Updated News From Kaup

ಬಂಟಕಲ್ಲು ಸಾಮೂಹಿಕ ವಾಹನ ಪೂಜೆ

Posted On: 02-11-2024 06:56PM

ಬಂಟಕಲ್ಲು : ವಾಹನಗಳನ್ನು ಚಲಾಯಿಸುವಾಗ ಸಾರಿಗೆ ನಿಯಮವನ್ನು ಪಾಲಿಸುವುದರೊಂದಿಗೆ ಶ್ರಧ್ಧಾ ಭಕ್ತಿಯಿಂದ ವಾಹನ ಚಲಾಯಿಸಿದರೆ ಅಫಘಾತರಹಿತವಾಗಿ ಸುರಕ್ಷಿತ ಚಾಲನೆ ಸಾಧ್ಯವಾಗುವುದು ಎಂದು ಶಿರ್ವ ಪೊಲೀಸ್ ಠಾಣಾಧಿಕಾರಿ ಶಕ್ತೀವೇಲುರವರು ತಿಳಿಸಿದರು. ಅವರು ಬಂಟಕಲ್ಲು ರಾಜಾಪುರ ಸಾರಸ್ವತ ಸೇವಾ ವೃಂದದ ಆಶ್ರಯದಲ್ಲಿ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ 9 ನೇ ವರ್ಷದ ಸಾಮೂಹಿಕ ವಾಹನ ಪೂಜೆಗೆ ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿ ಮಾತನಾಡಿದರು. ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣುವ ವಾಹನ ಪೂಜೆಯು ವಾಹನಗಳ ಮೇಲಿನ ಶ್ರದ್ಧೆ, ಭಕ್ತಿಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದರು.

ನ. 4 : ಕಾಪು ಪೊಲಿಪುವಿನ ಮಿಸ್ಕೀನ್ ಎಂಪವರ್ ಮೆಂಟ್ ಫೌಂಡೇಶನ್ ಸಂಸ್ಥೆಯ ದಶಮಾನೋತ್ಸವ

Posted On: 02-11-2024 04:38PM

ಕಾಪು : ಇಲ್ಲಿನ ಪೊಲಿಪು ಜಾಮಿಯಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಮಿಸ್ಕೀನ್ ಎಂಪವರ್ ಮೆಂಟ್ ಫೌಂಡೇಶನ್ ಪೊಲಿಪು, ಕಾಪು ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮ ನವೆಂಬರ್ 4 ರಂದು ಸಂಜೆ 6ಗಂಟೆಗೆ ಕಾಪುವಿನ ಮಜೂರು ಸರ್ಕಲ್ ಬಳಿಯ ಖಾಸಗಿ ಮೈದಾನದಲ್ಲಿ ಜರಗಲಿದೆ ಎಂದು ಸಂಸ್ಥೆಯ ಸಲಹೆಗಾರ ಅಮೀರ್ ಹಂಝ ಹೇಳಿದರು. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನ. 23 - 24 : ಕೋಸ್ಟಲ್ ಕಾರ್ನಿವಾಲ್ ಪಡುಬಿದ್ರಿ 2024 ; ಎರಡು ದಿನದ ಬೀಚ್ ಉತ್ಸವ

Posted On: 02-11-2024 04:25PM

ಪಡುಬಿದ್ರಿ : ಜೆಸಿಐ ಪಡುಬಿದ್ರಿ ಇದರ 50 ನೇ ವರ್ಷ ಆಚರಣೆಯ ಸಂಭ್ರಮಾಚರಣೆ ಪ್ರಯುಕ್ತ ಜೆಸಿಐ ಪಡುಬಿದ್ರಿ ಆಯೋಜನೆಯಲ್ಲಿ ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನವೆಂಬರ್‌ 23 ಮತ್ತು 24 ರಂದು ಎರಡು ದಿನದ ಬೀಚ್ ಉತ್ಸವ ಕೋಸ್ಟಲ್ ಕಾರ್ನಿವಾಲ್ ಪಡುಬಿದ್ರಿ 2024 ಕಾರ್ಯಕ್ರಮ ಜರಗಲಿದೆ ಎಂದು ಕಾರ್ಯಕ್ರಮ ಮುಖ್ಯಸ್ಥ ವೈ ಸುಕುಮಾರ್ ಹೇಳಿದರು. ಅವರು ಶನಿವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ಜೆಸಿಐ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನ. 16 -17 : ಎರಡು ದಿನಗಳ ಉದ್ಯೋಗ ಮೇಳ

Posted On: 02-11-2024 04:16PM

ಕಾಪು : ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್, ಕುಂತಳ ನಗರ, ಮಣಿಪುರ, ಉಡುಪಿ ಇವರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ವತಿಯಿಂದ 3 ನೇ ಬಾರಿ ಬೃಹತ್ ಎರಡು ದಿನಗಳ ಉದ್ಯೋಗ ಮೇಳ ನವೆಂಬರ್ 16 ಮತ್ತು 17 ರಂದು ಎಂ ಆರ್ ಜಿ ಗ್ರೂಪ್ ಪ್ರಯೋಜಕತ್ವದಲ್ಲಿ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ನಡೆಯಲಿದೆ ಎಂದು ಗ್ರಾಮೀಣ ಬಂಟರ ಸಂಘದ ಟ್ರಸ್ಟ್‌ ‌ಅಧ್ಯಕ್ಷರಾದ ಅಶೋಕ್ ಶೆಟ್ಟಿ ಶನಿವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಬೃಹತ್ ಉದ್ಯೋಗ ಮೇಳದ ಉದ್ಘಾಟನಾ ಕಾರ್ಯಕ್ರಮ ನವೆಂಬರ್ 16 ರಂದು ಬೆಳಿಗ್ಗೆ 9:45 ಕ್ಕೆ ಎಂ ಆರ್ ಜಿ‌ ಗ್ರೂಪ್ ಛೇರ್ಮನ್ ಡಾ. ಕೆ.ಪ್ರಕಾಶ್ ಶೆಟ್ಟಿ ಉದ್ಘಾಟನೆ ಮಾಡಲಿದ್ದು, ಗಣ್ಯರು, ಸಂಸದರು, ಶಾಸಕಕರು, ಮಾಜಿ ಶಾಸಕರು ಮತ್ತು ಮಂತ್ರಿಗಳು, ವಿವಿಧ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ. ಸಮಾರೋಪ ನ.17 ರಂದು ಬೆಳಿಗ್ಗೆ 11:45 ಕ್ಕೆ ನಡೆಯಲಿದೆ.

ಕೆ ಕೆ ಫ್ರೆಂಡ್ಸ್ ಕಡಂಬು ಶಿರ್ವ ವತಿಯಿಂದ ಕಡಂಬು ಮೈದಾನದಲ್ಲಿ ರಾರಾಜಿಸಿದ ಬೃಹತ್ ಗೂಡುದೀಪ

Posted On: 01-11-2024 12:34PM

ಶಿರ್ವ : ಕೆ ಕೆ ಫ್ರೆಂಡ್ಸ್ ಕಡಂಬು ಶಿರ್ವ ಇದರ ವತಿಯಿಂದ ದೀಪಾವಳಿಯ ಪ್ರಯುಕ್ತ ಬೃಹತ್ ಗಾತ್ರದ ಗೂಡುದೀಪ ಕಡಂಬು ಮೈದಾನದಲ್ಲಿ ಅಳವಡಿಸಿ ದೀಪಾವಳಿ ಆಚರಿಸಲಾಯಿತು.

ಆನೆಗುಂದಿ ಶ್ರೀ ಸರಸ್ವತೀ ಸೂರ್ಯ ಚೈತನ್ಯ ಶಾಲೆ ಕುತ್ಯಾರು : ಕನ್ನಡ ರಾಜ್ಯೋತ್ಸವ ಆಚರಣೆ

Posted On: 01-11-2024 12:14PM

ಕಾಪು : ಆನೆಗುಂದಿ ಶ್ರೀ ಸರಸ್ವತೀ ಸೂರ್ಯ ಚೈತನ್ಯ ಶಾಲೆ ಕುತ್ಯಾರು ಇಲ್ಲಿ ಕನ್ನಡ ರಾಜ್ಯೋತ್ಸವವನ್ನು ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ನ. 2 : ಕಾಪು ಬೀಚ್ನಲ್ಲಿ ಉಡುಪಿ ಮತ್ತು ದ.ಕ ಜಿಲ್ಲಾ ಮಟ್ಟದ ಗೂಡುದೀಪ ಸ್ಪರ್ಧೆ

Posted On: 31-10-2024 03:35PM

ಕಾಪು : ಗ್ರಾವಿಟಿ ಡಾನ್ಸ್ ಸ್ಟುಡಿಯೋ ಕಾಪು ಮತ್ತು ಕಿಂಗ್ ಟೈಗರ್ಸ್ ಕಾಪು ಇವರ ಜಂಟಿ ಆಶ್ರಯದಲ್ಲಿ ಉಡುಪಿ ಮತ್ತು ದ.ಕ ಜಿಲ್ಲಾ ಮಟ್ಟದ ಗೂಡುದೀಪ ಸ್ಪರ್ಧೆ ನವೆಂಬರ್ 02, ಶನಿವಾರ ಸಂಜೆ 4 ಗಂಟೆಗೆ ಕಾಪು ಬೀಚ್ ನಲ್ಲಿ ಜರಗಲಿದೆ.

ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸನ್ಮಾನಕ್ಕೆ ಕಾಪು ತಾಲೂಕಿನ 6 ಸಾಧಕರು ಆಯ್ಕೆ

Posted On: 31-10-2024 03:27PM

ಕಾಪು : 2024ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸನ್ಮಾನಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಟ್ಟು 41 ಮಂದಿ ಸಾಧಕರು ಹಾಗೂ ಸಂಘ ಸಂಸ್ಥೆಗಳ ಪಟ್ಟಿ ಪ್ರಕಟಗೊಂಡಿದ್ದು, ಇದರಲ್ಲಿ ಕಾಪು ತಾಲೂಕಿನ ಆರು ಸಾಧಕರು ಮತ್ತು ಒಂದು ಸಂಘ ಆಯ್ಕೆಯಾಗಿದೆ.

ಎಲ್ಲೆಡೆ ಬೆಳಗಲಿ ಹಣತೆಯ ದಿವ್ಯ ಪ್ರಭಾವಳಿ ಮತ್ತೆ ಬಂದಿದೆ ದೀಪಾವಳಿ

Posted On: 31-10-2024 01:44PM

ದೀಪಾವಳಿ ಹಬ್ಬವು ಕೇವಲ ಹಬ್ಬವಲ್ಲ ಇದು ಜನಸಾಮಾನ್ಯರ ಸಂತೋಷದ ಕ್ಷಣವೆಂದರೆ ತಪ್ಪಾಗಲಾರದು. ಇದು ಧನ ತ್ರಯೋದಶಿಯಿಂದ ಆರಂಭಿಸಿ ಅಮಾವಾಸ್ಯೆ ದಾಟಿ ಬಿದಿಗೆವರೆಗೂ ಈ ಸಡಗರ ವಿಸ್ತರಿಸುತ್ತದೆ. ನವರಾತ್ರಿ ಉಕ್ಕಿಸಿದ ನವಸಡಗರ ಮನಸ್ಸಲ್ಲಿನ್ನೂ ಹಿತವಾಗಿ ಹರಡಿಕೊಂಡಿರುವಂತೆ ಮುಸ್ಸಂಜೆಯ ಮುದ್ದಾದ ಮಳೆ, ಚೂರುಚೂರೇ ಆವರಿಸಿಕೊಳ್ಳುತ್ತಾ ಖುಷಿ ಕೊಡುವ ಚಳಿಯ ನಡುವೆ ಮತ್ತೊಂದು ಸಂಭ್ರಮ ಬಂದಿದೆ. ಅದು ಬೆಳಕಿನ,ಬದುಕಿನ ಹಕುಟುಂಬದ ಹಬ್ಬ, ಊರ ಹಬ್ಬವಾದ ದೀಪಾವಳಿ. ಪ್ರಕೃತಿಯಲ್ಲಿ ಹೊಸ ಹೂವು ಅರಳುವ ಸಮಯ. ಈ ಘಳಿಗೆ ಬದುಕು ಸಡಗರದ ಮತ್ತೊಂದು ಶಿಖರದೆಡೆಗೆ ಹೊರಳುತ್ತದೆ.

ಕಾಪು : ಯುವಸೇನೆ ಮಡುಂಬು ಅಧ್ಯಕ್ಷರಾಗಿ ದೀಪಕ್ ಶೆಟ್ಟಿ ಮಡುಂಬು ಆಯ್ಕೆ

Posted On: 30-10-2024 11:01PM

ಕಾಪು : ಯುವಸೇನೆ ಮಡುಂಬು ಇದರ 2024-2026 ಸಾಲಿನ ಅಧ್ಯಕ್ಷರಾಗಿ ದೀಪಕ್ ಶೆಟ್ಟಿ ಮಡುಂಬು, ಕಾರ್ಯದರ್ಶಿಯಾಗಿ ಸೂರಜ್ ಅಂಚನ್ ಮಡುಂಬು ಆಯ್ಕೆಯಾಗಿರುತ್ತಾರೆ.