Updated News From Kaup

ಬೆಂಗಳೂರು : ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದ ಉಡುಪಿ ಜಿಲ್ಲಾಧ್ಯಕ್ಷರಾದ ಎಮ್. ಮಹೇಶ್ ಕುಮಾರ್ ಗೆ ಸನ್ಮಾನ

Posted On: 20-01-2021 09:37PM

ಬೆಂಗಳೂರು ಪ್ರಿಂಟೇಕ್ ಪಾರ್ಕ್ ಉದ್ಘಾಟನಾ ಸಮಾರಂಭ ದಲ್ಲಿ ಕರ್ನಾಟಕ ಸ್ಟೇಟ್ ಪ್ರಿಂಟರ್ಸ್ ಅಸೋಸಿಯೇಷನ್ ಬೆಂಗಳೂರು ಇವರಿಂದ ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ (ರಿ.) ಉಡುಪಿ ಜಿಲ್ಲಾಧ್ಯಕ್ಷರಾದ ಎಮ್. ಮಹೇಶ್ ಕುಮಾರ್ ರವರನ್ನು ಪ್ರಿಂಟಕ್ ಪಾರ್ಕ್ ಅಧ್ಯಕ್ಷರಾದ ಸಿ. ಆರ್. ಜನಾರ್ದನ ಹಾಗೂ ಕರ್ನಾಟಕ ಸ್ಟೇಟ್ ಪ್ರಿಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾದ ಅಶೋಕ್ ಕುಮಾರ್ ರವರು ಸನ್ಮಾನ ಮಾಡಿದರು.

ವೇದಿಕೆಯಲ್ಲಿ ಅಶೋಕ್ ಶೆಟ್ಟಿ. ರಮೇಶ್ ತಿಂಗಳಾಯ. ಶಿವರಾಮ್ ಆಚಾರ್ಯ. ವಿವೇಕಾನಂದ ಕಾಮತ್. ದಿನೇಶ್ ಆಚಾರ್ಯ. ನಾಗರಾಜ್ ಸುದರ್ಶನ್.ರಾಮಚಂದ್ರ ಉಪಾಧ್ಯ. ಅಬ್ದುಲ್ ಹಮೀದ್. ವಾಸುದೇವ ಕಾಮತ್. ಭುವನೇಂದ್ರ. ಪದ್ಮನಾಭ. ಸುಧೀರ್ ಡಿ ಬಂಗೇರ. ಮೋಹನ್ ಶೆಟ್ಟಿಗಾರ್.ಉದಯ್ ಅಬ್ದುಲ್ ಖಲೀಲ್ ಉಪಸ್ಥಿತರಿದ್ದರು.

ಸಚಿವ ಕೋಟ ವಿರುದ್ಧ ಕಿಡಿಗೇಡಿಗಳ ಅಂತರ್ಜಾಲ ಅಪಪ್ರಚಾರಕ್ಕೆ ವ್ಯಾಪಕ ಖಂಡನೆ

Posted On: 20-01-2021 08:50PM

ಕೋಟ: ದ.ಕ ಜಿಲ್ಲಾಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಅವಹೇಳನ ಬರಹವನ್ನು ಫೇಸ್‌ಬುಕ್‌ ಖಾತೆಯಲ್ಲಿ ಹರಿಬಿಟ್ಟ ಅನಿಲ್ ಕುಮಾರ್ ಶೆಟ್ಟಿ ಎನ್ನುವವನ ವಿರುದ್ಧ ವ್ಯಾಪಕ ಟೀಕೆ ಹಾಗೂ ಖಂಡನೆ ವ್ಯಕ್ತವಾಗಿದ್ದು ಅದರಂತೆ ಬುಧವಾರ ಕೋಟ ಶ್ರೀ ನಾರಾಯಣ ಗುರು ಸೇವಾ ಸಂಘ ಆಕ್ರೋಶ ವ್ಯಕ್ತಪಡಿಸಿ ಕೋಟ ಆರಕ್ಷಕ ಠಾಣೆಗೆ ತೆರಳಿ ಠಾಣಾಧಿಕಾರಿ ಸಂತೋಷ್ ಬಿ.ಪಿ ಇವರಿಗೆ ದೂರು ನೀಡಿದೆ.

ಈ ಬಗ್ಗೆ ಶೀಘ್ರ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಚಿವ ಕೋಟ ಈವರೆಗೆ ರಾಜ್ಯದಲ್ಲೆ ಸಭ್ಯ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದಾರೆ. ಅಂತವರ ಬಗ್ಗೆ ಇಲ್ಲಸಲ್ಲದ ಆರೋಪ ಅವಹೇಳನ ಸಮುದಾಯ ಅಥವಾ ಅವರ ಅಭಿಮಾನಿಗಳು ಸಹಿಸಲ್ಲ ಈ ರೀತಿಯ ಬರಹಯುಕ್ತ ಪೋಸ್ಟರ್ ಇನ್ನು ಮುಂದೆಯೂ ಯಾರ ಬಗ್ಗೆಯೂ ಮಾಡಕೂಡದು ಆ ರೀತಿಯ ಶಿಕ್ಷೆ ವಿಧಿಸಬೇಕು ಎಂದು ಸಂಘದ ಅಧ್ಯಕ್ಷ ಜಿ.ಸದಾನಂದ ಪೂಜಾರಿ ತಮ್ಮ ಆಕ್ರೋಶದಲ್ಲಿ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಬಿಲ್ಲವ,ಕಾರ್ಯದರ್ಶಿ ಮನೋಹರ್ ಪೂಜಾರಿ, ಯುವ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ,ಸಂತೋಷ್ ಪೂಜಾರಿ ತೆಕ್ಕಟ್ಟೆ ಉಪಸ್ಥಿತರಿದ್ದರು.

ಸಚಿವ ಕೋಟ ವಿರುದ್ಧ ಕಿಡಿಗೇಡಿಗಳ ಅಂತರ್ಜಾಲ ಅಪಪ್ರಚಾರಕ್ಕೆ ವ್ಯಾಪಕ ಖಂಡನೆ

Posted On: 20-01-2021 08:50PM

ಕೋಟ: ದ.ಕ ಜಿಲ್ಲಾಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಅವಹೇಳನ ಬರಹವನ್ನು ಫೇಸ್‌ಬುಕ್‌ ಖಾತೆಯಲ್ಲಿ ಹರಿಬಿಟ್ಟ ಅನಿಲ್ ಕುಮಾರ್ ಶೆಟ್ಟಿ ಎನ್ನುವವನ ವಿರುದ್ಧ ವ್ಯಾಪಕ ಟೀಕೆ ಹಾಗೂ ಖಂಡನೆ ವ್ಯಕ್ತವಾಗಿದ್ದು ಅದರಂತೆ ಬುಧವಾರ ಕೋಟ ಶ್ರೀ ನಾರಾಯಣ ಗುರು ಸೇವಾ ಸಂಘ ಆಕ್ರೋಶ ವ್ಯಕ್ತಪಡಿಸಿ ಕೋಟ ಆರಕ್ಷಕ ಠಾಣೆಗೆ ತೆರಳಿ ಠಾಣಾಧಿಕಾರಿ ಸಂತೋಷ್ ಬಿ.ಪಿ ಇವರಿಗೆ ದೂರು ನೀಡಿದೆ.

ಈ ಬಗ್ಗೆ ಶೀಘ್ರ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಚಿವ ಕೋಟ ಈವರೆಗೆ ರಾಜ್ಯದಲ್ಲೆ ಸಭ್ಯ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದಾರೆ. ಅಂತವರ ಬಗ್ಗೆ ಇಲ್ಲಸಲ್ಲದ ಆರೋಪ ಅವಹೇಳನ ಸಮುದಾಯ ಅಥವಾ ಅವರ ಅಭಿಮಾನಿಗಳು ಸಹಿಸಲ್ಲ ಈ ರೀತಿಯ ಬರಹಯುಕ್ತ ಪೋಸ್ಟರ್ ಇನ್ನು ಮುಂದೆಯೂ ಯಾರ ಬಗ್ಗೆಯೂ ಮಾಡಕೂಡದು ಆ ರೀತಿಯ ಶಿಕ್ಷೆ ವಿಧಿಸಬೇಕು ಎಂದು ಸಂಘದ ಅಧ್ಯಕ್ಷ ಜಿ.ಸದಾನಂದ ಪೂಜಾರಿ ತಮ್ಮ ಆಕ್ರೋಶದಲ್ಲಿ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಬಿಲ್ಲವ,ಕಾರ್ಯದರ್ಶಿ ಮನೋಹರ್ ಪೂಜಾರಿ, ಯುವ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ,ಸಂತೋಷ್ ಪೂಜಾರಿ ತೆಕ್ಕಟ್ಟೆ ಉಪಸ್ಥಿತರಿದ್ದರು.

ಮಂಗಳೂರು ಮಡಗಾಂವ್ ಪ್ಯಾಸೆಂಜರ್ ರೈಲು ಪುನರಾರಂಭಿಸುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ

Posted On: 18-01-2021 09:58PM

ಮಂಗಳೂರು ಮಡಗಾಂವ್ ಪ್ಯಾಸೆಂಜರ್ ರೈಲು ಸ್ಥಗಿತಗೊಂಡು 9 ತಿಂಗಳು ಕಳೆದಿದ್ದು ಕರಾವಳಿ ಕರ್ನಾಟಕ ಭಾಗದ ರೈತರು, ಆರ್ಥಿಕವಾಗಿ ಹಿಂದುಳಿದವರು ಹಾಗೂ ಸಣ್ಣ ವ್ಯಾಪಾರಿಗಳ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ.

ಸಾಮಾನ್ಯ ಜನರ ಹಿತದೃಷ್ಟಿಯಿಂದ ಈ ರೈಲನ್ನು ಅತಿ ಶೀಘ್ರದಲ್ಲಿ ಪುನರಾರಂಭಗೊಳಿಸಲು ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ ಕೆ. ರಘುಪತಿ ಭಟ್, ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ಜಿ. ನಾಯಕ್, ಜಿಲ್ಲಾ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ತಾಲೂಕು ಸಂಯೋಜಕರುಗಳಾದ ಜಗದೀಶ್ ಶೆಟ್ಟಿ, ಉದಯ ನಾಯ್ಕ್ ಉಪಸ್ಥಿತರಿದ್ದರು.

ಸಹಸ್ರ ಪೂರ್ಣ ಚಂದ್ರ ದರ್ಶನ ಹಾಗೂ ಕನಕಾಭಿಷೇಕ ಧಾರ್ಮಿಕ ಕಾರ್ಯಕ್ರಮದಲ್ಲಿ ಗಿಡಗಳ ವಿತರಣೆ

Posted On: 18-01-2021 06:32PM

ಪಡುಬಿದ್ರಿ : ಇಲ್ಲಿಯ ಗಂಗೂ ಹೊಸಮನೆಯ ಪಿ.ಎಚ್.ಪಾರ್ಥಸಾರಥಿ - ಶ್ರೀಮತಿ ಶಾಂತಾ ಪಾರ್ಥಸಾರಥಿ ಅವರು ತಮ್ಮ 'ಸಹಸ್ರ ಪೂರ್ಣ ಚಂದ್ರ ದರ್ಶನ ಹಾಗೂ ಕನಕಾಭಿಷೇಕ' ಧಾರ್ಮಿಕ ಕಾರ್ಯಕ್ರಮದಲ್ಲಿ ಮುನ್ನೂರು ವಿವಿಧ ಜಾತಿಯ ಗಿಡಗಳನ್ನು ವಿತರಿಸಿ ತಮ್ಮ ಪರಿಸರ ಪ್ರೀತಿಯನ್ನು ಮೆರೆದರು.

ಭಾರತೀಯ ಕಿಸಾನ್ ಸಂಘದ ಪಡುಬಿದ್ರಿ ವಿಭಾಗದ ಮಾಜಿ ಅಧ್ಯಕ್ಷರಾಗಿದ್ದ ಪಾರ್ಥಸಾರಥಿಯವರು ಕಿಸಾನ್ ಸಹಜ ಪರಿಸರ ರಕ್ಷಣೆ - ಪರಿಸರ ಬೆಳವಣಿಗೆಯ ಕಾಳಜಿವುಳ್ಳವರಾಗಿದ್ದು ಬಂಧು ಬಾಂಧವರು ,ಅಭಿಮಾನಿಗಳು ,ಸಮಾಜದ ಗಣ್ಯರು ಭಾಗವಹಿಸುವ ಈ ಸಂದರ್ಭವನ್ನು ಸಸಿಗಳ ವಿತರಣೆಗೆ ಬಳಸಿಕೊಂಡಿದ್ದು ಧಾರ್ಮಿಕ ಕಾರ್ಯಕ್ರಮದಲ್ಲಿ ಪರಿಸರ ರಕ್ಷಣೆ ಅಭಿಯಾನದ ಅಳವಡಿಕೆಯ ಸಾಧ್ಯತೆಯನ್ನು ಸ್ವತಃ ಕಾರ್ಯಗತಗೊಳಿಸಿ ಕಿರಿಯರಿಗೆ ಮಾದರಿಯಾದರು.

ವೇ.ಮೂ. ಶ್ರೀನಿವಾಸ ಭಟ್ ಅವರಿಗೆ ಮೊದಲು ಪಾರಿಜಾತ ಹೂವಿನ ಗಿಡವನ್ನು ವಿತರಿಸಿ ಗಿಡಗಳನ್ನು ವಿತರಿಸುವ ಪ್ರಕ್ರಿಯೆಆರಂಭಿಸಲಾಯಿತು .ಭಾರತ ಕಿಸಾನ್ ಸಂಘದ ಮಾಜಿ ಕಾರ್ಯದರ್ಶಿ ಸದಾಶಿವ ಆಚಾರ್ಯ ಅವರು ಉಪಸ್ಥಿತರಿದ್ದರು.ವಿಘ್ನೇಶ ಕುಮಾರ್ ,ಸಂಪತ್ ಕುಮಾರ್, ಮತ್ತು ಗಣೇಶ ಐತಾಳ್ ಕಾರ್ಯಕ್ರಮ ಸಂಯೋಜಿಸಿದ್ದರು.

ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಸುನೀಲ್ ಡಿ. ಬಂಗೇರ

Posted On: 18-01-2021 06:22PM

ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಸುನೀಲ್ ಡಿ. ಬಂಗೇರ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮೋಹನ್ ರಾವ್, ಕಾರ್ಯದರ್ಶಿ ರೋಷನ್ ಮಟ್ಟು, ಜೊತೆ ಕಾರ್ಯದರ್ಶಿ ಜಗದೀಶ್ ಬಿ. ಪೂಜಾರಿ, ಖಜಾಂಚಿಯಾಗಿ ಎಮ್. ಲಕ್ಷ್ಮಣ ರಾವ್, ಸದಸ್ಯರಾಗಿ ಐಲಿನ್ ಪ್ರಭಾವತಿ, ಮಹೇಶ್ ಪೂಜಾರಿ, ಶಶಿಧರ್ ಡಿ. ಕೋಟ್ಯಾನ್, ಪ್ರಶಾಂತ್ ಕುಮಾರ್, ಸದಾನಂದ ಸಾಲಿಯಾನ್, ಅವಿನಾಶ್ ಮಟ್ಟು, ಅಶೋಕ್ ‌ಡಿ. ಕೋಟ್ಯಾನ್, ಸದಾನಂದ ಡಿ. ಸುವರ್ಣ, ಉಮೇಶ್, ವಿಠ್ಠಲ ಪೂಜಾರಿ ಆಯ್ಕೆಯಾಗಿರುತ್ತಾರೆ.

ಹೆಜಮಾಡಿ ಬಂದರಿಗೆ 19ರಂದು ಮುಖ್ಯಮಂತ್ರಿಯಿಂದ ಶಿಲಾನ್ಯಾಸ

Posted On: 17-01-2021 01:24PM

ಮೀನುಗಾರರ ಸುದೀರ್ಘ ಹೋರಾಟದ ಫಲವಾಗಿ ಕಾಪು ತಾಲೂಕಿನ ಹೆಜಮಾಡಿ ಕೋಡಿಯಲ್ಲಿ ₹ 180.8 ಕೋಟಿಯ ವಿವಿಧ ಸವಲತ್ತುಗಳ ಕಾರ್ಯಯೋಜನೆಯ ಮೀನುಗಾರಿಕಾ ಬಂದರು ಕಾಮಗಾರಿಗೆ ಇದೇ ಬರುವ 19ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಲಾನ್ಯಾಸ ಮಾಡಲಿದ್ದಾರೆ.

ಪಡುಬಿದ್ರಿ : ಜನವರಿ 19ರಿಂದ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ಢಕ್ಕೆಬಲಿ ಸೇವೆ ಆರಂಭ

Posted On: 17-01-2021 01:15PM

ಇತಿಹಾಸ ಪ್ರಸಿದ್ಧ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ದ್ವೈವಾರ್ಷಿಕವಾಗಿ ನಡೆಯುವ ಢಕ್ಕೆಬಲಿ ಸೇವೆಯು ಇದೇ ಬರುವ ಜನವರಿ 19 ಮಂಗಳವಾರದಿಂದ ಆರಂಭವಾಗಿ ಮಾರ್ಚ್ 6 ನೇ ತಾರೀಖಿಗೆ ಹಗಲು ತಂಬಿಲ ಸೇವೆ ನೀಡಿದ ಭಕ್ತಾದಿಗಳ ಸೇವೆಯೊಂದಿಗೆ ಮಂಡಲ ವಿಸರ್ಜನೆ ನಡೆಯಲಿದೆ.

ಈ ಬಾರಿ ಒಟ್ಟು 24 ಢಕ್ಕೆ ಬಲಿ ಸೇವೆಗಳು ನಡೆಯಲಿದ್ದು, ಇದರಲ್ಲಿ ಇದೇ ಬರುವ 23 ರಂದು ಮುರುಡಿ ಬ್ರಹ್ಮಸ್ಥಾನದಲ್ಲಿ ಮತ್ತು 26ರಂದು ಹೆಜಮಾಡಿ ಬ್ರಹ್ಮಸ್ಥಾನದಲ್ಲಿ ಢಕ್ಕೆ ಬಲಿ ಸೇವೆ ನಡೆಯಲಿದೆ.

ಈ ಬಾರಿ ಕೋವಿಡ್ -19 ಹಿನ್ನೆಲೆಯಲ್ಲಿ ಸರಳವಾಗಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಅದಮಾರು ರೈಲ್ವೆ ಹಳಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆ

Posted On: 17-01-2021 12:24PM

ಪಡುಬಿದ್ರಿ ಠಾಣಾ ವ್ಯಾಪ್ತಿಯ ಅದಮಾರು ಕುಂಜೂರು ರೈಲ್ವೆ ಹಳಿಯ ಬಳಿ ವ್ಯಕ್ತಿಯೋರ್ವನ ಮೃತ ದೇಹ ಪತ್ತೆಯಾಗಿದೆ.

ಬಾಗಲಕೋಟೆ ಮೂಲದ ಹುಲ್ಲಪ್ಪ ಹೆಸರಿನ ಈ ವ್ಯಕ್ತಿ ವಿವಾಹಿತನಾಗಿದ್ದು 2 ಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣವೇನೆಂದು ಇದುವರೆಗೂ ತಿಳಿದು ಬಂದಿಲ್ಲ.

ಕಾಪುವಿನ ಸಮಾಜ ಸೇವಕ ಸೂರಿ ಶೆಟ್ಟಿ ಮತ್ತು ನಾಗರಾಜರ ಸಹಾಯದಿಂದ ಆಂಬುಲೆನ್ಸ್‌ಮೂಲಕ ಶವವನ್ನು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇಡಲಾಗಿದೆ. ಸ್ಥಳಕ್ಕೆ ಪಡುಬಿದ್ರಿ ಠಾಣಾ ಪೋಲಿಸರು ಭೇಟಿ ನೀಡಿದ್ದಾರೆ.

ಯಕ್ಷರಂಗದಲ್ಲಿ ಅರಳಬೇಕಾದ ಪ್ರತಿಭೆಗೆ ಕಾಡುತ್ತಿದೆ ಅನಾರೋಗ್ಯ ಸಮಸ್ಯೆ - ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದೆ ಈ ಕುಟುಂಬ

Posted On: 16-01-2021 07:23PM

ಮಂಗಳೂರು : ಶೈಕ್ಷಣಿಕ ಮತ್ತು ಯಕ್ಷಗಾನ ರಂಗದಲ್ಲಿ ಬೆಳೆಯುತ್ತಾ ಬರುತ್ತಿರುವ ಪ್ರತಿಭಾವಂತ ಪಿಯುಸಿ ವಿದ್ಯಾರ್ಥಿ ಕೇರಳ ಮೂಲದ ಜಿತೇಶ್ ಕುಮಾರ್ ರೈ ಮೂತ್ರ ಪಿಂಡಗಳ ಸಮರ್ಪಕ ಬೆಳವಣಿಗೆಯಿಲ್ಲದೇ ಆಪತ್ತಿಗೆ ಸಿಲುಕಿದ್ದಾರೆ. ತನ್ನ ಗಾಂಭೀರ್ಯದ ವೇಷಗಳಿಂದ ರಂಗದಲ್ಲಿ ಇತರರನ್ನು ರಂಜಿಸುತ್ತಿದ್ದ ಬಾಲಕ ಈಗ ತನ್ನ ಜೀವಕ್ಕಾರು ಆಸರೆ ಎಂಬ ಆತಂಕಕ್ಕೆ ಸಿಲುಕಿ, ಆಸ್ಪತ್ರೆಯಲ್ಲಿ ಮಲಗಿದ್ದು, ಮಗನನ್ನು ಹಠಾತ್ ಆಗಿ ಕಾಡಿದ ಅನಾರೋಗ್ಯದ ಚಿಕಿತ್ಸೆಗಾಗಿ ಹಣ ಹೊಂದಿಸಿಕೊಳ್ಳಲು ಆತನ ಮನೆಯವರು ಪರದಾಡುವಂತಾಗಿದೆ.

ಮಂಜೇಶ್ವರ ತಾಲೂಕಿನ ಕಾಟುಕುಕ್ಕೆ ದಂಬೆಕ್ಕಾನ ನಿವಾಸಿ ವಿಶ್ವನಾಥ ರೈ ಮತ್ತು ಪುಷ್ಪಾವತಿ ದಂಪತಿಯ ಪುತ್ರ, ಪುತ್ತೂರು ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ನಡೆಸುತ್ತಿದ್ದ ಜಿತೇಶ್ ಕುಮಾರ್ ರೈ ಅನಾರೋಗ್ಯದಿಂದ ಬಳಲುತ್ತಿರುವ ಬಾಲಕ.  ಏಳನೇ ತರಗತಿಯಿಂದಲೇ ಯಕ್ಷಗಾನ ಕಲೆಯತ್ತ ತಿರುಗಿದ ಜಿತೇಶ್ ಕುಮಾರ್ ಬಾಲ ಕಲಾವಿದರ ಮೇಳದಲ್ಲಿ ಪ್ರಬುದ್ಧ ಕಲಾವಿದನಾಗಿ ಮೆರೆಯುತ್ತಾ ಬಂದಿದ್ದು, ಯಕ್ಷ ಕಲಾವಿದನಾಗಿ ಸುಬ್ರಹ್ಮಣ್ಯ, ಕೃಷ್ಣ, ವಿಷ್ಣು, ಚಂಡ-ಮುಂಡ ಸಹಿತ ವಿವಿಧ ವೇಷಗಳನ್ನು ಧರಿಸುತ್ತಾ ಆ ಪಾತ್ರಗಳಿಗೆ ಜೀವ ತುಂಬುತ್ತಾ ಬರುತ್ತಿದ್ದನು. ಪ್ರಬುದ್ಧ ಕಲಾವಿದನಾಗಿ ಬೆಳೆಯುತ್ತಿರುವ ಹಂತದಲ್ಲೇ ಅನಾರೋಗ್ಯದ ಬರಸಿಡಿಲು ಬಡಿದಿದ್ದು, ಪಿಯುಸಿ ಶಿಕ್ಷಣವನ್ನೂ ಅರ್ಧಕ್ಕೇ ಮೊಟಕುಗೊಳಿಸುವಂತಾಗಿದೆ.

ಮೂತ್ರ ಪಿಂಡ ಬೆಳವಣಿಗೆಯಿಲ್ಲದೇ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿ ಜಿತೇಶ್ ಕುಮಾರ್ ರೈ ಅವರಿಗೆ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ನಡೆಸ ಬೇಕಿದ್ದು, ತಿಂಗಳಿಗೆ ಕನಿಷ್ಟ 30 ಸಾವಿರ ರೂಪಾಯಿ ಖರ್ಚಾಗುತ್ತದೆ. ಡಯಾಲಿಸಿಸ್‌ಗೆ ವರ್ಷಕ್ಕೆ 3 ಲಕ್ಷ ರೂ. ಖರ್ಚಾಗಲಿದೆ. ಕಿಡ್ನಿ ಟ್ರಾನ್ಸ್‌ಫರ್‌ಗೆ 6 ಲಕ್ಷ ರೂ.ವರೆಗೆ ಖರ್ಚು ಅಂದಾಜಿಸಲಾಗಿದೆ. ಪ್ರಸ್ತುತ ಮಂಗಳೂರಿನ ಯೇನಪೋಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನ ಕುಟುಂಬದ ಪರಿಸ್ಥಿತಿಯು ತೀರಾ ಹದಗೆಟ್ಟು ಹೋಗಿದ್ದು, ಅವನ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗದೇ ಕಂಗಾಲಾಗಿದ್ದಾರೆ. ಆರ್ಥಿಕವಾಗಿ ಸಧೃಢವಲ್ಲದ ಜಿತೇಶ್ ಕುಮಾರ್‌ನ ಅನಾರೋಗ್ಯ ಮತ್ತು ಕುಟುಂಬದ ಪರಿಸ್ಥಿತಿಯನ್ನು ಗಮನಿಸಿದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವರ್ಗ ಮತ್ತು ಆಡಳಿತ ಸಿಬಂದಿ ವರ್ಗ ಈಗಾಗಲೇ ಒಂದು ಲಕ್ಷ ರೂ. ಸಹಾಯಧನವನ್ನು ಸಂಗ್ರಹಿಸಿ, ಆತನ ಮನೆಯವರಿಗೆ ನೀಡಿದೆ. ಆದರೆ ಜಿತೇಶ್ ಕುಮಾರ್‌ನ ಪೂರ್ಣ ಚಿಕಿತ್ಸೆಗೆ ದೊಡ್ಡ ಮೊತ್ತದ ಹಣಕಾಸಿನ ನೆರವಿನ ಅಗತ್ಯವಿದ್ದು, ಸಹೃದಯಿಗಳು ಹಣಕಾಸಿನ ನೆರವನ್ನು ನೀಡುವ ಮೂಲಕ ಆತನ ಪ್ರಾಣ ಉಳಿಸುವ ಕಾರ್ಯದಲ್ಲಿ ಕೈ ಜೋಡಿಸುವಂತೆ ಹೆತ್ತವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕಲಿಕೆಯಲ್ಲಿ ಡಿಸ್ಟ್ರಿಂಕ್ಷನ್ ವಿದ್ಯಾರ್ಥಿಯಾಗಿರುವ ಜಿತೇಶ್ ಕುಮಾರ್ ಕಾಲೇಜಿನ ಅಧ್ಯಾಪಕ ವೃಂದದವರ ಅಚ್ಚು ಮೆಚ್ಚಿನ ವಿದ್ಯಾರ್ಥಿ. ಸಹಪಾಠಿಗಳಿಗೆ ಪ್ರಿಯನೂ ಹೌದು. ಕಲಿಕೆಯೊಂದಿಗೆ ಯಕ್ಷಗಾನ ಕ್ಷೇತ್ರದಲ್ಲೂ ಬಾಲ ಕಲಾವಿದನಾಗಿ ಮಿಂಚುತ್ತಾ ಸಾಗಿ ಬಂದಿರುವ ಜಿತೇಶ್ ಕುಮಾರ್‌ನ ಚಿಕಿತ್ಸೆಗೆ ನೆರವಾಗುವ ಸಹೃದಯಿ ದಾನಿಗಳು, ಜಿತೇಶ್ ಕುಮಾರ್ ಬ್ಯಾಂಕ್ ಆಫ್ ಬರೋಡಾ, ಕಾಟುಕುಕ್ಕೆ ಶಾಖೆ, ಖಾತೆ ಸಂಖ್ಯೆ : 68710100004325, IFSC : BARB0VJKTKE ಅಥವಾ ವಿಶ್ವನಾಥ ರೈ, ಬ್ಯಾಂಕ್ ಆಫ್ ಬರೋಡಾ, ಕಾಟುಕುಕ್ಕೆ ಶಾಖೆ, ಖಾತೆ ಸಂಖ್ಯೆ : 68710100002731, IFSC : BARB0VJKTKE ಇಲ್ಲಿಗೆ ತಮ್ಮ ಹಣಕಾಸಿನ ನೆರವನ್ನು ರವಾನಿಸಬಹುದು. ಅಥವಾ ವಿಶ್ವನಾಥ್ ರೈ ಅವರ ದೂರವಾಣಿ ಸಂಖ್ಯೆ : 09447295345 ಇವರನ್ನು ಸಂಪರ್ಕಿಸ ಬಹುದಾಗಿದೆ.