Updated News From Kaup

ಕಾಪು ವೆಂಕಟರಮಣ ದೇವಳದಲ್ಲಿ ಮೃಗಬೇಟೆ ಉತ್ಸವ

Posted On: 07-11-2022 08:37PM

ಕಾಪು : ಇಲ್ಲಿನ ಶ್ರೀ ವೆಂಕಟರಮಣ ದೇವಳದಲ್ಲಿ ಮೃಗಬೇಟೆ ಉತ್ಸವ ಇಂದು ಜರಗಿತು.

ಈ ಸಂದರ್ಭ ಮಾತನಾಡಿದ ವೇದಮೂರ್ತಿ ಕಮಲಾಕ್ಷ ಭಟ್ ಶಯನಿ ಏಕಾದಶಿಯಂದು ಮಲಗುವ ಶ್ರೀ ಹರಿ ಉತ್ಥಾನ ದ್ವಾದಶಿಯಂದು ಎಚ್ಚರಗೊಳ್ಳುತ್ತಾನೆಂದು ನಂಬಿಕೆ. ನಾಲ್ಕು ತಿಂಗಳ ಶಯನಾವಸ್ಥೆ ಮುಗಿದು ದೇವರು ಉತ್ಸವಕ್ಕೆ ಹೊರಡುವಾಗ ಮೃಗಬೇಟೆ ಮಾಡುವ ಸಂಪ್ರದಾಯ. ಮೃಗ ಎಂದರೆ ದುಷ್ಟ ನಾಶ. ಅರ್ಥಾತ್ ನಮ್ಮಲ್ಲಿ ತುಂಬಿರುವ ಷಡ್ವೈರಿಗಳ ಸಂಹಾರ. ದೇಗುಲದಲ್ಲಿ ಹುಲಿಯ ವೇಷದಲ್ಲಿ ಒಬ್ಬರು ಅಭಿನಯಿಸಿ ಅದನ್ನು ಅಟ್ಟಿಸಿಕೊಂಡು ಜನರು ಸಂಹರಿಸುವ ಅಭಿನಯವೇ ಈ ಉತ್ಸವ ಆಚರಣೆ ನಡೆಯುತ್ತದೆ ‌ಎಂದರು.

ಯಶಸ್ವಿ ಜನಸಂಕಲ್ಪ ಸಮಾವೇಶ : ಕಾಪು ಬಿಜೆಪಿ

Posted On: 07-11-2022 08:26PM

ಕಾಪು : ಪೂರ್ವತಯಾರಿಕೆಗೆ ಕೆಲವೇ ದಿನಗಳ ಅವಕಾಶ ದೊರೆತರೂ, ಹತ್ತು ಹಲವು ಕಾರ್ಯಕ್ರಮಗಳಿದ್ದರೂ, ವಾರದ ನಡುವೆ ಆದರೂ ನಮ್ಮ ಕಾರ್ಯಕರ್ತರು ಪಕ್ಷಕ್ಕಾಗಿ ಸಮರ್ಪಣೆ ಮಾಡಲು ಸದಾ ಸಿದ್ದ ಎಂದು ರೂಪಿಸಿದ ಐತಿಹಾಸಿಕ ಕಾರ್ಯಕ್ರಮ ಕಾಪು ಬಿಜೆಪಿಯ ಇಂದಿನ ಜನಸಂಕಲ್ಪ ಸಮಾವೇಶ. ಸಮಯ ನಿಗದಿಯಾಗಿ ಕೇವಲ ಕೆಲವೇ ದಿನಗಳು ಬಾಕಿ ಇದ್ದರೂ ಎಲ್ಲ ಪಂಚಾಯತ್ ಗಳಲ್ಲಿ ಸಭೆಗಳನ್ನು ನಡೆಸಿ, ಕಾರ್ಯಕರ್ತರ ಮನ ಒಲಿಸಿ, ಬೇಸಾಯದ ಸಂದರ್ಭದಲ್ಲಿ, ರಜಾದಿನವಲ್ಲದಿದ್ದರೂ, ಬೇರೆ ದೊಡ್ಡ ಮಟ್ಟದ ಧಾರ್ಮಿಕ ಕಾರ್ಯಕ್ರಮ ಇದ್ದರೂ, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಬೂತ್ ಬೂತ್ ಗಳಿಂದ ಫಲಾನುಭವಿ ಕಾರ್ಯಕರ್ತರನ್ನು ಕರೆತಂದು ಕಾಪು ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ನಮ್ಮ ದೇವ ದುರ್ಲಭ ಕಾರ್ಯಕರ್ತರು. ಪಕ್ಷದ ಮೇಲಿನ ಅಭಿಮಾನ ಪಕ್ಷದ ಮೇಲಿನ ಗೌರವದ ಮುಂದೆ ಉಳಿದೆಲ್ಲ ವಿಚಾರಗಳ ನಮಗೆ ಗೌಣವಾಗುತ್ತವೆ ಎಂದು ನಿರೂಪಿಸಿರುವಿರಿ. ಎದುರಾಳಿಗಳಿಗೆ ಸ್ಪಷ್ಟ ಸಂದೇಶ ಇಂದು ಸಿಕ್ಕಿರಬೇಕು. ಮತ್ತೂ ಸಿಗದಿದ್ದರೆ ಅವರ ದುರಾದ್ರಷ್ಟ. ಒಂದಂತೂ ಸತ್ಯ ಇಂದಿನ ಕಾರ್ಯಕ್ರಮಕ್ಕೆ ಬಂದ ಎಲ್ಲ ಕಾರ್ಯಕರ್ತರಿಗೆ ಮತ್ತೆ ಚುನಾವಣೆ ಗೆಲ್ಲುವ ಭರವಸೆ ಬಂದದ್ದು ಮಾತ್ರ ಸುಳ್ಳಲ್ಲ. ಈ ಮೂಲಕ ಜನಸಂಕಲ್ಪ ಸಮಾವೇಶ ಯಶಸ್ವಿಯಾಗಿದೆ. ಮತ್ತೆ ಚುನಾವಣೆ ನಾವು ಗೆಲ್ಲುವೆವು. ಗೆದ್ದೇ ಗೆಲ್ಲುವೆವು ಎಂದು ಬಿಜೆಪಿ ಕಾಪು ಕ್ಷೇತ್ರದ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಎರ್ಮಾಳು : ಬಹುಭಾಷಾ ನಟಿ ಜಯಪ್ರದ ಜನಾರ್ಧನ ದೇವಳಕ್ಕೆ ಭೇಟಿ

Posted On: 07-11-2022 08:17PM

ಎರ್ಮಾಳು : ಉತ್ತರ ಪ್ರದೇಶದ ರಾಂಪುರ ಕ್ಷೇತ್ರದ ಮಾಜಿ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯೆ ಹಾಗೂ ಖ್ಯಾತ ಬಹುಭಾಷಾ ಚಲನಚಿತ್ರ ನಟಿ ಜಯಪ್ರದ ಎರ್ಮಾಳು ಜನಾರ್ಧನ ದೇವಳಕ್ಕೆ ಇಂದು ಭೇಟಿ ನೀಡಿದರು.

ಈ ಸಂದರ್ಭ ದೇವಳ ಆಡಳಿತ ಮೊಕ್ತೇಸರರಾದ ಅಶೋಕ್ ರಾಜ್ ಎರ್ಮಾಳು ಬೀಡು, ಹರೀಶ್ ಶೆಟ್ಟಿ ಎರ್ಮಾಳು, ಸಂತೋಷ್ ಶೆಟ್ಟಿ ಬರ್ಪಾಣಿ, ಕಿಶೋರ್ ಶೆಟ್ಟಿ ಎರ್ಮಾಳು ಮತ್ತಿತರರು ಉಪಸ್ಥಿತರಿದ್ದರು.

ಇನ್ನಂಜೆ : ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ ಉದ್ಯಮಿ ಗ್ರೆಗೋರಿ ಮಾತಾಯಸ್ ರಿಂದ ವಿಜ್ಞಾಪನ ಪತ್ರ ಬಿಡುಗಡೆ

Posted On: 07-11-2022 08:11PM

ಇನ್ನಂಜೆ : ಸೋದೆ ವಾದಿರಾಜ ಮಠದ ಯತಿಗಳಾದ ಶ್ರೀ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರ ಶುಭ ಆಶೀರ್ವಾದದೊಂದಿಗೆ, ಇನ್ನಂಜೆಯ ಯುವ ಉದ್ಯಮಿ ಗ್ರೆಗೋರಿ ಮತಾಯಸ್, ಮತಯಾಸ್ ಹೆರಿಟೇಜ್ ಇನ್ನಂಜೆ ಇವರು ಸುವರ್ಣ ಮಹೋತ್ಸವದ ನೂತನ ಕಟ್ಟಡದ ವಿಜ್ಞಾಪನ ಪತ್ರವನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭ ಸಲಹಾ ಸಮಿತಿಯ ಸದಸ್ಯರುಗಳಾದ ನಂದನ್ ಕುಮಾರ್ ಮತ್ತು ರವಿವರ್ಮ ಶೆಟ್ಟಿ ಮತ್ತು ಯುವಕ ಮಂಡಲದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಮಾಜಿ ಅಧ್ಯಕ್ಷರುಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.

ಬಂಟಕಲ್ಲು : ವಿಕಾಸ ಸೇವಾ ಸಮಿತಿ ಮತ್ತು ಸ್ಥಳೀಯರಿಂದ ಸ್ವಚ್ಚತಾ ಕಾರ್ಯ

Posted On: 06-11-2022 09:17PM

ಬಂಟಕಲ್ಲು : ವಿಕಾಸ ಸೇವಾ ಸಮಿತಿ ಮತ್ತು ಸ್ಥಳೀಯರಿಂದ 92ನೇ ಹೇರೂರು ಬ್ರಹ್ಮನಗರದಿಂದ ಕಲ್ಲುಗುಡ್ಡೆ ಹೋಗುವ ರಸ್ತೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಗಿಡಗಂಟಿಗಳನ್ನು ಸ್ವಚ್ಛಗೊಳಿಸಲಾಯಿತು.

ನಮ್ಮ ಗ್ರಾಮದ ಜವಾಬ್ದಾರಿಯುತ ವ್ಯಕ್ತಿಗಳು ಸ್ಪಂದಿಸದಿದ್ದರೆ ಗ್ರಾಮಸ್ಥರೇ ಜವಾಬ್ದಾರಿ ವಹಿಸಬೇಕೆಂದು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ದಯಾನಂದ ಪೂಜಾರಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ಸಂದರ್ಭ ವಿಕಾಸ ಸೇವಾ ಸಮಿತಿ ಅಧ್ಯಕ್ಷ ಮಾಧವಾಚಾರ್ಯ, ಸದಸ್ಯರಾದ ಗಂಗಾಧರ ಆಚಾರ್ಯ, ಬಂಟಕಲ್ಲು ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಸದಸ್ಯರಾದ ಶೈಲೇಶ್, ಕಲ್ಲು ಗುಡ್ಡೆ ಅನಿಲ್ ಸುನಿಲ್, ಚೇತನ್, ಬಂಟಕಲ್ಲು ಕಾರು ಮಾಲಕ ಮತ್ತು ಚಾಲಕ ಸಂಘದ ಸದಸ್ಯರಾದ ಯಶವಂತ್ ಮತ್ತಿತರರು ಉಪಸ್ಥಿತರಿದ್ದರು.

ಕಟಪಾಡಿ : ರಾಷ್ಟ್ರ ಮಟ್ಟದ ಕ್ರೀಡೆಗಳಿಂದ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿ - ಯಶ್ಪಾಲ್ ಸುವರ್ಣ

Posted On: 06-11-2022 09:09PM

ಕಟಪಾಡಿ : ರಾಷ್ಟ್ರ ಮಟ್ಟದ ಕ್ರೀಡೆಗಳಿಂದ ಮಕ್ಕಳ ಭವಿಷ್ಯ ಉಜ್ವಲಗೊಳ್ಳುವುದು. ಕರಾಟೆಯಂತಹ ಕ್ರೀಡೆಯಲ್ಲಿ ಭಾಗವಹಿಸುವುದರ ಮೂಲಕ ಮಕ್ಕಳ ಮಾನಸಿಕ ಬೆಳವಣಿಗೆಗೊಳ್ಳುವ ಜೊತೆಗೆ ಶಾಲಾ ಕಲಿಕೆಗೆ ಸಹಾಯವಾಗುವುದು. ಇದೇ ರೀತಿಯಲ್ಲಿ ಹಳ್ಳಿ ಹಳ್ಳಿ ಗಳಿಂದ ಕರಾಟೆ ಪಟುಗಳು ಹೊರಹೊಮ್ಮುವುದರಿಂದ ಮುಂದಿನ ದಿನಗಳಲ್ಲಿ ಕರಾಟೆ ಮೂಲಕ ನಮ್ಮ ರಾಜ್ಯ ವಿಶ್ವದಲ್ಲೇ ಹೆಸರು ಗಳಿಸುವುದರಲ್ಲಿ ಸಂಶಯವಿಲ್ಲ. ರಾಷ್ಟ್ರ ಮಟ್ಟದ ಕ್ರೀಡೆಗಳಿಂದ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿ ಎಂದು ಯಶ್ ಪಾಲ್ ಸುವರ್ಣ ಹೇಳಿದರು. ಅವರು ಉಡುಪಿ ಜಿಲ್ಲೆಯ ಕಟಪಾಡಿ ಸುಭಾಸ್ ನಗರದಲ್ಲಿ ಕೆನ್-ಈ-ಮಾಬುನಿ ಶಿಟೋ-ರಿಯೋ ಕರಾಟೆ ಸ್ಕೂಲ್ ಆಫ್ ಇಂಡಿಯಾ ಉಡುಪಿ,ಸಂಸ್ಥೆಯ ವತಿಯಿಂದ ಆದಿತ್ಯವಾರ ಕಟಪಾಡಿ ಸುಭಾಷ್ ನಗರದ ಥಂಡರ್ಸ್ ಗ್ರಾಂಡ್ ಬೇ ಸಭಾಂಗಣದಲ್ಲಿ ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಹೆಚ್ಚಿಸುವಲ್ಲಿ ಸಹಕಾರಿ ಯಾಗಲಿ ಎಂಬ ಉದ್ದೇಶದಿಂದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಕೂಟ "ಕೊಂಪಿಟ್ -3.0," ಉದ್ಘಾಟಸಿ ಮಾತನಾಡಿದರು.

ಈ ಸಂದರ್ಭ ಸುಮಾರು ಸಾವಿರದ ಐನೂರು ಕರಾಟೆ ವಿದ್ಯಾರ್ಥಿಗಳು ಭಾಗವಹಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯತೀಶ್ , ಸಂಸ್ಥೆಯ ಗೌರವಾಧ್ಯಕ್ಷ ಯಶ್ ಪಾಲ್ ಎ.ಸುವರ್ಣ, ನವೀನ್ ಅಮೀನ್ ಶಂಕರಪುರ, ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಕಾರ್ಯದರ್ಶಿ ರವಿ ಕೋಟ್ಯಾನ್, ಗೌರವ ಸಲಹೆಗಾರ ರವಿ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

ಮೂಳೂರು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಪಿಲಿಕೋಲ ದೈವನರ್ತಕ ಗುಡ್ಡ ಪಾಣಾರರಿಗೆ ಹುಟ್ಟೂರ ಸನ್ಮಾನ ; ಮೂಳೂರ್ದ ಮುತ್ತು ಬಿರುದು

Posted On: 06-11-2022 08:53PM

ಮೂಳೂರು : ಪ್ರಶಸ್ತಿಯನ್ನು ಬೆನ್ನಟ್ಟಿ ಹೋಗುವ ಒಂದು ಕಾಲ ಇತ್ತು. ಆದರೆ ಇಂದು ಪ್ರಶಸ್ತಿ ಯೋಗ್ಯ ವ್ಯಕ್ತಿಯನ್ನು ಅರಸಿ ಬಂದಂತಹ ಸಂದರ್ಭ ಯೋಚಿಸಿದರೆ ಯೋಗ್ಯವಾದವರೇ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಜಾನಪದ ವಿದ್ವಾಂಸ ಡಾ.ವೈ.ಎನ್.ಶೆಟ್ಟಿ ಅಭಿಪ್ರಾಯಪಟ್ಟರು. ಅವರು 2022ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಪಿಲಿಕೋಲ ದೈವನರ್ತಕ ಗುಡ್ಡ ಪಾಣಾರ ಮೂಳೂರು ಇವರ ಹುಟ್ಟೂರ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಕಾರ್ಯವನ್ನು ಬಿಕ್ರಿಗುತ್ತು ಸುಂದರ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಸರ್ವೇಶ್ವರ ಫ್ರೆಂಡ್ಸ್ ವತಿಯಿಂದ ಜರಗಿದ ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ಗುಡ್ಡ ಪಾಣಾರ ಇವರನ್ನು ಶಾಲು, ಪೇಟ ತೊಡಿಸಿ ಸನ್ಮಾನ ಪತ್ರ ನೀಡುವ ಮೂಲಕ "ಮೂಳೂರ್ದ ಮುತ್ತು" ಎಂಬ ಬಿರುದು ನೀಡಿ ಸನ್ಮಾನಿಸಿದರು.

ಈ ಸಂದರ್ಭ ಮಹಾಲಕ್ಷ್ಮಿ ಕೋ ಒಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಡಾ.ವೈ.ಎನ್.ಶೆಟ್ಟಿ, ಮೂಳೂರು ಬಿಲ್ಲವ ಸಂಘದ ಉಪಾಧ್ಯಕ್ಷ ಪ್ರಕಾಶ್ ಮೂಳೂರು, ಮಟ್ಟಾರ್ ರತ್ನಾಕರ್ ಹೆಗ್ಡೆ, ಸೇಸು ಮಾಸ್ಟರ್, ಪಾಂಡುರಂಗ ಎಸ್.ಪಡ್ಡಮೆ, ಸಂತೋಷ್, ವೀರ ಕೇಸರಿ ಶೆಟ್ಟಿ, ಕೊರಗ ಬಂಗೇರ, ಸತೀಶ್ ಚಂದ್ರ ಮುಂತಾದವರು ಉಪಸ್ಥಿತರಿದ್ದರು. ಪುರುಷೋತ್ತಮ್ ಮೂಳೂರು ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು.

ಉಡುಪಿ ಜಿಲ್ಲಾ ಮಟ್ಟದ ಟ್ರ್ಯಾಕ್ ಸಂಗೀತ ಸ್ಪರ್ಧೆ ಆಯ್ಕೆ ಪ್ರಕ್ರಿಯೆಯ ಉದ್ಘಾಟನೆ

Posted On: 06-11-2022 07:26PM

ಉಡುಪಿ : ಚಾಣಕ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಹೆಬ್ರಿ ಇದರ ನೇತೃತ್ವದಲ್ಲಿ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿರುವ ವಾಯ್ಸ್ ಆಫ್ ಚಾಣಕ್ಯ 2022 ಉಡುಪಿ ಜಿಲ್ಲಾ ಮಟ್ಟದ ಟ್ರ್ಯಾಕ್ ಸಂಗೀತ ಸ್ಪರ್ಧೆ ಆಯ್ಕೆ ಪ್ರಕ್ರಿಯೆಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ ಉಡುಪಿ ಸೃಷ್ಟಿ ಸಂಗೀತ ತರಬೇತಿ ಕೇಂದ್ರದಲ್ಲಿ ರವಿವಾರ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಸೃಷ್ಟಿ ಸಂಗೀತ ತರಬೇತಿ ಕೇಂದ್ರದ ಆಡಳಿತ ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ ವಹಿಸಿದ್ದರು.

ಸಮಾರಂಭದಲ್ಲಿ ಚಿತ್ರಕಲಾ ಶಿಕ್ಷಕ ರಮೇಶ್ ಕಿದಿಯೂರು, ತೀರ್ಪುಗಾರರಾದ ಸಂಗೀತ ಶಿಕ್ಷಕಿ ಸ್ವಾತಿ ಭಟ್ ಉಡುಪಿ, ಜಯಶ್ರೀ ಕೋಟ್ಯಾನ್ ಕಟಪಾಡಿ, ಸೃಷ್ಟಿ ಫೌಂಡೇಶನ್ ನ ಅಧ್ಯಕ್ಷೆ ಪ್ರೀತಿ ಪಿ.ಸುವರ್ಣ, ಎಸ್ ಪಿ ಮ್ಯೂಸಿಕ್ ನ ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.

ಮಟ್ಟಾರುವಿನಲ್ಲಿ ಜರಗಲಿರುವ ಹಿಂದೂ ಸಮಾಜೋತ್ಸವದ ಪ್ರಚಾರ ಸ್ಟಿಕರ್ ಬಿಡುಗಡೆ

Posted On: 06-11-2022 06:44PM

ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ನವೆಂಬರ್ 27 ರಂದು ಮಟ್ಟಾರ್ ನಲ್ಲಿ ಜರಗಲಿರುವ ಹಿಂದೂ ಸಮಾಜೋತ್ಸವದ ಪ್ರಚಾರ ಸ್ಟಿಕರ್ ಬಿಡುಗಡೆ ಇಂದು ನಡೆಯಿತು.

ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ನಡಿಬೆಟ್ಟು ನಿತ್ಯಾನಂದ ಹೆಗ್ಡೆಯವರು ಪ್ರಚಾರ ಸ್ಟಿಕರ್ ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ವಿಶ್ವ ಹಿಂದೂ ಪರಿಷದ್ ಮಟ್ಟಾರು ಉಪಾಧ್ಯಕ್ಷ ಜಗದೀಶ ಆಚಾರ್ಯ ಸಭಾಧ್ಯಕ್ಷತೆ ವಹಿಸಿದ್ದರು. ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಸಾದ್ ಕುತ್ಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಟ್ಟಿಂಗೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ದೇವದಾಸ್ ಹೆಬ್ಬಾರ್ ಬೆಳ್ಳೆ ಗ್ರಾಮ‌ ಪಂಚಾಯತ್ ಸದಸ್ಯ ಗುರುರಾಜ ಭಟ್, ಬಜರಂಗದಳ ಕಾಪು ಪ್ರಖಂಡ ಸುರಕ್ಷಾ ಪ್ರಮುಖ್ ಆನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಪು : ವಿಶ್ವ ಹಿಂದೂ ಪರಿಷದ್ - ಮಟ್ಟಾರುವಿನಲ್ಲಿ ಹಿತ ಚಿಂತಕ ಅಭಿಯಾನಕ್ಕೆ ಚಾಲನೆ

Posted On: 06-11-2022 06:38PM

ಕಾಪು : ವಿಶ್ವ ಹಿಂದೂ ಪರಿಷದ್ ನ‌ ಹಿತ ಚಿಂತಕ ಅಭಿಯಾನಕ್ಕೆ ಕಾಪು ತಾಲೂಕಿನ ಮಟ್ಟಾರುವಿನಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬಂಟಕಲ್ಲು ಇದರ ಆಡಳಿತ ಮೊಕ್ತೇಸರರಾದ ಶಶಿಧರ ವಾಗ್ಳೆ, ಶಿರ್ವ ಸಹಕಾರಿ ವ್ಯವಸಾಯಿಕ‌ ಸಂಘದ ಅಧ್ಯಕ್ಷ ಪ್ರಸಾದ್ ಕುತ್ಯಾರು, ವಿಶ್ವ ಹಿಂದೂ ಪರಿಷದ್ ಕಾಪು ಪ್ರಖಂಡ ಅಧ್ಯಕ್ಷ ಜಯಪ್ರಕಾಶ್ ಪ್ರಭು, ಕಾರ್ಯದರ್ಶಿ ರಾಜೇಂದ್ರ ಶೆಣೈ, ಬಜರಂಗದಳ ಸಹ ಸಂಚಾಲಕ ಪ್ರಸಾದ್‌ ಅಂಚನ್ ಉಪಸ್ಥಿತರಿದ್ದರು.