Updated News From Kaup

ಕಾಪು ಪೇಟೆಯಲ್ಲಿ ನಾಳೆಯಿಂದ ಸ್ವಯಂ ಪ್ರೇರಿತ ಬಂದ್ ಇಲ್ಲ

Posted On: 09-08-2020 08:33PM

ಕಾಪು,09.ಆಗಸ್ಟ್ : ನಾಳೆಯಿಂದ ಸ್ವಯಂ ಪ್ರೇರಿತ ಬಂದ್ ಇಲ್ಲ ಈಗಾಗಲೇ ಸಾಕಷ್ಟು ವಹಿವಾಟು ಇಲ್ಲದೆ ಹೈರಾಣಾಗಿರುವ ವ್ಯಾಪಾರಿಗಳು ಅರ್ಧ ದಿನದ ಸ್ವಯಂ ಪ್ರೇರಿತ ಬಂದ್ ಅನ್ನು ನಿಲ್ಲಿಸುವ ಆಲೋಚನೆಯಲ್ಲಿದ್ದಾರೆ. ಬಂದ್ ಆರಂಭವಾದಾಗಿನಿಂದ ಜನರು ಬೆಳಿಗ್ಗೆಯೂ ಪೇಟೆಗೆ ಬರುವುದನ್ನು ನಿಲ್ಲಿಸಿರುವುದರಿಂದ ಇದ್ದ ವ್ಯಾಪಾರವೂ ನಿಂತು ಹೋಗಿದ್ದು ವರ್ತಕರು ದಿಕ್ಕೆಟ್ಟು ಹೋಗಿದ್ದಾರೆ. ಬಸ್ಸುಗಳಲ್ಲೂ ಪ್ರಯಾಣಿಕರು ಕಡಿಮೆ ಆಗಿರುವುದರಿಂದ ಇಂದು ಬಸ್ಸುಗಳು ಸಂಚಾರವನ್ನೇ ಮಾಡಲಿಲ್ಲ. ಒಟ್ಟಿನಲ್ಲಿ ಆದದ್ದಾಗಲಿ ನಮ್ಮ ಜಾಗ್ರತೆ ನಾವು ಮಾಡಿಕೊಂಡು ಇಡೀ ದಿನ ವ್ಯಾಪಾರ ಮಾಡುವ ಎಂದು ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ

ನೂತನ ಶಿಕ್ಷಣ ನೀತಿ ದೇಶದ ಅಭಿವೃದ್ಧಿಗೆ ರಹದಾರಿ

Posted On: 08-08-2020 07:36PM

ಕಳೆದ ಹಲವಾರು ವಷ೯ಗಳಿಂದ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು ಎಂಬ ಕೂಗು ಕೇಳಿ ಬರುತ್ತಿತ್ತು ಈ ಬಗ್ಗೆ ಕೇಂದ್ರ ಸಕಾ೯ರ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಶಿಕ್ಷಣವು ಕೇವಲ ಅಕ್ಷರಸ್ಥರನ್ನಾಗಿ ಮಾಡುವ ಕೇಲಸ ಮಾತ್ರ ಮಾಡುದಲ್ಲ ಅದು ವಿದ್ಯಾಥಿ೯ ಯ ಸವ೯ ತೋಮುಖ ಅಭಿವೃದ್ಧಿಯತ್ತ ಗಮನ ಹರಿಸಬೇಕು.ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣವನ್ನು ಕಡಿಮೆ ಮಾಡಲು ಈ ರೀತಿಯ ನೀತಿ ಅವಶ್ಯಕವಿತ್ತು. ವಿವಿಗಳು ಸಟಿ೯ಫಿಕೆಟ್ ನೀಡುವ ಮಾರುಕಟ್ಟೆಯಾಗಬಾರದು ಅದು ದೇಶದ ಭವಿಷ್ಯವನ್ನು ಬದಲಾಯಿಸುವ ಕೇಂದ್ರವಾಗಬೇಕು ಈ ನಿಟ್ಟಿನಲ್ಲಿ ಸಕಾ೯ರವು ತಂದಿರುವ ಈ ನೀತಿ ವಿದ್ಯಾಥಿ೯ಗಳಿಗೆ ಉತ್ತಮವಾಗಬಹುದಾಗಿದೆ.

ಯಶಸ್ವಿ ಉದ್ಯಮಿಗಳ ಸಂಘಟನೆ ಆಸರೆಯಿಂದ ಕೊರೊನ ಜಾಗೃತಿ ಕಾರ್ಯಕ್ರಮ

Posted On: 08-08-2020 07:21PM

ರುಡ್ಸೆಟ್ ಸಂಸ್ಥೆ ಬ್ರಹ್ಮಾವರ ಇಲ್ಲಿ ತರಬೇತಿ ಪಡೆದು ಯಶಸ್ವೀ ಉದ್ಯಮಿ ಗಳ ಸಂಘಟನೆ "ಆಸರೆ" ಇದರ ವತಿಯಿಂದ ಕೋವಿಡ್ 19 ಕೋರೋಣ ಇದರ ಸಮಸ್ಯೆ ಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವು ರುಡ್ಸೆಟ್ ಸಂಸ್ಥೆ ಬ್ರಹ್ಮಾವರ ದಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ರುಡ್ಸೆಟ್ ನಿರ್ದೇಶಕರಾದ ಶ್ರೀ ಪಾಪ ನಾಯಕ್ ಆಸರೆ ಸಂಘಟನೆಯ ಅಧ್ಯಕ್ಷ ರಾದ ಕಿಶ್ವರಿ ಸಂಸ್ಥೆ ಯ ಹಿರಿಯ ಉಪನ್ಯಾಸಕರಾದ ಕರುಣಾಕರ ಜೈನ್, ಸಂತೋಷ ಶೆಟ್ಟಿ, ಆಸರೆ ಸಂಘಟನೆಯ ಮಾಜಿ ಅಧ್ಯಕ್ಷರು ಹಾಗೂ ರೋಟರಿ ಮಾಜಿ ಸಹಾಯಕ ಗವರ್ನರ್ ಎಮ್ ಮಹೇಶ್ ಕುಮಾರ್, ಗೌರವ ಅಧ್ಯಕ್ಷ ರಾದ ರಾಜೇಶ್, ಡಿ. ಕೆ ಸಿ ಅಮೀನ್, ಕಾರ್ಯದರ್ಶಿ ಉಮೇಶ್ ಹಾಗೂ ಆಸರೆ ಸಂಘಟನೆ ಯ ಸದಸ್ಯರು ಉಪಸ್ಥಿತರಿದ್ದರು ಕಾರ್ಯಕ್ರಮ ನಿರೂಪಣೆಯನ್ನು ಮಾಜಿ ಕಾರ್ಯದರ್ಶಿ ಕುಶ ಕುಮಾರ್ ಮಾಡಿದರು.

ಲಯನ್ಸ್ ಕ್ಲಬ್ ಬಂಟಕಲ್ಲು 2020-21ನೇ ಸಾಲಿನ ಪದಗ್ರಹಣ ಕಾರ್ಯಕ್ರಮ

Posted On: 08-08-2020 07:07PM

ಬಂಟಕಲ್ಲು ಲಯನ್ಸ್ ಕ್ಲಬ್ ಬಿ ಸಿ ರೋಡ್ ಇದರ ಪದಗ್ರಹಣ ಕಾರ್ಯಕ್ರಮವು ನಿನ್ನೆ ಸಂಜೆ ಗಂಟೆ 5.30 ಕ್ಕೆ ಬಿ.ಸಿ ರೋಡ್ ಪಾಂಬೂರು ನಿಶಾ ಕೆಟರರ್ಸ್ ನ ಮಾಲಕರಾದ ಇಗ್ನೇಶಿಯಸ್ ಡಿಸೋಜ ರವರ ಮನೆಯಲ್ಲಿ ನೆರವೇರಿತು.

ಕುಂಜೂರು ದುರ್ಗಾ ದೇವಸ್ಥಾನದ ನಿವೃತ್ತ ಸಿಬಂದಿಗಳಿಗೆ ಸಮ್ಮಾನ

Posted On: 07-08-2020 08:37PM

ಕಾಪು, ಆ. 7 : ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಹಲವು ದಶಕಗಳಿಂದ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಗೋವಿಂದ ಉಡುಪ ದಂಪತಿ ಮತ್ತು ಅಡಿಪುಮನೆ ಗೋವಿಂದ ದೇವಾಡಿಗ ದಂಪತಿಯನ್ನು ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ತಲಾ 50,000 ರೂಪಾಯಿ ಗೌರವ ನಿಧಿಯೊಂದಿಗೆ ಸನ್ಮಾನಿಸಿ, ಗೌರವಿಸಲಾಯಿತು.

ಮಳೆ ಹಾನಿಗೆ ತಕ್ಷಣ ಪರಿಹಾರ ವಿತರಿಸಿ: ಸಚಿವ ಬೊಮ್ಮಾಯಿ

Posted On: 06-08-2020 07:12PM

ಉಡುಪಿ ಆಗಸ್ಟ್ 6 : ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಸಂತ್ರಸ್ಥರಿಗೆ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೇ ತಕ್ಷಣವೇ ಪರಿಹಾರ ವಿತರಿಸುವಂತೆ ರಾಜ್ಯ ಗೃಹ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರು ಗುರುವಾರ, ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಮಳೆ ಹಾನಿ ಹಾಗೂ ಕೋವಿಡ್ ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ತಕ್ಷಣ ಪ್ರಾಥಮಿಕ ಹಂತದ ಪರಿಹಾರ ಬಿಡುಗಡೆಗೊಳಿಸಿ, ಮನೆ ಹಾನಿಯ ವಿವರ ಕುರಿತು ರಾಜೀವ ಗಾಂಧಿ ವಸತಿ ನಿಗಮದ ಪೋರ್ಟಲ್ ನಲ್ಲಿ , ಹಾನಿಯದ ದಿನವೇ ಅಪ್‌ಲೋಡ್ ಮಾಡುವಂತೆ ಸೂಚಿಸಿದ ಸಚಿವ ಬೊಮ್ಮಾಯಿ, ಕೃಷಿ ಬೆಳೆ ಹಾನಿ ಪರಿಶೀಲಿಸಲು ತಾಲೂಕುವಾರು ಕಂದಾಯ, ಕೃಷಿ ಮತ್ತು ಪಿಡಿಓ ಒಳಗೊಂಡ ತಂಡಗಳನ್ನು ರಚಿಸಿ, ಹಾನಿಯ ಸಮೀಕ್ಷೆಯನ್ನು ಶೀಘ್ರದಲ್ಲಿ ನಡೆಸಿ ವರದಿ ಪಡೆದು ಪರಿಹಾರ ನೀಡಲು ಕ್ರಮ ಕೈಗೊಂಡು ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಿ, ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿದ್ದಲ್ಲಿ ಅಲ್ಲಿನ ಜನತೆಗೆ ಈ ತಿಂಗಳ ಪಡಿತರದ ಜೊತೆಗೆ , ಮುಂದಿನ ತಿಂಗಳು ಪಡಿತರವನ್ನು ಮುಂಚಿತವಾಗಿ ವಿತರಿಸುವಂತೆ ಸೂಚಿಸಿದರು.

ಉಡುಪಿಯಲ್ಲಿ ಬಾವಿಗೆ ಆಕಸ್ಮಿಕವಾಗಿ ಬಿದ್ದಿರುವ ವೃದ್ಧೆಯ ರಕ್ಷಣೆ

Posted On: 06-08-2020 06:32PM

ಉಡುಪಿ,ಅ.6; ವೃದ್ಧೆಯೊರ್ವರು ಮನೆಯ ನೀರಿರುವ ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದು, ಅಸಹಾಯಕ ಸ್ಥಿತಿಯಲ್ಲಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ಉಡುಪಿ ನಗರ ಠಾಣೆಯ ಪಿ.ಎಸ್.ಐ-2 ಸದಾಶಿವ ರಾ ಗವರೋಜಿ, ಅಗ್ನಿಶಾಮಕ ದಳದ ಸಿಬ್ಬಂದಿ ವಿನಾಯಕ ಹಾಗೂ ಸ್ಥಳಿಯ ಆಟೋ ಚಾಲಕ ರಾಜೇಶ್ ನಾಯಕ್ ಇರ್ವರು ಬಾವಿಗಿಳಿದು ರಕ್ಷಿಸಿದ ಘಟನೆಯು ಕುಕ್ಕಿಕಟ್ಟೆ ಮಾರ್ಪಳ್ಳಿಯಲ್ಲಿ ಗುರುವಾರ ನಡೆದಿದೆ. . ಜೀವರಕ್ಷಣೆ ಕಾರ್ಯಚರಣೆಯಲ್ಲಿ ಸಾಹಸ ಮೆರೆದಿರುವ ಜೀವರಕ್ಷಕರಿಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಮತ್ತು ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು ಕವಾ೯ಲು ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಬಿರುವೆರ್ ಕಾಪು ಸೇವಾ ಟ್ರಸ್ಟ್ ನಿಂದ ದಾರಿಸೂಚಿ ನಾಮಫಲಕ ಹಸ್ತಾಂತರ

Posted On: 06-08-2020 05:47PM

ಬಿರುವೆರ್ ಕಾಪು ಸೇವಾ ಟ್ರಸ್ಟ್ ಕಾಪು ತಾಲೂಕು ಉಡುಪಿ ಜಿಲ್ಲೆ ಇದರ 4ನೇ ವರ್ಷದ ಪಾದರ್ಪಣೆಯ ಸುಸಂದರ್ಭದಲ್ಲಿ ವಿಜೇತ ವಸತಿಯುತ ವಿಶೇಷ ಶಾಲೆ ನೂತನವಾಗಿ ಸ್ಥಳಾಂತರಗೊಂಡ ಅಯ್ಯಪ್ಪನಗರ, ದುರ್ಗಾ ಹೈಸ್ಕೂಲ್ ಕಟ್ಟಡದಲ್ಲಿ ಜೋಡುರಸ್ತೆ ಹೆಬ್ರಿ ಹೆದ್ದಾರಿಯಲ್ಲಿ ದಾರಿಸೂಚಿ ನಾಮಫಲಕ ಹಸ್ತಾಂತರ ಕಾರ್ಯಕ್ರಮ ನೆರವೇರಿಸಲಾಯಿತು .

ಕುತ್ಯಾರು ಯುವಕ ಮಂಡಲ ಆಶ್ರಯದಲ್ಲಿ ಕುತ್ಯಾರು ಭಾಗದವರಿಗೆ ಮುದ್ದು ಕೃಷ್ಣ ಸ್ಪರ್ಧೆ.

Posted On: 06-08-2020 04:19PM

ಕುತ್ಯಾರು ಗ್ರಾಮಸ್ಥರಿಗಾಗಿ. ಸದುಪಯೋಗ ಪಡೆಯಲು ಕೋರಲಾಗಿದೆ. ಯುವಕ ಮಂಡಲ(ರಿ.) ಕುತ್ಯಾರು

ಅಯೋದ್ಯೆಯಲ್ಲಿ ಕರಸೇವೆ ಸಲ್ಲಿಸಿದ ಇಬ್ಬರಿಗೆ ಕಾಪುವಿನ ಹಿಂದೂ ಸಂಘಟನೆಯಿಂದ ಸಮ್ಮಾನ

Posted On: 05-08-2020 10:08PM

ಅಯೋಧ್ಯೆ ರಾಮಜನ್ಮ ಭೂಮಿ ಹೋರಾಟದಲ್ಲಿ ಕರಸೇವಕರಾಗಿ ಸೇವೆ ಸಲ್ಲಿಸಿದ ಕಾಪು ತಾಲೂಕಿನ ಉಚ್ಚಿಲದ ವಸಂತ್ ದೇವಾಡಿಗ ಮತ್ತು ಸದಾನಂದ್ ದೇವಾಡಿಗರಿಗೆ ಹಿಂದೂ ಜಾಗರಣ ವೇದಿಕೆ ಕಾಪು ತಾಲೂಕು ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.