ತಿದೆ ಎಂದರು.
ಕಲ್ಯಾಣಪುರ ರೋಟರಿ ಕ್ಲಬ್ ಅಧ್ಯಕ್ಷ ರಾದ ಶಂಭುಶಂಕರ್, ಶಂಕರ್ ಸುವರ್ಣ, ವೃತ್ತಿ ಸೇವಾ ನಿರ್ದೇಶಕರು, ಕಾರ್ಯದರ್ಶಿಗಳಾದ ಪ್ರಕಾಶ್, ನಿಕಟಪೂರ್ವ ಅಧ್ಯಕ್ಷ ಡೆಸ್ಮಂಡ್ ವಾಸ್ ರವರು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚೌತಿದಾನಿ ಕಟಿ ಇಲ್ಲ್ ಬುಡಂದೆ ಸಾರ್ಪತ್ಯ ಆವೊಂದುಪ್ಪೊಡು

Posted On: 09-09-2021 09:11AM
ಜಾನಪದದ ಸರಳ - ಮುಗ್ಧ ಕಲ್ಪನೆಯಿಂದ ವೈದಿಕದ ವೈಭವೋಪೇತ ಚಿಂತನೆಯವರೆಗೆ . ಬೇಟೆ ಸಂಸ್ಕೃತಿಯಿಂದ ತೊಡಗಿ ಆಧುನಿಕ ಜೀವನ - ವಿಧಾನದ ಹರವಿನಲ್ಲಿ ಮಣ್ಣಿನ ಮಗ ಮಹಾಕಾಯ ಮಹಾಗಣಪತಿಯ ಸ್ವೀಕಾರ - ಪೂಜಾ ವಿಧಾನಗಳ ರೋಚಕ ಇತಿಹಾಸ ವಿದೆ. ಒಂದು ಸಂಸ್ಕೃತಿಯ ಸಂಕೇತವಾಗಿ, ಒಬ್ಬಗಣವಾಗಿ, ಬ್ರಹ್ಮಣಸ್ಪತಿಯಾಗಿ, ಗಣಾಧ್ಯಕ್ಷನಾಗಿ ಈ ವಿನಾಯಕ ಆಧ್ಯಾತ್ಮಿಕ ಪ್ರಪಂಚದಲ್ಲಿ ಏರಿದ ಎತ್ತರ ಊಹನಾತೀತ. ಆಸ್ತಿಕ-ನಾಸ್ತಿಕ ಭೇದವಿಲ್ಲದೆ ಬಹುಮಾನ್ಯನಾದ ದೇವರು ಗಣಪತಿ. ಜಾತಿ-ಮತ-ಪಂಥಗಳ ಕಟ್ಟುಪಾಡುಗಳನ್ನು ಮೀರಿ ವಿಶ್ವವ್ಯಾಪಿಯಾಗಿ ತನ್ನ ಆಕರ್ಷಕ ವರ್ಚಸ್ಸಿನ ಮೂಲಕ ವಿಶ್ವವಂದ್ಯನಾದ ದೇವರು ವಿಶ್ವಂಭರ ಮೂರ್ತಿಯಾಗಿ ಬೆಳೆದದ್ದು, ಜನಮಾನಸದಲ್ಲಿ ಸ್ಥಾಯೀ ಸ್ಥಾನವನ್ನು ಪಡೆದದ್ದು ಮಾತ್ರ ಸತ್ಯ. ಮಾನವ ಬಯಸಿದ್ದೆಲ್ಲ ನಿರಾಯಾಸವಾಗಿ ಪ್ರಾಪ್ತಿಯಾಗಬೇಕು. ಜೀವನ ಸುಂದರ ಹಾಗೂ ನಿರರ್ಗಳವಾಗಿರಬೇಕೆಂದು ನಿರೀಕ್ಷಿಸುವುದರಿಂದಲೇ ನಿರಂತರತೆಗೆ ಭಂಗವಾದಾಗ, ಅಡ್ಡಿ-ಆತಂಕಗಳು ಎದುರಾದಾಗ ಕಾರ್ಯಾರಂಭಗಳಿಗೆ ವಿಘ್ನ-ವಿಡ್ಡೂರಗಳು ಬಂದಾಗ ವಿಘ್ನದ ಕುರಿತು ಗಮನ ಹರಿದಿರಬೇಕು. ಈ ಪರಿಣಾಮವಾಗಿ ‘ವಿಘ್ನ ನಿವಾರಕ' ದೇವರೊಬ್ಬನು ಸಾಕಾರಗೊಂಡಿರಬೇಕು. ಭಾರತೀಯರಾದ ನಮಗೆ ಕೋಟ್ಯಂತರ ದೇವತೆ-ದೇವರುಗಳು ಆದರೂ ಗೊಂದಲವಿಲ್ಲದ ಆಧ್ಯಾತ್ಮಿಕ ಬದುಕು. ಇದು ಈ ಸಂಸ್ಕೃತಿಯ ವಿಚಾರಿಕ ವೈಶಾಲ್ಯ. ಈ ವಿಸ್ತೃತ ವ್ಯಾಪ್ತಿಯಲ್ಲಿ ಗಜಮುಖನಾದರೂ ಸುಮುಖನಾಗಿ ಆದಿಪೂಜಿತನು ಪ್ರಥಮ ಪೂಜೆಗೊಳ್ಳುತ್ತಾನೆ.ಅಮೂರ್ತವಾದುದರ ಮೂರ್ತ ಚಿಂತನೆ, ಅಲೌಕಿಕದ ಲೌಕಿಕ ದರ್ಶನ, ಪ್ರತಿಕೃತಿ ಆರಾಧನೆಗಳೆಲ್ಲ ವಿವಿಧ ಹಂತದಲ್ಲಿ ಅಭಿವೃದ್ಧಿ ಹೊಂದಿದಾಗಲೂ ನಮ್ಮ ಗಣಪ ಹಲವು ಸ್ಥಿತ್ಯಂತರ-ರೂಪಾಂತರಗಳಿಗೆ ಒಳಗಾದರೂ ಬೆಳೆದದ್ದು ಭವ್ಯವಾಗಿ. ಸಂಸ್ಕೃತಿಯ ಮೂಲದಲ್ಲೇ ಇದ್ದ ಅಥವಾ ಆವಿರ್ಭವಿಸಿದ ಒಂದು ಚಿಂತನೆ ಇದಾದುದರಿಂದ ಇದರ ಪರಿಣಾಮ ಇಷ್ಟು ತೀವ್ರವಾಗಿದೆ. ಗಾಢವಾಗಿ ಬೇರೂರಿದೆ.
ಬೇಟೆಗಾರರ ಒಡೆಯ : ಗಣಪತಿಯ ಮೂರ್ತಿ ಶಿಲ್ಪದಲ್ಲೆ ಪ್ರಾಚೀನತೆಯನ್ನು ನಿಖರವಾಗಿ ಗುರುತಿಸುವ ವಿದ್ವಾಂಸರು ಈತನ ಅಸ್ತಿತ್ವಕ್ಕೆ ಬೇಟೆ ಸಂಸ್ಕೃತಿಯಷ್ಟು ಪುರಾತನ ಇತಿಹಾಸವನ್ನು ಅಥವಾ ಅದಕ್ಕಿಂತಲೂ ಪೂರ್ವದ ಜನಜೀವನದ ಕಾಲದವರೆಗೆ ಒಯ್ಯುತ್ತಾರೆ. ಮಾನವ ವಿಕಾಸದ ಒಂದು ಹಂತ ಅಥವಾ ಆರಂಭವನ್ನು ಬೇಟೆ ಸಂಸ್ಕೃತಿಯಿಂದ ಆರಂಭಿಸಿದರೆ ಬೇಟೆಗಾರರ ಒಡೆಯನೆಂದು ಗುರುತಿಸಬಹುದು. ಕಲ್ಲಿನ ವಿವಿಧ ಆಕೃತಿಗಳನ್ನು ಆಯುಧದ ತೀಕ್ಷ್ಣತೆಗೆ ಬೇಕಾಗಿ ಬಳಸಿಕೊಳ್ಳಲಾರಂಭಿಸಿದ ಮನುಷ್ಯನಿಗೆ ಪ್ರಕೃತಿಯಲ್ಲಿ ಕಂಡದ್ದು ‘ಬೆಣಚುಕಲ್ಲು' . ಬೇಟೆಯೇ ಪ್ರಧಾನ ಜೀವನಾಧಾರ, ಬೇಟೆಗೆ ಬೆಣಚುಕಲ್ಲೇ ಪ್ರಧಾನ ಆಯುಧ.ಇಲ್ಲಿಂದಲೇ ಬೆಣಚುಕಲ್ಲಿನಿಂದ ಬೆನಕನೆಂದು ಪೂಜಿಸುವ ವಿಧಾನ ರೂಢಿಗೆ ಬಂದಿರಬಹುದು. ಇಂದಿಗೂ ಈ ಶೈಲಿಯ ಪೂಜೆ ರೂಢಿಯಲ್ಲಿದೆ. ವೈಭವದ ಮೂರ್ತಿಗಳ ಭವ್ಯತೆಯ ನೇಪಥ್ಯದಲ್ಲಿ ಈ ಬೆನಕನಿದ್ದಾನೆ.ಬೇಟೆಯಿಂದ ಮುಂದುವರಿದ ಮಾನವ ವಿಕಾಸ ದೃಢವಾಗಿ ಬೇರೂರಿದ್ದು ನದಿ ದಡಗಳಲ್ಲಿ ಕೃಷಿಯನ್ನು ಸಂಶೋಧಿಸಿ, ಜೀವನಾಧಾರವೆಂದು ನಂಬಿ.ಪರಿಶ್ರಮವಿಲ್ಲದ ಕೃಷಿ ಇಲ್ಲ. ತಾಯಿ ಪಾರ್ವತಿ ಕೃಷಿ ಕ್ಷೇತ್ರವಾಗಿ, ಮಗ ಗಣಪ ಕೃಷಿ ಸಮೃದ್ಧಿಯಾಗಿ ಪರಿಗ್ರಹಿಸಲ್ಪಡುತ್ತಾರೆ. ಪಾರ್ವತಿಯ ಮೈಯ ಮಣ್ಣಿನಿಂದ ರೂಪುಗೊಳ್ಳುವವನು ಗಣಪನೆಂಬ ಚಿಂತನೆಗೆ ಇಲ್ಲಿ ಆಧಾರ ಸಿಗುತ್ತದೆ. ಬೆವರು,ಮೈಯಮಣ್ಣು ಇವೆಲ್ಲ ಶ್ರಮದ ಬದುಕಿನ ಸಂಕೇತಗಳಾಗುತ್ತವೆ. ಇದು ಮಣ್ಣಿನ ಮಗನ ಮೂಲ. ಕಪಿಲವರ್ಣ - ಕಾವಿ - ಮಣ್ಣಿನ ಬಣ್ಣ. ಧೂಮ್ರ ವರ್ಣ - ಕಪ್ಪು ಕೆಂಪು ವರ್ಣಗಳ ಸಂಯುಕ್ತ ಇದೂ ಮಣ್ಣಿನ ಬಣ್ಣವೇ. ಇದು ವಿಘ್ನೇಶನಮೈ ಬಣ್ಣ.
ಪಶುಪಾಲನೆ : ಭೂ ಫಲವತ್ತತೆಗಾಗಿ ಸೆಗಣಿ (ಕೃಷಿ ಸಂಸ್ಕೃತಿಗೆ ಪೂರಕವಾಗಿ ಬೆಳೆದ ಪಶುಪಾಲನೆಯ ಫಲವಾಗಿ ಪಡೆದದ್ದು). ಈ ಸೆಗಣಿಗೆ ಹಸಿರು ಗರಿಕೆಯನ್ನು ಇಟ್ಟು ಪೂಜಿಸುವ ಕ್ರಮವೊಂದು ರೂಢಿಯಲ್ಲಿದೆ ಎಂಬುದನ್ನು ನೆನಪಿಸಿಕೊಳ್ಳೋಣ. ಶಿವ-ಪಾರ್ವತಿಯರು ಸೂರ್ಯ-ಪೃಥ್ವಿಯ ಸ್ವರೂಪ. ಮಳೆಗಾಲದಲ್ಲಿ ಸೂರ್ಯನು ಮೋಡಗಳ ಹಿಂದೆ ಮರೆಯಾಗುತ್ತಾನೆ. ಭೂ ದೇವಿಗೆ (ಪೃಥ್ವಿಗೆ) ಮಳೆ ನೀರಿನ ಸ್ನಾನವಾಗುತ್ತದೆ. ಆಗ ಬೆಳೆದು ನಿಲ್ಲುವ ಬೆಳೆಯೇ ಮಣ್ಣಿನ ಮಗ ಗಣಪ. ತಿಂಗಳು ಉರುಳಿದಂತೆ ಮಳೆ-ಮೋಡ ಕಡಿಮೆಯಾಗುತ್ತಾ ಸೂರ್ಯ ಪ್ರಜ್ವಲಿಸಲಾರಂಭಿಸುತ್ತಾನೆ. ಪೃಥ್ವಿಯನ್ನು ಅಥವಾ ಭೂಮಿಯನ್ನು ಸ್ಪರ್ಶಿಸಲು ಬೆಳೆದ ಬೆಳೆ ಅಡ್ಡ ಬರುತ್ತದೆ. ಆಗ ಬೆಳೆಯ ತಲೆಯನ್ನು ಕತ್ತರಿಸಲಾಗುತ್ತದೆ. ಭೂಮಿ ಶೋಕತಪ್ತ ತಾಯಿಯಂತೆ ಕಾಣುತ್ತಾಳೆ. ಕೊಯ್ದ ಬೆಳೆ ಆನೆಯಂತೆ ರಾಶಿ ಬಿದ್ದಿರುತ್ತದೆ. ಪಾರ್ವತಿಯ ಮೈಯ ಮಣ್ಣಿನಿಂದ ಹುಟ್ಟಿದ ಗಣಪನೆಂದರೆ ಈ ಬೆಳೆ. ಪ್ರಾಚೀನಕಥೆಗೆ ಪೂರಕವಾದ ಈ ಕಥೆಯೂ ಜಾನಪದ ಕಥಾನಕವಾಗಿದೆ ಎನ್ನುತ್ತಾರೆ ಸಂಶೋಧಕರು. ಈ ಕಥೆ ಪ್ರಚಲಿತವಿರುವ ಕಥೆಯಂತೆಯೇ. ಆದರೆ ಕೃಷಿ ಸಂಸ್ಕೃತಿಯ ಕಾಲವನ್ನು ಪ್ರತಿಪಾದಿಸುತ್ತದೆ. ಗಣಪನ ಕಲ್ಪನೆಯ ಮೂಲವನ್ನು ದೃಢೀಕರಿಸುವುದಿಲ್ಲವೆ?
|ಸಾರ್ಪತ್ಯ ಆವೊಂದುಪ್ಪೊಡು| • ಜನಪದದ ಹೆಣ್ಣು ಮೈಸಗೆಯನ್ನು ಶಿವ ಪ್ರೀತಿಸುವುದು. ತಾವರೆ ಹೂವಾಗುವುದು, ಗುಟ್ಟಿನಲ್ಲಿ ಜೊತೆಯಾಗುವುದು ಹೀಗೆ ಮುಂದುವರಿಯುವ ಕಥೆಯಲ್ಲಿ ಬಾಮಕುಮಾರನ ಜನನ. ಈತ ಗಜಮುಖನಾಗುವುದು. ಪಾರ್ವತಿ ಮಗುವನ್ನು ಸಾಕುವುದು. ಒಂದು ರೀತಿಯ ಸುಗಮವಾದ ರೀತಿಯಲ್ಲಿ ಮೈಸಗೆಯನ್ನು ಪಾರ್ವತಿ ಸ್ವೀಕರಿಸುವುದು. ಪ್ರತಿ ಮನೆಯಲ್ಲೂ ಗಣಪತಿ ಪೂಜೆ ನಡೆಯಬೇಕು. ಅಲ್ಲೆಲ್ಲ ಗಣಪತಿ ‘ಸಾರ್ಪತ್ಯ ಆವೊಂದುಪ್ಪೊಡು' ಎಂಬುದು. ಶಿವನ ವರ, ಇದು ಬಾಮಕುಮಾರ ಸಂಧಿಯಲ್ಲಿ ಬರುತ್ತದೆ. • ಮನೆಯಲ್ಲಿ ಪೂಜೆ, ದೈವಗಳಿಗೆ, ನಾಗನಿಗೆ ವಿಶೇಷ ಚೌತಿ ಪೂಜೆ ನಡೆಯುತ್ತದೆ. ಗರೋಡಿ, ಸ್ಥಾನಗಳಲ್ಲೂ ಚೌತಿ ಪೂಜೆ ನಡೆಯುತ್ತವೆ. • ಪ್ರಾಚೀನವಾದರೂ ಬಲಗುಂದದ ಆರಾಧನಾ ಕ್ರಮವಾಗಿ ಗಣಪತಿ ಆರಾಧನೆಯನ್ನು ಸ್ವೀಕರಿಸಬಹುದು. •ಕಣಜ, ಕಣಜಕ್ಕೆ ಸುತ್ತುವ ಹಗ್ಗ (ಪೆರ್ಮರಿ) ಇವು ಗಣಪನ ಹೊಟ್ಟೆ ಮತ್ತು ಸರ್ಪವನ್ನು ಸಾಂಕೇತಿಸುತ್ತವೆ. ಭತ್ತಕ್ಕೆ ಇಲಿಕಾಟ ಸಹಜ. ರಕ್ಷಣೆಗೆ ಸರ್ಪ(ಹಗ್ಗ). ಗಣಪನ ಹೊಟ್ಟೆ ಕೃಷಿ ಸಮೃದ್ಧಿಯ ದಾಸ್ತಾನು. ಹೇಗಿದೆ ಜನಪದರ ಕಲ್ಪನೆ? (ಸಂಗ್ರಹ) ಬರಹ : ಕೆ.ಎಲ್.ಕುಂಡಂತಾಯ
ಮಣಿಪುರ : ಮೋಕ್ಷಗಿರಿ ಧಾರ್ಮಿಕ ಕ್ಷೇತ್ರದಲ್ಲಿ ಸ್ಮಶಾನ ಮತ್ತು ಡಂಪಿಂಗ್ ಯಾರ್ಡ್ ನಿರ್ಮಾಣಕ್ಕೆ ವಿಎಚ್ ಪಿ ಮತ್ತು ಬಜರಂಗದಳ ವಿರೋಧ

Posted On: 08-09-2021 10:59PM
ಕಟಪಾಡಿ : ಮಣಿಪುರ ಪಂಚಾಯತ್ ಸಾರ್ವಜನಿಕರ ವಿರೋಧ ಇದ್ದರೂ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಕುಂತಳನಗರದ ಮೋಕ್ಷಗಿರಿಯಲ್ಲಿ ಸ್ಮಶಾನ ಮತ್ತು ಎಸ್ ಎಲ್ ಆರ್ ಎಮ್ ಘಟಕ ಮಾಡಲು ಹೊರಟಿದ್ದು ಅಲ್ಲಿದ್ದ ಧಾರ್ಮಿಕ ಕಾರ್ಯಕ್ರಮಗಳ ಕುರುಹು ಆಗಿದ್ದ ಸಭಾ ವೇದಿಕೆ ಧ್ವಂಸಗೊಳಿಸಿದ್ದು ಖಂಡನೀಯವೆಂದು ವಿಶ್ವಹಿಂದುಪರಿಷತ್ ಬಜರಂಗಳ ಅಭಿಪ್ರಾಯ ವ್ಯಕ್ತಪಡಿಸಿದೆ.

ಇಂದು ಸ್ಥಳಕ್ಕೆ ಭೇಟಿ ನೀಡಿದ ಬಜರಂಗದಳ ರಾಜ್ಯ ಸಂಚಾಲಕರಾದ ಸುನಿಲ್ ಕೆ ಆರ್, ಜಿಲ್ಲಾ ಸಂಚಾಲಕರಾದ ದಿನೇಶ್ ಮೆಂಡನ್, ಜಿಲ್ಲಾ ವಿಶ್ವಹಿಂದು ಪರಿಷತ್ ಅಧ್ಯಕ್ಷರಾದ ವಿಷ್ಣುಮೂರ್ತಿ ಆಚಾರ್ಯ, ಸುಧೀರ್ ನಿಟ್ಟೆ ಪಂಚಾಯತ್ ಅಧ್ಯಕ್ಷರು ಕೂಡಲೇ ತಪ್ಪನ್ನು ತಿದ್ದಿಕೊಂಡು ಹಿಂದುಗಳ ಭಾವನೆಗೆ ಧಕ್ಕೆ ಬರದಂತೆ ಕಾರ್ಯನಿರ್ವಹಿಸಿ ಈ ಯೋಜನೆ ರದ್ದುಪಡಿಸಿ ಹಾಳು ಮಾಡಿದ ವೇದಿಕೆ ಸರಿಪಡಿಸಿ ನೀಡಬೇಕು ಎಂದರು.

ಪ್ರಮುಖರಾದ ಶ್ರೀಕಾಂತ ನಾಯಕ್ ಅಲೆವೂರು, ಸಂತೋಷ್ ಮೂಡುಬೆಳ್ಳೆ, ಸತೀಶ್ ಶೆಟ್ಟಿ, ಪ್ರಭಾಕರ ದೇವಾಡಿಗ, ವಿಠ್ಠಲ ಪೂಜಾರಿ, ಕಾರ್ತಿಕ್ ಶೆಟ್ಟಿ, ಮಣಿಪುರ ಪಂಚಾಯತ್ ಸದಸ್ಯರಾದ ಪ್ರಜ್ವಲ್ ಹೆಗ್ಡೆ, ಸಂತೋಷ್ ಶೆಟ್ಟಿ, ಜೀವನ್, ನಾಗೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪುಲಿಂದ ಮಹರ್ಷಿಗಳ ತಪೋಭೂಮಿಯನ್ನು ಹಿಂದೂ ಸಮಾಜ ಉಳಿಸಿಕೊಳ್ಳುವ ನಿರ್ಧಾರ ಕೈಗೊಳ್ಳಲಾಯಿತು. ಇಲ್ಲಿರುವ ಗುಹೆಗಳು, ಹಿಂದೆ ಅಷ್ಟಮಠದ ಸ್ವಾಮೀಜಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರು.

ಕಾಮಗಾರಿ ನಿಲ್ಲಿಸಿ ಧ್ವಂಸಗೊಳಿಸಿದ ಸಭಾವೇದಿಕೆ ನಿರ್ಮಿಸಿ ಕೊಡದಿದ್ದರೆ ಹೋರಾಟ ನಡೆಸವ ಬಗ್ಗೆ ಚರ್ಚಿಸಲಾಯಿತು.
ಕುಂದಾಪುರ : ಸಾಮಾಜಿಕ ಜಾಲತಾಣದಲ್ಲಿ ನಾರಾಯಣಗುರುಗಳ ಬಗ್ಗೆ ಅವಹೇಳನಗೈದ ವ್ಯಕ್ತಿಯ ವಿರುದ್ಧ ದೂರು ದಾಖಲು

Posted On: 07-09-2021 10:27PM
ಉಡುಪಿ : ಸಾಮಾಜಿಕ ಜಾಲತಾಣದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಬಗ್ಗೆ ವ್ಯಕ್ತಿಯೋರ್ವರ ಮೇಲೆ ಕಿರಣ್ ಪೂಜಾರಿ ಎಂಬುವವರು ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಕುಂಭಾಶಿ ಮೂಲದ ಪತ್ರಿಕೆಯ ಸಂಪಾದಕರೋರ್ವರು ಸರ್ವರೂ ಸಮಾನರು ಎಂದು ಜಗತ್ತಿಗೆ ಸಾರಿದ ಜಗದ್ಗುರು ಬ್ರಹ್ಮಶ್ರೀ ನಾರಾಯಣಗುರುಗಳ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದರು. ಇದರ ಬಗ್ಗೆ ಸಾರ್ವಜನಿಕವಾಗಿ ಆಕ್ರೋಶವು ವ್ಯಕ್ತವಾಗಿತ್ತು. ಆದರೆ ಇದೀಗ ಅಂತಹ ಪೋಸ್ಟ್ ಹಾಕಿದ ವ್ಯಕ್ತಿಯ ಮೇಲೆ ಕಾನೂನು ಕ್ರಮಕ್ಕಾಗಿ ದೂರುದಾಖಲಾಗಿದೆ ಮತ್ತು ಆ ವ್ಯಕ್ತಿ ನಾರಾಯಣಗುರುಗಳ ಪ್ರತಿಮೆಯ ಮುಂದೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ಸಾನ್ವಿ ಭಟ್ ಗಾಯನದ ಮಾದುಕೋಡಿದ ಉಳ್ಳಾಯ ಭಕ್ತಿ ಹಾಡು ಬಿಡುಗಡೆ

Posted On: 07-09-2021 04:53PM
ಮಂಗಳೂರು : ಸಾನ್ವಿ ಕ್ರಿಯೆಷನ್ ಅರ್ಪಿಸುವ "ಮಾದುಕೊಡಿದ ಉಳ್ಳಾಯೇ" ತುಳು ಭಕ್ತಿ ಹಾಡು ಮಾದುಕೋಡಿ ಕೊರಗಜ್ಜ ಸಾನಿಧ್ಯದಲ್ಲಿ ಶ್ರೀ ವಿಜಯ ಸುವರ್ಣ ಗುರುಗಳ ದಿವ್ಯ ಹಸ್ತದಲ್ಲಿ ಬಿಡುಗಡೆಗೊಂಡಿತು.
ಈ ಸಂದರ್ಭದಲ್ಲಿ ತುಳುನಾಡಿನ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಪುಟ್ಟ ಬಾಲ ಗಾಯಕಿ ಮಾದುಕೋಡಿ ಕ್ಷೇತ್ರದ ಹಾಡನ್ನು ಹಾಡಿ ಅಭಿನಯಿಸಿರುವ ಸಾನ್ವಿ ಭಟ್ ಚಿತ್ರಾಪುರ ಇವರನ್ನು ಸನ್ಮಾನಿಸಲಾಯಿತು. ಜೊತೆಗೆ ಇಡೀ ತಂಡವನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗಾಯಕಿ ಸಾನ್ವಿ ಭಟ್ ಚಿತ್ರಾಪುರ, ಕ್ಷೇತ್ರದ ಗುರುಗಳಾದ ವಿಜಯ ಸುವರ್ಣ, ನೋವೆಲ್ ಡಿಸೋಜಾ, ಪ್ರದೀಪ್ ಕುಕ್ಕಿಪಾಡಿ, ಕಲಾಂಜಲಿ ಕ್ರಿಯೆಷನ್ ರಾಜೇಶ್ ಭಂಡಾರಿ, ಸಾಹಿತಿ ಜಿ. ಎಸ್ ಗುರುಪುರ, ರಾಜೇಶ್ ಭಟ್ ಚಿತ್ರಾಪುರ, ತ್ರಿಷಾಲ್ ಶೆಟ್ಟಿ, ಜಿತೇಶ್ ಸಿದ್ದಕಟ್ಟೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಈ ಹಾಡು ಈಗಾಗಲೇ ಸಾನ್ವಿ ಕ್ರಿಯೆಷನ್ ಯು ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿರುತ್ತದೆ.
ತಾಯಿ, ಅಜ್ಜಿ, ಮುತ್ತಜ್ಜಿಯ ನೆನಪಿಗಾಗಿ ಮೂರ್ತಿಯನ್ನು ಕೆತ್ತಿಸಿ, ಗುಡಿಯೊಳಗೆ ಪ್ರತಿಷ್ಠಾಪಿಸಿ ಮಾತೃ ಪ್ರೇಮ ಮೆರೆದ ಮಕ್ಕಳು

Posted On: 07-09-2021 10:10AM
ಕಾಪು : ಕರಾವಳಿಯಲ್ಲಿ ಹುಟ್ಟಿ, ಬೆಳೆದು ಮುಂಬಯಿಯಲ್ಲಿ ಸಾಧನೆಗೈದ ತಮ್ಮ ತಾಯಿಯ ಜೊತೆಗೆ, ಕುಟುಂಬದ ಹಿರಿಯರ ನೆನಪಿನಲ್ಲಿ ಮಂದಿರವೊಂದನ್ನು ನಿರ್ಮಿಸಿ, ಅದರಲ್ಲಿ ತಾಯಿಯ ಜೊತೆಗೆ, ಅಜ್ಜಿ ಮತ್ತು ಮುತ್ತಜ್ಜಿಯ ಶಿಲಾ ಮೂರ್ತಿಯನ್ನೂ ಪ್ರತಿಷ್ಠಾಪಿಸುವ ಮೂಲಕ ಮುಂಬಯಿಯಲ್ಲೇ ಹುಟ್ಟಿ ಬೆಳೆದ ಮಕ್ಕಳು ಕರಾವಳಿಯಲ್ಲೇ ಅಪರೂಪವೆಂಬತಂಹ ಸೇವಾ ಕಾರ್ಯವನ್ನು ನಡೆಸಿ, ಮಾದರಿಯಾಗಿದ್ದಾರೆ. ಕಾಪು ಗರಡಿಮನೆ ಕುಟುಂಬದ ಅಗಲಿದ ಮೂರು ತಲೆಮಾರಿನ ಹಿರಿಯ ಸದಸ್ಯರಿಗೆ ಗೌರವ ಸಲ್ಲಿಸಲಾಗಿದೆ.
ತಾಯಿಯೇ ಸರ್ವಸ್ವ, ಹಿರಿಯರ ಆಶೀರ್ವಾದವೇ ತಮ್ಮ ಜೀವನಕ್ಕೆ ಆಧಾರ ಎಂದು ತಿಳಿದಿರುವ ಮಕ್ಕಳು ಕಾಪು ಗರಡಿ ರಸ್ತೆಯ ಬದಿಯಲ್ಲಿರುವ ನವದುರ್ಗಾ ಲಕ್ಷ್ಮೀ ನಿವಾಸ್ ಮನೆಯ ಆವರಣದಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಪೊಯ್ಯ ಪೊಡಿಕಲ್ಲ ಗರೊಡಿಯ ಗರಡಿ ಮನೆಯ ಸದಸ್ಯರಾದ ಗೀತಾ ಯಾದವ್ ಪೂಜಾರಿ (೫೩), ಅವರ ತಾಯಿ ಕಲ್ಯಾಣಿ ಬಾಯಿ ಪೂಜಾರಿ (೫೨), ಮುತ್ತಜ್ಜಿ ಮುತ್ತಕ್ಕ ಬೈದಿ ಪೂಜಾರ್‍ತಿ (೮೦) ಅವರ ಮೂರ್ತಿಯನ್ನು ಕೆತ್ತಿಸಿ, ಗುಡಿಯೊಳಗೆ ಪ್ರತಿಷ್ಠಾಪನೆ ಮಾಡಿಸಿದ್ದಾರೆ. ಅಪ್ರತಿಮ ಸಮಾಜ ಸೇವಕಿ : ಮುಂಬೈ ಮಹಾನಗರದಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿದ್ದ ಗೀತಾ ಯಾದವ್ ಪೂಜಾರಿ ಅವರು, ಮುಂಬಯಿ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಆಗಿ, ರಾಜಕೀಯದ ಜೊತೆಗೆ ವಿವಿಧ ಧಾರ್ಮಿಕ, ಶೈಕ್ಷಣಿಕ ಮತ್ತು ಸಮಾಜ ಸೇವಾ ಕಾರ್ಯಗಳಲ್ಲೂ ಮುಂಚೂಣಿಯಲ್ಲಿ ನಿಂತು ವಿವಿಧ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮುಂಬೈ ಜೋಸೆಫ್ ಪಠೇಲ್ ಎಸ್ಟೇಟ್ ನವರಾತ್ರಿ ದುರ್ಗಾ ಪೂಜಾ ಮಂಡಲ್‌ನ ಸಂಸ್ಥಾಪಕರಾಗಿದ್ದ ಅವರು, ಮುಂಬೈ ತುಳುನಾಡ ಕನ್ನಡಿಗರ ಜೊತೆಗೂ ಉತ್ತಮ ಭಾಂದವ್ಯವನ್ನು ಹೊಂದಿದ್ದು ಕಾಪು ಪರಿಸರದಲ್ಲಿಯೂ ಸಮಾಜ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕೊರೊನಾ ಸಂದರ್ಭದಲ್ಲಿ ಜನತೆಯ ಪರವಾಗಿ ಅಪಾರ ಸೇವೆ ಸಲ್ಲಿಸಿದ್ದು, ಜನರಿಗೆ ಉಚಿತ ಆಂಬುಲೆನ್ಸ್, ಊಟ, ಮಾಸ್ಕ್, ಸ್ಯಾನಿಟೈಸರ್ ಸಹಿತವಾದ ವಿವಿಧ ಸೊತ್ತುಗಳನ್ನು ವಿತರಿಸಿದ್ದ ಅವರು ಕಳೆದ ವರ್ಷ ಸೆ. ೩ರಂದು ಹೃದಯಾಘಾತದಿಂದಾಗಿ ನಿಧನ ಹೊಂದಿದ್ದರು.
27 ಲಕ್ಷ ರೂ. ವೆಚ್ಚ : ಗೀತಾ ಯಾದವ್, ಕಲ್ಯಾಣಿ ಪೂಜಾರ್ತಿ ಮತ್ತು ಮುತ್ತಕ್ಕ ಬೈದಿ ಪೂಜಾರ್ತಿ ಅವರ ನೆನಪಿನಲ್ಲಿ ನಿರ್ಮಿಸಲಾದ ಮಂದಿರವನ್ನು ಗೀತಾ ಯಾದವ್ ಅವರ ವರ್ಷಾಂತಿಕದ ದಿನವಾದ ಸೆ. ೩ರಂದು ಉದ್ಘಾಟಿಸಲಾಗಿದೆ. ಮಂದಿರ ನಿರ್ಮಾಣಕ್ಕೆ ಪಿಂಕ್ ಸ್ಟೋನ್ ವಿಯೆಟ್ನಾಂ ಮಾರ್ಬಲ್‌ನ್ನು ಬಳಸಲಾಗಿದ್ದು, ಪುತ್ಥಳಿ (ಮೂರ್ತಿ) ಕೆತ್ತನೆಗೆ ವೈಟ್ ಸ್ಟೋನ್ ವಿಯೆಟ್ನಾಂ ಮಾರ್ಬಲ್‌ನ್ನು ಬಳಸಲಾಗಿದೆ. ಗುಡಿ ನಿರ್ಮಾಣ, ಪುತ್ಥಳಿ ರಚನೆ, ಮಂದಿರದ ಅಽಷ್ಟಾನದೊಳಗೆ ಮೂರ್ತಿ ಪ್ರತಿಷ್ಟಾಪನೆ ಸಹಿತವಾದ ಜೋಡಣಾ ಕಾರ್ಯಗಳಿಗೆ ೨೭ ಲಕ್ಷ ರೂ. ಖರ್ಚಾಗಿದೆ. ರಾಜಸ್ಥಾನದ ಜೈಪುರದ ಕಾರ್ಮಿಕರ ತಂಡವು ಗುಡಿ ನಿರ್ಮಾಣ ಮತ್ತು ಮೂರ್ತಿ ಕೆತ್ತನಾ ಕಾರ್ಯಗಳ ಕಾಮಗಾರಿಗಳ ಉಸ್ತುವಾರಿ ವಹಿಸಿದ್ದು, ಕಾಮಗಾರಿ ಪೂರ್ಣಗೊಳಿಸಲು ೩ ತಿಂಗಳು ೨೨ ದಿನಗಳ ಕಾಲ ಹಿಡಿದಿದೆ.
ಮಾಜಿ ಕಾರ್ಪೋರೇಟರ್ ಗೀತಾ ಯಾದವ್ ಪೂಜಾರಿ ಅವರ ನೆನಪಿನಲ್ಲಿ ಪತಿ ವಸಂತ್ ಯಾದವ್, ಮಕ್ಕಳಾದ ಮನೋಜ್ ವಿ. ಯಾದವ್, ಸಂತೋಷ್ ವಿ. ಯಾದವ್, ವಿನಯ್ ವಿ. ಯಾದವ್ ಮತ್ತು ನವದುರ್ಗಾ ಲಕ್ಷೀ ಅವರು ತಾಯಿ, ಅಜ್ಜಿ ಮತ್ತು ಮುತ್ತಜ್ಜಿಯ ಪುತ್ಥಳಿಯನ್ನು ನಿರ್ಮಿಸಿ, ಮಂದಿರದೊಳಗೆ ಪ್ರತಿಷ್ಠಾಪಿಸಿ, ಕುಟುಂಬದ ಮೂರು ತಲೆಮಾರಿನ ಹಿರಿಯರ ನೆನಪನ್ನು ಶಾಶ್ವತವಾಗಿಸುವ ಪ್ರಯತ್ನ ಮಾಡಿದ್ದಾರೆ.
ಸರಕಾರಿ ಪ್ರೌಢ ಶಾಲೆ ಫಿಶರೀಸ್ ಮಲ್ಪೆಯ ನಿವೃತ್ತ ಶಿಕ್ಷಕರಿಗೆ ಗುರುವಂದನೆ

Posted On: 05-09-2021 08:15PM
ಉಡುಪಿ : ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ ಮಲ್ಪೆ ಹಾಗೂ 1986-87 ನೇ ವರ್ಷದ ಹತ್ತನೇ ತರಗತಿಯ ಹಳೆ ವಿದ್ಯಾರ್ಥಿ ಗಳಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ತಮಗೆ ವಿದ್ಯೆ ನೀಡಿದ ಗುರುಗಳಿಗೆ ಗೌರವ ಅರ್ಪಣೆಯು ಶ್ರೀಮತಿ ಶಾಂತಿ ಟಿ. ಹೆಗಡೆ ನಿವೃತ್ತ ವೃತ್ತಿ ಶಿಕ್ಷಕರು ಮತ್ತು ಶ್ರೀಮತಿ ಧೋರತಿ ಕೋಟ್ಯಾನ್ ನಿವೃತ್ತ ದೈಹಿಕ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಫಿಶರೀಸ್ ಮಲ್ಪೆ ಇವರಿಗೆ ಅವರ ಸ್ವಗೃಹದಲ್ಲಿ ಗುರುವಂದನೆಯನ್ನು ಅರ್ಪಿಸಲಾಯಿತು.

ಈ ಕಾರ್ಯಕ್ರಮವು ಸತತ 13 ವರ್ಷ ಗಳಿಂದ ನಡೆದು ಬರುತ್ತಾ ಇರುವುದು ವಿಶೇಷವಾಗಿದೆ.
ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಹಾಗೂ ವಿಘ್ನೇಶ್ವರ ಪ್ರಿಂಟರ್ಸ್ ಮಾಲಕ ಎಮ್. ಮಹೇಶ್ ಕುಮಾರ್, ಹಳೆ ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳಾದ ಚಿತ್ರ ಕುಮಾರ್, ಲಕ್ಷ್ಮೀಶ ಬಂಗೇರ, ವಿನಯ ಪಡುಕರೆ, ಶಿವರಾಮ್ ಟಿ. ಸುವರ್ಣ, ರೋಹಿಣಿ, ಇಂದಿರಾ, ವಾಣಿ, ಮೀನಾ ನಾಯರ್, ಸರೋಜಿನಿ ಉಪಸ್ಥಿತರಿದ್ದರು.