Updated News From Kaup
ಅಮ್ಮ ಇರೆನ ಜೋಕುಲೆಂಕುಲು ಭಜನೆ ಮಲ್ಪುವ ತುಳು ಭಕ್ತಿ ಗೀತೆ ವಿಜಯ್ ಶೆಟ್ಟಿ ಮೂಡುಬೆಳ್ಳೆ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ

Posted On: 16-01-2021 05:22PM
ಭಾವಗೀತೆ, ಭಕ್ತಿಗೀತೆ, ಚಿತ್ರಗೀತೆಗೆ, ಭಾವತುಂಬಿ ಸಮರ್ಪಣಾ ಭಾವದಿಂದ ಹಾಡುವ ಹಾಡುಗಾರ ವಿಜಯ್ ಶೆಟ್ಟಿ ಮೂಡುಬೆಳ್ಳೆ. ಇವರ ಮಧುರ ಕಂಠಕ್ಕೆ ಮಾರು ಹೋಗದವರೇ ಇಲ್ಲ.
ವಿಜಯರ ಹಾಡಿನಲ್ಲಿ ಕೇವಲ ಹಾಡು ಮಾತ್ರವಿರುವುದಿಲ್ಲ. ಅಲ್ಲಿ ಭಾವ ತುಂಬಿ ಗಾಯನದಲ್ಲಿ ಲೀನವಾಗುವ ತನ್ಮಯತೆ ಇರುತ್ತದೆ. ಶಾರದೆಯ ಗುಡಿಯಲ್ಲಿ ಸರ್ವವನ್ನೂ ಅರ್ಪಿಸಿಕೊಂಡ ಆತ್ಮ ಸಮರ್ಪಣೆಯ ಸಾಕ್ಷಾತ್ಕಾರವಿರುತ್ತದೆ.
ಜಗನ್ಮಾತೆಯ ಮಹಿಮೆಯನ್ನು ಪಾಡುವ ಸುಯೋಗ ಮತ್ತೊಮ್ಮೆ ಈ ಸಂಗೀತ ಗಾರನಿಗೆ ಒಲಿದು ಬಂದಿದೆ. ಮಕರ ಸಂಕ್ರಾಂತಿಯ ಶುಭದಿನದಂದು "ಅಮ್ಮ ಇರೆನ ಜೋಕುಲೆಂಕುಲು" ಭಕ್ತಿ ಗಾನಾಮೃತವನ್ನು ತನ್ನದೇ ಸ್ವಂತ ವಿಜಯ್ ಶೆಟ್ಟಿ ಮೂಡುಬೆಳ್ಳೆ ಕ್ರಿಯೇಷನ್ಸ್ ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಿದ್ದಾರೆ.
ಎಲ್ಲರೂ ವೀಕ್ಷಿಸಿ, ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಬೇಕು ಎಂದು ವಿನಂತಿಸಿದ್ದಾರೆ.
ಉಡುಪಿ : ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಯುವ ದಿನ ಕಾರ್ಯಕ್ರಮ

Posted On: 16-01-2021 05:04PM
ಉಡುಪಿ : ಸ್ವಾಮಿ ವಿವೇಕಾನಂದರ ಪ್ರಪಂಚಕ್ಕೆ ನೀಡಿದ ಜೀವನ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ ಹೊಸ ಪರಿವತ೯ನೆ ಸಾಧ್ಯ ಎಂದು ಶಿವಾನಿ ಡಯಾಗ್ನಿಸ್ಟಿಕ್ ಮತ್ತು ರಿಸಚ್೯ ಸೆಂಟರ್ ಮುಖ್ಯಸ್ಥ ಅಭಾವಿಪ ಹಿರಿಯ ಕಾಯ೯ಕತ೯ ಡಾII ಶಿವಾನಂದ ನಾಯಕ್ ಹೇಳಿದರು.
ಅವರು ಉಪ್ಪೂರು ಬಳಿಯ ಹಿಂದುಳಿದ ವಗ೯ಗಳ ಬಾಲಕರ ವಿದ್ಯಾಥಿ೯ ನಿಲಯದಲ್ಲಿ ಎಬಿವಿಪಿ ವತಿಯಿಂದ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಯುವ ದಿನ ಕಾರ್ಯಕ್ರಮದಲ್ಲಿ ಹೇಳಿದರು.
ಸ್ವಾಮೀಜಿಯವರು ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಮೀಸಲಾಗಿಟ್ಟಿದ್ದರು. ಅವರು ಯುವಕರ ಮೇಲೆಟ್ಟ ನಂಬಿಕೆ ವಿಶೇಷವಾಗಿತ್ತು. ತಮ್ಮ ಕಿರಿಯ ಪ್ರಾಯದಲ್ಲಿ ಅತ್ಯಂತ ಹಿರಿದಾದ ಕಾಯ೯ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು. ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಮಾಡಿದ ಭಾಷಣ ಚಾರಿತ್ರಿಕವಾದದ್ದು ಇಂದು ಭಾರತೀಯರಿಗೆ ವಿದೇಶದಲ್ಲಿ ಉತ್ತಮ ಗೌರವ ಸಿಗಲು ಇದು ಕಾರಣವಾಗಿದೆ ಎಂದರು.
ಅತಿಥಿಯಾಗಿ ಸ್ವಚ್ಚ ಭಾರತ ಫ್ರೇoಡ್ಸ್ ಸಂಯೋಜಕ ರಾಘವೇಂದ್ರ ಪ್ರಭು,ಕವಾ೯ಲು ಪ್ರಸ್ಥಾವನೆಗೈದರು. ಕಾಯ೯ಕತ೯ ಅಶಿಷ್ ಶೆಟ್ಟಿ ನಿರೂಪಿಸಿದರು.ವಾಡ೯ನ್ ಗುರು ರಾವ್ ವಂದಿಸಿದರು.
ಮಚ್ಚಿನದಲ್ಲಿ ಜಲಜೀವನ್ ಮಿಷನ್ ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮ

Posted On: 16-01-2021 04:58PM
ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾ.ಪಂಚಾಯತಿಯಲ್ಲಿ ಜಲಜೀವನ್ ಮಿಷನ್ ಕಾರ್ಯಚಟುವಟಿಕೆಯಡಿ ಸಮುದಾಯ ಸಂಸ್ಥೆ ವತಿಯಿಂದ ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮ ನಡೆಸಲಾಯಿತು.

ಜೆಜೆಎಮ್ ಐಇಸಿ/ಹೆಚ್.ಆರ್.ಡಿ ಜಿಲ್ಲಾ ಮುಖ್ಯಸ್ಥ ಶಿವರಾಮ ಪಿ.ಬಿ ಗ್ರಾಮ ಕ್ರಿಯಾ ಯೋಜನೆ ಮತ್ತು ಪಿ.ಆರ್.ಎ ಕುರಿತು ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಆವರಣದಲ್ಲಿ ಗ್ರಾಮಸ್ಥರ ಸಹಕಾರದಲ್ಲಿ ನಕ್ಷೆ ಬಿಡಿಸಿ ಗ್ರಾಮದ ಸಂಪೂರ್ಣ ಚಿತ್ರಣ ಬಿತ್ತರಿಸಲಾಯಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೌರಿಶಂಕರ್ ,ನೂತನ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಜೆಜೆಎಮ್ ಸಿಬ್ಬಂದಿಗಳಾದ ಚರಣ್ ರಾಜ್,ಫಲಹಾರೇಶ್, ಮಹಾಂತೇಶ್, ರಘುಚಂದ್ರ ಶೆಟ್ಟಿ,ಸದಾಶಿವ,ಈಶ್ವರ್ ಅವರು ಸಹಕರಿಸಿದರು.
ಸ್ವಚ್ಛ ಭಾರತ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಬಾಸ್ಕಿ ಅರ್ಬ್ ಗ್ರೂಪ್ ನೇತೃತ್ವದ 90ನೇ ದಿನದತ್ತ ಸ್ವಚ್ಛತಾ ಕಾರ್ಯ

Posted On: 16-01-2021 04:53PM
ಸ್ವಚ್ಛ ಭಾರತ ಸ್ವಚ್ಛ ಮಂಗಳೂರು ಅಭಿಯಾನದ ಪರಿಕಲ್ಪನೆಯಲ್ಲಿ ಇಷ್ಟರವರೆಗೇ 89 ದಿನಗಳ ಸ್ವಯಂ ಪ್ರೇರಿತ ಸ್ವಚ್ಛತೆ ಮಾಡಿ ಇದೇ ಬರುವ ತಾರೀಕು 17/01/2021ನೇ ದಿನದಂದು 90ನೇ ದಿನದತ್ತ ದಿಟ್ಟ ಹೆಜ್ಜೆ ಇಡುತ್ತಿರುವ ಸಂಸ್ಥೆ ಬಾಸ್ಕಿ ಅರ್ಬ್ ಗ್ರೂಪ್.

ಯಾವುದೇ ಪ್ರಚಾರವನ್ನೂ ಬಯಸದ ಬಾಸ್ಕಿ ಅರ್ಬ್ ಗ್ರೂಪ್'ನ ಶ್ರೇಯಸ್ ಹೊಳ್ಳ, ಹರ್ಷ ಕೋಟ್ಯಾನ್, ಹಾಗೂ ಕು। ಮನೀಷ ಮತ್ತು ಪ್ರಥಮದಲ್ಲಿ ಜೊತೆಗೆ ಸಹಕರಿಸಿದ ಸಂಕೇತ್ ಬೆಂಗ್ರೆ ಹಾಗೂ ಶಿಲ್ಪ ಬೆಂಗ್ರೆ ಇವರುಗಳ ಮುಂದಾಳತ್ವದಲ್ಲಿ ನಡೆಯುತ್ತಿದೆ.

ಮಂಗಳೂರಿನ ಸಮೀಪದ ತೋಟ ಬೆಂಗ್ರೆ ಗ್ರಾಮದ ಯುವಕ ಯುವತಿಯರು ಹಾಗೂ ಮಕ್ಕಳನ್ನು ಒಗ್ಗೂಡಿಸಿ, ಪ್ರತಿನಿತ್ಯ ತೋಟ ಬೆಂಗ್ರೆ ಬೀಚ್ ನಲ್ಲಿ ದಿನಾಲು ಗಾಳಿ-ಬಿಸಿಲನ್ನು ಲೆಕ್ಕಿಸದೆ, ತಮ್ಮ ಸ್ವಂತ ಖರ್ಚಿನಲ್ಲಿ ತೋಟ ಬೆಂಗ್ರೆ ಬೀಚ್ ಬದಿ ಹಾಗೂ ನದಿ ಬದಿಯಲ್ಲಿ ಕಸ ಕಡ್ಡಿಗಳನ್ನು ಸತತವಾಗಿ ಸ್ವಚ್ಛ ಮಾಡುತ್ತಿದ್ದಾರೆ.

ಇವರ ಈ ನಿಸ್ವಾರ್ಥ ಸೇವೆಯನ್ನು ಸರಕಾರ ಹಾಗೂ ಜಿಲ್ಲಾಡಳಿತ ಗುರುತಿಸುವಂತಾಗಬೇಕಿದೆ.
ಸುಳ್ಯ ತಾಲೂಕು ಪಂಚಾಯತಿಯಲ್ಲಿ ಜಲಜೀವನ್ ಮಿಷನ್ ಕಾರ್ಯಾಗಾರ

Posted On: 14-01-2021 08:44PM
ದ.ಕ ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ,ಸ್ವಚ್ಛ ಭಾರತ್ ಮಿಷನ್ ಮತ್ತು ತಾಲೂಕು ಪಂಚಾಯತ್ ಸುಳ್ಯ ಇದರ ಸಹಭಾಗಿತ್ವದಲ್ಲಿ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನ ಬೆಂಬಲಿತ ಸಂಸ್ಥೆ ಸಮುದಾಯ ತುಮಕೂರು (ರಿ.) ಇದರ ವತಿಯಿಂದ ಸುಳ್ಯ ತಾಲೂಕು ಪಂಚಾಯತಿಯ ಪಯಸ್ವಿನಿ ಸಭಾಂಗಣದಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಜಲಜೀವನ್ ಮಿಷನ್ ಕಾರ್ಯಾನುಷ್ಠಾನದ ಕುರಿತು ಕಾರ್ಯಾಗಾರವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.

ತಾಲೂಕು ಪಂಚಾಯತ್ ಲೆಕ್ಕಾಧಿಕಾರಿ ಹರೀಶ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಳಿಕ ಜೆಜೆಎಮ್ ಇದರ ಜಿಲ್ಲಾ ಐಇಸಿ ಮತ್ತು ಹೆಚ್.ಆರ್.ಡಿ ವಿಭಾಗದ ಮುಖ್ಯಸ್ಥ ಶಿವರಾಮ್ ಪಿ.ಬಿ ಮತ್ತು ಇಂಜಿನಿಯರ್ ಅಶ್ವಿನ್ ಕುಮಾರ್ ಅವರು ಕಾರ್ಯಚಟುಚಟಿಕೆ ಹಾಗೂ ತಾಂತ್ರಿಕ ವಿಷಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ವಿವಿಧ ಗ್ರಾಮ ಪಂಚಾಯತುಗಳ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು. ಸ್ವಚ್ಛ ಭಾರತ್ ಮಿಷನ್ ಇದರ ಪವನ್ ಸಹಕರಿಸಿದರು. ಜೆಜೆಎಮ್ ಐಇಸಿ ದಯಾನಂದ ಮಯ್ಯಾಳ, ಮಹಾಂತೇಶ್ ಹಿರೇಮಠ್ ಕಾರ್ಯಕ್ರಮ ಆಯೋಜಸಿದ್ದರು.
ಕಾಪು ವೆಂಕಟರಮಣ ದೇವಸ್ಥಾನಕ್ಕೆ ಇನ್ವರ್ಟರ್ ಕೊಡುಗೆ

Posted On: 14-01-2021 08:38PM
ಕಾಪು ವೆಂಕಟರಮಣ ದೇವಸ್ಥಾನಕ್ಕೆ ನೂತನ ಇನ್ವರ್ಟರನ್ನು ಶ್ರೀ ಗೋಕುಲದಾಸ್ ಕಾಮತ್ ಮತ್ತು ಕುಟುಂಬ , ಕಲ್ಯ, ಕಾಪು ಇವರು ಸೇವಾರ್ಥವಾಗಿ ಸಮರ್ಪಿಸಿದರು.
ಬಂಟಕಲ್ಲು : ಚಿನ್ನದ ಪದಕ ಪಡೆದ ಕುಮಾರಿ ರಶ್ಮಿತರವರಿಗೆ ನಾಗರಿಕ ಸಮಿತಿಯಿಂದ ಅಭಿನಂದನೆ

Posted On: 14-01-2021 08:32PM
ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆಸಿದ ಬಿ.ಎಸ್ಸಿ ಪದವಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಪಡೆದ ಬಂಟಕಲ್ಲು ಮಾಣಿಪಾಡಿ ಶ್ರೀ ರಮೇಶ ಮೂಲ್ಯ ಮತ್ತು ಶ್ರೀಮತಿ ಗೀತಾ ಮೂಲ್ಯರವರ ಪುತ್ರಿ ಕುಮಾರಿ ರಶ್ಮಿತರವರಿಗೆ ಬಂಟಕಲ್ಲು ನಾಗರಿಕ ಸೇವಾ ಸಮಿತಿ (ರಿ.)ರವರು ಅವರ ಮನೆಗೆ ತೆರಳಿ ಅಭಿನಂದನೆ ತಿಳಿಸಿದರು. ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ. ಆರ್ ಪಾಟ್ಕರ್ ರವರು ರಶ್ಮಿತಾರನ್ನು ಸಮಿತಿ ಪರವಾಗಿ ಅಭಿನಂದಿಸಿದರು. ಇವರ ಸಾಧನೆ ನಮ್ಮ ಊರಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿ ಅವರ ಭವಿಷ್ಯದ ಜೀವನಕ್ಕೆ ಶುಭ ಹಾರೈಸಿದರು.

ಮಂಗಳೂರಿನ ಎ.ಜೆ ವೈದ್ಯಕೀಯ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾಗಿದ್ದ ರಶ್ಮಿತಾ ಶ್ವಾಸಕೋಶದ ಚಿಕಿತ್ಸೆ ( ರೆಸ್ಪಿರೇಟರಿ ಥೆರಫಿಸ್ಟ್) ಬಗ್ಗೆ ವಿಶೇಷ ಅಧ್ಯಯನ ಮಾಡಿ ಚಿನ್ನದ ಪದಕ ಗಳಿಸಿದ್ದರು.
ನಾಗರೀಕ ಸೇವಾ ಸಮಿತಿಯ ಕಾರ್ಯದರ್ಶಿ ದಿನೇಶ್ ದೇವಾಡಿಗ, ಶಿರ್ವ ಗ್ರಾ.ಪಂ ಸದಸ್ಯರಾದ ಸತೀಶ್ ಬಂಟಕಲ್ಲು, ಶ್ರೀಮತಿ ವೈಲೆಟ್ ಕ್ಯಸ್ತಲಿನೊ, ಸಮಿತಿಯ ಅನಂತರಾಮ ವಾಗ್ಲೆ, ರವೀಂದ್ರ ಆಚಾರ್ಯ, ರಾಘವೇಂದ್ರ, ರಶ್ಮಿತರ ತಾಯಿ ಶ್ರೀಮತಿ ಗೀತಾ ಮೂಲ್ಯ , ಶಾಂತ ಕುಲಾಲ್, ಆಶಾ ರಾವ್ ಗಂಗಾಧರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಬಂಟಕಲ್ಲು : ರಾತ್ರಿ ಮಲಗಿದ್ದ ವ್ಯಕ್ತಿ ಬೆಳಿಗ್ಗೆ ಬಾವಿಯಲ್ಲಿ ಶವವಾಗಿ ಪತ್ತೆ

Posted On: 13-01-2021 07:42PM
ಶಿರ್ವ ಠಾಣಾ ವ್ಯಾಪ್ತಿಯ ಬಂಟಕಲ್ಲು ಹೇರೂರು ಬಾವಿಯಲ್ಲಿ ಶವ ಪತ್ತೆ ಸುಮಾರು 69 ವರ್ಷ ಪ್ರಾಯದ ಜಾನ್ ಡಿಸೋಜ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ ಜಾನ್ ಡಿಸೋಜ ಬೆಳಿಗ್ಗೆ ನಾಪತ್ತೆಯಾಗಿದ್ದರು ಹುಡುಕಾಡಿದಾಗ ಮನೆಯ ಬಾವಿಯಲ್ಲಿ ಶವ ಇರುವುದು ಪತ್ತೆಯಾಗಿದೆ.
ಮಲ್ಪೆಯ ಈಜು ತಜ್ಞ ಈಶ್ವರ್ ಬಾವಿಯಲ್ಲಿ ಮುಳುಗಿ ಶವ ಮೇಲೆ ತರಲು ಸಹಕರಿಸಿದರು. ಶಿರ್ವ ಠಾಣೆಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಆಗಮಿಸಿ ಶವವನ್ನು ಮಹಜರಿಗೆ ಕಳಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಪೊಲೀಸರ ತನಿಖೆಯಿಂದ ಗೊತ್ತಾಗಬೇಕಾಗಿದೆ.
ಕಾಪು : ಮಹಾದೇವಿ ಪ್ರೌಢಶಾಲೆಯ ನಿವೃತ ದೈಹಿಕ ಶಿಕ್ಷಕ ರಾಘವೇಂದ್ರ ಬಾಯರಿ ಇನ್ನಿಲ್ಲ

Posted On: 13-01-2021 02:43PM
ಕಾಪು : ಮಹಾದೇವಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸಾರ್ಥಕ ಸೇವೆಯನ್ನು ಮಾಡಿ ನಿವೃತ್ತಿಯನ್ನು ಹೊಂದಿದ ಶ್ರೀ ರಾಘವೇಂದ್ರ ಬಾಯರಿಯವರು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಅಗಲಿದ ದಿವ್ಯಾತ್ಮಕ್ಕೆ ಶ್ರೀ ಭಗವಂತನು ಚಿರಶಾಂತಿಯನ್ನು ಕರುಣಿಸಲಿ.
ಮಂಗಳೂರಿನ ಈ ಅಜಾನುಬಾಹು ಪೊಲೀಸ್ ನ ಕೆಲಸ ನೋಡಿದ್ರೆ ನೀವು ದಂಗಾಗೋದು ಗ್ಯಾರಂಟಿ..ಅವರೇ ವಿಜಯ ಕಾಂಚನ್ ಬೈಕಂಪಾಡಿ

Posted On: 13-01-2021 12:07PM
ತುಂಬಾ ಸಮಯದಿಂದ ಇವರ ಬಗ್ಗೆ ಬರೆಯಬೇಕು ಎಂದುಕೊಂಡಿದ್ದೆ, ಆದರೆ ಕಾಲವೇ ಕೂಡಿಬಂದಿರಲಿಲ್ಲ.. ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡು ಇಷ್ಟೊಂದು ಸಾಧನೆ ಮಾಡಲು ಸಾಧ್ಯವೇ..? ಅದು ಕೂಡ ಯುವಕರನ್ನು ನಾಚಿಸುವಂತ ಸಾಧನೆ. ನಾನು ಇವರನ್ನು ತುಂಬಾ ಹತ್ತಿರದಿಂದ ಬಲ್ಲೆ. ಮಂಗಳೂರಿನಲ್ಲಿದ್ದಾಗ ವಾರಕ್ಕೆ ಮೂರು ನಾಲ್ಕು ಸಲ ಭೇಟಿಯಾಗುತ್ತಿದ್ದೆವು, ಆದರೆ ಇತ್ತೀಚೆಗೆ ಕೊರೊನದಿಂದಾಗಿ ಇವರ ಭೇಟಿ ಬಹಳ ಕಡಿಮೆಯಾಗಿತ್ತು. ಮೊನ್ನೆ ಕುದ್ರೋಳಿಯಲ್ಲಿ ನಡೆದ ರಾಜ್ಯಮಟ್ಟದ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಇವರು ಬೆಳ್ಳಿ ಪದಕ ಪಡೆದ ತುಣುಕೊಂದು ನಮ್ಮ ವಾಟ್ಸಪ್ ಗ್ರೂಪ್ ಗೆ ಬಂದಿತ್ತು. ಯುವಕರು ಭಾಗವಹಿಸುವ ಸ್ಪರ್ಧೆಯಲ್ಲಿ 52 ವರ್ಷದವರು ಪೈಪೋಟಿ ಕೊಡಲು ಸಾಧ್ಯವೇ..?
ಅದಕ್ಕೆ ಹೇಳಿದ್ದು ಹಿರಿಯರು ಸಾಧನೆಗೆ ಯಾವುದೇ ಪ್ರಾಯ ಅಡ್ಡಿ ಬರುವುದಿಲ್ಲ ಎಂದು. ಅವರ ಮನೆಗೆಲ್ಲ ಭೇಟಿಕೊಟ್ಟಾಗ ಫಲಕಗಳನ್ನು ನೋಡುವುದೇ ಒಂದು ಖುಷಿ. ನಾನು ಇಷ್ಟೆಲ್ಲಾ ಹೇಳಿದ್ದು ಯಾರ ಬಗ್ಗೆ ಅಂದುಕೊಂಡಿರಾ... ಮಂಗಳೂರು ಪೊಲೀಸ್ ಇಲಾಖೆಯಲ್ಲಿ ಅಜಾತಶತ್ರು, ಸ್ನೇಹಜೀವಿ, ಪೊಲೀಸ್ ಇಲಾಖೆಯಲ್ಲಿ ದೊಡ್ಡಗಾತ್ರದ ಅಜಾನುಬಾಹು. ಅದುವೇ ನಮ್ಮ ಪ್ರೀತಿಯ ವಿಜಯ ಕಾಂಚನ್ ಬೈಕಂಪಾಡಿ (ಇವರ ಗುರುಗಳು ಬಾಲಾಂಜನೇಯ ವ್ಯಾಯಾಮ ಶಾಲೆ ಮಂಗಳೂರು, ಏಕಲವ್ಯ ಪ್ರಶಸ್ತಿ ವಿಜೇತ ' ಸತೀಶ್ ಕುದ್ರೋಳಿ.) ಬನ್ನಿ ಇವರ ಸಾಧನೆಯ ವಿವರಗಳನ್ನು ತಿಳಿಸುತ್ತೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 6 -ಸಲ ಭಾಗವಹಿಸಿದ್ದಾರೆ. 1.ಜಪಾನ್ ನಲ್ಲಿ -ಬೆಳ್ಳಿ ಪದಕ 2.ಫಿಲಿಪೈನ್ಸ್ ನಲ್ಲಿ -ಕಂಚಿನ ಪದಕ 3.ರಷ್ಯಾದಲ್ಲಿ -ಬೆಳ್ಳಿ ಪದಕ 4.ದುಬೈ ಯಲ್ಲಿ - ಬೆಳ್ಳಿ ಪದಕ 5.ಅಮೇರಿಕಾದಲ್ಲಿ ನಡೆದ ವರ್ಲ್ಡ್ ಚಾಂಪಿಯನ್ ಸಿಪ್ ನಲ್ಲಿ -2 ಚಿನ್ನದ ಪದಕ 6.ಭಾರತದಲ್ಲಿ- ಚಿನ್ನದ ಪದಕ (ಬೆಸ್ಟ್ ಲಿಫ್ಟರ್ ) ರಾಷ್ಟ್ರೀಯ ಮಟ್ಟದಲ್ಲಿ- 8.ಬಾರಿ ಭಾಗವಹಿಸಿದ್ದಾರೆ ಅದರಲ್ಲಿ ಭಾರತದ ಬಲಿಷ್ಠ ಕ್ರೀಡಾಪಟು - 2 ಸಲ. (STRONG MAN OF INDIA ) ಪೊಲೀಸ್ ಇಲಾಖೆಯಲ್ಲಿ ಅನೇಕ ಕೇಸ್ ನಲ್ಲಿ ಅಪರಾಧಿಗಳನ್ನು ಬಂಧಿಸಿ, ಕಂಬಿ ಎನಿಸುವ ಹಾಗೆ ಮಾಡಿದ್ದರಿಂದ ಅವರಿಗೆ 2012 ರಲ್ಲಿ ಮುಖ್ಯಮಂತ್ರಿಯಿಂದ ಚಿನ್ನದ ಪದಕ ಕೂಡ ಸಿಕ್ಕಿದೆ .
ಹಾಗೆಯೇ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಮತ್ತು ಏಕಲವ್ಯ ಪ್ರಶಸ್ತಿ ವಿಜೇತೆ 'ಬೋಳ ಅಕ್ಷತಾ ಪೂಜಾರಿ ' ಇವರು ವಿಜಯ್ ಕಾಂಚನ್ ಇವರ ಶಿಷ್ಯೆಯಾಗಿದ್ದಾರೆ. ಹಾಗೂ ಅನೇಕ ಮಂದಿಯನ್ನು ಕಿನ್ನಿಗೋಳಿಯಲ್ಲಿರುವ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ತರಬೇತಿ ಕೊಟ್ಟು ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವರುಷಗಳ ಹಿಂದೆ ಕುದ್ರೋಳಿ ದಸರಾದ ಸಂದರ್ಭದಲ್ಲಿ ಬಾಹುಬಲಿಯ ವೇಷ ತೊಟ್ಟು ಎಲ್ಲರ ಗಮನ ಸೆಳೆದಿದ್ದರು. ನೀವೇನಾದರೂ ಇವರಿಗೆ ಶುಭಾಶಯಗಳು ಹೇಳಬೇಕೆಂದರೆ ಪಾಂಡೇಶ್ವರದಲ್ಲಿರುವ ಎಕೊನಾಮಿಕ್ ಅಂಡ್ ನಾರ್ಕೋಟಿಕ್ಸ್ ಕ್ರೈಂ ಸ್ಟೇಷನ್ ನಲ್ಲಿ ASI ಕರ್ತವ್ಯ ನಿರ್ವಹಿಸುತ್ತಾ ಇದ್ದಾರೆ. ಲೇಖನ : ವಿಶು