Updated News From Kaup

SSLC ಪರೀಕ್ಷೆ : ಪಣಿಯೂರು ಪೆಜತ್ತಕಟ್ಟೆ ಸಾಕ್ಷಿ ದೇವಾಡಿಗ ಶಾಲೆಗೆ ದ್ವಿತೀಯ ಸ್ಥಾನಿ‌

Posted On: 30-05-2024 09:08PM

ಕಾಪು : ಇಲ್ಲಿನ ಅದಮಾರು ಪೂರ್ಣ ಪ್ರಜ್ಞ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಸಾಕ್ಷಿ ದೇವಾಡಿಗ 91% ಅಂಕ ಪಡೆದು ಶಾಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುವರು.

ಇವರು ಪಣಿಯೂರು ಆಟೋ ಚಾಲಕರ ಹಾಗೂ ಮಾಲಕರ ಸಂಘದ ಅಧ್ಯಕ್ಷರು ದಯಾನಂದ ದೇವಾಡಿಗ ಹಾಗೂ ವಿನೋದ ದೇವಾಡಿಗ ಅವರ ಸುಪುತ್ರಿ.

ಕಾಪು : ಬೊಳ್ಳೆಟ್ಟು ಅಲಡೆಯ ಪ್ರಧಾನ ಅರ್ಚಕ ಬಾಲಕೃಷ್ಣ ಭಟ್ ನಿಧನ

Posted On: 30-05-2024 05:02PM

ಕಾಪು : ಎಲ್ಲೂರು ಗ್ರಾಮದ ಬೆಳ್ಳಿಬೆಟ್ಟು ನಿವಾಸಿ ಬಾಲಕೃಷ್ಣ ಭಟ್(76) ಮೇ 29 ರಂದು ಅವರ ಸ್ವಗ್ರಹದಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಇಬ್ಬರು ಪುತ್ರರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಬೊಳ್ಳೆಟ್ಟು ಅಲಡೆಯ ಪ್ರಧಾನ ಅರ್ಚಕರಾಗಿದ್ದ ಇವರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮೇಳದ ಗಣಪತಿ ದೇವರ ಅರ್ಚಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು.

ಪ್ರಪಂಚಾದ್ಯಂತ ನೆಲೆಸಿರುವ ಜನರು ಕಾಪು ಮಾರಿಗುಡಿಯನ್ನೊಮ್ಮೆ ನೋಡಬೇಕು : ಶಿರೂರು ಶ್ರೀ ವೇದವರ್ಧನ ಸ್ವಾಮೀಜಿ

Posted On: 29-05-2024 05:06PM

ಕಾಪು : ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಶ್ರೀ ಶಿರೂರು ಮಠದ ಮಠಾಧೀಶರಾದ ಶ್ರೀ ವೇದವರ್ಧನ ಸ್ವಾಮೀಜಿ ಮತ್ತು ಆಪ್ತರಾದ ಶ್ರೀಶ ಭಟ್ ಅವರು ಮೇ 29ರಂದು ಜಿರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಕಾಪುವಿನ ಅಮ್ಮನ ದರುಶನವನ್ನು ಪಡೆದು ಶ್ರೀದೇವಿಗೆ ದೀಪ ಬೆಳಗಿ ನವದುರ್ಗಾ ಮಂಟಪದಲ್ಲಿ ಆಶೀರ್ವಚನ ನೀಡಿದರು.

ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿಯವರ ಸಮ್ಮುಖದಲ್ಲಿ ಜಿರ್ಣೋದ್ಧಾರ ಕಾಮಗಾರಿಗಳನ್ನು ವೀಕ್ಷಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು ಭಕ್ತರು ಬರೇ ಭಾರತ ದೇಶದಲ್ಲಿ ಮಾತ್ರ ಅಲ್ಲ, ಪ್ರಪಂಚಾದ್ಯಂತ ನೆಲೆಸಿದ್ದಾರೆ. ದೇವರ ಸೇವೆ ಮಾಡಲು ಇದೊಂದು ಅವಕಾಶ. ಇಲ್ಲಿಗೆ ಬಂದು ಕಣ್ತುಂಬಿಕೊಳ್ಳಬೇಕು, ನಿರ್ಮಾಣ ಕಾರ್ಯಕ್ಕೆ ಸಹಕರಿಸಬೇಕು, ಎಲ್ಲರಿಗೂ ಇದು ನಮ್ಮ ದೇವಸ್ಥಾನ ಎಂಬ ಭಾವನೆ ಬರಬೇಕು. ಪರಮಾತ್ಮನ ಅನುಗ್ರಹವಿರಲಿ ಎಂದರು.

ದೇವಳದ ಪ್ರಧಾನ ಅರ್ಚಕರಾದ ವೇ. ಮೂ. ಶ್ರೀನಿವಾಸ ತಂತ್ರಿ ಕಲ್ಯಾ, ಜಿರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ಗೌರವಾಧ್ಯಕ್ಷ ಅನಿಲ್ ಬಲ್ಲಾಳ್ ಕಾಪು ಬೀಡು, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಉಪಾಧ್ಯಕ್ಷರುಗಳಾದ ಕಾಪು ದಿವಾಕರ ಶೆಟ್ಟಿ, ಮಾದವ ಆರ್ ಪಾಲನ್, ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕ ಉದಯ ಸುಂದರ್ ಶೆಟ್ಟಿ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಗೌರವ ಸಲಹೆಗಾರ ನಿರ್ಮಲ್ ಕುಮಾರ್ ಹೆಗ್ಡೆ, ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕ ಶ್ರೀಕರ ಶೆಟ್ಟಿ ಕಲ್ಯಾ, ಡಾ. ಸೀತಾರಾಮ್ ಭಟ್, ಕಛೇರಿ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕ ಮಧುಕರ್ ಎಸ್, ಪ್ರಚಾರ ಸಮಿತಿ ಸಂಚಾಲಕ ಜಯರಾಮ್ ಆಚಾರ್ಯ, ಶ್ರೀಧರ್ ಕಾಂಚನ್, ಗ್ರಾಮ ಸಮಿತಿಯ ಮಹಿಳಾ ಮುಖ್ಯ ಸಂಚಾಲಕರುಗಳಾದ ಗೀತಾಂಜಲಿ ಸುವರ್ಣ, ಶಿಲ್ಪಾ. ಜಿ. ಸುವರ್ಣ, ಶೈಲಪುತ್ರಿ ತಂಡದ ಸಂಚಾಲಕರುಗಳಾದ ರವಿ ಭಟ್ ಮಂದಾರ, ಲಕ್ಷ್ಮೀಶ ತಂತ್ರಿ, ರಾಧಾರಮಣ ಶಾಸ್ತ್ರಿ ಮತ್ತು ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಉಡುಪಿ : ಹೆಜಮಾಡಿ ಟೋಲ್ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ

Posted On: 29-05-2024 11:47AM

ಉಡುಪಿ : ಹೆಜಮಾಡಿ ಟೋಲ್ ಹೋರಾಟ ಸಮಿತಿಯ ವತಿಯಿಂದ ಪಡುಬಿದ್ರಿ ಜಿಲ್ಲಾ ಪಂಚಾಯತ್ ‌ವ್ಯಾಪ್ತಿಗೆ ಟೋಲ್ ವಿನಾಯಿತಿ ನೀಡುವಂತೆ ಉಡುಪಿ ಜಿಲ್ಲಾಧಿಕಾರಿಯವರಿಗೆ ಬುಧವಾರ ಮನವಿ ನೀಡಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಚುನಾವಣಾ ನೀತಿ ಸಂಹಿತೆ ಮುಗಿದ ತಕ್ಷಣ ಈ ಬಗ್ಗೆ ಸಭೆ ಕರೆದು ತೀರ್ಮಾನಿಸಲಾಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ಟೋಲ್ ಹೋರಾಟ ಸಮಿತಿಯ ಅಧ್ಯಕ್ಷರಾದ ಶೇಖರ್ ಹೆಜ್ಮಾಡಿ, ಪದಾಧಿಕಾರಿಗಳಾದ ನವೀನಚಂದ್ರ ಜೆ ಶೆಟ್ಟಿ, ವಿಶ್ವಾಸ್ ಅಮೀನ್, ಅಬ್ದುಲ್ ಅಜೀಜ್ ಹೆಜಮಾಡಿ, ಸಂತೋಷ್ ಪಡುಬಿದ್ರಿ, ತಸ್ನೀನ್ ಅರಾ, ಜಹೀರ್ ಅಹಮ್ಮದ್ ಉಪಸ್ಥಿತರಿದ್ದರು.

ಉಡುಪಿ ಪಂದುಬೆಟ್ಟುವಿನ ಮಗುವಿಗೆ ನೆರವಾಗಿ

Posted On: 29-05-2024 10:41AM

ಉಡುಪಿ : ಇಲ್ಲಿನ ಪಂದುಬೆಟ್ಟು ನಿವಾಸಿಯಾದ ತ್ರಿಷಾ ವಿ ಪೂಜಾರಿ (5 ವರ್ಷ) ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಉಡುಪಿಯ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆ ಮಗುವಿನ ಚಿಕಿತ್ಸೆಗೆ 8 ಲಕ್ಷ ತಗಲುತ್ತದೆಯೆಂದು ವೈದ್ಯರು ತಿಳಿಸಿದ್ದಾರೆ. ಬಡ ಕುಟುಂಬವಾಗಿದ್ದು ಚಿಕಿತ್ಸಾ ವೆಚ್ಚವನ್ನು ಬರಿಸಲು ಸಾಧ್ಯವಿಲ್ಲದೆ ದಾನಿಗಳ ಸಹಾಯಧನ ನಿರೀಕ್ಷೆಯಲ್ಲಿದ್ದಾರೆ.

ಆದ್ದರಿಂದ ಉಡುಪಿಯ ನಮ್ಮ ಮೊಬೈಲ್ ಸಂಸ್ಥೆಯ ವತಿಯಿಂದ ಸಾಧ್ಯವಾದಷ್ಟು ಹಣವನ್ನು ಸಂಗ್ರಹಿಸಿ ಆ ಮಗುವಿನ ಚಿಕಿತ್ಸೆಗೆ ನೆರವು ನೀಡುವುದಾಗಿ ನಿರ್ಧರಿಸಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ವಿನಂತಿಸಿದ್ದಾರೆ.

Google pay : 9886836985 (Harish Amin) ಗೂಗಲ್ ಪೇ ನಲ್ಲಿ ಸಹಾಯಧನ ನೀಡಿದವರು Screen shot ಅನ್ನು ಈ ಸಂಖ್ಯೆಗೆ ಕಳುಹಿಸಿ.

ಕಾಪು : ದಂಡತೀರ್ಥ ಶಿಕ್ಷಣ ಸಂಸ್ಥೆಯಲ್ಲಿ ಶೈಕ್ಷಣಿಕ ಕಾರ್ಯಾಗಾರ

Posted On: 28-05-2024 06:31PM

ಕಾಪು : ಇಲ್ಲಿನ ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರವನ್ನು ಮಂಗಳವಾರ ಏರ್ಪಡಿಸಲಾಯಿತು.

ವಿದ್ಯಾಸಂಸ್ಥೆಯ ಸಂಚಾಲಕರಾದ ಡಾ.ಕೆ.ಪ್ರಶಾಂತ್ ಶೆಟ್ಟಿಯವರು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕಾದರೆ ಶಿಕ್ಷಕರು ಪ್ರತಿನಿತ್ಯ ಹಲವಾರು ತರಬೇತಿಯನ್ನು ಹಾಗೂ ಅನುಭವವನ್ನು ಪಡೆಯಬೇಕಾಗುತ್ತದೆ. ತಮ್ಮ ಜ್ಞಾನದ ಜೊತೆಗೆ ಇತರ ಕೌಶಲಗಳನ್ನು ಪಡೆದುಕೊಂಡಾಗ ಅತ್ಯುತ್ತಮ ಬೋಧನೆಗೆ ಪೂರಕವಾಗುತ್ತದೆ ಎಂಬ ಸಂದೇಶವನ್ನು ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಕೋಟ ವಿದ್ಯಾಸಂಸ್ಥೆಯ ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕರು ಹಾಗೂ ಸಾಹಿತ್ಯಕಾರ, ಟಿ.ವಿ.ನಿರೂಪಣೆಗಾರ, ನಿರ್ದೆಶಕ ರಂಗಕರ್ಮಿ, ಜೇಸಿಯ ತರಬೇತುದಾರರಾದ ನರೇಂದ್ರ ಕುಮಾರ್ ಕೋಟ ಮಾತನಾಡಿ ಶಿಕ್ಷಕರು ತಮ್ಮ ಕಲಿಕಾ ಆಸಕ್ತಿಯನ್ನು ಹೆಚ್ಚಿಸಿ ಕೊಳ್ಳಬೇಕಾದರೆ ಪರಿಪೂರ್ಣತೆಯನ್ನು ಹೊಂದಬೇಕಾದರೆ ವಿವಿಧ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬೇಕು, ವಿದ್ಯಾರ್ಥಿ ಮತ್ತು ಹೆತ್ತವರ ಮನೋಭಾವನೆಯನ್ನು ತಿಳಿದು ಬೋಧಿಸುವಂತಾಗಬೇಕು, ಪ್ರೀತಿ ಹಾಗೂ ನೀತಿಯಿಂದ ಕಲಿಸಿ ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿಸುವ ಜವಾಬ್ದಾರಿ ಶಿಕ್ಷಕರಲ್ಲಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಶೈಕ್ಷಣಿಕ ಸಂಯೋಜಕ ಶಿವಣ್ಣ ಬಾಯಾರ್, ಕನ್ನಡ ಮಾಧ್ಯಮದ ಪ್ರಭಾರ ಮುಖ್ಯೋಪಾಧ್ಯಾಯಿನಿ ಕೃಪಾ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಪ್ರಾಂಶುಪಾಲ ನೀಲಾನಂದ ನಾಯ್ಕ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಗೇಬ್ರಿಯಲ್ ಮಸ್ಕರೇನಸ್ ವಂದಿಸಿದರು.

ಶಿರ್ವ : ಸಿಡಿಲಾಘಾತದಿ ಮೃತಪಟ್ಟ ವಿದ್ಯಾರ್ಥಿಯ ಕುಟುಂಬದ ನೆರವಿಗೆ ಮನವಿ

Posted On: 28-05-2024 12:43PM

ಶಿರ್ವ : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮದ, ಮಟ್ಟಾರ್ ಅಂಚೆಯ ಮಾಣಿಬೆಟ್ಟು ವ್ಯಾಪ್ತಿಯ ಕೃಷಿ ಕೂಲಿ ಕಾರ್ಮಿಕರು, ಕೃಷಿಯನ್ನೇ ಅವಲಂಬಿತವಾಗಿ ಜೀವನ ನಡೆಸುತ್ತಿದ್ದ ರಮೇಶ್ ಪೂಜಾರಿ ಹಾಗು ರತ್ನ ಪೂಜಾರ್ತಿಯವರ ಮಗನಾದ ರಕ್ಷಿತ್ ಪೂಜಾರಿ (20) ಇವರು ಮೇ 23 ರಂದು ಸಾಯಂಕಾಲ ಸುಮಾರು 6.45 ರ ಹೊತ್ತಿಗೆ ಅಪ್ಪಳಿಸಿದ ಗುಡುಗು ಮಿಂಚಿನ ಆರ್ಭಟಕ್ಕೆ ಸಿಲುಕಿ ಮೃತಪಟ್ಟಿರುತ್ತಾರೆ.

ಒಬ್ಬನೇ ಮಗ ಮನೆಯ ಆಧಾರ ಸ್ಥಂಭವಾಗಿದ್ದ, ಆತನನ್ನು ಕಳೆದುಕೊಂಡ ಮನೆಯವರ ಪರಿಸ್ಥಿತಿಯು ಶೋಚನೀಯವಾಗಿದೆ. ಕೃಷಿ ಕೂಲಿಯನ್ನು ನಡೆಸಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.

ಸಹೃದಯಿಗಳಾದ ತಾವು, ವಿಧಿಯ ಕ್ರೂರ ಆಟಕ್ಕೆ ತುತ್ತಾಗಿ ಬಲಿಯಾದ ರಕ್ಷಿತ್ ರವರಿಗೆ ಚಿರಶಾಂತಿಯನ್ನು ಕೋರುವ ಮುಖೇನ , ಬಡ ಕುಟುಂಬಕ್ಕೆ ಸಹಾಯಾರ್ಥವಾಗಿ, ಸಹಾಯಧನವನ್ನು ಮಾಡಬಹುದಾಗಿದೆ.

ಸಹಾಯಧನವನ್ನು ಮಾಡುವವರು, ಈ ಕೆಳಕಂಡ ಬ್ಯಾಂಕ್ ಖಾತೆ ಸಂಖ್ಯೆಗೆ ಸಹಾಯಧನ ವರ್ಗಾವಣೆ ಮಾಡಬಹುದಾಗಿದೆ. ಹೆಸರು: ರತ್ನ ಪೂಜಾರ್ತಿ ಬ್ಯಾಂಕ್ ಹೆಸರು:union Bank of India ಬ್ಯಾಂಕ್ ಖಾತೆ ಸಂಖ್ಯೆ:520101043248329 IFSC:UBIN0913910 Branch :ಕಟ್ಟಿಂಗೇರಿ(moodubelle) Google pay number:9945354172 (ರತ್ನ ಪೂಜಾರ್ತಿ)

ಕಾಪು : ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ, ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಸಂಪನ್ನ

Posted On: 28-05-2024 12:40PM

ಕಾಪು : ಶ್ರೀದೇವಿ ಭಜನಾ ಮಂಡಳಿ ಮಂಡೇಡಿ ಇವರ ವತಿಯಿಂದ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಪ್ರಸಾದ್ ನೇತ್ರಾಲಯ, ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು, ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಇವರ ಸಹಯೋಗದೊಂದಿಗೆ ಶ್ರೀದೇವಿ ಭಜನಾ ಮಂಡಳಿ ಮಂಡೇಡಿ ಇಲ್ಲಿ ಉಚಿತ ಆರೋಗ್ಯ ತಪಾಸಣೆ, ಮಾಹಿತಿ ಹಾಗೂ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಭಜನಾ ಮಂಡಳಿಯ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ವಿ.ಜಿ.ಶೆಟ್ಟಿ ನೇರವೇರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಡಾ. ರೋಶ್ನಿ ಪೂಂಜಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಕೃಷ್ಣ ಮೂರ್ತಿಯವರು ಅಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಸಾದ್ ನೇತ್ರಾಲಯದ ತಜ್ಞ ವೈದ್ಯರಾದ ಡಾ|| ತೇಜಸ್ವಿನಿ, ನೇತ್ರಾಧಿಕಾರಿ ಅಮ‌ರ್, ಸಾರ್ವಜನಿಕ ಸಂಪರ್ಕಾಧಿಕಾರಿ ಹರ್ಷ, ಸಿ.ಎ. ಬ್ಯಾಂಕಿನ ಉಪಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಹಾಲು ಉತ್ಪಾದಕ ಸಂಘದ ಅಧ್ಯಕ್ಷರಾದ ಶಿವರಾಮ್ ಜೆ. ಶೆಟ್ಟಿ, ರಮೇಶ್ ಕೆ ಮಧ್ಯಸ್ಥರು, ರಮೇಶ್ ಶೆಟ್ಟಿ ಗೌರವ ಸಲಹೆಗಾರರು, ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಶ್ರೀದೇವಿ ಭಜನಾ ಮಂಡಳಿಯ ಅಧ್ಯಕ್ಷರಾದ ಲಕ್ಷ್ಮಣ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಕುಂತಳಾ ವಂದಿಸಿದರು.

ಹೊಟೇಲ್ ಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹ ಧನ ಅರ್ಜಿ ಆಹ್ವಾನ ; ಯಾರೆಲ್ಲಾ ಅರ್ಹರು?

Posted On: 28-05-2024 12:37PM

ಬೆಂಗಳೂರು : ಹೊಟೇಲ್ ಕಾರ್ಮಿಕರ ಮಕ್ಕಳಿಗಾಗಿ ಕರ್ನಾಟಕ ಹೊಟೇಲ್ ಕಾರ್ಮಿಕರ ಸಂಘ 2023-24 ನೇ ಸಾಲಿನ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು? ಹೇಗೆ ಅರ್ಜಿ ಸಲ್ಲಿಸಬಹುದು‌? ಈ ಎಲ್ಲಾ ಮಾಹಿತಿಗಳನ್ನು ಒಂದೊಂದಾಗಿ ನೋಡೋಣ.

ಅರ್ಜಿ ಹಾಕಲು ಅರ್ಹತೆಗಳೇನು? *ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ತಂದೆ ಅಥವಾ ತಾಯಿ ಹೊಟೇಲ್ ಕಾರ್ಮಿಕರಾಗಿರಬೇಕು ಮತ್ತು ಏಪ್ರಿಲ್ 30, 2024ರ ಒಳಗಾಗಿ ಕಡ್ಡಾಯವಾಗಿ ಹೊಟೇಲ್ ಕಾರ್ಮಿಕ ಸಂಘದ ಐಡಿ ಕಾರ್ಡ್ ಹೊಂದಿರಬೇಕು. * ವಿದ್ಯಾರ್ಥಿಯು 2023-24 ನೆ ಸಾಲಿನಲ್ಲಿ SSLC ಅಥವಾ PUC ಮುಗಿಸಿರಬೇಕು. * 2023-24ನೇ ಸಾಲಿನ SSLC ಅಥವಾ ಪಿಯುಸಿಯಲ್ಲಿ ಕಡ್ಡಾಯವಾಗಿ ಕನಿಷ್ಠ 80% ಅಂಕ ಪಡೆದಿರಬೇಕು. * ಜೂನ್ 15 ರ ಒಳಗೆ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. * ವಿದ್ಯಾರ್ಥಿಯ ಆಧಾರ್ ಕಾರ್ಡ್ ಮತ್ತು ಅಂಕಪಟ್ಟಿಯನ್ನು ಅರ್ಜಿಯ ಜೊತೆ ಕಡ್ಡಾಯವಾಗಿ ಲಗತ್ತಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ? * 9035655406 ಅಥವಾ 9743539990 ಗೆ ವಾಟ್ಸಪ್ ಮಾಡುವ ಮೂಲಕ ಅರ್ಜಿ ಪಡೆದುಕೊಳ್ಳಬೇಕು. * ಅರ್ಜಿಯಲ್ಲಿ ಕೇಳಿರುವ ಮಾಹಿತಿಯನ್ನು ತುಂಬಿಸಿ. * ಒಂದು ಇತ್ತೀಚಿನ ಭಾವಚಿತ್ರ, ಆಧಾರ್ ಕಾರ್ಡ್ ಮತ್ತು ಅಂಕ ಪ್ರತಿಗಳನ್ನು ಇರಿಸಿ. ಅನಫಾ ಗ್ರಾಂಡ್, ನಂ 1353 29 ನೇ ಮುಖ್ಯ ರಸ್ತೆ, ಉತ್ತರಹಳ್ಳಿ, ಪೂರ್ಣಪ್ರಜ್ಞಾ ಬಡಾವಣೆ ಬೆಂಗಳೂರು 560061, ಈ ವಿಳಾಸಕ್ಕೆ ಕಳುಹಿಸಿ ಕೊಡಿ. ಅರ್ಜಿಗಳನ್ನು ಪರಿಗಣಿಸಿ ಆಯ್ದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಶ್ರೀ ಸಾಯಿ ತುತ್ತು ಯೋಜನೆ ರಾಜ್ಯದೆಲ್ಲೆಡೆ ವಿಸ್ತರಿಸುವ ಸಂಕಲ್ಪ : ಶ್ರೀ ಸಾಯಿಈಶ್ವರ್ ಗುರೂಜಿ

Posted On: 28-05-2024 12:31PM

ಕಟಪಾಡಿ : ಶ್ರೀ ಸಾಯಿ ಮುಖ್ಯ ಪ್ರಾಣದೇವಸ್ಥಾನ ಶ್ರೀ ದ್ವಾರಕಾಮಯಿ ಮಠ ಇದರ ವತಿಯಿಂದ ವಿಶ್ವ ಹಸಿವು ದಿನಾಚರಣೆ ಕಾರ್ಯಕ್ರಮ ಮೇ.28ರಂದು ನಡೆಯಿತು. ಈ ಸಂದಭ೯ದಲ್ಲಿ ಮುಷ್ಠಿ ಅಕ್ಕಿ ಅಭಿಯಾನದ ಚಾಲನೆ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಬಿಜೆಪಿ ಮಹಿಳಾ ಮೋಚಾ೯ ಮಾಜಿ ಜಿಲ್ಲಾದ್ಯಕ್ಷೆ ವೀಣಾ ಶೆಟ್ಟಿ ಕ್ಷೇತ್ರದ ವತಿಯಿಂದ ಸಾಯಿ ತುತ್ತು ಯೋಜನೆ ಮೂಲಕ ಸಾವಿರಾರು ನಿಗ೯ತಿಕರಿಗೆ ಅನ್ನದಾನ ನಡೆಯುತ್ತಿದೆ. ಈ ಮೂಲಕ ಹಸಿವು ಮುಕ್ತ ಸಮಾಜದ ನಿಮಾ೯ಣಕ್ಕೆ ಗುರೂಜಿಯವರಿಗೆ ನಾವೆಲ್ಲರೂ ಸಹಕಾರ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕ್ಷೇತ್ರದ ಶ್ರೀ ಸಾಯಿ ಈಶ್ವರ ಗುರೂಜಿ, ಸಾಯಿ ತುತ್ತು ಯೋಜನೆ ರಾಜ್ಯದಲ್ಲೆಡೆ ವಿಸ್ತರಿಸುವ ಸಂಕಲ್ಪ ಹೊಂದಲಾಗಿದ್ದು, ಪ್ರತಿಯೊಂದು ಕುಟುಂಬ ಒಂದು ಮುಷ್ಟಿ ಅಕ್ಕಿಯನ್ನು ಸಮಾಜದ ನಿಗ೯ತಿಕರಿಗೆ ನೀಡಲು ತೆಗೆದಿಡಬೇಕು . ಆ ಮೂಲಕ ಹಸಿವು ಮುಕ್ತ ದೇಶದ ನಿರ್ಮಾಣಕ್ಕೆ ನಾವೆಲ್ಲರೂ ಕಂಕಣಭದ್ಧರಾಗಬೇಕು ಕ್ಷೇತ್ರದ ವತಿಯಿಂದ ವಿವಿಧ ರೀತಿಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳು ನಿತ್ಯ ನಿರಂತರ ನಡೆಯುತ್ತಿದ್ದು ಇದು ಎಲ್ಲರ ಸಹಕಾರದಿಂದ ಮತ್ತಷ್ಟು ವೇಗ ಪಡೆಯಿತುಕೊಳ್ಳುತ್ತಿರುವುದು ಸಂತೋಷದಾಯಕ ಎಂದರು.

ಈ ಸಂದಭ೯ದಲ್ಲಿ ಪ್ರಕಾಶ್ ಆಚಾರ್ಯ, ವಿಜಯ ಕುಂದರ್, ನಾರಾಯಣ ಪೂಜಾರಿ, ಶಿಲ್ಪಾ ಮಹೇಶ್ ಶ್ವೇತಾ ಜಯರಾಮ್, ಭಾರತಿ ಸಂಧ್ಯಾ ರಾಜೇಶ್, ಸತೀಶ್ ದೇವಾಡಿಗ, ವಿಘೇಶ್ ನೀಲಾವರ, ನಿಲೇಶ್ ಸುಪ್ರೀತಾ, ಲಕ್ಷ್ಮೀ ಮುಂತಾದವರು ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು, ಕವಾ೯ಲು ನಿರೂಪಿಸಿ, ವಂದಿಸಿದರು.