Updated News From Kaup

ಶ್ರೀ ಶ್ರೀ ಮೋಹನ್ (ಪಾತ್ರಿ) ಮುದ್ರಾಡಿರವರಿಗೆ ಬೈದಶ್ರೀಯ ವತಿಯಿಂದ ಶ್ರದ್ಧಾಂಜಲಿ

Posted On: 22-07-2021 10:14PM

ಕಾಪು : ದೈವ ದತ್ತ ಚಿಂತನೆಗಳ ಫಲವೋ ಎಂಬಂತೆ ಮುದ್ರಾಡಿ ಊರಿನಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಸಹಿತ ದೇವಾಲಯಗಳ ಸಂಕೀರ್ಣ ನಿರ್ಮಿಸಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ ಮುದ್ರಾಡಿ ನಾಟ್ಕದೂರು ಶ್ರೀ ಶ್ರೀ ಮೋಹನ್ (ಪಾತ್ರಿ) ಸ್ವಾಮೀಜಿ ಯವರಿಗೆ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆದಿ ಉಡುಪಿ ವತಿಯಿಂದ ಶ್ರದ್ದಾಂಜಲಿ ಅರ್ಪಿಸಲಾಯಿತು.

ತುಳುನಾಡಿನಲ್ಲಿ ಧಾರ್ಮಿಕ ಕಾರ್ಯ ನಡೆಸಲು ಅನುಮತಿಗಾಗಿ ಸರಕಾರದ ಗಮನಕ್ಕೆ ತರುವಂತೆ ತುಳುನಾಡ ದೈವಾರಾಧಕರ ಒಕ್ಕೂಟದ ವತಿಯಿಂದ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಮನವಿ

Posted On: 22-07-2021 12:28PM

ಕಾಪು : ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ (ರಿ.) ಉಡುಪಿ ಜಿಲ್ಲೆ ವತಿಯಿಂದ ಇಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಇವರಿಗೆ ಅವರ ಕಚೇರಿಯಲ್ಲಿ ಒಕ್ಕೂಟದ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ವಿವಿಧ ಬೇಡಿಕೆಗಳ ಮನವಿಯನ್ನು ಕೊಡಲಾಯಿತು.

ಎರಡನೆ ಬಾರಿಯ ಕೊರೊನ ತುರ್ತು ಸಂದರ್ಭದಲ್ಲಿ ಸರ್ಕಾರದಿಂದ ದೈವ ಚಾಕ್ರಿ ವರ್ಗದವರಿಗೆ ಯಾವುದೇ ಪ್ಯಾಕೆಜ್ ಬರಲಿಲ್ಲ ಹಾಗೂ ಉಡುಪಿ ಮತ್ತು ಮಂಗಳೂರಿನಲ್ಲಿ ದೈವಸ್ಥಾನಗಳಲ್ಲಿ ನಡೆಯುವ ಮಾರಿಪೂಜೆ, ದರ್ಶನ ಸೇವೆ, ತಂಬಿಲ ಸೇವೆ ಹಾಗೂ ಮುಂತಾದ ಪೂಜಾ ಕಾರ್ಯಕ್ರಮಗಳಿಗೆ ಸರ್ಕಾರದ ಕಟ್ಟುನಿಟ್ಟಾದ 150 ಜನ ಸೀಮಿತಕ್ಕೆ ದೈವಾರಾಧನೆ ನಡೆಸಲು ಸರ್ಕಾರದಿಂದ ಅನುಮತಿ ಬರಲಿಲ್ಲ. ಇದರಿಂದ ದೈವ ಚಾಕ್ರಿಯವರು ತುಂಬ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಇದಕ್ಕೆ ಸೂಕ್ತವಾಗಿ ನಿಮ್ಮ ಮುಖಾಂತರ ನಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿ ಎಂದು ಮನವಿಯಲ್ಲಿ ಒಕ್ಕೂಟದ ಪರವಾಗಿ ವಿನಂತಿಸಿದರು.

ಮನವಿಯನ್ನು ಪಡೆದುಕೊಂಡ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಮನವಿಯ ಬಗ್ಗೆ ಈ ದಿನ ಮುಖ್ಯಮಂತ್ರಿ ಹಾಗೂ ಇದಕ್ಕೆ ಸಂಬಂಧಪಟ್ಟ ಸಚಿವರೊಂದಿಗೆ ಮಾತಾಡುತ್ತೇನೆ. ನಿಮ್ಮ ಯಾವುದೇ ಸಮಸ್ಯೆಗೆ ನಿಮ್ಮೊಂದಿಗೆ ಬೆಂಬಲವಾಗಿ ನಾನಿರುತ್ತೇನೆ ಎಂದು ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ರವಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ, ನವೀನ್ ಕುಂಜಿಬೆಟ್ಟು, ಸುದರ್ಶನ್ ಪೂಜಾರಿ ಪನೋಲಿಬೈಲ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಹಸಿರಿನಿಂದ ಉಸಿರು - ವನಮಹೋತ್ಸವ ಕಾರ್ಯಕ್ರಮ

Posted On: 22-07-2021 12:04PM

ಕಾಪು : ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ವಿವಿಧ ಘಟಕಗಳಾದ ಗ್ರೀನ್ ಟೀಚರ್ ಫೋರಂ, ಎನ್ ಸಿ ಸಿ, ಎನ್ ಎಸ್ ಎಸ್, ಯೂತ್ ರೆಡ್ ಕ್ರಾಸ್ ಮತ್ತು ರೋವರ್ಸ-ರೇಂಜರ್ಸ್ ಜಂಟಿಯಾಗಿ ಹಸಿರಿನಿಂದ ಉಸಿರು - ವನಮಹೋತ್ಸವ ಕಾರ್ಯಕ್ರಮವನ್ನು ಕಾಲೇಜಿನ ಕ್ಯಾಂಪಸ್ಸಲ್ಲಿ ಫಲನೀಡುವ ಗಿಡಗಳನ್ನು ನೆಡುವ ಮೂಲಕ ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಧರ್ಮಗುರುಗಳಾದ ಡೇನ್ನಿಸ್ ಅಲೆಕ್ಸಾಂಡರ್ ಡೇಸ ರವರು ಸಾಂಕೇತಿಕವಾಗಿ ಚಾಲನೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ದಯಮಾಡಿ ಎಲ್ಲರೂ ನಮ್ಮ ಕರ್ತವ್ಯ ಪಾಲನೆ ಮಾಡೋಣ. ಇಂತಹ ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಪದಾಧಿಕಾರಿಗಳು ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರನ್ನೂ ಶ್ಲಾಘಿಸಿ ಪ್ರಶಂಸಿದರು. ಈ ಸಂದರ್ಭದಲ್ಲಿ ಎಲ್ಲಾ ಅಧ್ಯಾಪಕ ಅಧ್ಯಾಪಕೇತರ ಸಿಬ್ಬಂದಿವರ್ಗದವರಿಗೆ ಪರಿಸರ ಕಾಳಜಿ ಮತ್ತು ಅದರ ಪ್ರಾಮುಖ್ಯತೆ ತಿಳಿಸುವ ಪ್ರತಿಜ್ಞಾ ಸ್ವೀಕಾರವನ್ನು ನೆರವೇರಿಸಿಕೊಟ್ಟರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಾಮಾಭಿವೃದ್ಧಿ ನಿರ್ದೇಶಕಿ ಮತ್ತು ಗ್ರೀನ್ ಟಿಚರ್ ಫೋರಂನ ಸಂಯೋಜಕಿ ಯಶೋದಾ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ತಿಳಿಸಿ ಸರ್ವರನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್, ಎನ್‍ಎಸ್ ಎಸ್ ಅಧಿಕಾರಿ ರಕ್ಷಾ, ರೇಂಜರ್ಸ್ ಲೀಡರ್ ಗಳಾದ ಸಂಗೀತ ಪೂಜಾರಿ, ರೆಡ್‍ಕ್ರಾಸ್ ಘಟಕದ ಮುರಳಿ, ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ಉಪಸ್ಥಿತರಿದ್ದರು. ಎನ್ ಎಸ್‍ಎಸ್‍ಎಸ್ ಅಧಿಕಾರಿ ಪ್ರೇಮನಾಥ ವಂದಿಸಿ, ರೋವರ್ಸ್ ಸ್ಕೌಟ್ ಲೀಡರ್ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

'ಆಟಿ' ಆಷಾಢ ಅತ್ತ್ ; 'ಆಷಾಢ' ಆಟಿ ಅತ್ತ್

Posted On: 21-07-2021 10:42AM

ನಮ ಪಗ್ಗು,ಬೇಶ ,ಕಾರ್ತೆಲ್ ,ಆಟಿ ,ಸೋಣ ... ಇಂಚ ಪದ್ರಾಡ್ ತಿಂಗೊಲುದ ಲೆಕ್ಕಲಾ ಮಲ್ಪುವ . ಅಂಚೆನೆ ಚೈತ್ರ , ವೈಶಾಖ , ಜ್ಯೇಷ್ಠ , ಆಷಾಢ, ಶ್ರಾವಣ .....ಪನ್ಪಿನ ತಿಂಗೊಲ್ದ ಬೆರಿಯೆಲಾ ಪೋಪ . ಜನವರಿ ,ಫೆಬ್ರವರಿ......ಪನ್ಪಿನ‌ ಕೆಲೆಂಡರ್ ನಿಚ್ಚೊಗು ಗಳಸುವ .ಪಂಚಾಂಗ ನಂಕ್ ತೂವಂದೆ ಕರಿಯುಜಿ . ಈ ಮೂಜಿ - ನಾಲ್ ನಮೂನೆಡ್ ಕಾಲದ ಲೆಕ್ಕಾಚಾರ ಮಲ್ಪುನೆಟ್ಟ್ ಇಂದ್ ಪೂರಾ ಬೆರಕೆ ಆದ್ ನಮ್ಮ ತುಳುವೆರ್ನ ತಿಂಗೊಲು ಒವು , ಆಟಿ ಏಪ ಸುರುವಾದ್ ಏಪ ಮುಗ್ಯುಂಡು , ಆಷಾಢ ತಿಂಗೊಲು ಎಂಚ ಒದಗುಂಡು , ನೆಕ್ಕ್ ಲಾ ಕೆಲೆಂಡರ್ಗ್ಲಾ ದೇಗ್ ಒಂದಿಗೆ ಆಪುಜಿ . ಉಂದೆನ್ ಸರಿಯಾದ್ ತೆರಿಂಡ "ಆಟಿ ಆಷಾಢ ಅತ್ತ್ ,ಆಷಾಢ ಆಟಿ ಅತ್ತ್".

ಸೂರ್ಯ ದೇವೆರ್ ಏಪ ವಾ ರಾಶಿಗ್(ಒರ್ಸೊಗು ಪದ್ ರಾಡ್ ರಾಶಿ - ತಿಂಗೊಲು) ಪೊಗ್ಗುವೆರಾ ಅದಗ ನಂಕ್ ಪೊಸ ತಿಂಗೊಲು ಬರ್ಪುಂಡು. ಏಪ ಸಂಕ್ರಾಂದಿ , ಏಪ ತಿಂಗೊಡೆ , ಇನಿ ಏತ್ ಪೋಂಡ್ ಇಂಚ ಲೆಕ್ಕ ಪಾಡೊಂದು ಸೂರ್ಯ ದೇವೆರ್ನ ಬೆರಿಯೆ ಇಪ್ಪುನ ನಮ 'ಸೌರಮಾನಿಲು' . ಚಂದ್ರೆ ಮಲ್ಲೆ ಆವೊಂದು ಪುಣ್ಣಮೆ ಬರ್ಪುಂಡು , ಚಂದ್ರೆ ಎಲ್ಯಾವೊಂದು ಅಮಾಸೆಗಾನಗ ಒಂಜಿ ತಿಂಗೊಲಾಪುನು ,ಅಂಚೆನೆ ಅಮಾಸೆದ ಮನದಾನಿಡ್ದ್ ತಿಂಗೊಲು ಸುರುವಾದ್ ಪದಿನೈನ್ ತಿಥಿತ ಲೆಕ್ಕಪಾಡುನ , ಪುಣ್ಣಮೆ ಮುಟ್ಟ ಪದಿನೈನ್ ಕುಡ ಒರ ಅಮಾಸೆ ಮುಟ್ಟ ಪದಿನೈನ್ ದಿನ ಇಂಚ ಒಂಜಿ ತಿಂಗೊಲು ಚಂದ್ರನ್ ತೂದ್ ತಿಥಿತ ಅನುಕರಣೆಡ್ ಇಪ್ಪುನಾಕುಲು 'ಚಾಂದಮಾನಿಲು' . ಸುಗ್ಗಿ ತಿಂಗೊಲ್ ಕರಿದ್ ಪಗ್ಗು ಬರ್ಪಿ ಸಂಕ್ರಾಂದಿದ ಮನದಾನಿಡ್ದ್ ನಂಕ್ ಪೊಸ ವರ್ಸ ಸುರು . ಪಗ್ಗುದ ತಿಂಗೊಡೆದಾನಿ 'ಇಗಾದಿ - ಬಿಸು' . ಪಗ್ಗು ತಿಂಗೊಲುಗು 'ಮೇಷ' ತಿಂಗೊಲು ಪನ್ಪೆರ್ .ಅವ್ವೆ ಬಿಸು ಪಂಡ್ ದ್ ಆಚರಣೆ . 'ಪಾಲ್ಗುಣ' ತಿಂಗೊಲ್ದ ಅಮಾಸೆದ ಮನದಾನಿಡ್ದ್ 'ಚೈತ್ರ' ತಿಂಗೊಲು ಸುರು , ಆನಿ ಚಾಂದ್ರಯುಗಾದಿ. ಆನಿಡ್ದ್ ಬೊಕ್ಕ ಚಾಂದ್ರಮಾನ ಕ್ರಮತ ವರ್ಸ ಸುರು. ಸೌರ ಕ್ರಮತ ತಿಂಗೊಲು : ಪಗ್ಗು (ಮೇಷ) , ಬೇಶ (ವೃಷಭ) , ಕಾರ್ತೆಲ್ (ಮಿಥುನ) , ಆಟಿ (ಕರ್ಕಾಟಕ ) , ಸೋಣ(ಸಿಂಹ) , ಕನ್ಯಾ (ನಿರ್ನಾಲ್) , ಬೊಂತೆಲ್( ತುಲಾ) , ಜಾರ್ದೆ( ವೃಶ್ಚಿಕ) , ಪೆರಾರ್ದೆ(ಧನು) ,ಪೊನ್ನಿ-ಪುಯಿಂತೆಲ್(ಮಕರ) , ಮಾಗಿ - ಮಾಯಿ( ಕುಂಭ) ,ಸುಗ್ಗಿ( ಮೀನ) . ಚಾಂದ್ರ ಪದ್ಧತಿದ ತಿಂಗೊಲು : ಚೈತ್ರ , ವೈಶಾಖ , ಜ್ಯೇಷ್ಠ , ಆಷಾಡ , ಶ್ರಾವಣ , ಭಾದ್ರಪದ , ಆಶ್ವಯುಜ , ಕಾರ್ತಿಕ , ಮಾರ್ಗಶಿರ , ಪೌಷ , ಮಾಘ , ಪಾಲ್ಗುನ.

ಸೌರ ಪದ್ಧತಿದ ನಾಲನೆ ತಿಂಗೊಲು 'ಆಟಿ' ಅಥವಾ ಕರ್ಕಾಟಕ . ಚಾಂದ್ರ ಕ್ರಮತ ನಾಲನೇ ತಿಂಗೊಲು "ಆಷಾಢ" . ಸೌರ ಬೊಕ್ಕ ಚಾಂದ್ರ ರಡ್ಡ್ ನಮುನೆದ ಕಾಲದ ಲೆಕ್ಕಾಚಾರದ ತಿಂಗೊಲು ಒಟ್ಟಿಗೆ ಸುರು ಆಪುಜಿ . ಕೆಲವು ಸರ್ತಿ ಇರುವ ದಿನೊಡ್ದ್ ಲಾ ಹೆಚ್ಚಿಗೆ ಎತ್ಯಾಸೊಡು ಬರ್ಪುಂಡು ಕೆಲವು ಸರ್ತಿ ಐನಾಜಿ ದಿನ ಎತ್ಯಾಸೊಡು ಒದಗುಂಡು . ಚೈತ್ರ , ವೈಶಾಖ ಪಂಡೊಂದು ತೊಡಗುನ ಚಾಂದ್ರ ವರ್ಸ ಸುರುಕು ಸುರು ಆಪುಂಡು . ಬೊಕ್ಕ ಸೌರ ಸುರು ಆಪುಂಡು . ಉದಾರ್ನೆಗ್ : ಈ ವರ್ಸ ಆಷಾಢ ಜುಲೈ ತಿಂಗೊಲ್ದ ಪತ್ತೊಂಜಿನೆ ತಾರೀಕ್ದಾನಿ ಸುರು ಆತ್ಂಡ್, ಆಗಸ್ಟ್‌ ದ ಎಡ್ಮನೇ ತಾರೀಕ್ ದಾನಿ‌ ಮುಗ್ಯುಂಡು . ಮನದಾನಿಡ್ದ್ ಶ್ರಾವಣ ತಿಂಗೊಲು ಸುರು . ಜುಲೈ ಪದಿನೇಲ್ನೆ ದಿನತಾನಿ 'ಆಟಿ' ಸುರು ಆತಂಡ್ ,ಆಗಸ್ಟ್ ಪದಿನಾಜಿನೇ ತಾರೀಕ್ ದಾನಿಮುಟ್ಟ 'ಆಟಿ'. ಆನಿ ಸೋಣ ಸಂಕ್ರಂದಿ. ಮನದಾನಿಡ್ದ್ ಸೋಣ . [ಕರಿನ ವರ್ಸ ಜೂನ್ ಇರುವತ್ತರಡ್ಡನೇ ತಾರೀಕ್ ದಾನಿ ಆಷಾಢ ಸುರುವಾದ್ ಜುಲೈ ಇರುವತ್ತೊಂಜಿನೇ ತಾರೀಕ್ ದಾನಿ ಮುಗಿದ್ಂಡ್ . ‌'ಆ‌ಟಿ' ತಿಂಗೊಲು ಜುಲೈ ಪದಿನೇಳ್ನೆ ತಾರೀಕ್ ಗ್ ಸುರುವಾದ್ ಆಗಸ್ಟ್ ಪದಿನೇಳ್ನೆ ತಾರೀಕ್ ದಾನಿ ಮುಗಿದ್ಂಡ್ . ಸುಮಾರಾದ್ ಇರುವತ್ತೇಲ್ ದಿನ ಎತ್ಯಾಸೊಡು ಆಷಾಢೊಡ್ದು ಬೊಕ್ಕ ಆಟಿ ಒದಗ್ ದ್ಂಡ್.] ಮಿತ್ತ್ ದ ವಿವರಣೆ ಕೊರ್ಯರೆ ಯಾನ್ಲಾ ಕೆಲೆಂಡರ್ ದ ದಿನನೆ ಪನೊಡಾಂಡ್ , ಕಾರಣ ಕೆಲಂಡರ್ ನಂಕ್ ದಿನಚರಿಕ್ ಬೋಡು ,ಇಜ್ಜಡ ಪೊಲಬಾಪುಜಿ. ಆಟಿಡ್ ಎಡ್ಡೆ ಕೆಲಸ ನಮ ಮಲ್ಪುಜ . ಉಂದು ಪೂರ್ವದ ಕಟ್ಟ್. ಆಂಡ ಇತ್ತೆ ಆಷಾಢ ಮುಗಿಂಡ್ ನನ ಎಡ್ಡೆ ಕೆಲಸ ಮಲ್ಪೊಲಿ ಪನ್ಪಿನ ಅಭಿಪ್ರಾಯೊಲು ಕೇಂದ್ ಬರ್ಪುಂಡು ,ಅವ್ವೆನೆ ಅನುಸರಿಪುನಾಕುಲು ಉಲ್ಲೆರ್ . ಪಗ್ಗು ,ಬೇಶ , ಕಾರ್ತೆಲ್,ಆಟಿ ...ಇಂಚ ತಿಂಗೊಲು ಗೆನ್ಪುನ ಸೌರಮಾನಿಲೆಗ್ ಆಟಿ ಮುಗ್ಯೊಡು ಸೋಣ ಬರೊಡು (ಉಂದು ನಂಬಿಕೆದ ಇಸಯ) . ಈತ್ ಪೂರ ಸೌರ ಪದ್ಧತಿನ್ ಅನುಸರಿಪುವಡಲಾ ಆಟಿದ ಅಮಾಸೆ , ಪುಣ್ಣಮೆ , ಅಷ್ಟಮಿ , ಚೌತಿ , ಪರ್ಬದಾನಿದ ಅಮಾಸೆ ಇಂಚ ಕೆಲವು ಚಾಂದ್ರದ ದಿನೊಕುಲೆನ್ಲಾ ನಮ ಅನಾದಿಡ್ದ್ ಆಚರಿಪುವ .

ಆಂಡ "ಆಟಿ ಆಷಾಢ ಅತ್ತ್ ,ಆಷಾಢ ಆಟಿ‌ ಅತ್ತ್ " ಮೂಜಿ - ನಾಲ್ ವರ್ಸ ಪಿರಾವುಡೊರ ಆಷಾಢ ಕರಿದ್ ಒಂಜಿವಾರ ಆತ್ಂಡ್ , ಆಂಡ ಆಟಿ ಇತ್ತಂಡ್. ಒಂಜಿ ಊರುಡು "ಆಷಾಡದಲ್ಲೊಂದು ದಿನ‌" ಪನ್ಪಿ ಪುದಾರ್ ಡ್ ಒಂಜಿ ಮಲ್ಲ ಲೇಸ್ ನಡಪುಂಡು .ಅವು ಆಟಿದ ಲೇಸ್ ; ಆಟಿಡೊಂಜಿ ದಿನ , ಕೆಸರ್ ಡ್ ಒಂಜಿ ದಿನ ಇಂಚ ಆಟಿದ ನೆನೆಪುದ ಲೇಸ್ .ಇಂದೆ ಲೇಸ್ ನಿ "ಆಟಿಡೊಂಜಿ ದಿನ"ಪಂಡ್ ದ್ ಮಲ್ದೊಲಿಯತ್ತಾ‌? ನೆತ್ತ ಕಾರಣ ನಂಕ್ ಆಟಿಯೇ ಆಷಾಢ ಪನ್ಪಿನ ಗೇನ ದಿಂಜ್ ದ್ ಆತ್ಂಡ್. ಲೇಖನ : ಕೆ.ಎಲ್.ಕುಂಡಂತಾಯ

ಉಡುಪಿ : ಅಖಿಲ ಭಾರತ ತುಳುನಾಡ ಧೈವಾರಾಧಕರ ಒಕ್ಕೂಟದಿಂದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರಿಗೆ ಮನವಿ

Posted On: 20-07-2021 10:47AM

ಉಡುಪಿ : ಅಖಿಲ ಭಾರತ ತುಳುನಾಡ ಧೈವಾರಾಧಕರ ಒಕ್ಕೂಟ (ರಿ.) ಉಡುಪಿ ಜಿಲ್ಲೆ ವತಿಯಿಂದ ಮಾಜಿ ಉಸ್ತುವಾರಿ ಸಚಿವರು ಹಾಗೂ ಮಾಜಿ ಶಾಸಕರಾದಂತಹ ಪ್ರಮೋದ್ ಮಧ್ವರಾಜ್ ಅವರಿಗೆ ಅವರ ನಿವಾಸದಲ್ಲಿ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ವಿವಿಧ ಬೇಡಿಕೆಗಳ ಮನವಿಯನ್ನು ಕೊಡಲಾಯಿತು.

ಎರಡನೇ ಬಾರಿಯ ಕೊರೊನ ತುರ್ತು ಸಂದರ್ಭದಲ್ಲಿ ಹಾಗೂ ಉಡುಪಿ ಮತ್ತು ಮಂಗಳೂರಿನಲ್ಲಿ ದೈವಸ್ಥಾನಗಳಲ್ಲಿ ನಡೆಯುವ ಮಾರಿಪೂಜೆ ದರ್ಶನ ಸೇವೆ ತಂಬಿಲ ಸೇವೆ ಹಾಗೂ ಮುಂತಾದ ಪೂಜಾ ಕಾರ್ಯಕ್ರಮಗಳಿಗೆ ಸರ್ಕಾರದ ಕಟ್ಟುನಿಟ್ಟಾದ 150 ಜನ ಸೀಮಿತಕ್ಕೆ ದೈವಾರಾಧನೆ ನಡೆಸಲು ಸರ್ಕಾರದಿಂದ ಅನುಮತಿ ಬರಲಿಲ್ಲ. ಇದರಿಂದ ದೈವ ಚಾಕ್ರಿ ಯವರು ತುಂಬ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಇದಕ್ಕೆ ಸೂಕ್ತವಾಗಿ ನಿಮ್ಮ ಮುಖಾಂತರ ವಿರೋಧ ಪಕ್ಷದ ವತಿಯಿಂದ ನಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿ ಎಂದು ಮನವಿಯಲ್ಲಿ ಒಕ್ಕೂಟದ ಪರವಾಗಿ ವಿನಂತಿ ಮಾಡಿದರು.

ಮನವಿಯನ್ನು ಪಡೆದುಕೊಂಡ ಮಾಜಿ ಶಾಸಕರಾದ ಪ್ರಮೋದ್ ಮಧ್ವರಾಜ್ ಮಾತನಾಡಿ ನಿಮ್ಮೆಲ್ಲಾ ಸಮಸ್ಯೆಯನ್ನು ಈ ದಿನ ಮುಖ್ಯಮಂತ್ರಿ ಹಾಗೂ ಇದಕ್ಕೆ ಸಂಬಂಧಪಟ್ಟ ಸಚಿವರೊಂದಿಗೆ ಮಾತಾಡುತ್ತೇನೆ. ನಿಮ್ಮ ಯಾವುದೇ ಸಮಸ್ಯೆಗೆ ನಿಮ್ಮೊಂದಿಗೆ ಬೆಂಬಲವಾಗಿ ನಾನಿರುತ್ತೇನೆ ಎಂದು ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ರವಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ, ಕೋಶಾಧಿಕಾರಿ ಹಾಗೂ ಬ್ರಹ್ಮವಾರ ಘಟಕದ ಅಧ್ಯಕ್ಷರಾದ ಶ್ರೀಧರ್ ಪೂಜಾರಿ, ಜೊತೆ ಕಾರ್ಯದರ್ಶಿ ದಯೆಶಾ ಕೋಟ್ಯಾನ್, ನವೀನ್ ಕುಂಜಿಬೆಟ್ಟು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಎಲ್ಲೂರು : ಕಾರು ಚರಂಡಿಗೆ ಬಿದ್ದು ಗ್ಯಾರೇಜ್ ಮಾಲಕ‌ ಸ್ಥಳದಲ್ಲೇ ಸಾವು

Posted On: 19-07-2021 11:38AM

ಕಾಪು : ಉಚ್ಚಿಲ - ಮುದರಂಗಡಿ ರಸ್ತೆಯ ಎಲ್ಲೂರು ಬಳಿಯ ಪಣಿಯೂರು ಪೆಜತ್ತಕಟ್ಟೆ ಬಳಿ ಕಾರು ಚರಂಡಿಗೆ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ನಡೆದಿದೆ. ಕಾಪು‌ ಕೊಪ್ಪಲಂಗಡಿ ನಿವಾಸಿ ರವೀಂದ್ರ ಪೂಜಾರಿ (38) ಮೃತ ವ್ಯಕ್ತಿ.

ಉದ್ಯಾವರ ಬಲಾಯಿಪಾದೆಯಲ್ಲಿ ಗ್ಯಾರೇಜ್ ನಡೆಸುತ್ತಿರುವ ಅವರು ರವಿವಾರ ರಾತ್ರಿ ಎಲ್ಲೂರಿಗೆ ತೆರಳಿದ್ದು, ಅಲ್ಲಿಂದ ವಾಪಸಾಗುತ್ತಿರುವ ವೇಳೆ ಅಪಘಾತ ಸಂಭವಿಸರಬೇಕೆಂದು ಸಂಶಯಿಸಲಾಗಿದೆ. ಕಾರು ರಸ್ತೆ ಬದಿಯ ಚರಂಡಿ ಮತ್ತು ಮಣ್ಣಿನ‌ ದಿಬ್ಬಕ್ಕೆ ಢಿಕ್ಕಿ ಹೊಡೆದಿದ್ದು, ರವೀಂದ್ರ ಅವರು ಕಾರಿನಿಂದ ಹೊರಕ್ಕೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು.‌ ಈ ವೇಳೆ ಅಲ್ಲೇ ರಸ್ತಸ್ರಾವ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿರುವ ಸಾಧ್ಯತೆಗಳಿವೆ.

ಸೋಮವಾರ ಮುಂಜಾನೆ ಪೇಪರ್ ವಿತರಕರು ಇದನ್ನು ಗಮನಿಸಿ, ಸ್ಥಳೀಯರಿಗೆ ತಿಳಿಸಿದ್ದು, ಬಳಿಕ ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅಪಘಾತದ ಸಂದರ್ಭ ಭಾರೀ ಮಳೆ ಸುರಿಯುತ್ತಿದ್ದು, ಅಪಘಾತಕ್ಕೆ ಮಳೆಯೂ ಕಾರಣವಾಗಿರಬಹುದೆಂಬ ಸಂಶಯ ವ್ಯಕ್ತವಾಗಿದೆ. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿದ್ದು, ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದಾರೆ.

ಅಲೆವೂರು : ಸಾಧು ಪಾಣಾರರಿಗೆ ಸನ್ಮಾನ

Posted On: 18-07-2021 03:11PM

ಉಡುಪಿ : ಬಬ್ಬರ್ಯ ಯುವ ಸೇವಾ ಸಮಿತಿ ಉಡುಪಿ ಬಬ್ಬರ್ಯ ಕಟ್ಟೆ ಉಡುಪಿ ವತಿಯಿಂದ ಉಡುಪಿ ಜಿಲ್ಲೆಯ ಅಲೆವೂರು ಗ್ರಾಮದ ದೈವ ಚಾಕ್ರಿ ಯಲ್ಲಿ ಬಹಳ ಹೆಸರುವಾಸಿಯಾದ ಸಾಧು ಪಾಣಾರ ಅವರ ಮನೆಗೆ ಭೇಟಿ ಕೊಟ್ಟು ಅವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಆಹಾರ ಪ್ಯಾಕೇಜನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ವಿನೋದ್ ಶೆಟ್ಟಿ ಹಾಗೂ ಗಣಪತಿ ಕಾಮತ್, ಅಧ್ಯಕ್ಷರಾದ ವರದರಾಜ ಕಾಮತ್ ಹಾಗೂ ವಿಜ್ಞೇಶ್ ಆಚಾರ್ಯ ಹಾಗೂ ಸರ್ವ ಸದಸ್ಯರು ಉಪಸ್ಥಿತಿಯಿದ್ದರು.

ಮನೆ ಮನೆಗೆ ಗಂಗೆ ಯೋಜನೆಯ ಜೀವನಾಡಿ ನೀರು ಮತ್ತು ನೈರ್ಮಲ್ಯ ಸಮಿತಿ: ಭವಾನಿಶಂಕರ್

Posted On: 18-07-2021 02:50PM

ಸುಳ್ಯ : ಪ್ರತೀ ಮನೆಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರು ಪೂರೈಕೆ ಮಾಡಲು ಹಾಗೂ ಅದರ ಯಶಸ್ವಿ ಅನುಷ್ಠಾನದಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿ ಜೀವನಾಡಿಯಂತೆ ಎಂದು ಸುಳ್ಯ ತಾಲ್ಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಹೇಳಿದರು. ಸುಳ್ಯ ತಾಲ್ಲೂಕು ಪಂಚಾಯತಿಯಲ್ಲಿ ಸುಳ್ಯ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ನಡೆದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಲಜೀವನ್ ಮಿಷನ್ ಯೋಜನೆಯಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿ ಪಾತ್ರದ ಬಗ್ಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುಂದರ್ ವಿವರಿಸಿದರು. ಜಲಜೀವನ್ ಮಿಷನ್ ದ್ಯೇಯೋದ್ದೇಶಗಳ ಕುರಿತು ಜೆಜೆಎಮ್ ಜಿಲ್ಲಾ ಮುಖ್ಯಸ್ಥ ಶಿವರಾಮ್ ಪಿ.ಬಿ ಅವರು ಮಾತನಾಡಿದರು.

ಎಫ್.ಟಿ.ಕೆ ಕಿಟ್ ಪರೀಕ್ಷಾ ವಿಧಾನದ ಬಗ್ಗೆ ಪ್ರಯೋಗಾಲಯದ ಸಿಬ್ಬಂದಿ ಶ್ರೀ ಕೃಷ್ಣ ಅವರು ಪ್ರಾತ್ಯಕ್ಷಿಕೆ ನೀಡಿದರು. ಸ್ವಚ್ಛ ಭಾರತ್ ಇದರ ಜಿಲ್ಲಾ ಐಇಸಿ ಸಂಯೋಜಕರಾದ ಡೊಂಬಯ್ಯ ಅವರು, ರಾಜ್ಯದ ಎಲ್ಲಾ ಗ್ರಾಮಗಳ ಸಂಪೂರ್ಣ ಸ್ವಚ್ಛತೆಗೆ ಪೂರಕವಾದ ಚಟುವಟಿಕೆಗಳನ್ನು ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಅಡಿಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅನುಷ್ಠಾನ ಪ್ರಗತಿ ಪರಿಶೀಲನೆ ಚರ್ಚೆ ನಡೆಯಿತು.ಅನುಷ್ಠಾನ ಬೆಂಬಲ ಸಂಸ್ಥೆಯ ಸಿಬ್ಬಂದಿಗಳಾದ ಮಹಾಂತೇಶ್ ಹಿರೇಮಠ್,ದಯಾನಂದ.ಜಿ ಸಹಕರಿಸಿದರು. ದ.ಕ ಜಿಲ್ಲಾ ಪಂಚಾಯತ್ ಗ್ರಾ.ಕು.ನೀ,ನೈ ಇಲಾಖೆ, ತಾ.ಪಂ, ಸಮುದಾಯ ಸಂಸ್ಥೆಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ತರಬೇತಿಯಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು ಭಾಗವಹಿಸಿದ್ದರು.ತಾ.ಪಂ ಸಿಬ್ಬಂದಿಗಳು ಸಹಕರಿಸಿದರು.

ಶಿರ್ವ : ಪಂಚಾಯತ್ ಗ್ರಾಮಸಭೆಗೆ ಇದೇ ಮೊದಲ ಬಾರಿಗೆ ಗ್ರಾಮಸ್ಥರಿಗೆ ಆನ್ ಲೈನ್ ಮೂಲಕ ಭಾಗವಹಿಸುವ ಅವಕಾಶ

Posted On: 18-07-2021 12:31PM

ಕಾಪು : ಪಂಚಾಯತ್ ರಾಜ್ ವ್ಯವಸ್ಥೆಯಡಿ ರಾಜ್ಯದಲ್ಲೆ ಪ್ರಥಮ ಎಂಬಂತೆ ಗ್ರಾಮ ಸಭೆಯ ನೇರ ಪ್ರಸಾರ - ದೇಶ ವಿದೇಶದಲ್ಲಿರುವ ಗ್ರಾಮಸ್ಥರಿಗೆ ಗ್ರಾಮ ಸಭೆಯನ್ನು ವೀಕ್ಷಿಸುವ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮ ಪಂಚಾಯತ್ ನ 2021-22 ಸಾಲಿನ ಪ್ರಥಮ ಗ್ರಾಮ ಸಭೆಯು ದಿನಾಂಕ 19.07.2021 ರ ಸೋಮವಾರದಂದು ಬೆಳಿಗ್ಗೆ 10.30 ಕ್ಕೆ ಶಿರ್ವ ಸಾರ್ವಜನಿಕ ಗಣೇಶೋತ್ಸವ ವೇದಿಕೆಯ ಸಮೀಪದ ಮಹಿಳಾ ಸೌಧದಲ್ಲಿ ನಡೆಯಲಿದೆ.

ಈ ಗ್ರಾಮ ಸಭೆಯಲ್ಲಿ ಭಾಗವಹಿಸಲು ಎಲ್ಲ ಗ್ರಾಮಸ್ಥರಿಗೆ ಆಮಂತ್ರಣವಿದ್ದು, ಈ ಸಂಪೂರ್ಣ ಸಭೆಯನ್ನು ತಮ್ಮ ಮನೆಗಳಿಂದಲೂ ವೀಕ್ಷಿಸುವ ಅವಕಾಶವನ್ನು ಶಿರ್ವ ಪಂಚಾಯತ್ ವತಿಯಿಂದ ಏರ್ಪಡಿಸಲಾಗಿದೆ. ಉಡುಪಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಒಂದು ಪಂಚಾಯತ್ ಗ್ರಾಮ ಸಭೆಯನ್ನು ಆನ್ ಲೈನ್ ಮೂಲಕ ನೇರ ಪ್ರಸಾರ ಮಾಡಲು ಶಿರ್ವ ಪಂಚಾಯತ್ ಮುಂದಾಗಿದೆ.

ಈ ವಿಷಯದ ಮೇಲೆ ಮಾತನಾಡಿದ ಶಿರ್ವ ಪಂಚಾಯತ್ ಅಧ್ಯಕ್ಷರಾದ ಕೆ ಆರ್ ಪಾಟ್ಕರ್ ನಮ್ಮ ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಎಲ್ಲ ಗ್ರಾಮಸ್ಥರ ಸಲಹೆ ಸೂಚನೆಗಳು ಮಹತ್ವದ್ದು. ನಾವು ಮಾಡಿದ ವಿವಿಧ ಯೋಜನೆಗಳ ಮಾಹಿತಿ ನಮ್ಮ ಗ್ರಾಮಸ್ಥರಿಗೆ ನೀಡುವುದು ನಮ್ಮ ಕರ್ತವ್ಯ. ಕೊರೊನಾ ಮಹಾಮಾರಿಯ ಭಯ ಹಾಗೂ ನಿರಂತರ ಸುರಿಯುತ್ತಿರುವ ಮಳೆಯ ಕಾರಣಕ್ಕೆ ಬಹಳಷ್ಟು ಜನರು ಈ ಗ್ರಾಮ ಸಭೆಯಲ್ಲಿ ಸಭೆಯಲ್ಲಿ ಭಾಗವಹಿಸಲು ಹಿಂಜರಿಯುವುದು ಸಹಜ. ಆದ್ದರಿಂದ ಅವರಿಗೆ ತಮ್ಮ ಮನೆಯಲ್ಲೇ ಕೂತು ಗ್ರಾಮ ಸಭೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿ ಕೊಡುವುದೇ ಈ ನೇರಪ್ರಸಾರದ ಉದ್ದೇಶ. ಈ ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದು ತಮ್ಮ ಇಲಾಖಾ ಮಾಹಿತಿಯನ್ನು ನೀಡಲಿದ್ದಾರೆ. ಇದು ನಮ್ಮ ಗ್ರಾಮಸ್ಥರಿಗೆ ತಿಳಿಯುವುದು ಬಹುಮುಖ್ಯ ಎಂದರು. ಗ್ರಾಮಸಭೆಗೆ ವೈಯಕ್ತಿಕವಾಗಿ ಹಾಜರಾಗಲು ಇಚ್ಛಿಸುವ ಗ್ರಾಮಸ್ಥರಿಗೂ ಕೂಡ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ವೈಯಕ್ತಿಕವಾಗಿ ಭಾಗವಹಿಸುವ ಎಲ್ಲ ಗ್ರಾಮಸ್ಥರಿಗೆ ಉಚಿತ ಮಾಸ್ಕ್ ವಿತರಣೆ ನಡೆಯಲಿದ್ದು , ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ಮೂಲಕ ವಿನಂತಿ ಮಾಡಲಾಗಿದೆ ಎಂದು ಅಭಿವೃದ್ದಿ ಅಧಿಕಾರಿ ಅನಂತ ಪದ್ಮನಾಭ ನಾಯಕ್ ತಿಳಿಸಿದರು.

ಶಿರ್ವ ಪಂಚಾಯತಿಯ ಗ್ರಾಮ ಸಭೆಯನ್ನು ಈ ಕೆಳಗಿನ ಲಿಂಕ್ ಮೂಲಕ ವೀಕ್ಷಿಸಬಹುದು. https://tinyurl.com/ShirvaGramaSabhe ಈ ಗ್ರಾಮಸಭೆಯಲ್ಲಿ ಗ್ರಾಮಸ್ಥರು ವೈಯಕ್ತಿಕವಾಗಿ ಅಥವಾ ಆನ್ ಲೈನ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಗ್ರಾಮದ ಅಭಿವೃದ್ಧಿಯ ನಿಟ್ಟಿನಿಂದ ತಮ್ಮ ಸಲಹೆ , ಸೂಚನೆಗಳ್ಳನ್ನು ನೀಡಬೇಕೆಂದು ಶಿರ್ವ ಪಂಚಾಯತಿ ಅಧ್ಯಕ್ಷರು , ಅಭಿವೃದ್ಧಿ ಅಧಿಕಾರಿ, ಸದಸ್ಯರು ಮತ್ತು ಸಿಬ್ಬಂಧಿ ವರ್ಗದವರು ಗ್ರಾಮಸ್ಥರಲ್ಲಿ ವಿನಂತಿಸಿದ್ದಾರೆ.

ಕೃಷಿ ಸಂಸ್ಕೃತಿ - ಪುನರುಜ್ಜೀವನ ಉಪಕ್ರಮ

Posted On: 17-07-2021 01:47PM

"ಬನ್ನಿ....ಸಮೃದ್ಧಿ , ಸೌಮಾಂಗಲ್ಯಕಾರಕ ಕೃಷಿಯಲ್ಲಿ ತೊಡಗೋಣ" ಎನ್ನುತ್ತಾ ಹಡೀಲು ಭೂಮಿ ಬೇಸಾಯದ ಅಭಿಯಾನ ಹಲವು ವರ್ಷಗಳಿಂದ ಅಲ್ಲಿ- ಇಲ್ಲಿ ಎಂಬಂತೆ ನಡೆಯುತ್ತಿತ್ತು. ಆದರೆ ಈ ವರ್ಷವಂತೂ ಉಭಯ ಜಿಲ್ಲೆಗಳ ಎಲ್ಲೆಡೆ ಪರಿಣಾಮಕಾರಿಯಾಗಿ ಬಹಳ ಉತ್ಸಾಹದಿಂದ ನೆರವೇರುತ್ತಿದೆ . ಬಹುತೇಕ ಹಡೀಲು ಗದ್ದೆಗಳು ಹಸಿರಿನಿಂದ ತುಂಬುತ್ತಿವೆ ; ಕಳೆಗಿಡಗಳಿಂದಲ್ಲ ನೇಜಿ (ಭತ್ತದ ಸಸಿ) ನಾಟಿಯಿಂದ. ಮಳೆಗಾಲ ಆರಂಭವಾಗುತ್ತಿರುವಂತೆ ಎಲ್ಲೆಡೆ ಹಸಿರು ಚಿಗುರುತ್ತವೆ , ಕೃಷಿ ಭೂಮಿಯಲ್ಲೂ ಒಂದಷ್ಟು ಹುಲ್ಲು ಬೆಳೆಯುತ್ತದೆ .ರೈತ ಗದ್ದೆಗಿಳಿದು ಬೇಸಾಯಕ್ಕೆ ತೊಡಗದಿದ್ದರೆ ಕಳೆಗಿಡಗಳು, ಗಿಡಗಂಟಿಗಳು ಬೆಳೆಯುತ್ತವೆ. ವರ್ಷಗಟ್ಟಲೆ ಗದ್ದೆಗಿಳಿಯದಿದ್ದರೆ ಆ ಭೂಮಿ ಹಡೀಲು ಭೂಮಿಯಾಗುತ್ತದೆ . ಇಂತಹ ಗದ್ದೆಗಳಲ್ಲಿ‌ ಮತ್ತೆ ಬೇಸಾಯ ಆರಂಭಿಸುವುದಕ್ಕೆ ಮನಸ್ಸುಬೇಕು, ಪ್ರಯತ್ನಬೇಕು, ಇಚ್ಛಾಶಕ್ತಿ ಬೇಕು. ಈ ಪ್ರಾಮಾಣಿಕ ಸಾಹಸ ಈಗ ನಡೆಯುತ್ತಿವೆ . ಹೇಗೆ ನಡೆಯುತ್ತಿದೆ ,ಯಾರೆಲ್ಲ ಭಾಗವಹಿಸುತ್ತಿದ್ದಾರೆ ಎಂಬುದು ಮುಖ್ಯ. ಇದರಿಂದ ಅಭಿಯಾನದ ಭವಿಷ್ಯವನ್ನು ಕಲ್ಪಿಸಬಹುದು. 'ಹಡೀಲು ಭೂಮಿ ಬೇಸಾಯ' ಈ ಅಭಿಯಾನದ ಸಂಘಟಕರು ಯಾರು ,ಯಾರ ನೇತೃತ್ವದಲ್ಲಿ ಈ ಅಭಿಯಾನ ಹಳ್ಳಿಹಳ್ಳಿಗಳಲ್ಲೂ ನಡಯುತ್ತಿವೆ ಎನ್ನುವಷ್ಟೇ ಗದ್ದೆಗಳಲ್ಲಿ ಯಾರು ಸಕ್ರಿಯರಾಗಿದ್ದಾರೆ ಎಂಬುದನ್ನು ಗಮನಿಸಿದರೆ ಈ ಅಭಿಯಾನದ ಭವಿಷ್ಯವನ್ನು ಸಹಜವಾಗಿ ತರ್ಕಿಸಬಹುದು.

ಯುವಕರು, ಕಾಲೇಜು ವಿದ್ಯಾರ್ಥಿ - ವಿದ್ಯಾರ್ಥಿನಿಯರು, ಹೈಸ್ಕೂಲ್ ವಿದ್ಯಾರ್ಥಿಗಳು , ಎನ್ ಸಿಸಿ , ರಾಷ್ಟ್ರೀಯ ಸೇವಾ ಯೋಜನೆಯ ಸಕ್ರಿಯ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಮಣ್ಣಿನೊಂದಿಗೆ ಹೊಂದಿಕೊಳ್ಳುತ್ತಿದ್ದಾರೆ . ಆಟಿಯಲ್ಲಿ ಒಂದು ದಿನ ,ಕೆಸರಿನಲ್ಲಿ ಒಂದು ದಿನ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳಿಂದ ಮಣ್ಣಿನ ಗಂಧವನ್ನು ಗ್ರಹಿಸಿದ್ದ ಬಾಲಕರು, ವಿದ್ಯಾರ್ಥಿಗಳು , ಯುವಕರು ಆಟ ಆಡಲು ಗದ್ದೆಗಿಳಿದಿದ್ದರೆ ಈಗ ಕ್ರಮೇಣ ಗದ್ದೆಗೆ ಕೃಷಿ ಕಾಯಕಕ್ಕಾಗಿ ಇಳಿಯುತ್ತಿದ್ದಾರೆ. ಈ ಬದಲಾದ ಮನೋಧರ್ಮಗಳು ಗದ್ದೆಗಳಲ್ಲಿ ಓಡಾವುದನ್ನು ಕಂಡರೆ ನಿರೀಕ್ಷೆಗಳು ಬಲವಾಗುತ್ತವೆ .ಬೇಸಾಯ ಮತ್ತೆ ಸಂಭ್ರಮಿಸುತ್ತದೆ ಎಂದನ್ನಿಸುತ್ತದೆ. ಅಭಿಯಾನ ಯಶಸ್ವಿಯಾಗುವುದು ಯುವ ಸಮುದಾಯದ ಪ್ರಾಮಾಣಿಕ ಉತ್ಸಾಹದಿಂದ ತಾನೆ ?. ಸಂಘಟನೆಗಳ ಕೆಲಸವೂ ಮುಖ್ಯವೇ .ಆದರೆ ಯುವಕರು , ವಿದ್ಯಾರ್ಥಿಗಳು, ಬಾಲಕರು ಮುನ್ನೆಲೆಗೆ ಬರಬೇಕು . ಕೊರೊನ ಕಾರಣವಾಗಿ ಪರವೂರಿನಲ್ಲಿ , ಪರದೇಶಗಳಲ್ಲಿ ಬೇರೆಬೇರೆ ಉದ್ಯೋಗಗಳಲ್ಲಿ ದುಡಿಯುತ್ತಿದ್ದವರು ಹುಟ್ಟೂರಿಗೆ ಹಿಂದಿರುಗಿದ್ದರು . ತಮ್ಮ ಗದ್ದೆಗಳು ಹಡೀಲು ಬಿದ್ದ ಬಗ್ಗೆ ಮನಗಂಡಿದ್ದಾರೆ. ಸ್ವಲ್ಪ ಮಟ್ಟಿಗೆ ಕೃಷಿಗೆ ತೊಡಗಿದ್ದೂ ಇದೆ , ಗದ್ದೆಗೂ ಇಳಿದದ್ದೂ ಇದೆ . ಪ್ರಸ್ತುತ ಮರಳಿ ಉದ್ಯೋಗದತ್ತ ಹಿಂದಿರುಗಿದರೂ ನಿವೃತ್ತಿಯ ಬಳಿಕ ಮತ್ತೆ ಹುಟ್ಟೂರಿಗೆ ಬಂದು ಬೇಸಾಯದ ಭೂಮಿಗಳಲ್ಲಿ ಕೃಷಿಗೆ ಪ್ರವೃತ್ತರಾಗಬೇಕೆಂಬ ಆಲೋಚನೆ ಇದೆ , ಇಲ್ಲ ನಿಶ್ಚಯಿಸಿದ್ದೇವೆ ಎನ್ನುವ ಮಾತು ಕೇಳಿ ಬರುತ್ತಿದೆ .ಹಾಗಾದರೆ 'ಕೃಷಿ ಸಂಸ್ಕೃತಿ' ಮರಳಿ ಒದಗಿಬರುತ್ತದೆ ?

ಕೃಷಿ ಎಂದರೆ ಸುಭಿಕ್ಷೆ : ಭಾರತ ಹಳ್ಳಿಗಳ ದೇಶ ,ಕೃಷಿಯೇ ಜೀವನಾಧಾರವಾಗಿ ಅಭಿವೃದ್ಧಿ ಹೊಂದಿದ ದೇಶ. ನಮ್ಮ ಸಂಪತ್ತಿನ - ಆರ್ಥಿಕ ಸಬಲತೆಯ ಮೂಲವೇ 'ಕೃಷಿ'. 'ಕೃಷಿ ಎಂದರೆ ಸುಭಿಕ್ಷೆ , ಆದುದರಿಂದ ಅತಿಶಯ ಕೃಷಿ ಹುಟ್ಟುವಳಿಯಿಂದ ಖಂಡಿತಾ ದುರ್ಭಿಕ್ಷೆ ಇಲ್ಲ'. ಇದನ್ನು ನಂಬಿ ನಮ್ಮ ಪೂರ್ವಸೂರಿಗಳು ಬದುಕು ಕಟ್ಟಿದರು ಸುಭಗತೆ , ಸಿರಿವಂತಿಕೆಯ ಬಾಳು ಬಾಳಿದರು.

ನದಿ ದಡಗಳಲ್ಲಿ 'ಕೃಷಿ ಸಂಸ್ಕೃತಿ' ಬೆಳೆಯಿತು , ನಾಗರಿಕತೆ ಸಹಜವಾಗಿ ವಿಕಾಸಗೊಂಡಿತು . ಅದ್ಭುತ ಜ್ಞಾನ ,ದೇಸಿ ಅನುಭವಗಳಿಗೆ ಕೃಷಿಯಾಧರಿತ ಬದುಕು ಆಧಾರವಾಯಿತು . ಬಹುತೇಕ ಭಾರತೀಯ ಉತ್ಕೃಷ್ಟ ದರ್ಶನಗಳು ಅರಣ್ಯದಿಂದ ಬಂದುವು , ಕೃಷಿ ಬದುಕಿನೊಂದಿಗೆ ಸಮ್ಮಿಳಿತಗೊಂಡು ಉದಾತ್ತ ಆದರ್ಶ - ಮೌಲ್ಯ'ಗಳಾದುವು. ನಮ್ಮದೇಶ ವಿಶ್ವಕ್ಕೆ "ಉಪದೇಶಕ" ಸ್ಥಾನಕ್ಕೆ ಏರಲು ಕೃಷಿಯಿಂದ ಪ್ರಾಪ್ತಿಯಾದ ಸೌಭಾಗ್ಯ - ಸುಭಿಕ್ಷೆ ಕಾರಣ , ಆ ಹಂತದಲ್ಲಿ ಜೀವನ ಧರ್ಮಕ್ಕೆ ಶಿಷ್ಟ - ಜನಪದ ವ್ಯಾಖ್ಯಾನ ದೊರೆಯಿತು,ಈ ಜ್ಞಾನ ಕೃಷಿಯ ಮಹೋನ್ನತ ಕೊಡುಗೆ .'ಸುಭಿಕ್ಷಂ ಕೃಷಕೇ ನಿತ್ಯಂ ... - ವ್ಯವಸಾಯಗಾರನಿಗೆ ನಿತ್ಯವೂ ಸುಭಿಕ್ಷವೇ' ಎಂಬ ಮಾತು ಜನಜನಿತವಾಗಿತ್ತು. ಲೇಖನ :ಕೆ.ಎಲ್.ಕುಂಡಂತಾಯ