Updated News From Kaup

ಶಿರ್ವ : ಬ್ರಹ್ಮಶ್ರೀ ನಾರಾಯಣಗುರು ಮಂದಿರಕ್ಕೆ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಭೇಟಿ

Posted On: 17-07-2021 01:38PM

ಕಾಪು : ಜಗದ್ಗುರು ಬ್ರಹ್ಮ ಶ್ರೀ ನಾರಾಯಣಗುರುಗಳ ಶಿವಗಿರಿ ಮಠದ ಸನ್ಯಾಸಿಗಳಾದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಇಂದು ಶಿರ್ವದ ಚೆಕ್ ಪಾದೆ ಬಳಿ ಇರುವ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರಕ್ಕೆ ದಿವ್ಯ ದರ್ಶನವಿತ್ತರು.

ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ಭವಿಷ್ಯದ ಅಭಿವೃದ್ಧಿಗೆ ಇವರ ಮಾರ್ಗದರ್ಶನ ಹಾಗೂ ಭವಿಷ್ಯದಲ್ಲಿ ಶಿರ್ವದಲ್ಲಿ ಹೊಸ ಧಾರ್ಮಿಕ ಇತಿಹಾಸ ಸೃಷ್ಟಿಸುವ ಬಗ್ಗೆ ಸಂಕಲ್ಪವಿತ್ತು ಆಶೀರ್ವಚನ ನೀಡಿದರು.

ಬಿಲ್ಲವ ಸಮಾಜವನ್ನು ಧಾರ್ಮಿಕ, ಶೈಕ್ಷಣಿಕ, ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಗೊಳಿಸುವ ಉದ್ದೇಶದೊಂದಿಗೆ ಮತ್ತು ಶಿರ್ವದಲ್ಲಿ ಬಿಲ್ಲವ ಸಮಾಜವನ್ನು ಒಗ್ಗಟ್ಟು ಗೊಳಿಸಿ ನಾರಾಯಣ ಗುರುಗಳ ತತ್ವ ಆದರ್ಶ ಸಿದ್ಧಾಂತವನ್ನು ಎಲ್ಲರೂ ಅನುಸರಿಸಲು ಪ್ರೇರಣೆ ನೀಡುವುದಾಗಿ ತಿಳಿಸಿದರು.

ಈ ಸಂಧರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರೂ ಮಾರ್ಗದರ್ಶಕರೂ ಆದ ಹೆಜಮಾಡಿ ಮಹೇಶ್ ಶಾಂತಿ, ಕಳತೂರ್ ಗರಡಿ ಅರ್ಚಕರಾದ ವಿಶ್ವನಾಥ್ ಅಮೀನ್, ಗೌರವ ಅಧ್ಯಕ್ಷರಾದ ದಿನೇಶ್ ಸುವರ್ಣ, ಸ್ಥಳ ದಾನವನ್ನು ನೀಡಿರುವ ಶ್ರೀ ರತ್ನಾಕರ ಕುಕ್ಯಾನ್ ಚೆಕ್ ಪಾದೆ, ಅಧ್ಯಕ್ಷರಾದ ಶ್ರೀ ದೇವಿ ಪ್ರಸಾದ್ ಪೂಜಾರಿ ಮತ್ತು ಸಮಿತಿ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ಶಂಕರಪುರ : ಸೈಂಟ್ ಜೋನ್ಸ್ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿ ನಿವೃತ್ತಿ ಹೊಂದಿದ ಡೊಮಿಯನ್ ಆರ್. ನೊರೊನ್ನರಿಗೆ ಬೀಳ್ಕೊಡುಗೆ, ಸನ್ಮಾನ

Posted On: 16-07-2021 02:25PM

ಶಿರ್ವ : ಸೈಂಟ್ ಜೋನ್ಸ್ ಪ್ರೌಢ ಶಾಲೆ ಶಂಕರಪುರ ಇಲ್ಲಿ 39 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ 2021, ಎಪ್ರಿಲ್ 30 ರಂದು ವಯೋನಿವೃತ್ತಿ ಹೊಂದಿದ ಡೊಮಿಯನ್ ಆರ್. ನೊರೊನ್ನ ಇವರನ್ನು ಸೈಂಟ್ ಜೋನ್ಸ್ ಶಾಲಾ ಆಡಳಿತ ಮಂಡಳಿ, ಪ್ರೌಢ ಶಾಲಾ ಶಿಕ್ಷಕ ಮತ್ತು ಸಿಬ್ಬಂದಿ ಹಾಗೂ ಸೈಂಟ್ ಜೋನ್ಸ್ ಶಾಲಾ ಹಳೆ ವಿದ್ಯಾರ್ಥಿ ಸಂಘ ಜಂಟಿಯಾಗಿ ಚರ್ಚಿನ ಸಮುದಾಯ ಭವನದಲ್ಲಿ ಸನ್ಮಾನಿಸಲಾಯಿತು.

ನಿವೃತ್ತ ಶಿಕ್ಷಕರ ಬಗ್ಗೆ ಶಾಲಾ ಹಳೆ ವಿದ್ಯಾರ್ಥಿ ಶ್ರೀ ವಾಲ್ಟ್ಸನ್ ಡೇಸಾರವರು ಗುಣಗಾನ ಮಾಡಿದರು. ಹಾಗೆಯೇ ಪ್ರೌಢ ಶಾಲಾ ಸಹಶಿಕ್ಷಕಿ ಸುನೀತ ಲೀನಾ ಡಿ'ಸೋಜರವರು ಹಾಗೂ 10ನೇ ತರಗತಿಯ ವಿದ್ಯಾರ್ಥಿನಿ ಕು. ಶ್ರೇಯ ಮಾತನಾಡಿದರು.

ನಿವೃತ್ತ ಮುಖ್ಯೋಪಾಧ್ಯಾಯರಾದ ಮೋಹನ್‌ದಾಸ್ ಆರ್. ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಶಾಲಾ ಸಂಚಾಲಕರಾದ ರೆ.ಫಾ. ಫರ್ಡಿನಾಂಡ್ ಗೋನ್ಸಾಲ್ವಿಸ್‌ರವರು ಶಾಲು ಹೊದಿಸಿ ಸನ್ಮಾನಿಸಿದರು. ವೇದಿಕೆಯಲ್ಲಿ ಚರ್ಚಿನ ಆಡಳಿತ ಮ೦ಡಳಿಯ ಕಾರ್ಯದರ್ಶಿ ಅನಿತ ಡಿ'ಸೋಜ, ಚರ್ಚಿನ ಸಹಾಯಕ ಧರ್ಮಗುರುಗಳಾದ ರೆ.ಫಾ. ಅನಿಲ್ ಪಿಂಟೊ, ಮೌಂಟ್ ರೋಜರಿ ಚರ್ಚ್ ಕಲ್ಯಾಣಪುರದ ಧರ್ಮಗುರುಗಳಾದ ರೆ.ಫಾ. ಲೆಸ್ಲಿ ಡಿ'ಸೋಜ ಮತ್ತು ಮೂರು ಸಂಸ್ಥೆಗಳ ಮುಖ್ಯಸ್ಥರು ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಯನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಚರ್ಚಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಜೋನ್ ರೋಡ್ರಿಗಸ್ ಸ್ವಾಗತಿಸಿ, ಪ್ರೌಢ ಶಾಲಾ ಮುಖ್ಯಸ್ಥರಾದ ಅಶ್ವಿನ್ ರೊಡ್ರಿಗಸ್ ವಂದಿಸಿ, ಶಿಕ್ಷಕಿ ಅರ್ಚನಾ ಕಾರ್ಯಕ್ರಮ ನಿರೂಪಿಸಿದರು.

ನಾರಾಯಣಗುರುಗಳ ತತ್ವದಂತೆ ಹಿಂದು ದೇವಳ ನಿರ್ಮಿಸಿದ ಕ್ರೈಸ್ತ ಉದ್ಯಮಿ : ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ

Posted On: 16-07-2021 01:59PM

ಕಾಪು : ಕ್ರೈಸ್ತ ಉದ್ಯಮಿ ಗ್ಯಾಬ್ರಿಯಲ್ ಫೇಬಿಯನ್ ನಜರತ್ ರವರ ಹೆತ್ತವರಾದ ಹಳೆಹಿತ್ಲು ದಿ| ಫೇಬಿಯನ್ ಸಬೆಸ್ಟಿಯನ್ ನಜರತ್ ಮತ್ತು ದಿ| ಸಬೀನಾ ನಜರತ್ ನೆನಪಿಗಾಗಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಕಟಪಾಡಿ-ಶಿರ್ವ ಮುಖ್ಯರಸ್ತೆಯ ಮಟ್ಟಾರು - ಅಟ್ಟಿಂಜ ಕ್ರಾಸ್ ಬಳಿ ನಿರ್ಮಿಸಿದ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಕೇರಳ ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಯವರು ಭೇಟಿ ನೀಡಿದರು.

ಈ ಸಂದರ್ಭ ಮಾತನಾಡಿದ ಶ್ರೀಗಳು ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ನಾರಾಯಣ ಗುರುಗಳ ತತ್ವ ಆದರ್ಶದಂತೆ ಈ ಸಾನಿಧ್ಯವು ಕ್ರೈಸ್ತ ಸಮುದಾಯದ ಭಕ್ತನಿಂದ ನಿರ್ಮಾಣವಾಗಿರುವುದು ಒಂದು ನಿದರ್ಶನವಾಗಲಿದೆ ಎಂದರು.

ನನ್ನ ಸಮುದಾಯದ ಬಗ್ಗೆ ಗೌರವವಿದೆ, ಇಲ್ಲ ಸಲ್ಲದ ಆರೋಪಕ್ಕೆ ಕಾನೂನು ಹೋರಾಟಕ್ಕೂ ಸಿದ್ಧ : ಅಂತರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿ

Posted On: 15-07-2021 10:37PM

ಕುಂದಾಪುರ : ಶ್ರೀಮಹಾಕಾಳಿ ದೇವಸ್ಥಾನ ಮತ್ತು ವಿದ್ಯಾರಂಗ ಮಿತ್ರ ಮಂಡಳಿ (ರಿ) ಕುಂದಾಪುರ ಇದರ ಪತ್ರಿಕಾಗೋಷ್ಠಿಯಲ್ಲಿ ಸತ್ಯವನ್ನು ಮರೆಮಾಚುವ ಪ್ರಯತ್ನ ನಡೆದಿದ್ದು, ಎಲ್ಲವೂ ಸತ್ಯಕ್ಕೆ ದೂರವಾದ ಸಂಗತಿ ಮತ್ತೊಮ್ಮೆ ನನ್ನ ತೇಜೋವಧೆ ಮಾಡುವ ಪ್ರಯತ್ನ ಇದಾಗಿದೆ. ನಾನು ಎಲ್ಲಿಯೂ ನನ್ನ ಸಮುದಾಯದ ವಿರುದ್ದ ಅವಹೇಳನವಾಗಲಿ, ಕೀಳಾಗಿ ಮಾತಾಡಿಲ್ಲ ಯಾವುದೇ ಮಾಧ್ಯಮದಲ್ಲಿ ಸಮೂದಾಯದ ವಿರುದ್ದ ಹೇಳಿಕ ನೀಡಿಲ್ಲ. ಎಂದು ಹರ್ಕ್ಯುಲೆಸ್ ಜಿಮ್ ಕುಂದಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿ ಹೇಳಿದರು.

ವಿಪರ್ಯಾಸವೇನೆಂದರೆ ವೈಯಕ್ತಿಕ ವಿಷಯವನ್ನು ಸಮುದಾಯ ವಿಷಯವಾಗಿ ತಿರುಚುತ್ತಿರುವುದು ಸರಿಯಲ್ಲ, ನನ್ನ ಹಿಂದೆ ಯಾವುದೊ ಕಾಣದ ಕೈಗಳಿಂದ ದೊಡ್ಡ ಷಡ್ಯಂತರ ನಡೆಯುತ್ತಿದೆ.ನಾನು ನ್ಯಾಯಲಯದಲ್ಲಿ 4 ಜನರ ವಿರುದ್ಧ ದಾವೆ ಹೂಡಿರುವುದೇ ಹೊರತು, ನನ್ನ ಖಾರ್ವಿ ಸಮುದಾಯದ ಸಂಘ, ಸಂಸ್ಥೆಗಳ ಮೇಲೆ ಅಲ್ಲ ನಾನು ಎಲ್ಲಿಯೂ ನನ್ನ ಸಮೂದಾಯದ ವಿರುದ್ದ ಅವಹೇಳನವಾಗಲಿ, ಕೀಳಾಗಿ ಮಾತಾಡಿಲ್ಲ ಯಾವುದೇ ಮಾಧ್ಯಮದಲ್ಲಿ ಸಮೂದಾಯದ ವಿರುದ್ದ ಹೇಳಿಕೆ ನೀಡಿಲ್ಲ.

ನಾನು ಮಾಡಿದ ಸಾಧನೆಯನ್ನು ಅಪಪ್ರಚಾರ ಮಾಡಿದ ವ್ಯಕ್ತಿಗಳ ಮೇಲೆ ದೂರು ದಾಖಲಿಸಿದ್ದೇನೆ. ಹೊರತು ಸಮುದಾಯದ ಮೇಲೆ ಯಾವುದೇ ಆರೋಪ ಮಾಡಿಲ್ಲ. ಕಜಕಿಸ್ತಾನದಲ್ಲಿ ನಾನು ಚಿನ್ನದ ಪದಕ ಗೆದ್ದು ಮೊದಲ ಸ್ಥಾನ ಪಡೆದ್ದನ್ನು 5ನೇ ಸ್ಥಾನ ಎಂದು ತಿದ್ದಿ ವಾಟ್ಸಪ್ನಲ್ಲಿ ಹರಿದು ಬಿಟ್ಟಿರುವವರ ವಿರುದ್ದ ದೂರು ದಾಖಲಿಸಿದ್ದೇನೆ. ಅದರ ಸಾಕ್ಷಿಯನ್ನು ಈಗಾಗಲೇ ನ್ಯಾಯಾಲಯದಲ್ಲಿ ನೀಡಿರುತ್ತೇನೆ. ಎಲ್ಲಾ ದಾಖಲೆ ಪರಿಶೀಲಿಸಿದ ಮೇಲೆ ಆರೋಪಿಗಳ ವಿರುದ್ಧ ಕೇಸು ದಾಖಲಿಸಲು ನ್ಯಾಯಾಲಯ ಆದೇಶಿಸಿದೆ.

ಇನ್ನು ನಾನು ಕಜಕಿಸ್ತಾನಕ್ಕೆ ಹೋಗುವಾಗ ಹಣದ ಬೇಡಿಕೆ ಇಟ್ಟಿದ್ದೇನೆ ಎಂದು ನನ್ನ ಮೇಲೆ ಆರೋಪ ಮಾಡಿದ್ದಾರೆ ಇದು ಸತ್ಯಕ್ಕೆ ದೂರವಾದ ಮಾತು.ಒಬ್ಬ ಅಂತಾರಾಷ್ಟ್ರೀಯ ಕ್ರೀಡಾಪಟು ವಿದೇಶಕ್ಕೆ ಹೋಗುವಾಗ ತನ್ನ ಸಮುದಾಯದಲ್ಲಿ ಮತ್ತು ಸಂಘ ಸಂಸ್ಥೆಯಲ್ಲಿ ಪ್ರೋತ್ಸಾಹ, ಸಹಕಾರ, ಬೆಂಬಲ ಕೇಳುವುದು ಸಹಜ. ಹಾಗೆ ನಾನು ಮನವಿ ಮಾಡಿದ್ದು ನಿಜ. ಆದ್ರೆ ನಾನು ಎಲ್ಲೂ ಹಣಕ್ಕೆ ಪಟ್ಟು ಹಿಡಿಯಲಿಲ್ಲ ಅಲ್ಲದೆ ಹಣ ಕೊಡಲೇ ಬೇಕು ಅಂತ ಯಾವತ್ತೂ ಹೇಳಲಿಲ್ಲ. ನಾನು ಗೆದ್ದು ಬಂದ ನಂತರ ರೂ. 5 ಸಾವಿರ ಚೆಕ್ ನ್ನು ವಿದ್ಯಾರಂಗ ಮಿತ್ರ ಮಂಡಳಿಯವರು ಕೊಟ್ಟಿದ್ದಾರೆ. ಆ ಚೆಕ್ ನ್ನು ಎಲ್ಲರ ಸಮ್ಮುಖದಲ್ಲಿ ವಾಪಸು ನೀಡಿದ್ದೇನೆ. ನನಗೆ ನನ್ನ ಕೊಂಕಣ ಖಾರ್ವಿ ಸಮುದಾಯದ ಬಗ್ಗೆ ಅಪಾರವಾದ ಗೌರವವಿದೆ. ನಾನು ಕೊಂಕಣ ಖಾರ್ವಿ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಪಡುತ್ತೇನೆ. ನಾನು ಹುಟ್ಟಿದ್ದು ಕೊಂಕಣ ಖಾರ್ವಿ ಸಮುದಾಯದಲ್ಲಿ ಸಾಯೂವುದು ಕೊಂಕಣ ಖಾರ್ವಿ ಸಮುದಾಯದಲ್ಲಿಯೇ. ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ನನ್ನ ಹೋರಾಟ ಏನೇ ಇದ್ದರೂ ಅದು ನಾಲ್ಕು ವ್ಯಕ್ತಿಗಳ ವಿರುದ್ದವೇ ಹೊರತು ಸಮುದಾಯದ ವಿರುದ್ದವಲ್ಲ. ಆದರೆ ಇಲ್ಲಿ ವೈಯಕ್ತಿಕ ವಿಚಾರವನ್ನು ಸಮುದಾಯದ ವಿಚಾರ ವೆಂದು ತಿರುಚುವುದು ಸರಿಯಲ್ಲ. ನಾನು ಈ ನಾಲ್ಕು ವ್ಯಕ್ತಿಗಳ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇನೆ. ಇವರು ಸಹ ವೈಯಕ್ತಿಕ ವಿಷಯವನ್ನು ಮುಚ್ಚಿ ಹಾಕಲು ಸಮುದಾಯವನ್ನು ಬಳಸಿಕೊಳ್ಳುವುದು ಬಿಟ್ಟು ಕಾನೂನು ಹೋರಾಟ ನಡೆಸಲಿ ಎಂದು ಸತೀಶ್ ಖಾರ್ವಿ ಹೇಳಿದರು.

ಎರ್ಮಾಳು : ಸುಪ್ರಭಾತ, ಕವನ ಸಂಕಲನ ಬಿಡುಗಡೆ .

Posted On: 15-07-2021 08:58PM

ಕಾಪು : ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದಲ್ಲಿ ನಿವೃತ್ತ ಪ.ಪೂ .ಪ್ರಾಧ್ಯಾಪಕ, ಸಾಹಿತಿ ,ಚಿಂತಕ ,ಪ್ರವಚನಕಾರ ವೈ .ರಾಮಕೃಷ್ಣ ರಾವ್ ವಿರಚಿತ ಎರ್ಮಾಳು ಶ್ರೀ ಜನಾರ್ದನ ದೇವರ ಸುಪ್ರಭಾತದ ಪುಸ್ತಕ ಹಾಗೂ ಅಡಕ ಮುದ್ರಿಕೆಯನ್ನು ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾದೀಶ ಶ್ರಿಪಾದರು ಬಿಡುಗಡೆಗೊಳಿಸಿದರು. ಕಿರಿಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾರಾಜ ಶ್ರೀಪಾದರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ರಾಮಕೃಷ್ಣ ರಾಯರ ಕವನ ಸಂಕಲನ ಹೊಂಬೆಳಕು ಕೃತಿಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೆಂದ್ರ ಅಡಿಗ ಅವರು ಬಿಡುಗಡೆಗೊಳಿಸಿದರು.

ದೇವಳದ ಅನುವಂಶಿಕ ಮೊಕ್ತೇಸರ ಎರ್ಮಾಳು ಬೀಡು ವೈ. ಅಶೋಕರಾಜ್ ಅವರು ಅಧ್ಯಕ್ಷತೆ ವಹಿಸಿದ್ದರು .ದೇವಳದ ತಂತ್ರಿಗಳಾದ ವೇ.ಮೂ. ರಾಧಾಕೃಷ್ಣ ಉಪಾದ್ಯಾಯ, ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯ , ಸಾಹಿತಿ ,ಕವಿ‌ ಡಾ.ಜನಾರ್ದನ ಭಟ್ , ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಮರಾಠೆ , ಉಡುಪಿ ಜಿ.ಪಂ. ಮಾಜಿ ಉಪಾಧ್ಯಕ್ಷರಾದ ಶೀಲಾ ಕೆ.ಶೆಟ್ಟಿ , ಸುಪ್ರಭಾತಕ್ಕೆ ಕಂಠದಾನ ಮಾಡಿದ ಪ್ರಸಿದ್ಧ ಹಿನ್ನೆಲೆ ಗಾಯಕ ರಮೇಶ್ಚಂದ್ರ , ಬೆಂಗಳೂರಿನ ತುಳುವೆರೆಂಕುಲು ಸಂಸ್ಥೆಯ ಅಧ್ಯಕ್ಷ ವೈ.ಜಯಂತರಾವ್ , ಪುಚ್ಚೊಟ್ಟು ಬೀಡು ಚಂದ್ರಹಾಸ ಎಲ್.ಶೆಟ್ಟಿ‌ ,ವ್ಯಾಸ ಮೋಹನ ಮುಂತಾದವರು ಉಪಸ್ಥಿತರಿದ್ದರು.

ರಾಮಕೃಷ್ಣ ರಾಯರು ಪ್ರಸ್ತಾವಿಸಿ ಸ್ವಾಗತಿಸಿದರು.ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್ .ಕಾರ್ಯಕ್ರಮ ನಿರ್ವಹಿಸಿದರು‌. ಶ್ರೀಮತಿ ಲಲಿತಾ ಆರ್.ರಾವ್ ವಂದಿಸಿದರು .ದೇವಳದ ಪ್ರಬಂಧಕ ಸತೀಶ ರಾವ್ , ಸಂತೋಷ ಜೆ.ಶೆಟ್ಟಿ‌ ಸಹಕರಿಸಿದ್ದರು.

ಶಿರ್ವ : ನೇಜಿ ನಾಟಿ ಕೃಷಿ ಕಾಯ೯ಕ್ರಮ

Posted On: 14-07-2021 05:03PM

ಶಿವ೯: ಅನಾದಿ ಕಾಲದಿಂದಲೂ ಕೃಷಿ ಮಾನವನ ಕುಲ ಕಸುಬು. ಆಧುನಿಕತೆ ಬೆಳೆದಂತೆ ಮನುಷ್ಯ ಬೇರೆ ಬೇರೆ ಕೆಲಸಕಾಯ೯ಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಕಾರಣ ಇಂದು ಕೃಷಿಯು ಹಿಂದುಳಿಯುದಕ್ಕೆ ಕಾರಣವಾಯಿತು.ಆದರೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿ ಕಾಯ೯ ಇಂದು ಸಾಗುತ್ತಿದೆ ಈ ನಿಟ್ಟಿನಲ್ಲಿ ಯುವಜನತೆಯು ಭಾಗಿಯಾಗುವ ಮೂಲಕ ನೆಲ-ಜಲ ಭೂಮಿಯ ಸಂರಕ್ಷಣೆ ಭೂಮಿಯನ್ನು ಹಸಿರಾಗಿಸುವುದರ ಮೂಲಕ ಮಾಡಿದರೆ ಮುಂದಿನ ಜನಾಂಗಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ಸಂತ ಮೇರಿ ಮಹಾವಿದ್ಯಾಲಯದ ಗ್ರೀನ್ ಟೀಚರ್ ಪೋರಂನ ಸಹಭಾಗಿತ್ವದಲ್ಲಿ ಎನ್ಎಸ್ಎಸ್, ಎನ್ ಸಿಸಿ,ರೋವರ್ಸ್ & ರೇಂಜರ್ಸ್,ರೆಡ್ ಕ್ರಾಸ್, ರೋಟರಿ ಶಿವ೯ ಇವರ ಸಂಯುಕ್ತ ಆಶ್ರಯದಲ್ಲಿ ಕುಂಜಿಗುಡ್ಡೆ ಪಿಲಾರ್ ಫೆಡ್ರಿಕ್ ಕ್ಯಾಸ್ತಲಿನೊ ಮತ್ತು ಹೆಲೆನ ಕ್ಯಾಸ್ತಲಿನೊ ಇವರ ಗದ್ದೆಯಲ್ಲಿ ನೇಜಿ ನಾಟಿ ಕೃಷಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜ್ಯ ಪ್ರಶಸ್ತಿ ವಿಜೇತ ರೋಟರಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಘವೇಂದ್ರ ನಾಯಕ್ ಮಾತನಾಡಿದರು.

ನಾವು ಸಮಾಜ ಮುಖಿಯಾಗಿ ಬೆಳೆಯಬೇಕು,ವಿದ್ಯಾರ್ಥಿಗಳು ಸಮಾಜ ಮತ್ತು ಕಾಲೇಜನ್ನು ಬೆಸೆಯುವ ಕೊಂಡಿಗಳು. ಆದುದರಿಂದ ಸಾಮಾಜಿಕ ಕೊಡುಕೊಳ್ಳುವಿಕೆಯು ಆರೋಗ್ಯ ಪೂಣ೯ ಪರಿಸರ ನಿಮಿ೯ಸಲು ಸಹಕಾರಿ ಯಾಗುತ್ತದೆ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಮಾಜ ಸೇವೆಯು ನಿರಂತರವಾದಾಗ ಒಂದು ಉತ್ತಮ ಸಮಾಜದ ಸಹಭಾಗಿತ್ವಕ್ಕೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಯಶಸ್ವಿಗೊಳ್ಳಲು ನಮ್ಮ ಹಳೆವಿದ್ಯಾಥಿ೯ ಶ್ರೀಜಾಕ್ಸನ್ ಹಾಗೂ ಇತರರ ಸಹಕಾರ ಶ್ಲಾಘನೀಯ ಎಂದು ಪ್ರಶಂಸನೀಯ ಮಾತುಗಳನ್ನಾಡಿದ ಕಾರ್ಯಕ್ರಮದ ಅಧ್ಯಕ್ಷರೂ ಆದ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆರಾಲ್ಡ್‌ ಐವನ್ ಮೊನಿಸ್ ರವರು ವಂದಿಸಿದರು.

ನಮ್ಮ ಈ ಕಾರ್ಯಕ್ರಮದ ಉದ್ದೇಶ ಮುಂದಿನ ಪೀಳಿಗೆ ನಮ್ಮ ಮಣ್ಣಿನ ಸಂಬಂಧವನ್ನು ಉಳಿಸಿಕೊಳ್ಳುವುದರ ಜೊತೆಗೆ ಕೃಷಿ ಕಾಯ೯ಗಳಲ್ಲಿ ಭಾಗಯಾಗಿ ಸಮಾಜ ಸೇವೆ ಮಾಡುವುದು,ಕೃಷಿ ಸಂಬಂಧಿ ಕಲಿಕೆಯೂ ಆಗಿದೆ ಎಂದು ಕಾರ್ಯಕ್ರಮಕ್ಕೆ ಬಂದ ಎಲ್ಲ ರನ್ನು ಸ್ವಾಗತಿಸಿ ಗ್ರೀನ್ ಟೀಚರ್ ಪೋರಂನ ಸಂಯೋಜಕಿ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ನಿದೇ೯ಶಕಿಯೂ ಆದ ಕು.ಯಶೋದ ಪ್ರಸ್ತಾವಿಕ ಮಾತುಗಳಲ್ಲಿ ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ರೋಟರಿ ಶಿವ೯ದ ಕಾರ್ಯದರ್ಶಿ ಶ್ರೀಜಿನೇಶ್ ಬಳ್ಳಾ ಲ್, ಪತ್ರಕರ್ತ ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ತು ಕಾಪು ವಲಯ ಅಧ್ಯಕ್ಷರಾದ ಶ್ರೀಪುಂಡಲೀಕ ಮರಾಠೆ, ಕಾಲೇಜಿನ ಎನ್ ಸಿ ಸಿ ಘಟಕದ ಅಧಿಕಾರಿ ಲೆಪ್ಟಿನೆಂಟ್ ಶ್ರೀ ಕೆ.ಪ್ರವಿಣ್ ಕುಮಾರ್, ಎನ್ ಎಸ್ ಎಸ್ ಘಟಕದ ಸಂಯೋಜಕ ಪ್ರೇಮನಾಥ್, ರೇಂಜರ್ಸ ಮತ್ತು ರೋವರ್ಸ ಘಟಕದ ಪ್ರಕಾಶ್ , ಸಂಗೀತಾ, ರೆಡ್ ಕ್ರಾಸ್ ಘಟಕದ ಮುರಳಿ ,ಅಧ್ಯಾಪಕ ಸಂಘದ ಕಾಯ೯ದಶಿ೯ ರೀಮಾ ಲೋಬೊ, ಹಿರಿಯ ಉಪನ್ಯಾಸಕರಾದ ವಿಠಲ್ ನಾಯಕ್ ಹಾಗೂ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ,ವಿವಿಧ ಘಟಕಗಳ ವಿದ್ಯಾರ್ಥಿ ನಾಯಕರು ಮತ್ತು ವಿದ್ಯಾರ್ಥಿಗಳು ವಿಶೇಷವಾಗಿ ಹಳೆವಿದ್ಯಾಥಿ೯ಗಳು ಭಾಗವಹಿಸಿದ್ದರು. ನಾಟಿ ಕಾಯ೯ಕ್ಕೆ ಗದ್ದೆಯನ್ನು ಒದಗಿಸಿ ವ್ಯವಸ್ಥೆಗೊಳಿಸಿ ಪೂರ್ಣ ಸಹಕಾರ ಕೊಟ್ಟ ಫೆಡ್ರಿಕ್ ಕ್ಯಾಸ್ತಲಿನೊ ಇವರಿಗೆ ಕಾಲೇಜಿನ ಪ್ರಾಂಶುಪಾಲರು ಫಲಬಿಡುವ ಸಸಿಗಳನ್ನು ನೆನಪಿನ ಕಾಣಿಕೆಯಾಗಿ ನೀಡಿ ಅವರಿಗೆ ಕ್ರತಜ್ಞತೆಯನ್ನು ಸಲ್ಲಿಸಿದರು.

ಹೆಜಮಾಡಿ : ಸ್ವಚ್ಛತಾ ಅಭಿಯಾನ

Posted On: 14-07-2021 04:45PM

ಕಾಪು : ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಹೆಜಮಾಡಿ ಸರಕಾರಿ ಪ್ರೌಢಶಾಲೆಯ ಹಳೆವಿದ್ಯಾರ್ಥಿ ಸಂಘ ಜಂಟಿ ಆಶ್ರಯದಲ್ಲಿ ಹೆಜಮಾಡಿ ಸರಕಾರಿ ಪ್ರೌಢ ಶಾಲಾ ವಠಾರದಲ್ಲಿ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಕ್ಕೆ ರೋಟರಿ ಅಧ್ಯಕ್ಷ ಮಹಮ್ಮದ್ ನಿಯಾಜ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ರೋಟರಿ ವಲಯ ಸಂಯೋಜಕ ರಮೀಜ್ ಹುಸೇನ್, ನಿಕಟ ಪೂರ್ವ ಅಧ್ಯಕ್ಷ ಕೇಶವ್ ಸಾಲ್ಯಾನ್, ಹೆಜಮಾಡಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಈಶ್ವರ್ ಎ., ಮುಖ್ಯ ಶಿಕ್ಷಕಿ ಗೀತಾ ಶೆಟ್ಟಿ , ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸುಲೃೆಮಾನ್ ಹೆಚ್ ಕೆ., ಹಳೆವಿಧ್ಯಾರ್ಥಿ ಸಂಘದ ಅಧ್ಯಕ್ಷ ಸುಧೀರ್ ಕರ್ಕೇರ, ಪೂರ್ವ ಅಧ್ಯಕ್ಷ ‌ ರಿಯಾಜ್ ಮುದರಂಗಡಿ, ಕಾರ್ಯದರ್ಶಿ ಬಿ.ಯಸ್ ಅಚಾರ್ಯ, ಸದಸ್ಯರಾದ ಸುಧಾಕರ್ ಕೆ, ಎಮ್. ಎಸ್ ಶಾಫಿ, ಶರೀಫ್, ತಸ್ನೀನ್ ಅರ್ಹ ಉಪಸ್ಥಿತರಿದ್ದರು.

ಮರ್ಣೆ : ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ವತಿಯಿಂದ ವಸತಿ ರಹಿತರಿಗೆ ಅಗತ್ಯ ವಸ್ತುಗಳ ವಿತರಣೆ

Posted On: 12-07-2021 09:52AM

ಉಡುಪಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ವತಿಯಿಂದ ಮಣಿಪುರ ಪಂಚಾಯತ್ ವ್ಯಾಪ್ತಿಯ ಮರ್ಣೆ ಪರಿಸರದ ಸುಮಾರು ಎಂಟು ವಸತಿ ರಹಿತರಿಗೆ ಅಡುಗೆ ಪಾತ್ರೆಗಳ ಕಿಟ್, ಟಾರ್ಪಲ್, ಬಕೇಟ್ ಮತ್ತು ಸೋಪ್ ವಿತರಣೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಡಾ ತಲ್ಲೂರು ಶಿವರಾಮ ಶೆಟ್ಟಿ ಯವರು ಫಲಾನುಭವಿಗಳಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಗೌರವ ಕಾರ್ಯದರ್ಶಿ ಕೆ ಜಯರಾಂ ಆಚಾರ್ಯ ಸಾಲಿಗ್ರಾಮ, ಡಿಡಿಆರ್ ಸಿ ಕಾರ್ಯದರ್ಶಿ ಕೆ ಸನ್ಮತ್ ಹೆಗ್ಡೆ, ಮಣಿಪುರ ಪಂಚಾಯತ್ ಸದಸ್ಯರುಗಳಾದ ಪ್ರಜ್ವಲ್ ಹೆಗ್ಡೆ, ವಾಣಿ ಹಾಗೂ ಡಿಡಿಆರ್ ಸಿ ಸಿಬ್ಬಂದಿ ಅನುಷಾ ಉಪಸ್ಥಿತರಿದ್ದರು.

ತಮ್ಮೆಲ್ಲರ ಸಹಾಯದ ನಿರೀಕ್ಷೆಯಲ್ಲಿ ಕಾಪುವಿನ ಮರ್ಣೆ ನಿವಾಸಿ ಸುಂದರ ಮೂಲ್ಯ.

Posted On: 11-07-2021 08:05PM

ಕಾಪು : ಕೃಷಿಯನ್ನೇ ನಂಬಿಕೊಂಡು ಹೈನುಗಾರಿಕೆಯಿಂದ ಬಂದ ಅಲ್ಪಸ್ವಲ್ಪ ಆದಾಯದಿಂದ ಬಡತನವಿದ್ದರೂ ತನ್ನ ಎರಡು ಹೆಣ್ಣು ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಿಸುತ್ತಾ ಜೀವನ ಸಾಗಿಸುತ್ತಿದ್ದ ಸುಂದರ ಮೂಲ್ಯ ಮರ್ಣೆ ಇವರಿಗೆ ಮಹಾಮಾರಿ ಕೋರೋನ ರೋಗ ಬಂದು ಜೀವಣ್ಮರಣ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿ ಇದೀಗ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುಮಾರು ಆರು ತಿಂಗಳವರೆಗೆ ಅವರಿಗೆ ಮನೆಯಲ್ಲಿಯೆ ಆಕ್ಸಿಜನ್ ವ್ಯವಸ್ಥೆ ಮಾಡುವಂತೆ ವೈದ್ಯರು ತಿಳಿಸಿದಾಗ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಜ್ವಲ್ ಹೆಗ್ಡೆಯವರು ಸ್ನೇಹಿತರೊಡಗೂಡಿ ಆಕ್ಸಿಜನ್ ವ್ಯವಸ್ಥೆ ಮಾಡಿರುತ್ತಾರೆ.

ಈ ಬಗ್ಗೆ ಪಟ್ಲ ಸ್ಪೋರ್ಟ್ ಕ್ಲಬ್ ನ ಅಧ್ಯಕ್ಷರಾದ ದಿನೇಶ್ ಮೂಲ್ಯ ಪಟ್ಲ ಅವರಲ್ಲಿ ವಿನಂತಿಸಿಕೊಂಡಾಗ ಸಹಾಯ ಹಸ್ತ ನೀಡಿರುತ್ತಾರೆ. ಈ ಬಡಕುಟುಂಬ ಮುಂದಿನ ವ್ಯವಸ್ಥೆ ಗಾಗಿ ತಮ್ಮೆಲ್ಲರ ಸಹಾಯದ ನಿರೀಕ್ಷೆಯಲ್ಲಿದೆ.

ಸಹಾಯ ಮಾಡಲಿಚ್ಚಿಸುವವರ ಗಮನಕ್ಕೆ: 1) Sulochana A/ c: 81860100004538 IFSC Code: BARBOVJATHR MICR code: 576012004 Baroda Bank At ಪ್ರಜ್ವಲ್ ಹೆಗ್ಡೆ ಮರ್ಣೆ:9743230619 ದಿನೇಶ್ ಮೂಲ್ಯ ಮರ್ಣೆ: 9964028397

ಒಂದು ವರ್ಷ ಪೂರೈಸಿ, ಪ್ರತಿಭೆಗಳ ಪರಿಚಯದೊಂದಿಗೆ ಬಡಕುಟುಂಬಗಳಿಗೆ ಸಹಾಯ ನೀಡುತ್ತಿರುವ ಬಿಲ್ಲವ ವಾರಿಯಸ್೯ ತಂಡ

Posted On: 06-07-2021 08:50PM

ಬಿಲ್ಲವ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸಿ ಮುಂದಕ್ಕೆ ಅವರಿಗೊಂದು ಉತ್ತಮವಾದ ಭವಿಷ್ಯವನ್ನು ರೂಪಿಸಿ ಕೊಡುವ ಸಲುವಾಗಿ 30 ಜೂನ್ 2020 ರಂದು 'ಬಿಲ್ಲವ ವಾರಿಯರ್ಸ್‌' ಎಂಬ ಅಡ್ಮಿನ್ ತಂಡವನ್ನು ಪ್ರವೀಣ್ ಪೂಜಾರಿ, ಪುಷ್ಪ ರಾಜ್ ಪೂಜಾರಿ ಹಾಗೂ ದಯಾನಂದ್ ಕುಕ್ಕಾಜೆ, ಸಾಯಿ ದೀಕ್ಷಿತ್ ಇವರ ಜಂಟಿ ಆಶ್ರಯದಲ್ಲಿ ಉದ್ಘಾಟಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ ಗ್ರೂಪ್ ,ಫೇಸ್ಬುಕ್, ಇನ್ಸ್ಟಾಗ್ರಾಮ್ , ಯೂಟ್ಯೂಬ್ ಹೀಗೆ ಅಂತರ್ಜಾಲದಲ್ಲಿ ಮುತ್ತಿನಂಥ ಪದಗಳನ್ನು ಪೋಣಿಸಿ ಬರವಣಿಗೆ ಎಂಬ ಹಾರವನ್ನು ತಯಾರಿಸಿ ಅದೆಷ್ಟೋ ಬಿಲ್ಲವ ಪ್ರತಿಭೆಗಳನ್ನು 'ಬಿಲ್ಲವ ವಾರಿಯರ್ಸ್‌' ತಂಡದ ಸದಸ್ಯರು ಪರಿಚಯಿಸಿರುವರು.

ಮನುಜನ ಮನದಲ್ಲಿ ಮನೆ ಮಾಡುವುದು ಮನೆಗಳನ್ನು ಕಟ್ಟಿದಷ್ಟು ಸುಲಭವಲ್ಲ. ಅಂತಹ ಸಂದರ್ಭದಲ್ಲಿ ಒಂದೇ ವರುಷದಲ್ಲಿ 15,000 ಕ್ಕಿಂತಲೂ ಜಾಸ್ತಿ ಹಿಂಬಾಲಕರನ್ನು ಪಡೆದಿದೆ ಎಂಬುವುದು ಈ ತಂಡದ ಗರಿಮೆ ಹೆಚ್ಚಿಸುವಂತಹ ವಿಚಾರ. ಇದೇ ಏಪ್ರಿಲ್ 22 ರಂದು ತಂಡದ ಅಡ್ಮಿನ್ರಲ್ಲೊಬ್ಬರಾದ ಪ್ರವೀಣ್ ಪೂಜಾರಿ ಇವರ ಹುಟ್ಟುಹಬ್ಬದ ಪರವಾಗಿ ನೊಂದ ಕುಟುಂಬಕ್ಕೊಂದು ವೈದ್ಯಕೀಯ ವೆಚ್ಚಕ್ಕೆ ಧನಸಹಾಯವನ್ನು ಈ ತಂಡವು ಮಾಡಿರುತ್ತದೆ.

ಒಂದನೇ ವರುಷವನ್ನು ಪೂರೈಸಿದ ಸಂಭ್ರಮದಲ್ಲಿರುವ ಬಿಲ್ಲವ ವಾರಿಯರ್ಸ್ ತಂಡವು ಬಡ ಕುಟುಂಬಗಳಿಗೆ , ತಂಡದ ಮೊದಲನೇ ವಾರ್ಷಿಕೋತ್ಸವದ ಸಲುವಾಗಿ ಆಹಾರ ಕಿಟ್ ಗಳನ್ನು ಸಹ ಸೌದಿ ಅರೇಬಿಯಾದ ಉದ್ಯಮಿ ಸತೀಶ್ ಕುಮಾರ್ ಬಜಾಲ್ ಇವರ ಪ್ರೋತ್ಸಾಹ ನೀಡಿದ್ದಾರೆ. ಜನರ ವಿರೋಧವಿದ್ದರೂ ಯಾವುದಕ್ಕೂ ಹಿಂದೆ ಸರಿಯದೆ ಧೈರ್ಯದಿಂದ ಹೆಜ್ಜೆ ಹಾಕಿ , ದೇಶ-ವಿದೇಶಗಳಲ್ಲಿ ಜನಮನ್ನಣೆ ಪಡೆದು ಇವತ್ತಿಗೆ ಒಂದು ವರುಷ ಪೂರ್ಣಗೊಂಡಿದೆ.

ನಾರಾಯಣಗುರುಗಳ ಆಶೀರ್ವಾದ, ಕೋಟಿಚೆನ್ನಯರ ಅನುಗ್ರಹದಿಂದ ಇನ್ನಷ್ಟು ನೊಂದ ಕುಟುಂಬಗಳಿಗೆ ಆಸರೆಯಾಗಿ, ಉದಯೋನ್ಮುಖ ಪ್ರತಿಭೆಗಳಿಗೆ‌ ಪ್ರೋತ್ಸಾಹ ನೀಡುತ್ತಿದೆ. 'ಬಿಲ್ಲವ ವಾರಿಯರ್ಸ್‌' ತಂಡದಿಂದ ಮತ್ತಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ.