Updated News From Kaup

ಮಟ್ಟಾರು : ದಶಮ ವರ್ಷದ ಸಾರ್ವಜನಿಕ ಗೋಪೂಜಾ ಉತ್ಸವ - ಗೋಪೂಜೆ ಮತ್ತು ವಾಹನ ಪೂಜೆ

Posted On: 27-10-2022 02:05PM

ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ‌ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ದಶಮ ವರ್ಷದ ಸಾರ್ವಜನಿಕ ಗೋಪೂಜಾ ಉತ್ಸವದ ಪ್ರಯುಕ್ತ ಬುಧವಾರ ಗೋಪೂಜೆ ಮತ್ತು ವಾಹನ ಪೂಜೆ ನಡೆಯಿತು.

ಶಂಕರಪುರ ಶ್ರೀ ದ್ವಾರಕಾಮಯಿ ಸಾಯಿಬಾಬಾ ಮಂದಿರದ ಪೂಜ್ಯ ಶ್ರೀ ಸಾಯಿ ಈಶ್ವರ್ ಗುರೂಜಿ ಆಶೀರ್ವಚನ ನೀಡಿದರು. ವಿಶ್ವ ಹಿಂದೂ ಪರಿಷದ್ ಮಟ್ಟಾರು ಘಟಕ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ,ಮಾಣಿಬೆಟ್ಟು ಶ್ರೀ ವಿಷ್ಣುಮೂರ್ತಿ ಉಪಾಧ್ಯಾಯ,ವಿಶ್ವ ಹಿಂದೂ ಪರಿಷದ್ ಕಾಪು ಪ್ರಖಂಡ ಅಧ್ಯಕ್ಷ ಜಯಪ್ರಕಾಶ್ ಪ್ರಭು,ಶಿರ್ವ ವಲಯ ಕಾರ್ಯದರ್ಶಿ ಪ್ರಕಾಶ್ ಕೋಟ್ಯಾನ್,ಮಟ್ಟಾರು ಘಟಕ ಗೋರಕ್ಷಾ ಪ್ರಮುಖ್ ಶಿವರಾಜ ಆಚಾರ್ಯ,ದುರ್ಗಾವಾಹಿನಿ ಸಂಚಾಲಕಿ ದೀಕ್ಷಾ ಪ್ರಭು,ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ವಾರಿಜಾ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ರಂಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.ಸಭೆಯ ನಂತರ ಮಾಣಿಬೆಟ್ಟು ಶ್ರೀ ವಿಷ್ಣುಮೂರ್ತಿ ಉಪಾಧ್ಯಾಯರ ನೇತೃತ್ವದಲ್ಲಿ ಗೋಪೂಜೆ ಮತ್ತು ವಾಹನ ಪೂಜೆ ನಡೆಯಿತು. ಕಾರ್ಯಕ್ರಮದ ನಂತರ ಶ್ರೀ ದ್ವಾರಕಾಮಯಿ ಮಠ ಶಂಕರಪುರ ಇವರ ವತಿಯಿಂದ ಶ್ರೀ ಸೌಭಾಗ್ಯ ಕಾರ್ಯಕ್ರಮದ ಪ್ರಯುಕ್ತ ಆಯ್ದ 21 ಹೆಣ್ಣು ಮಕ್ಕಳಿಗೆ ಚಿನ್ನದ ಮೂಗುತಿ ಧಾರಣೆ ನಡೆಯಿತು.

ರೋಟರಿ ಕ್ಲಬ್ ಪಡುಬಿದ್ರಿ : ದೀಪಾವಳಿ ಸಂಭ್ರಮಾಚರಣೆ

Posted On: 26-10-2022 09:53PM

ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ ಹಾಗೂ ರೋಟರಿ ಸಮುದಾಯದಳ ಪಡುಬಿದ್ರಿ ಇದರ ವತಿಯಿಂದ ಬುಧವಾರ ಓಂಕಾರ್ ಕಲಾಸಂಗಮದಲ್ಲಿ ದೀಪಾವಳಿ ಸಂಭ್ರಮಾಚರಣೆ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋ.ಗೀತಾ ಅರುಣ್ ವಹಿಸಿದ್ದರು. ಪೂರ್ವ ಸಹಾಯಕ ಗವರ್ನರ್ ರೋಟರಿ ವಲಯ 5 ರ ರೋ. ಮಾಧವ ಸುವರ್ಣ, ವಿಶ್ವಕರ್ಮ ಸಹಕಾರ ಸೊಸೈಟಿಯ ಉದ್ಯೋಗಿ ಸುನಂದಾ ಗಣೇಶ್ ,ರೋಟರಿ ಕ್ಲಬ್ ಪಡುಬಿದ್ರಿಯ ಪೂರ್ವ ಅಧ್ಯಕ್ಷ ರೋ. ರಿಯಾಜ್ ಮುದರಂಗಡಿ , ಸಮುದಾಯ ದಳದ ಕಾರ್ಯದರ್ಶಿ ತನಿಷ ಜಿ ಕುಕ್ಯಾನ್, ರೋಟರಿ ಕಾರ್ಯದರ್ಶಿ ರೋ. ಜ್ಯೋತಿ ಮೆನನ್ ,ರೋ. ಪುಷ್ಪಲತಾ ಗಂಗಾಧರ್ , ರೋಟರಿ ಸಮುದಾಯದಳದ ಸದಸ್ಯರಾದ ಕುಮಾರಿ ಚೈತ್ರ, ಅದ್ವಿತ್ ಕುಮಾರ್,ಸಿಂಧುಜಾ ಮತ್ತು ರೋಟರಿ ಕ್ಲಬ್ ಪಡುಬಿದ್ರಿ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

ರೋ. ಗೀತಾ ಅರುಣ್ ಸ್ಟಾಗತಿಸಿದರು. ರೋ. ಸುಧಾಕರ್ ಕೆ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.

ಮಟ್ಟಾರು : ಪುಣ್ಯಕೋಟಿ ಉಳಿಸಿ ಕಾಲ್ನಡಿಗೆ ಜಾಥಾ

Posted On: 26-10-2022 09:37PM

ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ಮಟ್ಟಾರು ನೇತೃತ್ವದಲ್ಲಿ ಗೋವಂಶದ ಉಳಿವಿಗಾಗಿ ಜನಜಾಗೃತಿ ಮೂಡಿಸಲು ಪುಣ್ಯಕೋಟಿ ಉಳಿಸಿ ಕಾಲ್ನಡಿಗೆ ಜಾಥಾವು ಬುಧವಾರ ಮಟ್ಟಾರು ಯುಬಿಎಂಸಿ ಶಾಲೆ ಬಳಿಯಿಂದ ಮಟ್ಟಾರು ಮೈದಾನದವರೆಗೆ ನಡೆಯಿತು.

ಈ ಸಂದರ್ಭ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ಮಟ್ಟಾರು ಇದರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಪಡುಬಿದ್ರಿ : ಕಂಚಿನಡ್ಕದಲ್ಲಿ ಪ್ರಥಮ ಬಾರಿಗೆ ಸಾಮೂಹಿಕ ಗೋಪೂಜೆ ; ಗೌರವಾರ್ಪಣೆ

Posted On: 26-10-2022 09:28PM

ಪಡುಬಿದ್ರಿ : ದೀಪಾವಳಿಯ ಪ್ರಯುಕ್ತ ಕಂಚಿನಡ್ಕದ ಹಿಂದೂ ಬಾಂಧವರ ನೇತೃತ್ವದಲ್ಲಿ ಸಾಮೂಹಿಕ ಗೋಪೂಜೆ, ಗೋಸಾಕುವ ಕುಟುಂಬಕ್ಕೆ ಗೌರವಾರ್ಪಣೆ ಕಾರ್ಯಕ್ರಮ ಬುಧವಾರ ನಡೆಯಿತು.

ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಭಾರತಮಾತೆಗೆ ಪೂಜೆ ನಡೆಸಿ ಚಾಲನೆ ನೀಡಿದರು. ಮಾತೆಯರಿಂದ ಗೋಪೂಜೆ ನಡೆಸಿ, ಗೋಸಾಕುವ ಕುಟುಂಬಕ್ಕೆ ಗೌರವಪೂರ್ವಕವಾಗಿ ಸನ್ಮಾನಿಸಿ, ಗೋ ಆಹಾರವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಗೀತಾಂಜಲಿ ಸುವರ್ಣ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಮಿಥುನ್.ಆರ್.ಹೆಗ್ಡೆ, ಕಾಪು ಮಂಡಲ ವಿಹಿಂಪ ಮುಖಂಡರಾದ ರಾಜೇಂದ್ರ ಶೆಣೈ, ಹಿಂದು ಜಾಗರಣಾ ವೇದಿಕೆ ಮುಖಂಡ ಪ್ರತೀಕ್ ಕೋಟ್ಯಾನ್, ಹಿಂದೂ ಮುಖಂಡರಾದ ಸಂದೇಶ್ ಶೆಟ್ಟಿ, ಸುಹಾಸ್ ಶೆಟ್ಟಿ, ಲೊಕೇಶ್ ಪಲಿಮಾರು, ಮೋಹನ್ ಪಣಿಯೂರು, ಸುಬ್ಬ ಕಂಚಿನಡ್ಕ, ಮೊನಪ್ಪ, ಸುಂದರ್, ಸುಗುಣಾ, ಶಾಂತ, ಚಿಕ್ಕ್ಯಕ್ಕ ಮೊದಲಾದವರು ಉಪಸ್ಥಿತರಿದ್ದರು.

ಪಲಿಮಾರು : ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ನೇತೃತ್ವದಲ್ಲಿ ಸಾಮೂಹಿಕ ಗೋಪೂಜಾ ಕಾರ್ಯಕ್ರಮ

Posted On: 26-10-2022 08:46PM

ಪಲಿಮಾರು : ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು, ಪಲಿಮಾರು ಇದರ ನೇತೃತ್ವದಲ್ಲಿ ದಿನಾಂಕ ಬುಧವಾರದಂದು ಭಾರತಮಾತೆಗೆ ಪುಷ್ಪಾರ್ಚನೆಯನ್ನೂ ಸಲ್ಲಿಸಿ, ಸಾಮೂಹಿಕ ಗೋಪೂಜಾ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ಕಿಂಚಿತ್ತು ಸೇವೆ ಮಾಡುವ ಉದ್ದೇಶದಿಂದ, ದೇಣಿಗೆಯನ್ನು ಸಂಗ್ರಹಿಸಲು ಕಾಣಿಕೆ ಡಬ್ಬಿಯನ್ನು ನೀಡಲಾಯಿತು. ಪಲಿಮಾರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗಾಯತ್ರಿ ಡಿ ಪ್ರಭು ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಗೋರಕ್ಷಕ ಪ್ರಮುಖರಾದ ಸಂದೇಶ್ ಶೆಟ್ಟಿ ಪಾದೆಬೆಟ್ಟು, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಲೋಕೇಶ್ ಪಲಿಮಾರು, ಭಗವತಿ ಗ್ರೂಪ್ ಇದರ ಪ್ರಮುಖರಾದ ಯುವರಾಜ್ ಕುಲಾಲ್ ಪಡುಬಿದ್ರಿ, ಹಾಗೂ ಶ್ರೀದೇವಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರು, ಹಾಗೂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾಪು : ಕಡಲ ಕಿನಾರೆಯಲ್ಲಿ ಪೆರ್ಣಂಕಿಲ ಶಂಕರ ಪ್ರತಿಷ್ಠಾನದ ವತಿಯಿಂದ ನಡೆದ ಗೂಡುದೀಪ ಸ್ಪರ್ಧೆ ; ಬಹುಮಾನ ವಿತರಣೆ

Posted On: 26-10-2022 08:25PM

ಕಾಪು : ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವ ಪೆರ್ಣಂಕಿಲ ಶಂಕರ ಪ್ರತಿಷ್ಠಾನದ ವತಿಯಿಂದ ರವಿವಾರ ಕಾಪು ಬೀಚ್ ನಲ್ಲಿ ಗೂಡುದೀಪ ಸ್ಪರ್ಧೆಯು ನಡೆಯಿತು.

ಈ ಸಂದರ್ಭ ಮಾತಾಡಿದ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಸಾಂಪ್ರದಾಯಿಕತೆಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಸ್ಪರ್ಧೆಗಳು ಅನಿವಾರ್ಯ. ಶಂಕರ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದರು. ಪೆರ್ಣಂಕಿಲ ಶಂಕರ ಪ್ರತಿಷ್ಠಾನದ ಟ್ರಸ್ಟಿ ಶ್ರೀಶ ನಾಯಕ್ ಮಾತನಾಡಿ ಪ್ರತಿವರ್ಷ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ನಮ್ಮ ಟ್ರಸ್ಟ್ ತಂದೆಯ ಆಶಯದಂತೆ ನಡೆಯುತ್ತಿದೆ. ಸಾಂಸ್ಕೃತಿಕ, ಧಾರ್ಮಿಕವಾಗಿ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಮ್ಮ ಟ್ರಸ್ಟ್ ಇದೆ ಎಂದರು.

ಧನ ಸಹಾಯ : ಆರೋಗ್ಯ ಮತ್ತು ಗೃಹ ನಿರ್ಮಾಣಕ್ಕಾಗಿ ಟ್ರಸ್ಟ್ ವತಿಯಿಂದ ಧನಸಹಾಯ ವಿತರಿಸಲಾಯಿತು. ಬಹುಮಾನ ವಿಜೇತರು : ಪ್ರಥಮ ಬಹುಮಾನ ರೂ. 11,111ನ್ನು ರಕ್ಷಿತ್ ಕುಮಾರ್ ಕಾಪಿಕಾಡ್, ದ್ವಿತೀಯ ರೂ. 7,777ನ್ನು ರವಿರಾಜ್ ಮಂಗಳೂರು, ತೃತೀಯ ರೂ.5,555ನ್ನು ಉಮೇಶ್ ಕಾವೂರು ಪಡೆದುಕೊಂಡರು. ಕಲಾವಿದರಾದ ಶಶಾಂಕ್, ರಕ್ಷಾ ಮತ್ತು ಯಶವಂತ್ ಗೂಡುದೀಪ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಉದಯ ಕುಮಾರ್ ಶೆಟ್ಟಿ, ಶಾಸಕ ಲಾಲಾಜಿ ಆರ್ ಮೆಂಡನ್, ಶ್ರೀಕಾಂತ ನಾಯಕ್, ಕುತ್ಯಾರು ನವೀನ್ ಶೆಟ್ಟಿ, ವೀಣಾ ಶೆಟ್ಟಿ, ದಿನೇಶ್ ಮೆಂಡನ್, ಗಂಗಾಧರ ಸುವರ್ಣ, ಶಿಲ್ಪಾ ಸುವರ್ಣ, ಮಿಥುನ್ ಹೆಗ್ಡೆ, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಅನಿಲ್ ಶೆಟ್ಟಿ, ಸ್ವೀಕಾರ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಪೆರ್ಣಂಕಿಲ ಶಂಕರ ಪ್ರತಿಷ್ಠಾನದ ಟ್ರಸ್ಟಿ ಶ್ರೀಶ ನಾಯಕ್ ಸ್ವಾಗತಿಸಿ, ಪ್ರಸ್ತಾವಿಸಿದರು. ಯಶವಂತ್ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಕುಮಾರ್ ಮೂಡುಬೆಳ್ಳೆ ವಂದಿಸಿದರು.

ಕಾಪು : ಅಜಿಲಕಾಡು ಯುವಕರಿಂದ ಬಾವಿಗೆ ಬಿದ್ದ ನಾಯಿಯ ರಕ್ಷಣೆ

Posted On: 26-10-2022 05:10PM

ಕಾಪು : ಕಲ್ಲುಗುಡ್ಡೆ ಕುಂಜ ಪರಿಸರದ ಕಾಡಿನ ನಡುವೆ ಸತತ ನಾಲ್ಕು ದಿನಗಳಿಂದ ಬಾವಿಯಲ್ಲಿ ಬಿದ್ದ ನಾಯಿಯನ್ನು ಯುವಕ ವೃಂದ ಅಜಿಲಕಾಡು ಇದರ ಸದಸ್ಯರು ಇಂದು ರಕ್ಷಿಸಿದರು.

ಕಟಪಾಡಿ : ಈ ಬಾರಿ ಕಾಂತಾರ ಇಫೆಕ್ಟ್ ನಲ್ಲಿ ರಿಕ್ಷಾ ಚಾಲಕ ಜಯಕರ್

Posted On: 26-10-2022 02:02PM

ಕಟಪಾಡಿ : ಆಟೋ ಚಾಲಕ ಜಯಕರ್ ಆಯುಧ ಪೂಜೆಯ ಪ್ರಯುಕ್ತ ರಿಕ್ಷಾಕ್ಕೆ ಕಾಂತಾರ ಸಿನಿಮಾ ಶೈಲಿಯಲ್ಲಿ ಸಿಂಗರಿಸಿ ತುಳುನಾಡಿನ ಕಂಬಳ ಮತ್ತು ಕಾಡು ಹಾಗು ಜನರ ನಡುವಿನ ಸಂಬಂಧದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಸುಮಾರು 17 ವರ್ಷಗಳಿಂದ ರಿಕ್ಷಾ ಚಾಲಕನಾಗಿ ದುಡಿದು ತನ್ನ ಜೀವನ ಸಾಗಿಸುತ್ತಿರುವ ಜಯಕರ್ ಹತ್ತು ವರ್ಷಗಳಿಂದ ತನ್ನ ಜೀವನ ಬಂಡಿ ಸಾಗಿಸುವ ರಿಕ್ಷಾಕ್ಕೆ ವಿವಿಧ ರೀತಿಯಲ್ಲಿ ಸಿಂಗರಿಸಿ ದೀಪಾವಳಿಯ ಸಂದರ್ಭ ರಿಕ್ಷಾ ಪೂಜೆಯನ್ನು ಮಾಡುತ್ತಾರೆ.

ಕೊರೋನಾ ಸಂದರ್ಭದಲ್ಲಿ ರಿಕ್ಷಾ ಬೆಲೂನ್ ಸಿಂಗರಿಸಿ ಕಟಪಾಡಿ ಪರಿಸರದಲ್ಲಿ ಓಡಾಟ ಮಾಡಿ ಮಕ್ಕಳ ಮನ ಗೆದ್ದಿದ್ದರು.

ಈ ಬಾರಿ ರಿಕ್ಷಾವನ್ನು ವಿವಿಧ ಹೂ ಮತ್ತು ಬಳ್ಳಿಗಳಿಂದ ಅಲಂಕರಿಸಿ ಪ್ರಕೃತಿ ಉಳಿಸುವ ಮಾಹಿತಿಯನ್ನು ಜನರಲ್ಲಿ ನೀಡುತ್ತಿದ್ದಾರೆ.

ಕಾಪು : ಬಿಜೆಪಿ‌ ಒಬಿಸಿ ಮೋರ್ಚಾ ವತಿಯಿಂದ ವಾಹನ ಪೂಜಾ ಕಾರ್ಯಕ್ರಮ

Posted On: 26-10-2022 01:18PM

ಕಾಪು : ಹೊಸ ಮಾರಿಗುಡಿಯಲ್ಲಿ ಕಾಪು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ವಾಹನ ಪೂಜೆ ಕಾರ್ಯಕ್ರಮವನ್ನು ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಬುಧವಾರ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ಬಿಜೆಪಿ ಪಕ್ಷದ ವತಿಯಿಂದ ವಿವಿದೆಡೆಯಲ್ಲಿ ವಾಹನ ಪೂಜಾ, ಗೋ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದೆ. ಸಮಾಜಮುಖಿ ಚಿಂತನೆಯುಳ್ಳ, ಹಿಂದೂ ಧಾರ್ಮಿಕ ಆಚರಣೆಗಳನ್ನು ಸಂಭ್ರಮದಿಂದ ಇನ್ನಷ್ಟು ಜನರಿಗೆ ತಲುಪಿಸುವ ಕಾರ್ಯ ಆಗುತ್ತಿದೆ. ನವೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾಪುವಿಗೆ ಭೇಟಿ ನೀಡಲಿದ್ದಾರೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದರು.

ಶ್ರೀಧರ ತಂತ್ರಿ ನೇತೃತ್ವದಲ್ಲಿ ವಾಹನಗಳಿಗೆ ಪೂಜಾ ಕೈಂಕರ್ಯ ನೆರವೇರಿತು.

ಈ ಸಂದರ್ಭ ಯಶ್ಪಾಲ್ ಸುವರ್ಣ, ಸಂತೋಷ್ ಕುಮಾರ್ ಮೂಡುಬೆಳ್ಳೆ, ಗೀತಾಂಜಲಿ ಸುವರ್ಣ, ಅನಿಲ್ ಕುಮಾರ್, ರತ್ನಾಕರ ಶೆಟ್ಟಿ, ಶಶಿಪ್ರಭ, ರವಿ ಉದ್ಯಾವರ, ಪ್ರವೀಣ್ ಪೂಜಾರಿ ಕಾಪು, ಸುಮ ಶೆಟ್ಟಿ, ಸರಿತಾ ಪೂಜಾರ್ತಿ, ಉಷ ಉದ್ಯಾವರ ಮತ್ತಿತರರು ಉಪಸ್ಥಿತರಿದ್ದರು.

ಕಾಪು : ಶ್ರೀ ಲಕ್ಷ್ಮಿ ಜನಾರ್ಧನ ದೇವಳದಲ್ಲಿ ಸಾರ್ವಜನಿಕ ಗೋಪೂಜೆ, ವಾಹನ ಪೂಜೆ

Posted On: 26-10-2022 12:45PM

ಕಾಪು : ಇಲ್ಲಿನ ಮಹತೋಭಾರ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ಸಾರ್ವಜನಿಕ ಗೋಪೂಜೆ ಮತ್ತು ವಾಹನ ಪೂಜೆಯು ಬುಧವಾರ ನೆರವೇರಿತು.

ದೇವಳದ ಪ್ರಧಾನ ತಂತ್ರಿ ಶ್ರೀಶ ತಂತ್ರಿ ನೇತೃತ್ವದಲ್ಲಿ ಗೋ ಪೂಜೆ ನೆರವೇರಿತು.

ಈ ಸಂಧರ್ಭ ಬೀಡು ಮನೆತನದ ಅನಿಲ್ ಬಳ್ಳಾಲ್, ಕಾರ್ಯನಿರ್ವಹಣಾಧಿಕಾರಿ ಸುಧೀರ್ ಕುಮಾರ್ ಶೆಟ್ಟಿ, ಆಡಳಿತಾಧಿಕಾರಿ ಗಣೇಶ್ ರಾವ್, ಲೀಲಾಧರ ಶೆಟ್ಟಿ ಕಾಪು, ನಡಿಕೆರೆ ರತ್ನಾಕರ್ ಶೆಟ್ಟಿ, ಹೊಸ ಮಾರಿಗುಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯ, ಯೋಗೀಶ್ ಪೂಜಾರಿ, ದಿವಾಕರ್, ಲಕ್ಷ್ಮೀಶ್, ಸಿಬಂದಿ ವರ್ಗ ಉಪಸ್ಥಿತರಿದ್ದರು.