Updated News From Kaup
ಕಾಪುವಿನಲ್ಲಿ ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದ ಕುಡಿಯುವ ನೀರಿನ ಯಂತ್ರ ಶೋಗೆ ಇಟ್ಟಿದ್ದಾರೆಯೇ ?
Posted On: 28-10-2020 09:10AM
ಕಳೆದ ಕೆಲವು ತಿಂಗಳ ಹಿಂದಷ್ಟೇ ನಮ್ಮ ಕಾಪು ವೆಬ್ ಪೋರ್ಟಲ್ ನಲ್ಲಿ ಕುಡಿಯುವ ನೀರಿನ ಯಂತ್ರದ ಬಗ್ಗೆ ವರದಿ ಮಾಡಿತ್ತು.. ಇಲ್ಲಿಯವರೆಗೆ ಯಾವುದೇ ಅಧಿಕಾರಿಗಳ ಪ್ರತಿಕ್ರಿಯೆಯೂ ವ್ಯಕ್ತವಾಗಿಲ್ಲ.
ಸ್ನೇಹ ಜೀವಿಯಿಂದ ನವರಾತ್ರಿತಿಳಿವು, ಗೌರವಾರ್ಪಣೆ , ಶುಭಹಾರೈಕೆ
Posted On: 27-10-2020 03:57PM
ಕಟಪಾಡಿ : ಉಡುಪಿಯ ಗಣೇಶ ರಾವ್ ಎಲ್ಲೂರು ಇವರ ಸಾರಥ್ಯದ ಕಲೆ , ಸಾಹಿತ್ಯ , ಸಂಸ್ಕೃತಿಗಾಗಿ ಸೇವೆ ಸಲ್ಲಿಸುತ್ತಿರುವ. "ಸ್ನೇಹ ಜೀವಿ ಉಡುಪಿ" ಸಂಸ್ಥೆಯು ತನ್ನ ಯಕ್ಷಗಾನ - ನಾಟಕ ರಂಗಭೂಮಿಯ ವಿದ್ಯಾರ್ಥಿಗಳಿಗಾಗಿ ನವರಾತ್ರಿ ಆಚರಣೆಯ ಮಹತ್ವದ ಕುರಿತು ಉಪನ್ಯಾಸ ಹಾಗೂ ಹಿರಿಯ ಕಲಾವಿದರಿಗೆ ಗೌರವಾರ್ಪಣೆ , ವಿದ್ಯಾರ್ಥಿಗಳಿಬ್ಬರ ಹುಟ್ಟುಹಬ್ಬವನ್ನು ಕಟಪಾಡಿಯ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ಆಯೋಜಿಸಿತ್ತು .
ಕಾಪುವಿನಲ್ಲಿ ಪ್ರಥಮಬಾರಿಗೆ ಎಸ್ಸೆಲ್ ಎನರ್ಜಿ ಮುದ್ರೆಯ ಎಲೆಕ್ಟ್ರಿಕಲ್ ಸೈಕಲ್ ಶೋರೂಮ್ ಶುಭಾರಂಭ
Posted On: 27-10-2020 01:02PM
ಮಾಲಿನ್ಯಮುಕ್ತ ಪರಿಸರವನ್ನು ಪೋಷಿಸುವ ದಿಸೆಯಲ್ಲಿ ಯಾವುದೇ ದಾಖಲಾತಿ, ಲೈಸೆನ್ಸ್, ಇನ್ಶೂರೆನ್ಸ್ ನ ಅಗತ್ಯವಿಲ್ಲದ ಇಲೆಕ್ಟ್ರಿಕಲ್ ಸೈಕಲ್ ಶೋರೂಮ್ ಪ್ರಪ್ರಥಮ ಬಾರಿಗೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪೊಲಿಪು ಮೀನುಗಾರರ ಸಹಕಾರಿ ಸಂಘ, ಕಾಪು ತಾಲೂಕು ಕಛೇರಿ ಹತ್ತಿರದ ವಿಘ್ನೇಶ್ವರ ಎಂಟರ್ಪ್ರೈಸಸ್ ಕಾಪು ಇಲ್ಲಿ ನಾಳೆ (28-10-20) ಬೆಳಿಗ್ಗೆ 10:30ಕ್ಕೆ ಶುಭಾರಂಭಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸುಧಾಕರ್ ಬಂಗೇರ : 8277483732
ಬಂಟಕಲ್ಲ್ ಲಯನ್ಸ್ ಕ್ಲಬ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಮೊಬೈಲ್ ವಿತರಣೆ
Posted On: 26-10-2020 07:39PM
ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳು ಪ್ರಾರಂಭವಾಗದ ಸನ್ನಿವೇಶದಲ್ಲಿ ಮಕ್ಕಳಿಗೆ ಆನ್ಲೈನ್ ತರಗತಿಗಳು ನಡೆಯುತ್ತಿದ್ದು ಮೊಬೈಲ್ ಸೌಲಭ್ಯಗಳು ವಂಚಿತ ಮಕ್ಕಳಿಗೆ ಕಲಿಕೆಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂದು ದಾನಿಗಳ ನೆರವಿನಿಂದ ಬಂಟಕಲ್ಲ್ ಲಯನ್ಸ್ ಕ್ಲಬ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮೊಬೈಲ್ ವಿತರಿಸಲಾಯಿತು.
ಇನ್ನಂಜೆಯಲ್ಲಿ ಮಾತೃಶಕ್ತಿ ಮತ್ತು ದುರ್ಗಾವಾಹಿನಿ ಘಟಕದ ಪೂರ್ವಭಾವಿ ಸಭೆ
Posted On: 25-10-2020 10:42PM
ಇನ್ನಂಜೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ವಿಶ್ವ ವಲ್ಲಭ ಘಟಕದ ಜೊತೆಗೆ ಮಾತೃಶ್ರೀ ಘಟಕ ಮತ್ತು ದುರ್ಗಾ ಶಕ್ತಿ ಘಟಕವನ್ನು ಮಾಡುವ ಸಲುವಾಗಿ ಇಂದು ಮಡುಂಬು ವಿದ್ವಾನ್ ಕೆ.ಪಿ ಶ್ರೀನಿವಾಸ್ ತಂತ್ರಿಗಳ ಮನೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ಕೆ.ಪಿ ಶ್ರೀನಿವಾಸ್ ತಂತ್ರಿ, ಭಜರಂಗದಳದ ಸಂಚಾಲಕರಾದ ರಾಜೇಶ್ ನಿಸರ್ಗ, ಮಾಲಿನಿ ಇನ್ನಂಜೆ , ಗೊರಕ್ಷಾ ಪ್ರಮುಖ್ ರವಿ ಕಲ್ಯಾಲು, ವಿದ್ಯಾರ್ಥಿ ಪ್ರಮುಖ್ ಕಾರ್ತಿಕ್ ಮಡುಂಬು, ಸಾಮಾಜಿಕ ಜಾಲತಾಣ ಪ್ರಮುಖ್ ಪೃಥ್ವಿರಾಜ್ ಮಡುಂಬು, ವಿಶ್ವ ಹಿಂದೂ ಪರಿಷತ್ ಸದಸ್ಯರು,ಭಜರಂಗ ದಳದ ಕಾರ್ಯಕರ್ತರು ಹಾಗೂ ಮಾತೃ ಶಕ್ತಿ ಮತ್ತು ದುರ್ಗಾವಾಹಿನಿ ಸೇರ್ಪಡೆಗೊಳ್ಳಲಿರುವ ಸದಸ್ಯರು ಉಪಸ್ಥಿತರಿದ್ದರು.. ಕಾರ್ಯದರ್ಶಿ ನಿತೇಶ್ ಕಲ್ಯಾಲು ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು.
ಕಾಪು ಮಾರಿಯಮ್ಮನ ಆದಿಸ್ಥಳದಲ್ಲಿ ರಾಜಮನೆತನದವರು ಬಳಸಿದ ಖಡ್ಗಕ್ಕೆ ಆಯುಧ ಪೂಜೆ
Posted On: 25-10-2020 10:14PM
ಕಾಪು ಮಾರಿಯಮ್ಮ ದೇವಸ್ಥಾನದ ಆಧಿಸ್ಥಳವಾಗಿರುವ ಶ್ರೀ ತ್ರಿಶಕ್ತಿ ಸನ್ನಿಧಾನ ಕೋಟೆಮನೆ. ಇಂದಿನ ನವರಾತ್ರಿ ಅಲಂಕಾರ, ಹಾಗೂ ನೂರಾರು ವರ್ಷದ ಹಿಂದೆ ಇಲ್ಲಿನ ರಾಜ ಮನೆತನದವರು ಉಪಯೋಗಿಸಿದ ಖಡ್ಗಕ್ಕೆ ಆಯುಧ ಪೂಜೆ ಪ್ರಯುಕ್ತ ಖಡುಬು ಬಡಿಸುವ ಸಂಪ್ರದಾಯ ನೆರವೇರಿತು.
ನಿರಾಶ್ರಿತ ಹಿರಿಯ ಮಹಿಳೆಗೆ ಮನೆ ಹಸ್ತಾಂತರ
Posted On: 25-10-2020 09:46PM
ಉಡುಪಿ : ಮಳೆಗಾಲದಲ್ಲಿ ಇದ್ದ ಸಣ್ಣ ಮನೆಯನ್ನು.ಕಳೆದುಕೊಂಡಿದ್ದ ಸಾವಿರಾರು ಮಹಿಳೆಯರಿಗೆ ಹೆರಿಗೆ ಶೂಶ್ರುಶೆ ನಡೆಸಿಕೊಂಡು ಬಂದಿರುವ ಸೂಲಗಿತ್ತಿ ಹಿರಿಯರಾದ ಸುಂದರಿ ಸುವಣ೯ ಯವರಿಗೆ ಹೋಂ ಡಾಕ್ಟರ್ ಫೌಂಡೇಶನ್ ಮತ್ತು ದಾನಿಗಳ ನೆರವಿನಿಂದ ಕಟ್ಟಿಸಿರುವ ಮನೆ ಹಸ್ತಾಂತರ ಕಾಯ೯ಕ್ರಮ ಅ.25 ರಂದು ರಂದು ನಡೆಯಿತು.ಕಾಯ೯ಕ್ರಮಕ್ಕೆ ಸ್ವಾಮಿ ಕೊರಗಜ್ಜ ದೈವಸ್ಥಾನದ ಮುಖ್ಯಸ್ಥರಾದ ಕೃಷ್ಣ ಕುಲಾಲ್ ಮತ್ತು ಕುಕ್ಕೆಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಹೆಗ್ಡೆ ಚಾಲನೆ ನೀಡಿ ಶುಭ ಹಾರೈಸಿದರು.
ಊಟ - ಆಟ - ಪಾಠ ಕ್ಷೇತ್ರಕ್ಕೆ ಭೂಷಣ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲು
Posted On: 25-10-2020 09:26PM
ಶ್ರೀ ದುರ್ಗಾ ಪರಮೇಶ್ವರಿಯು "ಭ್ರಾಮರಿ"ಯಾಗಿ ಆವಿರ್ಭವಿಸಿದ 'ಪುಣ್ಯ ಭೂಮಿ' ಕಟೀಲು .ವಿಸ್ತೃತ ನಿತ್ಯಪೂಜಾ ವಿಧಾನ , ವಿಶೇಷ ಪರ್ವಗಳ ವಿಶಿಷ್ಟ ಆಚರಣೆ , ಆಗಮ ಬದ್ಧತೆ , ಸಂಪ್ರದಾಯ - ಶಿಷ್ಟಾಚಾರ , ಶಿಕ್ಷಣ - ಕಲೆಗಳಿಗೆ ಆಶ್ರಯಸ್ಥಾನ, ನಿರಂತರ ಮೂರುಹೊತ್ತು ಅನ್ನ ದಾಸೋಹ ನೆರವೇರುವ ದೇವಾಲಯ ಪರಿಕಲ್ಪನೆಯ ಪರಿಪೂರ್ಣ ಅನಾವರಣವಾಗಿ ಕಟೀಲು ಕ್ಷೇತ್ರ ಆದೃತವಾಗಿದೆ . ನಿಗೂಢ ರಹಸ್ಯವನ್ನು ,ಅಭೇದ ಸತ್ಯವನ್ನು , ಭವ್ಯದ ಅಂತರ್ಗತ ದಿವ್ಯ ಸಂಕಲ್ಪದ ವ್ಯಾಖ್ಯಾನವನ್ನು ನೀಡುವಂತೆ ಕಟೀಲು ಕ್ಷೇತ್ರ ನಿಸರ್ಗದ ಅಚ್ಚರಿಯಾಗಿದೆ ; ಆದರೆ ಅಷ್ಟೆ ಸಹಜವಾಗಿ ಭಾಸವಾಗುತ್ತದೆ . ಗೊಂದಲಗಳಿಲ್ಲದ ಕಟೀಲಮ್ಮನ ಸನ್ನಿಧಾನ ನಂಬಿಕೆಯ ನೆಲೆಯಾಗಿ ರೋಚಕ ಅನುಭವಗಳನ್ನು ನೀಡುತ್ತದೆ . ದರ್ಶನ ಸಾರ್ಥಕವಾಗುತ್ತದೆ .ಬನ್ನಿ........ಇಲ್ಲಿ ನಿಗೂಢ ರಹಸ್ಯಗಳಿದ್ದರೂ , ವಿಲಕ್ಷಣತೆಗಳಿದ್ದರೂ ಶ್ರೀ ಕ್ಷೇತ್ರ ಕಟೀಲು 'ಕ್ಲಿಷ್ಟ' ಅನ್ನಿಸುವುದಿಲ್ಲ .ಆದರೆ ಸರಳ ಸುಂದರ ಸಾಕ್ಷಾತ್ಕಾರದ ಅನುಭವವಾಗುತ್ತದೆ. ಈ ದರ್ಶನ ; ಮುಗ್ಧ ಭಾವ ಮತ್ತು ಶ್ರದ್ಧೆಯೇ ಪ್ರಧಾನವಾಗಿ ನಿಚ್ಚಳ ಹಾಗೂ ದಿವ್ಯ ಅನುಭವದಿಂದ ಭಕ್ತನ ಮನಸ್ಸು ಪ್ರಸನ್ನವಾಗುತ್ತದೆ . ಕಾರಣ ಇಲ್ಲಿ ನೆಲೆಯಾದವಳು "ಕಟ್ಲಪ್ಪೆ" ಅಥವಾ "ಕಟೀಲಪ್ಪೆ" ,ಆಕೆಯೇ 'ಜಗಜ್ಜನನಿ', ದುರ್ಗಾಪರಮೆಶ್ವರೀ .ಸ್ಥೂಲವಾಗಿ ಹೇಳುವುದಾದರೆ ಒಬ್ಬಳು 'ಅಮ್ಮ" ...ಸ್ವತಃ ತಾನೇ ಆವಿರ್ಭವಿಸಿದ ಸತ್ಯದ ಸಂಕಲ್ಪ. ಈ ಅಮ್ಮನ ಸನ್ನಿಧಾನ ಯಾಕಿಷ್ಟು ಆತ್ಮೀಯವಾಗುತ್ತದೆ ? .......'ಅಮ್ಮಾ'...ಎರಡಕ್ಷರದ ಅಕ್ಷರಕ್ಕಿರುವ ಅಮೇಯವಾದ ಅಮಿತ ಭಾವನೆಗಳನ್ನು ಉದ್ದೀಪಿಸಬಲ್ಲ ಅಮೂಲ್ಯ ,ಅಮಲ ಸಂಬಂಧವನ್ನು ನೆನಪಿಸಿ ಸ್ಥಾಯಿಗೊಳಿಸಬಲ್ಲ ಅನನ್ಯತೆ ಅನ್ಯ ಸಂಬಂಧ ವಾಚಕಗಳಿಲ್ಲ .ಅಂದರೆ ಒಬ್ಬಳು 'ಅಮ್ಮ'ನೊಂದಿಗೆ ಹೇಗೆ ಬೆಸೆದು ಕೊಳ್ಳಬಲ್ಲೆವೋ ಅಷ್ಟೆ ಸಲುಗೆಯಿಂದ ಗಾಢವಾಗಿ ಕಟೀಲಮ್ಮನೊಂದಿಗೆ 'ತಾದಾತ್ಮ್ಯ' ಸಾಧಿಸಬಹುದು .ಆದರೆ ಶ್ರದ್ಧೆ , ನಂಬಿಕೆ ಪ್ರಧಾನವಾಗುತ್ತದೆ . ಇದು ಇಲ್ಲಿಯ ಸಾನ್ನಿಧ್ಯ ವಿಶೇಷ . ಅಮ್ಮ - ಮಗು ಸಂಬಂಧ ಲೌಕಿಕದಲ್ಲಿ ಸಂಭವಿಸಿದ ಬಾಂಧವ್ಯ .ಇದು ಅಪ್ಪಟ ಸತ್ಯ .ವಾತ್ಸಲ್ಯ , ಕರುಣೆಯನಿಧಿ , ಅಮೂರ್ತಭಾವ - ಬಂಧನ ಆದುದರಿಂದ ಶ್ರೇಷ್ಠ , ಜ್ಯೇಷ್ಠ , ಸರ್ವಮಾನ್ಯ ,ಪ್ರೀತಿಯ ಉಗಮಸ್ಥಾನ. ಈ ಪ್ರೀತಿ ,ಬಾಂಧವ್ಯವೇ, ಕಾರಣವಾಗುವ ಕಟೀಲಮ್ಮನ ದರ್ಶನಕ್ಕೆ ಭಕ್ತಸಂದೋಹ ಆಗಮಿಸುತ್ತದೆ. ಅಮ್ಮನಲ್ಲಿ ನಿವೇದಿಸಿಕೊಳ್ಳಲು ಅಂಜಿಕೆ ಇಲ್ಲ , ಕಷ್ಟ ವಿವರಿಸಲು ಸಂದೇಹಗಳಿಲ್ಲ , ಆದುದರಿಂದ ಕೃಪಾಕಟಾಕ್ಷ ಪ್ರಾಪ್ತಿ .ಇಷ್ಟಾರ್ಥ ಸಿದ್ಧಿ ಸುಲಭಸಾಧ್ಯ . ಭ್ರಾಮರೀ ದುರ್ಗಾಪರಮೇಶ್ವರಿಯೊಂದಿಗೆ ಏರ್ಪಡುವ ಬಾಂಧವ್ಯ ... ಆಮೂಲಕ ದೊರೆಯುವ ಆನಂದ ,ಧನ್ಯತೆ ಕಟೀಲಮ್ಮನನ್ನು ದರ್ಶಿಸಿದವರಿಗೆ ಮಾತ್ರ ಸ್ವಯಂವೇದ್ಯ. ಅಂತಹ ಆಕರ್ಷಣೆ ಈ ಉದ್ಭವ ಸನ್ನಿಧಿಯಲ್ಲಿದೆ .
ಮಡುಂಬು ಬೆರ್ಮೊಟ್ಟುವಿನಲ್ಲಿ ವಿಜೃಂಭಣೆಯ ನವರಾತ್ರಿ
Posted On: 25-10-2020 09:11PM
ಇತಿಹಾಸ ಪ್ರಸಿದ್ಧ ಮಡುಂಬು ಬೆರ್ಮೊಟ್ಟು ಶ್ರೀ ಭದ್ರಕಾಳಿ ಮತ್ತು ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನದಲ್ಲಿ ಒಂಬತ್ತು ದಿನಗಳ ನವರಾತ್ರಿ ಪೂಜೆ ಸಹಿತ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದಿದ್ದು. ವಿಜಯ ದಶಮಿಯ ದಿನವಾದ ಇಂದು ಕೂಡಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.
ಮರಿಗೆಯಲ್ಲಿ ಮರೆಯಾದರೂ, ಮನೋರಥ ಸಿದ್ಧಿಯ ಕ್ಷೇತ್ರ ಭಗವತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪುತ್ತೂರು, ಉಡುಪಿ
Posted On: 24-10-2020 11:20PM
ಜಗಜ್ಜನನಿಯಲ್ಲಿ ಹೆತ್ತ ತಾಯಿಯನ್ನು , ಭೂಮಿತಾಯಿಯನ್ನು ಸಾಕ್ಷಾತ್ಕರಿಸಿಕೊಂಡ ಮುಗ್ಧ ಮನಸ್ಸುಗಳು ಪರಿಭಾವಿಸಿ , ಕಲ್ಪಿಸಿ ಮೂರ್ತಸ್ವರೂಪ ನೀಡಿದ ದುರ್ಗೆ ,ಪಾರ್ವತಿದೇವಿ ಹಾಗೂ ಐಶ್ವರ್ಯವಂತಳಾದ ಮಹಾಲಕ್ಷ್ಮೀಯ 'ಭಗವತಿ'ಯ ಚಿಂತನೆ ಭವ್ಯವಾದುದು .ಅಂತರ್ಯಾಮಿಯಾಗಿರುವ ಅಮ್ಮನ ಸಾನ್ನಿಧ್ಯ ದಿವ್ಯವಾದುದು .ಇಂತಹ ಅಲೌಕಿಕವಾದುದನ್ನು ಲೌಕಿಕದಲ್ಲಿ ಗುರುತಿಸಿದ ನೆಲೆಗಳಲ್ಲಿ "ಪುತ್ತೂರಮ್ಮ"ನ ಸನ್ನಿಧಿ ಒಂದು .ಈಕೆ "ಪುತ್ತೂರಪ್ಪೆ"ಯಾಗಿ ಪ್ರಸಿದ್ಧಳು - ಬಹುಮಾನ್ಯಳು. ದುಃಖ ದುಮ್ಮಾನಗಳಲ್ಲಿ 'ಅಪ್ಪೆ ತೂಪೆರ್' ಎಂಬಲ್ಲಿಯವರೆಗೆ ಗಟ್ಟಿಯಾದ ಅಥವಾ ಗಾಢವಾದ ಅವಿಚ್ಛಿನ್ನ ಸಂಬಂಧ . ನಂಬಿಕೆ - ಭರವಸೆಯೇ ಪ್ರಧಾನವಾಗಿರುವ ವಿಶ್ವಾಸದ ಸೆಲೆ . ಉಡುಪಿ ಸಮೀಪದ ಪುತ್ತೂರು ಭಗವತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಪುರಾಣ ,ಇತಿಹಾಸ , ದಂತಕತೆ ಸಹಿತ ಸಾಂದ್ರವಾದ ಜನಪದ ಹಿನ್ನೆಲೆಯನ್ನು ಹೊಂದಿದೆ .ಮೂಲಸ್ಥಾನ ಪುತ್ತೂರು ಭಗವತಿ ಶ್ರೀ ದುರ್ಗಾಪರಮೇಶ್ವರಿಯು ಉಪಸ್ಥಾನ ಗಣಪತಿ, ವೀರಭದ್ರರೊಂದಿಗೆ ಪರಿವಾರ ಶಕ್ತಿಗಳಾದ ರಕ್ತೇಶ್ವರೀ , ನಂದಿಗೋಣ , ಧೂಮಾವತಿ , ವಾರಾಹಿ, ವ್ಯಾಘ್ರಚಾಮುಂಡಿ ,ಕ್ಷೇತ್ರಪಾಲ ,ಬೊಬ್ಬರ್ಯ ಹಾಗೂ ನಾಗ ದೇವರಿಂದ ಪರಿವೇಷ್ಟಿತಳಾಗಿ ಭಕ್ತಾಭೀಷ್ಟ ಫಲಪ್ರದಾಯಿಕಿಯಾಗಿದ್ದಾಳೆ .ಆದರೆ ಈ ಅಮ್ಮ ಮರೆಯಾಗಿದ್ದು ಮನೋರಥ ಈಡೇರಿಸುತ್ತಾಳೆ . ಜಾಗೃತ ಸನ್ನಿಧಾನವಾಗಿದೆ .
