Updated News From Kaup

ಕುತ್ಯಾರು ವೀರಭದ್ರ ದೇವಸ್ಥಾನ : ದೀಪೋತ್ಸವ

Posted On: 01-12-2020 11:15AM

ಕುತ್ಯಾರು ಅರಮನೆಯ ಆಡಳಿತಕ್ಕೊಳಪಟ್ಟ ಇತಿಹಾಸ ಪ್ರಸಿದ್ಧ ಕುತ್ಯಾರು ವೀರಭದ್ರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಕುತ್ಯಾರು ಅರಮನೆ ಜಿನೇಶ್ ಬಲ್ಲಾಳ್ ರವರ ಮುಂದಾಳತ್ವದಲ್ಲಿ, ಕೇಂಜ ಶ್ರೀಧರ ತಂತ್ರಿಯವರ ಉಪಸ್ಥಿತಿಯಲ್ಲಿ, ಕುತ್ಯಾರು ರಾಮಕೃಷ್ಣ ತಂತ್ರಿ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಸ್ಥಳೀಯ ಭಜನಾ ತಂಡದಿಂದ ಭಜನೆ ಮತ್ತು ಅನ್ನದಾನವು ನೆರವೇರಿತು.

ಈ ಸಂದರ್ಭ ಅರಮನೆಯ ಸ್ಮಿತಾ ಜಿನೇಶ್ ಬಲ್ಲಾಳ್ ಮತ್ತು ಮಕ್ಕಳು, ನವೀನ್ ಶೆಟ್ಟಿ, ಸತೀಶ್ ಕುತ್ಯಾರು, ಕುತ್ಯಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಧೀರಜ್ ಶೆಟ್ಟಿ, ಅಶೋಕ್ ಗೌಡ, ಪ್ರವೀಣ್ ಭಂಡಾರಿ, ಶ್ರೀಧರ ಕುಲಾಲ್, ಯುವಕ ಮಂಡಲದ ಅಧ್ಯಕ್ಷ ಪ್ರವೀಣ್ ಆಚಾರ್ಯ, ಸಂಪತ್ ಕುಮಾರ್ ಕೇಂಜ ಮೊದಲಾದವರು ಉಪಸ್ಥಿತರಿದ್ದರು.

ಕುತ್ಯಾರು ವೀರಭದ್ರ ದೇವಸ್ಥಾನದಲ್ಲಿ ಕಾರ್ತಿಕಮಾಸದ ದೀಪೋತ್ಸವ

Posted On: 30-11-2020 11:02AM

ಕುತ್ಯಾರು ಅರಮನೆಯ ಆಡಳಿತಕ್ಕೊಳಪಟ್ಟ ಇತಿಹಾಸ ಪ್ರಸಿದ್ಧ ಕುತ್ಯಾರು ವೀರಭದ್ರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಇಂದು (ನವೆಂಬರ್ 30 ಸೋಮವಾರ) ಸಂಜೆ 7:30 ಕ್ಕೆ ಸರಿಯಾಗಿ ಕುತ್ಯಾರು ಅರಮನೆ ಜಿನೇಶ್ ಬಲ್ಲಾಳ್ ರವರ ಮುಂದಾಳತ್ವದಲ್ಲಿ, ಕುತ್ಯಾರು ರಾಮಕೃಷ್ಣ ತಂತ್ರಿ ನೇತೃತ್ವದಲ್ಲಿ, ಕುತ್ಯಾರು ಯುವಕ ಮಂಡಲ ಮತ್ತು ಗ್ರಾಮಸ್ಥರ ಸಹಕಾರದಿಂದ ಜರಗಲಿದೆ ಎಂದು ನಮ್ಮ ಕಾಪುವಿಗೆ ತಿಳಿಸಿದ್ದಾರೆ.

ಎಂ.ಕೆ.ರಮೇಶ ಆಚಾರ್ಯ ಕೊಲೆಕಾಡಿ ಅವರಿಗೆ ಸಮ್ಮಾನ

Posted On: 29-11-2020 10:08PM

ಉಡುಪಿ ಕಿದಿಯೂರು ಇಲ್ಲಿಯ 'ಯಕ್ಷ ಆರಾಧನಾ ಟ್ರಸ್ಟ್' ವತಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಯಕ್ಚಗಾನ ವೇಷಧಾರಿ ಎಂ .ಕೆ .ರಮೇಶ ಆಚಾರ್ಯ ಹಾಗೂ ಮಂಗಳೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಛಾಂದಸ ಗಣೇಶ ಕೊಲೆಕಾಡಿಯವರನ್ನು ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸಮ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು‌ ಜಾನಪದ ಸಂಶೋಧಕ ಕೆ.ಎಲ್. ಕುಂಡಂತಾಯ ವಹಿಸಿದ್ದರು .ಯಕ್ಷಗಾನ ವೇಷಧಾರಿ , ಬಲ್ಲಿರೇನಯ್ಯ ಪತ್ರಿಕೆಯ ಸಂಪಾದಕ ತಾರಾನಾಥ ವರ್ಕಾಡಿ ಅಭಿನಂದನಾ ಭಾಷಣಮಾಡಿದರು .

ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ವಿ.ಜಿ.ಶೆಟ್ಟಿ .ಬಾರಕೂರು ಕಾಳಿಕಾಂಬಾ ದೇವಸ್ಥಾನದ ಮಾಜಿ ಆಡಳಿತೆ ಮೊಕ್ತೇಸರರಾದ ಅಲೆವೂರು ಯೋಗೀಶ ಆಚಾರ್ಯ , ವಿಜಯಕುಮಾರ್ ಮುದ್ರಾಡಿ , ಶ್ರೀಮತಿ ನಿರುಪಮಾ ಶೆಟ್ಟಿ , ದಿವಾಕರ ಆಚಾರ್ಯ ಅವರು ಉಪಸ್ಥಿತರಿದ್ದರು . ಕೆ.ಜೆ.ಗಣೇಶ ಸ್ವಾಗತಿಸಿದರು , ಚಂದ್ರಕಾಂತ ಆಚಾರ್ಯ ವಂದಿಸಿದರು .‌‌ ಜಗದೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಟ್ರಸ್ಟ್ ನ ಕೆ.ಜೆ.ಗಣೇಶ , ಕೆ.ಜೆ .ಸುಧೀಂದ್ರ ,ಕೆ.ಜೆ.ಕೃಷ್ಣ ಅವರು ಕಾರ್ಯಕ್ರಮ ಸಂಯೋಜಿಸಿದ್ದರು .ಬಳಿಕ ಬಾಲ ಕಲಾವಿದರಿಂದ ಯಕ್ಷ ನೃತ್ಯ ರೂಪಕ "ನರಕಚತುರ್ದಶಿ" ಪ್ರದರ್ಶನಗೊಂಡಿತು.

ಕೀಳಂಜೆ ದೇವಳ: ಸ್ವಚ್ಛತಾ ಅಭಿಯಾನ

Posted On: 29-11-2020 09:49PM

ಸ್ವರ್ಣಾರಾಧನಾ ಅಭಿಯಾನದ ಪ್ರಯುಕ್ತ ಸ್ವಚ್ಛ ಭಾರತ್ ಫ್ರೆಂಡ್ಸ್, ಯುವ ವಿಚಾರ ವೇದಿಕೆ ಉಪ್ಪೂರು ಜಂಟಿ ಆಶ್ರಯದಲ್ಲಿ ಕೀಳಂಜೆ ಮಹಾವಿಷ್ಣು ಮಹೇಶ್ವರ ದೇವಾಲಯದ ವಠಾರದಲ್ಲಿ ಇಂದು ಸ್ವಚ್ಛತಾ ಅಭಿಯಾನ ನಡೆಯಿತು.

ಎರಡು ಗಂಟೆಗಳ ಕಾಲ ನಡೆದ ಸ್ವಚ್ಚತಾ ಅಭಿಯಾನದಲ್ಲಿ ದೇವಸ್ಥಾನದ ಒಳ ಮತ್ತು ಹೊರ ಆವರಣದಲ್ಲಿ ಮತ್ತು ಪುಷ್ಕರಣಿಯನ್ನು ಶುಚಿಗೊಳಿಸಲಾಯಿತು. ಅಭಿಯಾನ ನಡೆಯುತ್ತಿರುವ ಸಮಯದಲ್ಲಿ ವರುಣನ ಆಗಮನವಾಯಿತು. ಬಳಿಕ ಸಾಮೂಹಿಕ ಪ್ರಾರ್ಥನೆ ಮತ್ತು ವಿಶೇಷ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮುಖ್ಯ ಪ್ರಬಂಧಕ ಪ್ರಭಾಕರ ಭಟ್, ವೇದಮೂರ್ತಿ ರವೀಂದ್ರ ಭಟ್, ಡಾ.‌ ಶಿವಾನಂದ ನಾಯಕ್, ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್, ಸಂಯೋಜಕ ರಾಘವೇಂದ್ರ ಪ್ರಭು, ಜಗದೀಶ್ ಶೆಟ್ಟಿ, ನ್ಯಾಯವಾದಿ ರಫೀಕ್ ಖಾನ್, ನಾಗರಾಜ್ ಭಂಡಾರ್ಕರ್, ಪುಷ್ಕರ್ ಭಟ್, ಯುವ ವಿಚಾರ ವೇದಿಕೆ ಅಧ್ಯಕ್ಷ ದಿನೇಶ್ ಶೆಟ್ಟಿ, ಕಾರ್ಯದರ್ಶಿ ಸುಕೇಶ, ಯೋಗೀಶ್ ಕೊಳಲಗಿರಿ, ಸದಾಶಿವ್, ಅಶೋಕ್, ರವೀಂದ್ರ, ಸುಬ್ರಹ್ಮಣ್ಯ ಆಚಾರ್ಯ, ಶಶಿಕುಮಾರ್, ಶೋಭಾ ಯೋಗೀಶ್, ಸಂದೀಪ್ ಶೆಟ್ಟಿ, ಸುಕನ್ಯಾ, ಕಾವ್ಯ, ಹೇಮಂತ್, ಅವಿನಾಶ್, ವೈಭವ್, ನಾಗರಾಜ್, ಶಾಂತ, ದಾಮೋದರ ನಾಯ್ಕ್ ಮಣಿಪಾಲ, ಮುಂತಾದವರು ಉಪಸ್ಥಿತರಿದ್ದರು.

ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸುರೇಶ್ ಪಿ. ಶೆಟ್ಟಿ ಗುರ್ಮೆ ಆಯ್ಕೆ

Posted On: 29-11-2020 07:39PM

ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಉದ್ಯಮಿ ಸುರೇಶ್ ಪಿ. ಶೆಟ್ಟಿ ಗುರ್ಮೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ನೂತನ ಕಾರ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿ, ಘೋಷಿಸಲಾಯಿತು.

ಅಭಿವೃದ್ಧಿ ಸಮಿತಿಯ ಖಾಯಂ ಆಹ್ವಾನಿತರಾಗಿ ಸಂಸದರಾದ ಶೋಭಾ ಕರಂದ್ಲಾಜೆ ಅವರನ್ನು ನೇಮಕ ಮಾಡಲಾಗಿದ್ದು, ಜಯ ಸಿ. ಸುವರ್ಣ ಅವರ ನಿಧನದಿಂದ ತೆರವಾದ ಗೌರವಾಧ್ಯಕ್ಷ ಸ್ಥಾನಕ್ಕೆ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಸಮಿತಿಯ ಗೌರವಾಧ್ಯಕ್ಷ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಗೌರವಾಧ್ಯಕ್ಷ ಮೂಳೂರು ಸುಧಾಕರ ಹೆಗ್ಡೆ  ಮುಂಬಯಿ, ಹೊಸ ಮಾರಿಗುಡಿ ದೇವಸ್ಥಾನದ ಆಡಳಿತಾಽಕಾರಿ ರವಿ ಕುಮಾರ್, ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಕಲ್ಯ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಹಾಗೂ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಉಡುಪಿ :ನನ್ನ ಬೀಚ್ ಸ್ವಚ್ಛ ಬೀಚ್ ಅಭಿಯಾನ

Posted On: 29-11-2020 05:21PM

ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡದಿಂದ ನನ್ನ ಬೀಚ್ ಸ್ವಚ್ಛ ಬೀಚ್ ಅಭಿಯಾನದ ಮೂಲಕ ಪರಿಸರಕ್ಕೆ ಅಳಿಲು ಸೇವೆ ಮಾಡಲಾಯಿತು. ಹೂಡೆಯ ಬೀಚ್ ಅನ್ನು ಪ್ಲಾಸ್ಟಿಕ್ ಮುಕ್ತ ಮಾಡುವಲ್ಲಿ ಈ ತಂಡವು ಶ್ರಮಿಸಿತು. ಈ ಸಂದರ್ಭದಲ್ಲಿ ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡದ ಸ್ಥಾಪಕಾಧ್ಯಕ್ಷರಾದ ಡಾ. ಕೀರ್ತಿ ಪಾಲನ್ ಹಾಗೂ ಜಗದೀಶ್ ಬಂಟಕಲ್ ಉಪಸ್ಥಿತರಿದ್ದರು.

ಸಂತೆಕಟ್ಟೆ : ಸ್ವರ್ಣೆಯ ಸ್ವಚ್ಛತೆ ಅಭಿಯಾನ

Posted On: 29-11-2020 02:08PM

ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ತಂಡದ ವತಿಯಿಂದ ಸಂತೆಕಟ್ಟೆಯ ಸ್ವರ್ಣ ನದಿಯ ಸೇತುವೆಯ ಇಕ್ಕೆಲಗಳಲ್ಲಿ ಪ್ರಜ್ಞಾವಂತ ನಾಗರೀಕರು ಎಸೆದ ಕಸ ಕಶ್ಮಲ ಗಳನ್ನೂ ಒಟ್ಟು ಮಾಡಿ ಸ್ವರ್ಣೆಯ ನ್ನು ಶುದ್ದೀಕರಿಸುವ ಕಾರ್ಯಕ್ರಮ ನ.29 ಆದಿತ್ಯವಾರ ನಡೆಯಿತು.

ಪ್ಲಾಸ್ಟಿಕ್ ತ್ಯಾಜ್ಯ ಹಾಗು ಇತರ ಕಶ್ಮಲ ಗಳನ್ನೂ ಸಂಗ್ರಹಿಸಿಪ್ಲಾಸ್ಟಿಕ್, ಸೀಸ,ಬಟ್ಟೆ ಇತ್ಯಾದಿ ಗಳನ್ನೂ ವಿಭಾಗಿಸಲಾಯಿತು.ಈ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಸೆದ ಕಸಗಳು ನದಿಗೆ ಸೇರಿ ಎಲ್ಲರಿಗೂ ತೊಂದರೆಯಾಗಿತ್ತು. ಈ ಭಾಗದಲ್ಲಿ ಕೋಳಿ ತ್ಯಾಜ್ಯ ಸೇರಿದಂತೆ ಕಸವನ್ನು ನದಿಗೆ ಎಸೆಯಲಾಗುತ್ತಿದ್ದು ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಈ ಕಾಯ೯ಕ್ರಮದಲ್ಲಿ ತಂಡದ ಪ್ರಮುಖರಾದ ಡಾ|| ಶಶಿಕಿರಣ್ ಶೆಟ್ಟಿ, ರಾಘವೇಂದ್ರ ಪೂಜಾರಿ, ಬಂಗಾರಪ್ಪ, ಶಶಿ, ಸವಿತಾ ಶೆಟ್ಟಿ, ಸುಜಯಾ ಶೆಟ್ಟಿ, ನಗರಸಭಾ ಸದಸ್ಯೆ ಇಂದಿರಾ ರಮೇಶ್, ರಾಘವೇಂದ್ರ ಪ್ರಭು ಕವಾ೯ಲು ಪಂಚಾಯತ್ ಪಿ.ಡಿ.ಒ ಸತೀಶ್ ನಾಯ್ಕ, ಸ್ಥಳೀಯರು ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.

ಇನ್ನಂಜೆ : ಅಧಿಕಾರಿಗಳಿಂದ ಕ್ರಾಸಿಂಗ್ - ಪಾಸಿಂಗ್ ಸ್ಟೇಷನ್ ಕಾಮಗಾರಿ ಪರಿಶೀಲನೆ

Posted On: 29-11-2020 02:00PM

ಕಾಪು ತಾಲೂಕಿನ ಇನ್ನಂಜೆ ರೈಲ್ವೇ ನಿಲ್ದಾಣ ರಚನೆ ಸಹಿತವಾಗಿ ಕ್ರಾಸಿಂಗ್ ಮತ್ತು ಪಾಸಿಂಗ್ ಸ್ಟೇಷನ್ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದ್ದು, ಶೀಘ್ರವಾಗಿ ಮೈನ್ ಲೈನ್‌ನಿಂದ ಕ್ರಾಸಿಂಗ್ ಲೈನ್‌ಗೆ ಸಂಪರ್ಕ ಕಲ್ಪಿಸಲಾಗುವುದು ಎಂದು ಕೊಂಕಣ್ ರೈಲ್ವೇ ಕಾರವಾರ ರೀಜನ್ ರೀಜನಲ್ ಪ್ರಬಂಧಕ ಬಿ. ಬಿ. ನಿಕ್ಕಂ ಹೇಳಿದ್ದಾರೆ. ಇನ್ನಂಜೆ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ ರೈಲ್ವೇ ನಿಲ್ದಾಣ ಮತ್ತು ಕ್ರಾಸಿಂಗ್-ಪಾಸಿಂಗ್ ಸ್ಟೇಷನ್ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಅವರು ಈ ಬಗ್ಗೆ ಮಾಹಿತಿ ನೀಡಿದರು.

ಇನ್ನಂಜೆ ರೈಲ್ವೇ ನಿಲ್ದಾಣ ಮತ್ತು ಪಾಸಿಂಗ್ - ಕ್ರಾಸಿಂಗ್ ಸ್ಟೇಷನ್ ಕಾಮಗಾರಿಗೆ ಅಂದಾಜು ೧೨ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ನೂತನ ರೈಲ್ವೇ ನಿಲ್ದಾಣ ನಿರ್ಮಾಣ, ೬೨೦ ಮೀಟರ್ ಉದ್ದದ ಕ್ರಾಸಿಂಗ್ - ಪಾಸಿಂಗ್ ಟ್ರ‍್ಯಾಕ್, ೫೬೦ ಮೀಟರ್ ಉದ್ದದ ಫ್ಲಾಟ್ ಫಾರಂ ಸಹಿತ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಮೂಲಭೂತ ಸೌಕರ್ಯಗಳ ಜೋಡಣಾ ಕಾರ್ಯಪೂರ್ಣಗೊಂಡಿದೆ ಎಂದರು. ರೈಲ್ವೇ ನಿಲ್ದಾಣ ರಚನೆ ಕಾಮಗಾರಿಯು ಈಗಾಗಲೇ ಪೂರ್ಣಗೊಳ್ಳಬೇಕಿತ್ತು. ಆದರೆ ಕೋವಿಡ್ ೧೯ ಕಾಮಗಾರಿ ವಿಳಂಭವಾಗಿತ್ತು. ಲಾಕ್‌ಡೌನ್ ತೆರವಾದ ಬಳಿಕ ಕಾಮಗಾರಿಗೆ ಮತ್ತೆ ವೇಗ ನೀಡಲಾಗಿದ್ದು ಮುಂದೆ ನೂತನ ಟ್ರ‍್ಯಾಕ್‌ನಲ್ಲಿ ಪ್ರಾಯೋಗಿಕವಾಗಿ ರೈಲು ಓಡಿಸಲು ಸಿದ್ಧತೆಗಳು ಪೂರ್ಣಗೊಳಿಸಲಾಗಿದೆ ಎಂದರು.

ಸಾಮಾನ್ಯ ರೈಲ್ವೇ ಸ್ಟೇಷನ್, ಪಾಸಿಂಗ್ ಸ್ಟೇಷನ್‌ಗಳಲ್ಲಿ ಯಾವೆಲ್ಲಾ ವ್ಯವಸ್ಥೆಗಳು ಇರುತ್ತವೆಯೋ ಅದೇ ಮಾದರಿಯ ಎಲ್ಲಾ ವ್ಯವಸ್ಥೆಗಳನ್ನು ಇಲ್ಲಿ ಜೋಡಿಸಲಾಗಿದೆ. ವಿಶ್ರಾಂತಿ ಗೃಹ, ಕ್ಯಾಂಟಿನ್, ಟಿಕೆಟ್ ಕೌಂಟರ್ ಸಹಿತ ವಿವಿಧ ಸೌಲಭ್ಯಗಳು ದೊರಕಲಿವೆ ಎಂದರು. ರೈಲು ಓಡಾಟ ಯಾವಾಗ ಆರಂಭಗೊಳ್ಳುತ್ತದೆ ಎನ್ನುವುದರ ಬಗ್ಗೆ ರೈಲ್ವೇ ಮಂಡಳಿಯೇ ತೀರ್ಮಾನ ತೆಗೆದುಕೊಳ್ಳಲಿದೆ. ಕೊರೊನಾ ಕಾರಣದಿಂದಾಗಿ ಜಾರಿಗೆ ಬಂದ ಲಾಕ್‌ಡೌನ್‌ನಿಂದಾಗಿ ತೊಂದರೆಗೊಳಗಾದ ರೈಲ್ವೇ ಮಂಡಳಿ ಇನ್ನೂ ಚೇತರಿಕೆಯ ಹಾದಿಯನ್ನು ಕಂಡಿಲ್ಲ. ಕೆಲವೊಂದು ರೈಲುಗಳ ಓಡಾಟಕ್ಕೆ ಚಾಲನೆ ನೀಡಲಾಗಿದ್ದರೂ, ಶೇ. ೫೦ರಷ್ಟು ಮಾತ್ರಾ ಜನ ಸ್ಪಂಧನೆ ನೀಡುತ್ತಿದ್ದಾರೆ. ಇದರಿಂದಾಗಿ ಇಲಾಖೆಗೆ ಹೊರೆ ಹೆಚ್ಚುತ್ತಿದೆ. ಕೆಲವು ರಾಜ್ಯಗಳಲ್ಲಿ ಮತ್ತೆ ಕೊರೊನಾ ಎರಡನೇ ಹಂತದ ಭೀತಿ ಎದುರಾಗಿರುವುದರಿಂದ ಪೂರ್ಣ ಪ್ರಮಾಣದ ರೈಲು ಓಡಾಟ ಇನ್ನೂ ವಿಳಂಭವಾಗುವ ಸಾಧ್ಯತೆ ಇದೆ.

ರೈಲ್ವೇ ರೀಜನಲ್ ಅಧಿಕಾರಿಗಳಾದ ಆರ್.ಐ. ಪಾಟೀಲ್, ದೀಪಕ್ ಶೆಟ್ಟಿ, ಎ.ಬಿ. ಪುಲೆ, ಭಾಗ್ಯಪ್ರಕಾಶ್ ಶೆಟ್ಟಿ, ವಿನಯಕುಮಾರ್, ಚೀಪ್ ಇಂಜಿನಿಯರ್ ಗೋಪಾಲ್ ರಾಜ್, ಸೀನಿಯರ್ ಇಂಜಿನಿಯರ್ ವಿಜಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಹಳೆಯಂಗಡಿ : ನೂತನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಯಾನಾರಂಭ ಕಾರ್ಯಕ್ರಮ

Posted On: 29-11-2020 09:16AM

ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ದಲ್ಲಿ ನೂತನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಯಾನಾರಂಭ ಕಾರ್ಯಕ್ರಮ ಶ್ರೀ ನಾಗವೃಜ ಕ್ಷೇತ್ರ ಪಾವಂಜೆ ಯಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ವಹಿಸಿ ಮಾತನಾಡಿ ಯಕ್ಷಗಾನಾರಾಧನೆ ಮೂಲಕ ನೂತನ ಮೇಳ ಆರಂಭಿಸಿದ ಪಟ್ಲ ಸತೀಶ್ ಶೆಟ್ಟಿಯವರಿಗೆ ಯಶಸ್ಸು ದೊರೆಯಲಿ, ನಿರಂತರ ಯಕ್ಷಗಾನದ ಮೂಲಕ ಕಷ್ಟದಲ್ಲಿರುವ ಕಲಾವಿದರ ಕಣ್ಣೊರೆಸುವ ಕೆಲಸ ಸಮಾಜದಿಂದ ಆಗಲಿ ಎಂದರು. ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ವೇದ ಕೃಷಿಕ ಕೆಎಸ್ ನಿತ್ಯಾನಂದ ಶುಭಾಶಂಸನೆಗೈದರು.

ಸಮಾರಂಭದ ವಿಶೇಷ ಅಭ್ಯಾಗತರಾಗಿ, ಮಾಜೀ ಸಚಿವರಾದ ಅಭಯಚಂದ್ರ ಜೈನ್, ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು,ತಾ. ಪಂ. ಸದಸ್ಯ ಜೀವನ್ ಪ್ರಕಾಶ್,ಮುಂಬೈ ಭವಾನಿ ಶಿಪ್ಪಿಂಗ್ ನ ಕೆ.ಡಿ ಶೆಟ್ಟಿ, ಬರೋಡ ತುಳು ಕೂಟದ ಅಧ್ಯಕ್ಷರಾದ ಶಶಿಧರ್ ಶೆಟ್ಟಿ, ವಿದ್ವಾನ್ ಯೋಗಿಂದ್ರ ಭಟ್ ಪುತ್ತಿಗೆ ಮಠ, , ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಗಣೇಶ್ ಭಟ್, ಮುಗುಳಿ ತಿರುಮಲೇಶ್ವರ ಭಟ್, ವರ್ಧಮಾನ ದುರ್ಗಾ ಪ್ರಸಾದ್ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ಎಸ್ ವಿ ಮಯ್ಯ ತಡಂಬೈಲ್, ಶ್ರೀಪತಿ ಭಟ್ ಮೂಡಬಿದ್ರೆ, ಸುದೇಶ್ ಕುಮಾರ್ ರೈ, ದಿವಾಕರ್ ರಾವ್, ಪಂಚ ಮೇಳದ ಸಂಚಾಲಕರಾದ ಕಿಶನ್ ಹೆಗ್ಡೆ, ಮಹಾಬಲ ಶೆಟ್ಟಿ ಪಟ್ಲ ಗುತ್ತು, ಯಾದವ ಕೋಟ್ಯಾನ್ ಪೆರ್ಮುದೆ, ಸುರತ್ಕಲ್ ಬಂಟರ ಸಂಘದ ಸುಧಾಕರ ಪೂಂಜ, ಧರ್ಮೇಂದ್ರ ಗಣೇಶಪುರ, ಚಂದ್ರಶೇಖರ ನಾಣಿಲ್, ರಾಮದಾಸ ಪಾವಂಜೆ, ಶಿವಾನಂದ ಪ್ರಭು, ರಾಮ ಟಿ ಕಾಂಚನ್, ಪೀತಾಂಬರ ಶೆಟ್ಟಿಗಾರ, ವಾಮನ್ ಇಡ್ಯಾ, ಬುಜಬಲಿ ಧರ್ಮಸ್ಥಳ, ದೇವಳದ ಆಡಳಿತ ಮೊಕ್ತೇಸರ ಎಂ ಶಶೀಂದ್ರ ಕುಮಾರ್, ಧರ್ಮದರ್ಶಿ ಯಾಜಿ ನಿರಂಜನ ಭಟ್, ಹಾಗೂ ಮೇಳದ ಸಂಚಾಲಕರಾದ ಭಾಗವತ ಪಟ್ಲ ಸತೀಶ್ ಶೆಟ್ಟಿ,ಮತ್ತಿತರರು ಉಪಸ್ಥಿತರಿದ್ದರು.

ಪಟ್ಲ ಫೌಂಡೇಶನ್ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು. ಕದ್ರಿ ನವನೀತ್ ಶೆಟ್ಟಿ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ದಾನಿಗಳು ಮೇಳಕ್ಕೆ ಕೊಡುಗೆಯಾಗಿ ನೀಡಿದ ದೇವರ ಬೆಳ್ಳಿಯ ಪ್ರಭಾವಳಿ ,ಶ್ರೀದೇವಿಯ ಉಯ್ಯಾಲೆ ಕಿರೀಟ, ಚಕ್ರ, ಗದೆ, ಹಾಗೂ ಇನ್ನಿತರ ವಸ್ತುಗಳನ್ನು ಭವ್ಯ ಮೆರವಣಿಗೆ ಮೂಲಕ ಶ್ರೀ ಜ್ಞಾನಶಕ್ತಿ ದೇವಸ್ಥಾನದಿಂದ ಚೌಕಿ ವರೆಗೆ ತಂದು ದೇವರಿಗೆ ಸಮರ್ಪಣೆ ಮಾಡಲಾಯಿತು. ಮಧ್ಯಾಹ್ನ ತೆಂಕು ಬಡಗಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಆರಾಧನೆ ನಡೆಯಿತು. ಸಭಾಕಾರ್ಯಕ್ರಮದ ಬಳಿಕ ಸಂಜೆ ನೂತನ ಮೇಳದಿಂದ ಸೇವಾ ಬಯಲಾಟವಾಗಿ ಪಾಂಡವಾಶ್ವಮೇಧ ಯಕ್ಷಗಾನ ಬಯಲಾಟ ನಡೆಯಿತು.

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ

Posted On: 27-11-2020 09:07PM

2019-20 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ತನ್ನ ಕಾರ್ಯವ್ಯಾಪ್ತಿಯಲ್ಲಿ ಸಾಧಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಸೊಸೈಟಿ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರಿ ನಿಶ್ಮಿತಾ ಪಿ. ಎಚ್ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರು ಮತ್ತು ನಿರ್ದೇಶಕರುಗಳು ಉಪಸ್ಥಿತರಿದ್ದರು.