Updated News From Kaup
ಕಾಪು : ಶ್ರೀ ವಿಷ್ಣು ಮೊಬೈಲ್ಸ್ ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ಸರ್ವಿಸ್ ಸೆಂಟರ್ ನಾಳೆ ಶುಭಾರಂಭ

Posted On: 29-12-2020 02:09PM
ಕಾಪು ಸುಪ್ರಿಮ್ ಮೆಡಿಕಲ್ ಹತ್ತಿರದ ಜನಾರ್ದನ ಕಾಂಪ್ಲೆಕ್ಸ್ ನಲ್ಲಿ ನೂತನ ಶ್ರೀ ವಿಷ್ಣು ಮೊಬೈಲ್ಸ್ ಮೊಬೈಲ್ ಫೋನ್ ಸರ್ವಿಸ್ ಮತ್ತು ಎಲೆಕ್ಟ್ರಾನಿಕ್ ಸರ್ವಿಸ್ ಸೆಂಟರ್ ನಾಳೆ ಬೆಳಿಗ್ಗೆ 9 ಗಂಟೆಗೆ ಶುಭಾರಂಭಗೊಳ್ಳಲಿದೆ.
ಕಾಪುವಿನಲ್ಲಿ ಪ್ರಥಮ ಬಾರಿಗೆ ಪ್ರಸ್ತುತಪಡಿಸುತ್ತಿರುವ OCA ಲ್ಯಾಮಿನೇಷನ್ ಮಿಷಿನ್ (ಮೊಬೈಲ್ ಟಚ್ ಸ್ಕ್ರೀನ್ ಬದಲಾಯಿಸುವ ಯಂತ್ರ) ಇಲ್ಲಿಯ ವಿಶೇಷತೆಯಾಗಿದೆ.
ಇದಲ್ಲದೆ ಎಲ್ಲಾ ಕಂಪನಿಯ ಮೊಬೈಲ್ ಫೋನ್ ಗಳ ರಿಪೇರಿ, ಮೊಬೈಲ್ ಸಾಫ್ಟ್ವೇರ್ ಅಪ್ಡೇಟ್, ಲ್ಯಾಪ್‌ಟಾಪ್, ಕಂಪ್ಯೂಟರ್ ಸರ್ವಿಸ್ ಮತ್ತು ಸಾಫ್ಟ್ವೇರ್ ಅಪ್ಡೇಟ್, ಮೊಬೈಲ್ ಗಳ ಬಿಡಿಭಾಗಗಳು ಲಭ್ಯವಿದ್ದು, ಹೊಸ ಫೋನ್ ಗಳ ಮಾರಾಟ, ಸಿಮ್ ಸಂಪರ್ಕ, ರಿಚಾರ್ಜ್, ಡಿಶ್ ಟಿ. ವಿ ರಿಚಾರ್ಜ್ ಗಳು ಗ್ರಾಹಕರಿಗೆ ದೊರೆಯಲಿದೆ ಎಂದು ಮಾಲಕರಾದ ವಿಜಯ್ ಉಂಡಾರು ನಮ್ಮ ಕಾಪು ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.
ಅಸಹಾಯಕ ಮಹಿಳೆಯ ರಕ್ಷಿಸಿದ ಸಮಾಜ ಸೇವಕ ವಿಶು ಶೆಟ್ಟಿ

Posted On: 29-12-2020 12:24PM
ಕಾಪು : ಉಡುಪಿ ಜಿಲ್ಲೆಯ ಕಾಪು ರಾಷ್ಟ್ರೀಯ ಹೆದ್ದಾರಿಯ ನಡುವಿನ ಡಿವೈಡರ್ ನಲ್ಲಿ ಕಳೆದ ನಾಲ್ಕು ದಿನಗಳಿಂದ ರಾತ್ರಿ-ಹಗಲು ಮಲಗಿದ್ದ ಮನೋರೋಗಿ, ಅಪರಿಚಿತ ಮಹಿಳೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಮಹಿಳೆಯು ತಮಿಳು ಭಾಷೆಯವರಾಗಿದ್ದು ಸುಮಾರು ಐವತ್ತರ ಹರೆಯದವರಾಗಿದ್ದಾರೆ. ರಕ್ಷಣೆ ಕಾರ್ಯಾಚರಣೆಯ ಸಮಯದಲ್ಲಿ ಇಲಾಖಾ ಮಹಿಳಾ ಸಿಬ್ಬಂದಿಯು ದೊರೆಯದೇ ಇದ್ದುದರಿಂದ ಕಿದಿಯೂರು ಐರಿನ್ ಅಂದ್ರಾದೆಯವರು ಹಾಗೂ ಕಾಪು ಪೊಲೀಸರ ಸಹಾಯ ಪಡೆಯಲಾಯಿತು. ಮಹಿಳೆಯು ಗಲಾಟೆ ಮಾಡುವುದರ ಜೊತೆಗೆ ಹಲ್ಲೆಗೂ ಮುಂದಾಗಿದ್ದರು. ಬಹಳ ಸಮಯದ ಹೋರಾಟದ ಬಳಿಕ ಮಹಿಳೆಯನ್ನು ವಶಕ್ಕೆ ಪಡೆದು ವಿಶು ಶೆಟ್ಟಿಯವರು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದರು.
9 ಗಂಟೆಯಲ್ಲಿ ಸಂಪೂರ್ಣ ಕುರಾನ್ ಓದಿದ ಮುಹಮ್ಮದ್ ಮುಝಮ್ಮಿಲ್

Posted On: 29-12-2020 12:10PM
ಕಾಪು : ಕುರಾನ್ ಕಂಠಪಾಠ ಮಾಡಿದ 15ವರ್ಷದ ಬಾಲಕ ಮುಹಮ್ಮದ್ ಮುಝಮ್ಮಿಲ್ ಪವಿತ್ರ ಕುರಾನಿನ ಮೂವತ್ತು ಕಾಂಡವನ್ನು ಕೇವಲ 9 ಗಂಟೆಯಲ್ಲಿ ತನ್ನ ಉಸ್ತಾದರ ಮುಂದೆ ಓದಿ ಪೂರ್ತಿಗೊಳಿಸಿದ್ದಾರೆ. ಮೂಳೂರಿನ ಅಲ್ಇಹ್ಸಾನ್ ಹಿಫ್ಲ್ ವಿಭಾಗದ ವಿದ್ಯಾರ್ಥಿಯಾಗಿರುವ ಮುಝಮ್ಮಿಲ್, ಕೇವಲ ಒಂಬತೇ ತಿಂಗಳಲ್ಲಿ ಕುರಾನ್ (ಮೂವತ್ತು ಕಾಂಡವನ್ನು) ಸಂಪೂರ್ಣ ಕಂಠಪಾಠ ಮಾಡಿದ್ದನು. ಇತ್ತೀಚೆಗೆ ಮೂಳೂರು ಸುನ್ನೀ ಸೆಂಟರ್ನಲ್ಲಿ ನಡೆದ ವಿಶೇಷ ಮಜ್ಲಿಸ್ನಲ್ಲಿ ತನ್ನ ಗುರುಗಳಾದ ಹಾಫಿಲ್ ಹಾರಿಸ್ ಸಅದಿಯವರ ಮುಂದೆ 600 ಪುಟ, 114 ಅಧ್ಯಾಯಗಳ, 6666 ಶ್ಲೋಕಗಳಿರುವ ಕುರಾನ್ ತಪ್ಪು ಬಾರದಂತೆ ಓದಿ ಮುಗಿಸುವ ಮೂಲಕ ಗಮನಸೆಳೆದಿದ್ದಾನೆ.
ಬೆಳಿಗ್ಗೆ 6.30 ಕ್ಕೆ ಕುರಾನ್ ಪಠಣ ಆರಂಭಿಸಿದ ಮುಝಮ್ಮಿಲ್ ಊಟ, ತಿಂಡಿ ಹಾಗು ಅತ್ಯವಶ್ಯ ಕೆಲಸಕ್ಕೆ 4 ಗಂಟೆ ವಿನಿಯೋಗಿಸಿ ಸಂಜೆ 7.30ರ ವೇಳೆಗೆ ಪೂರ್ಣಗೊಳಿಸಿದ್ದಾನೆ. ಒಟ್ಟು 9ಗಂಟೆಯಲ್ಲಿ ತಾನು ಕಂಠಪಾಠ ಮಾಡಿದ ಸಂಪೂರ್ಣ ಕುರಾನನ್ನು ಪಠಿಸಿದ್ದಾನೆ. ಈ ಸಂದರ್ಭದಲ್ಲಿ ಪ್ರಾರಂಭದಿಂದ ಅಂತ್ಯದವರೆಗೆ ಒಮ್ಮೆಯೂ ಕುರಾನ್ ನೋಡಲು ಅವಕಾಶವಿರಲಿಲ್ಲ. ಕೊನೆಗೆ ಉಸ್ತಾದರವರ ಹಾಗೂ ಹಿಫ್ಲ್ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಖತಮ್ ಸಮಾಪನಗೊಳಿಸಲಾಯಿತು.
ಅಸಿಸ್ಟೆಂಟ್ ಮ್ಯಾನೇಜರ್ ಸಿದ್ದೀಕ್ ಸಅದಿ ಉಸ್ತಾದ್, ದಅವ ಕಾಲೇಜು ಮುಖ್ಯಸ್ಥರಾದ ಸ್ವಾಬಿರ್ ಸಅದಿ ಉಸ್ತಾದ್, ಇತರ ಸಿಬ್ಬಂದಿಗಳಾದ ಹಾಫಿಲ್ ಹಾರಿಸ್ ಸಅದಿ, ಹಾಫಿಲ್ ರಫೀಕ್ ನಿಝಾಮಿ, ಶಫೀಕ್ ಅಹ್ಸನಿ, ಹಸೀಬ್ ಅಹ್ಸನಿ ಹಾಗೂ ಸುಮಾರು ೨೭ ರಷ್ಟು ಹಿಫ್ಲ್ ವಿದ್ಯಾರ್ಥಿಗಳು ಹಾಜರಿದ್ದರು. ಖತ್ಮುಲ್ ಕುರಾನ್ ದುಆದೊಂದಿಗೆ ವಿದ್ಯಾರ್ಥಿಗೆ ಶುಭ ಹಾರೈಸಿ ಸನ್ಮಾನಿಸಲಾಯಿತು.
ಬಡ ಕುಟುಂಬದ ವಿದ್ಯಾರ್ಥಿ: ಬೋಳಿಯಾರ್ ಗ್ರಾಮದ ರಂತಡ್ಕ ನಿವಾಸಿ ಅಬ್ದುಲ್ ಅಝೀಝ್ ಉಸ್ತಾದರ ಪುತ್ರನಾದ ಮುಝಮ್ಮಿಲ್, ಆರ್ಥಿಕ ಮುಗ್ಗಟ್ಟಿನಿಂದ ಶಿಕ್ಷಣ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಮೂಳೂರು ಸುನ್ನೀ ಸೆಂಟರ್ ಸಂಸ್ಥೆಯ ಶರೀಅತ್ ಕಾಲೇಜಿನ ಪ್ರಿನ್ಸಿಪಾಲ್ ಅಳಕೆ ಮಜಲ್ ಮುಹಮ್ಮದ್ ಮುಸ್ಲಿಯಾರ್ ಅಲ್-ಖಾಸಿಮಿರವರು ವಿದ್ಯಾರ್ಥಿಯನ್ನು ಹಾಗೂ ಅವನೊಂದಿಗಿದ್ದ ಇಬ್ಬರು ಅಣ್ಣಂದಿರನ್ನು ಮೂಳೂರು ಸುನ್ನೀ ಸೆಂಟರ್ ಹಿಫ್ಳುಲ್ ಕುರಾನ್ ಕಾಲೇಜಿನಲ್ಲಿ ಸೇರಿಸಿದ್ದರು.
ಹೋಂ ಡಾಕ್ಟರ್ ಫೌಂಡೇಶನ್ : ಸೇವಾ ಕಾರ್ಯದೊಂದಿಗೆ ಕ್ರಿಸ್ಮಸ್ ಆಚರಣೆ.

Posted On: 29-12-2020 11:01AM
ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಸೇವಾ ಕಾಯ೯ಗಳ ಮೂಲಕ ಮಾದರಿ ಕ್ರಿಸ್ಮಸ್ ಆಚರಣೆ ಮಣಿಪಾಲದ ವಿಜಯನಗರ ಸ್ಲಂ ಬಡಾವಣೆಯಲ್ಲಿ ಡಿ.27ರಂದು ಆದಿತ್ಯವಾರ ನಡೆಯಿತು.
ಈ ಸಂದರ್ಭದಲ್ಲಿ ಬಡ ವಿಧವೆ ಮಹಿಳೆ ಕುಕ್ಕಿಹಳ್ಳಿಯ ಸುಜಾತ ಕುಟುಂಬಕ್ಕೆ ಮೂವತ್ತು ಸಾವಿರ ರೂಪಾಯಿ, ಉದರ ಸಂಬಂದಿ ವ್ಯಾಧಿಯಿಂದ ಬಳಲುತ್ತಿರುವ ಹೂಡೆಯ ಉಲ್ಲಾಸ್ ಅರುಣ್ ರವರಿಗೆ ಹದಿನೆಂಟು ಸಾವಿರ ರೂಪಾಯಿ, ಕ್ಯಾನ್ಸರ್ ಪೀಡಿತ ಮಗು ತ್ರಿಷಾ ಚಿಕಿತ್ಸೆಗೆ ಇಪ್ಪತ್ತು ಸಾವಿರ ರೂಪಾಯಿ ಕುಕ್ಕಿಹಳ್ಳಿಯ ಬಡ ವೃದ್ಧ ದಂಪತಿವಿಶಾಲಾಕ್ಷಿರವರಿಗೆ ಔಷದಕ್ಕಾಗಿ ಆರು ಸಾವಿರ ರೂಪಾಯಿ,ಸ್ಪಂದನ ಉಪ್ಪುರು ಮಾನಸಿಕ ವಿಕಲ ಚೇತನ ರಿಗೆ ಏಳು ಸಾವಿರ ರೂಪಾಯಿ,ಬೆಳ್ಳಂಪಳ್ಳಿಯ ಸುಜಾತ ಕುಟುಂಬಕ್ಕೆ ಸೇವ್ ಲೈಫ್ ವತಿಯಿಂದ 60 ಸಾವಿರ ರೂಪಾಯಿ ನೆರವು ನೀಡಲಾಯಿತು.
ಈ ಕಾಯ೯ಕ್ರಮದಲ್ಲಿ ಸೇವ್ ಲೈಫ್ ಫೌಂಡೇಶನ್ ನ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ರವರನ್ನು ಗೌರವಿಸಲಾಯಿತು.ವೇದಿಕೆಯಲ್ಲಿ ಆದಾಯ ತೆರಿಗೆ ನಿವೃತ್ತ ಅಧಿಕಾರಿ ಕರುಣಾಕರ, ಡಾII ಶಶಿಕಿರಣ್ ಶೆಟ್ಟಿ, ಡಾII ಸುಮಾ ಶೆಟ್ಟಿ, ಬಂಗಾರಪ್ಪ, ರಾಘವೇಂದ್ರ ಪೂಜಾರಿ, ಸ್ಪಂದನ ವಿಶೇಷ ಶಾಲೆಯ ಪ್ರಮುಖ ಜನಾಧ೯ನ್ ಮುಂತಾದವರಿದ್ದರು.
ಸಭಾ ಕಾಯ೯ಕ್ರಮದ ಬಳಿಕ ಸ್ಪಂದನ ವಿಶೇಷ ಶಾಲೆಯ ನಿವಾಸಿಗಳಿಂದ ಅದೇ ರೀತಿ ಸ್ಲo ನಿವಾಸಿ ಮಕ್ಕಳಿಂದ ವಿವಿಧ ವಿನೋದಾವಳಿ ಕಾಯ೯ಕ್ರಮ ನಡೆಯಿತು. ಡಾII ಶಶಿಕಿರಣ್ ಶೆಟ್ಟಿ ಪ್ರಸ್ತಾವನೆಗೈದರು. ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು.
ಇನ್ನಂಜೆ : ಕುಟುಂಬವೊಂದಕ್ಕೆ ರೋಟರಿ, ಯುವಕ ಮಂಡಲ, ದಾನಿಗಳ ನೆರವಿನಿಂದ ಸ್ನಾನಗೃಹ, ಶೌಚಾಲಯ ನಿರ್ಮಾಣ

Posted On: 28-12-2020 12:31PM
ಇನ್ನಂಜೆ ಗ್ರಾಮದ ಕಲ್ಯಾಲುವಿನಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬವೊಂದಕ್ಕೆ ಸ್ನಾನಗೃಹ ಮತ್ತು ಶೌಚಾಲಯ ಅವಶ್ಯಕತೆಯಿದ್ದು ರೋಟರಿ ಸಮುದಾಯ ದಳ ಇನ್ನಂಜೆ ಇದರ ವತಿಯಿಂದ ದಾನಿಗಳ ಸಹಕಾರದಿಂದ ಶೌಚಾಲಯ ನಿರ್ಮಾಣವಾಗಿದ್ದು, ಅದನ್ನು ರೋಟರಿ ಸಮುದಾಯ ದಳ (Rcc) ಇನ್ನಂಜೆ ಮತ್ತು ಯುವಕ ಮಂಡಲ (ರಿ.) ಇನ್ನಂಜೆ ಹಾಗೂ ದಾನಿಗಳ ಸಹಕಾರದಿಂದ ಇಂದು ಬೆಳಿಗ್ಗೆ 8 ಗಂಟೆಗೆ ಉದ್ಘಾಟನೆ ಮಾಡುವುದರ ಮೂಲಕ ಮನೆಯವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಉದ್ಘಾಟಕರಾಗಿ ರೋಟರಿ ಡಿಸ್ಟ್ರಿಕ್ ಗವರ್ನರ್ ನವೀನ್ ಅಮೀನ್ ಶಂಕರಪುರ ಆಗಮಿಸಿದ್ದರು, ಅಧ್ಯಕ್ಷರಾದ Rcc ಪ್ರಶಾಂತ್ ಶೆಟ್ಟಿ ಮಂಡೇಡಿ, ರೋಟರಿಯನ್ ಮಾಲಿನಿ ಶೆಟ್ಟಿ ಇನ್ನಂಜೆ, ಯುವಕ ಮಂಡಲದ ಅಧ್ಯಕ್ಷರಾದ ದಿವೇಶ್ ಶೆಟ್ಟಿ ಕಲ್ಯಾಲು, Rcc ಗಣೇಶ್ ಆಚಾರ್ಯ, Rcc.ಜೇಸುದಾಸ್, Rcc.ಸಂದೀಪ್, Rcc.ವಜ್ರೇಶ್, Rcc. ವಿಕ್ಕಿ ಪೂಜಾರಿ ಮಡುಂಬು ಮತ್ತು ಮನೆಯವರು ಉಪಸ್ಥಿತರಿದ್ದರು.
ಎರ್ಮಾಳ್ : ಕಾರು ಡಿಕ್ಕಿಯಾಗಿ ಬಸ್ ಗಾಗಿ ಕಾಯುತ್ತಿದ್ದ ಇಬ್ಬರು ಮೃತ್ಯು

Posted On: 25-12-2020 08:40PM
ಕಾಪು: ರಸ್ತೆ ಪಕ್ಕದಲ್ಲಿ ನಿಂತಿದ್ದ ಇಬ್ಬರಿಗೆ ಕಾರು ಡಿಕ್ಕಿಯಾಗಿ ಇಬ್ಬರೂ ಸಾವನ್ನಪ್ಪಿದ ಘಟನೆ ಪಡುಬಿದ್ರಿ ಸಮೀಪದ ಎರ್ಮಾಳಿನಲ್ಲಿ ನಡೆದಿದೆ.
ಮೃತರನ್ನು ಎರ್ಮಾಳ್ ನಿವಾಸಿ ಸಂಜೀವ ದೇವಾಡಿಗ (45) ಮತ್ತು ಉತ್ತರ ಪ್ರದೇಶ ಮೂಲದ ಅರವಿಂದ್ (22) ಎಂದು ಗುರುತಿಸಲಾಗಿದೆ.
ಉಡುಪಿ ಕಡೆಯಿಂದ ಮಂಗಳೂರಿನತ್ತ ಚಲಿಸುತ್ತಿದ್ದ ಮಾರುತಿ ಅಲ್ಟೋ ಕಾರು ರಾಷ್ಟ್ರೀಯ ಹೆದ್ದಾರಿ 66ರ ತೆಂಕ ಎರ್ಮಾಳ್ ಸರಕಾರಿ ಶಾಲೆ ಮುಂಭಾಗದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಇಬ್ಬರೂ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಧಾವಿಸಿ ತನಿಖೆ ನಡೆಸುತ್ತಿದ್ದಾರೆ.
ಪಾಂಗಾಳ : ಮೂರು ಹೆಬ್ಬಾವುಗಳ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಯುವಕರ ತಂಡ

Posted On: 25-12-2020 01:46PM
ಕಾಪು : ಪಾಂಗಾಳದ ಮನೆಯ ಕೊಟ್ಟಿಗೆಯಲ್ಲಿ ಅವಿತುಕೊಂಡಿದ್ದ ಮೂರು ಹೆಬ್ಬಾವುಗಳನ್ನು ಶಿವಾನಂದ ಪೂಜಾರಿ ಯಾನೆ ಮುನ್ನ ಕಾಪು ನೇತೃತ್ವದ ತಂಡ ಗುರುವಾರ ಸಂಜೆ ಸೆರೆ ಹಿಡಿದು, ರಕ್ಷಿಸಿದೆ.

ಪಾಂಗಾಳ ಗುಡ್ಡೆ ನಿವಾಸಿ ಆಲ್ವಿನ್ ಪ್ರಕಾಶ್ ಎಂಬವರ ಮನೆಯ ದನದ ಹಟ್ಟಿಯಲ್ಲಿ ಹೆಬ್ಬಾವು ಇರುವುದನ್ನು ಗಮನಿಸಿದ ಮನೆಯವರು ಈ ಬಗ್ಗೆ ಹಾವು ಹಿಡಿಯುವುದರಲ್ಲಿ ನಿಸ್ಸೀಮರಾಗಿರುವ ಶಿವಾನಂದ್ ಕಾಪು ಅವರಿಗೆ ಮಾಹಿತಿ ನೀಡಿದ್ದರು.

ಹೆಬ್ಬಾವು ಇರುವ ಬಗ್ಗೆ ಮಾಹಿತಿ ಪಡೆದ ಶಿವಾನಂದ್ ಯಾನೆ ಮುನ್ನ ಕಾಪು, ಮಾಧವ ಪೂಜಾರಿ, ಸತೀಶ್, ಸಂದೀಪ್, ಉಮೇಶ್, ಪ್ರಕಾಶ್ ಅಲ್ವಿನ್, ಜಾರ್ಜ್ ಮತ್ತು ರವಿ ಬಿಂದಾಸ್ ಜೊತೆ ಸೇರಿ ಅಲ್ವಿನ್ ಅವರ ಮನೆಗೆ ಭೇಟಿ ನೀಡಿ ಮೂರೂ ಹೆಬ್ಬಾವುಗಳನ್ನು ರಕ್ಷಿಸಿದ್ದಾರೆ.

ಹೆಬ್ಬಾವುಗಳನ್ನು ಸುರಕ್ಷಿತವಾಗಿ ಸೆರೆ ಹಿಡಿದ ಬಳಿಕ ಅರಣ್ಯ ಇಲಾಖೆಯ ಸಿಬಂದಿಗಳ ಸುಪರ್ದಿಗೆ ಒಪ್ಪಿಸಲಾಗಿದೆ.
ಕಟಪಾಡಿಯ ಬಾಲಕನಿಂದ ಪೇಪರ್ ಕಪ್ ಕ್ರಿಸ್ಮಸ್ ನಕ್ಷತ್ರ

Posted On: 23-12-2020 10:26PM
ವಿಶೇಷ ಸಂದರ್ಭಗಳಲ್ಲಿ ಜಾದೂ, ಕ್ರಾಫ್ಟ್, ಚಿತ್ರಕಲೆಯ ಮೂಲಕ ಏನಾದರೊಂದು ರಚಿಸುವ ಹೊಯ್ಸಳ ಪ್ರಶಸ್ತಿ ವಿಜೇತ ಬಾಲ ಜಾದೂಗಾರ ಕಟಪಾಡಿಯ ಪ್ರಥಮ್ ಕಾಮತ್ ಈ ಬಾರಿಯ ಕ್ರಿಸ್ಮಸ್ ಗೆ 3 ಅಡಿ ಎತ್ತರದ ಸುಮಾರು 400 ಪೇಪರ್ ಕಪ್ ಬಳಸಿ ವಿಶೇಷವಾದ ಕ್ರಿಸ್ಮಸ್ ನಕ್ಷತ್ರವೊಂದನ್ನು ತಯಾರಿಸಿದ್ದಾರೆ.
ಸಮಾಜಕ್ಕೆ ಮಾದರಿಯಾಗಿರುವ ಮಾಧವರಿಗೆ ಗೌರವ

Posted On: 23-12-2020 10:20PM
ಉಡುಪಿ : ಪೋಲಿಯೋ ಪಿಡಿತರಾಗಿ ಎರಡೂ ಕಾಲಿನ ಸ್ವಾಧೀನ ಕಳೆದುಕೊಂಡರೂ ಎದೆಗುಂದದೆ ಕಳೆದ 34 ವಷ೯ಗಳಿಂದ ಕೊರಂಗ್ರಪಾಡಿಯಲ್ಲಿ ಸೈಕಲ್ ರಿಪೇರಿ ಅಂಗಡಿ ನಡೆಸಿಕೊಂಡು ಮಾದರಿಯಾಗಿ ಜೀವನ ಸಾಗಿಸುತ್ತಿರುವ ಮಾಧವ ಕಾಂಚನ್ ರವರಿಗೆ ಸಕ್ಷಮ ಉಡುಪಿ ವತಿಯಿಂದ ವಿಶ್ವ ವಿಶೇಷ ಚೇತನರ ದಿನದ ಗೌರವ ಸಲ್ಲಿಸಲಾಯಿತು.
ಡಿ.23ರಂದು ಅವರ ಸೈಕಲ್ ಅಂಗಡಿಯಲ್ಲಿ ನಡೆದ ಕಾಯ೯ಕ್ರಮದಲ್ಲಿ ಮಾತನಾಡಿದ ಸಮಾಜ ಸೇವಕ ವಿಶ್ವ ಸಂಸ್ಕೃತಿ ಪ್ರತಿಷ್ಟಾನದ ಗೌರವ ಅಧ್ಯಕ್ಷ ವಿಶ್ವನಾಥ್ ಶೆಣ್ಯ್ ಶ್ರೀಯುತರು ಪೋಲಿಯೋ ಪಿಡಿತರಾಗಿ ಕಾಲಿನ ಸ್ವಾಧೀನ ಕಳೆದುಕೊಂಡರೂ ಯಾರಿಗೂ ಭಾರವಾಗದೆ ಮಾದರಿಯಾದ ಜೀವನ ಸಾಗಿಸುತ್ತಿದ್ದಾರೆ.ಸಮಾಜದಲ್ಲಿ ಎಲ್ಲವೂ ಇದ್ದು ಕೆಲಸ ಮಾಡಿದೆ ಜೀವನ ದೂಡುವ ಜನರು ಇವರ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಎಂದರು.
ಕಾಯ೯ಕ್ರಮದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಪಾಂಡುರಂಗ ಶ್ಯಾನುಭಾಗ್, ಸ್ಪಂದನ ವಿಶೇಷ ಶಾಲೆಯ ಪ್ರಾಂಶುಪಾಲ ಜನಾಧ೯ನ್, ಸಕ್ಷಮಾ ಅಧ್ಯಕ್ಷೆ ಲತಾ ಭಟ್, ಕಾಯ೯ದಶಿ೯ ರಾಘವೇಂದ್ರ ಪ್ರಭು ಕವಾ೯ಲು, ಸ್ಥಳೀಯರು ಉಪಸ್ಥಿತರಿದ್ದರು.
ಕಂದನ ಸಹಾಯಕ್ಕಾಗಿ ವೇಷಧರಿಸಿದ ಮಹಾಗಣಪತಿ ಸೇವಾ ಟ್ರಸ್ಟ್ ಸದಸ್ಯರು

Posted On: 22-12-2020 02:43PM
ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಅಡ್ಯಾರ್ ಪದವಿನ ಸುರೇಶ್ ಹಾಗೂ ಅಂಬಿಕಾ ದಂಪತಿಯ 4 ವರ್ಷದ ಪುಟ್ಟ ಕಂದ ದರ್ಶನ್ ನ ಚಿಕಿತ್ಸೆಗೆ ಸರಿಸುಮಾರು ಹದಿನೈದು ಲಕ್ಷ ರೂಪಾಯಿಯ ಅಗತ್ಯವಿದ್ದು ದಂಪತಿಯ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವುದು.

ಸಂತ್ರಸ್ತರ ಅಳಲನ್ನು ಮನಗಂಡು ಮಹಾಗಣಪತಿ ಸೇವಾ ಟ್ರಸ್ಟ್ ನ ಸದಸ್ಯರು ಶಿಬರೂರು ಜಾತ್ರೆಯಲ್ಲಿ ಉರಿ ಬಿಸಿಲಿನ ಬೇಗೆಯ ನಡುವೆಯೂ ಮಹಿಷಾಸುರನ ವೇಷಧರಿಸಿ ದಾನಿಗಳಿಂದ ಸಹಾಯಹಸ್ತವನ್ನು ಚಾಚಿದರು. ಇವರ ಈ ಸೇವಾ ಕಾರ್ಯ ಇತರರಿಗೂ ಮಾದರಿ.