Updated News From Kaup

ನೀಲಾವರ ಗೋಶಾಲೆಗೆ ಬೈಹುಲ್ಲು ಸಮರ್ಪಣೆ

Posted On: 07-12-2020 05:59PM

ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶ್ವಹಿಂದು ಪರಿಷದ್, ಬಜರಂಗದಳ, ಮಾತೃಶಕ್ತಿ ಮತ್ತು ದುರ್ಗಾವಾಹಿನಿ ಶಿರ್ವ ವಲಯ ಇವರ ವತಿಯಿಂದ ಗೋಶಾಲೆಗಾಗಿ ಬೈಹುಲ್ಲು ಸಂಗ್ರಹ ಅಭಿಯಾನವನ್ನು ಒಂದು ವಾರ ನಡೆಸಿ ಸುಮಾರು 325 ಕಟ್ಟು ಬೈಹುಲ್ಲನ್ನು ಸಂಗ್ರಹಿಸಿ ನೀಲಾವರ ಗೋಶಾಲೆಗೆ ಸಾಗಿಸಲು ಹಿರಿಯ ಹಿಂದೂ ನೇತಾರರಾದ ಬೆಳ್ಳೆಅಂಗಡಿ ಸದಾನಂದ ಶೆಣೈ ಹಾಗೂ ವಿಶ್ವಹಿಂದು ಪರಿಷದ್ ಶಿರ್ವ ವಲಯದ ಗೌರವಾಧ್ಯಕ್ಷರಾದ ಬೆಳ್ಳೆ ಮಧ್ವರಾಜ ಭಟ್ ಬೆಳ್ಳೆ ಚಾಲನೆ ನೀಡಿದರು.

ದೇವಸ್ಥಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ,ಸೂರ್ಯೋದಯದಲ್ಲಿ ಎದ್ದು ಪ್ರತಿಯೊಬ್ಬ ಹಿಂದೂ 8 ಶುಭ ವಸ್ತುಗಳನ್ನು ದರ್ಶನ ಮಾಡಬೇಕು, ಅದರಲ್ಲಿ ಮೊದಲಿಗೆ ಗೋವಿನ ದರ್ಶನ ಮಾಡಬೇಕೆಂದು ಶಾಸ್ತ್ರ ತಿಳಿಸಿರುತ್ತದೆ.ಪ್ರಸ್ತುತ ಹೆಚ್ಚಿನವರು 3 ರಿಂದ 10 ಸೆಂಟ್ಸ್ ಜಾಗದಲ್ಲಿ ಮನೆಕಟ್ಟಿ ವಾಸ್ತವ್ಯವಿರುವುದರಿದ ಪ್ರತಿ ಮನೆಯವರು ಗೋವುಗಳನ್ನು ಸಾಕಲು ದರ್ಶನ ಮಾಡಲು ಕಷ್ಟಸಾಧ್ಯ.ಹಿಂದುವಾದವನು ಗೋಸೇವೆ ಮಾಡಲೇಬೇಕು ಸಾಕಲು ಆಗದಿದ್ದರೂ ಸಾಕುವವರಿಗೆ ಪ್ರೋತ್ಸಾಹ ನೀಡುವುದು,ಗೋಗ್ರಾಸ ನೀಡುವುದು ಮಾಡಬಹುದು.ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನೀಲಾವರದಲ್ಲಿ ಸಾವಿರಾರು ಅನಾಥ ಗೋವುಗಳನ್ನು ಸಾಕಾಲು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ.ಅವರೊಂದಿಗೆ ನಾವು ಕೈಜೋಡಿಸಿ ಅಳಿಲುಸೇವೆ ಮಾಡುವುದು ನಮಗೆ ಸಿಕ್ಕಿರುವ ದೊಡ್ಡ ಅವಕಾಶ ಇದನ್ನು ಸದುಪಯೋಗ ಮಾಡಿಕೊಂಡು ನಿರಂತರವಾಗಿ ಸಮಾಜಕ್ಕಾಗಿ ಗೋವಿಗಾಗಿ ಇಂಥ ಕೆಲಸಗಳನ್ನು ಮಾಡಲು ನಮ್ಮನ್ನು ತೊಡಿಗಿಸಿಕೊಳ್ಳೋಣ ಎಂದು ಬೆಳ್ಳೆ ಮಧ್ವರಾಜ ಭಟ್ ತಿಳಿಸಿದರು.

ಅವಿನಾಶ ಆಚಾರ್ಯ ಸ್ವಾಗತಿಸಿ ವಿಶ್ವಹಿಂದು ಪರಿಷದ್ ಶಿರ್ವ ವಲಯದ ಅಧ್ಯಕ್ಷರಾದ ಬೆಳ್ಳೆ ವಿಶ್ವನಾಥ ಶೆಟ್ಟಿ ಧನ್ಯವಾದ ನೀಡಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷದ್ ಕಾಪು ಪ್ರಖಂಡದ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು,ಧರ್ಮಪ್ರಚಾರ ಪ್ರಮುಖ್ ರಾಘವೇಂದ್ರ ಶೆಟ್ಟಿ, ಸುರಕ್ಷಾ ಪ್ರಮುಖ್ ಆನಂದ, ವಿಶ್ವಹಿಂದು ಪರಿಷದ್ ಶಿರ್ವ ವಲಯದ ಗೌರವಾಧ್ಯಕ್ಷರಾದ ನಾಗರಾಜ ಭಟ್, ಶಿರ್ವ ವಲಯದ ಗೌರವಾಧ್ಯಕ್ಷರಾದ ನಾಗರಾಜ ಭಟ್,ರಾಷ್ಟ್ರಿಯ ಸ್ವಯಂ ಸೇವಾ ಸಂಘದ ಸೇವಾ ಪ್ರಮುಖ್ ಸುಬ್ರಹ್ಮಣ್ಯ ವಾಗ್ಲೆ, ಹಾಗೂ ಊರಿನ ಹಿರಿಯರಾದ ಪಟೇಲ್ ಮನೆ ದಯಾನಂದ ಶೆಟ್ಟಿ,ಭಟ್ರ ಮನೆ ಪುಂಡರೀಕಾಕ್ಷ ಭಟ್, ದೊಡ್ಡಮನೆ ಅಶೋಕ ಶೆಟ್ಟಿ,ಮತ್ತು ವಿಶ್ವಹಿಂದು ಪರಿಷದ್ ಬಜರಂಗದಳ ಮಟ್ಟಾರು, ಮೂಡುಬೆಳ್ಳೆ, ಬಂಟಕಲ್ಲು,ಎಡ್ಮೇರು,ವಿಷ್ಣುಮೂರ್ತಿ ಶಿರ್ವ,ಪಡುಬೆಳ್ಳೆ ಘಟಕದ ಅಧ್ಯಕ್ಷರು,ಗೋರಕ್ಷಾ ಪ್ರಮುಖ್,ಇನ್ನಿತರ ಪ್ರಮುಖರು,ಕಾರ್ಯಕರ್ತರು ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

ಇನ್ನಂಜೆ ಹಾಲು ಉತ್ಪಾದಕರ ಸಂಘಕ್ಕೆ ದ್ವಿತೀಯ ಅತ್ಯುತ್ತಮ ಸಂಘ ಪ್ರಶಸ್ತಿ

Posted On: 07-12-2020 12:31PM

ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಇನ್ನಂಜೆ ಹಾಲು ಉತ್ಪಾದಕರ ಸಂಘುವು 2019 - 2020 ಸಾಲಿನಲ್ಲಿ ದ್ವಿತೀಯ ಅತ್ಯುತ್ತಮ ಸಂಘವೆಂದು ಘೋಷಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ಇನ್ನಂಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಲಕ್ಷ್ಮಣ ಶೆಟ್ಟಿ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.

ರಾಜಕೀಯ ಪಕ್ಷಗಳಿಂದ ಕುಲಾಲರ ಬಗ್ಗೆ ನಿರ್ಲಕ್ಷ್ಯ ಸಲ್ಲದು -ಕಾಪು ಕುಲಾಲ ಸಂಘದ ಅಧ್ಯಕ್ಷ ಸಂದೀಪ್ ಬಂಗೇರ.

Posted On: 07-12-2020 07:59AM

ಕಾಪು :(06/12/2020)ಕುಲಾಲ ಸಂಘ (ರಿ) ಕಾಪು ವಲಯದ ಸಾಮಾನ್ಯ ಸಭೆಯಲ್ಲಿ ಸಂಘದ ಅಧ್ಯಕ್ಷ ಸಂದೀಪ್ ಬಂಗೇರ ಮಾತನಾಡಿ ಕುಲಾಲ ಸಮುದಾಯವನ್ನು ರಾಜಕೀಯವಾಗಿ ಬಳಸಿ ನಮ್ಮ ಸತತ ಮನವಿಗೆ ರಾಜಕೀಯ ಪಕ್ಷಗಳು ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ತಿಳಿಸಿದರು. ಸಭೆಯಲ್ಲಿ ಕಾಪು ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ಉದಯ ಕುಲಾಲ್, ಕೋಶಧಿಕಾರಿ ಯೋಗೀಶ್ ಕುಲಾಲ್ ಉಳ್ಳೂರು, ಸಂಘದ ಮಾಜಿ ಅಧ್ಯಕ್ಷರು ರಾಜೇಶ್ ಕುಲಾಲ್ ಬೊಬ್ಬೆಟ್ಟು, ಮಹಿಳಾ ಘಟಕದ ಅಧ್ಯಕ್ಷರು ಗೀತಾ ಕುಲಾಲ್ ಶಿರ್ವ, ಕಾರ್ಯದರ್ಶಿ ಸುಮಲತಾ ಇನ್ನಂಜೆ ಸಂಘದ ಸಕ್ರಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು..

ಕಾಪು ಕಾಳಿಕಾಂಬಾ ದೇವಸ್ಥಾನದಲ್ಲಿ ರಾಜ್ಯಮಟ್ಟದ ಸರಸ್ವತೀ ಪ್ರಶಸ್ತಿ ಪುರಸ್ಕೃತೆ ವೈ.ಯು.ಯಶಸ್ವಿ ಆಚಾರ್ಯಳಿಗೆ ಸನ್ಮಾನ

Posted On: 06-12-2020 08:10PM

ಕಾಪು : ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ 2019-20ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.98.24 ಅಂಕಗಳೊಂದಿಗೆ ದಾವಣಗೆರೆಯಲ್ಲಿ ಸರಸ್ವತೀ ಪುರಸ್ಕಾರ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಸಾಧಕಿ ಕಾಪು ದಂಡತೀರ್ಥ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ವೈ.ಯು. ಯಶಸ್ವಿ ಆಚಾರ್ಯಳಿಗೆ ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಡಿ.5ರಂದು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆ. ಉಮೇಶ್ ತಂತ್ರಿ ಮಂಗಳೂರು, ಅಡಳಿತ ಮೊಕ್ತೇಸರ ಶೇಖರ ಆಚಾರ್ಯ, 2ನೇ ಮೊಕ್ತೇಸರ ಅಚ್ಚುತ ಆಚಾರ್ಯ, 3ನೇ ಮೊಕ್ತೇಸರ ಗಂಗಾಧರ ಆಚಾರ್ಯ ದಿಂಡಿಬೆಟ್ಟು, ಅಡಳಿತ ಮಂಡಳಿ, ಕ್ಷೇತ್ರದ ಪ್ರಧಾನ ಅರ್ಚಕ ಭಾಸ್ಕರ್ ಪುರೋಹಿತ್, ಯಶಸ್ವಿ ಆಚಾರ್ಯಳ ಪೋಷಕರು ವೈ. ಉಮೇಶ್ ಆಚಾರ್ಯ, ಶೀಲಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಬಬ್ಬರ್ಯ ಯುವ ಸೇವಾ ಸಮಿತಿ : ಸ್ವಚ್ಛತಾ ಕಾರ್ಯ

Posted On: 06-12-2020 06:35PM

ಉಡುಪಿ : ಬಬ್ಬರ್ಯ ಯುವಸೇವಾ ಸಮಿತಿಯಿಂದ ಇಂದು ಬೆಳಿಗ್ಗೆ ದೈವಸ್ಥಾನ ಸ್ವಚ್ಛತಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ಕೊಡಲಾಯಿತು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಗಣಪತಿ ಕಾಮತ್, ವಿನೋದ್ ಶೆಟ್ಟಿ, ಅಧ್ಯಕ್ಷರಾದ ವರದರಾಜ್ ಕಾಮತ್ ಹಾಗೂ ಕಾರ್ಯದರ್ಶಿಯಾದ ಸಮಿತ ಶೆಟ್ಟಿ, ಗಣೇಶ್, ಯೋಗೀಶ್, ಸುಬ್ರಹ್ಮಣ್ಯ, ಮೋಹನ್ ಹಾಗೂ ಸರ್ವ ಸದಸ್ಯರು ಉಪಸ್ಥಿತಿ ಇದ್ದರು.

ಜನಸಾಮಾನ್ಯ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕಾರ್ಯಪ್ರವೃತ್ತರಾಗಿ : ಡಾ.ಎಂ.ಟಿ ರೇಜು

Posted On: 05-12-2020 08:49PM

ಉಡುಪಿ : ಕೋವಿಡ್‌ನಿಂದಾಗಿ ಪ್ರಸ್ತುತ ಸಾಲಿನ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಅನುಷ್ಠಾನ ನಿಗದಿತ ಗುರಿ ಸಾಧಿಸಿಲ್ಲ. ಡಿಸೆಂಬರ್ ಹಾಗೂ ಜನವರಿ ಮಾಹೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಂ.ಟಿ ರೇಜು ತಿಳಿಸಿದರು. ಅವರು ಇಂದು ನಗರದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಕಾರ ಪ್ರಸ್ತುತ ಬಜೆಟ್‌ನಲ್ಲಿ ಜನಸಾಮಾನ್ಯ ಕಲ್ಯಾಣ ಯೋಜನೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನೇಕ ಯೋಜನೆಗಳು, ಕಾರ್ಯಕ್ರಮಗಳನ್ನು ರೂಪಿಸಿದೆ. ಇವುಗಳ ಅನುಷ್ಟಾನ ಕೋವಿಡ್ ಸಾಂಕ್ರಾಮಿಕ ರೋಗದಿಂದ ನಿಗದಿತ ಮಟ್ಟದಲ್ಲಿ ಆಗಿಲ್ಲ. ಡಿಸೆಂಬರ್ ಹಾಗೂ ಜನವರಿ ಮಾಹೆಯಲ್ಲಿ ಸಂಪೂರ್ಣಗೊಳಿಸಲು ಕಾರ್ಯಪ್ರವೃತರಾಗಬೇಕು ಎಂದರು.

ಜಿಲ್ಲೆಯಲ್ಲಿ ಕಳೆದ 4 ತಿಂಗಳಿAದ ಹೆಚ್ಚಿನ ಮಳೆಯಿಂದಾಗಿ ಉಂಟಾದ ನೆರೆಯಿಂದಾದ ನಷ್ಟದ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಅವರು, ಮಳೆಯಿಂದ ಹಾನಿಯುಂಟಾದ ಮನೆಗಳ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಲು ಜನಸಾಮಾನ್ಯರಿಗೆ ಅಗತ್ಯ ನೆರವನ್ನು ಕಲ್ಪಿಸಬೇಕು ಎಂದರು. ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಕುಡಿಯುವ ನೀರಿನ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಂಡು, ಶೀಘ್ರದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದರೊಂದಿಗೆ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದರು. ಉದ್ಯೋಗ ಖಾತ್ರಿ ಯೋಜನೆಯಡಿ ಬಡ ಜನರಿಗೆ ಉದ್ಯೋಗ ನೀಡುವ ಜೊತೆಗೆ ಶಾಶ್ವತ ಅಭಿವೃದ್ಧಿಗಾಗಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಕೂಲಿ ಕಾರ್ಮಿಕರಿಗೆ ನಿಗದಿತ ಅವಧಿಯಲ್ಲಿ ಕೂಲಿ ಹಣವನ್ನು ನೀಡಬೇಕು ಎಂದರು. ಮಹಿಳೆಯರು ಸ್ವ-ಉದ್ಯೋಗ ಕೈಗೊಂಡು ಸ್ವಾವಲಂಬಿಗಳಾಗಲು ಸ್ವ-ಉದ್ಯೋಗ ಯೋಜನೆ ಜಾರಿಗೆ ತರಲಾಗಿದ್ದು, ಇದನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದರೊಂದಿಗೆ ಅವರು ಆರ್ಥಿಕರಾಗಿ ಸಬಲರಾಗಬೇಕು. ಇಂತವರ ಯಶೋಗಾಥೆಗಳನ್ನು ಪ್ರಚಾರ ಪಡಿಸಬೇಕು ಎಂದರು. ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಜಾರಿ ಸೇರಿದಂತೆ ಅಂಗನವಾಡಿ ಮಕ್ಕಳಿಗೆ ಹಾಲು ಪೌಡರ್ ವಿತರಣೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕೆಂದು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ಅವೈಜ್ಞಾನಿಕವಾಗಿ ನಿಯಮಗಳನ್ನು ಪಾಲಿಸದೇ ಅಕ್ರಮವಾಗಿ ಮಾಡುತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಇವುಗಳ ಬಗ್ಗೆ ಎಚ್ಚರಿಕೆ ಕ್ರಮ ವಹಿಸಬೇಕೆಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು. ಕಳೆದ ಎರಡು ವರ್ಷದ ಸಾಲಿನಲ್ಲಿ ಮೀನುಗಾರರ ಮಹಿಳೆಯರಿಗೆ ನೀಡಿದ ಅಲ್ಪಾವಧಿ ಸಾಲವನ್ನು ಮನ್ನ ಮಾಡಲು 38 ಕೋಟಿ ಬಿಡುಗಡೆಯಾಗಿದ್ದು, ಅದರಲ್ಲಿ 31 ಕೋಟಿ ಮಾತ್ರ 11000 ಜನರ ಖಾತೆಗೆ ಜಮಾ ಆಗಿದೆ. ಬಾಕಿ ಉಳಿದ 4050 ಜನರ ಖಾತೆಗೆ ಆಧಾರ್‌ಲಿಂಕ್ ಆಗದ ಕಾರಣ ಜಮೆಯಾಗಿಲ್ಲ. ಈ ಬಗ್ಗೆ ಕ್ರಮ ವಹಿಸಬೇಕು ಎಂದರು.

ರಾಜ್ಯ ಮಟ್ಟದಲ್ಲಿ ಜಿಲ್ಲೆಯಲ್ಲಿ ಬರುವ ಮಾಹಿತಿಗಳ ಆಧಾರದ ಮೇಲೆ ಮುಂಬರುವ ಬಜೆಟ್‌ನಲ್ಲಿ ಯೋಜನೆಗಳನ್ನು ತಯಾರಿಸಲಾಗುವುದು. ಇದರ ಹಿನ್ನೆಲೆ ಪ್ರತಿಯೊಂದು ಇಲಾಖೆಯವರು ತಮ್ಮ ಇಲಾಖೆಗಳಲ್ಲಿನ ಯೋಜನೆಗಳ ಮಾಹಿತಿಯನ್ನು ನಿಗಧಿತ ಸಮಯದಲ್ಲಿ ರಾಜ್ಯ ಮಟ್ಟದ ಕಚೇರಿಗಳಿಗೆ ತಲುಪಿಸಬೇಕೆಂದು ಸೂಚನೆ ನೀಡಿದರು. ವಿಧಾನಸಭಾ ಅಧಿವೇಶನದಲ್ಲಿ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳ ಬಗ್ಗೆ ಉತ್ತರವನ್ನು ವಿಳಂಬವಿಲ್ಲದೇ ನಿಖರ ಮಾಹಿತಿಗಳನ್ನು ಕಳುಹಿಸಬೇಕು ಎಂದು ಸೂಚನೆ ನೀಡಿದರು. ಸಿ.ಆರ್.ಝೆಡ್ ಹಾಗೂ ನಾನ್ ಸಿ.ಆರ್.ಝೆಡ್ ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆಯನ್ನು ಕೈಗೊಳ್ಳುತ್ತಿರುವುದು ಸೇರಿದಂತೆ ಮತ್ತಿತರ ಗಣಿಗಾರಿಕೆಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಅವರು, ಸರಕಾರದ ನಿಯಮಾನುಸಾರ ಸಾಂಪ್ರದಾಯಿಕ ಎಲ್ಲಾ ರೀತಿಯ ಗಣಿಗಾರಿಕೆಗೆ ಅವಕಾಶ ಮಾಡಿಕೊಡಬೇಕೆಂದು ತಿಳಿಸಿದರು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಅವಕಾಶಗಳಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಅಗತ್ಯ ಮೂಲಭೂತ ಅಭಿವೃದ್ಧಿ ಕಾಮಗಾರಿಗಳನ್ನು ಕಲ್ಪಿಸಬೇಕೆಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

ಇನ್ನಂಜೆ : ನೆರವಿನ ನಿರೀಕ್ಷೆಯಲ್ಲಿ ರಾಘವೇಂದ್ರ ಶೆಟ್ಟಿ ಕುಟುಂಬ

Posted On: 05-12-2020 09:28AM

ಇನ್ನಂಜೆ ಮಂಡೇಡಿ ಮೂಡು ಮೇಲ್ಮನೆ ಕಿಟ್ಟಿ ಶೆಟ್ಟಿಯ ಮಗನಾದ ರಾಘವೇಂದ್ರ ಶೆಟ್ಟಿ (ರಾಘು) ಕಳೆದ ಹದಿನೈದು ವರ್ಷಗಳಿಂದ ಹೊಟ್ಟೆಪಾಡಿಗಾಗಿ ಮುಂಬೈಯಲ್ಲಿ ದುಡಿಯುತ್ತಿದ್ದರು. ಕಳೆದ ಒಂದು ವರ್ಷದಿಂದ ತನ್ನ ಮಗುವಿನ ಅನಾರೋಗ್ಯ ಕಾರಣದಿಂದಾಗಿ ಊರಿನಲ್ಲಿ ಇದ್ದು ಮಗುವಿನ ಆರೋಗ್ಯ ಸುಧಾರಣೆಗಾಗಿ ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಇವರ ದುರಾದೃಷ್ಟವೆಂಬಂತೆ ಈಗ ರಾಘವೇಂದ್ರ ಶೆಟ್ಟಿಯವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಅನ್ನನಾಳದಲ್ಲಿ ಗೆಡ್ಡೆಯಾಗಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು ಆರು ಲಕ್ಷದವರೆಗೆ ಖರ್ಚು ಆಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಈ ಕಾರಣದಿಂದ ಈ ಕುಟುಂಬವು ಕಂಗಾಲಾಗಿದೆ. ಒಂದೆಡೆ ಮಗುವಿನ ಚಿಕಿತ್ಸಾ ವೆಚ್ಚ ಮತ್ತೊಂದೆಡೆ ರಾಘವೇಂದ್ರ ಶೆಟ್ಟಿಯವರ ಚಿಕಿತ್ಸಾ ವೆಚ್ಚಕ್ಕೆ ಖರ್ಚು ಮಾಡಬೇಕಾಗಿದೆ.

ಸಹೃದಯಿ ದಾನಿಗಳು ಈ ಕುಟುಂಬಕ್ಕೆ ನೆರವಾಗಬೇಕೆಂದು ವಿನಂತಿಸಿದ್ದಾರೆ. ವಿಳಾಸ: ರಾಘವೇಂದ್ರ ಎಮ್. ಶೆಟ್ಟಿ S/O ಮೋನಪ್ಪ ಶೆಟ್ಟಿ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ : 0636101016370 IFSC Code : CNRB0000636 ಶಂಕರಪುರ ಶಾಖೆ ಉಡುಪಿ ಜಿಲ್ಲೆ, ಕಾಪು ತಾಲೂಕು MOb. NO : 7715951795

ಬೆಳಪು : ಜಾರಂದಾಯ ಬೋಟಿಂಗ್ ಪಾಯಿಂಟ್ ಗೆ ಚಾಲನೆ

Posted On: 04-12-2020 02:52PM

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಗ್ರಾಮದಲ್ಲಿ ಪ್ರವಾಸೋದ್ಯಮಕೆ ಉತ್ತೇಜನ ನೀಡುವ ಸಲುವಾಗಿ ಜಾರಂದಾಯ ಬೋಟಿಂಗ್ ಪಾಯಿಂಟ್ ಗೆ ಬೆಳಪು ಗ್ರಾಮಾಭಿವೃದ್ಧಿ ಯ ರೂವಾರಿ ಡಾ| ಬೆಳಪು ದೇವಿಪ್ರಸಾದ್ ಶೆಟ್ಟಿಯವರು ಚಾಲನೆ ನೀಡಿದರು ಈ ಸಂದರ್ಭದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಉಡುಪಿಯಲ್ಲಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ರಹಿತ ಚಿಕಿತ್ಸೆ

Posted On: 04-12-2020 12:13PM

ವೆರಿಕೋಸ್ ವೇಯ್ನ್ ಗೆ ಆಪರೇಷನ್ ರಹಿತ ಆಯುರ್ವೇದ ಪರಿಹಾರ ಉಡುಪಿ ಯಲ್ಲಿ, ದಿನಾಂಕ 6/12/2020 ರ ಭಾನುವಾರ ಹಾಗೂ ಪ್ರತಿ ತಿಂಗಳ 2 ನೇಯ ಭಾನುವಾರ, ಡೆಂಟಾ ಕೇರ್ ಸಹಯೋಗದಲ್ಲಿ.

ವೆರಿಕೋಸ್ ವೇಯ್ನ್ ಹೃದ್ರೋಗ, ಡಯಾಬಿಟೀಸ್ ನಂತೆ ಸಾಮಾನ್ಯ ಖಾಯಿಲೆ ಯಾಗಿದೆ. ಭಾರತ ದಲ್ಲಿ ಇದರಿಂದ 30-40%ಜನರು ಬಳಲುತ್ತಿದ್ದಾರೆ. ಇದಕ್ಕೆ ಕಾರಣ ಅತಿಯಾಗಿ ನಿಂತುಕೊಂಡೆ ಅಥವಾ ಕುಳಿತುಕೊಂಡೆ ಕೆಲಸ ಮಾಡುವುದು, ಕಲಬೆರಕೆ ಆಹಾರ, ಅತಿಯಾದ ಮಾಂಸ ಸೇವನೆ, ಗರ್ಭಿಣಿ ಹಾಗೂ ವಂಶ ಪಾರಂಪರ್ಯವಾಗಿ ಬರುವುದು.
ಇದಕ್ಕೆ ಆಪರೇಷನ್ ಸಹ ಸಂಪೂರ್ಣ ಪರಿಹಾರವಲ್ಲ. ಇಷ್ಟೊಂದು ಗಂಭೀರ ಖಾಯಿಲೆ ಹಾಗೂ ಸೂಕ್ತ ಔಷದಿ ಇಲ್ಲದ ಕಾರಣ DR. URALS VARICOSE AYURVEDA CURE ಸಂಸ್ಥೆಯು ಉತ್ತಮ ಫಲಿತಾಂಶ ನೀಡುತ್ತಿರುವ ಅಮೃತ varicose ಸಿರಪನ್ನು ರಿಸರ್ಚ್ ಸೆಂಟರ್ ನಲ್ಲಿ ಪ್ರಯೋಗಕ್ಕೆ ಒಳಪಡಿಸಿ ಅವಿಸ್ಕರಿಸಿದ್ದಾರೆ.
ಈ ಔಷದಿಯು ವೆರಿಕೋಸ್ ವೇಯ್ನ್ ನಲ್ಲಿ ಉಂಟಾಗುವ ರಕ್ತ ಹೆಪ್ಪು ಗಟ್ಟುವಿಕೆ, ರಕ್ತ ನಾಳ ಉಬ್ಬುವಿಕೆ, ಚರ್ಮ ಕಪ್ಪಾಗುವಿಕೆ, ಕಾಲು ನೋವು.. ಭಾರವಾಗುವಿಕೆ.. ಊದಿ ಕೊಳ್ಳುವಿಕೆ, ತುರಿಕೆ ಹಾಗೂ ಕೊನೆಯ ಹಂತ ವಾದ venous ulcer ಸಹ ಗುಣಪಡಿಸಲು ಶಕ್ತ ವಾಗಿದೆ.

ವೆರಿಕೋಸ್ ವೇಯ್ನ್ chronic venous insufficiency ಒಂದು ಲಕ್ಷಣ ವಾಗಿದ್ದು, ಉರಲ್ಸ್ ರವರ ಚಿಕಿತ್ಸೆ ಯಿಂದ ಇದರ ಬೇರೆ ಎಲ್ಲಾ ಲಕ್ಷಣಗಳು ಸಹ ಗುಣವಾಗುತ್ತಿರುವುದು ವಿಶೇಷತೆಯಾಗಿದೆ.
ಯಾಕೆಂದರೆ chronic venous insufficiency ಗೆ ಇಲ್ಲಿಯವರೆಗೆ ಕೇವಲ ರೋಗ ಲಕ್ಷಣಕ್ಕೆ ಮಾತ್ರ ಚಿಕಿತ್ಸೆ ನೀಡುತ್ತಿದು ರೋಗಕ್ಕೆ ಚಿಕಿತ್ಸೆ ದೊರೆಯುತ್ತಿರಲಿಲ್ಲ. ಕೆಳಗಿನ ವಿಡಿಯೋ ಚಿಕಿತ್ಸೆ ಗೆ ಕಷ್ಟ ಸಾಧ್ಯವಾದ ರೋಗಿಯ ಉರಲ್ಸ್ ರವರ ಚಿಕಿತ್ಸೆಯಿಂದ ಗುಣವಾಗುತ್ತಿರುವ ವಿಡಿಯೋವಾಗಿದೆ. ತಪಾಸಣಾ ಸ್ಥಳ :ಡೆಂಟಾ ಕೇರ್ ಕ್ಲಿನಿಕ್,ಹೆಡ್ ಪೋಸ್ಟ್ ಆಫೀಸ್ ಸಮೀಪ. ಉಡುಪಿ

DR URALS VARICOSE VEIN AYURVEDA CURE
For Appointment :
Ph. 9980362370 8105371042
Click Here to Check Dr.Urals Website
Click Here to Check Dr. Urals Facebook Page

ನಿಸ್ವಾರ್ಥ ಸೇವಾ ಚತುರ ಅಮಿತ್ ರಾಜ್ ಕೋಡಿಕಲ್

Posted On: 03-12-2020 11:43PM

ಹಿಂದೂ ಸಂಘಟನೆಯಲ್ಲಿ ನಾನಾ ಜವಾಬ್ದಾರಿ ನಿರ್ವಹಿಸಿದ್ದು ರಾಜಕೀಯ ಪಕ್ಷದಲ್ಲೂ ದುಡಿಯುತ್ತಿದ್ದಾರೆ. ಸಾಕಷ್ಟು ಕಡೆ ಅಮಿತ್ ರಾಜ್ ಅನ್ನೋ ಹೆಸರನ್ನ ನೀವು ಕೇಳಿರುವಿರಿ. ಅದೆಷ್ಟೋ ಜನ ಅಮಿತ್ ರಾಜ್ ರವರ ಬಗ್ಗೆ ಹೇಳುವ ಮಾತು... ಅವರೊಂದು ಶಕ್ತಿ. ಹಿಂದುತ್ವಗೋಸ್ಕರ ದುಡಿಯುವಂತಹ ಪ್ರಾಮಾಣಿಕ ನಾಯಕ ಹಾಗೆ ಬಡವರ ಸೇವೆ ಮಾಡುವಂತಹ ಸಮಾಜಸೇವಕ. ತನ್ನ ಬಾಲ್ಯಜೀವನದಿಂದಲೇ "ರಾಷ್ಟ್ರೀಯ ಸ್ವಯಂ ಸೇವಕ ಸಂಘದ " ಸಂಘ ಶಿಕ್ಷಣ ಪಡೆದು ಸ್ವಯಂ ಸೇವಕರಾಗಿದ್ದು, ಸಂಘದ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡವರು. ಬಾಲ್ಯದಿಂದಲೇ ಒಂದು ಆಸೆಯನ್ನ ತನ್ನೊಳಗೆ ಬಚ್ಚಿಟ್ಟುಕೊಂಡಿದ್ದರು. ಸಮಾಜದಲ್ಲಿ ನಾನು ಮತ್ತೊಬ್ಬರಿಗೆ ಒಳ್ಳೆಯದನ್ನ ಮಾಡಬೇಕು, ಸಮಾಜಕ್ಕೆ ಒಳಿತಿನ ಹಸ್ತವಾಗಿ ದುಡಿಯಬೇಕು ಎಂಬ ಮನಸ್ಥಿತಿಯಲ್ಲಿ ಬೆಳೆದು ತಾನು ಅಂದುಕೊಂಡ ಹಾಗೆ ಬದುಕುತ್ತಿದ್ದಾರೆ.

ಅಮಿತ್ ರವರು ನಂತರದ ದಿನಗಳಲ್ಲಿ ಬಡವರ ಸೇವೆಯನ್ನ ಮಾಡಲು ಮುಂದಾದರು. ಇವತ್ತಿಗೂ ಅದೆಷ್ಟೋ ಬಡವರ ಕಷ್ಟಕ್ಕೆ ಮರುಗಿ, ಅವರ ಕಣ್ಣೀರ ನೋವಿಗೆ ಆಸರೆಯಾಗಿರೋದು ನಿಜಕ್ಕೂ ಶ್ಲಾಘನೀಯ ವಿಚಾರ. ಪ್ರಾಮಾಣಿಕತೆಗೆ ಮತ್ತೊಂದು ಪ್ರತೀಕವೆನ್ನಬಹುದು.ಅಮಿತ್ ರಾಜ್ ರಿಗೆ ಅದೆಷ್ಟೇ ಹೆಸರಿದ್ದರೂ ಯಾವತ್ತು ತನ್ನ ಕಾರ್ಯಕರ್ತರ ಜೊತೆ ನಾಯಕನಂತೆ ಮೆರೆಯದೆ, ಅಹಂಕಾರವನ್ನ ತೋರದೆ ಸಾಮಾನ್ಯವಾಗಿ ಅವರೊಂದಿಗೆ ಕೆಲಸ ಮಾಡೋ ಆ ಕಾರಣಕ್ಕಾಗಿ ಅಭಿಮಾನಗಳು ಹುಟ್ಟಿಕೊಂಡಿವೆ. ನಿಜಕ್ಕೂ ಎಂತಹ ಸಾರ್ಥಕ ಜೀವನ. ಅವರ ನಿಲುವು ಹಾಗೆಅವರ ಮಾರ್ಗದರ್ಶನದ ಪ್ರತಿಯೊಂದು ಹೆಜ್ಜೆಯಲ್ಲೂ ಅರ್ಥವಿದೆ. ಸಮಾಜಕ್ಕಾಗಿ ಅಮಿತ್ ರಾಜ್ : ಅವರ ನೇತೃತ್ವದಲ್ಲಿ ಬಡಮಕ್ಕಳ ಶಾಲೆಗೆ ಭೇಟಿ ನೀಡಿ ಹಾಗೂ ಹಲವಾರು ಅಶಕ್ತ ಕುಟುಂಬದ ಮನೆಗೆ ಭೇಟಿ ನೀಡಿ ಅವರಿಗೆ ಸಹಾಯ ಮಾಡುವುದರೊಂದಿಗೆ ಅನೇಕ ಸಮಾಜಮುಖಿ ‌ಕೆಲಸ ಮಾಡಿರುತ್ತಾರೆ. ಅಲ್ಲದೆ 26-01-2018 ಮಂಗಳೂರಿನಲ್ಲಿ ಸುಮಾರು ನೂರು ಜನರ ನೇತ್ರದಾನ ಸಂಕಲ್ಪ ಮಾಡಿಸುವ ಮೂಲಕ ನೇತ್ರದಾನ_ಶಿಬಿರ ನಡೆಸಿರುತ್ತಾರೆ. ಇದಕ್ಕಿಂತ ಪುಣ್ಯದ ಕೆಲಸ ಬೇರೇನಿದೆ. ಇವೆಲ್ಲ ಸಮಾಜಕ್ಕೆ ಪ್ರಾಮುಖ್ಯತೆ ನೀಡೋ ಕೆಲಸವಾದರೆ ಇನ್ನು ಪರದೆಯ ಹಿಂದೆ ಅದೆಷ್ಟೋ ಒಳಿತಿನ ಸಹಾಯವನ್ನ ಇವರು ಮಾಡುತ್ತಲೇ ಬರುತ್ತಿದ್ದಾರೆ ಕಾರಣವಿಷ್ಟೇ ತಾನು ಮಾಡೋ ಕೆಲಸ ದೇವರಿಗೆ ಗೊತ್ತಾದರೆ ಸಾಕು ಸಮಾಜಕ್ಕೆ ಬೇಡ ಎಂಬ ಅರ್ಥದೊಳು ಕೆಲಸ ಮಾಡೋ ಸರಳತೆಯ ನಾಯಕನೇ ಇವರು.

ಹೆಚ್ಚು ಹೇಳಬೇಕೆಂದರೆ ಅತ್ತಾಗ ಕಣ್ಣೀರು ಒರೆಸೋ ನಾಯಕ ಸೋತಾಗ ಹೆಗಲು ಕೊಡೊ ನಾಯಕ ಬಡವರ ನೋವಿಗೆ ಶಕ್ತಿತುಂಬೋ ನಾಯಕ ಕಾರ್ಯಕರ್ತರಿಗೆ ಧೈರ್ಯ ತುಂಬೋ ನಾಯಕ ಎಲ್ಲೇ ಯಾರಿಗೂ ತೊಂದರೆಯಾದರೂ ಕ್ಷಣ ಮಾತ್ರದಲ್ಲಿ ಸ್ಪಂದಿಸೋ ನಾಯಕ ಅನ್ಯಾಯದ ವಿರುದ್ಧ ಗರ್ಜಿಸೋ ನಾಯಕ ನೊಂದ ಜೀವಕ್ಕೆ ಆಸರೆಯಾಗೋ ನಾಯಕ ಪ್ರಾಮಾಣಿಕ ಸಿದ್ದಾಂತಕ್ಕೆ ಸೈ ಎನ್ನೋ ನಾಯಕ ಸರಳತೆಯಲ್ಲಿ ಬದುಕೋ ನಾಯಕ ಒಟ್ಟಿನಲ್ಲಿ ನಾಯಕ ಅನ್ನೋ ಪದಗಳಿಗೆ ಅರ್ಹತೆಯ ಮಡಿಲು ತುಂಬೋ ನಿಸ್ವಾರ್ಥ ವ್ಯಕ್ತಿ ಅನ್ಯಾಯ ಮಾಡುವರನ್ನ ಹತ್ತಿರವೂ ಸೇರಿಸದೆ ನ್ಯಾಯದ ಪರ ಕೆಲಸ ಮಾಡೋ ಜನರ ಜೊತೆ ಬೆರೆತು ನಾನಿದ್ದೇನೆ ಎಂಬ ಭರವಸೆಯ ಶಕ್ತಿಯಾಗಿ ದುಷ್ಟರಿಗೆ ಅಂಜದೆ, ದೈವ ದೇವರುಗಳ ಆಶೀರ್ವಾದ ಪಡೆದು ಹಿಂದೂ ಧರ್ಮದ ತತ್ವಗಳನ್ನ ಪಾಲಿಸುತ್ತ, ಹಿಂದೂಭದ್ರಕೋಟೆಗೆ ಕಾವಲಿರೋ ಈ ನಾಯಕನ ಬಗ್ಗೆ ಅದೆಷ್ಟೇ ಮಾತುಗಳ ವರ್ಣನೆ ನೀಡಿದರು ಅದು ಕಡಿಮೆಯೇ. ಇಲ್ಲಿಯವರೆಗೆ ನಾ ಇವರನ್ನ ಭೇಟಿಯಾಗಿಲ್ಲ..ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ #ನಿಜ!! ಆದರೆ ಭೇಟಿಯಾಗದಿದ್ದರು ಹತ್ತಿರದಿಂದ ನೋಡಿದ್ದೇನೆ ಎಂಬ ಅರಿವು ಅಭಿಮಾನಿಗಳ ಮಾತುಗಳಿಂದ ಹಾಗು ಅವರ ಕೆಲಸದಿಂದ ಗೊತ್ತಾಗುತ್ತದೆ.

ಸ್ವಾರ್ಥ ತುಂಬಿರೋ ಈ ಪ್ರಪಂಚದಲ್ಲಿ ಇಂತಹ ನಾಯಕರು ಹಲವರಿಗೆ ಮಾದರಿಯಾಗಬೇಕು. "ಅಮಿತ್ ರವರು" ವೇದಿಕೆಯ ಮುಂಭಾಗ ನಿಂತು ಕೆಲಸ ಮಾಡುವರಲ್ಲ, ಪರದೆಯ ಹಿಂದೆ ದುಡಿಯುವಂತಹ ಕಾಯಕ. ಹಾಗೆ ಇವರು "ರಾಷ್ಟ್ರೀಯ ಸ್ವಯಂಸೇವಕ ಸಂಘದ" ಸಂಘ ಶಿಕ್ಷಣ ಪಡೆದು ಆರ್ ಎಸ್ ಎಸ್ ನಲ್ಲಿ ಬಹಳ ಒಲವನ್ನು ಇಟ್ಟುಕೊಂಡವರು. ಆರ್ ಎಸ್ ಎಸ್ ಪ್ರಮುಖ ಅಂಶಗಳನ್ನ ತನ್ನೊಳಗೆ ಅಳವಡಿಸಿ ಹಿಂದೂರಾಷ್ಟ್ರದ ಭಗವಧ್ವಜ ಪತಾಕೆ ಬಹಳ ಎತ್ತರಕ್ಕೆ ಹಾರಲಿ ಎಂಬ ಕನಸು ಕಂಡವರು. ನೀವು ಹಿಂದೂ ಸಮಾಜಗೋಸ್ಕರ ಕೊಟ್ಟಿರೋ ಕೊಡುಗೆಗೆ ಬೆಲೆಕಟ್ಟಲಾಗದು. ನಿಮ್ಮಿಂದ ಇನ್ನು ಅನೇಕ ಒಳಿತಿನ ವಿಚಾರಗಳು ಮೂಡಿ ಬರೆಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮ ಹೊಸ ಪಯಣದ ಆರಂಭ ಅದೆಷ್ಟೋ ಜನರಿಗೆ ಪ್ರೇರಣೆಯಾಗಲಿ. ಸದಾ ನಿಮ್ಮ ವ್ಯಕ್ತಿತ್ವದ ಅಭಿಮಾನಿ ನಾ.... ಬರಹ :ಪ್ರವೀಣ್ ಪೂಜಾರಿ