Updated News From Kaup

ಕಾಣೆಯಾಗಿದ್ದ ನಿಟ್ಟೆ ನಿವಾಸಿ ಶವವಾಗಿ ಪತ್ತೆ

Posted On: 16-09-2021 10:32PM

ಕಾಪು : ಕಾಣೆಯಾಗಿರುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಮಜಾಲು ದರ್ಕಾಸ್ ಮನೆಯ ಶ್ಯಾಮ ಕೋಟ್ಯಾನ್ (65) ಇವರ ಮೃತ ದೇಹ ಇಂದು ಎಣ್ಣೆಹೊಳೆ ನದಿಯಲ್ಲಿ ಪತ್ತೆಯಾಗಿದೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಂದ ಶಾಲಾ ಕಾಲೇಜುಗಳಲ್ಲಿ ಕೋವಿಡ್-19 ಮಾರ್ಗಸೂಚಿ ಪಾಲನೆ ಪರಿಶೀಲನೆ

Posted On: 16-09-2021 10:26PM

ಉಡುಪಿ : ಕೋವಿಡ್-19 ಹರಡುವುದನ್ನು ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಪಾಲನೆ ಮಾಡುತ್ತಿರುವ ಕುರಿತಂತೆ, ಕರ್ನಾಟಕ ಲೋಕಾಯುಕ್ತರು, ಬೆಂಗಳೂರು ಇವರ ಸೂಚನೆಯಂತೆ, ಮಂಗಳೂರಿನ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ, ಉಡುಪಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಜಗದೀಶ್ ಎಂ, ಪೊಲೀಸ್ ನಿರೀಕ್ಷಕ ಜಯರಾಮ ಡಿ ಗೌಡ, ರಾಜಶೇಖರ ಎಲ್ ಹಾಗೂ ಸಿಬ್ಬಂದಿಗಳು ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕುಂಜಿಬೆಟ್ಟುವಿನ ಮಹಾತ್ಮಗಾಂಧೀ ಮೆಮೋರಿಯಲ್ ಕಾಲೇಜು, ಇಂದ್ರಾಳಿ ಪ್ರೈಮರಿ ಮತ್ತು ಹೈಯರ್ ಪ್ರೈಮರಿ ಸ್ಕೂಲ್, ಉಡುಪಿಯ ಸರಕಾರಿ ಬೋರ್ಡ್ ಹೈಸ್ಕೂಲ್ ಗಳಿಗೆ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ನಾಳೆ - ಆರ್ ಎಸ್ ಬಿ ಕೊಂಕಣಿ ಚಲನಚಿತ್ರ ಅಮ್ಚೆ ಸಂಸಾರ್ ಟ್ರೇಲರ್, ಧ್ವನಿಸುರುಳಿ ಹಾಡುಗಳು, ಪೋಸ್ಟರ್ ಬಿಡುಗಡೆ ಸಮಾರಂಭ

Posted On: 16-09-2021 06:38PM

ಉಡುಪಿ : ಬಹು ನಿರೀಕ್ಷಿತ ಆರ್ ಎಸ್ ಬಿ ಕೊಂಕಣಿ ಚಲನಚಿತ್ರ ಅಮ್ಚೆ ಸಂಸಾರ್ ಟ್ರೇಲರ್, ಧ್ವನಿಸುರುಳಿ ಹಾಡುಗಳು, ಪೋಸ್ಟರ್ ಬಿಡುಗಡೆ ಸಮಾರಂಭವು ನಾಳೆ (ಸೆಪ್ಟೆಂಬರ್ 17) ಶುಕ್ರವಾರ ಸಂಜೆ 6 ಗಂಟೆಗೆ ಆರ್ ಎಸ್ ಬಿ ಸಭಾಭವನ ಮಣಿಪಾಲದಲ್ಲಿ ಜರಗಲಿದೆ.

ಸೈಬರಕಟ್ಟೆ : ಇಂಜಿನಿಯರ್ಸ್ ಡೇ ಪ್ರಯುಕ್ತ ಹಿರಿಯ ನಿವೃತ್ತ ಇಂಜಿನಿಯರ್ ಕೆ. ವಿಜಯ ಹೆಗ್ಡೆ ಸಣ್ಗಲ್ ರಿಗೆ ಸನ್ಮಾನ

Posted On: 15-09-2021 10:57PM

ಉಡುಪಿ : ರೋಟರಿ ಕ್ಲಬ್ ಸೈಬರಕಟ್ಟೆಯಿಂದ ಇಂಜಿನಿಯರ್ಸ್ ಡೇ ಪ್ರಯುಕ್ತ ಹಿರಿಯ ನಿವೃತ್ತ ಇಂಜಿನಿಯರ್ ಕೆ. ವಿಜಯ ಹೆಗ್ಡೆ ಸಣ್ಗಲ್ ಅವರನ್ನು ಆದರಣೀಯ ಗೌರವಗಳೊಂದಿಗೆ ಸನ್ಮಾನಿಸಲಾಯಿತು.

ಗೋ ಕಳ್ಳತನ, ಮತಾಂತರ ವಿರುದ್ಧ ನಡೆಯುವ ಬ್ರಹತ್ ಜನಜಾಗೃತಿ ಸಭೆಗೆ ಉಡುಪಿ ಜಿಲ್ಲಾ ರಾಮ್ ಸೇನಾ ಬೆಂಬಲ : ದೀಪಕ್ ಮೂಡುಬೆಳ್ಳೆ

Posted On: 15-09-2021 07:03PM

ಉಡುಪಿ : ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳದ ನೇತೃತ್ವದಲ್ಲಿ ನಡೆಯುವ ಗೋ ಕಳ್ಳತನ ಹಾಗೂ ಮತಾಂತರ ವಿರುದ್ಧ ನಡೆಯುವ ಬ್ರಹತ್ ಜನಜಾಗೃತಿ ಸಭೆಗೆ ರಾಮ್ ಸೇನಾ ಉಡುಪಿ ಜಿಲ್ಲಾ ವತಿಯಿಂದ ಸಂಪೂರ್ಣ ಬೆಂಬಲ ಇದ್ದು ಇದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯವಾಗಿದ್ದು ಈ ಜನಜಾಗೃತಿ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ರಾಮ್ ಸೇನಾ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೀಪಕ್ ಮೂಡುಬೆಳ್ಳೆ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಾರಾಯಣಗುರುಗಳ ಭಾವಚಿತ್ರದೊಂದಿಗೆ ಅಸಂವಿಧಾನಾತ್ಮಕ ಪದ ಬಳಸಿದ ವ್ಯಕ್ತಿಯ ವಿರುದ್ಧ ಜಿಲ್ಲಾಧಿಕಾರಿ, ಪೋಲಿಸ್ ವರಿಷ್ಠಾಧಿಕಾರಿಗೆ ದೂರು

Posted On: 15-09-2021 01:17PM

ಉಡುಪಿ : ಬ್ರಹ್ಮ ಶ್ರೀ ನಾರಾಯಣ ಗುರುಗಳ ಭಾವ ಚಿತ್ರದೊಂದಿಗೆ ಪತ್ರಿಕೆಯೊಂದರ ಸಂಪಾದಕ ಅಸಂವಿಧಾನಾತ್ಮಕ ಪದ ಬಳಸಿ ಫೇಸ್‍ಬುಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅಸಂಖ್ಯಾತ ಬಿಲ್ಲವ ಸಮಾಜದ ಗುರುಗಳ ಅನುಯಾಯಿಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರರಾದ ಪ್ರಮೋದ್ ಉಚ್ಚಿಲ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾದ ಅನ್ಸಾರ್ ಅಹಮ್ಮದ್ ಉಡುಪಿ ಜಿಲ್ಲಾಧಿಕಾರಿಗಳಿಗೆ ಮತ್ತು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರಕಟನೆ - ವ್ಯಕ್ತಿ ಕಾಣೆಯಾಗಿದ್ದಾರೆ

Posted On: 14-09-2021 09:48AM

ಕಾಪು : ನಿಟ್ಟೆ ಗ್ರಾಮದ 65 ವರ್ಷ ಪ್ರಾಯದ ಶಾಮ ಕೋಟ್ಯಾನ್ ಕಾಣೆಯಾಗಿದ್ದಾರೆ. ಬೆಳಿಗ್ಗೆ 6 ಗಂಟೆಗೆ ಹೊರಟಿದ್ದು, ಕ್ರೀಮ್ ಕಲರ್ ಶರ್ಟ್, ಕಪ್ಪು ಲುಂಗಿ, ಮುಖ ಬಣ್ಣ ಕಪ್ಪು, ಹಣೆಯಲ್ಲಿ ಚುಕ್ಕೆಯಿದ್ದು, ಇವರು ತುಳು, ಕನ್ನಡ, ಹಿಂದಿ ಭಾಷೆ ಬಲ್ಲವರಾಗಿದ್ದಾರೆ‌.

ವಿವಿಧ ಬೇಡಿಕೆಗಳ ಈಡೇರಿಕೆಗೆ ಸ್ವಿಗ್ಗಿ ಆಹಾರ ಪೂರೈಕೆ ನೌಕರರ ಪ್ರತಿಭಟನೆ

Posted On: 13-09-2021 05:54PM

ಉಡುಪಿ : ಆಹಾರ ಡೆಲಿವರಿ ಸಂಸ್ಥೆಯಾದ ಸ್ವಿಗ್ಗಿಯ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದು ಇಂದ್ರಾಳಿಯ ಸ್ವಿಗ್ಗಿ ಸಂಸ್ಥೆಯ ಬಳಿ ಪ್ರತಿಭಟಿಸಿದರು.

ಎರ್ಮಾಳು : ಸಾಮೂಹಿಕ ಹೂವಿನ ಪೂಜೆ

Posted On: 13-09-2021 04:30PM

ಪಡುಬಿದ್ರಿ : ಸಂದು ದಾಂತಿ ಗರೋಡಿ ಎಂದು ಐತಿಹ್ಯವುಳ್ಳ ಎರ್ಮಾಳು ತೆಂಕ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಸಾಮೂಹಿಕ ಹೂವಿನ ಪೂಜೆಯು ಇಂದು ನೆರವೇರಿತು.

ಇನ್ನಂಜೆ : ಯುವಕ ಮಂಡಲದ 2021 -22 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

Posted On: 13-09-2021 04:22PM

ಕಾಪು : ಕಾಪು ತಾಲೂಕಿನ ಇನ್ನಂಜೆ ಯುವಕ ಮಂಡಲದ 2021 -22 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ಇನ್ನಂಜೆ ಯುವಕ ಮಂಡಲದ ಅಧ್ಯಕ್ಷರಾದ ದಿವೇಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಇನ್ನಂಜೆ ಶಾಲಾ ದಾಸ ಭವನದಲ್ಲಿ ಜರಗಿತು.