Updated News From Kaup
ಹೆಜಮಾಡಿ : ಟೋಲ್ ವಿನಾಯಿತಿ ರದ್ದು - ಮೇ 24ರಂದು ಮನವಿ ಸಲ್ಲಿಸಲು ಸಮಿತಿ ನಿರ್ಧಾರ
Posted On: 21-05-2024 11:40AM
ಹೆಜಮಾಡಿ : ಇಲ್ಲಿಯ ಟೋಲ್ ಪ್ಲಾಝಾದಲ್ಲಿ ಈ ಹಿಂದೆ ಹೆಜಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಹನಗಳಿಗೆ ಸುಂಕ ವಿನಾಯಿತಿ ನೀಡಲಾಗಿತ್ತು. ಕಳೆದ ವಾರದಿಂದ ವಿನಾಯಿತಿ ರದ್ದುಗೊಳಿಸಿ ಫಾಸ್ಟ್ಟ್ಯಾಗ್ನಲ್ಲಿ ಟೋಲ್ ಸುಂಕ ಕಡಿತಗೊಳಿಸಲಾಗಿತ್ತು. ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಸ್ಥಳೀಯರು ಹೋರಾಟಕ್ಕೆ ಸಿದ್ಧತೆ ನಡೆಸಿದ್ದು ಪೂರ್ವಭಾವಿಯಾಗಿ ಶಾಂತಿಯುತವಾಗಿ ಮೇ 24ರಂದು ಮನವಿ ಸಲ್ಲಿಸಲು ಹೆಜಮಾಡಿ ಟೋಲ್ ವಿರೋಧಿ ಹೋರಾಟ ಸಮಿತಿ ತೀರ್ಮಾನಿಸಿದೆ. ಹೆಜಮಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಹೆಜಮಾಡಿ ಟೋಲ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಅದರಂತೆ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಾಹನಗಳಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಲಾಯಿತು. ಹೆಜಮಾಡಿ ಒಳ ರಸ್ತೆಗೂ ಹೆದ್ದಾರಿ ಇಲಾಖೆ ಟೋಲ್ ಕೇಂದ್ರ ಸ್ಥಾಪಿಸಿರುವುದಕ್ಕೆ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು.
ಹೋರಾಟ ಸಮಿತಿಯ ಶೇಖರ್ ಹೆಜಮಾಡಿ, ಶೇಖಬ್ಬ ಕೋಟೆ, ನವೀನ್ಚಂದ್ರ ಜೆ. ಶೆಟ್ಟಿ, ವೈ. ಸುಕುಮಾರ್, ಅಬ್ದುಲ್ ಅಝೀಝ್ ಹೆಜಮಾಡಿ, ರೋಲ್ಫಿ ಡಿ ಕೋಸ್ತ, ಅಬ್ಬಾಸ್ ಹಾಜಿ, ವಿಶ್ವಾಸ್ ವಿ.ಅಮೀನ್, ಗಣೇಶ್ ಆಚಾರ್ಯ ಉಚ್ಚಿಲ, ಉಮಾನಾಥ್ ಕೋಟ್ಯಾನ್, ಅಬ್ದುಲ್ ರಹ್ಮಾನ್ ಕಣ್ಣಂಗಾರ್, ಅಬ್ಬಾಸ್ ಹಾಜಿ, ಸಂತೋಷ್ ಪಡುಬಿದ್ರಿ, ನಿರ್ಮಲಾ, ತೇಜ್ಪಾಲ್ ಸುವರ್ಣ, ರಘುವೀರ್ ಸುವರ್ಣ, ಸುಧೀರ್ ಕರ್ಕೇರ, ಸನಾ ಇಬ್ರಾಹಿಂ, ಸುಭಾಸ್ ಸಾಲ್ಯಾನ್, ಅರುಣ್ ಶೆಟ್ಟಿ, ಕೇಶವ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಮೇ 22: ಮುಂಡ್ಕೂರು ಮುಲ್ಲಡ್ಕ ದುಗ್ಗು ನಿವಾಸ ಗಾಂದೊಟ್ಯ ಮನೆಯಲ್ಲಿ ಸಿರಿ ಸಿಂಗಾರದ ನೇಮೋತ್ಸವ
Posted On: 20-05-2024 05:31PM
ಕಾರ್ಕಳ : ತಾಲೂಕಿನ ಮುಂಡ್ಕೂರು ಮುಲ್ಲಡ್ಕ ದುಗ್ಗು ನಿವಾಸ ಗಾಂದೊಟ್ಯ ಮನೆಯಲ್ಲಿ ಮೇ 22 ರ ರಾತ್ರಿ 8 ಗಂಟೆಯಿಂದ ಸತ್ಯದೇವತೆ, ವರ್ತೆ ಪಂಜುರ್ಲಿ ದೈವಗಳಿಗೆ ಸಿರಿ ಸಿಂಗಾರದ ನೇಮೋತ್ಸವ ನಡೆಯಲಿದೆ.
ಕಟಪಾಡಿ : ಶ್ರೀ ಶಂಕರಪುರ ಕ್ಷೇತ್ರದಲ್ಲಿ ಭಕ್ತರ ಇಷ್ಟಾರ್ಥ ನೆರವೇರಿಸುವ ಪಾನ ಪ್ರಿಯ ಕಾಲಭೈರವ ಸ್ವಾಮಿ
Posted On: 20-05-2024 03:51PM
ಕಟಪಾಡಿ : ಶ್ರೀ ಸಾಯಿ ಈಶ್ವರ್ ಗುರೂಜಿಯವರ ಸಂಕಲ್ಪದಲ್ಲಿ 2018 ರಂದು ಸ್ಥಾಪನೆಯಾದ ಪ್ರಾಣಿ-ಪಕ್ಷಿ ಮೋಕ್ಷಕಟ್ಟೆ ಬಳಿಕ ಈ ಕಟ್ಟೆಯಲ್ಲಿ ಕಾಲಭೈರವ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ.
ಉಜ್ಜಯಿನಿ ಸಂಕಲ್ಪದಲ್ಲಿ ಸೇವೆ ನಡೆಯಬೇಕು ಎಂದು ಗುರು ನೀಡಿದ ಆಜ್ಞೆಯಂತೆ 2023ರ ಡಿಸೆಂಬರ್ ನಲ್ಲಿ ದೇಶದಾದ್ಯಂತ ಶ್ರೀ ಕ್ಷೇತ್ರಕ್ಕೆ ಬಂದ 150ಕ್ಕೂ ಹೆಚ್ಚು ಸಾಧು-ಸಂತರ ಉಪಸ್ಥಿತಿಯಲ್ಲಿ ಶಿಲಾಮಯ ಗುಡಿಯಲ್ಲಿ ಕಾಲಭೈರವ ಸ್ವಾಮಿಯ ಪ್ರತಿಷ್ಠೆ ನಡೆದಿತ್ತು.
ಅಂದಿನಿಂದ ಈ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ತಮ್ಮ ಪ್ರಾರ್ಥನೆಯನ್ನು ಕಾಲಭೈರವ ಸ್ವಾಮಿಗೆ ಸಲ್ಲಿಸಿ ಸಮಸ್ಯೆಗಳನ್ನು ಪರಿಹರಿಸಿಕೊಂಡ ಸಾವಿರಾರು ಉದಾಹರಣೆಗಳಿವೆ. ಕಾಲಭೈರವ ಸ್ವಾಮಿಗೆ ಉಜ್ಜಯಿನಿಯ ಸಂಕಲ್ಪದಂತೆ ಪ್ರತಿದಿನ ಸಂಜೆ ಭಕ್ತರು ನೀಡಿದ ಮದ್ಯವನ್ನು ನೈವೇದ್ಯವಾಗಿ ಸಲ್ಲಿಸಲಾಗುತ್ತದೆ.
2024 ಮೇ 19ರ ಆದಿತ್ಯವಾರ ಸಂಜೆ ನೈವೇದ್ಯ ಸೇವೆಯನ್ನು ಸಮರ್ಪಿಸುವಾಗ ಮಧ್ಯ ಹಾಕಿದ ತಟ್ಟೆಯಿಂದ ಮದ್ಯವನ್ನು ಹೀರಿಕೊಳ್ಳುವ ಘಟನೆಯನ್ನು ಆಶ್ಚರ್ಯಚಕಿತರಾಗಿ ಗಮನಿಸಿದ ಭಕ್ತರು ವಿಡಿಯೋ ಚಿತ್ರೀಕರಣ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾದ ಕಾರಣ ಮತ್ತಷ್ಟು ಭಕ್ತರನ್ನು ಶ್ರೀ ಕ್ಷೇತ್ರಕ್ಕೆಆಕರ್ಷಿಸುತ್ತಿದೆ. ಮಧ್ಯ ನೀಡುವುದರಿಂದ ಭಕ್ತರಿಗೆ ಬರುವ ಅನಾರೋಗ್ಯ, ಸಂಕಷ್ಟ ನೋವುಗಳನ್ನ ತನ್ನಲ್ಲಿಗೆ ಹೀರಿಕೊಳ್ಳುತ್ತಿದ್ದಾನೆ ಎಂಬ ನಂಬಿಕೆ ಭಕ್ತರದ್ದಾಗಿದೆ.
ಉಡುಪಿ : ಜನತಾದಳ ಪಕ್ಷ ಉಡುಪಿ ಜಿಲ್ಲಾ ಘಟಕದ ವತಿಯಿಂದ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ಹುಟ್ಟುಹಬ್ಬ ಆಚರಣೆ
Posted On: 20-05-2024 01:29PM
ಉಡುಪಿ : ಜನತಾದಳ ಜಾತ್ಯಾತೀತ ಪಕ್ಷ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿಗಳು, ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್. ಡಿ.ದೇವೇಗೌಡರ ಹುಟ್ಟುಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.
ದೇವೇಗೌಡರ ಭಾವಚಿತ್ರಕ್ಕೆ ಹಾಲಿನ ಅಭಿಷೇಕವನ್ನು ಮಾಡುವ ಮೂಲಕ ಜಿಲ್ಲಾಧ್ಯಕ್ಷರಾದ ಯೋಗಿಶ್ ವಿ ಶೆಟ್ಟಿ ಯವರು ಹುಟ್ಟುಹಬ್ಬ ಆಚರಿಸಿದರು. ಈ ಸಂದರ್ಭ ಅವರು ಮಾತನಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ, ಕಾಂಗ್ರೆಸ್ ಪಕ್ಷ ಷಡ್ಯಂತರವನ್ನು ಮಾಡುವ ಮುಖಾಂತರ ಅನೇಕ ಬೆಳವಣಿಗೆಯನ್ನು ಕರ್ನಾಟಕದಲ್ಲಿ ಮಾಡುತ್ತಿದೆ. ತನ್ನ ಕಾರ್ಯಕರ್ತರ ಮುಖಾಂತರ ದೇವೇಗೌಡರ ಭಾವಚಿತ್ರಕ್ಕೆ ಮಸಿಯನ್ನು ಬಳಿದಿದ್ದಾರೆ ಇದು ಅತ್ಯಂತ ಕ್ರೂರವಾದ ಕೃತ್ಯ, ಮಾಜಿ ಪ್ರಧಾನಿ ಆದಂತಹ ದೇವೇಗೌಡರು ನಮ್ಮ ರಾಜ್ಯಕ್ಕೆ ದೇಶಕ್ಕೆ ಯಾವ ಕೊಡುಗೆಯನ್ನು ಕೊಟ್ಟಿದ್ದಾರೆ ಎಂಬುದು ನಾಡಿನ ಜನತೆಗೆ ಗೊತ್ತಿದೆ. ಅದಕ್ಕೋಸ್ಕರವಾಗಿ ನಾವಿವತ್ತು ಅವರ ಹುಟ್ಟುಹಬ್ಬವನ್ನು ಆಚರಿಸಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕವನ್ನು ಮಾಡಿದ್ದೇವೆ. ಏನು ಇವರು ಮಸಿ ಬಳಿದಿದ್ದಾರೆ ಇದೆಲ್ಲವೂ ಪರಿಶುದ್ಧವಾಗಲಿ, ದೇವೇಗೌಡರು ಇನ್ನಷ್ಟು ವರ್ಷ ಬಾಳಲಿ, ಅವರಿಗೆ ಒಳ್ಳೆಯಆಯುಷ್ಯ, ಆರೋಗ್ಯವನ್ನು ಭಗವಂತ ಕರುಣಿಸಲಿ ಇನ್ನಷ್ಟು ರಾಜ್ಯಕ್ಕೆ ದೇಶಕ್ಕೆ ಅವರ ಸೇವೆ ದೊರಕಲಿ ಅದರೊಂದಿಗೆ ನಮ್ಮ ಪಕ್ಷ ವನ್ನೂ ಕಟ್ಟಿ ಬೆಳೆಸುವಂತಹ ಹುಮ್ಮಸ್ಸು ಅವರಲ್ಲಿ ಇದೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ನೈರುತ್ಯ ಶಿಕ್ಷಣ ಕ್ಷೇತ್ರ ಮತ್ತು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ/ಜೆಡಿಎಸ್ ಜಂಟಿ ಅಭ್ಯರ್ಥಿಗಳಾದ ಎಸ್. ಎಲ್ ಭೋಜೇಗೌಡ ಮತ್ತು ಡಾ. ಧನಂಜಯ್ ಸರ್ಜೆ ಇವರ ಗೆಲುವಿಗೆ ಯಾವ ರೀತಿಯಾಗಿ ಕಾರ್ಯಕರ್ತರು ಕಾರ್ಯ ಪ್ರವೃತ್ತರಾಗಬೇಕು ಎಂಬುದರ ಬಗ್ಗೆ ಚರ್ಚಿಸಲಾಯಿತು.
ಜಿಲ್ಲಾ ಕಾರ್ಯಾಧ್ಯಕ್ಷರಾದ ವಾಸುದೇವ ರಾವ್, ಜಯಕುಮಾರ್ ಪರ್ಕಳ, ರಮೇಶ್ ಕುಂದಾಪುರ, ಗಂಗಾಧರ್ ಭಿರ್ತಿ, ರಾಮರಾವ್, ರಶೀದ್, ಕೀರ್ತಿರಾಜ್, ಶ್ರೀಕಾಂತ್ ಕಾರ್ಕಳ, ಎಂ.ಡಿ ರಫೀಕ್, ವೆಂಕಟೇಶ್ ಎಂ.ಟಿ, ದೇವರಾಜ ತೊಟ್ಟಂ, ಪದ್ಮನಾಭ. ಆರ್. ಕೋಟ್ಯಾನ್, ರಂಗ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಕಟಪಾಡಿ : ಕೋಟೆ ನಾಗರಿಕ ಸೇವಾ ಸಮಿತಿ ವತಿಯಿಂದ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ; ಸನ್ಮಾನ
Posted On: 19-05-2024 03:49PM
ಕಟಪಾಡಿ : ಸಾಧಿಸುವ ಮನಸ್ಸುಗಳಿಗೆ ಹುಟ್ಟೂರ ಸನ್ಮಾನ ಅತಿ ಮುಖ್ಯವಾಗಿರೋದು. ನಮ್ಮೂರಿನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ನಾವು ಗುರುತಿಸಿರುವುದು ಹೆಮ್ಮೆಯ ಸಂಗತಿ ಇದು ವಿದ್ಯಾರ್ಥಿಗಳಿಗೆ ಇನ್ನೊಂದಷ್ಟು ಸ್ಪೂರ್ತಿಯ ಜೊತೆಗೆ ಜವಾಬ್ದಾರಿಯನ್ನು ನೀಡುತ್ತದೆ ಎಂದು ಕಟಪಾಡಿಯ ಸೃಷ್ಟಿ ಫೌಂಡೇಶನ್ ಅಧ್ಯಕ್ಷರಾದ ಪ್ರಕಾಶ್ ಸುವರ್ಣ ಕಟಪಾಡಿ ಹೇಳಿದರು. ಅವರು ಕೋಟೆ ನಾಗರಿಕ ಸೇವಾ ಸಮಿತಿ ವತಿಯಿಂದ ಕೋಟೆ ಸೌಜನ್ಯ ನಿಲಯದಲ್ಲಿ ಭಾನುವಾರ ನಡೆದ ಅತ್ಯಧಿಕ ಅಂಕ ಗಳಿಸಿದ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ - ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಯೋಗೀಶ್ ವಿ.ಕೋಟ್ಯಾನ್ ಮಾತನಾಡಿ, ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಗೌರವಿಸಿ, ಪ್ರೋತ್ಸಾಹ ನೀಡಿದ್ದಲ್ಲಿ ಮುಂದಿನ ಶೈಕ್ಷಣಿಕ ವ್ಯಾಸಂಗಕ್ಕೆ ಉತ್ತೇಜನ ನೀಡಿದಂತಾಗುತ್ತದೆ ಎಂದರು.
10ನೇ ತರಗತಿಯ ಪರೀಕ್ಷೆಯಲ್ಲಿ 90 ಶೇಕಡಕ್ಕಿಂತ ಹೆಚ್ಚು ಅಂಕಗಳಿಸಿದ ಮುನಿಶಾ ಆರ್ ಕೋಟ್ಯಾನ್, ಪೂರ್ವಿ ಜೆ ಸಾಲಿಯಾನ್, ಧನ್ಯಶ್ರೀ, ನವ್ಯ ಡಿ.ಜತ್ತನ್, ಧನುಷ್ ,ಲಿಖಿತ್ ಆರ್. ಜೆ ಜತ್ತನ್ ಇವರನ್ನು ಸನ್ಮಾನಿಸಲಾಯಿತು.
ಕೋಟೆ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷರಾದ ಕೃಷ್ಣ ಅಮೀನ್ ಕೋಟೆ, ಬೆಂಗಳೂರಿನ ಮೋರ್ಗೆನ್ ಸ್ಟಾನ್ಲಿ ಸಂಸ್ಥೆಯ ಉಪಾಧ್ಯಕ್ಷ ರೋಷನ್ ಪೂಜಾರಿ, ಪ್ರಸನ್ನ ಕೋಟೆ, ಸ್ಥಳೀಯರಾದ ಗೀತಾ ಬಿ ಶೆಟ್ಟಿ, ಸಂಜೀವ್ ಮೆಂಡನ್ ಉಪಸ್ಥಿತರಿದ್ದರು. ಕಟಪಾಡಿ ಸ್ವಸ್ತಿಕ್ ಕಲಾಸಂಘದ ಅಧ್ಯಕ್ಷರಾದ ರಮೇಶ್ ಕೋಟ್ಯಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಧೀರಜ್ ಬೆಳ್ಳಾರೆ ನಿರೂಪಿಸಿದರು. ಕಾರ್ತಿಕ್ ವಂದಿಸಿದರು.
ಮೇ 19 - 20 : ಪರಿಚಯ ಪ್ರತಿಷ್ಠಾನ ಪಾಂಬೂರು - ಬಹುಮುಖಿ 2024 ಸಾಂಸ್ಕೃತಿಕ ಉತ್ಸವ
Posted On: 19-05-2024 10:35AM
ಕಾಪು : ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವ ಪಾಂಬೂರಿನ ಪರಿಚಯ ಪ್ರತಿಷ್ಠಾನವು ಬಹುಮುಖಿ 2024 ಸಾಂಸ್ಕೃತಿಕ ಉತ್ಸವವನ್ನು ಇದೇ ಮೇ 19 ಮತ್ತು ಮೇ 20ರಂದು ಪಾಂಬೂರು ರಂಗಪರಿಚಯದಲ್ಲಿ ಆಯೋಜಿಸಿದೆ.
ಮೇ 19ರಂದು ಕೊಂಕಣಿಯ ಖ್ಯಾತ ನಾಟಕಕಾರ ಡೊ. ಫಾದರ್ ಆಲ್ವಿನ್ ಸೆರಾವೊರವರೊಂದಿಗೆ ಮುಖಾಮುಖಿ, ಸಂವಾದ ಹಾಗೂ ಗೌರವಾರ್ಪಣೆಯ ರಂಗ್ತರoಗ್ ಕಾರ್ಯಕ್ರಮ ಜರಗಲಿದೆ. ಸಂವಾದದ ಬಳಿಕ ಅಸ್ತಿತ್ವ (ರಿ), ಮಂಗಳೂರು ತಂಡದಿOದ ಕ್ರಿಸ್ಟೋಫರ್ ನೀನಾಸಮ್ ನಿರ್ದೇಶನದ ಪ್ರಸಿದ್ದ ಕೊಂಕಣಿ ನಾಟಕ ‘ಸಳ್ಗಿ’ ಪ್ರದರ್ಶನಗೊಳ್ಳಲಿದೆ. ಮೇ 20ರಂದು ದೇಶವಿದೇಶಗಳಲ್ಲಿ ಖ್ಯಾತಿ ಗಳಿಸಿರುವ ಯುವಸಂಗೀತಗಾರ ಈಶಾನ್ ಫೆರ್ನಾಂಡಿಸ್ ಮತ್ತು ತಂಡದಿOದ “Transcending Boundaries-II” ಜಾಗತಿಕ ವಿವಿಧ ಭಾಷೆಗಳ ಸಂಗೀತ ರಸಮಂಜರಿ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.
ಅಂತರಾಷ್ಟ್ರೀಯ ಖ್ಯಾತಿಯ ಕುಂಚ ಕಲಾವಿದ ವಿಲ್ಸನ್ ಕಯ್ಯಾರ್ರವರು ಎಲ್ಲಾ ಹಾಡುಗಳನ್ನು ತನ್ನ ಕುಂಚ ಕೈಚಳಕದಿಂದ ವಿವಿಧ ವರ್ಣಗಳಲ್ಲಿ ಚಿತ್ರಿಸಲಿದ್ದಾರೆ.
ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿದ್ದು ಕಲಾಸಕ್ತರಿಗೆ ಹಾರ್ದಿಕ ಸ್ವಾಗತ. ಎಲ್ಲಾ ಕಾರ್ಯಕ್ರಮಗಳು ಸಾಯಂಕಾಲ ಗಂಟೆ 6.30ಕ್ಕೆ ಸರಿಯಾಗಿ ಆರಂಭಗೊಳ್ಳಲಿವೆ ಎಂದು ಪರಿಚಯ ಪ್ರಕಟಣೆ ತಿಳಿಸಿದೆ.
ಕರಾವಳಿ ಸೊಗಡಿನ ಸದಭಿರುಚಿಯ ಚಿತ್ರಗಳ ನಿರ್ಮಾಣಕ್ಕೆ ಹೆಚ್ಚಿನ ಒಲವು ತೋರಬೇಕಿದೆ : ಬಿ.ಜಯಕರ್ ಶೆಟ್ಟಿ ಇಂದ್ರಾಳಿ
Posted On: 19-05-2024 10:19AM
ಉಡುಪಿ : ಸಿನೆಮಾಗಳಲ್ಲಿ ಕರಾವಳಿಯ ಕಲಾವಿದರು, ತಂತ್ರಜ್ಞರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ಮಾಡುತ್ತಿದ್ದು, ನಮ್ಮ ಕರಾವಳಿಯ ಸೊಗಡನ್ನು ಪ್ರತಿಬಿಂಬಿಸುವ ಸದಭಿರುಚಿಯ ಚಿತ್ರಗಳ ನಿರ್ಮಾಣಕ್ಕೆ ಹೆಚ್ಚಿನ ಒಲವು ತೋರಬೇಕಿದೆ ಎಂದು ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ. ಅಮ್ಚೆ ಕ್ರಿಯೇಷನ್ಸ್ ಬ್ಯಾನರ್ ನಡಿ ನಿರ್ಮಾಣಗೊಳ್ಳುತ್ತಿರುವ ಪ್ರೊಡಕ್ಷನ್ ನಂ.1 ಮಕ್ಕಳ ಕನ್ನಡ ಚಲನಚಿತ್ರದ ಕಲಾವಿದರ ಆಯ್ಕೆ ಶಿಬಿರವನ್ನು ಜಗನ್ನಾಥ ಸಭಾ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಶಿರ್ವ ಮಾತನಾಡಿ, ಕರಾವಳಿಯಲ್ಲಿ ಕೊಂಕಣಿ, ಕನ್ನಡ, ತುಳು ಭಾಷೆಯ ಚಿತ್ರಗಳಿಗೆ ಉತ್ತಮ ಪ್ರೇಕ್ಷಕರಿದ್ದಾರೆ. ಮೂರು ಭಾಷೆಗಳ ಸಿನೆಮಾಗಳ ನಿರ್ಮಾಣಕ್ಕೆ ವಿಫುಲ ಅವಕಾಶಗಳಿವೆ ಎಂದರು.
ಚಲನಚಿತ್ರ ಕಲಾವಿದರಾದ ಶೋಭರಾಜ್ ಪಾವೂರು, ರಾಹುಲ್ ಅಮೀನ್, ವಿನೀತ್ ಕುಮಾರ್, ಶೈಲಶ್ರೀ ಮುಲ್ಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನಿರ್ಮಾಪಕರಾದ ದತ್ತಾತ್ರೇಯ ಪಾಟ್ಕರ್, ನಿರ್ದೇಶಕ ಪ್ರಕಾಶ ಸುವರ್ಣ ಕಟಪಾಡಿ, ಚಂದ್ರಕಲಾ ರಾವ್, ಕ್ಲಿಂಗ್ ಜಾನ್ಸನ್ ಉಪಸ್ಥಿತರಿದ್ದರು. ಚಿತ್ರ ನಿರ್ದೇಶಕ ಸಂದೀಪ್ ಕಾಮತ್ ಸ್ವಾಗತಿದರು. ಛಾಯಾಗ್ರಾಹಕ ಭುವನೇಶ್ ಪ್ರಭು ವಂದಿಸಿದರು.
ಟೋಲ್ ನಲ್ಲಿ ಸ್ಥಳೀಯ ವಾಹನಗಳಿಗೆ ನೀಡಿದ ವಿನಾಯಿತಿ ರದ್ದು ಪಡಿಸಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ : ಶೇಖರ್ ಹೆಜ್ಮಾಡಿ
Posted On: 18-05-2024 09:58PM
ಹೆಜಮಾಡಿ : ಹೆಜಮಾಡಿ, ಸಾಸ್ತಾನ ಹಾಗು ತೊಕ್ಕೊಟ್ಟು ಟೋಲ್ ಪ್ಲಾಜಾಗಳನ್ನು ಹೊಸ ಕಂಪನಿಯು ಟೋಲ್ ಸಂಗ್ರಹಕ್ಕೆ ಗುತ್ತಿಗೆ ಪಡೆದಿದ್ದು, ಈ ಹಿಂದೆ 2016 ರಿಂದ ನಿರಂತರವಾಗಿ ಹೋರಾಟ ಮಾಡುವುದರ ಮೂಲಕ ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿಯನ್ನು ಪಡೆದಿರುತ್ತೇವೆ. ಸದ್ಯ ಟೋಲ್ ಪ್ಲಾಜಾದ ಅಧಿಕಾರಿಗಳು ಸ್ಥಳೀಯ ವಾಹನಗಳು ಟೋಲ್ ನಲ್ಲಿ ಸಂಚಾರಿಸಿದಾಗ ಅವರ ಪಾಸ್ಟ್ ಟಾಗ್ ನಿಂದ ಹಣ ಕಡಿತಗೊಳಿಸುವ ಪ್ರಕ್ರಿಯೆ ಬಗ್ಗೆ ಸ್ಥಳೀಯ ವಾಹನ ಮಾಲೀಕರಿಂದ ದೂರುಗಳು ಬಂದಿರುತ್ತದೆ. ಸ್ಥಳೀಯರಿಗೆ ನೀಡಿದ ಟೋಲ್ ವಿನಾಯಿತಿಯನ್ನು ಸಂಪೂರ್ಣ ಕಿತ್ತು ಹಾಕುವ ಹುನ್ನಾರವಿದು.
ಟೋಲ್ ಪ್ಲಾಜಾದಲ್ಲಿ ಕಂಪನಿಯು ಕೋಟ್ಯಾಂತರ ರೂಪಾಯಿಯನ್ನು ಸಾರ್ವಜನಿಕರಿಂದ ಟೋಲ್ ನೆಪದಲ್ಲಿ ಸಂಗ್ರಹಿಸಿ ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ನೀಡುವಲ್ಲಿ ವಿಫಲಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯ ದುರವಸ್ಥೆಯನ್ನು ಹೇಳತಿರದು. ದಿನನಿತ್ಯ, ಪ್ರತಿ ಕ್ಷಣ ರಾಷ್ಟ್ರೀಯ ಹೆದ್ದಾರಿಯ ಅಸಮರ್ಪಕ ನಿರ್ವಹಣೆಯಿಂದ ಸಾರ್ವಜನಿಕರ ಅಮೂಲ್ಯ ಜೀವಗಳು ಬಲಿಯಾಗುತ್ತಿರುವುದು ರೂಢಿಯಾಗಿದೆ.
ಈ ಬಗ್ಗೆ ಕಂಪನಿಯು ಯಾವುದೇ ಪರಿಹಾರವನ್ನು ನೀಡುವುದಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಜಮಾಡಿ ಟೋಲ್ ನಲ್ಲಿ ಸ್ಥಳೀಯ ಲೋಕೋಪಯೋಗಿ ರಸ್ತೆಗೆ ಟೋಲ್ ನಿಗದಿಪಡಿಸಿದ್ದು ಕಂಪನಿಯ ಕಾನೂನು ಬಾಹಿರ ಕ್ರಮವಾಗಿರುತ್ತದೆ. ಅನೇಕ ಹೋರಾಟಗಳ ಮೂಲಕ ಸ್ಥಳೀಯ ಯುವ ಜನರಿಗೆ ಉದ್ಯೋಗವನ್ನು ನೀಡಿದ್ದು, ಸದ್ಯ ಸ್ಥಳೀಯ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯು ಕಂಪನಿಯಿಂದ ನಡೆಯುತ್ತಿರುವುದು ಕಂಡು ಬಂದಿದೆ.
ಸ್ಥಳೀಯ ವಾಹನಗಳಿಗೆ ಈ ಹಿಂದೆ ನೀಡಿದ ವಿನಾಯಿತಿಯನ್ನು ವಜಾಗೊಳಿಸಿದರೆ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಖಾಸಗಿ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡುವುದರ ಮೂಲಕ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಜನಪ್ರತಿನಿಧಿಗಳ, ವಾಹನ ಮಾಲಿಕರ ಹಾಗು ಸಾರ್ವಜನಿಕರ ಸಭೆಯನ್ನು ಕರೆದು ಚರ್ಚಿಸಿ ಮುಂದಿನ ಹೋರಾಟಗಳ ರೊಪರೇಷೆಗಳನ್ನು ಸಿದ್ದ ಪಡಿಸಲಾಗುವುದು ಎಂದು ಟೋಲ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷರಾದ ಶೇಖರ ಹೆಜ್ಮಾಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪಿಯು ಕಾಲೇಜಿನ 21 ವಿದ್ಯಾರ್ಥಿಗಳು ಆಯ್ಕೆ
Posted On: 16-05-2024 09:13PM
ಕಾರ್ಕಳ : Institute of Company Secretary of India ರವರು ಮೇ 4, 2024 ರಲ್ಲಿ ನಡೆಸಿದ ಅತ್ಯಂತ ಕಠಿಣಕರವಾದ CSEET ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಾದ ಭಕ್ತಿ ಕಾಮತ್, ಸಾನ್ವಿ ರಾವ್, ಶೆಟ್ಟಿ ತ್ರಿಶಾ ವಿಠ್ಠಲ್, ಹೃತಿಕ್,ಜೀವನ್ ಗೌಡ, ಆಶೆಲ್,ಕೀರ್ತಿ ಪಾಟ್ಕರ್, ಅನ್ವಿತ, ಭವಿಷ್ಯ ಶೆಟ್ಟಿ, ರಾಹುಲ್, ಅನನ್ಯ ಜೈನ್, ಪ್ರತ್ವೀಕ್, ಪ್ರಥಮ್,ಎ.ಎಸ್. ಚಿನ್ಮಯ, ಪ್ರಜ್ವಲ್ ರಾವ್, ಸುಖಿ ಸುಭಾಶ್, ಶ್ರೇಯಾ, ವಿನಯ್ ಪ್ರಶಾಂತ್, ಸುಪ್ರೀತ್ ಹೆಗ್ಡೆ, ಶ್ರೀ ಹರಿ ಹಾಗೂ ಸುವಿಕ್ಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.
ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಅತೀ ಕಷ್ಟಕರವಾದ ಪರೀಕ್ಷೆ ಇದಾಗಿದ್ದು ಕ್ರಿಯೇಟಿವ್ನ ವಿದ್ಯಾರ್ಥಿಗಳು ಪಿ ಯು ಸಿ ಯಲ್ಲೇ ಮೊದಲ ಹಂತದಲ್ಲೇ ತೇರ್ಗಡೆ ಹೊಂದಿರುವುದು ವಿಶೇಷವಾಗಿದೆ.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕ್ರಿಯೇಟಿವ್ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್, ಆಡಳಿತ ಮಂಡಳಿಯವರು, CSEET ಸಂಯೋಜಕರಾದ ಜ್ಞಾನೇಶ್ ಕೋಟ್ಯಾನ್, ಉಪನ್ಯಾಸಕ ವರ್ಗದವರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.
ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪಿಯು ಕಾಲೇಜಿನ 21 ವಿದ್ಯಾರ್ಥಿಗಳು ಆಯ್ಕೆ
Posted On: 16-05-2024 09:12PM
ಕಾರ್ಕಳ : Institute of Company Secretary of India ರವರು ಮೇ 4, 2024 ರಲ್ಲಿ ನಡೆಸಿದ ಅತ್ಯಂತ ಕಠಿಣಕರವಾದ CSEET ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಾದ ಭಕ್ತಿ ಕಾಮತ್, ಸಾನ್ವಿ ರಾವ್, ಶೆಟ್ಟಿ ತ್ರಿಶಾ ವಿಠ್ಠಲ್, ಹೃತಿಕ್,ಜೀವನ್ ಗೌಡ, ಆಶೆಲ್,ಕೀರ್ತಿ ಪಾಟ್ಕರ್, ಅನ್ವಿತ, ಭವಿಷ್ಯ ಶೆಟ್ಟಿ, ರಾಹುಲ್, ಅನನ್ಯ ಜೈನ್, ಪ್ರತ್ವೀಕ್, ಪ್ರಥಮ್,ಎ.ಎಸ್. ಚಿನ್ಮಯ, ಪ್ರಜ್ವಲ್ ರಾವ್, ಸುಖಿ ಸುಭಾಶ್, ಶ್ರೇಯಾ, ವಿನಯ್ ಪ್ರಶಾಂತ್, ಸುಪ್ರೀತ್ ಹೆಗ್ಡೆ, ಶ್ರೀ ಹರಿ ಹಾಗೂ ಸುವಿಕ್ಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.
ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಅತೀ ಕಷ್ಟಕರವಾದ ಪರೀಕ್ಷೆ ಇದಾಗಿದ್ದು ಕ್ರಿಯೇಟಿವ್ನ ವಿದ್ಯಾರ್ಥಿಗಳು ಪಿ ಯು ಸಿ ಯಲ್ಲೇ ಮೊದಲ ಹಂತದಲ್ಲೇ ತೇರ್ಗಡೆ ಹೊಂದಿರುವುದು ವಿಶೇಷವಾಗಿದೆ.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕ್ರಿಯೇಟಿವ್ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್, ಆಡಳಿತ ಮಂಡಳಿಯವರು, CSEET ಸಂಯೋಜಕರಾದ ಜ್ಞಾನೇಶ್ ಕೋಟ್ಯಾನ್,ಉಪನ್ಯಾಸಕ ವರ್ಗದವರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.