Updated News From Kaup
ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪುತ್ತಿಗೆ ಮಠಾಧೀಶರ ಭೇಟಿ

Posted On: 15-01-2024 07:51PM
ಉಚ್ಚಿಲ : ಇತ್ತೀಚೆಗೆ ನವೀಕೃತಗೊಂಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೆಂದ್ರ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿಗಳಾದ ಶ್ರೀ ಸುಶೀಂದ್ರ ತೀರ್ಥ ಸ್ವಾಮೀಜಿಯವರು ಆಗಮಿಸಿ, ಶ್ರೀ ಮಹಾಲಕ್ಷ್ಮಿಗೆ ಮತ್ತು ಸ್ವಾಮೀಜಿಯವರ ಪಟ್ಟದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಉಚ್ಚಿಲ ಮಹಾಲಕ್ಷ್ಮಿ ದೇವಳದ ವತಿಯಿಂದ ಸ್ವಾಮೀಜಿಯವರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು.
ದೇವಳದ ಪ್ರಧಾನ ಅರ್ಚಕ ಕೆ ವಿ ರಾಘವೇಂದ್ರ ಉಪಾಧ್ಯಾಯರವರು ಶ್ರೀ ಮಹಾಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ಮೋಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ. ಅಮೀನ್, ದೇವಸ್ಥಾನದ ಪ್ರಧಾನ ಮೆನೇಜರ್ ಸತೀಶ್ ಅಮೀನ್ ಪಡುಕೆರೆ, ಕಾರ್ಯದರ್ಶಿ ಸುಧಾಕರ್ ಕುಂದರ್ ಸಹಿತ ಭಕ್ತಾದಿಗಳು ಉಪಸ್ಥಿತರಿದ್ದರು.
ಉಡುಪಿ : ವೈದ್ಯಕೀಯ ಪ್ರತಿನಿಧಿಗಳ ಧನ್ವಂತರಿ ಸ್ವಸಹಾಯ ಸಂಘ - ಉಚಿತ ಮಜ್ಜಿಗೆ ವಿತರಣೆ

Posted On: 15-01-2024 07:32PM
ಉಡುಪಿ : ವೈದ್ಯಕೀಯ ಪ್ರತಿನಿಧಿಗಳ ಧನ್ವಂತರಿ ಸ್ವಸಹಾಯ ಸಂಘ ಇದರ ವತಿಯಿಂದ ಬಾಲಾಜಿ ರಾಘವೇಂದ್ರ ಆಚಾರ್ಯ ಹೆಚ್.ಪಿ ಗ್ಯಾಸ್ ಇವರ ಪ್ರಾಯೋಜಕತ್ವದಲ್ಲಿ ಮಕರ ಸಂಕ್ರಾಂತಿಯ ಹಗಲು ಉತ್ಸವ ಕಾರ್ಯಕ್ರಮದಲ್ಲಿ ಉಚಿತ ಮಜ್ಜಿಗೆ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಆಚಾರ್ಯ, ಕಾರ್ಯದರ್ಶಿ ಕೇಶವ, ಸದಸ್ಯರು ಭಾಗವಹಿಸಿದ್ದರು.
ಕಾರ್ಕಳ : ಕರಾಟೆಯಲ್ಲಿ ನೊಬೆಲ್ ವಿಶ್ವದಾಖಲೆ ಬರೆದ ನಿಟ್ಟೆಯ ಅವಳಿ ಸಹೋದರರು

Posted On: 15-01-2024 07:18PM
ಕಾರ್ಕಳ : ನಿಟ್ಟೆಯ ಅವಳಿ ಸಹೋದರರಾದ ಅನುಷ್ ಮತ್ತು ಆಯುಷ್ ಕರಾಟೆಯಲ್ಲಿ ಮತ್ತೊಂದು ದಾಖಲೆ ನಿರ್ಮಿಸುವ ಮೂಲಕ ನೊಬೆಲ್ ವರ್ಲ್ಡ್ ರೆಕಾಡ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಮೂಡುಬಿದಿರೆ ಶೋರಿನ್ ರಿಯೋ ಕರಾಟೆ ಅಸೋಸಿಯೇಶನ್ (ರಿ.) ಆಶ್ರಯದಲ್ಲಿ ಮೂಡುಬಿದಿರೆಯ ಸಮಾಜಮಂದಿರದಲ್ಲಿ ನಡೆದ ಕರಾಟೆ ಕಾರ್ನಿವಲ್ (karate Carnival) ನಲ್ಲಿ ಅವರು ಈ ದಾಖಲೆ ಮಾಡಿದ್ದಾರೆ.
ಆಯುಷ್ ಅರುಣ್ ಕೆ. ಒನ್ ಮಿನಿಟ್ 213 ಕಿಕ್ ಟು ಪಂಚಿಂಗ್ ಬ್ಯಾಗ್(1Minute 213kick To Punching Bag)ವಿಭಾಗದಲ್ಲಿ ದಾಖಲೆ ಹಾಗೂ ಅನುಷ್ ಅರುಣ್ ಕುಮಾರ್ ಕೆ. ಮೀಟರ್ ಡಿಸ್ಟೆನ್ಸ್ ಸೆಡ್ ಕಿಕ್ ಶಾರ್ಟೆಸ್ಟ್ ಡ್ಯುರೇಷನ್ (1000 Metere Distance Side Kick Shortest Duration) ವಿಭಾಗದಲ್ಲಿ ದಾಖಲೆ ಮಾಡಿದ್ದಾರೆ.
ಎಳವೆಯಲ್ಲಿಯೇ ಕರಾಟೆಯಲ್ಲಿ ತೊಡಗಿಸಿಕೊಂಡಿರುವ ಅವಳಿ ಸಹೋದರರಾದ ಆಯುಷ್ ಅರುಣ್ ಕೆ. ಮತ್ತು ಅನುಷ್ ಅರುಣ್ ಕುಮಾರ್ ಕೆ. ಕರಾಟೆಯಲ್ಲಿ ಹಲವಾರು ರಾಜ್ಯ,ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟದಲ್ಲಿ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಅರುಣ್ ಕುಮಾರ್ ಮತ್ತು ಸಂಗೀತ ದಂಪತಿಗಳ ಪುತ್ರರಾದ ಇವರು ನಿಟ್ಟೆಯ ಎನ್ಎಸ್ಎಎಂ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಇವರ ಸಾಧನೆಗೆ ಮಾಜಿ ಸಚಿವ, ಶಾಸಕ ಸುನೀಲ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಕಾಪು : ನೂತನ ಇನ್ನಂಜೆ ಮಹಿಳಾ ಮಂಡಳಿಯ ಉದ್ಘಾಟನೆ

Posted On: 15-01-2024 11:11AM
ಕಾಪು : ನೂತನ ಇನ್ನಂಜೆ ಮಹಿಳಾ ಮಂಡಳಿಯನ್ನು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಎಸ್‌ವಿಎಚ್ ಶಾಲೆಯ ದಾಸಭವನದಲ್ಲಿ ಜನವರಿ 13 ರಂದು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಮಾತೆಯರು ತಮ್ಮ ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಿ ಆದರ್ಶಗಳನ್ನು ಮೈಗೂಡಿಸುವಂತೆ ಮಾಡಿ ತಾಯಿಯ ಮಮತೆ ಸಮಾಜವನ್ನೇ ತಿದ್ದುವಂತಾಗಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರುವ ಅವಕಾಶವಿದ್ದು ಸರಕಾರವು ಕೂಡ ಈ ನಿಟ್ಟಿನಲ್ಲಿ ಮಹಿಳೆಯರಿಗೆ ಪ್ರಯೋಜನವಾಗುವ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಇದರ ಸದುಪಯೋಗ ಎಲ್ಲಾ ಮಹಿಳೆಯರು ಪಡೆದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಭಾಗವಹಿಸಿ ಮುಂದೆ ಬರಬೇಕೆಂದು ತಿಳಿಸಿದರು.
ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳು ಮಣಿಪಾಲ ಇಲ್ಲಿನ ಉಪನ್ಯಾಸಕರಾದ ಅರ್ಪಿತ ಪ್ರಶಾಂತ್ ಶೆಟ್ಟಿ ಮಾತನಾಡಿ ಮಹಿಳೆಯರು ಕುಟುಂಬದ ಯುವಜನತೆ ಹಾದಿ ತಪ್ಪುವುದನ್ನು ತಡೆಯಲು ಹಾಗೂ ಅವರ ವೈಯಕ್ತಿಕ ಸಮಸ್ಯೆಗಳು, ಸಮಾಜದಲ್ಲಿ ಆಗುತ್ತಿರುವ ದೌರ್ಜನ್ಯಗಳ ವಿರುದ್ಧ ಕ್ರಿಯಾಶೀಲರಾಗಬೇಕು. ಮನೆಯಲ್ಲಿ ಇರುವ ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು, ಮಾಹಿತಿ ನೀಡಲು ಸಹಕರಿಸಬೇಕು ಎಂದು ಕರೆ ನೀಡಿದರು. ತಾಲೂಕು ಮಹಿಳಾ ಮಂಡಳಿಗಳ ಉಪಾಧ್ಯಕ್ಷರಾದ ಗೀತಾ ವಾಗ್ಳೆ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷರಾಗಿರುವ ಸರಳ ಕಾಂಚನ್, ಎಸ್‌ವಿಎಚ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪುಂಡರಿಕಾಕ್ಷ ಕೊಡಂಚ ಸಂದರ್ಭೋಚಿತವಾಗಿ ಮಾತನಾಡಿದರು. ಎಸ್‌ವಿಎಚ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಮಂಜುಳ ಎಸ್ ನಾಯಕ್, ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಲಕ್ಷ್ಮಣ ಕೆ ಶೆಟ್ಟಿ, ಇನ್ನಂಜೆ ಯುವಕ ಮಂಡಲದ ಉಪಾಧ್ಯಕ್ಷರಾದ ಮಧುಸೂದನ ಆಚಾರ್ಯ, ಇನ್ನಂಜೆ ಯುವತಿ ಮಂಡಲದ ಅಧ್ಯಕ್ಷೆ ಲಕ್ಷ್ಮಿ ವೈ ನಾಯಕ್, ನೂತನ ಮಹಿಳಾ ಮಂಡಳಿಯ ಗೌರವ ಸಲಹೆಗಾರರಾದ ಶಕ್ಕು ಬಾಯಿ ನಂದನ್ ಕುಮಾರ್, ಮಹಿಳಾ ಮಂಡಳಿಯ ಗೌರವಾಧ್ಯಕ್ಷರಾದ ಪುಷ್ಪ ರವೀಂದ್ರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೋಶಾಧಿಕಾರಿ ಪೂರ್ಣಿಮಾ ಸುರೇಶ್, ಜೊತೆ ಕಾರ್ಯದರ್ಶಿ ಅನಿತಾ ಮಥಾಯಸ್, ಕ್ರೀಡಾ ಕಾರ್ಯದರ್ಶಿ ಈಶ್ವರಿ, ಜೊತೆ ಕಾರ್ಯದರ್ಶಿ ಜಾನಕಿ, ಸಾಂಸ್ಕೃತಿಕ ಕಾರ್ಯದರ್ಶಿ ಸಂಧ್ಯಾ ಬಾಲಕೃಷ್ಣ ಕೋಟ್ಯಾನ್, ಉಪಾಧ್ಯಕ್ಷರಾದ ವಸಂತಿ ಆಚಾರ್ಯ, ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ನೂತನ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ವೇತ ಲಕ್ಷ್ಮಣ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಸೀಮಾ ಮಾರ್ಗರೇಟ್ ಡಿಸೋಜ ಪ್ರಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮಂಡಳಿಯ ಉಪಾಧ್ಯಕ್ಷೆ ಆಶಾ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಮಹಿಳಾ ಮಂಡಳಿಯ ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ಸುಮಲತಾ ಶೇಖರ್ ನಿರೂಪಿಸಿದರು. ಕಾರ್ಯದರ್ಶಿ ಸಿಲ್ವಿಯಾ ವಿನಫ್ರೆಡ್ ಕ್ಯಾಸ್ತಲಿನೋ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಿಳಾ ಮಂಡಳಿಯ ಸದಸ್ಯರಿಂದ ಮನೋರಂಜನ ಕಾರ್ಯಕ್ರಮ ಜರಗಿತು.
ಉಡುಪಿ : ಜೇಸಿಐ ಉಡುಪಿ ಸಿಟಿ - ಸಂಚಲನ ಪ್ರೇರಣಾ ತರಬೇತಿ ಕಾಯಾ೯ಗಾರ

Posted On: 14-01-2024 05:43PM
ಉಡುಪಿ : ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ನೂತನ ಸದಸ್ಯರಿಗಾಗಿ ಸಂಚಲನ ಪ್ರೇರಣಾ ತರಬೇತಿ ಕಾಯಾ೯ಗಾರ ಜನವರಿ 14ರಂದು ಹಿಂದಿ ಭವನದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿ ರಾಷ್ಟ್ರೀಯ ತರಬೇತುದಾರ ಬಾಸುಮ ಕೊಡಗು ತರಬೇತಿ ನೀಡಿದರು.
ಮುಖ್ಯ ಅತಿಥಿಯಾಗಿ ಪೂವಾ೯ಧ್ಯಕ್ಷ ರಫೀಕ್ ಖಾನ್ ಭಾಗವಹಿಸಿದ್ದರು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷೆ ಡಾI ಹರಿಣಾಕ್ಷಿ ಕಕೇ೯ರ ವಹಿಸಿದ್ದರು.
ಈ ಸಂದಭ೯ದಲ್ಲಿ ಪೂವಾ೯ಧ್ಯಕ್ಷರುಗಳು, ಸದಸ್ಯರು ಭಾಗವಹಿಸಿದ್ದರು. ಕಾಯ೯ದಶಿ೯ ಸಂಧ್ಯಾ ಕುಂದರ್ ವಂದಿಸಿದರು.
ಪಲಿಮಾರು : ಹೊೖಗೆ ಫ್ರೆಂಡ್ಸ್ ವತಿಯಿಂದ ಬೃಹತ್ ಸ್ವಚ್ಛತಾ ಕಾರ್ಯಕ್ರಮ

Posted On: 14-01-2024 05:38PM
ಪಲಿಮಾರು : ಹೊೖಗೆ ಫ್ರೆಂಡ್ಸ್ ಹೊೖಗೆ (ರಿ.) ಪಲಿಮಾರು ಸಂಸ್ಥೆಯ ವತಿಯಿಂದ ನಮ್ಮ ಪರಿಸರದ ಸಂರಕ್ಷಣೆ ನಮ್ಮದೇ ಹೊಣೆ ಎಂಬ ಕಾರ್ಯಕ್ರಮದಡಿ ಬೃಹತ್ ಸ್ವಚ್ಛತಾ ಕಾರ್ಯಕ್ರಮವನ್ನು ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆರಂದಿ ಕಟ್ಟ ಹೊಳೆಯಲ್ಲಿ ನಡೆಸಲಾಯಿತು.

ಈ ಸ್ವಚ್ಛತಾ ಅಭಿಯಾನದಲ್ಲಿ ಪಲಿಮಾರು ಗ್ರಾಮಪಂಚಾಯತ್ ಅಧ್ಯಕ್ಷರಾದ ಸೌಮ್ಯಾಲತ ಶೆಟ್ಟಿ, ಪಿಲಾರ್ ಸುಧಾಕರ ಶೆಣೈ, SLRM ಪಲಿಮಾರು ಘಟಕದ ಉಸ್ತುವಾರಿ ರೇಖಾ, ಮಹೇಶ್, ಪಂಚಾಯತ್ ಸದಸ್ಯರಾದ ಗಾಯತ್ರಿ ಡಿ ಪ್ರಭು, ಸತೀಶ್ ದೇವಾಡಿಗ ಸುಜಾತಾ, ಹೊೖಗೆ ಫ್ರೆಂಡ್ಸ್ ಅಧ್ಯಕ್ಷರಾದ ರಿತೇಶ್ ದೇವಾಡಿಗ, ಕಾರ್ಯದರ್ಶಿ ಸತೀಶ ಕುಮಾರ್, ಉಪಾಧ್ಯಕ್ಷರಾದ ಸಂತೋಷ್ ದೇವಾಡಿಗ , ರಾಘವೇಂದ್ರ ಸುವರ್ಣ, ಜ್ಞಾನೇಶ್ ಕೋಟ್ಯಾನ್, ಶ್ರೀನಿತ್, ಶ್ರೀಜಿತ್, ರೋಷನ್ , ಸಂಪತ್, ಅಂಕಿತ್ ಉಪಸ್ಥಿತರಿದ್ದರು.
ಕಾರ್ಕಳ : ಕ್ರಿಯೇಟಿವ್ ಕಾಲೇಜಿನಲ್ಲಿ ರಾಷ್ಟ್ರ ಚೇತನ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

Posted On: 14-01-2024 12:29PM
ಕಾರ್ಕಳ : ಸ್ವಾಮಿ ವಿವೇಕಾನಂದರ ಚಿಂತನೆಗಳು ಭಾರತ ಮಾತ್ರವಲ್ಲ ವಿಶ್ವವ್ಯಾಪಿಯಾದುದು. ಯುವಕರು ದೇಶದ ಭವಿಷ್ಯ ಉಜ್ವಲಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಆತ್ಮೋದ್ಧಾರ ಮಾರ್ಗವೇ ಜಗವನ್ನು ಹಾಗೂ ಮನುಷ್ಯರನ್ನು ಅರಿಯಲು ಇರುವ ದಾರಿ. ಯುವಕರ ಕಣ್ಮಣಿಯಾಗಿ, ಸಿಡಿಲ ಸಂತನಾಗಿ ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ ಮಹಾತ್ಮ ಸ್ವಾಮಿ ವಿವೇಕಾನಂದರು. ಎಲ್ಲರಿಗೂ ಸ್ಪೂರ್ತಿಯ ಚಿಲುಮೆ ಎಂದು ಗಣಿತ ಉಪನ್ಯಾಸಕ ಪ್ರದೀಪ್ ಅಂಚನ್ ಹೇಳಿದರು. ಅವರು ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ʼಯುವ ಸಪ್ತಾಹʼದ ಅಂಗವಾಗಿ ನಡೆದ ವಿವೇಕಾನಂದರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಜಗತ್ತು ಭಾರತದ ಕಡೆಗೆ ಕೀಳಾಗಿ ಕಾಣುತ್ತಿರುವಾಗ ಭಾರತದ ಅಂತಃಶಕ್ತಿ, ಆತ್ಮಜ್ಞಾನ, ಆಧ್ಯಾತ್ಮ ಕೊಡುಗೆಗಳ ಕುರಿತು ಪಾಶ್ಚಿಮಾತ್ಯರ ಕಣ್ಣು ತೆರೆಸಿ, ಶ್ರೇಷ್ಠ ಜ್ಞಾನ ಪರಂಪರೆ, ಮೌಲ್ಯಗಳ ಭಂಡಾರ ಭಾರತ ಎಂಬುದನ್ನು ತಿಳಿಸಿಕೊಟ್ಟವರು ವಿವೇಕಾನಂದರು. ಪುಣ್ಯಭೂಮಿ ಭಾರತದ ಅಣು ಅಣುವಿನಲ್ಲೂ ದೈವತ್ವವಿದೆ. ಇಂತಹ ಉತ್ಕೃಷ್ಟ ಯೋಚನೆ ಹೊಂದಿದ್ದ. ಋಷಿ ಮುನಿಗಳ ತಪಸ್ಸಿನಿಂದ ಭರತಭೂಮಿ ಇನ್ನಷ್ಟು ಪವಿತ್ರಗೊಂಡಿತ್ತು. ಆದ್ದರಿಂದ ಭಾರತೀಯರಾದ ನಾವೆಲ್ಲರೂ ವಿವೇಕಾನಂದರ ಜೀವನಾದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕ್ರಿಯೇಟಿವ್ ಕಾಲೇಜಿನ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಮಾತನಾಡಿ ನೈತಿಕ ಶಕ್ತಿ, ಉತ್ತಮ ವಿಚಾರಧಾರೆಗಳು, ಎಲ್ಲರೂ ಸಮಾನರು ಹಾಗೂ ಮನುಷ್ಯತ್ವದಲ್ಲಿ ದೇವರನ್ನು ಕಂಡವರು ವಿವೇಕಾನಂದರು. ಅವರ ಮಾತುಗಳು ನಮ್ಮ ನಡೆ-ನುಡಿಯಲ್ಲಿ ಪ್ರೇರಣೆ ಪಡೆದು ಹಾಗೆಯೇ ಜೀವಿಸುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಎನ್. ಎಸ್. ಎಸ್. ಸಂಯೋಜನಾಧಿಕಾರಿ ಉಮೇಶ್, ಉಪನ್ಯಾಸಕರಾದ ಚಂದ್ರಕಾಂತ್, ರಾಮಕೃಷ್ಣ ಹೆಗಡೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕು. ಸಂಹಿತಾ ಹೆಬ್ಬಾರ್ ವಂದಿಸಿದರು. ಕು. ಶೃದ್ಧಾ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.
ಕಾಪು : ಪರ್ಯಾಯೋತ್ಸವ ಪ್ರಯುಕ್ತ ಕಾಪು ವಲಯ ವತಿಯಿಂದ ಹೊರೆಕಾಣಿಕೆ ಸಮರ್ಪಣೆ

Posted On: 14-01-2024 12:24PM
ಕಾಪು : ಪುತ್ತಿಗೆ ವಿಶ್ವಗೀತಾ ಪರ್ಯಾಯೋತ್ಸವ ಪ್ರಯುಕ್ತ ಕಾಪು ವಲಯ ವತಿಯಿಂದ ಹೊರೆಕಾಣಿಕೆ ಸಮರ್ಪಣೆ ಜರುಗಿತು.
ಕಾಪು ಶ್ರೀ ಹೊಸಮಾರಿಗುಡಿಯಿಂದ ಹೊರಟ ವಾಹನ ಶೋಭಾಯಾತ್ರೆಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಚಾಲನೆ ನೀಡಿದರು. ಬಳಿಕ ಕಾಪುವಿಂದ ಹೊರಟು ಉಡುಪಿ ಜೋಡುಕಟ್ಟೆ ತಲುಪಿ ಅಲ್ಲಿಂದ ಶ್ರೀಕೃಷ್ಣಮಠಕ್ಕೆ ಮೆರವಣಿಗೆಯ ಮೂಲಕ ಸಾಗಿ ಹಸಿರು ಹೊರೆಕಾಣಿಕೆಯನ್ನು ಶ್ರೀ ಕೃಷ್ಣ ಮುಖ್ಯಪ್ರಾಣ ದೇವರಿಗೆ ಸಮರ್ಪಿಸಲಾಯಿತು.
ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರು ವಿಶ್ವದೆಲ್ಲೆಡೆ ಸಂಚರಿಸಿ ಮಠಮಂದಿರಗಳನ್ನು ಸ್ಥಾಪಿಸುವ ಮೂಲಕ ನಮ್ಮ ಸನಾತನ ಹಿಂದೂ ಧರ್ಮದ ಮೌಲ್ಯಗಳನ್ನು ವಿಶ್ವವ್ಯಾಪಿಗೊಳಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ಸಿಂಗಪುರ, ದುಬೈ ಸಹಿತ ಎಲ್ಲಾ ಕಡೆ ಹಿಂದೂ ಧರ್ಮವನ್ನು ಪಸರಿಸಿ ವಿಶ್ವಮಾನ್ಯಗೊಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ಕಾಪು ವಲಯ ಹೊರೆ ಕಾಣಿಕೆ ಸಮಿತಿಯ ಅಧ್ಯಕ್ಷರಾದ ನಡಿಕೆರೆ ರತ್ನಾಕರ ಶೆಟ್ಟಿ, ಕಾರ್ಯಾಧ್ಯಕ್ಷರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರುಗಳಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್ ಪಾಲನ್, ಗೌರವ ಸಲಹೆಗಾರರಾದ ನಿರ್ಮಲ್ ಕುಮಾರ್ ಹೆಗ್ಡೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರುಗಳಾದ ಗೀತಾಂಜಲಿ ಎಮ್. ಸುವರ್ಣ, ಶಿಲ್ಪಾ ಜಿ. ಸುವರ್ಣ, ಶಶಿಕಾಂತ್ ಪಡುಬಿದ್ರಿ, ಅರುಣ್ ಶೆಟ್ಟಿ ಪಾದೂರು, ಹೊರೆ ಕಾಣಿಕೆ ಸಮಿತಿಯ ಸಂಚಾಲಕರುಗಳಾದ ಶ್ರೀಕರ ಶೆಟ್ಟಿ ಕಲ್ಯಾ, ಪ್ರಭಾತ್ ಶೆಟ್ಟಿ ಮೂಳೂರು, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ಉದಯ ಶೆಟ್ಟಿ ಭಾರ್ಗವ, ಪ್ರಮುಖರಾದ ವೈ ಪ್ರಫುಲ್ಲ ಶೆಟ್ಟಿ, ದಯಾನಂದ ಹೆಜಮಾಡಿ, ಕಾಪು ಲಕ್ಷ್ಮೀ ಜನಾರ್ದನ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರುಣ್ ಕುಮಾರ್, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಮೋಹನ್ ಬಂಗೇರ, ಕಾಪು ಪುರಸಭಾ ಮಾಜಿ ಅಧ್ಯಕ್ಷರಾದ ಅನಿಲ್ ಕುಮಾರ್, ಪ್ರಚಾರ ಸಮಿತಿಯ ಮಹಿಳಾ ಸಮಿತಿಯ ಮುಖ್ಯ ಸಂಚಾಲಕರಾದ ಸಾವಿತ್ರಿ ಗಣೇಶ್, ಅಭಿರಾಜ್ ಸುವರ್ಣ ಕಟಪಾಡಿ, ರಾಧಾರಮಣ ಶಾಸ್ತ್ರಿ, ಲಕ್ಷ್ಮಣ್ ಶೆಟ್ಟಿ ಮಂಡೇಡಿ, ಸುಬ್ರಮಣ್ಯ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.
ಇಂದು : ಲೇಖಕಿ ಅನಿತಾ ಪಿ. ತಾಕೊಡೆ ಯವರ 'ಸುವರ್ಣ ಯುಗ' ಕೃತಿ ಬಿಡುಗಡೆ ಸಮಾರಂಭ

Posted On: 14-01-2024 08:52AM
ಮಂಗಳೂರು : ಜನಸೇವಕ, ಶಿಕ್ಷಣಪ್ರೇಮಿ ಜಯ ಸಿ. ಸುವರ್ಣ ಅವರ ಜೀವನ ಸಾಧನೆಯ ಕುರಿತು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಪ್ರಕಟಿಸಿರುವ ಅನಿತಾ ಪಿ. ತಾಕೊಡೆ ಬರೆದಿರುವ 'ಸುವರ್ಣ ಯುಗ' ಕೃತಿ ಬಿಡುಗಡೆ ಸಮಾರಂಭ ಜನವರಿ 14, ಆದಿತ್ಯವಾರದಂದು (ಇಂದು) ಸಂಜೆ 4 ಗಂಟೆಗೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಜಯ ಸಿ. ಸುವರ್ಣ ಸಭಾಂಗಣದಲ್ಲಿ ನಡೆಯಲಿದೆ ಎಂದು ನಿವೃತ್ತ ಪ್ರಾಧ್ಯಾಪಕ ಅಡ್ವೆ ರವೀಂದ್ರ ಪೂಜಾರಿ ಹೇಳಿದರು.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸುವರು. ಕೇಂದ್ರದ ಮಾಜಿ ಮಾಜಿ ಸಚಿವ ಜನಾರ್ದನ ಪೂಜಾರಿ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್ ಅಭಿನಂದನಾ ಭಾಷಣ ಮಾಡಲಿದ್ದಾರೆ.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಉಮಾನಾಥ ಕೋಟ್ಯಾನ್, ಗುರ್ಮೆ ಸುರೇಶ್ ಶೆಟ್ಟಿ, ಸುನಿಲ್ ಕುಮಾರ್, ಯಶಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯರಾದ ಬಿ. ಕೆ. ಹರಿಪ್ರಸಾದ್, ಹರೀಶ್ ಕುಮಾರ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಬಿ. ರಮಾನಾಥ ರೈ, ಮಾಜಿ ಶಾಸಕರಾದ ಕೆ. ವಸಂತ ಬಂಗೇರ, ಗೋಪಾಲ ಪೂಜಾರಿ, ರುಕ್ಮಯ ಪೂಜಾರಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ನಮ್ಮ ಕುಡ್ಲ ವಾಹಿನಿ ಆಡಳಿತ ನಿರ್ದೇಶಕ ಲೀಲಾಕ್ಷ ಕರ್ಕೇರ, ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ತಾಲೂಕು ಮಟ್ಟದ ಕೊರಗ ಸಮುದಾಯದ ಕುಂದು ಕೊರತೆ ಸಭೆ

Posted On: 14-01-2024 08:32AM
ಕಾಪು : ತಾಲೂಕು ಮಟ್ಟದ ಕೊರಗ ಸಮುದಾಯದ ಕುಂದು ಕೊರತೆ ಸಭೆ ಕಾಪು ತಾಲೂಕಿನ ಆಡಳಿತ ಸೌಧದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಹಶೀಲ್ದಾರ್ ಡಾ.ಪ್ರತಿಭಾ ಆರ್ ನಾಗರೀಕ ಸಮಾಜದಿಂದ ದೂರ ಉಳಿದ ಕೊರಗ ಸಮಾಜ ಹಾಗೂ ಇದೇ ರೀತಿ ಶೋಷಿತ ವರ್ಗಗಳಿಗೆ ಸೇರಿದ ಸಮುದಾಯಗಳಿಗೆ ಮೂಲಭೂತ ಸೌಕರ್ಯ ಕೊಟ್ಟು ಜೊತೆಗೆ ಅವರಿಗೆ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಹೊಣೆಯಾಗಿದೆ. ಸದ್ಯದಲ್ಲಿಯೇ ತಾಲೂಕು ಪಂಚಾಯತ್ ಸಹಯೋಗದಲ್ಲಿ ಸಹಪಂಕ್ತಿ ಭೋಜನ ಏರ್ಪಡಿಸಿ ಸಮಾನತೆ ಸಾಧಿಸಿ ಕೊರಗರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಲಾಗುವುದು. ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಹೆಲ್ತ್ ಕ್ಯಾಂಪ್ ನಡೆಸಲಾಗುವುದು ಹಾಗೂ ಆಯುಷ್ಮಾನ್ ಕಾಡುಗಳ ವಿತರಣೆ ಮಾಡಲಾಗುವುದು. ಕೊರಗ ಸಮುದಾಯದವರ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹಾರ ಮಾಡುವ ಭರವಸೆ ನೀಡಿದರು. ಸಮಸ್ಯೆಗಳಿದ್ದರೆ ನೇರವಾಗಿ ಕಚೇರಿಗೆ ಬಂದು ತಹಶೀಲ್ದಾರ್ ರವರನ್ನು ಖುದ್ದಾಗಿ ಭೇಟಿ ಮಾಡಬಹುದು ಎಂದರು. ಸರಕಾರಿ ಕೆಲಸಗಳು ಕಾಲಕ್ರಮೇಣ ಎಲ್ಲವೂ ಕಂಪ್ಯೂಟರೀಕರಣ ಆಗುತ್ತಿರುವುದರಿಂದ ಕೆಲವು ದಾಖಲೆಗಳು ಇಲ್ಲದಿರುವುದರಿಂದ ಮೇಲಾಧಿಕಾರಿಗಳ ನಿರ್ದೇಶನದಂತೆ ಕೊರಗ ಜನಾಂಗದವರ ಸಮಸ್ಯೆಗಳ ಪರಿಹಾರಕ್ಕಾಗಿ ಎಲ್ಲಾ ಅವಶ್ಯ ಪ್ರಯತ್ನಗಳನ್ನು ಮಾಡಲಾಗುವುದು ಕೊರಗರು ಶಿಕ್ಷಣವಂತರಾಗಿ ಜಾಗೃತಿ ಮೂಡಿಸಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು. ಕೊರಗರ ವಾಸ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ನಿವೇಶನ, ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ನಮ್ಮ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಹಲವಾರು ಸಮುದಾಯಗಳಿರಬಹುದು ಅಂತಹ ಸಮುದಾಯದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕೊಡಬೇಕು ಎಂದಾಗ ಖುದ್ದಾಗಿ ಅಧಿಕಾರಿಗಳಾದ ನಾವು ಇಂತಹ ಸಮುದಾಯಗಳ ಹಾಡಿ(ಕ್ಯಾಂಪ್) ಗಳಿಗೆ ಭೇಟಿ ನೀಡಿ, ಅವರ ನೈಜ ಪರಿಸ್ಥಿತಿಯನ್ನು ನೋಡುವುದರ ಮೂಲಕ ಅವರಿಗೆ ನಾಗರೀಕತೆ ಬಗ್ಗೆ ತಿಳಿಹೇಳುವುದರ ಮೂಲಕ, ಸರ್ಕಾರದಿಂದ ಏನೆಲ್ಲಾ ಸೌಲಭ್ಯಗಳಿವೆ, ಆ ಸೌಲಭ್ಯ ಪಡೆದುಕೊಳ್ಳಬೇಕಾದರೆ ಮೊದಲು ಶಿಕ್ಷಣವಂತರಾಗಿ, ಶಿಕ್ಷಣ ಬಂದರೆ ಸರ್ಕಾರದಿಂದ ಬರುವ ಸೌಲಭ್ಯಗಳು ಏನೆಲ್ಲಾ ಬಂದಿವೆ ಅನ್ನೋದು ನಿಮಗೂ ಗೊತ್ತಾಗುತ್ತದೆ, ನೀವು ಉನ್ನತ ಉದ್ಯೋಗ ಮಾಡಲು ಅವಕಾಶಗಳಿವೆ ನಮ್ಮಂತೆ ಅಧಿಕಾರಿಗಳಾಗಿ ಸಾರ್ವಜನಿಕರ ಸೇವೆ ಮಾಡಲು ಅವಕಾಶಗಳು ಸಿಗುತ್ತವೆ ಅಂತ ಅವರಲ್ಲಿ ಭರವಸೆ ಮೂಡಿಸುವ ಕೆಲಸ ಮಾಡಬೇಕಾಗಿದೆ ಅಂತ ಮಾನವೀಯ ಮೌಲ್ಯಗಳ ಬಗ್ಗೆ ಸವಿಸ್ತಾರವಾಗಿ ಸಭೆಯಲ್ಲಿ ನೆರೆದಿರುವ ಕೊರಗ ಸಮುದಾಯಕ್ಕೂ ಮತ್ತು ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.
ಕೊರಗರ ಬಗ್ಗೆ ಅಧ್ಯಯನ ಮಾಡಿರುವ ಅಶೋಕ ಶೆಟ್ಟಿಯವರು 2011ರಲ್ಲಿ ಕೊರಗರ ಜನಸಂಖ್ಯೆ 11500 ಇತ್ತು ಈಗ 8500 ಕ್ಕೆ ಇಳಿಕೆ ಆಗಿರುವುದು ವಿಷಾದನೀಯ ಹಾಗೂ ಸಮುದಾಯದವರು ತುಂಬಾ ಹಿಂದುಳಿದವರಾಗಿರುವುದರಿಂದ ಅವರನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಮುಖ್ಯವಾಹಿನಿಗೆ ತರಲು ನಡೆಸಬೇಕಾದ ಕಾರ್ಯಕ್ರಮಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಕೊರಗ ಜನಾಂಗದವರಲ್ಲಿ ನಿವೇಶನ ರಹಿತರ ಒಟ್ಟು 165 ಕುಟುಂಬಗಳನ್ನು ಗುರುತಿಸಿ ಪಟ್ಟಿ ಸಲ್ಲಿಸಲಾಗಿತ್ತು. ಕೂಡಲೇ ಕ್ರಮ ವಹಿಸುವಂತೆ ಅನುಸೂಯರವರು ತಹಶೀಲ್ದಾರ್ ಪ್ರತಿಭಾ ಅವರನ್ನು ವಿನಂತಿಸಿಕೊಂಡರು. ರೇಷನ್ ಕಾರ್ಡಿನಲ್ಲಿ ತಿದ್ದುಪಡಿ ಮಾಡಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಿಕೊಟ್ಟು ಕೂಡಲೇ ಆ ಕುರಿತು ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದು ಕಾಪು ತಾಲೂಕಿನ ಆಹಾರ ಅಧಿಕಾರಿ ಲೀಲಾನಂದರವರು ತಿಳಿಸಿದರು.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ್, ತಾಲೂಕು ಆರೋಗ್ಯ ಅಧಿಕಾರಿ ವಾಸುದೇವ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಎಸ್ ಎನ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ರಾಜ್, ಕಂದಾಯ ಇಲಾಖೆಯ ರವಿಕಿರಣ್, ದೀಕ್ಷಿತಾ ಸಭೆಯಲ್ಲಿ ಉಪಸ್ಥಿತರಿದ್ದರು. ಕಾಪು ತಾಲೂಕು ಕಚೇರಿಯ ದೇವಕಿ ಸ್ವಾಗತಿಸಿದರು. ಕೊರಗ ಮುಖಂಡರಾದ ಸುರೇಶ್ ವಂದಿಸಿದರು.