Updated News From Kaup
ಕುಂಜೂರು : ಶ್ರೀದುರ್ಗಾಮಾತೆಯ ಸನ್ನಿಧಿಯಲ್ಲಿ ತ್ರಿಕಾಲ ಪೂಜೆ, ಅನ್ನಸಂತರ್ಪಣೆ
Posted On: 27-02-2021 02:05PM
ಕಾಪು ತಾಲೂಕಿನ ಶ್ರೀ ದುರ್ಗಾ ಸೇವಾ ಸಮಿತಿ ಕುಂಜೂರು ಇವರ ಮುಂದಾಳತ್ವದಲ್ಲಿ ಮಾರ್ಚ್ 1, ಸೋಮವಾರದಂದು ಶ್ರೀದುರ್ಗಾಮಾತೆಯ ಸನ್ನಿಧಿಯಲ್ಲಿ ದಿನದ ತ್ರಿಸಂಧ್ಯಾ ಕಾಲಗಳಲ್ಲಿ ಶ್ರೀ ದುರ್ಗಾಮಾತೆಗೆ ವಿಸ್ತೃತ ವಿಧಿ-ವಿಧಾನ, ಅರ್ಚನೆ-ಪಾರಾಯಣ, ವಿಶೇಷ ಸಮರ್ಪಣೆ, ಬಾಗಿನದಾನ-ಕನ್ನಿಕಾ ಪೂಜೆ, ಅನ್ನಸಂತರ್ಪಣೆ ಮುಂತಾದ ವಿವಿಧ ಉಪಾಸನಾ ಅನುಷ್ಠಾನಗಳೊಂದಿಗೆ ನೆರವೇರುವ ಆರಾಧನೆಯಾದ ತ್ರಿಕಾಲ ಪೂಜೆ ನಡೆಯಲಿದೆ. ಅದೇ ರೀತಿ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 28 : ಗೆಜ್ಜೆಗಿರಿ ಕ್ಷೇತ್ರದಲ್ಲಿ ಐತಿಹಾಸಿಕ ಚಲನಚಿತ್ರ ದೇಯಿ ಬೈದೆತಿ ಗೆಜ್ಜೆಗಿರಿ ನಂದನೊಡು ಪ್ರದರ್ಶನ
Posted On: 27-02-2021 01:33PM
ತುಳುನಾಡ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದ ಐತಿಹಾಸಿಕ ಚಲನಚಿತ್ರ "ದೇಯಿ ಬೈದೆತಿ ಗೆಜ್ಜೆಗಿರಿ ನಂದನೊಡು" ಚಲನಚಿತ್ರವು ದಿನಾಂಕ 28.02.2021ನೇ ಭಾನುವಾರ ಸಂಜೆ ಗಂಟೆ 6ಗೆ ಗೆಜ್ಜೆಗಿರಿ ಕ್ಷೇತ್ರದ ಸತ್ಯ ಧರ್ಮ ಚಾವಡಿಯಲ್ಲಿ ಪ್ರದರ್ಶನ ಗೊಳ್ಳಲಿದೆ.
ಮಾನವೀಯ ನೆಲೆಯಲ್ಲಿ ಆರ್ ಟಿ ಐ ಕಾರ್ಯಕರ್ತ ಶಂಕರ ಶಾಂತಿಗೆ ನ್ಯಾಯ ದೊರಕಿಸುವಲ್ಲಿ ಮುಂದಿನ ಹೋರಾಟ : ಸಮಾನ ಮನಸ್ಕ ಬಿಲ್ಲವರು
Posted On: 27-02-2021 11:16AM
ಉಡುಪಿ : ಮಾರಣಾಂತಿಕವಾಗಿ ಹಲ್ಲೆಗೊಳಗಾದ ಬಾರಕೂರಿನ ಆರ್ ಟಿ ಐ ಕಾರ್ಯಕರ್ತ ಶಂಕರ ಶಾಂತಿಯವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರಿಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ಮತ್ತು ಪದಾಧಿಕಾರಿಗಳಿಂದ ಫೆಬ್ರವರಿ 25ರಂದು ಮನವಿ ಸಲ್ಲಿಸಲಾಗಿದ್ದರೂ ದುಷ್ಕರ್ಮಿಗಳನ್ನು ಇನ್ನೂ ಬಂಧಿಸದಿರುವುದರಿಂದ ಇಂದು ಉಡುಪಿ ಬನ್ನಂಜೆ ಬಿಲ್ಲವ ಸಂಘದಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ನೇತೃತ್ವದಲ್ಲಿ ಸಮಾನ ಮನಸ್ಕರು ಜೊತೆಯಾಗಿ ಸಭೆ ಸೇರಿದರು.
ಕೆಮ್ರಾಲ್ ನಲ್ಲಿ ಜೆಜೆಎಮ್ ವತಿಯಿಂದ ಕ್ಷೇತ್ರ ಮಟ್ಟದ ಕಾರ್ಯಕರ್ತರಿಗೆ ತರಬೇತಿ
Posted On: 26-02-2021 10:54PM
ಮಂಗಳೂರು : ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಪ್ ಚಾಲಕರ ಸಮೇತ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವವರ ಪಾತ್ರ ತುಂಬಾ ಮಹತ್ವದ್ದು ಎಂದು ಕೆಮ್ರಾಲ್ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅರುಣ್ ಶ್ಲಾಘಿಸಿದರು.ಅವರಿಂದು ದ.ಕ ಜಿಲ್ಲಾ ಪಂಚಾಯತ್ ,ಗ್ರಾಮೀಣ ಕುಡಿಯುವ ನೀರು ಮತ್ತು ಗ್ರಾಮ ನೈರ್ಮಲ್ಯ ಇಲಾಖೆ ಮಂಗಳೂರು ,ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ ಸಮುದಾಯ ವತಿಯಿಂದ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ರಕ್ಷಕ-ಶಿಕ್ಷಕ ಸಭೆ
Posted On: 26-02-2021 10:48PM
ಶಿರ್ವ: ಸಂತ ಮೆರಿ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ ರಕ್ಷಕ-ಶಿಕ್ಷಕ ಸಭೆಯ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್‍ರವರು ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸುವಲ್ಲಿ ಹೆತ್ತವರು ಹಾಗೂ ಅಧ್ಯಾಪಕರ ಪಾತ್ರ ಬಹಳ ಪ್ರಾಮುಖ್ಯವಾಗಿದೆ. ಇಂದಿನ ಯುವ ಜನತೆಯನ್ನು ಮಾಗದರ್ಶನ ಮಾಡುವಾಗ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾದ ಅನಿವಾರ್ಯತೆ ಇದೆ. ಯುವಜನತೆಯ ಮನಸ್ಸನ್ನು ಇಂದಿನ ಜಗತ್ತು ನಾನಾ ದುಶ್ಚ್ಯಟಗಳಿಗೆ ಸೆಳೆಯುತ್ತಿದೆ ಇದರಿಂದ ದೂರವಿರಿಸಿ ಆರೋಗ್ಯಪೂರ್ಣ ಜೀವನದ ಕಡೆ ಕೊಂಡೊಯ್ಯುವಲ್ಲಿ ಹೆತ್ತವರು ಹಾಗೂ ಅಧ್ಯಾಪಕರು ತಮ್ಮ ಹೆಚ್ಚಿನ ಗಮನವನ್ನು ನೀಡಬೇಕಾದುದು ಅಗತ್ಯ ಎಂದರು. ಕಳೆದ ಬಾರಿ ಗಣಕ ವಿಜ್ಞಾನ ವಿಭಾಗದಲ್ಲಿ ತುಂಬಾ ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆ ಮತ್ತು ಉನ್ನತ ವಿದ್ಯಾಬ್ಯಾಸ ಮಾಡುತ್ತಿರುವುದು ವಿಭಾಗಕ್ಕೆ ಒಂದು ಹೆಮ್ಮೆಯ ಗರಿಯಂತೆ ಎಂದು ತಿಳಿಸಿದರು. ಈ ಬಾರಿಯೂ ವಿವಿಧ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಗಳು ಬಿಸಿಎ ವಿಭಾಗದ ವಿದ್ಯಾರ್ಥಿಗಳಿಗೆ ಇಂದಿನ ಸಂಕಷ್ಟದ ಕಾಲದಲ್ಲಿಯೂ ಇರುವುದು ಗಮನಾರ್ಹ ಎಂದು ಪ್ರಶಂಸನೀಯವಾದ ಮಾತುಗಳನ್ನಾಡಿದರು.
ಕಾಪು ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ರಮೇಶ್ ಹೆಗ್ಡೆ
Posted On: 26-02-2021 10:27PM
ಕಾಪು ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ರಮೇಶ್ ಹೆಗ್ಡೆ ಕಲ್ಯಾರವರನ್ನು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಯವರು ಸನ್ಮಾನಿಸಿದರು.
ರಾಘವೇಂದ್ರ ಪ್ರಭು,ಕವಾ೯ಲು - ಸಿರಿಗನ್ನಡ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ಗೆ ಆಯ್ಕೆ
Posted On: 25-02-2021 03:42PM
ಉಡುಪಿ : ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು, ಕನಾ೯ಟಕ ರಕ್ಷಣಾ ವೇದಿಕೆ' ಸಪ್ತಸ್ವರ ಸಂಗೀತ ಕಲಾ ಬಳಗ ಬೆಳಗಾವಿ ಮತ್ತು ಮರಳ ಸಿದ್ದೇಶ್ವರ ಕಲಾ ಪೋಷಕ ಸಂಘ ವತಿಯಿoದ ಫೆ.28 ರಂದು ಬೆಳಗಾವಿಯಲ್ಲಿ ನಡೆಯುವ ರಾಷ್ಟ್ರೀಯ ಕಲಾ ಉತ್ಸವ -2021 ಕಾಯ೯ಕ್ರಮದಲ್ಲಿ ಸಾಧಕರಿಗೆ ಗೌರವ ವಿಭಾಗದಲ್ಲಿ ಉಡುಪಿ ಜಿಲ್ಲೆಯ ರಾಘವೇಂದ್ರ ಪ್ರಭು,ಕವಾ೯ಲು ರವರು ಸಿರಿಗನ್ನಡ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ. ಸ್ವಚ್ಚ ಭಾರತ್ ಫ್ರ್oಡ್ಸ್ ಸಂಯೋಜಕರಾಗಿರುವ ಇವರು ಸಮಾಜಮುಖಿ ಕಾಯ೯ಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕುರ್ಕಾಲು : ಡಿಜಿಟಲ್ ಗ್ರಂಥಾಲಯ ಉದ್ಘಾಟನೆ
Posted On: 25-02-2021 03:38PM
ಕಾಪು :ಕುರ್ಕಾಲು ಗ್ರಾಮ ಪಂಚಾಯತ್ ನ ಕಟ್ಟಡದಲ್ಲಿರುವ ಸಾರ್ವಜನಿಕ ಗ್ರಂಥಾಲಯವನ್ನು ಡಿಜಿಟಲ್ ಗ್ರಂಥಾಲಯವನ್ನಾಗಿ ಪರಿವರ್ತಿಸಲಾಗಿದ್ದು ದಿನಾಂಕ 24/02/2021ರಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಹೇಶ್ ಶೆಟ್ಟಿ ಹಾಗೂ ಕಾಪು ತಾಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿಯವರಾದ ಶ್ರೀ ವಿವೇಕಾನಂದ ಗಾಂವ್ಕರ್ ಉದ್ಘಾಟನೆ ಮಾಡಿದರು.
ಅಸಮಾನ್ಯರಾಗಿ ಬೆಳೆದು ನಿಂತ ಮೇರು ವ್ಯಕ್ತಿ ಸತೀಶ್ ಕುಮಾರ್ ಅಂಚನ್, ಬಜಾಲ್
Posted On: 24-02-2021 02:53PM
ಶ್ರೀ ಸತೀಶ್ ಕುಮಾರ್ ಬಜಾಲ್ , ಸೌದಿ ಅರೇಬಿಯಾ ಮೂಲತ: ಅಂಚನ್ಸ್ ಹೌಸ್ ಕಂಕನಾಡಿ ಪಕ್ಕಲಡ್ಕ ಬಜಾಲ್ ನವರು. ತಂದೆ ದಿ! ಚಂದ್ರಶೇಖರ್ ಕುಂದರ್ ಕೊಡಿಯಲ್ ಬೈಲ್, ತಾಯಿ ದಿ! ಶಾರದ ಅಂಚನ್, ಕಂಕನಾಡಿ ಪಕ್ಕಲಡ್ಕ, ಬಜಾಲ್. 3ಗಂಡು ಮಕ್ಕಳಲ್ಲಿ ಕಿರಿಯವನು ಸತೀಶ್ ಕುಮಾರ್ ಬಜಾಲ್. ತನ್ನ 3ನೇ ವಯಸಿನಲ್ಲೇ ತಾಯಿಯನ್ನು ಕಳೆದುಕೊಂಡು ನಂತರ ತನ್ನ ಅಜ್ಜಿ ಹಾಗೂ ಮಾವ ಶ್ರೀ ರಾಘವ ಅಂಚನ್ ಆರೈಕೆಯಲ್ಲಿ -ಬಜಾಲ್ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಹಾಗೂ ರೋಸಾರಿಯೊ ಹೈಸ್ಕೂಲ್ ನಲ್ಲಿ ಪ್ರೌಢಶಿಕ್ಷಣ. ಸಂತ ಅಲೋಸಿಯಸ್ ಕಾಲೇಜಿನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಸಂತ ಅಲಾಸಿಯಸ್ ಸಂಧ್ಯಾ ಕಾಲೇಜ್. ಅಂತಿಮ B.A ಕಲಿಯುತ್ತಿರುವಾಗ ಅಲ್ಲಿನ ಆಡಳಿತ ಮಂಡಳಿ ಸಂಧ್ಯಾ ಕಾಲೇಜನ್ನು ಸರಕಾರಿ ಅನುದಾನವಿಲ್ಲದ ಕಾರಣ ಮುಚ್ಚುವ ನಿರ್ಧಾರ ಮಾಡಿ, ಮೊದಲು ಪ್ರಥಮ ಪಿಯುಸಿ, ಪ್ರಥಮ ಪದವಿ ಕಾಲೇಜನ್ನು ನಿಲ್ಲಿಸಿದಾಗ ಎಲ್ಲಾ ವಿದ್ಯಾರ್ಥಿ ಸಂಘಗಳನ್ನು ಒಗ್ಗೂಡಿಸಿ ಹಾಗೂ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ 50 ದಿನಗಳ ಅವಿರತ ಹೋರಾಟದ ಫಲವಾಗಿ ಸರಕಾರದಿಂದ ಕಾಲೇಜಿಗೆ ಅನುದಾನ ಬಿಡುಗಡೆ. ಹಾಗೂ 1991-92 ಸಾಲಿನ ಕಾಲೇಜು ವಿದ್ಯಾರ್ಥಿ ಸಂಘಕ್ಕೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆ. ಕಾಲೇಜಿನ 25 ವರ್ಷದ ಬೆಳ್ಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ. ಸರ್ವ ಕಾಲೇಜು ವಿದ್ಯಾರ್ಥಿ ಸಂಘಕ್ಕೆ ಉಪಾಧ್ಯಕ್ಷಾರಾಗಿ ಆಯ್ಕೆ. ಸರ್ವ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಘಕ್ಕೆ-3 ವರ್ಷಗಳ ಸತತವಾಗಿ ಸಂಚಾಲಕಾರಾಗಿ ಆಯ್ಕೆ. ನಂತರ ಸಲಹೆಗರರಾಗಿ ಸೇವೆಸಲ್ಲಿಸಿ.
ಆರ್ ಟಿ ಐ ಕಾರ್ಯಕರ್ತ ಶಂಕರ್ ಶಾಂತಿ ಮೇಲೆ ಮಾರಣಾಂತಿಕ ಹಲ್ಲೆ
Posted On: 23-02-2021 10:25PM
ಬಾರ್ಕೂರು : ಜನಸಾಮಾನ್ಯರಿಗಾಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟಗಳನ್ನು ರೂಪಿಸುತ್ತಾ ಕಾನೂನು, ನಿಯಮ ಪಾಲನೆ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಶಂಕರ ಶಾಂತಿಯವರ ಮೇಲೆ ದಿನಾಂಕ ಫೆಬ್ರವರಿ 20, ಆದಿತ್ಯವಾರದಂದು ಮನೆಯ ಸಮೀಪದ ಸಭಾಭವನದ ಅಡುಗೆ ಕೋಣೆಯಲ್ಲಿ ಕೂಡಿ ಹಾಕಿ, ಚಿತ್ರ ಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಅದೇ ಸಮಯಕ್ಕೆ ಬೊಬ್ಬೆ ಕೇಳಿ ಸ್ಥಳಕ್ಕಾಗಮಿಸಿದ ಶಂಕರ ಶಾಂತಿಯವರ ಹೆಂಡತಿ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತನ್ನ ಗಂಡನನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದಾರೆ.
