Updated News From Kaup
ಏಳರ ಹರೆಯದ ಕರಾಟೆ ಚಾಂಪಿಯನ್ - ಶಿವಾನಿ ಭಟ್ ಇನ್ನಂಜೆ

Posted On: 05-03-2020 04:59PM
ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ಫೆಬ್ರವರಿ 1 ರಂದು ನಡೆದ 30ನೇ ರಾಜ್ಯಮಟ್ಟದ ಅಂತರ್ ಡೋಜೋ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕಾಪು ತಾಲೂಕಿನ ಇನ್ನಂಜೆಯ ಶಿವಾನಿ ಭಟ್ ಅವರು ಎಂಟು ವರ್ಷದ ಒಳಗಿನ ವೈಯುಕ್ತಿಕ ಕಟಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿರುತ್ತಾರೆ. ಇನ್ನಂಜೆ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ಇನ್ನಂಜೆ ಮಯೂರ್ ಭಟ್ ಮತ್ತು ಆಶಾ ಭಟ್ ದಂಪತಿಯ ಪುತ್ರಿಯಾಗಿದ್ದು. ಕಟಪಾಡಿ ಸುರೇಶ್ ಆಚಾರ್ಯ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನಮ್ಮ ಕಾಪು
ಬಂಟಕಲ್ಲಿನ ಹಾಳೆ ಮರ - ಇನ್ನು ನೆನಪು ಮಾತ್ರ

Posted On: 05-03-2020 04:59PM
ಇದು ಕಾಪು ಫಿರ್ಕದಲ್ಲಿರುವ ನಮ್ಮೆಲ್ಲರ ಪ್ರೀತಿಯ ಹಳೇ ಬಂಟಕಲ್ಲು. ನನ್ನ ಹುಟ್ಟು ಇಲ್ಲಿಂದ ಎರಡು ಕಿಲೋಮೀಟರು ದೂರದ 92, ಹೆರೂರಿನಲ್ಲಿ ಆಗಿದ್ದರೂ, ಪ್ರಾಥಮಿಕ ಶಿಕ್ಷಣ ಬಂಟಕಲ್ಲಿನ ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿತ್ತು. ಹಾಗಾಗಿ ಬಂಟಕಲ್ಲಿಗೂ ನನಗೂ ಅವಿನಾಭಾವ ಸಂಬಂಧವಿದೆ. ಅದರಲ್ಲಿಯೂ ಪೇಟೆಯ ನಡುವೆ ಇದ್ದ ಈ ಹಾಳೆ ಮರ ಅಂದರೆ ನಮಗೆಲ್ಲರಿಗೂ ಪಂಚ ಪ್ರಾಣ. ನಾನು ಬಹಳ ಚಿಕ್ಕವನಿದ್ದಾಗ ಉಡುಪಿಯಿಂದ ಮಂಚಕಲ್ಲಿಗೆ ಎರಡು ಬಸ್ಸುಗಳು ಬರುತ್ತಿದ್ದವು. ಒಂದು ‘’ಮರವೂರು’’ ಮತ್ತೊಂದು ‘’ಹನುಮಾನ್’’. ಇವೆರಡೂ ಇದೇ ಮರದ ಅಡಿಯಲ್ಲಿ ತಂಗುತ್ತಿದ್ದವು. ಹಾಗಾಗಿ ಬಂಟಕಲ್ಲಿನ ಮೊದಲ ಬಸ್ ತಂಗುದಾಣ ಇದೆ ಮರ ಎಂದು ಗುರುತಿಸಲಾಗುತ್ತಿತ್ತು. ಮಳೆಗಾಲ ಬರುವ ಹೊತ್ತಿಗೆ ದೂರದ ಊರಿಂದ ಕೊರಂಬು (ಗೊರಬು), ಕನ್ನಡಿ ಪುಡಾಯಿ (ಗೊಬ್ಬರ ಹೊರುವ ಬುಟ್ಟಿ), ತತ್ರ (ತಾಳೆ ಮರದ ಗರಿಯಿಂದ ತಯಾರಿಸಿದ ಕೊಡೆ) ಇತ್ಯಾದಿ ತಂದು ಮಾರಾಟ ಮಾಡುತ್ತಿದ್ದರು. ಮೇ ತಿಂಗಳಲ್ಲಿ ಹತ್ತಿರದ ಕುರ್ಕಾಲು ಗ್ರಾಮದಿಂದ ಗೆಣಸು ತುಂಬಿದ ಗೋಣಿ ಚೀಲಗಳ ಮೂಟೆಗಳನ್ನೂ ಇಲ್ಲಿ ಕಾಣಬಹುದಾಗಿತ್ತು. ಒಂದುರೀತಿಯಲಿ ಹೇಳುವುದಾದರೆ ಸೋಮವಾರ ಇದರಡಿಯಲ್ಲಿ ಒಂದು ಚಿಕ್ಕ ಸಂತೆ ನಡೆಯುತ್ತಿತ್ತು. ತಾಮ್ರದ ಕೊಡಪಾನ ರೆಪೇರಿ ಮತ್ತು ಕಲಾಯಿ ಹಾಕುವ ಕಟಪಾಡಿಯ ಹಾಜಬ್ಬನವರ ವರ್ಕಶಾಪ್ ಇದ್ದುದು ಇದೇ ಮರದಡಿ. ಬಸ್ಸುಗಳು ಹೆಚ್ಚಾಗುತ್ತಿದ್ದಂತೆ ಬಸ್ಸು ನಿಲ್ದಾಣವನ್ನು ಈ ಮರದಡಿಯಿಂದ ಈಗಿನ ಹೊಸ ತಂಗುದಾಣಕ್ಕೆ ಎತ್ತಂಗಡಿ ಮಾಡಲಾಯ್ತು. ಇದು ಹಕ್ಕಿಗಳಿಗೆ ವರದಾನವಾಯ್ತು. ಮರತುಂಬಾ ಹಕ್ಕಿಗಳ ಕಲರವ ನೋಡುವುದೇ ಚೆಂದ. ಆ ಕಾಲದಲ್ಲಿ ಈಗಿನ ಹಾಗೆ ಕೃಷಿಗೆ ವಿಷ ಹಾಕುತ್ತಿರಲಿಲ್ಲ ಹಾಗಾಗಿ ಬಣ್ಣ ಬಣ್ಣದ ಹಕ್ಕಿಗಳು ಎಲ್ಲಾ ಕಡೆ ಹಳ್ಳಿಗಳಲ್ಲಿ ಕಾಣಸಿಗುತ್ತಿದ್ದವು. ಹೂ ಬಿಟ್ಟಾಗಂತೂ ಮರತುಂಬ ಜೇನುನೊಣಗಳು ಮುತ್ತಿ ಬಿಡುತ್ತಿದ್ದವು. ಮದುವಣಗಿತ್ತಿ ಶೃಂಗರಿಸಿ ನಿಂತಂತೆ ಇಡೀ ಮರ ಹೂಬಿಟ್ಟು ನಿಂತಾಗ ನೋಡುವುದೇ ಚೆಂದ. ಮದ್ದಿನ ಗುಣ: ತುಳುನಾಡಿನಲ್ಲಿ, ಆಷಾಢ ಅಮವಾಸ್ಯೆಯ ದಿನ ಮುಂಜಾನೆ ಸೂರ್ಯ ಉದಯಿಸುವ ಮುನ್ನವೇಈ ಹಾಳೆ ಮರದ ಬಳಿಗೆ ತೆರಳಿ ಮೊಣಚಾದ ಕಲ್ಲಿನಿಂದ ಹಾಳೆಮರದ ತೊಗಟೆಯನ್ನು ತೆಗೆದು ಅದನ್ನು ಮನೆಗೆ ತಂದು ಚೆನ್ನಾಗಿ ಅರೆದು, ನಂತರ ಕುದಿಸಿ, ಕಾಳುಮೆನಸು, ಬೆಳ್ಳುಳ್ಳಿ ಹಾಕಿ, ನಂತರ ಚೆನ್ನಾಗಿ ಬೆಂಕಿಯಿಂದ ಕಾಯಿಸಿದ ಬಿಳಿಕಲ್ಲನ್ನು ಆ ಕಷಾಯಕ್ಕೆ ಹಾಕಿ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲಾರೂ ಈ ಕಷಾಯ ಕುಡಿಯಿವ ಪದ್ಧತಿ ಇದೆ. ಒಂದು ವೇಳೆ ಯಾವುದಾದರೂ ವಿಷಕಾರಿ ಅಂಶಗಳು ಅದರಲ್ಲಿ ಸೇರಿದ್ದರೆ ಕಾಯಿಸಿದ ಕಲ್ಲು ಅದನ್ನು ಹೀರುತ್ತದೆ ಎಂಬ ನಂಬಿಕೆ. ಅಮವಾಸ್ಯೆಯ ದಿನವೇ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಎಂಬ ನಿಯಮವಿದೆ. ಇದು ಅತ್ಯಂತ ಕಹಿಯಾಗಿರುವುದರಿಂದ ಇದನ್ನು ಕುಡಿದ ನಂತರ ಮೆಂತೆ ಗಂಜಿ, ಗೋಡಂಬಿ ಬೀಜ ಹಾಗೂ ಬೆಲ್ಲವನ್ನು ಸೇವಿಸುವುದು ವಾಡಿಕೆಯಾಗಿದೆ. ಹೀಗೆ ಸೇವಿಸಿದ್ದಲ್ಲಿ ವರ್ಷಪೂರ್ತಿ ನಾವು ಆರೋಗ್ಯವಂತರಾಗಿರುತ್ತೇವೆ ಎಂಬುವುದು ಹಾಗೂ ಮಾರಕ ಖಾಯಿಲೆಯಿಂದ ತಪ್ಪಿಸಿಕೊಳ್ಳಬಹುದು ಎಂಬುವುದು ಹಿಂದಿನ ಕಾಲದಿಂದಲೂ ಹೇಳಿಕೊಂಡು ಬಂದ ಹಾಗೂ ಆಚರಿಸಿಕೊಂಡು ಬಂದ ನಂಬಿಕೆಇದೆ. ಹಾಗಾಗಿ ಯಾವುದೇ ಹೊಸ ವೈರಸ್ ತುಳುವರಿಗೆ ತಟ್ಟುವುದು ಕಡಿಮೆ. ಈ ಮರದಲ್ಲಿ ಫ್ಲಾವನೈಟ್, ನೈಸರ್ಗಿಕ ಸ್ಟೀರಾಯ್ಡ್, ಟರ್ಫೆನೈಟ್ಸ್ ಎಂಬ ಅಂಶ ಆಷಾಢ ಅಮವಾಸ್ಯೆಯ ದಿನ ಹೆಚ್ಚಾಗಿರುವುದು ಕಂಡುಬಂದಿದೆ ಎಂದು ಧರ್ಮಸ್ಥಳ ಆಯುರ್ವೇದ ಸಂಶೋಧನಾ ಕೇಂದ್ರ ತಿಳಿದಿದೆ. ಹಾಳೆ ಮಾರಕ್ಕೆ ಆಯುರ್ವೇದದಲ್ಲಿ “ಸಪ್ತಪರಣಿ” ಎಂದು ಕರೆಯುತ್ತಾರೆ. ಇದರ ಒಂದು ತೊಟ್ಟಿನಲ್ಲಿ ಏಳು ಎಲೆಗಳು ಇರುವ ಕಾರಣ ಇದಕ್ಕೆ ಸಪ್ತಪರಣಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ. ಈ ಮರದ ತೊಗಟೆಯ ಕಷಾಯವನ್ನು ಅಮವಾಸ್ಯೆಯ ದಿನ ಸ್ವೀಕರಿಸಿದರೆ ಅದಕ್ಕೆ ಜ್ವರ, ಕ್ಯಾನ್ಸರ್ ಸಹಿತ ಮಾರಕ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ಹೇಳಲಾಗುತ್ತದೆ. ವಿಹಂಗಮ ನೋಟ: ನಾನು ಪ್ರಕೃತಿ ಪ್ರಿಯ. ನೋಡುವ ಕಣ್ಣುಗಳು, ಗ್ರಹಿಸುವ ಬುದ್ದಿ ಶಕ್ತಿ ಇದ್ದರೆ ನಮ್ಮ ಮನ:ಪಟಲದಲ್ಲಿ ಕಾಲ ಕಾಲಕ್ಕೆ ಪ್ರಕೃತಿ ವೀಕ್ಷಣೆಯಿಂದ ವಿಭಿನ್ನ ಚಿತ್ರಣಗಳನ್ನು ಗ್ರಹಿಸಬಹುದು. ಈ ಮರವನ್ನು ನಾನು ಎಲ್ಲಾ ದಿಕ್ಕುಗಳಿಂದ ಹಾಗೂ ಎಲ್ಲಾ ಕೋನಗಳಿಂದ ಬೇರೆ ಬೇರೆ ಸಮಯದಲ್ಲಿ ವೀಕ್ಷಿಸಿದ್ದೇನೆ. ಆಗ ಕಾಣುತ್ತಿದ್ದ ಅದ್ಭುತ ಚಿತ್ರಣ ಅದು ವಿವರಿಸಲಾಗದ ಮಾತು. ಈಗ ಈ ಮರವಿಲ್ಲ. ಅಭಿವೃದ್ದಿ ನೆಪದಿಂದ ಸಂಹಾರ ಮಾಡಲಾಗಿದೆ. ಆದರೂ ನನ್ನ ಸ್ಮೃತಿಪಟಲದಲ್ಲಿ ನಾನು ನೋಡಿದ ಚಿತ್ರಣ ಇನ್ನೂ ಹಸನಾಗಿದೆ. ಪೇಟೆಯ ಪಡುವಣ ಭಾಗದಲ್ಲಿದ್ದ ಈ ಮರವನ್ನು ದಿನಾಲೂ ಮುಂಜಾನೆ ಸೂರ್ಯೋದಯದ ವೇಳೆ ನೋಡಿದ್ದೇನೆ. ಹೊತ್ತು ನಿಧಾನವಾಗಿ ಮೇಲೇರುತ್ತಿದ್ದಂತೆ ಆ ಮರ ಒಮ್ಮೆಲೇ ಹೊಂಬಣ್ಣ ತಾಳುತ್ತಿತ್ತು. ಎಲೆಗಳು ಜೀವಂತಿಕೆಯಿಂದ ತುಂಬಿತುಳುಕುತ್ತಿತ್ತು. ನೋಡುನೋಡುತ್ತಿದ್ದಂತೆ ಆ ಮರದ ಆಪೂರ್ವ ಸೌಂದರ್ಯ ಸುತ್ತಮುತ್ತಲಿನ ಪ್ರದೇಶದ ಮೇಲೆಲ್ಲ ಹಬ್ಬಿಕೊಳ್ಳುತ್ತಿತ್ತು. ಹೊತ್ತು ಇನ್ನೂ ಮೇಲಕ್ಕೇರಿದಾಗ ಮರದ ಎಲೆಗಳು ಗಾಳಿಗೆ ಶಬ್ದ ಮಾಡುತ್ತ ಕುಣಿಯಲು ಆರಂಭಿಸುತ್ತಿದ್ದವು. ಪ್ರತಿಕ್ಷಣವೂ ಆ ಮರ ಹೊಸ ಹೊಸ ರೂಪ ತಾಳುವಂತೆ ಭಾಸವಾಗುತ್ತಿತ್ತು. ಸೂರ್ಯೋದಯದ ಮೊದಲು ಆ ಮರ ಕಪ್ಪು ರಾಶಿಯ ವೈಭವದಂತೆ, ಸ್ತಬ್ದವಾಗಿ ಮಂಕು ಕವಿದಂತೆ ನಮ್ಮಿಂದೆಲ್ಲ ದೂರ ಒಂಟಿಯಾಗಿ ನಿಂತಂತೆ ಕಂಡರೆ, ಬೆಳಕು ಹರಿದಂತೆ ಎಲೆಗಳು, ಬೆಳಕಿನ ಜತೆ ಆಡುತ್ತಾ ಸಂಪೂರ್ಣ ಹೊಸ ಅನುಭವ ಕೊಡುತ್ತಿತ್ತು. ಹೊತ್ತು ನೆತ್ತಿಗೇರುತ್ತಿದ್ದಂತೆ ಆ ಮರದ ನೆರಳು ದಟ್ಟವಾಗಿ, ಅದರಡಿಯಲ್ಲಿ ಕೂತು ನೀನು ಉರಿ ಬಿಸಿಲಿನ ಝಳದಿಂದ ರಕ್ಷಣೆ ಪಡೆಯುತ್ತಿಯಾ ಅಂತ ಕೇಳುತ್ತಿತ್ತು. ಸಂಜೆಯಾದಂತೆ ಹೊತ್ತು ಕಂತುವ ಸಮಯದಲ್ಲಿ ಪಶ್ಚಿಮದ ದಿಗಂತವೂ ಕೆಂಪು, ಹಳದಿ, ಹಸುರು ಬಣ್ಣಗಳಿಂದ ಕಂಗೊಳಿಸುತ್ತಿರುವಂತೆಯೇ ಆ ಮರ ಕಪ್ಪಾಗುತ್ತಾ ಮಬ್ಬಾಗುತ್ತಿತ್ತು. ತನ್ನೊಳಗೆ ತಾನು ನಿಧಾನವಾಗಿ ಮುಚ್ಚಿಕೊಳ್ಳುತ್ತಾ ಪ್ರಶಾಂತವಾಗಿ, ರಾತ್ರಿಯ ವಿಶ್ರಾಂತಿಗೆ ತಯಾರಾಗುತ್ತಿದ್ದಂತೆ ಕಾಣುತ್ತಿತ್ತು. ಈಗ ಈ ಮರ ನೆನಪು ಮಾತ್ರ. ಶ್ರೀನಿವಾಸ್ ಪಭು. ‘’ಸ್ಪೂರ್ತಿ’’ ಬಂಟಕಲ್ಲು. 92, ಹೇರೂರು. ಉಡುಪಿ. shrinitech@gmail.com
ಅಭಿವೃದ್ಧಿಯ ಪಥದಲ್ಲಿ ಕಾಪು ಪೇಟೆ..!!

Posted On: 05-03-2020 04:59PM
ಕೊಚ್ಚಿ, ಪನ್ವೇಲ್, ಕನ್ಯಾಕುಮಾರಿ ನಡುವೆ ಸಂಪರ್ಕ ಸಾಗಿಸುವ ರಾಷ್ಟೀಯ ಹೆದ್ದಾರಿ 66ರಲ್ಲಿ ಹಾದುಹೋಗುವಾಗ ಸಿಗುವ ಚಿಕ್ಕ ಮತ್ತು ಚೊಕ್ಕವಾದ ಪೇಟೆಯೇ #ಕಾಪು_ಪೇಟೆ ಪ್ರವಾಸೋದ್ಯಮ, ಧಾರ್ಮಿಕ, ಶೈಕ್ಷಣಿಕ ಮತ್ತು ರಾಜಕೀಯ ಕಾರಣಗಳಿಂದಾಗಿ ಸದಾ ಸುದ್ದಿಯಲ್ಲಿರುವ ಕಾಪು ಕಳೆದ ನಾಲ್ಕೈದು ವರ್ಷಗಳಿಂದ ಪುರಸಭೆ ಮತ್ತು ತಾಲೂಕು ಕೇಂದ್ರವಾಗಿ ಮಾರ್ಪಟ್ಟಿದ್ದು. ನಂತರದಲ್ಲಿ ಕಾಪು ಪೇಟೆ ಕೂಡ ಹಂತ ಹಂತವಾಗಿ ಬೆಳೆಯುತ್ತಾ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಕಳೆದ ನಾಲ್ಕು ದಶಕಗಳಿಂದ ಕಾಪು ಕ್ಷೇತ್ರವನ್ನಾಳಿದ ಶಾಸಕರುಗಳು ಕಾಪುವಿನ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದು. 2016 ರಲ್ಲಿ ಕಾಪು ಪುರಸಭೆಯಾದ ಬಳಿಕ ಮತ್ತು 2018 ರಲ್ಲಿ ಕಾಪು ತಾಲೂಕು ಆಗಿ ರಚನೆಯಾದ ಬಳಿಕ ಕಾಪು ಪೇಟೆ ಮತ್ತಷ್ಟು ಗುರುತಿಸಲ್ಪಡುತ್ತಿದೆ. ಹಾಗಾಗಿಯೇ ಈಗ ಎಲ್ಲರ ಕಣ್ಣು ಕಾಪುವಿನ ಮೇಲೆ ಎಂಬಂತಾಗಿದೆ. ಮೂರು ಗ್ರಾಮ ಪಂಚಾಯತ್ಗಳನ್ನು ಸೇರಿಸಿಕೊಂಡು 2015-16 ರಲ್ಲಿ ರಚನೆಗೊಂಡ ಕಾಪು ಪುರಸಭೆಯು ಕಾಪುವಿನ ಅಭಿವೃದ್ಧಿಗೆ ಹೊಸ ಶಕೆಯನ್ನು ತೆರೆದಿಟ್ಟಿದೆ. ಕಾಪು ಪೇಟೆಗೆ ತಾಗಿಕೊಂಡಿರುವ ಕಾಪು, ಉಳಿಯಾರಗೋಳಿ ಮತ್ತು ಮಲ್ಲಾರು ಗ್ರಾಮ ಪಂಚಾಯತ್ಗಳನ್ನು ಸೇರಿಸಿಕೊಂಡು ರಚಿಸಿದ ಕಾಪು ಪುರಸಭೆಯು ಕಾಪುವಿನ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ತೆರೆದುಕೊಟ್ಟಿದೆ. ಸುಮಾರು 23.44 ಚದರ ಕೀಮೀ ವಿಸ್ತೀರ್ಣದ ಪ್ರದೇಶದಲ್ಲಿ ಹರಡಿರುವ ಕಾಪು ಪುರಸಭೆ ವ್ಯಾಪ್ತಿಯ ಒಟ್ಟು ಜನಸಂಖ್ಯೆ 2011 ರ ಜನಗಣತಿಯ ಆಧಾರದಲ್ಲಿ 21,887 ಪ್ರಸ್ತುತ 23,000 ದಷ್ಟು ಇರಬಹುದು. ಇಲ್ಲಿರುವ ವಾಣಿಜ್ಯ (1,020) ಮತ್ತು ವಸತಿ (7,103) ಸಹಿತವಾದ ಒಟ್ಟು ಕಟ್ಟಡಗಳ ಸಂಖ್ಯೆ (8,123) ಕಾಪು ಪುರಸಭೆಯ ವಾರ್ಷಿಕ ಆದಾಯ ಅಂದಾಜು 1.50 ಕೋಟಿ ರೂ. ದಿನವೊಂದಕ್ಕೆ ಕನಿಷ್ಠ 2.50 ಕೋಟಿ ರೂ ವಹಿವಾಟು ಮಾಡುವ ಸಾಮರ್ಥ್ಯ ಕಾಪು ಪೇಟೆಯದ್ದಾಗಿದೆ. ಕಾಪು ಪುರಸಭೆ ವ್ಯಾಪ್ತಿಗೆ ಬರುವ ಕಾಪು, ಉಳಿಯಾರಗೋಳಿ, ಮೂಳೂರು, ಕೈಪುಂಜಾಲು, ಮಲ್ಲಾರು ಗ್ರಾಮಗಳು ಮಾತ್ರವಲ್ಲದೆ ಪಾಂಗಳ, ಇನ್ನಂಜೆ, ಮಜೂರು, ಪಾದೂರು, ಹೇರೂರು, ಶಂಕರಪುರ, ಉಚ್ಚಿಲ, ಬೆಳಪು, ಎಲ್ಲೂರು, ಎರ್ಮಾಳು, ಪುಂಚಲಕಾಡು ಸಹಿತ ಹಲವು ಪ್ರದೇಶಗಳ ಜನರು ದಿನವಹಿ ವಹಿವಾಟಿಗಾಗಿ ಕಾಪು ಪೇಟೆಯನ್ನೇ ಅವಲಂಬಿಸಿದ್ದಾರೆ. ಕಾಪು ಪುರಸಭೆಯಾಗಿ ರಚನೆಯಾದ ಬಳಿಕ ಕಾಪು ಪೇಟೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಪೊಲಿಪು ಸರಕಾರಿ ಆಸ್ಪತ್ರೆಯಿಂದ ಕಾಪು ಪೇಟೆಯ ಸರ್ಕಲ್ ವರೆಗೆ ಎರಡು ಬದಿಗೆ ಇಂಟರ್ಲಾಕ್ ಅಳವಡಿಕೆ, ಒಳಚರಂಡಿ ಯೋಜನೆಗೆ ಪೈಪ್ಲೈನ್ ಅಳವಡಿಕೆ, ಪೇಟೆಯ ಒಳಗಡೆ ಮಳೆ ನೀರು ಹರಿಯುವ ಚರಂಡಿ ರಚನೆ, ಸರ್ಕಲ್ ನಲ್ಲಿ ಹೈವೋಲ್ಟ್ ಲೈಟ್ ಅಳವಡಿಕೆ, ಹಳೆ ಮಾರಿಗುಡಿ ರಸ್ತೆ ಬಲಿ ಪುಟ್ಪಾತ್ ರಚನೆ, ಕಾಪು ಲಕ್ಷ್ಮೀ ಜನಾರ್ಧನ ಹೋಟೆಲ್ ಬಳಿಯಿಂದ ವಿದ್ಯಾನಿಕೇತನ ಶಾಲಾ ಜಂಕ್ಷನ್ ವರೆಗೆ ಚರಂಡಿ ನಿರ್ಮಾಣ ಸಹಿತ ರಸ್ತೆ ಅಗಲೀಕರಣ ಮತ್ತು ಕಾಂಕ್ರೀಟಿಕರಣ ಕಾಮಗಾರಿ ಪ್ರಗತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ 66 ರಿಂದ ಕಾಪು ಪೇಟೆಗೆ ಸಂಪರ್ಕ ಕಲ್ಪಿಸುವ ಸರ್ವಿಸ್ ರಸ್ತೆಗಳ ಅಭಿವೃದ್ಧಿ, ಪೇಟೆಯಲ್ಲಿ ಒಳಚರಂಡಿ ನೀರು ಸರಬರಾಜಿಗೆ ವ್ಯವಸ್ಥೆ, ಪೇಟೆಯುದ್ದಕ್ಕೂ ಪುಟ್ಪಾತ್ ರಚನೆ, ಘನತ್ಯಾಜ್ಯ ನಿವಾರಣೆಗೆ ಯೋಜನೆ, ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಯಿಂದ ವಿದ್ಯಾನಿಕೇತನ ಜಂಕ್ಷನ್ ವರೆಗೆ ಮತ್ತು ವೈಶಾಲಿ ಹೋಟೆಲ್ ನಿಂದ ಸರ್ಕಾರಿ ಆಸ್ಪತ್ರೆಯವರೆಗೆ ಮಳೆನೀರು ಹರಿಯುವ ಚರಂಡಿ ರಚನೆ, ಸುಗಮ ಸಂಚಾರ ಮತ್ತು ಸುವ್ಯವಸ್ಥಿತ ಪಾರ್ಕಿಂಗ್ ಗೆ ವ್ಯವಸ್ಥೆ, ಪೇಟೆಯೊಳಗೆ ಪಬ್ಲಿಕ್ ಟಾಯ್ಲೆಟ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಸಹಿತವಾಗಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಸಹಿತ ವಿವಿಧ ಮೂಲಭೂತ ಸೌಕರ್ಯಗಳ ಜೋಡಣೆ ಅತಿ ಅಗತ್ಯವಾಗಿದೆ. ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳೇ ಕಾಪುವಿನ ಅಭಿವೃದ್ಧಿಯ ಮೂಲ ಕೇಂದ್ರಗಳಾಗಿವೆ. ಕಾಪು ಪೇಟೆಯಲ್ಲಿ ಅಭಿವೃದ್ಧಿಗೆ 1990-2000 ನೇ ಇಸವಿಯಲ್ಲಿ ಕಾಪುವಿನಲ್ಲಿ ಅಸ್ತಿತ್ವಕ್ಕೆ ಬಂದ ಕಾಪು ಅಭಿವೃದ್ಧಿ ಸಮಿತಿಯ ಕೊಡುಗೆಯು ಅಪಾರವಾಗಿದೆ. ಆ ಕಾಲದಲ್ಲಿ ಸಚಿವರಾಗಿದ್ದ ವಸಂತ ವಿ ಸಾಲ್ಯಾನ್ ಅವರ ಇಚ್ಛಾ ಶಕ್ತಿ, ಅವರ ನಂತರದಲ್ಲಿ ಶಾಸಕರಾಗಿ ಆಯ್ಕೆಯಾಗಿ ಬಂದ ಲಾಲಾಜಿ ಆರ್ ಮೆಂಡನ್ ಮತ್ತು ವಿನಯ್ ಕುಮಾರ್ ಸೊರಕೆ, ಮತ್ತೇ ಶಾಸಕರಾಗಿರುವ ಲಾಲಾಜಿ ಆರ್ ಮೆಂಡನ್ ಅವರುಗಳ ಸಹಕಾರದೊಂದಿಗೆ ಕಾಪು ಪೇಟೆಯನ್ನು ಅಭಿವೃದ್ಧಿಯ ಪಥದತ್ತ ಕೊಂಡಯ್ಯಬೇಕೆನ್ನುವುದು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ಮನೋಹರ್ ಅವರ ಇಚ್ಛೆಯಾಗಿದೆ.. ಮಾಹಿತಿ : ರಾಕೇಶ್ ಕುಂಜೂರು (ಕಾಪು ಉದಯವಾಣಿ ವರದಿಗಾರರು) ನಮ್ಮ ಕಾಪು
ಕಲ್ಲಟ್ಟೆಯಲ್ಲಿ ಜಾರಂದಾಯ, ಬಂಟ ನೆಲೆಯಾದ ಕಥೆ

Posted On: 05-03-2020 04:59PM
ಗಗ್ಗಲ್ಲ ಕೋಟೆಯ(ಕಲ್ಲಟ್ಟೆ) ಜಾರಂದಾಯ ಬಂಟ ದೈವ ಪ್ರಾಚೀನ ಕಾಲದಲ್ಲಿ ಕಲ್ಲಟ್ಟೆಯನ್ನು ಕಲ್ಲೊಟ್ಟು ಅಥವಾ ಗಗ್ಗಲ್ಲ ಕೋಟೆಯೆಂದು ಕರೆಯುತ್ತಿದ್ದರು. ಈ ಪ್ರದೇಶವು ಪಾದೇ ಕಲ್ಲಿನಿಂದ ತುಂಬಿದ ಪ್ರದೇಶ. ಬಹು ಪ್ರಾಚೀನ ಹಾಗು ಕಾರ್ಣಿಕ ಸ್ಥಳ, ಪಡುಬಿದ್ರಿ ಬ್ರಹ್ಮಸ್ಥಾನದ ಖಡಗೇಶ್ಶ್ವರಿ ದೇವಿಯ ದೂತ ಕಲ್ಲಟೆ ಜಾರಂದಾಯ ಬಂಟ. ಪಡುಬಿದ್ರಿ ಪೇಟೆಯಿಂದ , ಬ್ರಹ್ಮಸ್ಥಾನಕ್ಕೆ ಹೋಗು ದಾರಿಯಲ್ಲಿ ಕಲ್ಲಟ್ಟೆ ಜಾರಂದಾಯನ ಸುಂದರ ದೈವಸ್ಥಾನ ಕಾಣಲು ಸಿಗುತ್ತದೆ. ಇಲ್ಲಿ ಕಲ್ಲಿನ ಕೋರೆಯಲ್ಲಿ ಒಂದು ಪಂಜುರ್ಲಿ ದೈವವು ಇದೆ. ಇದಕ್ಕೆ ಕೋರೆ ಪಂಜುರ್ಲಿ ಎನ್ನುತ್ತಾರೆ. ಮಂಜಿ ಮರಕಾಲ ಎಂಬ ಮೀನು ಹಿಡಿಯುವವನಿಗೆ ತನ್ನ ನಿಜ ರೂಪ ತೋರಿಸಿ,ಅವನಿಂದ ಕುದುರೆ ಬಂಡಿಯನ್ನು ಮಾಡಿಸಿ ಈಡೀ ಗಗ್ಗಲ್ಲ ಕೋಟೆಯಲ್ಲಿ ಮೆರೆಯುವ ದೈವ ಜಾರಂದಾಯ ಬಂಟ. ಮಂಜಿ ಮರಕಾಲನ ಕಥೆ : ಪ್ರಾಚೀನ ಕಾಲದಲ್ಲಿ ಮಂಜಿ ಮರಕಾಲ ಎಂಬವನು ಗಗ್ಗಲ್ಲ ಕೋಟೆಯಲ್ಲಿ ವಾಸವಾಗಿದ್ದನು. ಇವನ ಕಸುಬು ಮೀನುಗಾರಿಕೆ, ಸಮುದ್ರದಲ್ಲಿ ಮೀನು ಹಿಡಿಯುವುದು. ಒಂದು ದಿನ ಮಧ್ಯ ರಾತ್ರಿಯಲ್ಲಿ ಜಾರಂದಾಯನು ಕಂಚಿನ ಕೋಳಿಯ ರೂಪ ಧರಿಸಿ, ಮಂಜಿ ಮರಕಲನ ಮನೆಯ ಮುಂದೆ ಬಂದು ಕೂಗುತ್ತಾನೆ. ಮಂಜಿ ಮರಕಾಲನು ಕೋಳಿ ಕೂಗು ಕೇಳಿಸಿ ಬೆಳಗ್ಗಾಯಿತು ಎಂದು ಭಾವಿಸಿ, ಬಲೆ ಮತ್ತಿತರ ಮೀನು ಹಿಡಿಯುವ ಸಲಕರಣೆಗಳನ್ನು ಹೊತ್ತು ಸಮುದ್ರ ತೀರಕ್ಕೆ ಹೊರಡುತ್ತಾನೆ. ಮುಟ್ಟಿಕಲ್ಲು ಎಂಬಲ್ಲಿ ಜಾರಂದಾಯನು ನಿಜ ರೂಪ ತೋರಿಸುತ್ತಾನೆ ಮಂಜಿ ಮರಕಾಲನಿಗೆ ಜಾರಂದಾಯನ ನಿಜ ರೂಪ ನೋಡಿ, "ನನಗೆ ಏಕೆ ಒಲಿದೆ ಜಾರಂದಾಯ" ಎಂದು ಕೇಳುತ್ತಾನೆ, ಜಾರಂದಾಯನು ಮಂಜಿ ಮರಕಲನನ್ನು ಕುರಿತು "ಮಂಜಿ ಮರಕಾಲ, ಗಗ್ಗಲ್ಲ ಕೋಟೆಯಲ್ಲಿ ತಿರುಗಲು ನನಗೆ ಒಂದು ಕುದುರೆ ಬಂಡಿ ಬೇಕು, ಅದನ್ನು ಮಾಡಿಸಿ ಕೊಡು" ಎಂದು ಆಜ್ಞಾಪಿಸುತ್ತಾನೆ. ಇದನ್ನು ಕೇಳಿ ಮಂಜಿ ಮರಕಾಲನು "ಜಾರಂದಾಯ, ಒಂದು ಹೊತ್ತು ಊಟ ಮಾಡಲು ಅನ್ನವೇ ಇಲ್ಲದಂತಹ ನನ್ನ ಈ ಪರಿಸ್ಥಿತಿಯಲ್ಲಿ, ಕುದುರೆ ಬಂಡಿ ಹೇಗೆ ಮಾಡಿಸಲಿ " ಎಂದು ಪರಿ ಪರಿಯಾಗಿ ಪ್ರಾರ್ಥಿಸುತ್ತಾನೆ. ಇದನ್ನು ಕೇಳಿ ಜಾರಂದಾಯನು "ಮಂಜಿ ಮರಕಾಲ,ನಿನ್ನ ಕೈಯಲ್ಲಿ ಇದನ್ನು ಮಾಡಿಸುತ್ತೇನೆ, ಏನು ಹೆದರಬೇಡ" ಎಂದು ಹೇಳಿ ಬೆಳ್ಳಿಯ ಕುದುರೆ ಏರಿ ಮಾಯವಾಗುತ್ತಾನೆ. ಹೀಗೆ ಮುಂದಿನ ದಿನಗಳಲ್ಲಿ, ಮಂಜಿ ಮರಕಾಲನು, ಜಾರಂದಾಯನ ದಯೆಯಿಂದ ವ್ಯಾಪಾರದಲ್ಲಿ ತುಂಬಾ ಲಾಭಗಳಿಸಿ, ಅತಿ ಸುಂದರವಾದ ಕುದುರೆ ಬಂಡಿಯನ್ನು ಮಾಡಿಸುತ್ತಾನೆ. ಮಂಜಿ ಮರಕಾಲನ ಕಾಲದಲ್ಲಿ ಒಪ್ಪಿಸಿದ ಕುದುರೆ ಬಂಡಿ ಜೀರ್ಣಾವಸ್ಥೆಯಲ್ಲಿ ಇದ್ದು , ಸ್ವಲ್ಪ ವರ್ಷಗಳ ಹಿಂದೆ ಇದೆ ಮಂಜಿ ಮರಕಾಲನ ಸಂಸಾರದವರು ಹೊಸ ಕುದುರೆ ಬಂಡಿಯನ್ನು ಜಾರಂದಾಯನಿಗೆ ಒಪ್ಪಿಸಿರುತ್ತಾರೆ. ಇವತ್ತಿಗೂ ಮಂಜಿ ಮರಕಾಲ ಸಂಸಾರದವರು ಜಾರಂದಾಯ ನೇಮದ ದಿನ ಅವರ ಮನೆಯಲ್ಲಿ ದೀಪವನ್ನು ಹಚ್ಚಿ ಇಡೀ ನೇಮ ಮುಗಿಯುವವರೆಗೆ ಮನೆ ಬಾಗಿಲನ್ನು ತೆರೆದು ಇಡುತ್ತಾರೆ. ಇವತ್ತಿಗೂ ಜಾರಂದಾಯನು ಮಂಜಿ ಮಾರಕಲನ ಮನೆಗೆ ಭೇಟಿ ಕೊಡುತ್ತಾನೆ ಎಂದು ಪ್ರತೀತಿ ಇದೆ. ಬರಹ: ಜಗನ್ನಾಥ ಭಟ್ಟ ಕಟಪಾಡಿ. Coastal Diaries.. ನಮ್ಮ ಕಾಪು
ಕೃಷ್ಣನೂರು ಉಡುಪಿಯಲ್ಲಿ ಸ್ಯಾಕ್ಸೋಫೋನ್ ಪರಿಣಿತೆ ದೀಕ್ಷಾ ದೇವಾಡಿಗ ಅಲೆವೂರು

Posted On: 05-03-2020 04:59PM
ಹೆಸರು : ದೀಕ್ಷಾ ವಿದ್ಯಾರ್ಹತೆ : ಡಿಗ್ರಿ, ಎಮ್.ಎ, ಬಿ.ಇಡಿ ಹವ್ಯಾಸ : ಕರ್ನಾಟಿಕ್ ಸಂಗೀತ ಅಲಿಸುವುದು, ಹಿಂದುಸ್ಥಾನಿ ಸಂಗೀತ ಆಲಿಸುವುದು ಮತ್ತು ಸ್ಯಾಕ್ಸೋಪೊನ್ ನುಡಿಸುವುದು. ಉಡುಪಿ ಜಿಲ್ಲೆ, ಅಲೆವೂರು ರಾಘವ ಶೇರಿಗಾರ ಮತ್ತು ಮೋಹಿಣಿ ದಂಪತಿಗಳ ಮಗಳು ಕುಮಾರಿ ದೀಕ್ಷಾ ಚಿಕ್ಕ ವಯಸ್ಸಿನಲ್ಲಿ ಯೇ( 4ನೇ ತರಗತಿ) ಸ್ಯಾಕ್ಸೋಪೊನ್ ವಾದನವನ್ನು ಕರಗತ ಮಾಡಿಕೊಂಡಾಕೆ. ಕುಮಾರಿ ದೀಕ್ಷಾ ಸುಮಾರು 16 ವರ್ಷಗಳಿಂದ ಸ್ಯಾಕ್ಸೋಪೊನ್ ವಾದನವನ್ನು ನುಡಿಸುತ್ತಾ ಹಿಗೆ ಕೃತಿಗಳನ್ನು ನುಡಿಸುವ ಮಟ್ಟಕ್ಕೆ ಬಂದಿರುತ್ತಾರೆ. ಅಲ್ಲದೇ ತ್ಯಾಗರಾಜರ ಅನೇಕ ಕೃತಿಗಳು, ಪಂಚ ರತ್ನ ಕೃತಿಗಳು, ವರ್ಣಗಳು, ದೇವರ ನಾಮಗಳು ಇವಲ್ಲವನ್ನು ನುಡಿಸುವ ಮಟ್ಟಕ್ಕೆ ಬೆಳೆದಿರುತ್ತಾರೆ. ದೀಕ್ಷಾಳ ಗುರು ಉಡುಪಿ ಕೆ. ರಾಘವೇಂದ್ರ ರಾವ್ ಕೊಳಲು ವಾದಕ ಆಕಾಶವಾಣಿ ಕಲಾವಿದರು, ಅಂತೆಯೇ ಮೊದಲ ಎರಡು ವರ್ಷದ ಸಂಗೀತ ವಾದನ ಅಭ್ಯಾಸವನ್ನು ಅಲೆವೂರು ಶ್ರೀ ಸುಂದರ ಶೇರಿಗಾರ್ ಜೊತೆ ಕಲಿತರು. ಪ್ರಸ್ತುತ ಇವರು ವಾದನ ಅಭ್ಯಾಸ ವನ್ನು ವಿದುಷಿ ಮಾಧವಿ ಭಟ್ ಇವರಲ್ಲಿ ಕಲಿಯುತ್ತಿರುತ್ತಾರೆ. ಕುಮಾರಿ ದೀಕ್ಷಾ ಇವರು ಉಡುಪಿಯಲ್ಲಿ ಹಲವಾರು ಕಡೆ ಸ್ಯಾಕ್ಸೋಪೊನ್ ವಾದನ ಕಾರ್ಯಕ್ರಮವನ್ನು ನೀಡಿರುತ್ತಾರೆ, ಅಲ್ಲದೆ ಮಂಗಳೂರು, ಮೂಡಬಿದಿರೆ, ಬೆಂಗಳೂರು, ಮೈಸೂರು, ಮುಂಬಯಿ, ತಮಿಳುನಾಡು, ಹಾಸನ, ಬಳ್ಳಾರಿ, ಕೇರಳ, ಹುಬ್ಬಳ್ಳಿ, ಕುಮಟಾ, ಹೊನ್ನಾವರ, ಯಲ್ಲಾಪುರ, ಮಲ್ಲಾಪುರ, ಗೋವಾ ಮುಂತಾದ ಹಲವಾರು ಕಡೆಗಳಲ್ಲಿ 8000 ಗಿಂತಲು ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಕುಮಾರಿ ದೀಕ್ಷಾ ಇವರಿಗೆ 2006 ರಲ್ಲಿ ಉಡುಪಿ ಜಿಲ್ಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತ 74 ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಯಾಕ್ಸೋಪೊನ್ ವಾದನವನ್ನು ನೀಡಿರುತ್ತಾರೆ. 2008 ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ. 2008 ರಲ್ಲಿ ಕನ್ನಡ ಸಾಂಸ್ಕೃತಿ ಇಲಾಖೆ ಶ್ರೀ ಚಕ್ರೇಶ್ವರಿ ದೇವಸ್ಥಾನ ಕೋಡಿ ಕನ್ಯಾನ ಸಾಸ್ತಾನ ಇಲ್ಲಿನ ಸಾಧನ ಪ್ರಶಸ್ತಿ ಪತ್ರ. ಸರ್ಟಿಫಿಕೇಟ್ ಅಫ್ ಮೆರಿಟ್ ಹ್ಯಾಸ್ ಬೀನ್ ಅವಾರ್ಡೆಡ್ ಸರ್ಟಿಫಿಕೇಟ್ ಇನ್ instrumental ಮ್ಯೂಸಿಕ್ ಸ್ಯಾಕ್ಸೋಪೊನ್ ಫ್ರಾಮ್ ಗವರ್ನಮೆಂಟ್ ಆಫ್ ಇಂಡಿಯಾ. 2010 ರಲ್ಲಿ ಬೆಂಗಳೂರಿನಲ್ಲಿ ನೀಡಿದ ಧಾರ್ಮಿಕ ಕಾರ್ಯಕ್ರಮಕ್ಕೆ ಸ್ಯಾಕ್ಸೋಪೊನ್ ವಾದನದಲ್ಲಿ ""ನಾದ ವೈಭವ ಬಿರುದು"". 2010 ರಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಾದ್ಯ ಸಂಗೀತದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ, ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಜಿಲ್ಲಾಮಟ್ಟದ ವರೆಗೂ ಪ್ರತಿನಿಧಿಸಿರುತ್ತಾರೆ. ಶ್ರೀ ಕೃಷ್ಣ ಮಠ ಉಡುಪಿ ಶ್ರೀ ಅದಮಾರು ಮಠದ ಸ್ವಾಮೀಜಿಯವರ ಪರ್ಯಾಯ ಮಾಹೊತ್ಸವಕ್ಕೆ ನೀಡಿದ ಧಾರ್ಮಿಕ ಕಾರ್ಯ ಕ್ರಮದಲ್ಲಿ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ. participated - national cultural festival unity in diversity center for cultural resources and training, government of India directorate of art and culture, government of Goa. ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಬೆಂಗಳೂರು ನಡೆಸಿದ 2017 ನೇ ಸಾಲಿನ ವಾದ್ಯ ಸಂಗೀತ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಗೆ ಈಕೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಅಭಿನಂದನೆಗಳು ನಮ್ಮ ಕಾಪು
ಕರ್ನಾಟಕ ಯುವರತ್ನ ಪ್ರಶಸ್ತಿಗೆ ಭಾಜನರಾದ ರಾಕೇಶ್ ಕುಂಜೂರು

Posted On: 05-03-2020 04:59PM
ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿಯ ಜಂಗಮ ಮಠದಲ್ಲಿ ನಡೆದ 11 ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಯುವ ರತ್ನ ಪ್ರಶಸ್ತಿಗೆ ಭಾಜನರಾದ ಜೇಸಿಐ ಪೂರ್ವ ವಲಯಾಧ್ಯಕ್ಷ, ರಾಷ್ಟ್ರೀಯ ಸಂಯೋಜಕ, ಸಾಮಾಜಿಕ ಮತ್ತು ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ಪ್ರತಿನಿಧಿಯಾಗಿರುವ, ಉದಯವಾಣಿ ಕಾಪು ವರದಿಗಾರ ರಾಕೇಶ್ ಕುಂಜೂರು. ಅಭಿನಂದನೆಗಳು ನಮ್ಮ ಕಾಪು
ಕಾಪು ತಾಲೂಕಿನ ಇನ್ನಂಜೆಯಲ್ಲಿ ಬಾಳೆಹಣ್ಣಿಗೊಲಿಯುವ ಮಡುಂಬು ಮಹಾಗಣಪತಿ ಉತ್ಸವ

Posted On: 05-03-2020 04:59PM
ಮಡುಂಬು ಶ್ರೀ ಮಹಾಗಣಪತಿ ದೇವರ ಸನ್ನಿದಿಯಲ್ಲಿ ವರ್ಷಂಪ್ರತಿ ಜರಗುವ ಮಹೋತ್ಸವವು ಯಥಾನುಕ್ರಮದಲ್ಲಿ ತಾರೀಕು 09/02/2020 ರವಿವಾರ ಜರಗಲಿರುವುದು. ಈ ಶುಭ ಸಮಯದಲ್ಲಿ ವರ್ಷಂಪ್ರತಿ ಜರಗುವಂತೆ 108 ನಾಳಿಕೇರ ಗಣಯಾಗ ಪೂರ್ವಾಹ್ನ ಗಂಟೆ 9 ಕ್ಕೆ ಪೂರ್ಣಾಹುತಿ ಮತ್ತು ಮಧ್ಯಾಹ್ನ ಗಂಟೆ 12 ಕ್ಕೆ ಮಹಾಪೂಜೆ, ಉತ್ಸವ ಬಲಿ ನಂತರ ಅನ್ನ ಸಂತರ್ಪಣೆ. ಸಾಯಂಕಾಲ ಗಂಟೆ 5 ರಿಂದ ಶ್ರೀ ಧೂಮಾವತಿ ಭಜನಾ ಮಂಡಳಿ ಕಲ್ಯಾಲು ಮತ್ತು ಶ್ರೀ ದೇವಿ ಭಜನಾ ಮಂಡಳಿ ಮಂಡೇಡಿ ಇವರಿಂದ ಭಜನಾ ಕಾರ್ಯಕ್ರಮ. ರಾತ್ರಿ ಗಂಟೆ 7ಕ್ಕೆ ಉತ್ಸವ ಬಲಿ, 9:30 ಕ್ಕೆ ದೊಡ್ಡ ರಂಗಪೂಜೆ ನಡೆಯಲಿರುವದು ಮತ್ತು ತಾರೀಕು 10/02/2020 ರ ಸೋಮವಾರ ಸಾಯಂಕಾಲ ಗಂಟೆ 6 ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಹಾಗೂ ತಾರೀಕು 11/02/2020 ರಂದು ಬೆಳಿಗ್ಗೆ ಚಂಡಿಕಾಹೋಮ, ಸಂಜೆ ಗಂಟೆ 6ಕ್ಕೆ ರಕ್ತೇಶ್ವರಿ ಹೂವಿನ ಪೂಜೆ. ಆ ಪ್ರಯುಕ್ತ ಶ್ರೀ ದೇವರ ಸನ್ನಿದಿಯಲ್ಲಿ ನಡೆಯುವ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುತ್ತೇವೆ ನಮ್ಮ ಕಾಪು Read More..
ಶ್ರೀ ಬಬ್ಬುಸ್ವಾಮಿ ದೈವಸ್ಥಾನ, ಕೊತಲಕಟ್ಟೆಯಲ್ಲಿ ವಾರ್ಷಿಕ ನೇಮೋತ್ಸವ

Posted On: 05-03-2020 04:59PM
ವಾರ್ಷಿಕ ನೇಮೋತ್ಸವದ ಪ್ರಯುಕ್ತ ತಾರೀಕು 21/02/2020 ರಂದು ಭೂತರಾಜ ಬನದಲ್ಲಿ ವಿಶೇಷ ಆಶ್ಲೇಷ ಬಲಿ ಮತ್ತು ಅನ್ನಸಂತರ್ಪಣೆ, ತಾರೀಕು 22/02/2020 ರಂದು ಬಬ್ಬುಸ್ವಾಮಿ ಮತ್ತು ತನ್ನಿ ಮಾನಿಗ, ಹಾಗೂ 23/02/2020 ರಂದು ಜುಮಾದಿ ಬಂಟ, ಗುಳಿಗ ಮತ್ತು ಕೊರಗ ತನಿಯ ದೈವದ ವಾರ್ಷಿಕ ನೇಮೋತ್ಸವ ಜರಗಲಿರುವುದು.. ಈ ಎಲ್ಲಾ ಕಾರ್ಯಕ್ರಮಕ್ಕೆ ಶುಭಕೋರುವವರು : ನಮ್ಮ ಕಾಪು
ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಮಹೋತ್ಸವ

Posted On: 05-03-2020 04:59PM
ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿದಿಯಲ್ಲಿ ವೇದಮೂರ್ತಿ ಶ್ರೀ ಪಾದೂರು ಲಕ್ಷ್ಮಿ ನಾರಾಯಣ ತಂತ್ರಿಯವರ ನೇತೃತ್ವದಲ್ಲಿ ವರ್ಷವಾಧಿ ಮಹೋತ್ಸವವು ತಾರೀಕು 21-02-2019 ರಂದು ಮೊದಲ್ಗೊಂಡು ತಾರೀಕು 25/02/2019 ರಂದು ಸಂಪನ್ನಗೊಳ್ಳಲಿದೆ ತಾರೀಕು 22/02/2019 ರಂದು ರಾತ್ರಿ 09:30 ರಿಂದ ಚೈತನ್ಯ ಕಲಾವಿದರು ಬೈಲೂರು ಇವರಿಂದ ತುಳು ಹಾಸ್ಯಮಯ ನಾಟಕ "ಪಿರ ಪೋಂಡುಗೆ" ಸರ್ವರಿಗೂ ಆದರದ ಸ್ವಾಗತ ಬಯಸುವ : ನಮ್ಮ ಕಾಪು
ಶಿರ್ವ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಥೊತ್ಸವ ಮತ್ತು ಬ್ರಹ್ಮಮಂಡಲೋತ್ಸವ

Posted On: 05-03-2020 04:59PM
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಾಣಿಬೆಟ್ಟು ಶಿರ್ವ ಇಲ್ಲಿಯ ಅಷ್ಟಬಂಧ-ಸಾನಿಧ್ಯ ಕಲಶ,ಶ್ರೀ ಮನ್ಮಹಾರಥೋತ್ಸವ,ಶ್ರೀ ಬ್ರಹ್ಮಮಂಡಲೋತ್ಸವ - ಮಹಾ ಸಂತರ್ಪಣೆ ಕಾರ್ಯಕ್ರಮವು ದಿನಾಂಕ 06/02/2020 ರಿಂದ ಆರಂಭಗೊಂಡು 12/02/2020 ಪರ್ಯಂತ ನಡೆಯಲಿದೆ... ಎಲ್ಲಾ ಕಾರ್ಯಕ್ರಮಗಳಿಗೆ ತಮಗಿದೋ ಅತ್ಮೀಯ ಸ್ವಾಗತ.. ನಮ್ಮ ಕಾಪು