Updated News From Kaup
ಕಾಪು : ಉಂಡಾರು ವಿಷ್ಣುಮೂರ್ತಿ ದೇವಳದಲ್ಲಿ ಭಜನೆ, ದೀಪೋತ್ಸವ ಸಂಪನ್ನ

Posted On: 14-11-2022 10:34PM
ಕಾಪು : ತಾಲೂಕಿನ ಉಂಡಾರು ವಿಷ್ಣುಮೂರ್ತಿ ದೇವಳದಲ್ಲಿ ನವೆಂಬರ್ 13ರಂದು ಉದಯಾಸ್ತಮಾನ ಭಜನೆ ಹಾಗೂ ಸಾಯಂಕಾಲ ಪರಮಪೂಜ್ಯ ವಿಶ್ವವಲ್ಲಭತೀರ್ಥ ಶ್ರೀಗಳ ಉಪಸ್ಥಿತಿಯಲ್ಲಿ ದೀಪೋತ್ಸವ ಜರಗಿತು.
ಸುರತ್ಕಲ್ ಟೋಲ್ ರದ್ದು : ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್

Posted On: 14-11-2022 04:50PM
ಸುರತ್ಕಲ್ : ಕಳೆದ ಹದಿನೆಂಟು ದಿನಗಳಿಂದ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರ ರದ್ದತಿಗೆ ಆಗ್ರಹಿಸಿ ವಿವಿಧ ಸಮಾನ ಮನಸ್ಕ ಸಂಘಟನೆಗಳು ಧರಣಿ ನಿರತವಾಗಿದ್ದವು ಇದೀಗ ಅದರ ಪ್ರತಿಫಲವೆಂಬಂತೆ ಟೋಲ್ ರದ್ಧತಿ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿ ಈ ವಿಷಯ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಪ್ರಧಾನಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಜನಗಳ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ಶ್ರೀ ಬಬ್ಬರ್ಯ ದೈವಸ್ಥಾನ ಮೂಡು ಮಟ್ಟಾರು : ಜೀರ್ಣೋದ್ಧಾರ ಪೂರ್ವಭಾವಿಯಾಗಿ ತಾಂಬೂಲ ಪ್ರಶ್ನೆಯ ಪರಿಹಾರ ಕಾರ್ಯಕ್ರಮ

Posted On: 13-11-2022 03:26PM
ಕಾಪು : ಶ್ರೀ ಬಬ್ಬರ್ಯ ದೈವಸ್ಥಾನ ಮೂಡು ಮಟ್ಟಾರು ದೈವಸ್ಥಾನದ ಜೀರ್ಣೋದ್ಧಾರ ಪೂರ್ವಭಾವಿಯಾಗಿ ತಾಂಬೂಲ ಪ್ರಶ್ನೆಯ ಪರಿಹಾರ ಕಾರ್ಯಕ್ರಮ ನವೆಂಬರ್ 11 ರಂದು ಸಂಜೆ 5 ರಿಂದ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಘುಪತಿ ಗುಂಡು ಭಟ್ ಇವರ ನೇತೃತ್ವದಲ್ಲಿ ಮತ್ತು ಆಗಮನ ಪಂಡಿತ ವೇ| ಮೂ | ಕುತ್ಯಾರು ಕೇಂಜ ಶ್ರೀಧರ್ ತಂತ್ರಿ ಯವರ ಉಪಸ್ಥಿಯಲ್ಲಿ ಅಘೋರ ಹೋಮ ಮತ್ತು ಪ್ರೇತ ಉಚ್ಚಾಟನೆ ಹಾಗೂ ಇನ್ನಿತರ ವೈದಿಕ ವಿಧಿ ವಿಧಾನಗಳು ಬಬ್ಬರ್ಯ ದೈವಸ್ಥಾನದ ಸಾನಿಧ್ಯದಲ್ಲಿ ನಡೆಯಿತು.
ಮಟ್ಟಾರು ಬಬ್ಬರ್ಯ ದೈವಸ್ಥಾನ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಶಿರ್ವ ಗ್ರಾಮ ಪಂಚಾಯತ್ ಸದಸ್ಯ ಮಟ್ಟಾರು ಸುರೇಶ ನಾಯಕ್, ಮೂಡು ಮಟ್ಟಾರು ಬಬ್ಬರ್ಯ ದೈವಸ್ಥಾನದ ಅಧ್ಯಕ್ಷ ಜಗದೀಶ್ ಶೆಟ್ಟಿ, ಗೌರವ ಅಧ್ಯಕ್ಷ ಶಂಕರ ಶೆಟ್ಟಿ, ಉಪಾಧ್ಯಕ್ಷ ಹರಿಶ್ಚಂದ್ರ ಶೆಟ್ಟಿ, ವಿಠ್ಠಲ್ ಪೂಜಾರಿ, ಗೌರವಾ ಸಲಹೆಗಾರ ರಾಜು ಬಿ ಸುವರ್ಣ, ಕಾರ್ಯದರ್ಶಿ ಹರೀಶ್ ಪೂಜಾರಿ, ಕೋಶಾಧಿಕಾರಿ ರವಿ ಪೂಜಾರಿ ಮತ್ತು ಸರ್ವ ಸರ್ವಸದಸ್ಯರು ಉಪಸ್ಥಿತರಿದ್ದರು.
ವೇದಿಕೆಯಲ್ಲಿರುವ ವ್ಯಕ್ತಿಗಳು ದೊಡ್ಡವರಲ್ಲ, ವೇದಿಕೆಯ ಮುಂಭಾಗದಲ್ಲಿರುವ ವ್ಯಕ್ತಿಗಳು ಸಣ್ಣವರಲ್ಲ : ಎನ್. ದಾಮೋದರ ಬರ್ಮಾ ಬರ್ಕಾ

Posted On: 13-11-2022 03:13PM
ಬಂಟಕಲ್ಲು : ವೇದಿಕೆಯಲ್ಲಿರುವ ವ್ಯಕ್ತಿಗಳು ದೊಡ್ಡವರಲ್ಲ ವೇದಿಕೆಯ ಮುಂಭಾಗದಲ್ಲಿರುವ ವ್ಯಕ್ತಿಗಳು ಸಣ್ಣವರಲ್ಲ ಎಂದು ಉತ್ತಮ ಕಾರ್ಯಕ್ರಮ ನಿರೂಪಕ ವಾಗ್ಮಿ ವಿದ್ವಾಂಸರಾದ ಎನ್. ದಾಮೋದರ ಶರ್ಮಾರವರು ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘದ ಸಂಸ್ಥೆಯಾದ ಶ್ರೀ ವಿಶ್ವಕರ್ಮ ಯುವಕ ಸೇವಾದಳ ನೂತನ ಸದಸ್ಯರಿಗೆ ನೀಡಿದ ಸಜ್ಜನರು ಸವೆಸಿದ ದಾರಿ ಮಾಹಿತಿ ಕಾರ್ಯಕ್ರಮದಲ್ಲಿ ನಮ್ಮತನವನ್ನು ಉಳಿಸುವುದರ ಜೊತೆಗೆ ನಮ್ಮ ಸಮಾಜವನ್ನು ಬೆಳೆಸುವಂತೆ ಯುವಕರು ಮುನ್ನಡೆಯಬೇಕು ಹಿರಿಯರ ಮನಸ್ಸು ನೋವಾಗದ ರೀತಿಯಲ್ಲಿ ನಾವು ಬದುಕಿ ಬಾಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳು ಕಾರ್ಯಕ್ರಮ ಉದ್ಘಾಟಿಸಿದರು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಮುರಳಿಧರ ಆಚಾರ್ಯ, ಗೌರವಾಧ್ಯಕ್ಷ ಗಣಪತಿ ಆಚಾರ್ಯ, ನಿಕಟ ಪೂರ್ವ ಅಧ್ಯಕ್ಷ ಬಿಳಿಯಾರು ಸುರೇಶ ಆಚಾರ್ಯ, ಗಾಯತ್ರಿ ವೃಂದದ ಅಧ್ಯಕ್ಷೆ ಮಾಲತಿ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೇವಾದಳದ ಅಧ್ಯಕ್ಷ ರಾಜೇಶ್ ಆಚಾರ್ಯ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಭರತ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ವಿಜಯೇಂದ್ರ ಆಚಾರ್ಯ ವಂದಿಸಿದರು. ಸುಮಾರು 30ಕ್ಕೂ ಅಧಿಕ ನೂತನ ಸದಸ್ಯರು ಭಾಗವಹಿಸಿದ್ದರು.
ಸಂತ ಮೇರಿ ಮಹಾವಿದ್ಯಾಲಯದಲ್ಲಿ ಎನ್‌ಸಿಸಿಯ ಸ್ವಚ್ಛತಾ ಶ್ರಮದಾನ - ಜನಾಂದೋಲನ

Posted On: 12-11-2022 10:47PM
ಶಿರ್ವ : ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ಸ್ವಚ್ಛತಾ ಶ್ರಮದಾನ- ಜನಾಂದೋಲನ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಯಿತು.
ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ‘ಸ್ವಚ್ಛಸರ್ವೆಕ್ಷಣಗ್ರಾಮಿಣ–2022’ ಜನಾಂದೋಲನ ಕಾರ್ಯಕ್ರಮಕ್ಕೆ ಸ್ವಚ್ಛ ಭಾರತ್ ಅಭಿಯಾನದಡಿಯಲಿ ಗ್ರಾಮೀಣ ಸಮುದಾಯದಲ್ಲಿ ಸ್ವಚ್ಛತೆ, ಶುಚಿತ್ವ ಮತ್ತು ನೈರ್ಮಲ್ಯದ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರ ವ್ಯಾಪಿ ಚಾಲನೆ ನೀಡಿದೆ. ಇದರ ಪ್ರಯುಕ್ತ ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಎನ್.ಸಿ.ಸಿ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಸ್ವಚ್ಚತೆ ಮತ್ತು ಅದನ್ನು ಸಮರ್ಪಕವಾಗಿ ತಮ್ಮ ಸುತ್ತಲ ಮನೆ, ಪರಿಸರಗಳಿಗೆ ಅನ್ವಯವಾಗುವಂತೆ ಕಾರ್ಯರೂಪಗೋಳಿಸುವಲ್ಲಿ ಸ್ವಚ್ಚತಾ ಸರ್ವೇಕ್ಷಣ ಪ್ರತಿಜ್ಞಾವಿಧಾನವನ್ನು ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪ್ರವೀಣ್ ಕುಮಾರ್ ರವರು ನೆರವೇರಿಸಿ, ಸ್ವಚ್ಛತಾ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿ, ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವ ಕಾಲೇಜು ಎನ್.ಸಿ.ಸಿ ಘಟಕವನ್ನು ಶ್ಲಾಘಿಸಿ- ಶುಭ ಹಾರೈಸಿದರು. ಕ್ಯಾಡೆಟ್ ಪೂಜಾ ಶೆಟ್ಟಿ ಸ್ವಚ್ಛತೆಯ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ವಿವರಿಸಿದರು. ಎಲ್ಲಾ ಕ್ಯಾಡೆಟ್ಗಳು ಅಂಚೆ ಕಚೇರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಪರಿಸರವನ್ನು ಸ್ವಚ್ಛಗೊಳಿಸಿದ್ದರು.
ಎನ್.ಸಿ.ಸಿ ಜೂನಿಯರ್ ಅಂಡರ್ ಆಫೀಸರ್ ಲೋಬೋ ಆನ್ ರಿಯಾ ನೇವಿಲ್ ಧೀರಜ್ ಆಚಾರ್ಯ, ಕಂಪನಿ ಸಾರ್ಜೆಂಟ್ ಕ್ವಾಟರ್ ಮಾಸ್ಟರ್ ಆಶಿಶ್ ಪ್ರಸಾದ್, ಸರ್ಜೆಂಟ್ ದೀಪಕ್, ರಿಯಾನ್ ಡಿಸೋಜಾ, ಕಾರ್ಪೊರಲ್ ರಿಯಾ ಸೇರಿನಾ ಡಿಸೋಜಾ ಹಾಗೂ ಕ್ಯಾಡೆಟ್ ಅನುಪ್ ನಾಯಕ್ , ಅಲಿಸ್ಟಾರ್ ಸುಜಯ್ ಡಿಸೋಜ ಸಹಕರಿಸಿದ್ದರು. ಈ ಕಾರ್ಯಕ್ರಮದಲ್ಲಿ 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿಉಡುಪಿಯ ನೈಬ್ ಸುಬೇದಾರ್ ತೇಜೇಂದ್ರ ಕುಮಾರ್ , ಬಿ ಹೆಚ್ ಎಂ ರಾಜಾ ಸಾಬ್ ಎಚ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶಕಿ ಯಶೋದ, ಎಲ್ಲಾ ಕ್ಯಾಡೆಟ್ಗಳು ಉಪಸ್ಥಿತರಿದ್ದರು. ಕ್ಯಾಡೆಟ್ ಸೋನಾಲಿ ಕುಲಾಲ್ ಸ್ವಾಗತಿಸಿದರು. ಲ್ಯಾನ್ಸ್ ಕಾರ್ಪೋರಲ್ ಶೆಟ್ಟಿಗಾರ ಹೇಮಶ್ರೀ, ಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು. ಸೀನಿಯರ್ ಅಂಡರ್ ಆಫೀಸರ್ ಮೋಹಿತ್ ಎನ್ ಸಾಲಿಯಾನ್ ವಂದಿಸಿದರು.
ಪಲಿಮಾರು ಗ್ರಾ. ಪಂ ವಿವಿಧ ಕಾಮಗಾರಿಗಳಿಗೆ 2.6 ಕೋಟಿ ರೂ ಅನುದಾನ : ಶಾಸಕ ಲಾಲಾಜಿ ಮೆಂಡನ್

Posted On: 12-11-2022 10:39PM
ಪಲಿಮಾರು : ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಪಲಿಮಾರು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 2.06 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 17 ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದ್ದು. ಬಿಜೆಪಿ ನೇತೃತ್ವದ ಪಲಿಮಾರು ಗ್ರಾಮ ಪಂಚಾಯತ್ ಉತ್ತಮವಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದು ಪಂಚಾಯತ್ ಸದಸ್ಯರು ಜನರೊಂದಿಗೆ ನಿಕಟಸಂಪರ್ಕ ಹೊಂದಿದ್ದು ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು. ಈಗಾಗಲೇ 13 ಕೋಟಿ 20 ಲಕ್ಷ ಅನುದಾನದಲ್ಲೂ ಪಲಿಮಾರು ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ರಸ್ತೆಗಳಿಗೆ ಹೊಸ ಕಾಯಕಲ್ಪ, ದೇವಸ್ಥಾನ - ದೈವಸ್ಥಾನಗಳಿಗೆ ಹೆಚ್ಚಿನ ಮೊತ್ತದ ಅನುದಾನ ಮಿಸಲಿರಿಸಿದೆ,ಇನ್ನು ಹೆಚ್ಚಿನ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

ಮೂಡು ಫಲಿಮಾರು ಅಣಿಕಟ್ಟು ಪ್ರದೇಶದ ಕಾಲುವೆ ಅಭಿವೃದ್ಧಿ, ಮೂಡು ಫಲಿಮಾರು ಕರಣೀಕರಕಟ್ಟೆಯಿಂದ ರಿಕ್ಷಾನಿಲ್ದಾಣದವರೆಗೆ ರಸ್ತೆ ಅಭಿವೃದ್ಧಿ, ಮೂಡು ಫಲಿಮಾರು ಕುಂಪಳಿ ರಸ್ತೆ ಅಭಿವೃದ್ಧಿ, ಮೂಡು ಫಲಿಮಾರು ನವೀನ್ ಕುಕ್ಯಾನ್ ಮನೆ ಬಳಿ ರಸ್ತೆ ಅಭಿವೃದ್ಧಿ, ಮೂಡು ಫಲಿಮಾರು ಮೂಡು ಮನೆ ರಸ್ತೆ ಅಭಿವೃದ್ಧಿ, ಮೂಡು ಫಲಿಮಾರು ಸುಭಾಷ್ ನಗರ ಚರಂಡಿ ಅಭಿವೃದ್ಧಿ, ಫಲಿಮಾರು ಹಾಗೂ ನಂದಿಕೂರು ಗ್ರಾಮದ ಆಯ್ದ ಬೀದಿಗಳಿಗೆ ಸೋಲಾರ್ ದಾರಿದೀಪ ಅಳವಡಿಕೆ, ಬೆರಂದಿಕಟ್ಟೆ –ರೈಲ್ವೆ ಸ್ಟೇಷನ್ ಸಂಪರ್ಕ ರಸ್ತೆ ಅಭಿವೃದ್ಧಿ, ನಂದಿಕೂರು ಗ್ರಾಮದ ರಾಜೀವ್‌ನಗರ ಕಾಲನಿ ರಸ್ತೆ ಅಭಿವೃದ್ಧಿ, ಅಡ್ವೇ ಬೆಳ್ಳಿಬೆಟ್ಟು ರಸ್ತೆ ಅಭಿವೃದ್ಧಿ, ನಂದಿಕೂರು ಜೈನ ಬಸದಿ ರಸ್ತೆ ಅಭಿವೃದ್ಧಿ, ನಂದಿಕೂರು ಅನಡ್ಕ ರೈಲ್ವೇ ಟ್ರ್ಯಾಕ್ ಬಳಿ ರಸ್ತೆ ಅಭಿವೃದ್ಧಿ, ಅವರಾಲು ಅಂಗನವಾಡಿ ಕಟ್ಟಡ ರಚನೆ, ನಂದಿಕೂರು ಅಡ್ವೇ ಕೆಂಗಡಗುತ್ತು ರಸ್ತೆ ಅಭಿವೃದ್ಧಿ, ಪಟ್ಟೆಂಜೆ ಕಾಲಾಡಿ ರಸ್ತೆ ಅಭಿವೃದ್ಧಿ, ನಂದಿಕೂರು ಕಲ್ಲಾರು ರಸ್ತೆ ಅಭಿವೃದ್ಧಿ, ಅಡ್ವೇ ಜಯ ಸುವರ್ಣ ಮನೆ ಬಳಿ ರಸ್ತೆ ಅಭಿವೃದ್ಧಿ ಯೋಜನೆಗಳು ಶಿಲಾನ್ಯಾಸಗೊಂಡ ಕಾಮಗಾರಿಗಳು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಪ್ರಭು, ಉಪಾಧ್ಯಕ್ಷೆ ಸೌಮ್ಯಲತಾ ಶೆಟ್ಟಿ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಧರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವೀಣಾ ವಿವೇಕಾನಂದ, ಶೇಖರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಕುಮಾರ್, ಮಹೇಶ್ ಶೆಟ್ಟಿ, ರಶ್ಮಿ, ಸುಜಾತಾ, ರಾಯೇಶ್ ಪೈ, ಪ್ರಿಯ ಶೆಟ್ಟಿ, ಸುಮಂಗಲ ದೇವಾಡಿಗ, ಹಾಗೂ ಸ್ಥಳೀಯ ಮುಖಂಡರಾದ ಪ್ರಸಾದ್ ಪಲಿಮಾರು, ಲಕ್ಷ್ಮಣ್ ಶೆಟ್ಟಿ, ಸತೀಶ್ ಶೆಟ್ಟಿ, ಪ್ರವೀಣ್ ಶೆಟ್ಟಿ, ದಿನೇಶ್ ಪಲಿಮಾರು, ನಾರಾಯಣ ದೇವಾಡಿಗ, ವಾಸುದೇವ, ಮದುಕರ್ ಸುವರ್ಣ, ಸುರೇಶ್ ಕುಂಪಲ್ಲಿ, ಹರೀಶ್ ಶೆಟ್ಟಿ, ಪುಷ್ಪವತಿ, ಸದಾನಂದ ಪೂಜಾರಿ, ಹರೀಶ್ ಬಂಗೇರ, ಪ್ರತಾಪ್, ರೋಹಿತ್ ಪೂಜಾರಿ, ಪ್ರಕಾಶ್, ಪ್ರಜ್ವಲ್, ನಾಗರಾಜ್ ಭಟ್, ಚಂದ್ರಶೇಖರ್, ಅಂಗನವಾಡಿ ನಿರ್ಮಿಸಲು ಸ್ಥಳ ದಾನ ಮಾಡಿದ ಅಲ್ಫ್ರೆಡ್ ಪುಟಾರ್ಡೊ, ಕುಟುಂಬಸ್ಥರು ಹಾಗೂ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.
ಕುತ್ಯಾರು ಸೂರ್ಯ ಚೈತನ್ಯ ಶಾಲೆಯಲ್ಲಿ ಪೋಷಕರ ಸಭೆ ಮತ್ತು ಉಪನ್ಯಾಸ ಕಾರ್ಯಕ್ರಮ

Posted On: 12-11-2022 09:44PM
ಕಾಪು : ಆನೆಗುಂದಿ ಶ್ರೀ ಸರಸ್ವತೀ ಎಜುಕೇಷನಲ್ ಟ್ರಸ್ಟ್ (ಅಸೆಟ್) ನ ಅಧೀನದಲ್ಲಿರುವ ಕುತ್ಯಾರು ಸೂರ್ಯಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲಿನಲ್ಲಿ ನವೆಂಬರ್ 12 ರಂದು ಪೋಷಕರ ಸಭೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಪನ್ಯಾಸಕ , ವಾಗ್ಮಿ ಅಶ್ವತ್ಥ ಭಾರದ್ವಾಜ್ ಕೆ. ಮಾತನಾಡಿ , ವಿದ್ಯಾರ್ಥಿಗಳಲ್ಲಿ ತಮ್ಮ ಮೇಲೆ ದೃಢವಾದ ನಂಬಿಕೆ ಮತ್ತು ಶ್ರದ್ಧೆಯಿದ್ದರೆ ಗುರಿಸಾಧನೆ ಸಾಧ್ಯ. ಮಕ್ಕಳಿಗೆ ಪೋಷಕರು ಕಥೆಗಳ ಮೂಲಕ ಜೀವನ ಮೌಲ್ಯಗಳನ್ನು ಕಲಿಸಬೇಕು. ವಿದ್ಯಾರ್ಥಿಗಳ ಕೌಟುಂಬಿಕ ಪರಿಸರ ಶಿಕ್ಷಣಕ್ಕೆ ಪೂರಕವಾಗಿರಬೇಕು. ಹಿರಿಯರು ಮಾರ್ಗದರ್ಶಕರಾಗಿ ಕಿರಿಯರಿಗೆ ಸಂಸ್ಕಾರಯುತ ಜೀವನವನ್ನು ನೀಡಬೇಕು. ಮನಸ್ಸು ಜಾಗೃತಗೊಂಡರೆ ಕಲಿಸಿದ ಶಿಕ್ಷಣವು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಆಡಳಿತ ಮಂಡಳಿಯ ಅಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು ಶುಭ ಹಾರೈಸಿದರು. ಗೌರವ ಸಲಹೆಗಾರ ವಿದ್ವಾನ್ ಶಂಭುದಾಸ ಗುರೂಜಿ, ಟ್ರಸ್ಟ್ ನ ಉಪಾಧ್ಯಕ್ಷ ವಿವೇಕ್ ಆಚಾರ್ಯ ಶಿರ್ವ , ಪ್ರಧಾನ ಕಾರ್ಯದರ್ಶಿ ಗುರುರಾಜ ಆಚಾರ್ಯ , ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ದೀಪಕ್ ಕಾಮತ್ ಉಪಸ್ಥಿತರಿದ್ದರು.
ಉಪಪ್ರಾಂಶುಪಾಲೆ ಸಂಗೀತಾ ಸಂಸ್ಥೆ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಪ್ರಾಂಶುಪಾಲ ಗುರುದತ್ ಸೋಮಯಾಜಿ ಸ್ವಾಗತಿಸಿ ಪ್ರಸ್ತಾವನೆಗೈದರು. ಮಂಜುನಾಥ್ ಶೇಟ್ ಅತಿಥಿಗಳನ್ನು ಪರಿಚಯಿಸಿದರು. ಸಹಶಿಕ್ಷಕ ಸುಧೀರ್ ಕೈರಬೆಟ್ಟು ನಿರೂಪಿಸಿ ರಶ್ಮಿ ಗಣೇಶ್ ವಂದಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ನಡೆಯಿತು.
ಪಡುಬಿದ್ರಿ : ಬ್ಲೂ ಫ್ಲ್ಯಾಗ್ ಬೀಚ್ನಲ್ಲಿ ಜರಗಿದ ವರ್ಣ ವಿಹಾರ -2022 ; 400 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

Posted On: 12-11-2022 09:25PM
ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ, ಪ್ರವಾಸೋದ್ಯಮ ಇಲಾಖೆ ಉಡುಪಿ, ಬ್ಲೂ ಫ್ಲ್ಯಾಗ್ ಬೀಚ್ ಪಡುಬಿದ್ರಿ ಜಂಟಿ ಸಹಯೋಗದೊಂದಿಗೆ ಉಜ್ವಲ್ ಡಿಸೈನ್ಸ್ ಮತ್ತು ಪ್ರಿಂಟಿಂಗ್ಸ್ ಪಡುಬಿದ್ರಿ ಪ್ರಾಯೋಜಕತ್ವದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ನಲ್ಲಿ ವರ್ಣ ವಿಹಾರ -2022 ಉಭಯ ಜಿಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಶನಿವಾರ ಜರಗಿತು. ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಸುಮಾರು 400ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಪಡುಬಿದ್ರಿ ಅಧ್ಯಕ್ಷರಾದ ಗೀತಾ ಅರುಣ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲೆ 3182 ರ ವಲಯ 5 ರ ಸಹಾಯಕ ಗವರ್ನರ್ ಡಾ| ಶಶಿಕಾಂತ ಕರಿಂಕ, ಎಚ್ ಎನ್ ಗುರುಪ್ರಸಾದ್, ವೈ ಸುಧೀರ್ ಕುಮಾರ್, ಮಾಧವ ಸುವರ್ಣ, ಸುಕುಮಾರ್ ಶ್ರೀಯಾನ್, ಪತ್ರಕರ್ತ ಸುರೇಶ್ ಎಮಾಳು, ಗಣೇಶ್ ಆಚಾರ್ಯ ಉಚ್ಚಿಲ, ಗಂಗಾಧರ ಕರ್ಕೇರ, ಅಬ್ದುಲ್ ಹಮೀದ್, ಕಿರಣ್ ರಾಜ್ ಕರ್ಕೇರ, ಅಶೋಕ್ ಸಾಲ್ಯಾನ್, ಭವಿಷ್, ಕಾರ್ಯಕ್ರಮದ ನಿರ್ದೇಶಕರಾದ ತಸ್ನೀನ್ ಅರಾ, ಮಹಮ್ಮದ್ ನಿಯಾಝ್, ಗಣೇಶ್ ಶೆಟ್ಟಿಗಾರ್, ರೂಪ ವಸುಂಧರಾ, ಕಾರ್ಯದರ್ಶಿ ಜ್ಯೋತಿ ಮೆನನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸನ್ಮಾನ : ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಫಲಿಮಾರು, ವೆಂಕಟೇಶ ದೇವಾಡಿಗ, ಪತ್ರಕರ್ತ ರಾಮಚಂದ್ರ ಆಚಾರ್ಯರನ್ನು ಸನ್ಮಾನಿಸಲಾಯಿತು.

ಬಹುಮಾನ ವಿಜೇತರು : ಒಂದರಿಂದ ನಾಲ್ಕನೇ ತರಗತಿಯ ವಿಭಾಗದಲ್ಲಿ ನನ್ನ ಕಲ್ಪನೆಯ ಶಾಲೆ ವಿಷಯದಲ್ಲಿ ಪ್ರಥಮ ಬಹುಮಾನವನ್ನು ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮುಲ್ಕಿ ವಿದ್ಯಾರ್ಥಿ ಚವಿ ಎಸ್ ಅಮೀನ್, ದ್ವಿತೀಯ ಬಹುಮಾನವನ್ನು ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಾನ್ವಿ ಎಸ್ ದೇವಾಡಿಗ. ಐದರಿಂದ ಎಂಟನೇ ತರಗತಿಯ ವಿಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ವಿಷಯದಲ್ಲಿ ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿ ಮುಲ್ಕಿ ವಿದ್ಯಾರ್ಥಿ ಅಜಿತ್ ಎಸ್ ಕಾಮತ್ ಪ್ರಥಮ, ವಿದ್ಯಾ ಪ್ರಸಾರ ವಿದ್ಯಾ ಮಂದಿರ್ ಶಾಲೆಯ ಜ್ಞಾನೇಶ್ ದ್ವಿತೀಯ. 9 ರಿಂದ 12ನೇ ತರಗತಿಯ ವಿಭಾಗದಲ್ಲಿ ಪ್ರಕೃತಿ ವಿಷಯದಲ್ಲಿ ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿ ಮುಲ್ಕಿ ಶಾಲೆಯ ಅಥರ್ವ ಪ್ರಥಮ, ಗಣಪತಿ ಪ್ರೌಢಶಾಲೆ ಪಡುಬಿದ್ರಿಯ ಪ್ರಖ್ಯಾತ್ ದ್ವಿತೀಯ. ಸಾರ್ವಜನಿಕ ವಿಭಾಗದಲ್ಲಿ ಅರ್ಚನಾ ಭಟ್ ಪ್ರಥಮ, ಇರ್ಫಾನ್ ಶೇಕ್ ದ್ವಿತೀಯ ಬಹುಮಾನ ಪಡೆದಿರುತ್ತಾರೆ.

ಕಾರ್ಯಕ್ರಮದಲ್ಲಿ ರೋಟರಿ ಪದಾಧಿಕಾರಿಗಳು, ಸದಸ್ಯರು, ರೋಟರಿ ಸಮುದಾಯ ದಳದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸ್ಪರ್ಧೆಯ ತೀರ್ಪುಗಾರರಾಗಿ ಪಿ ಎನ್ ಆಚಾರ್ಯ ಮತ್ತು ಗುರುಪ್ರಸಾದ್ ಸಹಕರಿಸಿದ್ದರು. ರೋಟರಿ ಅಧ್ಯಕ್ಷರಾದ ಗೀತಾ ಅರುಣ್ ಸ್ವಾಗತಿಸಿದರು. ಬಹುಮಾನಿತರ ಪಟ್ಟಿಯನ್ನು ಯಶೋದ ವಾಚಿಸಿದರು. ಕಾರ್ಯಕ್ರಮವನ್ನು ಸುಧಾಕರ್ ನಿರೂಪಿಸಿದರು.
ಅಕ್ರಮ, ಅವೈಜ್ಞಾನಿಕ, ಕಾನೂನು ಬಾಹಿರ ಟೋಲ್ ಗೇಟ್ ರದ್ದಾಗುವವರೆಗೆ ವಿರಮಿಸಲಾರೆವು : ವಿನಯ್ ಕುಮಾರ್ ಸೊರಕೆ

Posted On: 12-11-2022 08:19PM
ಕಾಪು : ಅಕ್ರಮ, ಅವೈಜ್ಞಾನಿಕ, ಕಾನೂನು ಬಾಹಿರ ವಾಗಿ ಕಾರ್ಯಾಚರಿಸುತ್ತಿರುವ ಸುಲಿಗೆ ಕೇಂದ್ರವು ರದ್ದಾಗುವವರೆಗೆ ವಿರಮಿಸೆವು ಈ ನಿಟ್ಟಿನಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರ ಗೊಳಿಸಲಾಗುವುದೆಂದು ವಿನಯ್ ಕುಮಾರ್ ಸೊರಕೆ ಅವರು ಕಾಪುವಿನಲ್ಲಿ ನಡೆದ ಧರಣಿ ಪ್ರತಿಭಟನೆಯಲ್ಲಿ ಗುಡುಗಿದರು. ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಹಾಗೂ ಇತರ ಸಮಾನ ಮನಸ್ಕ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಂದು ಕಾಪು ಪೇಟೆಯಲ್ಲಿ ಸುರತ್ಕಲ್ ಟೋಲ್ ಗೇಟ್ ರದ್ದುಪಡಿಸುವ ನಿಟ್ಟಿನಲ್ಲಿ ಟೋಲ್ ವಿರೋಧಿ ಹೋರಾಟ ಸಮಿತಿಯ ನಿರ್ಣಯದಂತೆ ಉಭಯ ಜಿಲ್ಲೆಗಳ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿರುವ ಧರಣಿ ಕಾರ್ಯಕ್ರಮವು ಪ್ರಥಮವಾಗಿ ಕಾಪುವಿನಲ್ಲಿ ನಡೆಯಿತು.
ಏಳು ವರ್ಷಗಳ ಹಿಂದೆ ಸುರತ್ಕಲ್ ನಲ್ಲಿ ಟೋಲ್ ಗೇಟ್ ನಿರ್ಮಾಣ ಸಂದರ್ಭದಲ್ಲಿ ಕೊಟ್ಟ ಭರವಸೆ ಯಂತೆ ಹೆಜಮಾಡಿ ಟೋಲ್ ಗೇಟ್ ಪ್ರಾರಂಭವಾದರೆ ಇದನ್ನು ಮುಚ್ಚುತ್ತೇವೆ ಎಂದು ಹೇಳಿ ಇದೀಗ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಸುರತ್ಕಲ್ ಟೋಲ್ ಗೇಟ್ ಮೂಲಕ ಉಭಯ ಜಿಲ್ಲೆಯ ಸಂಸದರು ಮತ್ತು ಶಾಸಕರು ತಮ್ಮ ಖಜಾನೆ ತುಂಬಿಸುತ್ತಿರುವುದು ತುಳುನಾಡಿನ ಜನರ ವಿಪರ್ಯಾಸ. ಟೋಲ್ ಗೇಟ್ ಎಂಬ ಸುಲಿಗೆ ಕೇಂದ್ರದ ಮೂಲಕ ತುಳುನಾಡಿನ ಜನರ ರಕ್ತ ಹೀರುತ್ತಿರುವ ಬಿಜೆಪಿಯ ಜನಪ್ರತಿನಿಧಿಗಳು ಜನರನ್ನು ಪೀಡಿಸುತ್ತಿರುವುದು ತುಳು ಜನರ ದುರ್ದೈವವೆ ಸರಿ.
ಉಡುಪಿ ಮಂಗಳೂರಿಗೆ ಹೋಗಲು ಉಡುಪಿ ಜನರು ಎರಡು ಕಡೆ ಟೋಲ್ ಪಾವತಿಸಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗಡಿಗೆ ತಾಗಿಕೊಂಡಿರುವ ಕಾಪು ಕ್ಷೇತ್ರದ ಜನತೆಯ ಗೋಳನ್ನು ಕೇಳುವ ತಾಳ್ಮೆ ಕಾಪು ಶಾಸಕ ಲಾಲಾಜಿ ಮೆಂಡನ್ ಗೆ ಇಲ್ಲವೇ ಎಂದರು. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಶೇಖರ್ ಹೆಜಮಾಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ್, ನಾಗೇಶ್ ಉದ್ಯಾವರ, ಎಂ.ಪಿ.ಮೊಯಿದಿನಬ್ಬ, ಜಿತೇಂದ್ರ ಫುರ್ಟಾಡೋ, ವಿಲ್ಸನ್ ರಾಡ್ರಿಗಸ್, ಗೀತಾ ವಾಗ್ಲೆ, ಸಂತೋಷ್ ಶೆಟ್ಟಿ ಕೊಡಿಬೆಟ್ಟು ಮತ್ತಿತರರು ಧರಣಿಯನ್ನುದ್ದೇಶಿಸಿ ಮಾತನಾಡಿದರು.
ಧರಣಿಯಲ್ಲಿ ಶಾಂತಲತಾ ಶೆಟ್ಟಿ, ಪ್ರಭಾ ಬಿ.ಶೆಟ್ಟಿ, ಮೊಹಮ್ಮದ್ ಸಾದಿಕ್, ವಿನಯ್ ಬಲ್ಲಾಳ್, ವೈ. ಸುಕುಮಾರ್, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ರಮೀಜ್ ಹುಸೈನ್, ಶರ್ಪುದ್ದೀನ್ ಶೇಖ್, ಅಶ್ವಿನಿ ಬಂಗೇರ, ಫರ್ಜಾನ, ಸಂಜಯ್, ಶೋಭಾ ಬಂಗೇರ, ರಾಧಿಕಾ ಸುವರ್ಣ, ವಿದ್ಯಾಲತಾ, ಸತೀಶ್ಚಂದ್ರ ಮೂಳೂರು, ಮೊಹಮ್ಮದ್ ಆಸಿಫ್, ವೈ.ಸುಧೀರ್, ಮಹೇಶ್ ಶೆಟ್ಟಿ ಕುರ್ಕಾಲು, ಇಂದಿರಾ ಆಚಾರ್ಯ, ಜ್ಯೋತಿ ಗಣೇಶ್ ಉಚ್ಚಿಲ, ಕಿಶೋರ್ ಅಂಬಾಡಿ, ರತನ್ ಶೆಟ್ಟಿ, ಗ್ರೇಸಿ ಕಾರ್ಡೊಝ, ರಹಿಮಾನ್ ಕಣ್ಣಂಗಾರ್, ವಿಲ್ಸನ್ ರಾಡ್ರಿಗಸ್, ನವೀನ್ ಎನ್. ಶೆಟ್ಟಿ, ಸುನಿಲ್ ಡಿ.ಬಂಗೇರ, ಕೆ.ಎಚ್. ಉಸ್ಮಾನ್, ರಾಜೇಶ್ ಕುಲಾಲ್, ರೋಹನ್ ಕುತ್ಯಾರ್, ಸುಭಾಸ್ ಹೆಜಮಾಡಿ, ಮಧ್ವರಾಜ್ ಬಂಗೇರ, ರಾಜೇಶ್ ಮೆಂಡನ್, ಲವ ಕರ್ಕೇರ, ಹರೀಶ್ ನಾಯಕ್, ಇಮ್ರಾನ್ ಮಜೂರ್, ಗೋಪಾಲ ಪೂಜಾರಿ ಫಲಿಮಾರು, ರಾಜೇಶ್ ಶೆಟ್ಟಿ ಪಾಂಗಳ, ಆಶಾ ಕಟಪಾಡಿ, ಅರುಣಾ ಕುಮಾರಿ, ಬಾಲಚಂದ್ರ ಎರ್ಮಾಳ್, ಕಿಶೋರ್ ಎರ್ಮಾಳ್, ಮೆಲ್ವಿನ್ ಡಿಸೋಜ, ಶ್ರೀಕರ್ ಅಂಚನ್, ಸುಧೀರ್ ಕರ್ಕೇರ, ಕರುಣಾಕರ್ ಪಡುಬಿದ್ರಿ, ಕೇಶವ್ ಸಾಲ್ಯಾನ್, ನಯೀಮ್ ಕಟಪಾಡಿ, ಮುಬೀನಾ, ರೀನಾ ಡಿಸೋಜ, ದೀಪ್ತಿ ಮನೋಜ್, ನಾಗಭೂಷಣ್ ಮಜೂರು , ಪ್ರಶಾಂತ್ ಕುಮಾರ್ ಹಿರಿಯಡಕ, ಯು.ಸಿ.ಶೇಕಬ್ಬ, ಸತೀಶ್ ಡೇಜಾಡಿ, ಯಶವಂತ ಪಲಿಮಾರ್ ಮತ್ತು ವಿವಿಧ ಮುಂಚೂಣಿ ಘಟಕ/ಸಮಿತಿಗಳ ಪದಾಧಿಕಾರಿಗಳು, ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಹೋರಾಟ ಸಮಿತಿಯ ಸಹ-ಸಂಚಾಲಕ ಶೇಖರ್ ಹೆಜಮಾಡಿ ಸ್ವಾಗತಿಸಿ, ಪ್ರಸ್ತಾವನೆ ಗೈದರು. ಟೋಲ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ದಿಕ್ಸೂಚಿ ಭಾಷಣ ಮಾಡಿದರು. ಕಾಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಕಾಪು ನಿರೂಪಿಸಿ, ವಂದಿಸಿದರು.
ಎರ್ಮಾಳು : ಶ್ರೀ ಜನಾರ್ಧನ ರಿಕ್ಷಾ ನಿಲ್ದಾಣಕ್ಕೆ ಚಾಲನೆ

Posted On: 12-11-2022 03:04PM
ಎರ್ಮಾಳು : ರಾಷ್ಟ್ರೀಯ ಹೆದ್ದಾರಿ 66 ಶ್ರೀ ಜನಾರ್ಧನ ದೇವಾಲಯದ ಬಳಿ ನೈಮಾಡಿ ಸುಂದರ ಕಾಂತರ ಶೆಟ್ಟಿ, ಮಕ್ಕಳಿಂದ ನಿರ್ಮಾಣಗೊಂಡ ಜನಾರ್ಧನ ರಿಕ್ಷಾ ನಿಲ್ದಾಣವನ್ನು ಜನಾರ್ಧನ ದೇವಾಲಯದ ಆಡಳಿತ ಮೊಕ್ತೇಸರ ಅಶೋಕ ರಾಜ್ ರವರು ಶನಿವಾರ ಬೆಳಗ್ಗೆ ಲೋಕಾರ್ಪಣೆಗೈದರು.
ಈ ಸಂದರ್ಭ ಅವರು ಮಾತನಾಡಿ, ರಿಕ್ಷಾ ಚಾಲಕರು ಸಮಾಜದ ಕಣ್ಣಿದ್ದಂತೆ ರಿಕ್ಷಾ ಇಲ್ಲದ ದಿನಗಳನ್ನು ನಾವು ನೆನಪಿಸುವಂತಿಲ್ಲ ರಿಕ್ಷಾ ಚಾಲಕರು ಜನಪರ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಉತ್ತಮ ಸೇವೆ ನೀಡಬೇಕೆಂದರು.
ಶ್ರೀ ಲಕ್ಷ್ಮಿ ಜನಾರ್ಧನ ದೇಗುಲದ ಪ್ರಧಾನ ಅರ್ಚಕ ವೇದಮೂರ್ತಿ ಕೃಷ್ಣಮೂರ್ತಿ ಭಟ್ ರವರು ಪೂಜಾ ವಿಧಿ ವಿಧಾನ ಪೂರೈಸಿದರು.
ಈ ಸಂದರ್ಭ ವೇದಿಕೆಯಲ್ಲಿ ದಾನಿಗಳಾದ ನೈಮಾಡಿ ನಾರಾಯಣ್ ಶೆಟ್ಟಿ, ವಸಂತ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಕೆ ಎಲ್ ಕುಂಡಂತಾಯ, ಸುದರ್ಶನ್ ವೈ ಎಸ್., ನವಯುಗ ಕಂಪನಿಯ ಶೈಲೇಶ ಶೆಟ್ಟಿ, ಉದಯ್ ಕೆ ಶೆಟ್ಟಿ, ಜಗಜೀವನ್ ಚೌಟ, ಕಿಶೋರ್ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಕುಂತಲಾ, ವಿಶುಕುಮಾರ್, ರೋಹಿತ್ ಆಚಾರ್ಯ, ಗಣೇಶ್ ಶೆಟ್ಟಿ, ಶಶಿಧರ್ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ಶಶಿಕಲಾ, ಸಂಘದ ಅಧ್ಯಕ್ಷ ರಾಮ ಪಿ ಸಾಲಿಯನ್, ಗೌರವಾಧ್ಯಕ್ಷ ಸಂತೋಷ್ ಜೆ ಶೆಟ್ಟಿ ಬರ್ಪಾಣಿ, ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ಜಯ ಮೂಲ್ಯ, ಉಪಸ್ಥಿತರಿದ್ದರು. ಗಣೇಶ್ ಅದಮಾರು ಸ್ವಾಗತಿಸಿ ನಿರೂಪಿಸಿ ವಂದಿಸಿದರು.