Updated News From Kaup
ಡ್ರಗ್ಸ್ ವ್ಯಸನದಿಂದ ಯುವ ಜನಾಂಗವನ್ನು ಬಂಧಮುಕ್ತಗೊಳಿಸಬೇಕಾಗಿದೆ
Posted On: 29-08-2020 09:06PM
ಇತ್ತಿಚೆಗೆ ಮಾದಕ ಡ್ರಗ್ಸ್ ವ್ಯಸನದ ಬಗ್ಗೆ ಬಹಳಷ್ಟು ಚಚೆ೯ ಯಾಗುತ್ತಿದೆ.ಬೆಂಗಳೂರು ಸೇರಿದಂತೆ ಹಲವಾರು ನಗರದಲ್ಲಿ ಇದರ ಜಾಲದ ಬಗ್ಗೆ ಹಾಗೂ ಚಿತ್ರರಂಗದಲ್ಲಿ ಇದರ ವ್ಯಾಪಕತೆಯ ಕುರಿತು ಮಾಧ್ಯಮಗಳಲ್ಲಿ ಬಹಳಷ್ಟು ವಿಸ್ತ್ರತ ಚಚೆ೯ ಯಾಗುತ್ತಿರುವುದನ್ನು ನಾವು ನೋಡುತ್ತಿದ್ದೆವೆ. ಮಾದಕತೆಯ ಹೆಸರಿನಲ್ಲಿ ನಡೆಯುವ ಈ ವ್ಯವಸ್ಥಿತ ಜಾಲದ ಬಗ್ಗೆ ತನಿಖೆ ನಡೆಯಬೇಕಾಗಿದೆ. ಈ ಜಾಲದ ಕಪಿ ಮುಷ್ಠಿಗೆ ದಾಸರಾಗುತ್ತಿರುವವಲ್ಲಿ ಹೆಚ್ಚಿನವರು ಯುವ ಜನಾಂಗದವರು ಎಂಬುದು ದುರದೃಷ್ಟಕರ. ಅದೇ ರೀತಿ ಮಕ್ಕಳು ಕೂಡ ಮಾದಕ ವ್ಯಸನಕ್ಕೆ ದಾಸರಾಗುತ್ತಿರುವುದು ಬೇಸರದ ವಿಚಾರ. ಗೆಳೆಯ ಅಥವಾ ಗೆಳತಿಯೊಂದಿಗೆ ಸೇರಿ ಮಕ್ಕಳು ಏನೇನು ಮಾಡುತ್ತಾರೆ? ಎಲ್ಲಿಗೆ ಹೋಗುತ್ತಾರೆ? ಪಾಠ ಚನ್ನಾಗಿ ಕಲಿಯುತ್ತಿದ್ದಾರೆಯೇ? ಹೆತ್ತವರಲ್ಲಿ ಮಾತನಾಡುವ ಶೈಲಿಯಲ್ಲಿ ವ್ಯತ್ಯಾಸವಾಗಿದೆಯೇ? ಸಂಬಂಧಿಕರೊಳಗಿನ ಬಾಂಧವ್ಯ ಚೆನ್ನಾಗಿದೆಯೇ? ಮುಂತಾದವುಗಳಿಂದ ವ್ಯಸನಿಗಳನ್ನು ತಿಳಿದುಕೊಳ್ಳಬಹುದು. ಮಾರುಹೋದರೆ ಮತ್ತೆ ವಾಸ್ತವಕ್ಕೆ ಮರಳುವುದು ಕಷ್ಟಕರ. ಇಂತಹ ಮಾದಕ ವಸ್ತುಗಳು ತುಂಬಾ ಕಡೆಗಳಲ್ಲಿ ಕಳ್ಳಸಾಗಾಣಿಕೆಯಾಗುತ್ತಿವೆ. ಪೋಲಿಸರು ಕಂಡು ಹಿಡಿದು ವಶಕ್ಕೆ ತೆಗೆದುಕೊಂಡರೂ ಸಹ ಕೆಲವೊಮ್ಮೆ ಕೈಗೆ ಸಿಗದೆ ಉಳಿದು ಬಿಡುತ್ತದೆ.
ಮತ್ತೆ ಕೃಷಿಯತ್ತ ಆಸಕ್ತಿ : ಲೇಖನ - ಕೆ.ಎಲ್. ಕುಂಡಂತಾಯ
Posted On: 29-08-2020 08:38PM
'ನಿಸರ್ಗ' ದೇಶಕ್ಕೆ ಸೌಭಾಗ್ಯವನ್ನು ಕೊಡುತ್ತದೆ. 'ಅನ್ನ' ಮನುಕುಲಕ್ಕೆ "ಜೀವ - ಜೀವನ" ಕೊಡುತ್ತದೆ. ಹೌದು.... ನಿಸರ್ಗ, ತಾನು ಮೊದಲು ಸೌಭಾಗ್ಯವತಿ - ಫಲವತಿಯಾಗಬೇಕು.ಆಗ ದೇಶಕ್ಕೆ ಸೌಭಾಗ್ಯದ ಕೊಡುಗೆಯನ್ನು ಕೊಡಲಾದೀತು . ಸದಾ ಸಂಪದ್ಭರಿತ ನಿಸರ್ಗ "ಸೌಮಾಂಗಲ್ಯ"ವನ್ನು ಪಡೆದು ಹಸಿರು 'ಹೊದ್ದು' ಫಲ ಸಮೃದ್ಧಿಯನ್ನು 'ಹೊತ್ತು' ಸಂಭ್ರಮಿಸುವ ಕಾಲವೇ ವರ್ಷಾಕಾಲ - ಮಳೆಗಾಲ . ನಿಸರ್ಗ - ಪ್ರಕೃತಿ 'ಸ್ತ್ರೀ' . ಆಕಾಶ 'ಪುರುಷ'. ಸುರಿಯುವ 'ಮಳೆ' ; ಭೂಮಿ - ಆಕಾಶಕ್ಕೆ ಸಂಬಂಧವನ್ನು ಬೆಸೆಯುತ್ತದೆ . ರೈತ ಸಕಾಲವೆಂದು ಗದ್ದೆಗಿಳಿಯುತ್ತಾನೆ. ನಿಸರ್ಗ ನೀರೆ ಅರಳಿ ಸಿರಿವಂತಳಾಗುತ್ತಾಳೆ ಅಂದರೆ ಸಮೃದ್ಧಿಯ ಫಲವನ್ನು ಕೊಡುವುದಕ್ಕೆ ಸನ್ನದ್ಧಳಾಗುತ್ತಾಳೆ . ಭೂಮಿಯ ಫಲವಂತಿಕೆಯನ್ನು ಕಂಡು ಹೆಣ್ಣು ಫಲವತಿಯಾಗುವುದಕ್ಕೆ ಸಮೀಕರಿಸಿ ಒಬ್ಬಳನ್ನು "ಹೆತ್ತ ತಾಯಿ' ಎಂದು , ಮತ್ತೊಬ್ಬಳನ್ನು "ಹೊತ್ತ ತಾಯಿ" ಎಂದು ಮಾನವ ಕಂಡುಕೊಂಡುದುದು ಪ್ರಕೃತಿಯ ಅಂತರ್ಗತವಾಗಿರುವ ಪರಮ ಸತ್ಯ . ಈ ಸತ್ಯದ ಅರಿವು ಮೂಡಲು ಸಹಸ್ರಾರು ವರ್ಷಗಳ ಬದುಕಿನ ಅನುಭವ ಕಾರಣ. ಇದೇ 'ಮಾತೃ ಆರಾಧನೆಯ' ಮೂಲ . ಮಣ್ಣು - ಭೂಮಿಯನ್ನು ನಂಬುವುದು . ಅದರೊಂದಿಗೆ ಹೋರಾಡುವುದು , ಕೃಷಿಕನ ಕಾಯಕ . ಈ ಸಂಬಂಧ 'ಕೃಷಿ ಸಂಸ್ಕೃತಿ'ಯ ಪ್ರಾರಂಭದಿಂದ ಸಾಗಿ ಬಂದಿದೆ . ಮಣ್ಣಿನೊಂದಿಗೆ ನಡೆಸುವ ಹೋರಾಟ - ಕೃಷಿಕಾರ್ಯ , ಫಲ - ಬೆಳೆಯನ್ನು ಕೊಡಬಲ್ಲುದೇ ಹೊರತು , ಅಮ್ಮ ಮುನಿಯಲಾರಳು , ಏಕೆಂದರೆ ಅಮ್ಮನ ಅಂದರೆ ಮಣ್ಣಿನ ಮಗನಲ್ಲವೇ . ಆದರೆ ತುಳು ಗಾದೆಯೊಂದು ಎಚ್ಚರಿಸುತ್ತದೆ " ಮರಿ ತುಚಿಂಡ ಮರ್ದ್ ಉಂಡು , ಮಣ್ಣ್ ತುಚಿಂಡ ಮರ್ದ್ ಇಜ್ಜಿ" ಎಂದು .ಅಂದರೆ ವಿಷತುಂಬಿದ ಹಾವು ಕಚ್ಚಿದರೆ ಮದ್ದುಇದೆ ,ಆದರೆ ಮಣ್ಣು ಕಚ್ಚಿದರೆ - ಮುನಿದರೆ ಅದಕ್ಕೆ ಮದ್ದಿಲ್ಲ - ಪರಿಹಾರವಿಲ್ಲ . ಜನ್ಮ ಭೂಮಿಯನ್ನು ಜನನಿಗೆ ಹೋಲಿಸಿದರು . ಜನ್ಮ ಭೂಮಿಯ ರಕ್ಷಣೆ ಮೌಲ್ಯಯುತ ಕಾಯಕವಾಯಿತು . ಮಣ್ಣನ್ನು ನಂಬಿದಹಾಗೆ ಮಣ್ಣನ್ನು ಸಾಕ್ಷಿಯಾಗಿರಿಸಿಕೊಂಡರು . ಜನಪದ ಕತೆಗಳಲ್ಲಿ , ಪುರಾಣಗಳಲ್ಲಿ ಮಣ್ಣಿನ ಸತ್ಯಗಳು ಪ್ರಕಟಗೊಳ್ಳುತ್ತಿರುತ್ತವೆ . ಮಣ್ಣು ,ದಿಕ್ಕುಗಳು , ಆಕಾಶ ,ಸೂರ್ಯ - ಚಂದ್ರ ಮುಂತಾದ ಕಣ್ಣಿಗೆ ಕಾಣುವ ಸತ್ಯಗಳನ್ನು ಮಣ್ಣಿನಷ್ಟೇ ಮುಖ್ಯವಾಗಿ ಮನುಕುಲ ಸ್ವೀಕರಿಸಲ್ಪಟ್ಟಿದೆ . ಮುನಿಯಲು , ಶಾಪಕೊಡಲು ಮಣ್ಣು ಸಾಕ್ಷಿಯಾಗುವ ಪರಿಕಲ್ಪನೆ ಅದ್ಭುತ . 'ನೆಲಕಾಯಿ ದರ್ತೆರ್' , "ಮಣ್ಣ್ ಮುಟುದು ಪೊಣ್ಣ ಶಾಪ ಕೊರಿಯೊಲು ಸಿರಿ". ಸತ್ಯವನ್ನು ದೃಢೀಕರಿಸಲು ಅಥವಾ ಮತ್ತಷ್ಟು ಪರಿಣಾಮಕಾರಿಯಾಗಿಸಲು 'ತಾಯಿ ಸಾಕ್ಷಿ' , "ಭೂಮಿ ಸಾಕ್ಷಿ" ('ಅಪ್ಪೆ ಕಂಟಲ್ದೆ' , 'ಭೂಮಿ ಸಾಕ್ಷಿ' ಇವು ಜನಪದರಲ್ಲಿ ಸಾಮಾನ್ಯ) ಎಂದು ಹೇಳುವುದು ಜನಪದರ ಮುಗ್ಧ ; ಸರಳ ; ವಿಮರ್ಶೆಗಳಿಲ್ಲದ ಜೀವನ ವಿಧಾನದಲ್ಲಿದೆ.
ತಿಂಗಳು ಕಳೆದರು ಉಡುಪಿ ಜಿಲ್ಲಾ ದೈವಾರಾಧಕರ ಮನವಿಗೆ ಶಾಸಕರ ಪ್ರತಿಕ್ರಿಯೆಯಿಲ್ಲ
Posted On: 27-08-2020 02:43PM
ತುಳುನಾಡ ಧೈವಾರಾಧಕರ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲೆ ವತಿಯಿಂದ ಇಂದು ಮಾಜಿ ಉಸ್ತುವಾರಿ ಸಚಿವರು ಹಾಗೂ ಮಾಜಿ ಶಾಸಕರಾದಂತಹ ಪ್ರಮೋದ್ ಮಧ್ವರಾಜ್ ಅವರಿಗೆ ಅವರ ನಿವಾಸದಲ್ಲಿ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಮನವಿಯನ್ನು ಕೊಡಲಾಯಿತು.
ಪಿತ್ರೋಡಿ,ಜಾರುಕುದ್ರು ಸೇತುವೆ ಪೂರ್ಣಗೊಳಿಸದಿದ್ದಲ್ಲಿ ಧರಣಿ ಮಾಜಿ ಸಚಿವ ಸೊರಕೆ ಎಚ್ಚರಿಕೆ
Posted On: 27-08-2020 01:56PM
ಕಟಪಾಡಿ: ಜಾರುಕುದ್ರು ಸಂಪರ್ಕ ಸೇತುವೆ ಕಾಮಗಾರಿ ಪೂರೈಸಿ ಅಕ್ಟೋಬರ್ ಒಳಗಾಗಿ ಜನರ ಉಪಯೋಗಕ್ಕೆ ಲಭ್ಯವಾಗದಲ್ಲಿ ಧರಣಿ ನಡೆಸುವ ಎಚ್ಚರಿಕೆಯನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ನೀಡಿರುತ್ತಾರೆ.
ಅವರು ಆ.26ರಂದು ಉದ್ಯಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಸುಮಾರು 7 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಾರುಕುದ್ರು ಸೇತುವೆಯ ಕಾಮಗಾರಿ ವೀಕ್ಷಿಸಿ ಮಾತನಾಡಿದರು.
ಕರೋನಾ ವಾರಿಯರ್ಸ್ಗಳನ್ನು ಟೀಕಿಸುವ ಮೊದಲು ಅವರ ಸೇವೆಯ ಬಗ್ಗೆ ಕೃತಜ್ಞತೆಯಿರಲಿ
Posted On: 26-08-2020 11:18PM
ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿ ಇರುವುದು "ಕೊರೊನಾ ದಂದೆ" ಎಂಬ ಒಂದು ಪದ ಈ ಪದವನ್ನ ಉಪಯೊಗಿಸಿಕೊಂಡು ಮನಬಂದಂತೆ ನಮ್ಮ ವೈದ್ಯರು , ವೈದ್ಯಕೀಯ ಸಿಬ್ಬಂದಿ, ಅಂಬ್ಯುಲೆನ್ಸ್ ಚಾಲಕರು ಪೊಲೀಸ್ ಅದೇ ರೀತಿ , ಜನಪ್ರತಿನಿದಿಗಳ ಮೇಲೆ ಮನಬಂದಂತೆ ಬೈಯುದನ್ನು ಕಾಣುತ್ತಿದ್ದೇವೆ ಕೆಲವರಂತು ಇದಕ್ಕೆ ಅಧಿಕಾರಿಗಳೇ ಕಾರಣ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಹೊರಿಸಿ ಅವರನ್ನು ಬಲಿಪಶು ಮಾಡುವ ಷಡ್ಯಂತ್ರ ನಡೆಯುತ್ತಿರುವುದು ಖಂಡನೀಯ. ಟೀಕೆ ಟಿಪ್ಪಣಿ ಮಾಡುವುದು ಸುಲಭ ಆದರೆ ಆ ಕೆಲಸ ಮಾಡಿದಾಗ ಮಾತ್ರ ಅದರ ನೈಜತೆ ತಿಳಿಯಲು ಸಾಧ್ಯ ಅಲ್ಲವೆ?
ಕೋಸ್ಟಲ್ ಗಾರ್ಡ್ ಪೊಲೀಸ್ ವತಿಯಿಂದ ಮಲ್ಪೆ ಮೀನುಗಾರ ಮುಖಂಡರೊಂದಿಗೆ ಸಂವಾದ ಕಾರ್ಯಕ್ರಮ
Posted On: 25-08-2020 08:11PM
ಆಂತರಿಕ ಭದ್ರತೆಗೆ ಆಧುನಿಕ ತಂತ್ರ‍್ರಜ್ಞಾನ ಬಳಕೆ: ಭಾಸ್ಕರ್ ರಾವ್
ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನಕ್ಕೆ ನೂತನ ರಜತ ಉಯ್ಯಾಲೆ ಸಮರ್ಪಣೆ
Posted On: 24-08-2020 04:11PM
ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು ಇಲ್ಲಿ ವಾರ್ಷಿಕ ಸುಗ್ಗಿ ಮಾರಿಪೂಜೆ ಸಂದರ್ಭದಲ್ಲಿ ವಿಶೇಷವಾಗಿ ನಡೆಯಲ್ಪಡುವ ಶ್ರೀ ದೇವಿಯ ಗೊಪುರೋತ್ಸವ ಹಾಗೂ ಚಂಡಿಕಾ ಹೋಮ ಸಂದರ್ಭ ವಿನಿಯೋಗಕ್ಕೆ .ನೂತನ ರಜತ ಉಯ್ಯಾಲೆ ಯನ್ನು ದಿ.ಕಾಪು ಬಾಲಕೃಷ್ಣ ಭಟ್ ಸ್ಮರಣಾರ್ಥ ಇವರ ಮಕ್ಕಳು ಸೇವಾರ್ಥವಾಗಿ ಸಮರ್ಪಿಸಿದರು.
ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಕಾಪು ಪ್ರಖಂಡದ ನೂತನ ಜವಾಬ್ದಾರಿಗಳ ಆಯ್ಕೆ
Posted On: 24-08-2020 02:01PM
ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾಪು ಪ್ರಖಂಡದ ನೂತನ ಹಲವು ಜವಾಬ್ದಾರಿ ಗಳನ್ನು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ಘೋಷಣೆ ಮಾಡಲಾಯಿತು.
ಬೊಲ್ಜೆ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಮಲ್ಲಾರ್ ನಿವಾಸಿಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ
Posted On: 24-08-2020 11:07AM
ಕಾಪು.24,ಆಗಸ್ಟ್ : ಉಬೇದುಲ್ಲಾ (54), ಮಲ್ಲಾರ್ ನಿವಾಸಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಮನೆ. ಉದ್ಯಾವರ ಬೊಲ್ಜೆ ರೈಲ್ವೆ ಬ್ರಿಡ್ಜ್ ಪಕ್ಕದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವ ಪತ್ತೆ.. ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿದ್ದು, ಬ್ರಿಡ್ಜ್ ಪಕ್ಕದಲ್ಲೇ ಬೈಕ್, ಮೊಬೈಲ್ ವಾಚ್ ಪತ್ತೆಯಾಗಿದ್ದು, ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಶವವನ್ನು ಮಣಿಪಾಲ ಶವಾಗಾರಕ್ಕೆ ಸಮಾಜ ಸೇವಕ ಸೂರಿ ಶೆಟ್ಟಿಯವರು ಸಾಗಿಸಿದರು. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಕಾಪುವಿನಲ್ಲಿ ಮನೆಯೂಟಕ್ಕೆ ಹೆಸರುವಾಸಿಯಾದ ಶೆಣೈ ರೆಸ್ಟೋರೆಂಟ್ ಮಾಲಕ ಭಾಸ್ಕರ್ ಶೆಣೈ ಇನ್ನಿಲ್ಲ
Posted On: 24-08-2020 09:04AM
ಕಾಪುವಿನ ಭಾರತ್ ನಗರದಲ್ಲಿ ಮನೆಯೂಟಕ್ಕೆ ಹೆಸರುವಾಸಿಯಾದ ಶೆಣೈ ರೆಸ್ಟೋರೆಂಟ್ ನ ಮಾಲಕರಾದ ಭಾಸ್ಕರ್ ಶೆಣೈಯವರು ಇಂದು ಮುಂಜಾನೆ ದೈವಾಧೀನರಾದರು. ಬ್ಯಾಂಕ್ ಉದ್ಯೋಗಿಗಳು ಮತ್ತಿತರ ನೌಕರರಿಗೆ ಮನೆಯೂಟದ ಸವಿ ಬಡಿಸುತ್ತಿದ್ದ ಇವರ ಹೋಟೆಲಿಗೆ ಹಲವಾರು ಗಣ್ಯರೂ ಊಟಕ್ಕೆ ಬರುತ್ತಿದ್ದರು. ಪ್ರಸ್ತುತ ಹೋಟೆಲ್ ನ್ನು ಅವರ ಪುತ್ರ ಮೋಹನದಾಸ ಶೆಣೈಯವರು ನಡೆಸಿಕೊಂಡು ಬರುತ್ತಿದ್ದಾರೆ. ಮೃತರು ಎರಡು ಗಂಡು ಹಾಗೂ ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
