Updated News From Kaup

ಡಾ| ಹರ್ಷಿತಾಗೆ ಎಂಬಿಬಿಎಸ್ ನಲ್ಲಿ ಚಿನ್ನದ ಪದಕ

Posted On: 22-06-2021 02:51PM

ಕಾಪು : ಶಿರ್ವ ಮೂಲದ ಡಾ| ಹರ್ಷಿತಾ ಎಚ್. ಶೆಟ್ಟಿ ಇವರು ಪುಣೆಯ ಬಿ.ಜೆ ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆಯಲ್ಲಿ ಕಾಲೇಜಿಗೆ ಅತಿ ಹೆಚ್ಚು ಅಂಕ ಪಡೆದು ದಿ| ಡಾ| ಎ.ವಿ.ಉಮರ್ಕರ್ ಸ್ಮರಣಾರ್ಥ ನೀಡಲ್ಪಡುವ ಚಿನ್ನದ ಪದಕ ಪಡೆದಿದ್ದಾರೆ.

ಮಹಾರಾಷ್ಟ್ರ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನಾಸಿಕ್ ವಲಯದ ಮಹಿಳಾ ಪರೀಕ್ಷಾರ್ಥಿಗಳಲ್ಲಿ ಮೆಡಿಸಿನ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ವಿಜಯ ದೇವಿ ಫಡ್ತಾರೆ ಸ್ಮರಣಾರ್ಥ ಚಿನ್ನದ ಪದಕ ಗಳಿಸಿದ್ದಾರೆ.

ಡಾ| ಹರ್ಷಿತಾ ಅವರು ಮೂರನೇ ವರ್ಷದ ಎಂಬಿಬಿಎಸ್ ಪರೀಕ್ಷೆಯಲ್ಲಿ OPTHALMOLOGY ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದರು.

2015 -16 ರಲ್ಲಿ ಮಹಾರಾಷ್ಟ್ರದ ಸಿಇಟಿ ಪರೀಕ್ಷೆಯಲ್ಲಿ 200ಕ್ಕೆ 199 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದರು.

ಕುರ್ಕಾಲು ಯುವಕ ಮಂಡಲದಿಂದ ಹೊಸ ಬೆಳಕು ವೃದ್ಧಾಶ್ರಮಕ್ಕೆ ವಿವಿಧ ಸವಲತ್ತು ಕೊಡುಗೆ

Posted On: 22-06-2021 11:34AM

ಕಾಪು : ಕುರ್ಕಾಲು ಯುವಕ ಮಂಡಲ (ರಿ.) ಕುರ್ಕಾಲು ವತಿಯಿಂದ ಕೊರೋನ ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟಕ್ಕೊಳಗಾದ ಮಣಿಪಾಲದ ಸರಳಬೆಟ್ಟುವಿನಲ್ಲಿರುವ ಹೊಸ ಬೆಳಕು ವೃದ್ಧಾಶ್ರಮಕ್ಕೆ ರೂ.13,353/- ವೆಚ್ಚದಲ್ಲಿ ವಾಟರ್ ಹೀಟರ್, ವಾಟರ್ ಬೆಡ್, ಸಿಹಿ ತಿಂಡಿ ಹಾಗೂ ಆಶ್ರಮದಲ್ಲಿರುವ ಪಶುಗಳಿಗೆ ಪಶು ಆಹಾರ ನೀಡಲಾಯಿತು.

ಸುಮಾರು 40 ಜನ ವೃದ್ಧರು, ಹಲವು ಅನಾಥ ದನ ಕರುಗಳು ಈ ಆಶ್ರಮದಲ್ಲಿದೆ.

ಈ ಸಂದರ್ಭ ಕುರ್ಕಾಲು ಯುವಕ ಮಂಡಲದ ಅಧ್ಯಕ್ಷರಾದ ಪ್ರಸನ್ನ ಶೆಟ್ಟಿ, ಸದಸ್ಯರಾದ ಸುವಿತ್ ಶೆಟ್ಟಿ, ಸಂತೋಷ್ ಶೆಟ್ಟಿ, ಸುಮಿತ್ ಶೆಟ್ಟಿ ಉಪಸ್ಥಿತರಿದ್ದರು.

ಸಮುದ್ರ ತೀರವನ್ನು ಸ್ವಚ್ಛ ಮತ್ತು ಪ್ಲಾಸ್ಟಿಕ್ ಮುಕ್ತಗೊಳಿಸುವತ್ತ ಶ್ರಮಿಸುತ್ತಿರುವ ಕೈಪುಂಜಾಲಿನ ಯುವಕರು

Posted On: 21-06-2021 06:11PM

ಕಾಪು : ಪ್ರತಿವರ್ಷ ಕನಿಷ್ಠ 8ಮಿಲಿಯನ್ ಟನ್ ಪ್ಲಾಸ್ಟಿಕ್ ನಮ್ಮ ಸಾಗರಗಳಲ್ಲಿ ಕೊನೆಗೊಳ್ಳುತ್ತದೆ ಮತ್ತು ಮೇಲ್ಮೈ ನೀರಿನಿಂದ ಆಳ ಸಮುದ್ರದ ಕೆಸರುಗಳವರೆಗಿನ ಎಲ್ಲಾ ಸಮುದ್ರ ಭಗ್ನಾವಶೇಷಗಳಲ್ಲಿ 80% ನಷ್ಟಿದೆ. ಸಮುದ್ರ ಪ್ರಭೇದಗಳು ಪ್ಲಾಸ್ಟಿಕ್ ನಿಂದ ಸಿಕ್ಕಿಹಾಕಿಕೊಳ್ಳುತ್ತವೆ. ಜೀವವೈವಿಧ್ಯ ಭವಿಷ್ಯ.

ಸಮುದ್ರ ವನ್ಯಜೀವಿಗಳನ್ನು ಉಳಿಸಲು ಮತ್ತು ಪ್ಲಾಸ್ಟಿಕ್ ಅನ್ನು ಆಹಾರ ಸರಪಳಿಯಿಂದ ದೂರವಿರಿಸಲು ಸಾಗರಗಳು ಮತ್ತು ತೀರ ಪ್ರದೇಶಗಳನ್ನು ಸ್ವಚ್ಚ ಗೊಳಿಸುವುದು ಅನಿವಾರ್ಯ. ಇಂತಹ ಕಾರ್ಯದಲ್ಲಿ ಕಾಪು ಸಮೀಪದ ಕೈಪುಂಜಾಲಿನ ಯುವಕರು ತೊಡಗಿದ್ದಾರೆ.

ಸಮುದ್ರ ತೀರವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಮತ್ತು ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಇವರ ಕಾರ್ಯವು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಪಡುಬಿದ್ರಿ : 300 ಕುಟುಂಬಗಳಿಗೆ ಅಕ್ಕಿ ವಿತರಣೆ

Posted On: 21-06-2021 11:52AM

ಪಡುಬಿದ್ರಿ : ಕೊರೊನಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಂಟಾದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಪಡುಬಿದ್ರಿ ಗ್ರಾಮ ಪಂಚಾಯಿತಿಯ ವಾರ್ಡ್ ಸಂಖ್ಯೆ 10ರ ಸದಸ್ಯರಾದ ನಿಯಾಝ್ , ಸಂಜೀವಿ ಪೂಜಾರ್ತಿ, ನವೀನ್ ಎನ್. ಶೆಟ್ಟಿ, ಶಶಿಕಲಾ ಅವರು ದಾನಿಗಳ ಸಹಾಯದಿಂದ ತಮ್ಮ ವಾರ್ಡ್‌ನ 300 ಕುಟುಂಬಗಳಿಗೆ ತಲಾ 10 ಕೆಜಿ ಅಕ್ಕಿಯನ್ನು ವಿತರಿಸಿದರು.

ಸುಜ್ಲಾನ್ ಆರ್‌ಆರ್ ಕಾಲನಿಯ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಅಕ್ಕಿಯನ್ನು ವಿತರಿಸಿದರು.

ನವೀನ್‌ಚಂದ್ರ ಜೆ. ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಮುಂದಾಳು ಬುಡಾನ್ ಸಾಹೇಬ್, ಸುಜ್ಲಾನ್ ಆರ್‌ಆರ್ ಕಾಲನಿಯ ಉಪಾಧ್ಯಕ್ಷ ಮೊಯಿದಿನ್, ರಮೀಝ್ ಹುಸೇನ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಾಫಿ ಎಂ.ಎಸ್, ಜ್ಯೋತಿ ಮೆನನ್, ಮೊಹಮಡನ್ ಹೆಲ್ಪಿಂಗ್ ಹ್ಯಾಂಡ್ಸ್ ಅಧ್ಯಕ್ಷ ನಝೀಬ್, ಹಕೀಂ , ಅನ್ವರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂತ ಮೇರಿ ಮಹಾವಿದ್ಯಾಲಯ, ಶಿರ್ವ : ಅಂತರಾಷ್ಟ್ರೀಯ ಯೋಗ ದಿನಾಚರಣೆ

Posted On: 21-06-2021 11:24AM

ಶಿರ್ವ : ಅಂತರಾಷ್ಟ್ರೀಯ ಯೋಗ ದಿನವನ್ನು ಜೂನ್ 21ರಂದು ಆಚರಿಸಲಾಗುತ್ತದೆ. ಪ್ರಸ್ತುತ ಸಾಲಿನಲ್ಲಿ ಕೋವಿಡ್ -19 ಕಾರಣದಿಂದ ಸಾರ್ವಜನಿಕ ಸಭೆ,ಸಮಾರಂಭ ಹಾಗೂ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿಷೇಧಿಸುವುದರಿಂದ, ಮನೆಯಿಂದಲೇ ಯೋಗ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ,ಯೋಗ ದಿನವನ್ನು ಆಚರಿಸಲು ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆಯುಷ್ ಇಲಾಖೆ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಆಯುಷ್ ಮಂತ್ರಾಲಯವು ನೀಡಿರುವ ಮಾರ್ಗಸೂಚಿಯಂತೆ ಬಿ ವಿತ ಯೋಗ,ಬಿ ಏಟ್ ಹೋಂ ಘೋಷವಾಕ್ಯದೊಂದಿಗೆ ಪ್ರಸಕ್ತ ಸಾಲಿನ ಯೋಗ ದಿನವನ್ನು ಆಚರಿಸಬೇಕು. ಇದರ ಪ್ರಯುಕ್ತ ಶಿರ್ವ,ಸಂತ ಮೇರಿ ಮಹಾವಿದ್ಯಾಲಯದ ಎನ್.ಸಿ.ಸಿ ಘಟಕವು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮನೆಯಿಂದ ಯೋಗ ಮಾಡುವ ಮೂಲಕ ಆಚರಿಸಲಾಯಿತು.

ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಅವರು ಸಾಂಕೇತಿಕವಾಗಿ ಯೋಗ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಯುವಕರನ್ನು ಪ್ರೇರೇಪಿಸಿದರು.

ಕಾಲೇಜಿನ ಪ್ರಾಂಶುಪಾಲರು ಡಾ!ಹೆರಾಲ್ಡ್ ಐವನ್ ಮೋನಿಸ್ ರವರು ಎಲ್ಲರಿಗೂ ಶುಭಹಾರೈಸಿದರು. ಈ ಕಾರ್ಯಕ್ರಮದಲ್ಲಿ ಉಡುಪಿ, ದಕ್ಷಿಣಕನ್ನಡ, ಚಿಕ್ಕಮಗಳೂರು, ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಸೇರಿದಂತೆ ವಿವಿಧ ಶಾಲಾ ಕಾಲೇಜಿನ ಹಾಗೂ ಸಾರ್ವಜನಿಕರು ಕಾಲೇಜು ಹಮ್ಮಿಕೊಂಡಿರುವ ಯೋಗ ಫ್ರಮ್ ಹೋಂ ಕಾಂಪಿಟೇಷನ್ನಲ್ಲಿ ಭಾಗವಹಿಸಿ, ಯೋಗ ಮಾಡುವ ಮೂಲಕ ಆಚರಿಸಿದರು.

21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ,ಉಡುಪಿ ಘಟಕದ ಆಡಳಿತ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪರ್ಮಿಂದರ್ ಸಿಂಘ್,ಎಲ್ಲಾ ಕಾಲೇಜಿನ ಎನ್.ಸಿ.ಸಿ,ಅಧಿಕಾರಿಗಳು, ಘಟಕದ ಸಹ ಸಂಯೋಜಕಿ ಯಶೋದರವರು,ಸೀನಿಯರ್ ಕ್ಯಾಡೆಟ್ ಅಂಡರ್ ಆಫೀಸರ್ ರಾಮದಾಸ್, ಜೂನಿಯರ್ ಅಂಡರ್ ಆಫೀಸರ್ ಪ್ರವಿತ ಮತ್ತು ರಿಯಾನ್ ರಿಷಿ ಅಲ್ಫೋನ್ಸೋ , ಕಾಲೇಜಿನ ಅಧ್ಯಾಪಕ-ಅಧ್ಯಾಪಕೇತರ ಬಂಧುಗಳು,ಹಾಗೂ ಎಲ್ಲಾ ಕ್ಯಾಡೆಟ್ ಗಳು ಉಪಸ್ಥಿತರಿದ್ದರು.

ಕಾಪು : ಕೊರಗ ಸಮುದಾಯಕ್ಕೆ ಸವಲತ್ತು ವಿತರಣೆ

Posted On: 20-06-2021 06:28PM

ಕಾಪು : ಕುಂಜೂರಿನ ಶ್ರೀ ದುರ್ಗಾ ಸೇವಾ ಸಮಿತಿಯ ವತಿಯಿಂದ ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಭಂಡಸಾಲೆ, ಎಲ್ಲೂರು, ಇರಂದಾಡಿ, ಗುತ್ತಬೆಟ್ಟು ಮತ್ತು ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಿಯೂರು ಕೊರಗ ಕಾಲೊನಿ (ಪರಿಶಿಷ್ಟ ಪಂಗಡ) ಗಳಲ್ಲಿ ವಾಸಿಸುತ್ತಿರುವ ೧೯ ಕೊರಗ ಕುಟುಂಬಗಳ ೯೦ ಮಂದಿ ಫಲಾನುಭವಿಗಳ ಮನೆಗೆ ತೆರಳಿ ಚಾಪೆ, ಬೆಡ್ ಶೀಟ್ ಮತ್ತು ಕೊಡೆಗಳನ್ನು ವಿತರಿಸಲಾಯಿತು.

ಸವಲತ್ತು ವಿತರಣೆಗೆ ಚಾಲನೆ ನೀಡಿದ ದುರ್ಗಾ ಸೇವಾ ಸೇವಾ ಸಮಿತಿಯ ಅಧ್ಯಕ್ಷ ಕೆ. ಎಲ್. ಕುಂಡಂತಾಯ ಮಾತನಾಡಿ‌ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸೇವಾ ಕಾರ್ಯಗಳನ್ನು ನಡೆಸುವ ಉದ್ದೇಶದೊಂದಿಗೆ ಪ್ರಾರಂಭಿಸಲಾಗಿರುವ ಸೇವಾ ಸಮಿತಿಯ ಮೂಲಕ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ತ್ರಿಕಾಲ ಪೂಜೆ ಸೇವೆ ನಡೆಸಲಾಗಿತ್ತು. ಸಮಿತಿಯ ಮಹದುದ್ದೇಶಗಳಿಗೆ ದಾನಿಗಳ ದೇಣಿಗೆಯ ಮೊತ್ತವನ್ನು‌ ಈ ಸಾಮಾಜಿಕ ಸೇವಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಇದು ಪ್ರಥಮ ಯೋಜನೆಯಾಗಿದ್ದು ಮುಂದೆ ಇನ್ನಷ್ಟು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೋಳ್ಳುವ ಉದ್ದೇಶ ಹೊಂದಲಾಗಿದೆ ಎಂದರು.

ಕುಂಜೂರು ಶ್ರೀ ದುರ್ಗಾ ಸೇವಾ ಸಮಿತಿಯ ಕೋಶಾಧಿಕಾರಿ ಶ್ರೀವತ್ಸ ರಾವ್ ಕುಂಜೂರು, ಜೊತೆ ಕಾರ್ಯದರ್ಶಿ ರಾಕೇಶ್ ಕುಂಜೂರು, ಸಂಘಟನಾ ಕಾರ್ಯದರ್ಶಿ ಸತೀಶ್ ಶೆಟ್ಟಿ ಕುಂಜೂರು, ಎಲ್ಲೂರು ಗ್ರಾ. ಪಂ. ಸದಸ್ಯ ಸಂತೋಷ್ ಶೆಟ್ಟಿ, ಶ್ರೀ ದುರ್ಗಾ ದೇವಸ್ಥಾನದ ಪ್ರಬಂಧಕ ರಾಘವೇಂದ್ರ ಶೆಟ್ಟಿ, ಶ್ರೀ ದುರ್ಗಾ ಮಿತ್ರ ವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ಸಮಿತಿ ಸದಸ್ಯರಾದ ಭಾರ್ಗವ ಎಲ್. ಕುಂಡಂತಾಯ, ರಾಜ ಶೆಟ್ಟಿ ಗೆರಪಾಯಿಮನೆ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ : ವನಮಹೋತ್ಸವ ಕಾಯ೯ಕ್ರಮ

Posted On: 20-06-2021 12:45PM

ಉಡುಪಿ, ಜೂನ್ 20 : ಉಡುಪಿ ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಟ, ಸುವಣ೯ ಎಂಟರ್ ಪೈಸಸ್ ಬ್ರಹ್ಮಾವರ ಮತ್ತು ಭಾರತೀಯ ವಿಕಾಸ್ ಟ್ರಸ್ಟ್ ಮಣಿಪಾಲ ಇದರ ವತಿಯಿಂದ ಬಿವಿಟಿ ಆವರಣದಲ್ಲಿ ವನಮಹೋತ್ಸವ ಕಾಯ೯ಕ್ರಮ ನಡೆಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಮಾತನಾಡಿ , ಈ ಕೋವಿಡ್ ಸಂದಭ೯ದಲ್ಲಿ ನಾವು ಪರಿಸರಕ್ಕೆ ಪೂರಕವಾಗಿ ವತ೯ನೆ ಮಾಡಬೇಕಾದ ಅಗತ್ಯತೆಯಿದೆ. ಗಿಡಗಳನ್ನು ಬೆಳೆಸಿ ರಕ್ಷಣೆ ಮಾಡುದರಿಂದ ಪರಿಸರ ಮತ್ತು ಆರೋಗ್ಯ ಉತ್ತಮವಾಗಲು ಸಾಧ್ಯ ಎಂದರು.

ವೈದ್ಯಕೀಯ ಪ್ರಕೋಷ್ಟದ ಜಿಲ್ಲಾ ಸಹ ಸಂಚಾಲಕ ಡಾ|| ರಾಮಚಂದ್ರ ಕಾಮತ್ ಪರಿಸರದ ಕುರಿತು ಮತ್ತು ಮುಂದಿನ ಯೋಜನೆ ಕುರಿತು ಮಾತನಾಡಿದರು.

ಈ ಸಂದಭ೯ದಲ್ಲಿ ಸೆಲ್ಕೋ ಸೋಲಾರ್ ಎಜಿಎಂ ಜಗದೀಶ್ ಪೈ, ಡಾll ವಿದ್ಯಾಧರ ಶೆಟ್ಟಿ, ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ, ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂಧನ್ ಹೇರೂರು, ಬಿವಿಟಿ ಕಾಯ೯ ನಿವಾ೯ಹಕ ಮನೋಹರ್ ಕಟ್ಗೇರಿ, ರಾಘವೇಂದ್ರ ಪ್ರಭು,ಕವಾ೯ಲು ಮತ್ತಿತರರು ಉಪಸ್ಥಿತರಿದ್ದರು.

ಆತ್ಮ ನಿರ್ಭರವಾಗಿ ದುಡಿಯುತ್ತಿರುವ ಮಹಿಳೆಯ ಯಶಸ್ಸಿನ ಕಥೆ

Posted On: 19-06-2021 02:12PM

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಹುಟ್ಟಿ ಹೊತ್ತು ತನ್ನದೇ ಆದ "ಸೋಲೀಶ್ ವೇರ್" ಎಂಬ ಬ್ರಾಂಡ್ ತಯಾರಿಸಿ ವಸ್ತ್ರ ವಿನ್ಯಾಸದ ಜಗ್ಗತ್ತಿನಲ್ಲಿ ಅಗಾಧವಾದ ಸಾಧನೆ ಮಾಡುವ ಮಹದಾಸೆಯೊಂದಿಗೆ ತನ್ನ ಸ್ವಂತ ಶ್ರಮ, ಹಠ, ಪರಿಶ್ರಮ ಮತ್ತು ಶೃದ್ಧೆಯಿಂದ ತನ್ನ ಕನಸಿನ ಕೂಸಾದ "ಸೋಲಿಶ್" ಅನ್ನು ಕಟ್ಟಿ ದೇಶ ವಿದೇಶಗಳಲ್ಲಿ ಜನಪ್ರಿಯತೆ ಪಡೆದಿರುವ ಅರೀಫಾ ಇದೀಗ ಮಂಗಳೂರು ( ತುಳುನಾಡು ) , ಮಲೆನಾಡು , ರಾಜ್ಯದಾದ್ಯಂತ ತಮ್ಮ ಬ್ರಾಂಡ್ ಅನ್ನು ಪರಿಚಯಿಸುತ್ತಿದ್ದಾಳೆ.

ಸೋಲಿಶ್ ವೇರ್ ನ ಡಿಸೈನ್ಸ್ ಸದ್ಯ ಈಗಿನ ಟ್ರೆಂಡ್ನ ಜೊತೆಗೆ ಜನರ ಅಭಿರುಚಿ, ಅಭಿಪ್ರಾಯ , ಆಯ್ಕೆಗೆ ಅನುಗುಣವಾಗಿ ವಿನ್ಯಾಸ ಮಾಡಲಾಗುತ್ತದೆ. ಸೋಲಿಶ್ ಕೇವಲ ವಸ್ತ್ರವಿನ್ಯಾಸ ದ ಕಂಪನಿಯಲ್ಲ ಇದೊಂದು ಬ್ರಾಂಡ್ . ಈ ಕಂಪನಿಯ ಉಡುಗೆ ಧರಿಸಿದವರಿಗೆ ಖಂಡಿತವಾಗಿಯೂ ಕೂಡ ಈ ಬ್ರಾಂಡ್ ನ ಪ್ರಾಮುಖ್ಯತೆಯ ಅರಿವಾಗುವುದು ಖಚಿತ. ಅರೀಫಾ ಎಂಬ ಹೆಣ್ಣುಮಗಳು ಮಾಡಿದ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಿದೆ.

ಖಂಡಿತವಾಗಿಯೂ ಕೂಡ ಅರಿಫಾ ಪುಟ್ಟ ಊರಿನಿಂದ ಬಂದು ದೇಶವಿದೇಶಗಳಲ್ಲಿ ತನ್ನ ಬ್ರಾಂಡ್ ಪರಿಚಯಿಸಿ ಇದೀಗ ಮಂಗಳೂರಿಗೆ ಕಾಲಿಟ್ಟಿದ್ದಾಳೆ. ಆಸಕ್ತರು ಇವರ ವೆಬ್ ಸೈಟ್ ಗೆ ಭೇಟಿ ನೀಡಿ ಅಪಾರವಾದ ಡಿಸೈನ್ಸ್ನ ನಲ್ಲಿ ನಿಮಗೆ ಇಷ್ಟವಾದದನ್ನು ಚೂಸ್ ಮಾಡಬಹುದು.. ಅಥವಾ ಕರೆ ಮಾಡಿ ಮುಖತಹ ಭೇಟಿಯಾಗಿ ಮಾತುಕತೆ ನಡೆಸಬಹುದು. ಒಬ್ಬ ಹೆಣ್ಣು ಮಗಳು ಮುನ್ನಡೆಸುತ್ತಿರುವ ಈ ಸಂಸ್ಥೆಗೆ ಆದಷ್ಟು ಪ್ರೋತ್ಸಾಹ ನೀಡೋಣ.

ಸೋಲೀಶ್ ವೇರ್ ನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಹಾಗೂ ಖರೀದಿ ಮಾಡಲು ಕರೆಮಾಡಿ Website : wearsoulish@gmail.com arifa@soulishwear.com Contact Number: +91 8618370244 +91 89515 07789

ಯಶಸ್ವಿ ಉದ್ಯಮಿ, ಸಮಾಜ ಸೇವಕ ಹಿದಾಯತ್ ಅಡ್ಡೂರು ಅವರಿಂದ ದುಬೈನಲ್ಲಿ "ದ ಪ್ರೆಶ್" ಈ ಕಾಮರ್ಸ್ ಉದ್ಯಮ ಪ್ರಾರಂಭ

Posted On: 18-06-2021 03:17PM

ಮಂಗಳೂರು ಮೂಲದ ದುಬೈನ ಯಶಸ್ವಿ ಉದ್ಯಮಿ, ಸಮಾಜ ಸೇವಕ ಹಿದಾಯತ್ ಅಡ್ಡೂರು ಅವರು ತಮ್ಮ ಹೊಸ ಯೋಜನೆ 'ದ ಪ್ರೆಶ್' ಮೂಲಕ ದುಬೈ, ಶಾರ್ಜಾ, ಅಬುಧಾಬಿಯಲ್ಲಿ ತಾಜಾ ಮೀನು, ಚಿಕನ್ ಹಾಗು ಮಟನ್ ಮಾಂಸವನ್ನು ಮನೆಗಳಿಗೆ ಪೂರೈಸುವ ಈ ಕಾಮರ್ಸ್ ಉದ್ಯಮವನ್ನು ಗಲ್ಫ್ ರಾಷ್ಟ್ರದ ಅನೇಕ ಉದ್ಯಮಿಗಳು, ದುಬೈಯ ಭಾರತೀಯ ರಾಯಭಾರಿ ಕಛೇರಿಯ ಅಧಿಕಾರಿಗಳು, ಹಾಗೂ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಪ್ರಾರಂಭಿಸಿದರು.

ಇದರ ಉದ್ಘಾಟನೆಯನ್ನು ದುಬೈನ ಉದ್ಯಮಿ ಹಾಗು ಹಿದಾಯತ್ ಅವರ ಸ್ನೇಹಿತ ರವೂಫ್ ಆಲಿ, executive director Arabia Holdings and Economic Holdings ಅವರು ನೆರವೇರಿಸಿದರು.

ನೆರೆದ ಅತಿಥಿಗಳು ಹಿದಾಯತ್ ಅವರ ಸಮಾಜ ಸೇವೆ, ಅವರು ಮಾಡಿದ ಸಹಾಯ ಹಾಗು ಹಿದಾಯತ್ ಅವರ ಸಾಧನೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದರು. ಈ ಸಂದರ್ಭದಲ್ಲಿ ಹಿದಾಯತ್ ಅವರ ಮಿತ್ರರು ಉದ್ಯಮಿಗಳು ಆಗಿರುವ ಫಾರ್ಚೂನ್ ಗ್ರೂಪ್ ನ ಪ್ರವೀಣ್ ಶೆಟ್ಟಿ ವಕ್ವಾಡಿ, ಉದ್ಯಮಿ ಹಾಗು ಕೊಡುಗೈ ದಾನಿ ರೊನಾಲ್ಡ್ ಕೊಲಾಸೋ, ಭಾರತೀಯ ರಾಯಭಾರಿ ಕಛೇರಿಯ ತಾಡು ಮಾಮು ರಶೀದ್ ಹಝಾರಿ, ಅನ್ವರ ನಹ, ರಾಜೇಶ್ ಸಿಕ್ವೇರಾ, ವಲೇರಿಯನ್ ಡಾಲ್ಮೀಡಿಯಾ, ಇಮ್ರಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ನಿರೂಪಣೆಯನ್ನು 92.7 ಬಿಗ್ ಎಫ್ ಎಮ್ ನ ಹೆಸರಾಂತ ರೇಡಿಯೋ ಜಾಕಿ ಎರಾಲ್ ಅವರು ನಡೆಸಿಕೊಟ್ಟರು. ಇಡೀ ಕಾರ್ಯಕ್ರಮ ಝೂಮ್ ಮೀಟಿಂಗ್ ನ ಮೂಲಕ ನಡೆಯಿತು ಬೇರೆ ಬೇರೆ ಸ್ಥಳದಿಂದ ಸುಮಾರು 60 ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕುಂದಾಪುರ : ಶಿಥಿಲ ಸ್ಥಿತಿಯಲ್ಲಿರುವ ಟ್ರಾನ್ಸ್ಫಾರ್ಮರ್ (ಟಿಸಿ)

Posted On: 17-06-2021 01:37PM

ಕುಂದಾಪುರ : ಕುಂದಾಪುರ ವಿನಾಯಕದಿಂದ ಕೋಡಿಗೆ ಹೋಗುವ ಸಂಪರ್ಕ ರಸ್ತೆ ಟಿಟಿ ರೋಡ್ ಕ್ರಾಸ್ ನಲ್ಲಿರುವ ಬಾವಿಕಟ್ಟೆ ಎಂಬಲ್ಲಿ ಟ್ರಾನ್ಸ್ಫಾರ್ಮರ್ ಶಿಥಿಲ ಗೊಂಡಿದೆ. ಈ ಶೀತಲಗೊಂಡ ಟ್ರಾನ್ಸ್ಫಾರ್ಮರ್ ಇನ್ನೇನು ಕೆಲವೇ ದಿನಗಳಲ್ಲಿ ರಸ್ತೆಗೆ ಬೀಳುವ ಸಂಭವ ಅತಿ ಹೆಚ್ಚಾಗಿದೆ.

ಈ ಸಂಪರ್ಕ ರಸ್ತೆಯಲ್ಲಿ ದಿನನಿತ್ಯಲೂ ಸಾಕಷ್ಟು ಜನ ದಟ್ಟಣೆ ಹಾಗೂ ವಾಹನಗಳು ಓಡಾಡುತ್ತದೆ. ಯಾವುದೇ ಅಹಿತಕರ ಘಟನೆ ಸಂಭವಿಸುವ ಮೊದಲು ಶಿಥಿಲಗೊಂಡಿರುವ ಈ ಟ್ರಾನ್ಸ್ಫಾರ್ಮರ್ (ಟಿಸಿ) ಅನ್ನು ಅತಿ ಶೀಘ್ರದಲ್ಲೇ ಹೊಸ ಕಂಬದ ದೊಂದಿಗೆ ಬದಲಾಯಿಸಿ ಸಾರ್ವಜನಿಕರ ಅವಹಾಲಗೆ ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳು ಕೂಡಲೇ ಸ್ಪಂದಿಸ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ✍