Updated News From Kaup
ಶಂಕರಪುರ ಸೆಂಟ್ ಜೋನ್ಸ್ ಶಾಲೆಗಳ ಹಳೆವಿದ್ಯಾರ್ಥಿ ಸಂಘದಿಂದ ಮಕ್ಕಳಿಗಾಗಿ ಹದಿಹರೆಯದ ಸಮಸ್ಯೆಗಳು ಮತ್ತು ಪರಿಹಾರ ಕಾರ್ಯಕ್ರಮ
Posted On: 09 Mar 2021, 10:47 PM
ಕಾಪು : ಸೆಂಟ್ ಜೋನ್ಸ್ ಶಾಲೆಗಳ ಹಳೆವಿದ್ಯಾರ್ಥಿ ಸಂಘವು ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸೈಂಟ್ ಜೋನ್ಸ್ ವಿದ್ಯಾಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗಾಗಿ ಹದಿಹರೆಯದ ಸಮಸ್ಯೆಗಳು ಮತ್ತು ಪರಿಹಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೈನಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ರಾಯನ್ ಫೆರ್ನಾಂಡಿಸ್ ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ಶ್ರೀ ಅಶ್ವಿನ್ ರೋಡ್ರಿಗಸ್, ಸೈಂಟ್ ಜೋನ್ಸ್ ಅಕಾಡೆಮಿ ಮುಖ್ಯಸ್ಥೆ ಸಿಸ್ಟರ್ ಜ್ಯುಲಿಯಾನ ಉಪಸ್ಥಿತರಿದ್ದರು. ಶಿಕ್ಷಕಿ ಸುನೀತಾ ಡಿಸೋಜ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯಸ್ಥೆ ಶ್ರೀಮತಿ ಐರಿನ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿ, ಡೊಮಿಯನ್ ನೊರೊನ್ನಾ ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಮತಿ ಸಮೀರ ರೆಬೆಲ್ಲೋ ವಂದಿಸಿದರು.
ಕಾಪು ಲಯನ್ಸ್ ಕ್ಲಬ್ ವತಿಯಿಂದ ಸ್ವಾಗತ, ಸಂದೇಶ ಸಾರುವ ಫಲಕ
Posted On: 09 Mar 2021, 10:35 PM
ಕಾಪು : ಕಾಪು ಲಯನ್ಸ್ ಕ್ಲಬ್ ವತಿಯಿಂದ ಕಾಪು ಪುರಸಭಾ ವ್ಯಾಪ್ತಿಯಲ್ಲಿ ಪಾಂಗಳ ಸೇತುವೆ ಹತ್ತಿರ ಬೀಚ್ ಸಿಟಿ ಕಾಪುವಿಗೆ ಪುರಸಭಾ ವ್ಯಾಪ್ತಿಗೆ ಸ್ವಾಗತ ಹಾಗೂ ರಸ್ತೆ ಮೇಲೆ ಕಸ ಹಾಕಬೇಡಿ ಎಂಬ ಸಂದೇಶ ಸಾರುವ ಫಲಕ ಲಯನ್ಸ್ ನ ಜಿಲ್ಲಾ ಗವರ್ನರ್ ಯನ್.ಎಮ್. ಹೆಗ್ಡೆ ಹಾಗೂ ಕಾಪು ಪುರಸಭಾ ಅಧಕ್ಷ ರಾದ ಅನಿಲ್ ಕುಮಾರ್ ರವರು ಜಂಟಿಯಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಪು ಪುರಸಭೆಯ ಮುಖ್ಯಾಧಿಕಾರಿ ವೆಂಕಟೇಶ್ ನಾವಡ ರವರು ಕಾಪುವಿಗೆ ಸ್ವಾಗತ ಕೋರುವ ಈ ಫಲಕ ಒಂದು ಒಳ್ಳೆಯ ಸಂದೇಶ ಸಾರುವ ಫಲಕವಾಗಿದು ಮುಂದಿನ ದಿನಗಳಲ್ಲಿ ಪುರಸಭೆಯಿಂದ ಇನ್ನಷ್ಟು ಫಲಕಗಳು ಅಳವಡಿಸಲಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಪು ಠಾಣೆಯ ಎ.ಯಸ್.ಐ ಜಯ ಪ್ರಕಾಶ್ ,ಮಾಜಿ ಜಿಲ್ಲಾ ಗವರ್ನರ್ ಸುರೇಶ್ ಶೆಟ್ಟಿ , ಕಾಪು ಲಯನ್ಸ್ ನ ಅಧ್ಯಕ್ಷ ವರುಣ್ ಶೆಟ್ಟಿ, ಯೋಗೀಶ್ ಶೆಟ್ಟಿ ಬಾಲಾಜಿ, ಜಿಲ್ಲಾ ಸಂಯೋಜಕ ರಾದ ವಿ. ಟಿ ಹೆಗ್ಡೆ, ಜಯಕುಮಾರ್, ನಡಿಕೆರೆ ರತ್ನಾಕರ ಶೆಟ್ಟಿ, ಕೆ. ಯಂ. ಲುತುಫುಲ್ಲ, ನಾಗರಾಜ್ ರಾವ್ ,ಕಾಪು ಲಯನ್ಸ್ ನ ಪಿ ಆರ್ ಓ ಹರೀಶ್ ನಾಯಕ್ ಕಾಪು ಸ್ವಾಗತಿಸಿ, ಕಾರ್ಯದರ್ಶಿ ಸಂತೋಷ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶ್ರೀಮತಿ ಬೇಬಿ ರಮೇಶ್ ಪೂಜಾರಿಯವರಿಗೆ ಸಮ್ಮಾನ
Posted On: 09 Mar 2021, 10:29 AM
ಉಡುಪಿ : ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.) ಉಡುಪಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗ ವಾಗಿ ತೆರೆಮರೆಯಲ್ಲಿ ಸಮಾಜ ಸೇವೆ ಮಾಡುತ್ತಿರುವ ಶ್ರೀಮತಿ ಬೇಬಿ ರಮೇಶ್ ಪೂಜಾರಿಯವರನ್ನು ಬ್ರಹ್ಮಾವರ ಗ್ರಂಥಾಲಯದಲ್ಲಿ ಫಲ ಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜಿಲ್ಲಾಧ್ಯಕ್ಷರಾದ ಪ್ರವೀಣ್ ಎಮ್ ಪೂಜಾರಿ, ಗೌರವಧ್ಯಕ್ಷರಾದ ದಿವಾಕರ್ ಸನಿಲ್, ಉಪಾಧ್ಯಕ್ಷರಾದ ಎಮ್. ಮಹೇಶ್ ಕುಮಾರ್, ವರಾಂಬಳ್ಳಿ ಪಂಚಾಯತ್ ನ ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ಪಂಚಾಯತ್ ಸದಸ್ಯರಾದ ನಿತ್ಯಾನಂದ ಬಿ. ಆರ್, ವರಾಂಬಳ್ಳಿ ಪಂಚಾಯತ್ ಉಪಾಧ್ಯಕ್ಷರಾದ ಸದಾನಂದ ಪೂಜಾರಿ, ವೇದಿಕೆಯ ಗೌರವ ಸಲಹೆಗಾರರು ಹಾಗೂ ಪಂಚಾಯತ್ ಸದಸ್ಯರಾದ ವಿಶು ಕಲ್ಯಾಣಪುರ, ಜತೆ ಕಾರ್ಯದರ್ಶಿ ವಿಜಯ ಕೋಟಿಯನ್, ಸದಸ್ಯರಾದ ನಿತೀಶ್ ಪೂಜಾರಿ ಹಾಗೂ ಮಹಿಳಾ ಸದಸ್ಯರು ಭಾಗವಹಿದ್ದರು.
ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಗೆ ಬಜೆಟ್ ನಲ್ಲಿ ಯಾವುದೇ ಘೋಷಣೆ ಇಲ್ಲ : ಉಡುಪಿ ಜಿಲ್ಲಾ NSUI ಉಪಾಧ್ಯಕ್ಷ ಮೊಹಮ್ಮದ್ ಝಮೀರ್
Posted On: 09 Mar 2021, 10:23 AM
ಕೊರೊನ ಸಂಕಷ್ಟ ನಂತರ ಶಾಲಾ ಕಾಲೇಜು ಒಪನ್ ಆಗಿದೆ ಆದರೆ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಶಾಲಾ ಫೀಸ್ ಕಟ್ಟುವ ಪರಿಸ್ಥಿತಿಯಲ್ಲಿ ಇಲ್ಲ. ಬಸ್ ನಲ್ಲಿ ಬರುವ ಸಾಮರ್ಥ್ಯವು ಇಲ್ಲ ಹಾಗೂ ಕೊರೊನ ಸಂಕಷ್ಟದಿಂದ ಅನೇಕ ವಿಧ್ಯಾರ್ಥಿಗಳು ಶಾಲಾ ಕಾಲೇಜ್ ಗೆ ಹೋಗುವುದಕ್ಕೂ ಕಷ್ಟವಾಗಿದೆ. ಬಹುದಿನಗಳ ಬೇಡಿಕೆ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡಬೇಕು ಎಂದು ವಿದ್ಯಾರ್ಥಿ ಸಂಘಟನೆ ಸರ್ಕಾರಕ್ಕೆ ಮನವಿ ಮಾಡಿದ್ದರೂ ಕೂಡ ಈ ಬಾರಿಯ ಬಜೆಟ್ ನಲ್ಲಿ ಯಾವುದೇ ಘೋಷಣೆ ಮಾಡದೆ ಶಾಲಾ ಕಾಲೇಜು ವಿದ್ಯಾರ್ಥಿಗಳಾದ ನಮ್ಮ ಮನವಿಗೆ ಸ್ಪಂದಿಸದೇ ಇರುವುದು ಈ ಸರ್ಕಾರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ. ಸರ್ಕಾರ ಕೂಡಲೇ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು ಇಲ್ಲದಿದ್ದರೆ ಉಡುಪಿ ಜಿಲ್ಲಾದ್ಯಾಂತ NSUI ವತಿಯಿಂದ ಪ್ರತಿಭಟನೆಯನ್ನು ಮಾಡಲಿದ್ದೇವೆ ಎಂದು ಉಡುಪಿ ಜಿಲ್ಲಾ NSUI ವಿಧ್ಯಾರ್ಥಿ ಸಂಘಟನೆ ಉಪಾಧ್ಯಕ್ಷ ಮೊಹಮ್ಮದ್ ಝಮೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಂ ಡಾಕ್ಟರ್ ಫೌಂಡೇಶನ್ : ವೈಶಿಷ್ಟ್ಯ ಪೂರ್ಣ ವಿಶ್ವ ಮಹಿಳಾ ದಿನಾಚರಣೆ
Posted On: 08 Mar 2021, 10:48 PM
ಉಡುಪಿ : 64 ರ ಇಳಿ ವಯಸ್ಸಲ್ಲೂ ಚರ್ಮುರಿ ಮಾರಿ ಒಳ್ಳೆಯ ರೀತಿಯಲ್ಲಿ ಇನ್ನೊಬ್ಬರ ಕೈ ನೋಡದೆ ಜೀವನ ನಡೆಸುತ್ತಿರುವ ಅಜ್ಜರಕಾಡು ಪಾರ್ಕ್ ಬಳಿ ಕಳೆದ 27 ವಷ೯ದಿಂದ ಚರ್ಮುರಿ ಮಾರಿ ಉಡುಪಿಯಲ್ಲಿ ಬಾಡಿಗೆ ಮನೆ ಯಲ್ಲಿ ಒಬ್ಬಂಟಿ ವಾಸ ವಿರುವ ಧೀರ ಮಹಿಳೆ ಶಿಕಾರಿಪುರ ಮೂಲದ ಶಾಕುಂತಲ ರವರನ್ನು ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಮಾ.8ರಂದು ಸ್ಪಂದನ ವಿಶೇಷ ಚೇತನ ಮಕ್ಕಳ ಶಾಲೆ ಉಪ್ಪುರುನಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾಯ೯ಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಸಂದಭ೯ದಲ್ಲಿ ಜೇಸಿಐ ಉಡುಪಿ ಸಿಟಿ ವತಿಯಿಂದ ವೈದ್ಯಕೀಯ ರಂಗದಲ್ಲಿ ಸಾಧನೆ ಮಾಡಿದ ಡಾll ಸುಮಾ ಶೆಟ್ಟಿ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಸವಿತಾ ಶೆಟ್ಟಿ ಯವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸ್ಪಂದನಸಂಸ್ಥೆಯ ಮುಖ್ಯಸ್ಥರಾದ ಜನಾರ್ದನ್, ಉಮೇಶ್ ರಾಘವೇಂದ್ರಪೂಜಾರಿ , ಬಂಗಾರಪ್ಪ , ನಯನ ,ಶಶಿ ,ಕೀರ್ತಿರಾಜ್ ಸ್ವಚ್ಚ ಭಾರತ್ ಫ್ರೆಂಡ್ಸ್ ಸ್ಥಾಪಕ ಸಂಚಾಲಕ ಗಣೀಶ್ ಪ್ರಸಾದ್.ಜಿ ನಾಯಕ್, ಜಗದೀಶ್ ಶೆಟ್ಟಿ, ವಿಕ್ಷೀತ್ ಪೂಜಾರಿ, ನಯನಾ ಮಂತಾದವರುಉಪಸ್ಥಿತರಿದ್ದರು. ಡಾ|| ಶಶಿಕಿರಣ್ ಶೆಟ್ಟಿ ಪ್ರಸ್ತಾವನೆಗೈದರು. ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು.
ಮಕ್ಕಳ ಕೃಷಿ ಆಸಕ್ತಿಗೆ ನೆರವಾದ ಉಡುಪಿಯ ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ತಂಡ
Posted On: 07 Mar 2021, 10:58 PM
ಉಡುಪಿ, ಮಾ.7 : ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಬ್ರಹ್ಮಾವರದ ಮಠಪಾಡಿಯಲ್ಲಿ ಇರುವ ಕೂಲಿ ಕಾರ್ಮಿಕರ ವಸತಿ ಗೃಹಕ್ಕೆ ಭೇಟಿ ನೀಡಿದರು. ಈ ಸಂದರ್ಭ ಕಳೆದ ವರ್ಷ ಮಾಡಿದ ಕೃಷಿ -ಖುಷಿ ಕಾರ್ಯಕ್ರಮದ ಮಕ್ಕಳ ಉತ್ಸಾಹ ನೋಡಿ ಇಂದು ಅವರ ಅನುಕೂಲಕ್ಕೆ ಬೇಕಾದಂತೆ ಅಲ್ಲಿಯ ಜಾಗವನ್ನು ತರಕಾರಿ ಬೆಳೆ ಬೆಳೆಯಲು ಹದತಟ್ಟು ಮಾಡಿಕೊಡಲಾಯಿತು. ಈ ಕಾರ್ಯಕ್ರಮ ಆಸರೆ ತಂಡದ ಸ್ಥಾಪಕಧ್ಯಕ್ಷರ ಉಪಸ್ಥಿತಿಯಲ್ಲಿ ನಡೆಯಿತು. ಮಕ್ಕಳ ಉತ್ಸಾಹಕ್ಕೆ ಮುಂದಿನ ದಿನಗಳಲ್ಲಿ ನಮ್ಮ ಬೆಳೆ ನಾವು ಅನ್ನುವ ಮುಂದಿನ ಶೀರ್ಷಿಕೆಗೆ ಹೆಜ್ಜೆ ಇಡಲು ನಮ್ಮ ಆಸರೆ ತಂಡವು ಮುಂದಾಗಿದೆ. ಈ ಕಾರ್ಯಕ್ರಮದಲ್ಲಿ ಆಸರೆ ತಂಡದ ಸಂಸ್ಥಾಪಕಧ್ಯಕ್ಷರಾದ ಡಾ. ಕೀರ್ತಿ ಪಾಲನ್ ಅವರ ನೇತೃತ್ವದಲ್ಲಿ ನಡೆದಂತಹ ಈ ಕಾರ್ಯಕ್ರಮದಲ್ಲಿ ಜಯರಾಮ್ ನೈರಿ ಮಟಪಾಡಿ, ಸೂರ್ಯ ಗಾಣಿಗ,ಅಜಯ್ ರಾವ್, ವಿಜಯ ಬಾಲನಿಕೇತನ ಮಟಪಾಡಿಯ ಮಕ್ಕಳು ಉಪಸ್ಥಿತರಿದ್ದರು.
ಸುಳ್ಳು ಆರೋಪ ಹೊರಿಸಿದವರನ್ನು ಸತ್ಯ ಪ್ರಮಾಣಕ್ಕಾಗಿ ಆಹ್ವಾನಿಸಿದ ಶಂಕರ್ ಶಾಂತಿ
Posted On: 06 Mar 2021, 08:19 PM
ಬ್ರಹ್ಮಾವರ : ಕಾಳಿಕಾಂಬಾ ದೇವಸ್ಥಾನದೊಳಗೆ ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿಲ್ಲ ಎನ್ನುವ ಮೊಕ್ತೇಸರ ಶ್ರೀಧರ ಆಚಾರ್ಯ ಅವರು ಹೇಳಿರುವ ಹೇಳಿಕೆಯನ್ನು ಸಾಮಾಜಿಕ ಕಾರ್ಯಕರ್ತ ಶಂಕರ ಶಾಂತಿ ಅವರು ಸಂಪೂರ್ಣ ಸುಳ್ಳಿನ ಆರೋಪವೆಂದು ಬಲವಾಗಿ ಖಂಡಿಸಿದ್ದು, ಇವಾಗ ಅವರು ಉಡುಪಿ, ದಕ್ಷಿಣ ಕನ್ನಡದ ಕಾರಣಿಕ ಕ್ಷೇತ್ರಗಳ ದೈವ ದೇವರುಗಳಲ್ಲಿ ಪ್ರಮಾಣ ಮಾಡಲು ಆಹ್ವಾನಿಸಿದ್ದಾರೆ. ಕಚ್ಚೂರು ಕಾಳಿಕಾಂಬಾ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭ ಮಾಹಿತಿ ಹಕ್ಕು ಕಾರ್ಯಕರ್ತ ಶಂಕರ್ ಶಾಂತಿ ಯವರಿಗೆ ಕಾಳಿಕಾಂಬಾ ದೇವಸ್ಥಾನದೊಳಗೆ ಹಲ್ಲೆಯಾಗಿದೆ ಎನ್ನುವ ವಿಚಾರ ಹರಿದಾಡುತ್ತಿದ್ದು ಇದು ಆಧಾರ ರಹಿತವಾಗಿದೆ. ಈ ಘಟನೆಗೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ, ಅನಾವಶ್ಯಕವಾಗಿ ವಿಶ್ವಕರ್ಮ ಸಮಾಜದ ಮೇಲೆ ಆರೋಪ ಮಾಡುತ್ತಿರುವುದು, ನಮ್ಮ ಸಮಾಜದ ಯುವಕರ ಮೇಲೆ ಕೇಸು ದಾಖಲಿಸಿರುವುದು ಸರಿಯಲ್ಲ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ವಡೇರಹೋಬಳಿ ಶ್ರೀಧರ ಆಚಾರ್ಯ ಅವರು ಮಾ.5, ರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಈ ಬಗ್ಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಗಂಭೀರ ಸ್ವರೂಪದ ಗಾಯಾಳಾಗಿ ಚಿಕಿತ್ಸೆ ಪಡೆಯುತ್ತಿರುವ, ಸಾಮಾಜಿಕ ಕಾರ್ಯಕರ್ತ ಶಂಕರಶಾಂತಿ ಅವರು, ಬಾರ್ಕೂರು ಕಾಳಿಕಾಂಬ ದೇವಸ್ಥಾನದ ಅಡುಗೆ ಕೋಣೆಯಲ್ಲಿ ಹಲ್ಲೆ ನಡೆಸಿ,ನಮ್ಮ ದೇವಸ್ಥಾನದಲ್ಲಿ ಯಾವುದೇ ಘಟನೆ ನಡೆದಿಲ್ಲ ಎಂದು ದೇವಸ್ಥಾನದ ಒಂದನೇ ಹಾಗೂ 3 ನೇ ಆಡಳಿತ ಮೊಕ್ತೇಸರ ಸುಳ್ಳು ಹೇಳಿಕೆ ಪತ್ರಿಕೆಗೆ ನೀಡಿರುತ್ತಾರೆ. ಈ ವಿಷಯದಲ್ಲಿ ಧರ್ಮಸ್ಥಳ ಮಂಜುನಾಥಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿಯಲ್ಲಿ ಇಡೀ ಕಾಳಿಕಾಂಬ ದೇವಸ್ಥಾನದ ಆಡಳಿತ ಮಂಡಳಿಯನ್ನು ಸತ್ಯ ಪ್ರಮಾಣಕ್ಕೆ ಕರೆಯುತ್ತಿದ್ದೇನೆ. ಕಾಳಿಕಾಂಬೆ ಹಾಗೂ ಕಲ್ಕುಡ ಸನ್ನಿಧಿಯಲ್ಲಿ ಸತ್ಯ ಪ್ರಮಾಣ ನಡೆಯಲಿ, ತಾವು ಬಾರದೆ ಇದ್ದಲ್ಲಿ ಧರ್ಮಸ್ಥಳ ಶ್ರೀ ಕ್ಷೇತ್ರದಲ್ಲಿ ಹಾಗೂ ಶಂಕರನಾರಾಯಣ ಕಲ್ಕುಡ ದೈವದಲ್ಲಿ ಇಡೀ ಕಾಳಿಕಾಂಬ ದೇವಸ್ಥಾನದ ವಿರುದ್ಧ ಹುಯಿಲು (ದೂರು)ಕೊಡುತ್ತೇನೆಂದು ಹೇಳಿದ್ದಾರೆ.
ಇನ್ನಂಜೆ : ಪುರಾತನˌ ಕಂಚಿನಕೆರೆˌ ನಾಗಬನದ ಪ್ರಶ್ನಾಚಿಂತನೆ
Posted On: 05 Mar 2021, 10:08 PM
ಇನ್ನಂಜೆ ಗ್ರಾಮದ ಉಂಡಾರು ದೇವಸ್ಡಾನ ದ ಈಶಾನ್ಯ ದಿಕ್ಕಿನಲ್ಲಿರುವ ಅತೀ ಪುರಾತನˌ ಕಂಚಿನಕೆರೆˌ ನಾಗಬನ ದ ಪ್ರಶ್ನಾಚಿಂತನೆಯು ಮಾಚ್೯ 14 ಆದಿತ್ಯವಾರ ಕಂಚಿನಕೆರೆ ಬನದ ಮುಂಭಾಗದಲ್ಲಿ ಜರಗಲಿರುವುದು. ನಾಗಬನಕ್ಕೆ ಸಂಬಂಧಿಸಿದವರು, ಊರ ಹತ್ತು ಸಮಸ್ತರು ಹಾಗೂ ನಾಗಬನ ಇಲ್ಲದೆ ಇರುವವರು ಈ ಪ್ರಶ್ನಾ ಚಿಂತನೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಶ್ರೀ ವರ್ತೆಕಾಳಿ ಕಲ್ಕುಡ ದೈವಸ್ಥಾನ ಬನ್ನಂಜೆ, ಉಡುಪಿ ಕಾಲಾವಧಿ ಕೋಲ
Posted On: 05 Mar 2021, 06:29 PM
ಶ್ರೀ ವರ್ತೆಕಾಳಿ ಕಲ್ಕುಡ ದೈವಸ್ಥಾನ ಬನ್ನಂಜೆ, ಉಡುಪಿ ಕಾಲಾವಧಿ ಕೋಲವು ಮಾಚ್೯ 7, ಆದಿತ್ಯವಾರ ನಡೆಯಲಿದೆ. ಮಧ್ಯಾಹ್ನ 12:30 ರಿಂದ 3 ರವರೆಗೆ ಅನ್ನಸಂತರ್ಪಣೆ, ರಾತ್ರಿ ಗಂಟೆ 7:30ಕ್ಕೆ ದರ್ಶನ ಮತ್ತು ಹೂವಿನ ಪೂಜೆ, ಪ್ರಸಾದ ವಿತರಣೆ ರಾತ್ರಿ 9:30ಕ್ಕೆ ದೈವಗಳ ಕೋಲ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕುತ್ಯಾರು : ಸಾಮೂಹಿಕ ಸತ್ಯನಾರಾಯಣ ಪೂಜೆ
Posted On: 05 Mar 2021, 06:06 PM
ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕುತ್ಯಾರು ಮಹಿಳಾ ಬಳಗದ ವತಿಯಿಂದ ಗ್ರಾಮ ಪಂಚಾಯತ್ ಕುತ್ಯಾರು, ಯುವಕ ಮಂಡಲ, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು, ಗ್ರಾಮ ನೈರ್ಮಲ್ಯ ಸಮಿತಿಯ ಸಹಯೋಗದಲ್ಲಿ ವೇದ ಮೂರ್ತಿ ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಕೇಂಜ ಭಾರ್ಗವ ತಂತ್ರಿ ನೇತೃತ್ವದಲ್ಲಿ ಮಾರ್ಚ್ 6, ಶನಿವಾರ ಕುತ್ಯಾರು ಯುವಕ ಮಂಡಲದ ವೇದಿಕೆಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ, ರಾತ್ರಿ ಅನ್ನಸಂತರ್ಪಣೆ, ನೃತ್ಯ ವೈವಿಧ್ಯ, ನಿಮಿಷ ಕಲಾವಿದರು ಕಟಪಾಡಿ ಇವರಿಂದ ಏರೆಗ್ ಏರಾ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
