Updated News From Kaup
ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಪುಂಡಲೀಕ ಮರಾಠೆ ಶಿರ್ವ ಆಯ್ಕೆ

Posted On: 05-03-2022 10:15PM
ಕಾಪು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ 2022 -27ನೇ ಸಾಲಿನ ನೂತನ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ, ಹಿರಿಯ ಪತ್ರಕರ್ತ ಬಿ. ಪುಂಡಲೀಕ ಮರಾಠೆ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರವರ ಶಿಫಾರಾಸಿನ ಮೇರೆಗೆ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಷಿ ನೇಮಕ ಮಾಡಿದ್ದಾರೆ.
ಕಾಪು ತಾಲೂಕು ಘೋಷಣೆಯಾದ ಬಳಿಕ ಮೂರು ತಾಲೂಕು ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿ, ಹಲವಾರು ಕನ್ನಡ ನಾಡು ನುಡಿ ಸಾಹಿತ್ಯದ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಸಂಘಟಿಸಿದ್ದಾರೆ.
ಜೇಸಿಐ ಕಾಪು : ತರಕಾರಿ ಕೃಷಿ ಬಗ್ಗೆ ಮಾಹಿತಿ, ಬೃಹತ್ ಸೌತೆಕಾಯಿ ನೇರ ಮಾರಾಟ ಕಾರ್ಯಕ್ರಮ

Posted On: 05-03-2022 08:21PM
ಕಾಪು : ಜೆಸಿಐ ಕಾಪು, ಜೇಸಿ ಮಹಿಳಾ ವಿಂಗ್, ಜೂನಿಯರ್ ಜೇಸಿ ವಿಂಗ್ ಆಶ್ರಯದಲ್ಲಿ ತರಕಾರಿ ಕೃಷಿ ಬಗ್ಗೆ ಮಾಹಿತಿ ಹಾಗೂ ಬೃಹತ್ ಸೌತೆಕಾಯಿ ನೇರ ಮಾರಾಟ ಕಾರ್ಯಕ್ರಮವು ಮಾಚ್೯ 6, ಆದಿತ್ಯವಾರ ಇನ್ನಂಜೆಯ ಉದಯ ಜಿ ಇವರ ಮನೆ ಅನುಗ್ರಹ ಇಲ್ಲಿ ಜರಗಲಿದೆ.
ಮುಖ್ಯ ಅತಿಥಿಗಳಾಗಿ ಇನ್ನಂಜೆ ಗ್ರಾಮಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಆಚಾರ್ಯ, ಗೌರವ ಉಪಸ್ಥಿತಿಯಾಗಿ ಇನ್ನಂಜೆಯ ಕೃಷಿಕರಾದ ಕರಿಯ ಮೂಲ್ಯ, ಸಂಪನ್ಮೂಲ ವ್ಯಕ್ತಿಯಾಗಿ ಕಳತ್ತೂರಿನ ಕೃಷಿಕರಾದ ಶಾರದೇಶ್ವರೀ ಗುರ್ಮೆ, ಇನ್ನಂಜೆಯ ಕೃಷಿಕರಾದ ಉದಯ ಟಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಅಭಿಯಾನ ಕಾರ್ಯಕ್ರಮ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Posted On: 05-03-2022 02:27PM
ಉಡುಪಿ : ಬಾಲ್ಯ ವಿವಾಹ ನಿಷೇದ ಅಂಗವಾಗಿ ವ್ಯಾಪಕ ಅರಿವು ಮೂಡಿಸಲು ಜಿಲ್ಲೆಯಲ್ಲಿ ಮಾರ್ಚ್ 6 ರಿಂದ 10 ರ ವರೆಗೆ ಎಲ್.ಇ.ಡಿ. ವಾಹನಗಳ ಮೂಲಕ ವಿಶೇಷ ಅಭಿಯಾನ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು. ಅವರು ಇಂದು, ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಲ್ಯ ವಿವಾಹದ ನಿಷೇದ ಕುರಿತಂತೆ ಜಿಲ್ಲೆಯ 9 ಹೋಬಳಿಗಳಲ್ಲಿ ಪ್ರತಿ ಹೋಬಳಿಯಲ್ಲಿ 5 ಕಾರ್ಯಕ್ರಮಗಳಂತೆ ಒಟ್ಟು 25 ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಎಲ್.ಇ.ಡಿ ವಾಹನಗಳ ಮೂಲಕ ಕಿರು ಚಿತ್ರ ಪ್ರದರ್ಶನ, ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ, ಸಹಿ ಸಂಗ್ರಹ ಅಭಿಯಾನ, ಮನವ ಸರಪಳಿ ರಚನೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ, ಬಾಲ್ಯ ವಿವಾಹದಿಂದ ಪಾರಾದ ವಿದ್ಯಾರ್ಥಿನಿಯರಿಂದ ಅಭಿಪ್ರಾಯಗಳನ್ನು ಪಡೆಯಲಾಗುವುದು ಎಂದರು.
ಜಿಲ್ಲೆಯಲ್ಲಿ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಜಾಗದಲ್ಲಿ ಕಾರ್ಯಕ್ರಮ ಆಯೋಜಿಸಿ, ಕಾರ್ಯಕ್ರಮ ಏರ್ಪಡಿಸುವ ಕುರಿತಂತೆ ಎಲ್ಲಾ ಸ್ಥಳೀಯ ಜನಪ್ರತಿಧಿಗಳಿಗೆ ಮಾಹಿತಿ ನೀಡುವಂತೆ ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಸ್ವಯಂ ಸೇವಾ ಸಂಘಟನೆಗಳ ಸದಸ್ಯರು, ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ, ಬಾಲ್ಯ ವಿವಾಹ ತಡೆಗೆ ನಿಯೋಜಿಸಿರುವ ವಿವಿಧ ಅಧಿಕಾರಿಗಳು, ಭಾಗವಹಿಸಬೇಕು ಎಂದು ತಿಳಿಸಿದರು.
ಮಾರ್ಚ್ 6 ರಂದು ಬೆಳಗ್ಗೆ 9.30 ಗಂಟೆಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಈ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶೇಷಪ್ಪ, ಪೌರಾಯುಕ್ತ ಉದಯ ಶೆಟ್ಟಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ಡಿಹೆಚ್ಓ ಡಾ.ನಾಗಭೂಷಣ ಉಡುಪ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಮತ್ತಿತರರು ಉಪಸ್ಥಿತರಿದ್ದರು.
ಮಾಚ್೯ 6 : ಕಂಗಣಬೆಟ್ಟು ಅಣ್ಣಪ್ಪ ಪಂಜುರ್ಲಿ ವಾರ್ಷಿಕ ನೇಮೋತ್ಸವ

Posted On: 04-03-2022 10:57PM
ಉಡುಪಿ : ಜಿಲ್ಲೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಕೊಡವೂರು ಆದಿ ಉಡುಪಿ ಕಂಗಣಬೆಟ್ಟು ಅಣ್ಣಪ್ಪ ಪಂಜುರ್ಲಿ ದೈವದ ವೈಭವದ ಸಿರಿ ಸಿಂಗಾರ ವಾರ್ಷಿಕ ನೇಮೋತ್ಸವ ಮಾಚ್೯ 6, ಆದಿತ್ಯವಾರದಂದು ಜರಗಲಿದೆ.
ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ಭಂಡಾರ ಮೆರವಣಿಗೆ, 10ಗಂಟೆಗೆ ದೈವಗಳ ನೇಮೋತ್ಸವ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬೆರಳು ಮುದ್ರೆ ಘಟಕದ ಸಹಾಯಕ ಪೊಲೀಸ್ ಉಪನಿರೀಕ್ಷಕ ಅಸ್ವಸ್ತಗೊಂಡು ಕುಸಿದು ಸಾವು

Posted On: 04-03-2022 10:50PM
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆರಳು ಮುದ್ರೆ ಘಟಕದಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ತಿಪ್ಪಣ್ಣ ನಾಗವ್ವ ಮಾದರ (37) ಅಸ್ವಸ್ತಗೊಂಡು ಕುಸಿದಿದ್ದ ಇವರನ್ನು ಪ್ರಥಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಇನ್ನೊಂದು ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿರುವ ಘಟನೆ ಮಾಚ್೯ 4ರ ಸಂಜೆ ನಡೆದಿದೆ.
ಮೂಲತಃ ಬೆಳಗಾವಿ ಜಿಲ್ಲೆಯವರಾದ ತಿಪ್ಪಣ್ಣ ನಾಗವ್ವ ಮಾದರ ಪಾಂಡೇಶ್ವರದಲ್ಲಿರುವ ಜಿಲ್ಲಾ ಎಸ್. ಪಿ. ಕಛೇರಿಯಲ್ಲಿರುವ ಬೆರಳು ಮುದ್ರೆ ಘಟಕದ ಕಚೇರಿಗೆ ನಡೆದುಕೊಂಡು ಬರುತ್ತಿರುವಾಗ ಎ.ಬಿ . ಶೆಟ್ಟಿ ಸರ್ಕಲ್ ಬಳಿ ಅಸ್ವಸ್ತಗೊಂಡು ಕುಸಿದು ಬಿದ್ದವರನ್ನು ಸಿ. ಎ. ಆರ್. ಸಿಬ್ಬಂದಿ ರಮೇಶ್ ರವರು ಕೂಡಲೇ ಉಪಚರಿಸಿ ಎಂ. ವಿ. ಶೆಟ್ಟಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಕೂಡಲೇ ಅಂಬುಲೇನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗೆ ಕೆ. ಎಂ.ಸಿ. ಜ್ಯೋತಿ ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿರುವುದು ತಿಳಿದು ಬಂದಿರುತ್ತದೆ.
ಇವರು 2011 ರಲ್ಲಿ ಪೊಲೀಸ್ ಕಾನ್ ಸ್ಟೇಬಲ್ (FPB) ಆಗಿ ಇಲಾಖೆಗೆ ಸೇರ್ಪಡೆಗೊಂಡಿದ್ದು, ಬಾಗಲಕೋಟೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯದಲ್ಲಿದ್ದವರು ಮುಂಬಡ್ತಿಗೊಂಡು ದಕ್ಷಿಣ ಕನ್ನಡ ಜಿಲ್ಲಾ ಬೆರಳು ಮುದ್ರೆ ಘಟಕದಲ್ಲಿ ಆರು ತಿಂಗಳುಗಳಿಂದ ಎ.ಎಸ್.ಐ. (ಎಫ್.ಪಿ.ಬಿ.) ಕರ್ತವ್ಯ ನಿರ್ವಹಿಸುತ್ತಿದ್ದರು.
ಇವರು ಪತ್ನಿ ದೀಪಾ ತಿಪ್ಪಣ್ಣ ಮಾದರ್ ಮತ್ತು ಮಕ್ಕಳಾದ ನಿಹಾರಿಕಾ (ಆರು ವರ್ಷ) ಅನ್ವಿತಾ (ಮೂರುವರೆ ವರ್ಷ) ಹಾಗೂ ನಿಶಾಂತ್ (ಒಂದೂವರೆ ವರ್ಷ) ಎಂಬ ಮೂರು ಮಕ್ಕಳನ್ನು ಅಗಲಿರುತ್ತಾರೆ.
ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ದೈವಸ್ಥಾನ ಮಲ್ಲಂಪಳ್ಳಿ ಪೆರಂಪಳ್ಳಿ : ವೈಭವದ ಹೊರಕಾಣಿಕೆ

Posted On: 04-03-2022 10:06PM
ಉಡುಪಿ : ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ದೈವಸ್ಥಾನ ಮಲ್ಲಂಪಳ್ಳಿ ಪೆರಂಪಳ್ಳಿಯಲ್ಲಿ ಮಾಚ್೯ 5 ಮತ್ತು 6ರಂದು ಜರಗಲಿರುವ ಸಿರಿ ಸಿಂಗಾರ ನೇಮೋತ್ಸವದ ವೈಭವದ ಹೊರಕಾಣಿಕೆ ಮೆರವಣಿಗೆಗೆ ನಿತಿನ್ ಪೂಜಾರಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ ಯಾದವ್ ಆಚಾರ್ಯ, ಗೌರವ ಅಧ್ಯಕ್ಷರಾದ ರಾಧಾಕೃಷ್ಣ, ಆಡಳಿತ ಮಂಡಳಿ ಸದಸ್ಯರಾದ ವಿನೋದ್ ಶೆಟ್ಟಿ, ಸುರೇಶ್ ಪಾಲನ್, ಕೃಷ್ಣ ನಾಯ್ಕ್, ಗುರಿಕಾರರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಊರಿನ ಹತ್ತು ಸಮಸ್ತರು ಉಪಸ್ಥಿತಿಯಿದ್ದರು. ಮಾಹಿತಿ : ಸಮಿತ್ ಶೆಟ್ಟಿ ಪರ್ಕಳ
ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರುರಿಗೆ ವೈದ್ಯ ಬ್ರಹ್ಮ ಪ್ರಶಸ್ತಿ

Posted On: 04-03-2022 05:02PM
ಮಂಗಳೂರು : ಮಂಗಳೂರಿನ ವೈದ್ಯ ಡಾ. ಎಂ.ಅಣ್ಣಯ್ಯ ಕುಲಾಲ್ ಉಳ್ತೂರುರಿಗೆ ಹೂವಿನ ಹಡಗಲಿಯ ರಾಜ್ಯ ಬರಹಗಾರರ ಸಂಘದ ನೇತೃತ್ವದಲ್ಲಿ ಹಾಸನದಲ್ಲಿ ಜರಗಿದ ಕನ್ನಡ ನುಡಿ ವೈಭವ 2022ರಲ್ಲಿ ವೈದ್ಯ ಬ್ರಹ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಣ್ಣಯ್ಯರವರ ಸಮಾಜಮುಖಿ ಸೇವೆ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗಿದೆ.
ಮಾರ್ಚ್ 6: ವಿಶ್ವ ಮಹಿಳಾ ದಿನದ ಅಂಗವಾಗಿ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ

Posted On: 02-03-2022 08:35PM
ಕಾಪು :ಬಿಜೆಪಿ ಮಹಿಳಾ ಮೋರ್ಚಾ ಕಾಪು ವಿಧಾನಸಭಾ ಕ್ಷೇತ್ರ, ಆರೋಗ್ಯ ಭಾರತಿ ಘಟಕ ಕಾಪು ತಾಲೂಕು ಹಾಗೂ ಜಿಲ್ಲಾ ಸಮಿತಿ ಇವರ ನೇತೃತ್ವದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜು ಕುತ್ಪಾಡಿ ಇವರ ಸಹಯೋಗದೊಂದಿಗೆ ತಜ್ಞ ವೈದರಿಂದ ವಿಶ್ವ ಮಹಿಳಾ ದಿನದ ಅಂಗವಾಗಿ ಉಚಿತ ಆಯುರ್ವೇದ ಅರೋಗ್ಯ ತಪಾಸಣಾ ಶಿಬಿರವು ಮಾರ್ಚ್ 6, ಭಾನುವಾರ ಬೆಳಿಗ್ಗೆ 9.30 ರಿಂದ 1ರ ತನಕ ಕಾಪು ಶ್ರೀ ಹಳೆ ಮಾರಿಯಮ್ಮ ಸಭಾ ಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟೀಮ್ ಮೋದಿ ಕಾಪು ವಲಯದಿಂದ ನಾಳೆ ಮಹಾರುದ್ರಯಾಗ

Posted On: 02-03-2022 08:25PM
ಕಾಪು :ಪ್ರಧಾನಿ ನರೇಂದ್ರ ಮೋದಿಯವರ ಆರೋಗ್ಯ ವೃದ್ಧಿ, ಹಿಂದುತ್ವದ ಮತ್ತು ಹಿಂದೂ ಕಾರ್ಯಕರ್ತರ ಶ್ರೇಯೋಭಿವೃದ್ಧಿಗಾಗಿ ಮಹಾರುದ್ರಯಾಗವು ಟೀಮ್ ಮೋದಿ ಕಾಪು ವಲಯದ ವತಿಯಿಂದ ಯಶ್ ಪಾಲ್ ಸುವರ್ಣರ ಸಹಕಾರದೊಂದಿಗೆ ಮಾಚ್೯ 3ರಂದು ಕಾಪು ತಾಲೂಕಿನ ಮಡುಂಬು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜರಗಲಿದೆ.
ಬೆಳಿಗ್ಗೆ 6ರಿಂದ ಪ್ರಾರಂಭಗೊಂಡು 10:30ಕ್ಕೆ ಪೂರ್ಣಾಹುತಿಯೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದಿಂದ ಮುದ್ರಕರ ದಿನಾಚರಣೆ

Posted On: 02-03-2022 05:45PM
ಉಡುಪಿ : ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಉಡುಪಿ ಇದರ ವತಿಯಿಂದ ಮುದ್ರಕರ ದಿನಾಚರಣೆಯು ಅಮೃತ್ ಗಾರ್ಡನ್ ನಲ್ಲಿ ಜರಗಿತು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎಮ್ ಮಹೇಶ್ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಂಗ್ ಕಮಾಂಡರ್ ಎ ಎಸ್ ಭೋಜರಾಜ್ ಹಾಗೂ ಮುದ್ರಕ ಸೌಹಾರ್ದ ಸಹಕಾರಿ ಯ ಅಧ್ಯಕ್ಷರಾದ ಬಿ ಜಿ ಸುಬ್ಬರಾವ್ ಉಪಸ್ಥಿತರಿದ್ದರು.
ಹಿರಿಯ ಮುದ್ರಕರ ಗೌರವ ಸನ್ಮಾನವನ್ನು ಹಿರಿಯ ಮುದ್ರಕರಾದ ಯು ಮೋಹನ್ ಉಪಾಧ್ಯ, ಆದರ್ಶ ಪ್ರಿಂಟರ್ಸ್ ಉಡುಪಿ ಶಿವರಾಮ್ ಆಚಾರ್ಯ, ಶ್ರೀರಾಮ್ ಪ್ರಿಂಟರ್ಸ್ ಕಾಪು ಕಡರಿ ರವೀಂದ್ರ ಪ್ರಭು, ಮಹಾಲಕ್ಷ್ಮಿ ಪ್ರಿಂಟರ್ಸ್ ಕಾರ್ಕಳ ನಾರಾಯಣ ಕುಂದರ್, ಉಷಾ ಪ್ರಿಂಟರ್ಸ್ ಕುಂದಾಪುರ ಇವರಿಗೆ ನೀಡಿ ಗೌರವಿಸಲಾಯಿತು. ಅದ್ರಷ್ಟ ವ್ಯಕ್ತಿಗಳಾಗಿ ಚಂದ್ರ ನಾಯಿರಿ ಹಾಗೂ ವಿವೇಕಾನಂದ ಕಾಮತ್ ಬಹುಮಾನ ಪಡೆದರು.
ಪ್ರಧಾನ ಕಾರ್ಯದರ್ಶಿ ಮನೋಜ್ ಕಡಬ ಸ್ವಾಗತಿಸಿದರು. ಗೌರವ ಸಲಹೆಗಾರ ಅಶೋಕ್ ಶೆಟ್ಟಿ ಯವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ರಮೇಶ್ ಕುಂದರ್ ನೆರವೇರಿಸಿದರು. ಕೋಶಾಧಿಕಾರಿ ಸುಧೀರ್ ಡಿ ಬಂಗೇರ ಧನ್ಯವಾದವಿತ್ತರು.