Updated News From Kaup

ನಾಳೆಯಿಂದ ಉಡುಪಿಯಲ್ಲೂ 7 to 7 ಲಾಕ್ ಡೌನ್ ಸಡಿಲಿಕೆ

Posted On: 04-05-2020 08:38PM

ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ 7 ರಿಂದ ರಾತ್ರಿ 7ರವರೆಗೆ ಲಾಕ್ಡೌನ್ ಸಡಿಲಿಕೆ – ಶಾಸಕ ರಘುಪತಿ ಭಟ್ ಉಡುಪಿ : ಕೋವಿಡ್-19 ನಿಯಂತ್ರಣದ ಹಿನ್ನೆಲೆಯಲ್ಲಿ ವಿಧಿಸಲ್ಪಟ್ಟ ಲಾಕ್ಡೌನ್ ಮೇ 17ರವರೆಗೆ ಮುಂದುವರಿದಿದ್ದು ಉಡುಪಿ ಜಿಲ್ಲೆಯಲ್ಲಿ ಮೇ 5ರಿಂದ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಲಾಕ್ಡೌನ್ ಸಡಿಲಿಸಲಾಗಿದೆ. ರಾತ್ರಿ 7ರಿಂದ ಬೆಳಗ್ಗೆ 7ರವರೆಗೆ ಲಾಕ್ಡೌನ್ ಮುಂದುವರಿಯಲಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಜೊತೆ ಸಭೆ ನಡೆಸಿ ಉಡುಪಿಯಲ್ಲಿ ಲಾಕ್ ಡೌನ್ ಸಡಿಲಿಕೆ ವಿಚಾರದಲ್ಲಿ ಚರ್ಚೆ ನಡೆಸಲಾಗಿತ್ತು ಅದರಂತೆ ಮೇ 4 ರಿಂದ ಬೆಳಿಗ್ಗೆ 7 ಗಂಟೆಯಿಂದ 1 ಗಂಟೆಯ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಇಂದು ಬೆಳಿಗ್ಗೆ ನಗರದಲ್ಲಿನ ಜನದಟ್ಟಣೆಯನ್ನು ಗಮನಿಸಿ ಜಿಲ್ಲೆಯ ಎಲ್ಲಾ ಶಾಸಕರ ಜೊತೆ ಚರ್ಚೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಲಾಕ್ಡೌನ್ ಸಡಿಲಿಸಲಾಗಿದೆ ಎಂದರು. ಉಡುಪಿಯಲ್ಲಿ ನಾಳೆಯಿಂದ ಬೆಳಿಗ್ಗೆ 7ರಿಂದ ಸಂಜೆ 7ರ ವರೆಗೆ ಅಂಗಡಿ ಮುಂಗಟ್ಟುಗಳು ತೆರೆಯಲು ಅವಕಾಶ ನೀಡಲಾಗಿದೆ ಅಲ್ಲದೆ ವೈನ್ ಶಾಪ್ಗಳು ಕೂಡ ಬೆಳಿಗ್ಗೆ 9 ರಿಂದ ಸಂಜೆ 7ರ ವರೆಗೆ ಕಾರ್ಯ ನಿರ್ವಹಿಸಲಿದೆ

ಕಾಪು ಜನತೆಗೆ ರಿಲೀಫ್ ನೀಡಿದಂತಾಗಿದೆ - ಮದ್ಯ ಖರೀದಿಗೆ ಮುಗಿಬಿದ್ದ ಜನತೆ

Posted On: 04-05-2020 11:45AM

ರಾಜ್ಯ ಸರ್ಕಾರ ಇಂದಿನಿಂದ ನಿರ್ದಿಷ್ಟ ಅವಧಿಯವರೆಗೆ ಮದ್ಯ ಮಾರಾಟ ಮಾಡಲು ಅನುಮತಿ ನೀಡಿದ್ದು ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕಾಪು,ಕಟಪಾಡಿ, ಪಡುಬಿದ್ರಿ ಸೇರಿದಂತೆ ಇನ್ನು ಹಲವೆಡೆ ವೈನ್ ಶಾಪ್ಗಳು ತೆರೆದಿದ್ದು ಮದ್ಯಕ್ಕಾಗಿ ಇಂದು ಬೆಳಿಗ್ಗೆಯಿಂದಲೇ ಜನರು ಮುಗಿಬಿದ್ದಿದ್ದಾರೆ.. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪೊಲೀಸ್ ಸಿಬ್ಬಂದಿಗಳು ಹಾಗೂ ಸ್ವಯಂ ಸೇವಕರು ಜನರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಒಂದೆಡೆ ಮದ್ಯಕ್ಕಾಗಿ ಜನರು ಮುಗಿಬಿದ್ದಿದ್ದಾರೆ ಇನ್ನೊಂದೆಡೆ 1 ಗಂಟೆಯ ವರೆಗೆ ಕೆಲವೊಂದು ಅಂಗಡಿಗಳಿಗೆ ಅನುಮತಿ ನೀಡಿರುವುದರಿಂದ ಜನರು ಅಗತ್ಯ ವಸ್ತುಗಳ ಖರೀದಿಗೆ ಆಗಮಿಸಿದ್ದು ಕಾಪುವಿನಲ್ಲಿ ಬಾರಿ ವಾಹನ ಸಂಚಾರವಿದ್ದು. ಕಾಪು ಜನತೆಗೆ ರಿಲೀಫ್ ನೀಡಿದಂತಾಗಿದೆ.

ಬಂಡ್ರ್ಯಾಕರ್ ಕೊರಗಜ್ಜನಿಗೆ ಸರಳ ರೀತಿಯಲ್ಲಿ ಪೂಜಾ ವಿಧಿ ವಿಧಾನ ನೆರೆವೇರಿಸಲಾಯಿತು

Posted On: 03-05-2020 08:27PM

ಕಾಪು ತಾಲೂಕಿನ ಕಲ್ಲುಗುಡ್ಡೆ ಬಂಡ್ರ್ಯಾಕರ್ ಕೊರಗಜ್ಜ ಕ್ಷೇತ್ರದಲ್ಲಿ ವರ್ಷಾಂಪ್ರತಿ ನಡೆಯುವ ನೇಮೋತ್ಸವ ಕೊರೊನ ನಿಮಿತ್ತ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವ ಸರಕಾರದ ಆಜ್ಞೆಯನ್ನು ಪಾಲಿಸುವ ಸಲುವಾಗಿ ಶಾಸ್ತ್ರೋಕ್ತವಾಗಿ ಸರಳ ರೀತಿಯಲ್ಲಿ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು

ಕುರ್ಕಾಲು ರಕ್ತ ದಾನ ಶಿಬಿರ ಯಶಸ್ವಿ ಕಾರ್ಯಕ್ರಮ

Posted On: 03-05-2020 08:01PM

ಕೊರೊನ ಪರಿಣಾಮದಿಂದ ಬ್ಲಡ್ ಬ್ಯಾಂಕ್ನಲ್ಲಿ ರಕ್ತದ ಕೊರತೆ ಇದ್ದದ್ದರಿಂದ ಕುರ್ಕಾಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಒಂಬತ್ತರಿಂದ ಮದ್ಯಾಹ್ನ ಒಂದರವರೆಗೆ ಕುರ್ಕಾಲು ಯುವಕ ಮಂಡಲ ಮತ್ತು ಲಯನ್ಸ್ ಕ್ಲಬ್ ಸುಭಾಸ್ನಗರ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ರಕ್ತ ದಾನ ಶಿಬಿರವನ್ನು ಆಯೋಜಿಸಲಾಯಿತು, ಈ ಶಿಬಿರದಲ್ಲಿ ನಿರೀಕ್ಷೆಗೂ ಮಿಕ್ಕಿ 130 ಜನರು ರಕ್ತದಾನ ಮಾಡಿದ್ದು ಈ ಸಂದರ್ಭದಲ್ಲಿ ಗೀತಾಂಜಲಿ ಸುವರ್ಣ ಕಟಪಾಡಿ , ದೇವುಪುತ್ರ ಕೋಟ್ಯಾನ್, ವಿಶಾಖ್ ಜಿ ಶೆಟ್ಟಿ, ದಿನಕರ ಶೆಟ್ಟಿ, ಡಿ ಆರ್ ಕೋಟ್ಯಾನ್, ಪ್ರವೀಣ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು..

15 ದಿನಗಳ ನಂತರ ಮತ್ತೇ ರಿಕ್ಷಾ ಚಾಲಕರಿಗೆ ನೆರವು ನೀಡಿದ ದಾನಿ

Posted On: 01-05-2020 06:18PM

ಮಡುಂಬು ವಿದ್ವಾನ್ ಕೆ.ಪಿ.ಶ್ರೀನಿವಾಸ್ ತಂತ್ರಿಗಳು ಕೊರೊನ ಲಾಕ್ಡೌನ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕಾಪು, ಉದ್ಯಾವರ, ಶಂಕರಪುರ, ಇನ್ನಂಜೆ ಸೇರಿದಂತೆ ಇನ್ನು ಅನೇಕ ಕಡೆಗಳಲ್ಲಿ ಇರುವ ರಿಕ್ಷಾ ಚಾಲಕರನ್ನು ಗುರುತಿಸಿ. 160 ರಿಕ್ಷಾ ಚಾಲಕರ ಕುಟುಂಬಗಳಿಗೆ 15 ದಿನಕ್ಕೆ ಬೇಕಾಗುವಷ್ಟು ದಿನಬಳಕೆಯ ಸಾಮಗ್ರಿಗಳನ್ನು ಏಪ್ರಿಲ್ 16ರಂದು ನೀಡಿದ್ದರು. ಇದೀಗ ರಿಕ್ಷಾ ಚಾಲಕರಿಗೆ ನೀಡಿದ್ದ ಸಾಮಗ್ರಿಗಳು ಸಂಪೂರ್ಣವಾಗಿ ಖಾಲಿಯಾಗಿದ್ದು ಇದನ್ನರಿತ ಶ್ರೀನಿವಾಸ್ ತಂತ್ರಿಗಳು ಮತ್ತೇ ಸಾಮಗ್ರಿಗಳನ್ನು ನೀಡುವ ಕಾಯಕದಲ್ಲಿ ತೊಡಗಿದ್ದಾರೆ. ಈ ಹಿಂದೆ ನೀಡಿದವರಿಗೆ ಮತ್ತೇ ಅಕ್ಕಿ, ಮಟ್ಟು ಗುಳ್ಳ, ಸೌತೆಕಾಯಿ ಹಾಗೂ ಇನ್ನಿತರ ದಿನ ಬಳಕೆಯ ಸಾಮಗ್ರಿಗಳಿರುವ ಕಿಟ್ ತಯಾರಿಸಿ ಒಟ್ಟು 200 ರಿಕ್ಷಾ ಚಾಲಕರ ಕುಟುಂಬಕ್ಕೆ ಹಂಚಿದ್ದಾರೆ . ಈ ಸಂದರ್ಭದಲ್ಲಿ ಸುರೇಶ್ ಶೆಟ್ಟಿ ಮಡುಂಬು, ಉಮೇಶ್ ಅಂಚನ್ ಮಡುಂಬು, ಸುಬ್ರಹ್ಮಣ್ಯ ಭಟ್, ಶ್ರೇಯಸ್ ಭಟ್ ಹಾಗೂ ಯುವಸೇನೆ ಮಡುಂಬು ಇದರ ಸದಸ್ಯರು ಉಪಸ್ಥಿತರಿದ್ದರು..

ಇನ್ನಂಜೆ ಹಾಲು ಉತ್ಪಾದಕರ ಸಂಘದ ಹೈನುಗಾರ ಸದಸ್ಯರಿಗೆ ಕಿಟ್ ವಿತರಣೆ

Posted On: 30-04-2020 09:11PM

ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸಂಘದ ಎಲ್ಲಾ ಹೈನುಗಾರ ಸದಸ್ಯರಿಗೆ ಹಾಗು ಸಿಬ್ಬಂದಿ ವರ್ಗದವರಿಗೆ ತಲಾ 500 ರೂಪಾಯಿಯ ಆಹಾರ ಸಾಮಗ್ರಿಗಳ 240 ಕಿಟ್ಟುಗಳನ್ನು ತಾರೀಖು 30-4-2020ರಂದು ಸಂಘದ ಅಧ್ಯಕ್ಷರಾದ ಲಕ್ಷ್ಮಣ್ ಕೆ ಶೆಟ್ಟಿ, ಹಾಗು ಉಪಾಧ್ಯಕ್ಷರಾದ ಮಹೇಶ್ ಸುವರ್ಣ, ನಿರ್ದೇಶಕರಾದ ರಾಘವೇಂದ್ರ ಉಪಾದ್ಯಾಯ, ರಾಮ ಶೆಟ್ಟಿ ಮಡುಂಬು, ಶಿವರಾಮ ಶೆಟ್ಟಿ, ಉದಯ ಮೂಲ್ಯ, ಉಮೇಶ್ ಆಚಾರ್ಯ, ನಾಗರಾಜ್ ಮುಚಂತಾಯ, ಜಯ ಪೂಜಾರಿ, ಶ್ರೀಮತಿ ಸುಮತಿ ಅಂಚನ್, ಶ್ರೀಮತಿ ಬೇಬಿ, ಪದ್ಮ ಮುಖಾರಿ ಯವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು. ಸಂಘದ ಕಾರ್ಯನಿರ್ವಾಹಣಾದಿಕಾರಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ ಧನ್ಯವಾದ ನೀಡಿದರು.

ಕಾಪು : ಆಸುಪಾಸಿನ ಕಟ್ಟಡಗಳಿಗೆ ಹಾನಿಯಾದರೆ ಸ್ಥಳೀಯಾಡಳಿತವೇ ನೇರ ಹೊಣೆ

Posted On: 30-04-2020 02:56PM

ಕಾಪು ತಾಲೂಕಿನ ಉಳಿಯಾರಗೋಳಿ ಗ್ರಾಮದಲ್ಲಿ ಪ್ರಸಾದ್ ಕಾಮತ್ ಎಂಬುವವರು ಸ್ವಂತ ಜಮೀನಿನಲ್ಲಿ ಸಣ್ಣದೊಂದು ವಾಣಿಜ್ಯ ಕಟ್ಟಡದ ನಿರ್ಮಾಣಕ್ಕೆ ಮಾರ್ಚ್ 12 ರಂದು ಶಿಲಾನ್ಯಾಸ ಮಾಡಿದ್ದು. ಮಳೆಗಾಲ ಆರಂಭವಾಗುವ ಮೊದಲೇ ತಳ ಅಂತಸ್ತಿನ ಕಾಮಗಾರಿ ಮುಗಿಯಬೇಕೆಂಬ ತುರಾತುರಿಯಲ್ಲಿ 10 ಅಡಿ ಆಳಕ್ಕೆ ಗುಂಡಿ ತೋಡಿ ಇನ್ನೇನು ತಳಪಾಯ ಹಾಕಬೇಕು ಅನ್ನುವಷ್ಟರಲ್ಲಿ ಕೊರೊನ ಮಹಾಮಾರಿಯ ಆಗಮನದಿಂದ ಲಾಕ್ಡೌನ್ ಘೋಷಣೆಯಾಗಿ ಕಾಮಗಾರಿ ನಿಲ್ಲಿಸಬೇಕಾಯಿತು. ಕಾಮಗಾರಿ ಸ್ಥಗಿತಗೊಂಡಿರುವ ಜಮೀನಿನ ಮಣ್ಣು ಕೆಂಪು ಮಣ್ಣಾಗಿದ್ದು ಇದನ್ನು ಹೂ ಮಣ್ಣು ಎಂದು ಕರೆಯುತ್ತಾರೆ. ಒಂದು ವೇಳೆ ಮಳೆ ಬಂದರೆ ಈ ಮಣ್ಣು ಜಾರಿ ಅಕ್ಕ ಪಕ್ಕದ ಕಟ್ಟಡಗಳಿಗೆ ಬಹಳ ಹಾನಿಯಾಗುವ ಸಂಭವವಿದ್ದು. ಈ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಆಡಳಿತವನ್ನು ಸಂಪರ್ಕಿಸಿದಾಗ ಸರಕಾರದ ಆದೇಶದಂತೆ ಯಾವುದೇ ರೀತಿಯ ಕಾಮಗಾರಿಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಪ್ರಸಾದ್ ಕಾಮತ್ ಅವರು ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಯವರು ಈ ಮೊದಲೇ ಯಾರು ಯಾವುದೇ ಅನುಮತಿಗಾಗಿ ಅವರ ಕಚೇರಿಯ ಬಳಿ ಬರಬಾರದೆಂದು ಆದೇಶಿಸಿರುವುದರಿಂದ ಅವರನ್ನು ಭೇಟಿಯಾಗಲು ಆಗುತ್ತಿಲ್ಲ. ಕನಿಷ್ಠ ತಡೆಗೋಡೆ ನಿರ್ಮಾಣಕ್ಕೆ ಅನುಮತಿ ಸಿಕ್ಕಿದಲ್ಲಿ ಬಹಳ ಉಪಕರವಾಗುತ್ತಿತ್ತು. ಆದರೇ ನಿನ್ನೆ ದಿನ ಉಡುಪಿ ಆದರ್ಶ ಆಸ್ಪತ್ರೆಗೆ ಸಂಬಂಧಿಕರೋರ್ವರನ್ನು ಕರೆದುಕೊಂಡು ಹೋಗುವಾಗ ಆಸ್ಪತ್ರೆಯ ಮುಂಭಾಗದ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು ಕಂಡು ಬಂದಿದೆ. ಅದು ಕೂಡಾ ಅಲ್ಲಿ ನಡೆಯುತ್ತಿರುವ ಕಾಮಗಾರಿ ಮೊದಲನೇ ಮಹಡಿಯ ಸೆಂಟ್ರಿಂಗ್ ಕೆಲಸ ಆಗಿದ್ದು ಅಲ್ಲಿ ಯಾವುದೇ ರೀತಿಯ ತುರ್ತಿನ ಅಗತ್ಯವಿಲ್ಲ ಅನ್ಸುತ್ತೆ. ಅದೇ ನನ್ನ ಸೈಟಿನಲ್ಲಿ ಮಳೆ ಬಂದರೆ ಅಕ್ಕ ಪಕ್ಕದ ಕಟ್ಟಡಗಳು ಹಾನಿಯಾಗುವ ಸಂಭವವಿದೆ. ಈ ತಾರತಮ್ಯ ಯಾಕೆ.? ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಇದ್ಯಾವ ನ್ಯಾಯ.? ಕನಿಷ್ಠ ಪಕ್ಷ ತಡೆಗೋಡೆ ನಿರ್ಮಾಣಕ್ಕೆ ಅನುಮತಿ ನೀಡಿದ್ದರೆ ಬಹಳ ಉಪಕರವಾಗುತ್ತಿತ್ತು. ಒಂದು ವೇಳೆ ಮಳೆ ಬಂದು ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿಯಾದರೆ ಸ್ಥಳೀಯ ಅಧಿಕಾರಿಗಳೇ ನೇರ ಹೊಣೆಯಾಗಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು..

ತುಳುನಾಡ್ದ ಪ್ರತಿಭೆಲು ತಂಡ ಆಯೋಜಿಸಿದ ಹಾಡುಗಾರಿಕೆ ಸ್ಪರ್ಧೆಯ ಫಲಿತಾಂಶ

Posted On: 30-04-2020 02:17PM

ಜನಸಾಮಾನ್ಯರ ಬದುಕಿಗೆ ಮಹಾಮಾರಿಯಂತೆ ಕಾಲಿಟ್ಟಿರುವ ಕೊರೋನಾದ ದೆಸೆಯಿಂದ ಎಲ್ಲರೂ ಮನೆಯಲ್ಲಿ ಕುಳಿತು ಬೇಸತ್ತು ಹೋಗಿದ್ದರು. ಇಂತಹ ಸಮಯದಲ್ಲಿ ಕೇವಲ ಮನೋರಂಜನೆ ಒಂದನ್ನೇ ನಿಲುಮೆಯನ್ನಾಗಿಸಿ ತುಳುನಾಡ್ದ ಪ್ರತಿಭೆಲು ಫೇಸ್ಬುಕ್ ಪೇಜ್ ಆಯೋಜಿಸಿದ ಆನ್ಲೈನ್ ಹಾಡುಗಾರಿಕೆಯ ಸ್ಪರ್ಧೆಯಲ್ಲಿ ಹಲವಾರು ಕಲಾವಿದರು ವಯೋಮಿತಿ ಇಲ್ಲದೆ ಭಾಗವಹಿಸಿದ್ದು. ಅತಿ ಹೆಚ್ಚಿನ ಲೈಕ್ಸ್ ಗಳನ್ನು ಪಡೆದ ಮೂರು ಸ್ಪರ್ಧಿಗಳನ್ನು ಸ್ಪರ್ಧೆಯ ವಿಜೇತರು ಎಂಬುದಾಗಿ ಗುರುತಿಸುವುದು ಎಂದು ನಿರ್ಧರಿಸಲಾಗಿತ್ತು. ಆದರೆ ದಿನಗಳು ಉರುಳಿದಂತೆ ಸ್ಪರ್ಧಿಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಕಂಡು ಮೂರು ಉತ್ತಮ ಗಾಯಕರಿಗೂ(ಅತಿ ಹೆಚ್ಚು ಲೈಕ್ಸ್ ಪಡೆದ ಮೂರು ಸ್ಪರ್ಧಿಗಳನ್ನು ಹೊರತುಪಡಿಸಿ) ಮನ್ನಣೆ ನೀಡುವ ಬಗ್ಗೆ ಆಲೋಚಿಸಿ ನಿರ್ಧರಿಸಿದ್ದರು. ಈ ಮೂರು ಉತ್ತಮ ಗಾಯಕರ ತೀರ್ಪು ನೀಡಿದವರು ಚಂದ್ರಶೇಖರ್ ಮಂಗಳೂರು (ಮಂಗಳಾದೇವಿ). ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿ ವಿಜೇತರು. ಗಾಯನ ತರಬೇತಿ ನೀಡುವ ಶಿಕ್ಷಕರು. ಇವರು ಈ ಸ್ಪರ್ಧೆಯ ಫಲಿತಾಂಶವನ್ನು ಗುರುವಾರ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ತುಳುನಾಡ್ದ ಪ್ರತಿಭೆಲು ಪೇಜ್ ನಲ್ಲಿ ಲೈವ್ ಬರುವ ಮೂಲಕ ತೀರ್ಪು ನೀಡಿದ್ದಾರೆ. ಇದರಲ್ಲಿ ವಯಸ್ಕರ ಹಾಗೂ ಬಾಲ, ಬಾಲೆಯರ ಎರಡು ವರ್ಗ ಎಂಬಂತೆ ಬೇರ್ಪಡಿಸಿದ್ದು. ವಯಸ್ಕರಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ಮೂರು ಸ್ಪರ್ಧಿಗಳು : 1. ಹೇಮಲತಾ contestant number: 22 2. ಪ್ರಕಾಶ್ ಅಮೀನ್ Contestant number: 19 3. ವಿದ್ಯಾ Contestant number: 04 ಅತೀ ಹೆಚ್ಚಿನ ಲೈಕ್ಸ್ ಪಡೆದಿರುವ ಬಾಲ, ಬಾಲೆ ಗಾಯಕರು: 1. ಸುದೀಪ್ತ Contestant number: 61 2. ಆರಾಧ್ಯ Contestant number: 55 3. ಶೈನ Contestant number: 49 ಅಂತೆಯೇ, ತೀರ್ಪುಗಾರರ ಮೆಚ್ಚುಗೆ ಪಾತ್ರರಾದ ಹಾಡುಗಾರ/ಹಾಡುಗಾರ್ತಿಯರು : 1. ಯಶಸ್ವಿನಿ ಉಳ್ಳಾಲ್ Contestant number: 51 2. ಶರತ್ ಬೋಳ Contestant number: 21 3. ಅ) ರಜತ ಆಚಾರ್ಯ Contestant number: 28 ಆ) ಲಕ್ಷ್ಮಿ ಕೊಟ್ಯಾನ್ Contestant number:40 ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಪೇಜ್ ನಿರ್ವಾಹಕ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ. ಇಲ್ಲಿಯವರೆಗೆ ಹಲವಾರು ಕಲಾವಿದರ ಪರಿಚಯ ತುಳುನಾಡ್ದ ಪ್ರತಿಭೆಲು ಪೇಜ್ ನ ಮುಖಾಂತರ ಆಗಿದೆ. ಇನ್ನು ಮುಂದೆ ನಿಮ್ಮ ಪ್ರೋತ್ಸಾಹದಿಂದ ಇನ್ನಷ್ಟು ಕಲಾವಿದರನ್ನು ಪರಿಚಯಿಸಿ, ಮುಂದಿನ ಕಲಾಜೀವನಕ್ಕೆ ಹುರಿದುಂಬಿಸುವ ಪ್ರಯತ್ನವನ್ನು ಕಂಡಿತಾ ಮಾಡುತ್ತೇವೆ. ಅದರ ಒಟ್ಟಿಗೆ ಕರಾವಳಿಗೆ ಸಂಬಂಧಪಟ್ಟ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ಇಂತಹ ಸ್ಪರ್ಧೆಗಳನ್ನು ಆಯೋಜಿಸಿ ಉತ್ತಮ ವೇದಿಕೆ ನಿರ್ಮಾಣ ಮಾಡುತ್ತೇವೆ. ಭಾಗವಹಿಸಿದ ಹಾಗೂ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು

ಗೆಳೆಯರ ಬಳಗ (ರಿ.) ಮದ್ವನಗರ ತಂಡದಿಂದ 500 ತರಕಾರಿ ಕಿಟ್ ವಿತರಣೆ

Posted On: 30-04-2020 01:15PM

ಕೋವಿಡ್19 ನಿಂದ ಲಾಕ್ಡೌನ್ ಆಗಿರುವುದರಿಂದ ಗೆಳೆಯರ ಬಳಗ (ರಿ.) ಮದ್ವನಗರ ಪಡುಬೆಳ್ಳೆ ಇವರ ವತಿಯಿಂದ ಪಡುಬೆಳ್ಳೆ ಹಾಗೂ ಮೂಡುಬೆಳ್ಳೆ ಗ್ರಾಮದ ಸುಮಾರು 500 ಕುಟುಂಬಗಳಿಗೆ ತರಕಾರಿ ಕಿಟ್ಟನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಶಿರ್ವ ಪೊಲೀಸ್ ಠಾಣಾಧಿಕಾರಿ ಶ್ರೀ ಶೈಲಂ ಚಾಲನೆ ನೀಡಿದರು, ಗೆಳೆಯರ ಬಳಗ ತಂಡದ ಸದಸ್ಯರು ಮನೆ ಮನೆಗೆ ತೆರಳಿ ಕೀಟ್ಟನ್ನು ವಿತರಿಸಿದರು.

ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂದಿರ ವಾರ್ಷಿಕ ಮಂಗಲೋತ್ಸವ

Posted On: 28-04-2020 01:54PM

ಪೊಲಿಪು ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂದಿರ ಪೊಲಿಪು ಇದರ ವಾರ್ಷಿಕ ಮಂಗಳೋತ್ಸವವು ಊರ ಹತ್ತು ಸಮಸ್ತರಿಂದ ಸರಳವಾಗಿ ಆಚರಿಸಲಾಯಿತು . ಇದರ ಪರವಾಗಿ ಊರಿನ ಮೊಗವೀರ ಮಹಾ ಸಭಾ ಅಧ್ಯಕ್ಷರಾದ ಶ್ರೀ ರೋಹಿತಾಶ್ವ ಕುಂದರ್,ಉಪಾಧ್ಯಕ್ಷರಾದ ವಿಜಯ ಕರ್ಕೇರ , ದ. ಕ ಮತ್ತು ಉಡುಪಿ ಜಿಲ್ಲಾ ಮೀನುಗಾರರ ಫೆಡರೇಶನ್.ನಿ ಇದರ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ಉದ್ಯಮಿಗಳಾದ ಸುಕುಮಾರ್ ಕುಂದರ್ ಮುಂಬೈ, ಅನಂತ್ ಕುಂದರ್ ಮುಂಬೈ, ಪೊಲಿಪು ಮೊಗವೀರ ಮಹಿಳಾ ಮಂಡಳಿ ಪೊಲಿಪು ಹಾಗೂ ಊರ ಎಲ್ಲಾ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಊರ ಸುಮಾರು 200 ಕುಟುಂಬಗಳಿಗೆ ಊರ ಪರವಾಗಿ ಅಕ್ಕಿಯನ್ನು ವಿತರಿಸಲಾಯಿತು.