Updated News From Kaup
ತಾಯಿ, ಅಜ್ಜಿ, ಮುತ್ತಜ್ಜಿಯ ನೆನಪಿಗಾಗಿ ಮೂರ್ತಿಯನ್ನು ಕೆತ್ತಿಸಿ, ಗುಡಿಯೊಳಗೆ ಪ್ರತಿಷ್ಠಾಪಿಸಿ ಮಾತೃ ಪ್ರೇಮ ಮೆರೆದ ಮಕ್ಕಳು
Posted On: 07-09-2021 10:10AM
ಕಾಪು : ಕರಾವಳಿಯಲ್ಲಿ ಹುಟ್ಟಿ, ಬೆಳೆದು ಮುಂಬಯಿಯಲ್ಲಿ ಸಾಧನೆಗೈದ ತಮ್ಮ ತಾಯಿಯ ಜೊತೆಗೆ, ಕುಟುಂಬದ ಹಿರಿಯರ ನೆನಪಿನಲ್ಲಿ ಮಂದಿರವೊಂದನ್ನು ನಿರ್ಮಿಸಿ, ಅದರಲ್ಲಿ ತಾಯಿಯ ಜೊತೆಗೆ, ಅಜ್ಜಿ ಮತ್ತು ಮುತ್ತಜ್ಜಿಯ ಶಿಲಾ ಮೂರ್ತಿಯನ್ನೂ ಪ್ರತಿಷ್ಠಾಪಿಸುವ ಮೂಲಕ ಮುಂಬಯಿಯಲ್ಲೇ ಹುಟ್ಟಿ ಬೆಳೆದ ಮಕ್ಕಳು ಕರಾವಳಿಯಲ್ಲೇ ಅಪರೂಪವೆಂಬತಂಹ ಸೇವಾ ಕಾರ್ಯವನ್ನು ನಡೆಸಿ, ಮಾದರಿಯಾಗಿದ್ದಾರೆ. ಕಾಪು ಗರಡಿಮನೆ ಕುಟುಂಬದ ಅಗಲಿದ ಮೂರು ತಲೆಮಾರಿನ ಹಿರಿಯ ಸದಸ್ಯರಿಗೆ ಗೌರವ ಸಲ್ಲಿಸಲಾಗಿದೆ.
ಸರಕಾರಿ ಪ್ರೌಢ ಶಾಲೆ ಫಿಶರೀಸ್ ಮಲ್ಪೆಯ ನಿವೃತ್ತ ಶಿಕ್ಷಕರಿಗೆ ಗುರುವಂದನೆ
Posted On: 05-09-2021 08:15PM
ಉಡುಪಿ : ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ ಮಲ್ಪೆ ಹಾಗೂ 1986-87 ನೇ ವರ್ಷದ ಹತ್ತನೇ ತರಗತಿಯ ಹಳೆ ವಿದ್ಯಾರ್ಥಿ ಗಳಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ತಮಗೆ ವಿದ್ಯೆ ನೀಡಿದ ಗುರುಗಳಿಗೆ ಗೌರವ ಅರ್ಪಣೆಯು ಶ್ರೀಮತಿ ಶಾಂತಿ ಟಿ. ಹೆಗಡೆ ನಿವೃತ್ತ ವೃತ್ತಿ ಶಿಕ್ಷಕರು ಮತ್ತು ಶ್ರೀಮತಿ ಧೋರತಿ ಕೋಟ್ಯಾನ್ ನಿವೃತ್ತ ದೈಹಿಕ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಫಿಶರೀಸ್ ಮಲ್ಪೆ ಇವರಿಗೆ ಅವರ ಸ್ವಗೃಹದಲ್ಲಿ ಗುರುವಂದನೆಯನ್ನು ಅರ್ಪಿಸಲಾಯಿತು.
ಕೊರಗಜ್ಜ ದೈವವನ್ನು ಅವಹೇಳನಗೈಯುತ್ತಿರುವ ವಾಟ್ಸಾಪ್ ಗ್ರೂಪ್ - ಸಾರ್ವಜನಿಕರ ಆಕ್ರೋಶ
Posted On: 05-09-2021 05:00PM
ಕಾಪು : ಸಾಮಾಜಿಕ ಜಾಲತಾಣಗಳ ಮೂಲಕ ದೈವ, ದೇವರ ನಿಂದನೆಯಾಗುತ್ತಿರುವುದು ತದನಂತರ ಒಂದಷ್ಟು ವಿರೋಧದ ಬಳಿಕ ಕ್ಷಮೆಯಾಚನೆಯ ಘಟನೆಗಳು ನಮ್ಮ ಸುತ್ತ ನಡೆಯುತ್ತಿರುವುದು ನಮ್ಮೆಲ್ಲರಿಗೂ ಗೊತ್ತು.
ಬಂಟ್ವಾಳ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಚಿತ್ರಕಲಾ ಶಿಕ್ಷಕ ಮುರಳಿಕೃಷ್ಣ ರಾವ್ ಆಯ್ಕೆ
Posted On: 04-09-2021 11:34PM
ಮಂಗಳೂರು : ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಇಲ್ಲಿ ನಡೆದ ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ, ಸಮನ್ವಯಾಧಿಕಾರಿಗಳು ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಹಾಜರಿದ್ದ ಶಿಕ್ಷಕರ ದಿನಾಚರಣೆ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಬಂಟ್ವಾಳ ತಾಲೂಕಿನ ಪ್ರೌಢಶಾಲಾ ವಿಭಾಗದಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಮುರಳಿಕೃಷ್ಣ ರಾವ್ ಇವರಿಗೆ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಲು ತೀರ್ಮಾನಿಸಲಾಯಿತು.
ರಾಜ್ಯದಲ್ಲಿ ಬೈಕ್, ಟಿವಿ, ಫ್ರಿಡ್ಜ್ ಹೊಂದಿದವರ ಬಿಪಿಎಲ್ ಕಾರ್ಡ್ ರದ್ದುಪಡಿಸುವುದಿಲ್ಲ: ಆಹಾರ ಇಲಾಖೆ ಸ್ಪಷ್ಟನೆ
Posted On: 04-09-2021 11:25PM
ಬೆಂಗಳೂರು : ರಾಜ್ಯದಲ್ಲಿ ಬೈಕ್, ಟಿವಿ, ಫ್ರಿಡ್ಜ್ ಹೊಂದಿದವರ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗುವುದು ಎಂಬ ವದಂತಿಗಳ ಬಗ್ಗೆ ಆಹಾರ ಇಲಾಖೆಯಿಂದ ಸ್ಪಷ್ಟನೆ ನೀಡಲಾಗಿದ್ದು, ಬೈಕ್, ಟಿವಿ, ಫ್ರಿಡ್ಜ್ ಇದ್ದವರ ಬಿಪಿಎಲ್ ಕಾರ್ಡ್ ರದ್ದು ಪಡಿಸುವುದಿಲ್ಲ ಎಂದು ಹೇಳಲಾಗಿದೆ.
ಲಯನ್ಸ್ ಕ್ಲಬ್ ಉಡುಪಿ ಕರಾವಳಿಯಿಂದ ಪತ್ರಿಕಾ ವಿತರಕರ ದಿನಾಚರಣೆ
Posted On: 04-09-2021 11:11PM
ಉಡುಪಿ : ಲಯನ್ಸ್ ಕ್ಲಬ್ ಉಡುಪಿ ಕರಾವಳಿ ವತಿಯಿಂದ ಪತ್ರಿಕಾ ವಿತರಕರ ದಿನಾಚರಣೆಯನ್ನು ಆಚರಿಸಲಾಯಿತು. ಬಂಟಕಲ್ಲು ಪರಿಸರದಲ್ಲಿ ಸುಮಾರು 20 ವರ್ಷಗಳಿಂದ ಪತ್ರಿಕೆ ವಿತರಕರಾಗಿರುವ ಕೆ. ಆರ್. ಪಾಟ್ಕರ್ ರವರನ್ನು ಅವರ ಮನೆಯಲ್ಲಿ ಲಯನ್ಸ್ ಉಡುಪಿ ಕರಾವಳಿ ವತಿಯಿಂದ ಗೌರವಿಸಲಾಯಿತು.
ಶಿರ್ವ : ಗ್ರಾಮ ಪಂಚಾಯತ್, ಎಸ್.ವೈ.ಎಸ್, ಎಸ್.ಎಸ್.ಎಫ್ ತಂಡದಿಂದ ಶಾಲೆಗಳ ಸ್ಯಾನಿಟೈಝೇಶನ್
Posted On: 04-09-2021 05:53PM
ಕಾಪು : ಉಡುಪಿ ಜಿಲ್ಲೆಯಲ್ಲಿ ಸೋಮವಾರದಿಂದ ಪ್ರಾಥಮಿಕ ಶಾಲೆಗಳ ಮಕ್ಕಳ ಭೌತಿಕ ತರಗತಿಗಳು ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಐದು ಪ್ರಾಥಮಿಕ ಶಾಲೆಗಳು ಹಾಗೂ ಎರಡು ಪ.ಪೂರ್ವ ಕಾಲೇಜುಗಳನ್ನು ಶಿರ್ವ ಗ್ರಾಮ ಪಂಚಾಯತ್ ವತಿಯಿಂದ ತೋಪನಂಗಡಿ ಎಸ್.ವೈ.ಎಸ್ ಮತ್ತು ಎಸ್.ಎಸ್.ಎಫ್ ತಂಡದ ಸಹಕಾರದಿಂದ ಸ್ಯಾನಿಟೈಝೇಶನ್ ಮಾಡಿಸಲಾಯಿತು.
ಶಿರ್ವ: ಸಂತ ಮೇರಿ ಮಹಾವಿದ್ಯಾಲಯದಲ್ಲಿ ಸ್ವಚ್ಛಸರ್ವೇಕ್ಷಣ ಜನಾಂದೋಲನ - 2021
Posted On: 03-09-2021 11:32AM
ಶಿರ್ವ: ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ಸ್ವಚ್ಛಸರ್ವೆಕ್ಷಣ ಜನಾಂದೋಲನ 2021 ಕಾರ್ಯಕ್ರಮಕ್ಕೆ ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಗ್ರಾಮೀಣ ಸಮುದಾಯದಲ್ಲಿ ಸ್ವಚ್ಛತೆ, ಶುಚಿತ್ವ ಮತ್ತು ನೈರ್ಮಲ್ಯದ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರ ವ್ಯಾಪಿ ಚಾಲನೆ ನೀಡಿದೆ.
ಶಿರ್ವ ಗ್ರಾ.ಪಂ ನ SLRM ಘಟಕದ ಪೌರಕಾರ್ಮಿಕರೊಂದಿಗೆ ಹುಟ್ಟು ಹಬ್ಬ ಆಚರಿಸಿದ ಗ್ರಾ.ಪಂ. ಸದಸ್ಯೆ ವೈಲೆಟ್ ಕಸ್ತಲಿನೋ
Posted On: 03-09-2021 11:22AM
ಕಾಪು : ಸಾಮಾನ್ಯವಾಗಿ ಜನರು ತಮ್ಮತಮ್ಮ ಹುಟ್ಟು ಹಬ್ಬವನ್ನು ಕುಟುಂಬ ಸದಸ್ಯರೊಂದಿಗೆ ಅಥವಾ ಹೊಟೇಲುಗಳಲ್ಲಿ ಆಚರಿಸುವುದು ಸಾಮಾನ್ಯ. ಆದರೆ ಶಿರ್ವ ಗ್ರಾಮ ಪಂಚಾಯತ್ ಸದಸ್ಯೆ ವೈಲೆಟ್ ಕಸ್ತಲಿನೋರವರು ತಮ್ಮ ಹುಟ್ಟುಹಬ್ಬವನ್ನು ತಮ್ಮದೇ ಗ್ರಾಮ ಪಂಚಾಯತ್ ನ ಎಸ್.ಎಲ್.ಆರ್.ಎಮ್ ( ಕಸ, ತ್ಯಾಜ್ಯ ಸಂಗ್ರಹ ಮತ್ತು ವಿಂಗಡನಾ ಕೇಂದ್ರ) ಘಟಕದ ಪೌರಕಾರ್ಮಿಕರೊಂದಿಗೆ ಆಚರಿಸಿ ಮಾದರಿ ಎನಿಸಿದ್ದಾರೆ.
ಉಡುಪಿ : ಮುದ್ರಣ ಯಂತ್ರಗಳ ಪ್ರಾತ್ಯಕ್ಷಿಕೆ
Posted On: 03-09-2021 11:14AM
ಉಡುಪಿ : ವೈಷ್ಣವಿ ಎಂಟರ್ಪ್ರೈಸಸ್ ಮಂಗಳೂರು ಮತ್ತು ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಉಡುಪಿ ಇವರ ಸಹಯೋಗದಲ್ಲಿ Epson ಮುದ್ರಣ ಯಂತ್ರಗಳ ಪ್ರಾತ್ಯಕ್ಷಿಕೆಯು ಆದಿ ಉಡುಪಿಯ ತಾರಸ್ ಪ್ರಿಂಟ್ ಕಾರ್ನರ್ ಬೈದಶ್ರೀ ಬಿಲ್ಡಿಂಗ್ ನಲ್ಲಿ ಜರಗಿತು. ಬೈದಶ್ರೀ ಅಧ್ಯಕ್ಷರಾದ ದಾಮೋದರ ಕಲ್ಮಾಡಿ ಉದ್ಘಾಟನೆಯನ್ನು ನೆರವೇರಿಸಿದರು.
