Updated News From Kaup
ಪಡುಬಿದ್ರಿ ರೋಟರಿ ವತಿಯಿಂದ ಇಂಜಿನಿಯರ್ಸ್ ಡೇ ಆಚರಣೆ

Posted On: 15-09-2020 11:52PM
ಇಂಜಿನಿಯರ್ಸ್ ಡೇ ಅಂಗವಾಗಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದು ಇಂಜಿನಿಯರಿಂಗ್ ವೃತ್ತಿ ಯನ್ನು ನಡೆಸುತಿರುವ ರಮೀಜ್ ಹುಸೇನ್ ಮತ್ತು ಮಹಮ್ಮದ್ ನಿಯಾಜ್ ರವರಿಗೆ ಪಡುಬಿದ್ರಿ ರೋಟರಿ ವತಿಯಿಂದ ಸಮ್ಮಾನಿಸಲಾಯಿತು.
ಪಡುಬಿದ್ರಿ ರೋಟರಿ ಅಧ್ಯಕ್ಷ ಕೇಶವ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಇನ್ನರ್ ವೀಲ್ ಕ್ಲಬ್‌ನ ಪೂರ್ವ ಅಧ್ಯಕ್ಷೆ ಸುನಿತಾ ಭಕ್ತವತ್ಸಲ , ಕಾರ್ಯದರ್ಶಿ ಮಹಮ್ಮದ್ ನಿಯಾಜ್, ಸದಸ್ಯರಾದ ಸುಧಾಕರ್ ಕೆ, ಸಂತೋಷ್ ಪಡುಬಿದ್ರಿ, ಗೀತಾ ಅರುಣ್, ತಸ್ಲೀನ್ ಅರ್ಹ ಉಪಸ್ಥಿತರಿದ್ದರು.
ಕೇಶವ್ ಸಾಲ್ಯಾನ್ ಸ್ವಾಗತಿಸಿ, ಬಿ.ಯಸ್ ಆಚಾರ್ಯ ವಂದಿಸಿದರು.
ಕರೋನಾ ಮೈಮರೆವು ಅಪಾಯಕ್ಕೆ ದಾರಿಯಾಗಬಹುದು

Posted On: 15-09-2020 06:44PM
ಇತ್ತಿಚೆಗೆ ನಾವು ನೋಡುತ್ತಿರುವ ಸಂಗತಿ ಯಂತೆ ಕರೋನಾದ ಬಗ್ಗೆ ಜನರಿಗೆ ಅಸಡ್ಡೆ ಎದುರಾಗಿದೆ.ಪರಿಣಾಮ ಕರೋನಾ ಮತ್ತು ನಮಗೆ ಯಾವುದೇ ಸಂಬಂಧವಿಲ್ಲದಂತೆ ಹೆಚ್ಚಿನ ಜನರು ವತಿ೯ಸುತ್ತಿದ್ದಾರೆ ಇದು ಸರಿಯಲ್ಲ. ಮುಖ್ಯವಾಗಿ ಮಾಸ್ಕ್ ಹಾಕುವುದು ಸಾಮಾಜಿಕ ಅಂತರ ಕಾಪಾಡುವುದು ನಿಧಾನವಾಗಿ ಕಡಿಮೆಯಾಗಿರುದನ್ನು ನಾವು ಗಮನಿಸುತ್ತಿದ್ದೇವೆ.ಸಕಾ೯ರ ದ ನೀತಿ ನಿಯಮಗಳನ್ನು ಮೀರಿ ಸಮಾರಂಭಗಳ ಆಯೋಜನೆ, ಕಾಯ೯ಕ್ರಮಗಳಲ್ಲಿ ಯಾವುದೇ ರೀತಿಯ ಕರೋನಾ ಮುಂಜಾಗ್ರತೆ ವಹಿಸದಿರುವುದು ಸಾಮಾನ್ಯವಾಗುತ್ತಿದೆ ಇದು ಅಪಾಯಕ್ಕೆ ಎಡೆ ಮಾಡುವ ಸಂಭವವಿದೆ ಎಂದು ಈಗಾಗಲೇ ತಜ್ಞರು ಎಚ್ಚರಿಸಿದ್ದಾರೆ.ಆದರೂ ನಮವರಿಗೆ ಎಚ್ಚರವಾಗಿಲ್ಲ. ಕರೋನಾದ ಲಕ್ಷಣ ಕಂಡು ಬಂದರೂ ಕೂಡ ಅದನ್ನು ಮುಚ್ಚಿಟ್ಟು ಸುರಕ್ಷತೆ ವಹಿಸದ ಪರಿಣಾಮ ಸೋoಕಿತರ ಸಂಖ್ಯೆ ಹೆಚ್ಚಾಗುತ್ತಿದೆ.ಅಲ್ಲದೆ ಐಸಿಯು ವೆಂಟಿಲೇಟರ್ ನಲ್ಲಿ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಕಡಿಮೆಯಾಗುತ್ತಿರುವುದು ಅಪಾಯದ ಸಂಕೇತ. ಹೀಗಾಗಿ ಜನರು ಸಕಾ೯ರ ದ ನೀತಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು.
ಮಾಸ್ಕ್ ಧರಿಸಲೇ ಬೇಕೇ? ಎಂಬ ಪ್ರಶ್ನೆ ನಮ್ಮನ್ನು ಕಾಡ ಬಹುದು ನಮ್ಮ ಮತ್ತು ಸಮಾಜದ ಆರೋಗ್ಯದ ದೃಷ್ಟಿಯಿಂದ ಮಾಸ್ಕ್ ಧರಿಸಬೇಕು ಇದರಲ್ಲಿ ರಿಯಾಯಿತಿ ಬೇಡ. ಮಾಸ್ಕ್ ಧರಿಸುವ ಜತೆಗೆ ನಿಯಮಿತ ಅವಧಿಯಲ್ಲಿ ಕೈಗಳನ್ನು ಸಾಬೂನು ಅಥವಾ ಇನ್ನಿತರ ಶುಚಿತ್ವ ಕಾಪಾಡಿಕೊಳ್ಳುವ ವಸ್ತುಗಳಿಂದ ತೊಳೆದುಕೊಳ್ಳುವುದು ಅತಿ ಮುಖ್ಯವಾಗಿರುತ್ತದೆ. ಕೆಲವು ಜನರು ಫೋಲಿಸರು ಹಾಕುವ ಫೈನ್ ನಿಂದ ತಪ್ಪಿಸಲು ಮಾಸ್ಕ್ ಹಾಕುದನ್ನು ನಾವು ನೋಡುತ್ತೇವೆ. ನಮ್ಮ ಆರೋಗ್ಯದ ಬಗ್ಗೆ ನಮಗೆ ಗಮನ ಇದ್ದರೆ ಎಲ್ಲರೂ ಮಾಸ್ಕ್ ಹಾಕಬೇಕಾದ ಅಗತ್ಯವಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ವೃರಸ್‌ನ ಭಯ ಅಗತ್ಯವಿಲ್ಲವೇ? ಹೆಚ್ಚು ಜಾಗೃತರಾಗಿರಬೇಕಾದವರಾರು? ತಜ್ಞರ ಪ್ರಕಾರ, ಮಧುಮೇಹ, ಹೃದ್ರೋಗ, ಶ್ವಾಸಕೋಶ ಸಮಸ್ಯೆಗಳಿರುವವರು ಅತ್ಯಂತ ಜಾಗರೂಕರಾಗಿರಬೇಕಾಗುತ್ತದೆ. ಈಗಾಗಲೇ ಇರುವ ಆರೋಗ್ಯ ಸಮಸ್ಯೆಗಳ ಪರಿಣಾಮದಿಂದ ರೋಗ ನಿರೋಧಕ ಶಕ್ತಿಯಲ್ಲಿ ಕೊಂಚ ಕಡಿಮೆ ಇರುವ ಸಾಧ್ಯತೆಗಳು ಹೆಚ್ಚು. ಅಂತೆಯೇ ಹಿರಿಯ ನಾಗರಿಕರಲ್ಲೂ ರೋಗಗಳನ್ನು ಹೋರಾಡುವ ಕಣಗಳ ಸಂಖ್ಯೆ ಕಡಿಮೆ ಇರುವ ಸಾಧ್ಯತೆಗಳಿರುತ್ತದೆ. ಹೀಗಾಗಿ ಈ ವರ್ಗದ ಜನರು ಅತ್ಯಂತ ಜಾಗರೂಕರಾಗಿರಬೇಕಾಗುತ್ತದೆ. ಆರೋಗ್ಯ ಸಮಸ್ಯೆ ಇರುವವರಿಗೆ ಸೋಂಕು ತಗಲುವ ಸಾಧ್ಯತೆ ದುಪ್ಪಟ್ಟಾಗಿರುತ್ತದೆ ಎಂದು ಅವಲೋಕಿಸಲಾಗಿದೆ. ಆದರೂ ಯುವ ಸಮುದಾಯವೂ ಈ ಮಹಾಮಾರಿ ವೈರಸ್‌ನಿಂದ ಪಾರಾಗಲು ಬೇಕಾದ ಅಗತ್ಯ ಕ್ರಮಗಳನ್ನು ಪಾಲಿಸುವುದೇ ಸೂಕ್ತವಾಗಿದೆ.
ಜಿಲ್ಲಾಡಳಿತದ ನಿಯಮ ಪಾಲನೆ ಮಾಡಿರಿ ಈಗಾಗಲೇ ಜಿಲ್ಲಾಧಿಕಾರಿ ಸೇರಿದಂತೆ ಅನೇಕ ಮಂದಿ ವೈದ್ಯರು ಕರೋನಾದ ಬಗ್ಗೆ ಮುಂಜಾಗ್ರತೆ ವಹಿಸಲು ಕರೆ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ರೂಪಿಸಿದ ನೀತಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕಾಗಿದೆ. ನಮ್ಮ ಉದಾಸೀನ ಮತ್ತು ನಿಲ೯ಕ್ಷದಿಂದ ಉಳಿದವರು ತೊಂದರೆ ಎದುರಿಸಬೇಕಾಗುತ್ತದೆ. ಹೀಗಾಗಿ ಈ ಕರೋನಾ ದೂರವಾಗುವ ತನಕ ನಿಯಮಗಳನ್ನು ಪಾಲನೆ ಮಾಡೋಣ.
ಅಪಪ್ರಚಾರ, ಅಪನಂಬಿಕೆ ಬೇಡ ಕೆಲವು ಜನರು ಸುಳ್ಳು ಮತ್ತು ಆಧಾರ ರಹಿತ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಜನರನ್ನು ತಪ್ಪು ದಾರಿಗೆ ತರುವ ಕೆಲಸ ಮಾಡುತ್ತಿದ್ದಾರೆ ಇದು ಸರಿಯಲ್ಲ. ಒಟ್ಟಾಗಿ ಕರೋನಾ ದೂರವಾಗಬೇಕಾದರೆ ಸಕಾ೯ರ ಮಾತ್ರ ಕೆಲಸ ಮಾಡಿದರೆ ಸಾಲದು ಎಲ್ಲರೂ ತಮ್ಮ ಆರೋಗ್ಯದ ದೃಷ್ಠಿಯಿಂದ ಕರೋನಾ ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ. ಈಗಾಗಲೇ ವಿಶ್ವದ ಕೆಲವು ದೇಶದಲ್ಲಿ ಕರೋನಾದ ಎರಡನೇ ಹಂತ ಪ್ರಾರಂಭವಾಗಿದೆ. ಈ ಬಗ್ಗೆ ನಾವೆಲ್ಲರೂ ಎಚ್ಚರಿಕೆಯಿಂದ ಜೀವನ ಸಾಗಿಸೋಣ.ಕರೋನಾ ಮುಕ್ತ ಭಾರತವನ್ನಾಗಿಸಲು ಪ್ರಯತ್ನಿಸೋಣ. ರಾಘವೇಂದ್ರ ಪ್ರಭು,ಕವಾ೯ಲು, ಯುವ ಲೇಖಕ
ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಗೆ ಕರ್ನಾಟಕಕ್ಕೆ ಆಂಧ್ರಪ್ರದೇಶ ಮಾದರಿಯಾಗಲಿ

Posted On: 15-09-2020 06:06PM
ಇಚ್ಚಾಶಕ್ತಿಯ ರಾಜಕೀಯ ನಿಲುವುಗಳಲ್ಲಿ ಮಾತ್ರ ಇಂತಹದ್ದು ಸಾಧ್ಯ. ವೈ.ಎಸ್.ಜಗನ್‌ಮೋಹನ್ ರೆಡ್ಡಿ ಯವರನ್ನು ಅಭಿನಂದಿಸೋಣ. ಈ ದೇಶದಲ್ಲಿಯೆ ಅವಿಸ್ಮರಣೀಯವಾಗುಳಿಯುವಂತೆ ಕಳೆದ ಸಾಲಿನಲ್ಲಿ ಐವತ್ತು ಸಾವಿರದಷ್ಟು ಸಮಸ್ತ ಸಮಾಜಬಾಂಧವರು ಏಕ ಉದ್ದೇಶದಿಂದ ಒಗ್ಗೂಡಿ "ಬಿಲ್ಲವ ಮಹಾ ಸಮಾವೇಶ" ದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಎನ್ನುವ ಪರಿಕಲ್ಪನೆಯ ಮನವಿಯನ್ನು ಪ್ರಪ್ರಥಮ ಬಾರಿ ನೀಡಲಾಗಿತ್ತು.ಈವರೆಗೆ ಬೇರೆ ಬೇರೆ ಸಮಾಜಕ್ಕೆ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲಾಗಿದೆ.ಇದಕ್ಕೆ ವಿರೋಧವಲ್ಲ ಮತ್ತು ಸಂತಸವೆ.ಆದರೆ ಈ ಸಮಾವೇಶದ ಪ್ರಭಾವದಿಂದಾಗಿ ಆಂಧ್ರಪ್ರದೇಶ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿರುವುದನ್ನು ಮೆಚ್ಚುವಂತದ್ದು. ಹಿಂದುಳಿದ ಸಮುದಾಯವಾಗಿ ರಾಜ್ಯಾದ್ಯಂತ ಬಹಳ ದೊಡ್ಡ ಸಂಖ್ಯೆಯಲ್ಲಿದ್ದು ರಾಜಕೀಯ ನಿರ್ಣಾಯಕರಾಗಿರುವ ನಾವು ಪ್ರತಿ ಭಾರಿಯೂ ಮನವಿ ಮತ್ತು ಆಶ್ವಾಸನೆಗಷ್ಟೆ ಸೀಮಿತರಾಗುತ್ತಿದ್ದೇವೆ. ಸಂಘಟನಾತ್ಮಕ ಭೇದ ಭಾವಗಳನ್ನು ಮರೆತು ಸಮಾಜಕ್ಕೋಸ್ಕರ ನೀಡಿರುವ ಮನವಿಯನ್ನು ಪಕ್ಷಭೇದವಿಲ್ಲದೆ ಸರ್ಕಾರಗಳು ಪರಿಗಣಿಸುವುದು ಅತ್ಯಂತ ಅಗತ್ಯ. ಇನ್ನಾದರೂ ಬೃಹತ್ ಬಿಲ್ಲವ ಸಮುದಾಯಕ್ಕಾಗುತ್ತಿರುವ ಅನ್ಯಾಯ ,ಅವಮಾನವನ್ನು ಖಂಡಿಸುತ್ತಾ ಕರ್ನಾಟಕ ಘನ ಸರ್ಕಾರವು ಪಕ್ಷಾತೀತವಾಗಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಗೆ ದಿಟ್ಟ ಕ್ರಮ ಕೈಗೊಳ್ಳುವಂತಾಗಲಿ.
ಪ್ರವೀಣ್ ಪೂಜಾರಿ, ಜಿಲ್ಲಾಧ್ಯಕ್ಷರು, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ(ರಿ.)ಉಡುಪಿ
ಉಡುಪಿಯಲ್ಲಿ ಹೀಗೊಂದು ಮಾದರಿ ಕಾಯ೯ ಸಾವ೯ಜನಿಕರ ಮೆಚ್ಚುಗೆ

Posted On: 14-09-2020 09:17PM
ಉಡುಪಿ: -ಹೋಮ್ ಡಾಕ್ಟರ್ ಫೌಂಡೇಶನ್ ಇದರ ವತಿಯಿಂದ ಯಂತ್ರದೊಂದಿಗೆ ಕೆಲಸ ಮಾಡುವ ಸಂದಭ೯ ಒಂದು ಕೈಯನ್ನು ಕಳೆದುಕೊಂಡು ಕಳೆದ 10 ವಷ೯ಗಳಿಂದ ಕಷ್ಟಪಡುತ್ತಿದ್ದ ಪೇತ್ರಿ ನಟರಾಜ ರವರಿಗೆ ಬ್ಯಾಟರಿ ಸೆನ್ಸಾರ್ ಒಪೆರಾಟೆಡ್ ಕೃತಕ ಕೈ ಅಳವಡಿಸಿ ಅವರ ಜೀವನಕ್ಕೆ ಆಧಾರವಾಗುವ ಪ್ರಾಮುಖ್ಯವಾದ ಕಾಯ೯ವನ್ನು ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಸುಮಾರು 2 ಲಕ್ಷ ರೂ ಮೌಲ್ಯದ ಈ ಕೃತಕ ಕೈಜೋಡಣೆಗೆ ಅಜು೯ನ್ ಭಂಡಾರ್ಕಾರ್ ನೇತೃತ್ವದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅದೇ ರೀತಿ ರೋಶನ್ ಬೆಲ್ಮನ್ ನೇತೃತ್ವದ ಹ್ಯುಮಾನಿಟಿ ಟ್ರಸ್ಟ್ ರವರ ಸಹಕಾರದೊಂದಿಗೆ ಅದೇ ರೀತಿ ದಾನಿಗಳ ಸಹಕಾರದಲ್ಲಿ ಈ ಕಾಯ೯ ನೆರವೇರಿದೆ. ಇದರಿಂದ ಈ ಬಡ ಕುಟುಂಬದ ನಟರಾಜ್ ರವರು ಸ್ವತಂತ್ರವಾಗಿ ಬದುಕಲು ಸಾಧ್ಯವಾಗಿದೆ.
ಸೆ.13ರಂದು ಅವರ ಮನೆಗೆ ತೆರಳಿ ಈ ಕೈ ಜೋಡಣೆ ಕಾಯ೯ಕ್ರಮದಲ್ಲಿ ಡಾII ಶಶಿಕಿರಣ್ ಶೆಟ್ಟಿ, ಡಾ|| ಸುಮಾ ಶೆಟ್ಟಿ, ರಾಘವೇಂದ್ರ ಪೂಜಾರಿ, ಬಂಗಾರಪ್ಪ, ಸುಜಯ ಶೆಟ್ಟಿ, ಅನುಷಾ, ಮುಂತಾದವರಿದ್ದರು
ಮಹಾಯೋಗಿ ಚಾಪಮ್ಮ ದೇವಿಯ ಕೈಯಲ್ಲಿ ಬಿಡುಗಡೆಯಾಗಲಿದೆ ಕರಾವಳಿಯ ಆದ್ಯಾತ್ಮ App

Posted On: 14-09-2020 11:10AM
ಉಡುಪಿ: ಶಂಕರಪುರದ ದ್ವಾರಕಾಮಾಯಿ ಶ್ರೀ ಸಾಯಿಬಾಬಾ ಮಂದಿರ ಧರ್ಮದರ್ಶಿ ಗುರೂಜೀ ಸಾಯಿ ಈಶ್ವರ್ ಇವರು ಆಧ್ಯಾತ್ಮಿಕ ಸಾಧಕರಿಗಾಗಿ ಮಾಡಿದ ಕರಾವಳಿಯ ಪ್ರಥಮ ಆಧ್ಯಾತ್ಮಿಕ Android Mobile App ಅನ್ನು ಮಹಾಯೋಗಿ ಶ್ರೀ ಶ್ರೀ ಚಾಪ್ಪಮ್ಮ ದೇವಿಯವರ ದಿವ್ಯ ಹಸ್ತದಿಂದ ಲೋಕಾರ್ಪಣೆಗೊಳ್ಳಲಿದೆ.
ಸೆಪ್ಟಂಬರ್ 16 ರಂದು ರಾಯಚೂರಿನ ಸಿಂಧನೂರಿನ ಕಲ್ಮಂಗಿಯಲ್ಲಿರುವ "ಅಮ್ಮನವರ ಕುಟೀರ" ಇಲ್ಲಿ ನಡೆಯುವ ಸರಳ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಶಂಕರಪುರದ ದ್ವಾರಕಾಮಾಯಿ ಶ್ರೀ ಸಾಯಿಬಾಬಾ ಮಂದಿರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಗುರೂಜಿ ಸಾಯಿಈಶ್ವರ್ ಸದಾ ಅಸಹಾಯಕರ ಪರವಾಗಿ ಶ್ರಮಿಸುವವರು ಶ್ರೀ ಸಾಯಿ ಬಾಬಾರ ಪರಮಭಕ್ತರು, ಆರಾಧಕರು. ನೊಂದವರಿಗೆ ಸಾಂತ್ವಾನ ನುಡಿಯುವವರು. ಹಸಿದವರಿಗೆ ತುತ್ತು ಅನ್ನ ನೀಡಿದವರು. ಜಿಜ್ಞಾಸುಗಳಿಗೆ ಆಧ್ಯಾತ್ಮದ ಬೆಳಕು ಚೆಲ್ಲಿದವರು. ಆಧ್ಯಾತ್ಮ ವಲಯದಲ್ಲಿ ಇವರು ಮಾದರಿ ಆಧ್ಯಾತ್ಮ ಪರಿಚಾರಕರು. ಈಗಾಗಲೇ ಲಾಕ್ ಡೌನ್ ಸಮಯದಲ್ಲಿ ಆನ್ಲೈನ್ ಮೂಲಕ ಮಕ್ಕಳಿಗೆ "ನನ್ನ ಮನೆ ನನ್ನ ಗುರುಕುಲ" ಎಂಬ ಕಾರ್ಯಕ್ರಮ ಮಾಡಿ ಯಶಸ್ವಿಯಾಗಿರುವಂತೆ ನಂತರ ಆನ್ಲೈನ್ ಮೂಲಕ "ಆತ್ಮ ಶುದ್ಧಿ ಕ್ರಿಯಾ ಧ್ಯಾನ" ಮಾಡಿದ್ದು ಇದರಲ್ಲಿ ಐದುನೂರಕ್ಕೂ ಹೆಚ್ಚು ಜನರು ಭಾಗವಹಿಸಿರುವರು, ನಂತರ "ಪಾಕೆಟ್ ಪೆಂಡುಲಂ" ತರಬೇತಿ ಶಿಬಿರವನ್ನು ಆನ್ಲೈನ್ ಮೂಲಕ ಎರಡು ಅವದಿಯಲ್ಲಿ ಮಾಡಿದ್ದು ಎಲ್ಲವೂ ಯಶಸ್ವಿಯಾಗಿರುತ್ತದೆ
ಇದೀಗ ಲೋಕಾರ್ಪಣೆ ಮಾಡಲಾಗುವ Android App ನಲ್ಲಿ ಆನ್ಲೈನ್ ತರಗತಿಗಳನ್ನು ನಡೆಸಲು ಬೇಕಾಗುವ ವ್ಯವಸ್ಥೆಯೂ ಇರುತ್ತದೆ. ಈ ಆಫ್ ಮೂಲಕ ಭೌತಿಕ, ಐಶ್ವರ್ಯ, ಆರೋಗ್ಯ, ಶಾಂತಿ, ಧ್ಯಾನ, ಯೋಗ, ಸಾಂತ್ವನ ಮತ್ತು ಆಧ್ಯಾತ್ಮಿಕ ಮಾಹಿತಿಗಳ ಕಣಜವೇ ಆಧ್ಯಾತ್ಮಿಕ ಸಾಧಕರಿಗೆ ಸಿಗಲಿದೆ
ಪ್ರತಿ ಗ್ರಾಮದಲ್ಲಿ ಗೋಶಾಲೆ ಪ್ರಾರಂಭವಾಗಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಂದ ಕರೆ

Posted On: 14-09-2020 08:54AM
ಉಡುಪಿ :- ಹಿಂದೆ ಪ್ರತಿ ಮನೆಯಲ್ಲಿಯೂ ಗೋವುಗಳಿದ್ದವು. ಆದರೆ ಯಂತ್ರಾಧಾರಿತ ಕೃಷಿ ಎಲ್ಲೆಡೆ ವ್ಯಾಪಿಸಿದ ಬಳಿಕ ಮನೆಯಲ್ಲಿ ಗೋವುಗಳ ಸಂಖ್ಯೆಯೂ ಕಡಿಮೆಯಾಗಿದೆ. ಗೋವುಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ನಮ್ಮ ಸನಾತನ ಸಂಸ್ಕೃತಿಯ ಪ್ರತೀಕವಾಗಿರುವ ಗೋವುಗಳಿಗಾಗಿಯೇ ಇರುವಂತಹ ಗೋಮಾಳಗಳನ್ನು ಅನ್ಯ ಕಾರ್ಯಕ್ಕಾಗಿ ನೀಡದೆ ಅದನ್ನು ಗ್ರಾಮಗಳಲ್ಲಿ ಉಳಿಸುವ ಮೂಲಕ ಪ್ರತಿ ಗ್ರಾಮಗಳಲ್ಲಿಯೂ ಗೋಶಾಲೆಯನ್ನು ನಿರ್ಮಿಸಿ ಗ್ರಾಮಗಳ ನಿಜವಾದ ಅಭಿವೃದ್ಧಿಗೆ ಕಾರಣೀಭೂತರಾಗಬೇಕು ಎಂದು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕರೆ ನೀಡಿದರು.
ನೀಲಾವರ ಗೋಶಾಲೆಯಲ್ಲಿ ಸೆ.13ರಂದು ಗೋವಿಗಾಗಿ ಮೇವು ಅಭಿಯಾನದ ಬಗ್ಗೆ ವಿಸ್ತ್ರತವಾಗಿ ಮಾತನಾಡುತ್ತಾ ಗೋವುಗಳ ಅಗತ್ಯತೆಯ ಬಗ್ಗೆ ಶ್ರೀಪಾದರು ಬೆಳಕನ್ನು ಚೆಲ್ಲಿದರು. ಯುವಕ ಮಂಡಲ ಮತ್ತು ಇತರ ಸಂಘಟನೆಗಳ ಮಾಧ್ಯಮದಿಂದ ಯುವಕರು ಮುಂದೆ ಬರುವ ಮೂಲಕ ಗೋವಿಗಾಗಿ ಮೇವು ಅಭಿಯಾನವನ್ನು ಇನ್ನಷ್ಟು ಬಲಪಡಿಸಬೇಕು. ಕೋವಿಡ್ ಸಂದರ್ಭದಲ್ಲಿ ಗೋಶಾಲೆಗಳಿಗೆ ಆರ್ಥಿಕ ಸಹಾಯವು ಬರುವುದು ವಿರಳವಾಗುತ್ತಿರುವ ಸಂದರ್ಭದಲ್ಲಿ ಹಸಿ ಹುಲ್ಲನ್ನು ನೀಲಾವರ ಗೋಶಾಲೆಗೆ ನೀಡಲು ಹಲವಾರು ಸಂಘ ಸಂಸ್ಥೆಗಳು ಮುಂದೆ ಬಂದಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ. ಹಿಂದೆ ಗೋಗ್ರಾಸ ನೀಡಿ ಮತ್ತೆ ನಾವು ಆಹಾರ ಸ್ವೀಕರಿಸುವ ಪದ್ಧತಿಯಿತ್ತು. ಆದರೆ ಇಂದು ಯಂತ್ರಾಧಾರಿತ ಬದುಕು ಆ ಪದ್ಧತಿಯನ್ನು ಕೈಬಿಡುವಂತೆ ಮಾಡಿದೆ. ಆದರೆ ಊಟ ಮಾಡುವ ಮೊದಲು ಗೋಗ್ರಾಸಕ್ಕಾಗಿ ಕಿಂಚಿತ್ ಧನವನ್ನು ಪ್ರತಿದಿನ ತೆಗೆದಿಟ್ಟು ಬಳಿಕ ಅದನ್ನು ಸ್ಥಳೀಯ ಗೋಶಾಲೆಗೆ ನೀಡಿದರೆ ಗೋವುಗಳ ಪಾಲನೆಗೆ ದೊಡ್ಡ ಮಟ್ಟಿನ ಸಹಕಾರವನ್ನು ನೀಡಿದಂತೆ ಆಗುತ್ತದೆ ಎಂದರು.
ಮಳೆಗಾಲದ ಬಳಿಕ ಒಣ ಹುಲ್ಲನ್ನು ಕೂಡ ನೀಡಲು ಸಂಘ ಸಂಸ್ಥೆಗಳು ಮುಂದೆ ಬರಬೇಕು ಎಂದು ಕರೆ ನೀಡಿದ ಪೇಜಾವರ ಶ್ರೀಗಳು, ಗೋವಿನ ಆಹಾರವನ್ನು ವ್ಯರ್ಥಮಾಡಬಾರದು. ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆಯ ಬಳಿಕ ಒಣ ಹುಲ್ಲನ್ನು ಗೋವುಗಳಿಗಾಗಿ ಗೋಶಾಲೆಗಳಿಗೆ ಒದಗಿಸಿದರೆ ಅದೊಂದು ಪುಣ್ಯದ ಕಾರ್ಯ ಎಂದರು.
ಗೋವಿಗಾಗಿ ಮೇವು ಅಭಿಯಾನದ ಸಂಚಾಲಕ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮಾತನಾಡುತ್ತಾ, ಆಗಸ್ಟ್ 1 ರಂದು ಮಂದರ್ತಿಯ ಕಾಮಧೇನು ಗೋಸೇವಾ ಸಮಿತಿಯ ವತಿಯಿಂದ ಆರಂಭಿಸಿದ ಗೋವಿಗಾಗಿ ಮೇವು ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಮರ್ಪಕ ರೀತಿಯಲ್ಲಿ ಬಿತ್ತರಿಸಿದ ಪರಿಣಾಮದಿಂದ ಅದರಿಂದ ಪ್ರೇರಣೆ ಪಡೆದ ಯುವಜನರು ಆಗಸ್ಟ್ ತಿಂಗಳಿನಿಂದ ಇಲ್ಲಿಯವರೆಗೆ ಸುಮಾರು 250 ಸಂಘಟನೆಗಳು ಮುಂದೆ ಬಂದು ನೀಲಾವರ ಗೋಶಾಲೆಗೆ ಹಸಿ ಹುಲ್ಲನ್ನು ನೀಡುವ ಮೂಲಕ ಗೋಸೇವೆಗಾಗಿ ವಿಶೇಷ ರೀತಿಯಲ್ಲಿ ಸಹಕಾರವನ್ನು ನೀಡಿವೆ ಎಂದರು. ಖ್ಯಾತ ವೈದ್ಯರಾದ ಡಾ. ವಿಜಯ್ ನೆಗಳೂರು ಹಾಗೂ ಡಾ. ಚಿತ್ರ ನೆಗಳೂರು ಒಂದು ಟೆಂಪೋ ಹಸಿ ಹುಲ್ಲನ್ನು ನೀಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕ ಗಣೇಶ್ ಪ್ರಸಾದ್ ಜಿ. ನಾಯಕ್, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು.
ಇಂಡಿಯನ್ ಹ್ಯೂಮಾನಿಟೇರಿಯನ್ ಆಫ್ ದ ಇಯರ್ ಪ್ರಶಸ್ತಿ ಪ್ರಧಾನ

Posted On: 13-09-2020 11:48PM
ಉಡುಪಿ :- ಇಂಡಿಯನ್ ಬುಕ್ ಆಫ್ ರೆಕಾಡ್೯ ಸಂಸ್ಥೆ ವತಿಯಿಂದ ನೀಡಲಾಗುವ ಪ್ರತಿಷ್ಠಿತ "ಇಂಡಿಯನ್ ಹ್ಯೂಮಾನಿಟೇರಿಯನ್ ಆಫ್ ದ ಇಯರ್" ಪ್ರಶಸ್ತಿ ಗೆ ಯುವ ಲೇಖಕ ರಾಘವೇಂದ್ರ ಪ್ರಭು, ಕವಾ೯ಲು ರವರು ಆಯ್ಕೆಯಾಗಿದ್ದು ಅದನ್ನು ಸೆ.13 ರಂದು ನೀಲಾವರ ಗೋಶಾಲೆಯಲ್ಲಿ ಅಯೋಧ್ಯೆ ರಾಮ ಕ್ಷೇತ್ರದ ಟ್ರಸ್ಟಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀಥ೯ ಶ್ರೀಪಾದರು ಪ್ರಧಾನ ಮಾಡಿದರು.
ಕೋವಿಡ್ 19 ಸಂದಭ೯ದಲ್ಲಿ ನಡೆಸುತ್ತಿರುವ ವಿವಿಧ ಸಮಾಜ ಮುಖಿ ಕಾಯ೯ಗಳಿಗೆ ಈ ಪುರಸ್ಕಾರ ನೀಡಲಾಗುತ್ತದೆ. ಈ ಸಂದಭ೯ದಲ್ಲಿ ಉಪನ್ಯಾಸಕ ಗಣೀಶ್ ಪ್ರಸಾದ್ ನಾಯಕ್, ಎಸ್.ಡಿ.ಎಂ ಆಯುವೇ೯ದ ಕಾಲೇಜಿನ ಪ್ರಾಧ್ಯಾಪಕ ಡಾ" ವಿಜಯ್ ನೆಗಳೂರು, ಡಾII ಚಿತ್ರಾ ನೆಗಳೂರು, ಬಿಲ್ಲಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮುoತಾದವರಿದ್ದರು.
ಶಿರ್ವದಿಂದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಐದನೇ ವರ್ಷದ ಪಾದಯಾತ್ರೆ

Posted On: 12-09-2020 06:38PM
ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ ಮುಲ್ಕಾಡಿ ಕೋಡು ಪಂಜಿಮಾರು ಶಿರ್ವ ಇವರ ವತಿಯಿಂದ 5 ನೇ ವರ್ಷದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ, ಮುಲ್ಕಾಡಿ ಉಧ್ಬವ ದುರ್ಗಾಪರಮೇಶ್ವರೀ ದೇವಸ್ಥಾನ ಕೋಡು ಪಂಜಿಮಾರುವಿನಿಂದ ಊರ ಪರವೂರ ಭಕ್ತರ ಕೂಡುವಿಕೆಯಿಂದ ಪಾದಯಾತ್ರೆ ಇಂದು ಸಂಜೆ 5 ಗಂಟೆಗೆ ನಡೆಯಿತು.. ಕಟೀಲು ಶ್ರೀ ದುರ್ಗಾ ಪರಮೇಶ್ವರಿಯ ಭಕ್ತರು ಐದನೇ ವರ್ಷದ ಸುಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಮುಲ್ಕಾಡಿ ಭಜನಾ ಮಂಡಳಿಯ ಸದಸ್ಯರಿಗೆ ಸಂತಸ ತಂದಿದೆ..
ಕಾಪುವಿನ ರಾಣ್ಯಕೇರಿಯಲ್ಲಿ ವಿದ್ಯುತ್ ಇಲ್ಲದ ಬಡ ಕುಟುಂಬಕ್ಕೆ ವಿದ್ಯುತ್ ಸಂಪರ್ಕ

Posted On: 11-09-2020 05:05PM
ಕಾಪು ಕ್ಷೇತ್ರದ ಪುರಸಭಾ ವ್ಯಾಪ್ತಿಯ ರಾಣ್ಯಕೇರಿ ಎಂಬಲ್ಲಿ ಜಯಲಕ್ಷ್ಮಿ ಎನ್ನುವರವರ ಮನೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದ್ದನ್ನು ಗಮನಿಸಿದ ಕಾಪುವಿನ ಸಾಮಾಜಿಕ ಕಾರ್ಯಕರ್ತೆ ನೀತಾ ಪ್ರಭುರವರು ಶ್ರೀಕಾಂತ್ ನಾಯಕ್ ಅವರಿಗೆ ತಿಳಿಸಿದಾಗ ಸ್ಥಳೀಯ ಪ್ರಮುಖರಾದ ಸುಧಾಮ ಶೆಟ್ಟಿ ಹಾಗೂ ಪ್ರಶಾಂತ್ ಪೂಜಾರಿ ಇವರೊಂದಿಗೆ ಮನೆಗೆ ಭೇಟಿ ನೀಡಿ ವಿದ್ಯುತ್ ಸಂಪರ್ಕ ಕೊಡಿಸುವ ಭರವಸೆ ನೀಡಿದ್ದರು.

ತೀರಾ ಬಡಕುಟುಂಬವಾದ ಇವರು ತಮ್ಮಲ್ಲಿ ಹೆಚ್ಚಿನ ದಾಖಲೆಗಳು ಇಲ್ಲದ್ದನ್ನು ಮನಗಂಡ ಸುಧಾಮ ಶೆಟ್ಟಿಯವರು ಪುರಸಭಾ ಅಧಿಕಾರಿಗಳೊಂದಿಗೆ ಮಾತನಾಡಿ ಮಾನವೀಯ ನೆಲೆಯಲ್ಲಿ ವಿದ್ಯುತ್ ಸಂಪರ್ಕ ಒದಗಿಸಲು ನಿರಾಪೇಕ್ಷಣಾ ಪತ್ರ ಕೊಡಿಸಿದರು. ನಂತರದಲ್ಲಿ ಕಾಪು ಮೆಸ್ಕಾಂ ನ್ನು ಸಂಪರ್ಕಿಸಿ ಅವರಿಗೆ ಉಚಿತ ಕಂಬ ಒದಗಿಸಿ ವಿದ್ಯುತ್ ಸಂಪರ್ಕ ಒದಗಿಸಿದ್ದರು.
ಇಂದು ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರೊಂದಿಗೆ ಫಲಾನುಭವಿಗಳ ಮನೆಗೆ ಭೇಟಿ ನೀಡಿ ವಿದ್ಯುತ್ ಸಂಪರ್ಕದ ಉದ್ಘಾಟನೆ ಮಾಡಿದರು. ಕಾಪುವಿನ ಸಾಮಾಜಿಕ ಕಾರ್ಯಕರ್ತೆ ನೀತಾ ಪ್ರಭುರವರು ಮನೆಗೆ ಬೇಕಾದಂತಹ ಬಲ್ಬ್ಗಳನ್ನು ಹಾಗೂ ಒಂದು ಟೇಬಲ್ ಫ್ಯಾನ್ ನ್ನು ಕೊಡುಗೆಯಾಗಿ ನೀಡಿದ್ದು ಮಾನ್ಯ ಶಾಸಕರ ಮುಖೇನ ಅದನ್ನು ಹಸ್ತಾಂತರಿಸಲಾಯಿತು.
ಬಡಕುಟುಂಬವೊಂದಕ್ಕೆ ಸಹಾಯ ಮಾಡಲು ಅವಕಾಶ ನೀಡಿದ ನೀತಾ ಪ್ರಭು, ಪ್ರಶಾಂತ್ ಪೂಜಾರಿ ಮತ್ತು ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ಹಾಗೂ ಹಿರಿಯರಾದ ಸುಧಾಮ ಶೆಟ್ಟಿ, ಇವರೆಲ್ಲರಿಗೂ ಶ್ರೀಕಾಂತ್ ನಾಯಕ್ ಧನ್ಯವಾದಗಳನ್ನು ತಿಳಿಸಿದರು.