Updated News From Kaup
ಬಂಟಕಲ್ಲು : ಗುರು ರಾಘವೇಂದ್ರ ಸ್ವಾಮಿಗಳ ಪೀಠಕ್ಕೆ ಪಂಚಲೋಹದ ವೃಂದಾವನ ಪ್ರಭಾವಳಿ ಸಮರ್ಪಣೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಮಂಗಲೋತ್ಸವ

Posted On: 13-01-2021 11:46AM
ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ ವತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ವೇದಮೂರ್ತಿ ಶ್ರೀ ನಾಗರಾಜ ಭಟ್ ಕಲ್ಯಾಲು ಇವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಮಂಗಲೋತ್ಸವ ಇಂದು (ಬುಧವಾರ) 92 ಹೇರೂರು, ಬಂಟಕಲ್ಲು ಇಲ್ಲಿ ನಡೆಯಲಿದೆ.

ಬೆಳಿಗ್ಗೆ 6:30ರಿಂದ ರಾಘವೇಂದ್ರ ಸುಪ್ರಭಾತ, 8ಕ್ಕೆ ವೃಂದಾವನ ಪ್ರಭಾವಳಿ ಸಮರ್ಪಣೆ, 10ಕ್ಕೆ ಸಾರ್ವಜನಿಕ ಸತ್ಯನಾರಾಯಣ ಪೂಜೆ, 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 12:30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಸಂಜೆ 4ರಿಂದ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ರಾತ್ರಿ 8ಕ್ಕೆ ಭಜನಾ ಮಂಗಲ, ಮಹಾ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

92 ಹೇರೂರು ಗ್ರಾಮದ ಅಡ್ವೆಗುತ್ತು ಮನೆತನದ ದಿ| ಮೆಣ್ಪ ಪ್ರಭುರವರ ಪುತ್ರ ಶ್ರೀನಿವಾಸ ಪ್ರಭು, ಪತ್ನಿ ಮತ್ತು ಮಕ್ಕಳು ಶ್ರೀ ರಾಘವೇಂದ್ರ ಸ್ವಾಮಿಗಳ ಪೀಠಕ್ಕೆ ಪಂಚಲೋಹದ ವೃಂದಾವನ ಪ್ರಭಾವಳಿಯನ್ನು ಸೇವೆಯ ರೂಪದಲ್ಲಿ ಮಂಗಳವಾರ ಸಲ್ಲಿಸಿದರು.
ಉಡುಪಿ ಜಿಲ್ಲೆಯಲ್ಲಿ ಜನವರಿ 19ಕ್ಕೆ ಹೋಟೆಲ್ ಕಾರ್ಮಿಕರ ಸಮಾವೇಶ

Posted On: 12-01-2021 05:32PM
ಸರಕಾರದ ಸವಲತ್ತುಗಳನ್ನು ಪಡೆಯುವ ಉದ್ದೇಶವನ್ನು ಹೊತ್ತು ಕರ್ನಾಟಕ ರಾಜ್ಯ ಕಾರ್ಮಿಕರ ಸಂಘ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ಹೋಟೆಲ್ ಕಾರ್ಮಿಕರ ಸಮಾವೇಶ ಇದೇ ಬರುವ 19ರಂದು ಬೆಳಿಗ್ಗೆ 11ಕ್ಕೆ ಅಮೃತ್ ಕನ್ವೆನ್ಷನ್ ಸೆಂಟರ್ ಮಾರಣಕಟ್ಟೆ, ಚಿತ್ತೂರು ಇಲ್ಲಿ ನಡೆಯಲಿದೆ.

ಅತಿಥಿಗಳಾಗಿ ಅಮೃತ್ ಕನ್ವೆನ್ಷನ್ ಸೆಂಟರ್ ನ ಪ್ರದೀಪ್ ಶೆಟ್ಟಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭಾ ಸಭಾಧ್ಯಕ್ಷರಾದ ಪ್ರತಾಪ್ ಚಂದ್ರ ಶೆಟ್ಟಿ, ಕುಂದಾಪುರ ತಾಲೂಕು ಎಂಎಲ್ಎ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕರಾದ ಸುಕುಮಾರ ಶೆಟ್ಟಿ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ವಕೀಲರಾದ ಜಯಚಂದ್ರ ಶೆಟ್ಟಿ, ಹೈದರಾಬಾದ್ ಹೋಟೆಲ್ ಉದ್ಯಮಿ ಕೃಷ್ಣಮೂರ್ತಿ ಮಂಜರ್ ಮಾರಣಕಟ್ಟೆ, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷರಾದ ಕಿರಣ್ ಹೆಗ್ಡೆ ಅಂಪಾರು ಭಾಗವಹಿಸಲಿದ್ದಾರೆ.
ಅಡ್ವೆ ವಾಮನ್ ಸಾಲಿಯಾನ್ ನಿಧನ

Posted On: 12-01-2021 05:16PM
ಅಲ್ಪಕಾಲದ ಅಸೌಖ್ಯದಿಂದ ಅಡ್ವೆ ವಾಮನ್ ಸಾಲಿಯಾನ್ ಇಂದು ನಿಧನರಾದರು. ದಕ್ಷಿಣ ಕನ್ನಡ ಜಿಲ್ಲಾ ರೌಡಿ ನಿಗ್ರಹ ದಳ, ಕರಾವಳಿ ಕಾವಲು ಪೊಲೀಸ್ ಹಾಗೂ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸೀರುತ್ತಾರೆ. ಮುಲ್ಕಿ ಠಾಣೆಯ ASI ಆಗಿ ನಿವೃತ್ತಿ ಹೊಂದಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು.
ಪಡುಬಿದ್ರಿಯಲ್ಲಿ ಎವಲ್ಯೂಷನ್ ಜಿಮ್ ಆಂಡ್ ಫಿಟ್ನೆಸ್ 14ರಂದು ಶುಭಾರಂಭ

Posted On: 12-01-2021 02:29PM
ಎವಲ್ಯೂಷನ್ ಜಿಮ್ ಆಂಡ್ ಫಿಟ್ನೆಸ್ ಇದರ ಎರಡನೇ ಶಾಖೆ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿಯ ಸಾಸ್ ಬಿಲ್ಡಿಂಗ್ ನ 2ನೇ ಮಹಡಿಯಲ್ಲಿ ಇದೇ ಬರುವ ಗುರುವಾರ ಬೆಳಗ್ಗೆ 11 ಗಂಟೆಗೆ ಶುಭಾರಂಭಗೊಳ್ಳಲಿದೆ.

ಮುಖ್ಯ ಅತಿಥಿಗಳಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ನೋಟರಿ ವಕೀಲರಾದ ಪದ್ಮರಾಜ್ ಆರ್., ಪಡುಬಿದ್ರಿ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ವೈ.ಸುಧೀರ್ ಕುಮಾರ್ ಭಾಗವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9535426679
ಗಿರಿಜಾ ಪೂಜಾರ್ತಿ ಕೆಂಚನಕೆರೆ ನಿಧನ

Posted On: 12-01-2021 02:01PM
ಕಾಪು : ಬಗ್ಗ ತೋಟ ಕುಟುಂಬಸ್ಥರಾದ ಗಿರಿಜಾ ಪೂಜಾರ್ತಿ ಕೆಂಚನಕೆರೆ (ಬಗ್ಗ ತೋಟ) ಇಂದು ಬೆಳಿಗ್ಗೆ ದೈವಾಧೀನರಾಗಿದ್ದಾರೆ.
ಕಾಪುವಿನಲ್ಲಿ ಶುಭಾರಂಭಗೊಳ್ಳಲಿದೆ ವಿನೂತನ ಶೈಲಿಯ ಹೇರ್ ಸ್ಟೂಡಿಯೋ

Posted On: 12-01-2021 01:15AM
ಕಾಪು ಮುಖ್ಯರಸ್ತೆಯಲ್ಲಿರುವ ಸ್ಮಾಲ್ ವರ್ಲ್ಡ್ ಕಟ್ಟಡದ ಶಾಪ್ ನಂ #126 ರಲ್ಲಿ ಇದೇ ಬರುವ ಜನವರಿ 14 ರಂದು ಯೂನಿಕ್ ಹೇರ್ ಸ್ಟೂಡಿಯೋ ಶುಭಾರಂಭಗೊಳ್ಳಲಿದೆ.
ಹೇರ್ ಕಟ್, ಬಿಯರ್ಡ್ ಟ್ರಿಮ್, ಬಾಡಿ ಸ್ಪಾ , ಸ್ಕಿನ್ ಕೇರ್ ಇನ್ನಿತರ ಸೇವೆಗಳು ಲಭ್ಯವಿರುತ್ತವೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಅಮಿತ್ ಸಾಲ್ಯಾನ್ - 9967483666
ಯುವ ಜನರ ಸ್ಫೂರ್ತಿ ಸ್ವಾಮಿ ವಿವೇಕಾನಂದರು

Posted On: 11-01-2021 10:51PM
ಸ್ವಾಮಿ ವಿವೇಕಾನಂದರ ಸ್ಫೂರ್ತಿದತ್ತವಾದ ನುಡಿಗಳನ್ನು ಕಂಡಾಗ ಅವರೆಷ್ಟು ಭರವಸೆಯನ್ನು ನಮ್ಮ ದೇಶದ ಯುವ ಜನಾಂಗದ ಮೇಲೆ ಹೊಂದಿದ್ದರು ಎಂಬುದು ಅರಿವಾಗುತ್ತದೆ. ನನ್ನ ಭರವಸೆಯೆಲ್ಲ ಇಂದಿನ ಯುವಪೀಳಿಗೆಯ ಮೇಲೆ ನಿಂತಿದೆ. ಯುವಜನರನ್ನು ಒಂದುಗೂಡಿಸಿ ಸಂಘಬದ್ಧರಾಗಿ ದುಡಿಯುವಂತೆ ಮಾಡಲು ನಾನು ಜನ್ಮತಾಳಿದ್ದೇನೆ. ಅವರ ವಾಣಿ ಯುವಜನರ ಮೇಲೆ ಅವರು ಇಟ್ಟ ನಂಬಿಕೆಗೆ ಸಾಕ್ಷಿಯಾಗಿದೆ. ಸ್ವಾಮಿ ವಿವೇಕಾನಂದರ ಸ್ಫೂರ್ತಿದತ್ತವಾದ ನುಡಿಗಳನ್ನು ನೋಡಿದರೆ ಅವರೆಷ್ಟು ಭರವಸೆಯನ್ನು ನಮ್ಮ ದೇಶದ ಯುವ ಜನಾಂಗದ ಮೇಲೆ ಹೊಂದಿದ್ದರು ಎಂಬುದು ಅರಿವಾಗುತ್ತದೆ. ಈ ಪಾಂಚಜನ್ಯ ಸದೃಶ ವಾಣಿಯು ಮೊಳಗಿ 158 ವರ್ಷಗಳೇ ಕಳೆದಿವೆ. ಆದರೆ ಈ ಭರವಸೆಯ ನುಡಿಗಳನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಅದೆಷ್ಟರ ಮಟ್ಟಿಗೆ ನಾವು ಸಫಲರಾಗಿದ್ದೇವೆ ಎಂಬುದು ಯೋಚಿಸಬೇಕಾದ ಸಂಗತಿ.
ನಮ್ಮ ಶಿಕ್ಷಣ ನಿಜವಾದ ಶಿಕ್ಷಣವಲ್ಲ ನಾವು ಯುವಜನಾಂಗಕ್ಕೆ ನೀಡುತ್ತಿರುವ ಶಿಕ್ಷ ಣ ನಿಜವಾದ ಅರ್ಥದಲ್ಲಿ ಶಿಕ್ಷ ಣವೇ ಅಲ್ಲ! ನಿಜವಾದ ವಿದ್ಯಾಭ್ಯಾಸವೇ ಅಲ್ಲ, ಬದಲಾಗಿ ಕೇವಲ ಹೊಟ್ಟೆಪಾಡಿಗೆ ಹಾಗೂ ಸ್ವಾರ್ಥ ಜೀವನಕ್ಕೆ ಸೀಮಿತವಾಗಿರುವ ವಿದ್ಯಾಭ್ಯಾಸ ಎನ್ನಬಹುದು. ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ನಿಜವಾದ ವಿದ್ಯೆ ಒಬ್ಬನನ್ನು ಸ್ವಾವಲಂಬಿಯಾಗಿ ಮಾಡಬೇಕು. ನಿಮಗೆ ಶಾಲೆ ಕಾಲೇಜುಗಳಲ್ಲಿ ದೊರೆಯುತ್ತಿರುವ ವಿದ್ಯೆಯಿಂದ ಅಜೀರ್ಣ ರೋಗಗ್ರಸ್ಥರ ಗುಂಪಿಗೆ ಸೇರಿರುವಿರಿ. ನೀವು ಕೇವಲ ಯಂತ್ರದಂತೆ ಕೆಲಸ ಮಾಡುತ್ತಾ ಶುದ್ಧ ಸೋಮಾರಿಗಳಾಗುವಿರಿ? ಎನ್ನುವ ಅವರ ಮಾತು ಇಂದಿಗೂ ಪ್ರಸ್ತುತ. ಸ್ವಾಮಿ ವಿವೇಕಾನಂದರ ಪ್ರಕಾರ 'ನಿಜವಾದ ವಿದ್ಯೆ ಎಂದರೆ ಸರ್ವರಲ್ಲಿಯೂ ಅಡಗಿರುವ ಆ ಚೈತನ್ಯವನ್ನು ಅರಿತು ಇಡೀ ವಿಶ್ವವೇ ನಮ್ಮದು' ಎಂಬ ಉದಾತ್ತ ಭಾವನೆಯಿಂದ 'ವಿಶ್ವಮಾನವ ತತ್ತ್ವ'ವನ್ನು ಅಳವಡಿಸಿಕೊಂಡು ಬಾಳುವುದಾಗಿದೆ'. ಸ್ವಾಮೀಜಿ ಅವರು ಶಿಕ್ಷ ಣದ ಬಗ್ಗೆ ಮತ್ತೊಂದು ಸಂದೇಶ ನೀಡುತ್ತಾರೆ......'ಶಿಕ್ಷ ಣವೆಂದರೆ ನಿಮ್ಮ ತಲೆಯಲ್ಲಿ ತುಂಬಿಕೊಂಡ ವಿಷಯ ಸಂಗ್ರಹವಲ್ಲ, ರಕ್ತಗತವಾಗದೆ ಅದು ಜೀವಾವಧಿ ಚೆಲ್ಲಾಡುತ್ತಿರುವುದು. ಜೀವನ ವಿಕಾಸಕ್ಕೆ ಸಹಾಯ ಮಾಡುವ ಪುರುಷ ಸಿಂಹರನ್ನು ಮಾಡುವ, ಶುದ್ಧ ಚಾರಿತ್ರ್ಯ ಸಂಪನ್ನರನ್ನಾಗಿ ಮಾಡುವ, ಶುದ್ಧ ಚಾರಿತ್ರ್ಯ ಸಂಪನ್ನರನ್ನಾಗಿ ಮಾಡುವ ಭಾವಗಳನ್ನು ರಕ್ತಗತ ಮಾಡಿಕೊಳ್ಳುವಂತಹ ಶಿಕ್ಷ ಣವಿರಬೇಕು'
'ಭಾರತದ ಮೇಲೆ ಸ್ವಾಮಿ ವಿವೇಕಾನಂದರಿಗಿದ್ದ ಅನುರಾಗ ಅತ್ಯಪಾರ. ಅವರ ಎದೆಬಡಿತದಲ್ಲಿ ಭಾರತ ಕೇಳಿ ಬರುತ್ತಿತ್ತು. ಅವರ ಧಮನಿ ಧಮನಿಗಳಲ್ಲಿ ಭಾರತ ಮಿಡಿಯುತ್ತಿತ್ತು. ಅವರ ಕನಸು ನನಸುಗಳೆಲ್ಲೆಲ್ಲಾ ಭಾರತವೇ ತುಂಬಿತ್ತು. ಅಷ್ಟೇ ಅಲ್ಲ, ಸ್ವತಃ ಅವರೇ ಭಾರತವಾಗಿ ಬಿಟ್ಟಿದ್ದರು. ಭಾರತದ ಸಾಕಾರ ಮೂರ್ತಿಯೇ ಅವರಾಗಿದ್ದರು. ಭಾರತಾಂಬೆಯ ಆಧ್ಯಾತ್ಮಿಕತೆ, ಪಾವಿತ್ರ್ಯತೆ, ಜ್ಞಾನ, ಶಕ್ತಿ ಮತ್ತು ಧ್ಯೇಯಗಳ ಶ್ರೇಷ್ಠತಮ ಲಾಂಛನವಾಗಿದ್ದರು ಅವರು. ಅವರು ಭಾರತವೇ ಆಗಿದ್ದರು' ಎನ್ನುತ್ತಾರೆ ಸೋದರಿ ನಿವೇದಿತಾ.
ನವ ಭಾರತ ನಿಮಿ೯ಸೋಣ ಯುವ ಜನಾಂಗ ಈ ಅಮೃತವಾಣಿಯನ್ನು ಆಲಿಸಿಯಾದರೂ ತಮ್ಮ ದೇಶಪ್ರೇಮ, ದೇಶಭಕ್ತಿಯನ್ನು ವೃದ್ಧಿಪಡಿಸಿಕೊಂಡು ದೇಶೋದ್ಧಾರಕ್ಕೆ ಕಂಕಣಬದ್ಧರಾಗಬೇಕಾದ ಪವಿತ್ರ ಸಂದರ್ಭವೇ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ. ಸ್ವಾಮಿ ವಿವೇಕಾನಂದರು ಈ ನಿಟ್ಟಿನಲ್ಲಿ ಯುವ ಜನತೆಗೆ ತಿಳಿಸಿದ ಸಿಂಹವಾಣಿ ಹೀಗಿದೆ; 'ನಮಗೆ ಬೇಕಾಗಿರುವುದು ಎಲ್ಲವನ್ನೂ ತ್ಯಾಗ ಮಾಡಿ ದೇಶಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸುವಂತಹ ಕೆಲವು ಮಂದಿ ಯುವಕರು...' ಎಂತಹ ಭರವಸೆಯ ನುಡಿಗಳಿವು. ಆದರೆ ದುರದೃಷ್ಟವಶಾತ್ ಈ ತೆರನಾದ ಯುವಶಕ್ತಿಯನ್ನು ನಾವು ಕಾಣುವುದು ವಿರಳ. ಸ್ವಾಮಿ ವಿವೇಕಾನಂದರು ದೇಶದ ಯುವ ಜನತೆಯ ಮೇಲೆ ಅಪಾರ ವಿಶ್ವಾಸವಿಟ್ಟಿದ್ದರು. ಆದರೆ ಆ ವಿಶ್ವಾಸವೆಲ್ಲಾ ಹುಸಿಯಾದಂತಿದೆ. ಬನ್ನಿ! ಭಾರತೀಯ ಯುವ ಜನತೆ, ಟೊಂಕಕಟ್ಟಿ ನವ ಭಾರತದ ನಿರ್ಮಾಣದ ಹಾದಿಯಲ್ಲಿ ಸಾಗೋಣ, ಈ ದೇಶವೇ ನಮ್ಮ ದೈವವಾಗಿರಲಿ. ಈ ದೇಶಕ್ಕೆ ನಾವು ಏನು ಬೇಕಾದರೂ ತ್ಯಜಿಸೋಣ! ಭಾರತಾಂಬೆಯನ್ನು ಸದೃಢಗೊಳಿಸೋಣ, ಇದೇ ನಮ್ಮ ಉದ್ದೇಶವಾಗಿರಲಿ, ದೇಶವಿರುವುದು ಯುವಕರ ಶಕ್ತಿಯಿಂದ ಎಂಬುದನ್ನು ಮರೆಯದಿರಿ. ನಮ್ಮ ಉದ್ದೇಶ ಸದುದ್ದೇಶವಾಗಿರಲಿ.ಭಾರತ ವನ್ನು ಜಗತ್ತಿನ ಶ್ರೇಷ್ಠ ದೇಶ ವಾಗಿ ಮಾಡೋಣ ಸ್ವಚ್ಚ ಭಾರತಕ್ಕಾಗಿ ಯುವ ಜನಾಂಗ ಒಂದಾಗಬೇಕಾಗಿದೆ. ಬದಲಾಗುವುದು ಈ ದೇಶ ನೀ ಬದಲಾದರೆ ಸರಿಯಾಗುವುದು ಸಮಾಜ ನೀ ಮೊದಲಾದರೆ. ಲೇಖನ :ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ
ನಾಟಕ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರಾದ ಭಾಸ್ಕರ್ ಮಣಿಪಾಲ

Posted On: 11-01-2021 06:00PM
ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ನೀಡುವ 2019 - 20ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಯನ್ನು ರಂಗನಟ, ಹಲವಾರು ಕಿರುಚಿತ್ರ, ಚಲನಚಿತ್ರಗಳಲ್ಲಿ ನಟಿಸಿರುವ ಭಾಸ್ಕರ್ ಮಣಿಪಾಲ ಅವರಿಗೆ ತುಮಕೂರು ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಪ್ರದಾನ ಮಾಡಲಾಯಿತು.
ತುಮಕೂರಿನ ಶ್ರೀ ಕ್ಷೇತ್ರ ಸಿದ್ದಗಂಗಾ ಮಠದ ಶ್ರೀ ಮನ್ನಿರಂಜನ ಪ್ರಣವಸ್ವರೂಪಿ ಸಿದ್ದಗಂಗಾ ಸ್ವಾಮಿಗಳು ಪ್ರಶಸ್ತಿ ಪ್ರದಾನ ಮಾಡಿದರು.
ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಪ್ರೊ. ಭೀಮಸೇನ ಆರ್, ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಬಿ. ಜ್ಯೋತಿ ಗಣೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಅವರಾಲು : 10ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಶನಿಪೂಜೆ

Posted On: 11-01-2021 10:44AM
ಕಾಪು ತಾಲೂಕಿನ ಪಲಿಮಾರು ಪಂಚಾಯತ್ ವ್ಯಾಪ್ತಿಯ ಅವರಾಲು, ಅಡ್ಕ ನಾಗ ಬ್ರಹ್ಮಲಿಂಗೇಶ್ವರ ಬ್ರಹ್ಮಸ್ಥಾನದ ಅಶ್ವತ್ಥ ಕಟ್ಟೆಯಲ್ಲಿ ಇದೇ ಬರುವ ಗುರುವಾರದಂದು 10ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಶನಿ ಪೂಜೆಯು ನಡೆಯಲಿದೆ.
ಬೆಳಿಗ್ಗೆ ಗಂಟೆ 8:30ಕ್ಕೆ ಶಿವಪ್ರಸಾದ್ ಭಜನಾ ಮಂಡಳಿಯವರಿಂದ ಭಜನೆ, 9ಕ್ಕೆ ಸತ್ಯನಾರಾಯಣ ಪೂಜೆ ಪ್ರಾರಂಭ, 12ಕ್ಕೆ ಪಾಂಡುರಂಗ ಭಜನಾ ಮಂಡಳಿ ಮಟ್ಟುಪಟ್ಣ ಹೆಜಮಾಡಿ ಇವರಿಂದ ಭಜನೆ, 1ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಮಧ್ಯಾಹ್ನ 3ರಿಂದ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ಪ್ರಾರಂಭವಾಗಲಿದ್ದು, ರಾತ್ರಿ 8ಕ್ಕೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರುದ್ಯೋಗಿಗಳಿಗೆ ಆಶಾಕಿರಣ ರುಡ್ಸೆಟ್ ಸಂಸ್ಥೆ : ಎಮ್ ಮಹೇಶ್ ಕುಮಾರ್ ಮಲ್ಪೆ

Posted On: 10-01-2021 10:59PM
ನಿರುದ್ಯೋಗಿಗಳಿಗೆ ಆಶಾಕಿರಣ ರುಡ್ಸೆಟ್ ಸಂಸ್ಥೆಯಾಗಿದೆ ಎಂದು ಈ ಸಂಸ್ಥೆ ಯಲ್ಲಿ 30 ವರ್ಷ ಗಳ ಹಿಂದೆ ತರಬೇತಿ ಪಡೆದ ಯಶಸ್ವೀ ಉದ್ಯಮಿ ಎಮ್ ಮಹೇಶ್ ಕುಮಾರ್ ಹೇಳಿದರು. ಅವರು ರುಡ್ಸೆಟ್ ಸಂಸ್ಥೆ ಬ್ರಹ್ಮಾವರ 30 ದಿನ ಗಳ ಕಂಪ್ಯೂಟರ್ ಅಕೌಂಟಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡಿದರು.

ಅವರು ಪ್ರಮಾಣ ಪತ್ರ ವನ್ನು ವಿತರಿಸಿ ಶಿಬಿರಾರ್ಥಿ ಗಳಿಗೆ ಮಾರ್ಗದರ್ಶನ ನೀಡಿದರು. ಸಂಸ್ಥೆಯ ನಿರ್ದೇಶಕರಾದ ಶ್ರೀ ಪಾಪ ನಾಯಕ್ ರವರು ಅಧ್ಯಕ್ಷತೆ ವಹಿಸಿದ್ದರು.

31 ಜನ ತರಬೇತಿ ಪಡೆದು ತಮ್ಮ ತಮ್ಮ ಅನಿಸಿಕೆ ಗಳನ್ನು ಹಂಚಿಕೊಂಡರು. ಹಿರಿಯ ಉಪನ್ಯಾಸಕರಾದ ಕರುಣಾಕರ ಜೈನ್ ರವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕರಾದ ಸಂತೋಷ ಶೆಟ್ಟಿ ವಂದಿಸಿದರು.