Updated News From Kaup

ರೋಶನಿ ಧಾಮ ಪರಿಶಿಷ್ಟ ಪಂಗಡ ಬುಡಕಟ್ಟು ಪರಿವಾರದ ಸಂಕಷ್ಟಕ್ಕೆ ಸ್ಪಂದಿಸಿದ ಡಿವೈಎಸ್ಪಿ ಶ್ರೀಕಾಂತ್

Posted On: 16-06-2021 10:34AM

ಕುಂದಾಪುರ ಜೂ. 16 : ಕೋರೋನಾ ಮಹಾಮಾರಿ 2ನೇ ಅಲೆಗೆ ರೋಶನಿ ಧಾಮ ಪರಿಶಿಷ್ಟ ಪಂಗಡ ಬುಡಕಟ್ಟು ಜನರ ಸಂಕಷ್ಟವನ್ನು ಅರಿತು ಉಡುಪಿ ಜಿಲ್ಲೆ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಕುಂದಾಪುರ ಪುರಸಭೆ ಸದಸ್ಯರಾದ ಪ್ರಭಾಕರ ವಿ.ರವರು ಹಿಂದೆ ಕುಂದಾಪುರದ ಡಿವೈಎಸ್ಪಿ ಶ್ರೀಕಾಂತ್ ಪ್ರಸ್ತುತ ಪರಿಶಿಷ್ಟ ಪಂಗಡ ಬುಡಕಟ್ಟು ಜನಾಂಗದ ಸ್ಥಿತಿಗತಿಗಳ ಮನವರಿಕೆ ಮಾಡಿ ಸಹಾಯ ಹಸ್ತ ಕೇಳಿದಾಗ ಡಿವೈಎಸ್ಪಿ ಶ್ರೀಕಾಂತ್ ರವರು ಸ್ಪಂದಿಸಿ ಫುಡ್ ಕಿಟ್ ನೀಡಿ ಮಾನವೀಯತೆ ಮೆರೆದಿದ್ದಾರೆ.

ಡಿವೈಎಸ್ಪಿ ಶ್ರೀಕಾಂತ್ ರವರು ರೋಶನಿ ಧಾಮದ ಜನತೆಗೆ, ವಿದ್ಯಾರ್ಥಿಗಳಿಗೆ ಸರಕಾರದ ಸೌಲಭ್ಯಗಳ ಬಗ್ಗೆ ಮತ್ತು ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣ ಪಡೆದು ಸರ್ಕಾರಿ ಕೆಲಸದಲ್ಲಿ ಅಲ್ಲದೇ ಪೊಲೀಸ್ ಇಲಾಖೆ ಹಾಗೂ ಸಮಾಜದಲ್ಲಿ ಉನ್ನತ ಸ್ಥಾನಮನ ಗಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಆತ್ಮಸ್ಥೆರ್ಯ ತುಂಬಿದರು.

ಉಡುಪಿ ಜಿಲ್ಲೆ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಕುಂದಾಪುರ ಪುರಸಭೆ ಸದಸ್ಯರಾದ ಪ್ರಭಾಕರ ವಿ.ರವರು ಬುಡಕಟ್ಟು ಜನಾಂಗದ ಬಗ್ಗೆ ಎಲ್ಲಾ ಅಧಿಕಾರಿ ವರ್ಗದವರು ಹೀಗೆ ಸ್ಪಂದಿಸಿದ್ದರೆ ಮುಂದಿನ ದಿನದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಿ ಉನ್ನತ ಹುದ್ದೆಯನ್ನು ಪಡೆಯುವುದರಲ್ಲಿ ಸಂದೇಹವಿಲ್ಲ. ನಮ್ಮ ಮನವಿಗೆ ಸ್ಪಂದಿಸಿದ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ರವರಿಗೆ ಸ್ವಾಮಿ ಕೊರಗಜ್ಜ ಇನ್ನು ಹೆಚ್ಚಿನ ಸ್ಥಾನಮನ ದಯಾ ಪಾಲಿಸಲಿ, ಇನ್ನು ಹೆಚ್ಚು ಸಮಾಜ ಮುಖಿ ಕೆಲಸ ಮಾಡಲಿ ಎಂದು ಪ್ರಾರ್ಥಿಸಿದರು. ಕುಂದಾಪುರ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೇಖರ್ ಪೂಜಾರಿರವರು ಡಿವೈಎಸ್ಪಿ ಶ್ರೀಕಾಂತ್ ರವರು ರೋಶನಿ ಧಾಮ ಪರಿಶಿಷ್ಟ ಪಂಗಡ ಬುಡಕಟ್ಟು ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದು ತುಂಬಾ ಸಂತೋಷವಾಗಿದೆ ಎಂದರು. ಮೂಡು ಗೋಪಾಡಿ ಪಂಚಾಯತ್ ಸದಸ್ಯೆ ಸುಶೀಲ್ ರವರು ರೋಶನಿ ಧಾಮದ ಪರಿವಾರದವರಿಗೆ ಯಾವುದೇ ಸಂಘ ಸಂಸ್ಥೆಗಳು, ಸ್ಥಳೀಯ ಜನಪ್ರತಿನಿಧಿಗಳು ಕಾರೋನ್ ಸಂಕಷ್ಟ ಕಾಲದಲ್ಲಿ ನಮ್ಮ ಬುಡಕಟ್ಟು ಜನಕ್ಕೆ ಯಾವುದೇ ಕಿಟ್ ನೀಡಲಿಲ್ಲ, ಆದರೆ ನಮ್ಮ ಸಂಕಷ್ಟವನ್ನು ಅರಿತು ಕುಂದಾಪುರ ಡಿವೈಎಸ್ಪಿ ಅವರು ಫುಡ್ ಕಿಟ್ ನೀಡಿದಕ್ಕೆ ನಾವೆಲ್ಲರೂ ಅಭಾರಿಗಳು ಎಂದರು.

ಈ ಸಂದರ್ಭದಲ್ಲಿ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು, ಉಡುಪಿ ಜಿಲ್ಲೆ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಕುಂದಾಪುರ ಪುರಸಭೆ ಸದಸ್ಯರಾದ ಪ್ರಭಾಕರ ವಿ.ರವರು, ಕುಂದಾಪುರ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೇಖರ್ ಪೂಜಾರಿ, ಮೂಡು ಗೋಪಾಡಿ ಪಂಚಾಯತ್ ಸದಸ್ಯೆ ಸುಶೀಲ್ ಉಪಸ್ಥಿತರಿದ್ದರು

ದೈವ ಚಾಕ್ರಿ ಮತ್ತು ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

Posted On: 15-06-2021 03:03PM

ಉಡುಪಿ : ಕೊರಗಜ್ಜ ದೈವಸ್ಥಾನ ಕುಕ್ಕೆಹಳ್ಳಿ ಹಾಗೂ ವಿಶ್ವ ಬಂಟ್ಸ್ ಯೂತ್ ವಿಂಗ್ ವತಿಯಿಂದ ದೈವ ಚಾಕ್ರಿ ಮತ್ತು ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮವನ್ನು ಬೊಬ್ಬರ್ಯ ದೈವಸ್ಥಾನದ ವಠಾರದಲ್ಲಿ ವಿಶ್ವ ಬಂಟ್ಸ್ ಯೂತ್ ವಿಂಗ್ ಉಡುಪಿ ಮಂಗಳೂರಿನ ಗೌರವ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿಯವರು ಆಹಾರ ಕಿಟ್ ಹಸ್ತಾಂತರ ಮಾಡುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವಿಶ್ವ ಬಂಟ್ಸ್ ಯೂತ್ ವಿಂಗ್ ಉಡುಪಿ ಮಂಗಳೂರಿನ ಅಧ್ಯಕ್ಷರಾದ ವಿನೋದ್ ಶೆಟ್ಟಿ, ಬೊಬ್ಬರ್ಯ ಯುವ ಸೇವಾ ಸಮಿತಿಯ ಅಧ್ಯಕ್ಷರಾದ ವರದರಾಜ್ ಕಾಮತ್, ಗೌರವ ಅಧ್ಯಕ್ಷರಾದ ಗಣಪತಿ ಕಾಮತ್ ಹಾಗೂ ಸರ್ವ ಸದಸ್ಯರು ಉಪಸ್ಥಿತಿಯಿದ್ದರು.

ಕುಲಾಲ ಸಂಘ ನಾನಿಲ್ತಾರ್, ಮುಂಡ್ಕೂರು ವತಿಯಿಂದ ಆಹಾರ ಕಿಟ್ ವಿತರಣೆ

Posted On: 15-06-2021 02:55PM

ಕಾರ್ಕಳ : ಮುಂಡ್ಕೂರು ಭಾಗದ ನಾನಿಲ್ತಾರ್ ಕುಲಾಲ ಸಂಘದ ವತಿಯಿಂದ ತೀರಾ ಆರ್ಥಿಕವಾಗಿ ಹಿಂದುಳಿದ ಕುಟುಂಬವನ್ನ ಗುರುತಿಸಿ ಆಹಾರ ಕಿಟ್ ವಿತರಣೆ ಸಂಘದ ಸಭಾಭವನ ದಲ್ಲಿ ನಡೆಯಿತು.

ಸರಿಸುಮಾರು ಇನ್ನೂರು ಕೆಜಿ ಅಕ್ಕಿ ಹಾಗೂ ಇಪ್ಪತ್ತು ಕೆಜಿ ಸಕ್ಕರೆಯನ್ನ ಫಲಾನುಭವಿ ಗಳಿಗೆ ಈ ಸಂದರ್ಭ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು ಕುಶ ಆರ್. ಮೂಲ್ಯ, ಕಾರ್ಯದರ್ಶಿ ದಿನೇಶ್ ಕುಲಾಲ್, ಯುವ ವೇದಿಕೆ ಅಧ್ಯಕ್ಷರು ದೀಪಕ್ ಕುಲಾಲ್, ಬಿ ವಾರಿಜ, ಆಶಾ ವರದರಾಜ, ಯೋಗೀಶ್ ಕುಲಾಲ್ ಬೋಳ ಉಪಸ್ಥಿತರಿದ್ದರು. .

ಕಾಪು : ಧರೆಗುರುಳಿದ ಬೃಹತ್ ಗಾತ್ರದ ಮರ, ಅರಣ್ಯ ಇಲಾಖೆ, ಪೋಲೀಸ್, ಸ್ಥಳೀಯರಿಂದ ತೆರವು

Posted On: 15-06-2021 08:27AM

ಕಾಪು, ಜೂ.15 : ಇಂದು ಬೆಳಿಗ್ಗೆ ಕಾಪು, ಮಜೂರು ಸಂಪರ್ಕ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಧರೆಗುರುಳಿ ಸ್ಥಳೀಯರಿಗೆ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಬೆಳಿಗ್ಗೆ ಸರಿ ಸುಮಾರು 4:30 ಕ್ಕೆ ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಹಿಂಭಾಗದಲ್ಲಿ ಈ ಮರವು ಧರೆಗೆ ಉರುಳಿದ್ದು ಸ್ಥಳೀಯರು ಕಾಪು ವಲಯ ಅರಣ್ಯಾಧಿಕಾರಿ ಮಂಜುನಾಥ್ ಮತ್ತು ಕಾಪು ಠಾಣಾ ಸಿಬ್ಬಂದಿ ಹರೀಶ್ ನಾಯ್ಕ್ ರವರ ಸಹಕಾರದಿಂದ ಈ ಮರವನ್ನು ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಉಮೇಶ್ ಶೆಟ್ಟಿ, ಪ್ರಕಾಶ್ ದೇವಾಡಿಗ ಮತ್ತು ಪ್ರಶಾಂತ್ ಪೂಜಾರಿ ಕಾಪು ಹಾಗೂ ಮತ್ತಿತರರು ಉಪಸ್ಥಿತರಿದ್ದು ಬೃಹತ್ ಗಾತ್ರದ ಮರವನ್ನು ತೆರವು ಗೊಳಿಸಲು ಸಹಕರಿಸಿದರು.

ಶಿರ್ವ : ಆಶಾ ಕಾರ್ಯಕರ್ತೆಯರಿಗೆ ರೇಶನ್ ಕಿಟ್ ವಿತರಣೆ

Posted On: 14-06-2021 08:07PM

ಕಾಪು : ಕೊರೋನಾ ವಾರಿಯರ್ಸ್ ಆಗಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸಮಾಜ ಸೇವಕಿ ನೀತಾ ಪ್ರಭು ಕಾಪು ಮತ್ತು ಹಿಂದು ಜಾಗರಣ ವೇದಿಕೆ ಶಿರ್ವ ವಲಯ ವತಿಯಿಂದ ರೇಶನ್ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ನೀತಾ ಪ್ರಭು ಕಾಪು , ಅಲೆವೂರು ಶ್ರೀಕಾಂತ್ ನಾಯಕ್ ,ವೈದ್ಯಾಧಿಕಾರಿ ಗಾಯತ್ರಿ ,ಚರಣ್ ಶಾಂತಿ ಕಟಪಾಡಿ ,ಗಿರಿಧರ್ ಪ್ರಭು , ಹಿಂದು ಜಾಗರಣ ವೇದಿಕೆ ಜಿಲ್ಲಾ ಪ್ರಮುಖರಾದ ಉಮೇಶ್ ಸೂಡ , ಹಿಂ.ಜಾ.ವೇ ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿಯಾದ ಗುರುಪ್ರಸಾದ್ ಸೂಡ , ಹಿಂ.ಜಾ.ವೇ ಶಿರ್ವ ವಲಯ ಅಧ್ಯಕ್ಷರಾದ ರಕ್ಷಿತ್ ಶಿರ್ವ ಮತ್ತಿತರರು ಉಪಸ್ಥಿತರಿದ್ದರು.

ರಾಮಕುಂಜ : ಬಾವಿಗಳಿಗೆ ಜೀವ ನೀಡಿದ ಕೆರೆ

Posted On: 13-06-2021 02:56PM

ಮಂಗಳೂರು : ದಿನೇ ದಿನೇ ಕುಸಿಯುತ್ತಿರುವ ಅಂತರ್ಜಲ ಮಟ್ಟದಿಂದಾಗಿ ಕೆರೆ, ನದಿ,ಬಾವಿ, ಹಳ್ಳ ಕೊಳ್ಳಗಳು ಮಾಯವಾಗುತ್ತಿರುವ ಸಂದರ್ಭದಲ್ಲಿ ಇಲ್ಲೊಂದು ಕೆರೆ ತನ್ನ ಸುತ್ತಮುತ್ತಲಿನ ಅದೆಷ್ಟೋ ಬಾವಿಗಳಿಗೆ ಮರುಜೀವ ನೀಡಿದೆ.

ಅನಾದಿ ಕಾಲದಿಂದಲೂ ಇದ್ದ ಒಂದು ಕೆರೆ ಕಾಲಾಂತರದಲ್ಲಿ ಸಂಪೂರ್ಣ ಮಾಯವಾಗಿ ಸಮತಟ್ಟಾದ ಮೈದಾನದಂತಾಗಿದ್ದು,ಅಲ್ಲೊಂದು ಕೆರೆ ಇತ್ತು ಎಂಬುದೇ ಎಷ್ಟೋ ಜನರಿಗೆ ತಿಳಿದಿರಲಿಲ್ಲ. ಯಾವಾಗ 2016-17 ರಲ್ಲಿ ಉದ್ಯೋಗ ಖಾತ್ರಿ ಯೋಜನೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಜಂಟಿಯಾಗಿ ಕಾಮಗಾರಿ ಕೈಗೆತ್ತಿಕೊಂಡು ಅದಕ್ಕೊಂದು ಹೊಸ ರೂಪು ಕಲ್ಪಿಸಿದರೋ ಆಗಲೇ ಕೆರೆ ಮರುಹುಟ್ಟು ಪಡೆಯಿತು. ಇದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ದೊಡ್ಡ ಕೆರೆಯ ಕಥೆ.

ಉದ್ಯೋಗ ಖಾತ್ರಿ ಯೋಜನೆಯ ಸುಮಾರು 27 ಲಕ್ಷ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 5 ಲಕ್ಷ ರೂ. ವೆಚ್ಚದಲ್ಲಿ ಪುನಶ್ಚೇತನಗೊಂಡಿತು.ಈ ಕೆರೆಯ ಪುನಶ್ಚೇತನದಿಂದಾಗಿ ಸುತ್ತಮುತ್ತಲಿನ ಸುಮಾರು 100-150 ಖಾಸಗಿ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ಯಾವತ್ತೂ ನೀರಿನ ಅಭಾವ ತಲೆದೋರಿಲ್ಲ. ಸದಾ ಕಾಲ ಬೇಸಿಗೆಯಲ್ಲಿ ಬರಿದಾಗುತ್ತಿದ್ದ ಒಂದು ಕೊಳವೆ ಬಾವಿಯು ಇದೀಗ ಎಂದೂ ಬರಿದಾಗದೇ ವರ್ಷವಿಡೀ ನೀರು ಹೊರಹೊಮ್ಮತ್ತದೆ ಎನ್ನುತ್ತಾರೆ ರಾಮಕುಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು. ಒಟ್ಟಿನಲ್ಲಿ ಜಲಮೂಲಗಳ ಬಗ್ಗೆ ನಿರ್ಲಕ್ಷ್ಯ ವಹಿಸಿ ಮಾಲಿನ್ಯ ಮಾಡುವ ಪ್ರಸಂಗಗಳೇ ಹೆಚ್ಚಿರುವ ಇಂದಿನ ದಿನಗಳಲ್ಲಿ ಸಂಪೂರ್ಣ ಕಣ್ಮರೆಯಾಗಿದ್ದ ಕೆರೆಯೊಂದಕ್ಕೆ ಮರುಹುಟ್ಟು ನೀಡಿ ನೀರಿನ ಅಭಾವ ತಡೆಗಟ್ಟಿದ್ದಲ್ಲದೇ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ರಾಮಕುಂಜ ಗ್ರಾಮ ಪಂಚಾಯತ್ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಾರ್ಯ ಶ್ಲಾಘನೀಯ. ಜಲಜೀವನ್ ಮಿಷನ್ ಯೋಜನೆಯ ಪ್ರಮುಖ ಭಾಗವಾದ (ಗುರಿ) ಅಂತರ್ಜಲ ಪುನಶ್ಚೇತನ ಮತ್ತು ಜಲಮೂಲಗಳ ಸಂರಕ್ಷಣೆಯ ವಿಶೇಷ ಆಂದೋಲನಕ್ಕೆ ಈ ಕೆರೆಯ ಕೊಡುಗೆ ಅಪಾರ. ಮುಂಬರುವ ದಿನಗಳಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಈ ಕೆರೆಯ ನಿರಂತರ ರಕ್ಷಣೆಯಲ್ಲಿ ನಾವೆಲ್ಲ ಶ್ರಮಿಸುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.

ಕೊರೋನಾ ಸಂದರ್ಭ ನಿಸ್ವಾರ್ಥ ಸೇವೆಗೈಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಗೌರವ, ಆಹಾರ ಕಿಟ್ ವಿತರಣೆ

Posted On: 13-06-2021 10:36AM

ಕುಂದಾಪುರ : ಪ್ರಾಣವನ್ನೇ ಪಣಕ್ಕಿಟ್ಟು ಮಹಾಮಾರಿ ಕೊರೋನಾ 2ನೇ ಅಲೆಯ ವಿರುದ್ಧ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಕೆಲಸ ಶ್ಲಾಘನೀಯ. ಕೋವಿಡ್ ನಿರ್ವಹಣೆಯ ಸಂದರ್ಭದಲ್ಲಿ ಮೊದಲಿಗೆ ಸಾರ್ವಜನಿಕರು ಭಯ ಭೀತರಾಗಿದ್ದರು. ಪರೀಕ್ಷೆ ಮಾಡಿಸಲು, ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾಗ ಅವರ ಮನವೊಲಿಸಿ, ದುರ್ಗಮ, ಅಪಾಯಕಾರಿ ಜಾಗಕ್ಕೆ ತೆರಳಿ ಆಶಾ ಕಾರ್ಯಕರ್ತೆಯರು ಕೊರೋನಾ ಜಾಗೃತಿ ಮೂಡಿಸಿ ನಿಸ್ವಾರ್ಥ ಸೇವೆಯನ್ನು ಮಾಡುವ ಆಶಾ ಕಾರ್ಯಕರ್ತೆಯರನ್ನು ಮುಕ್ತ ಕಂಠದಿಂದ ಹೊಗಳಿ, ಅವರನ್ನು ಶಾಲು ಹೊದಿಸಿ, ಆಹಾರದ ಕಿಟ್ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಕುಂದಾಪುರ ಪುರಸಭಾ ಸದಸ್ಯ ಪ್ರಭಾಕರ.ವಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೇಖರ್ ಪೂಜಾರಿ, ಅಂತರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿ, ಸತೀಶ್ ಉಷಾ ಹೋಟೆಲ್ ಮಾಲಕರು ಕುಂದಾಪುರ, ಗಣೇಶ ಜೋಗಿ ಶ್ರೀದೇವಿ ಕಂಗನಾ ಸ್ಟೋರ್ ಕುಂದಾಪುರ, ಹರೀಶ್ ಮೆಸ್ಕಾಂ ಗುತ್ತಿಗೆದಾರರು ಕುಂದಾಪುರ, ಸತೀಶ್ ಜೋಗಿ ಬಿ.ಸಿ.ಎಮ್. ಹಾಸ್ಟೆಲ್ ಕುಂದಾಪುರ ಉಪಸ್ಥಿತರಿದ್ದರು.

ಉಡುಪಿಯ ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ತಂಡದಿಂದ ಕುಂದಾಪುರ ಮೊಳಹಳ್ಳಿ ಗ್ರಾಮದ ಸರಕಾರಿ ಶಾಲೆಯ ಮಕ್ಕಳ ಪೋಷಕರಿಗೆ ದಿನಸಿ ಕಿಟ್ ವಿತರಣೆ

Posted On: 12-06-2021 08:05PM

ಉಡುಪಿ, ಜೂ.12 : ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಣಿಹಾರ, ಮೊಳಹಳ್ಳಿ ಗ್ರಾಮ, ಕುಂದಾಪುರ ತಾಲೂಕು ಇಲ್ಲಿಗೆ ಭೇಟಿನೀಡಿ ಅಲ್ಲಿನ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ವಿಚಾರಿಸಿ ಎಲ್ಲಾ ವಿದ್ಯಾರ್ಥಿಗಳಿಗೆ (25 ವಿದ್ಯಾರ್ಥಿಗಳು)ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ವಿದ್ಯಾರ್ಥಿಗಳ ಪೋಷಕರಿಗೆ ಹಸ್ತಾಂತರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ಪೇಟೆ ಕಡೆಗಳಲ್ಲಿ ಹಲವಾರು ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ರಮ ನಡೆಸುತ್ತಾರೆ. ಆದರೆ ಹಳ್ಳಿ ಪ್ರದೇಶಗಳಲ್ಲಿ ಇಂತಹ ಸಮಾಜ ಸೇವೆ ಅಗತ್ಯವಿದೆ. ಹಳ್ಳಿ ಭಾಗದಲ್ಲೂ ಆಸರೆ ತಂಡವು ಕಾರ್ಯನಿರ್ವಹಿಸುವುದು ಸಂತಸ ತಂದಿದೆ ಎಂದರು.

ದಿನಸಿ ಸಾಮಗ್ರಿಗಳ ಹಸ್ತಾಂತರ ಕಾರ್ಯವನ್ನು ಆಸರೆ ತಂಡದ ಸ್ಥಾಪಕಾಧ್ಯಕ್ಷರು ಆದ ಡಾ. ಕೀರ್ತಿ ಪಾಲನ್ ನೆರವೇರಿಸಿದರು.

ಈ ಸಂದರ್ಭ ತಂಡದ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಎಂ. ಕೆ, ಜೊತೆ ಕಾರ್ಯದರ್ಶಿ ಶ್ರೀಕಾಂತ್ ಅಮಿನ್ ಹಾಗೂ ಕೋಶಾಧಿಕಾರಿ ಜಗದೀಶ್ ಬಂಟಕಲ್ ಉಪಸ್ಥಿತರಿದ್ದರು. ಶಾಲೆಯ ಪ್ರಾಂಶುಪಾಲ ಯಶವಂತ್ ಸ್ವಾಗತಿಸಿದರು. ದಿನೇಶ್ ಬಿದ್ಕಲಕಟ್ಟೆ ವಂದಿಸಿದರು.

ರಾಜ್ಯ ಸರ್ಕಾರದಿಂದ ಅಧಿಕೃತ ಮಾನ್ಯತೆ ಸಿಗಲು ನಾಳೆ ತುಳುನಾಡಿನಾದ್ಯಂತ "ಟ್ವಿಟ್ ತುಳುನಾಡ್" ಅಭಿಯಾನ

Posted On: 12-06-2021 06:00PM

ತುಳು ಭಾಷೆಗೆ ರಾಜ್ಯ ಭಾಷೆಯ ಮಾನ್ಯತೆ ದೊರಕಬೇಕೆಂಬ ನೆಲೆಯಲ್ಲಿ ಹಲವಾರು ದಿನಗಳ ಬೇಡಿಕೆಯಾಗಿತ್ತು. ತುಳು ಭಾಷೆಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯೆತ್ತುವ ನಿಟ್ಟಿನಲ್ಲಿ ಜೈ ತುಳುನಾಡ್ ಸಂಘಟನೆ ಟ್ವೀಟ್ ತುಳುನಾಡ್ ಟ್ವಿಟ್ಟರ್ ಅಭಿಯಾನವನ್ನು ಹಮ್ಮಿಕೊಂಡಿದೆ. ನಾಳೆ (ಜೂನ್ 13) ಬೆಳಿಗ್ಗೆ 6ರಿಂದ ರಾತ್ರಿ 11.59 ರವರೆಗೆ ನಡೆಯಲಿದೆ. #TuluOfficialinKA_KL ಹ್ಯಾಶ್ ಟ್ಯಾಗ್ ಮಾಡುವ ಮೂಲಕ ತುಳುನಾಡಿನ ಸಮಸ್ತರು ಟ್ವೀಟ್ ಅಭಿಯಾನದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದಾರೆ.

ಇದಕ್ಕಾಗಿ ತಾಲೂಕು ಗುಂಪುಗಳನ್ನು ಮಾಡಲಾಗಿದ್ದು ಅದರ ಮೂಲಕ ಅಭಿಯಾನ ಮಾಡಬೇಕೆಂದು ತಿಳಿಸಿದ್ದಾರೆ.

ಟ್ವೀಟ್ ತುಳುನಾಡ್ ಅಭಿಯಾನದ ಪ್ರತಿ ತಾಲೂಕಿನ ವಾಟ್ಸಾಪ್ ಗ್ರೂಪ್ 1) ನಿಮ್ಮ ತಾಲೂಕಿನ ಗ್ರೂಪಿಗೆ ಸೇರಿಕೊಳ್ಳಿ. (ನಿಮ್ಮ ತಾಲೂಕಿನ ಹೆಸರಿನ ಮೇಲೆ ಒತ್ತುವ ಮೂಲಕ) 2) ಟ್ವೀಟ್ ಅಭಿಯಾನ ಮತ್ತು ತುಳುನಾಡಿಗೆ ಆಗುವ ಅನ್ಯಾಯದ ಬಗ್ಗೆ ಮಾತ್ರ ಪೋಸ್ಟ್ ಹಾಕಬಹುದು, ವಿಚಾರಾತ್ಮಕ ಚರ್ಚೆ ಮಾಡಬಹುದು. 3) ಟ್ವೀಟ್ ಅಭಿಯಾನದಲ್ಲಿ ಯಾವ ರೀತಿಯಲ್ಲಿ ಟ್ವೀಟ್ ಬರೆಯಬಹುದು ಎಂಬ ಸಲಹೆ ಸೂಚನೆಗಳನ್ನು ಕೊಡಬಹುದು. Bolther (Belthangady), Bantwala Bolther(Belthangady), Bantwala 2 Kaup, Odipu (Udupi) , Brahmavara Mulki, Bedra Moodbidri Kudla, Ullala Kudla, Ullala 2 Karla (Karkala), Hebri Sullia(Sulya), Puttur, Kadaba Sullia (Sulya), Puttur, Kadaba 2 Kasrod (Kasargod), Manjeshwar Gulf Countries

ಹಿಂದೂ ಧರ್ಮದ ಅವಹೇಳನ Instagram ಮೇಲೆ ದೂರು ದಾಖಲು

Posted On: 11-06-2021 07:53PM

ಗೂಗಲ್ ಕನ್ನಡವನ್ನು ಪ್ರಪಂಚದ ಕೆಟ್ಟ ಭಾಷೆ ಎಂದು ತೋರಿಸಿತ್ತು , ಅಮೆಜಾನ್ ಕನ್ನಡದ ಹಳದಿ-ಕೆಂಪು ಬಣ್ಣದ ಬಾವುಟ ಹಾಗೂ ಸರ್ಕಾರದ ಲಾಂಛನಗಳನ್ನು ಕೆಟ್ಟ ರೀತಿಯಲ್ಲಿ ಉಪಯೋಗಿಸಿತ್ತು. ಇದೀಗ Instagram ನ ಸರದಿ , Instagram ಮಾಡಿದ್ದೇನು ? ಹೌದು ದೆಹಲಿಯ ಮನೀಷ್ ಸಿಂಗ್ ರವರು Instagram ಮೇಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಇದಕ್ಕೆ ಕಾರಣ Instagram ತನ್ನ ಅಪ್ಲಿಕೇಶನ್ ನಲ್ಲಿ ಭಾರತೀಯರಿಗೆ ಅವಮಾನ ಮಾಡಿದೆ.

ಭಾರತದಲ್ಲಿ ಅಲ್ಲದೇ ವಿಶ್ವದ ಹಲವು ದೇಶಗಳಲ್ಲಿ ಈಶ್ವರ ದೇವರನ್ನು ಜಾತಿ-ಧರ್ಮ ಭೇದವಿಲ್ಲದೇ ಮಹಾದೇವ , ಶಿವ , ಶಂಕರ , ಕಾಲಭೈರವ ಮುಂತಾದ ಹತ್ತಾರು ಹೆಸರುಗಳಿಂದ ಪೂಜಿಸುತ್ತೇವೆ. ಶಿವ ದೇವರ ಹೆಸರಿನಲ್ಲಿ ಭಾರತದಲ್ಲಿ ಲಕ್ಷಾಂತರ ದೇವಸ್ಥಾನಗಳಿವೆ ಇಷ್ಟೆಲ್ಲಾ ವಿಷಯ ತಿಳಿದಿದ್ದರೂ Instagram ತನ್ನ Giphy ಯಲ್ಲಿ ಶಿವ ದೇವರ ಕುರಿತಾದ ಆಕ್ಷೇರ್ಪಾಹ Giphy ಯನ್ನು ಸೇರಿಸಿದೆ.

ಚಿತ್ರವನ್ನು ಸರಿಯಾಗಿ ನೋಡಿದರೆ ಒಂದು ಕೈನಲ್ಲಿ ಅಭಯ ಹಸ್ತ ಹಾಗೂ ಧ್ಯಾನ ಮುದ್ರೆಗಳಿವೆ ಆದರೆ ಅದಕ್ಕೆ ಜೋಡಿಕೊಂಡಂತಿರುವ ಬಲಗೈ ನಲ್ಲಿ ವೈನ್ ಹಿಡಿದಂತೆ ಚಿತ್ರಿಸಲಾಗಿದೆ ಜೊತೆಗೆ ಎಡಗೈನಲ್ಲಿ ಮೊಬೈಲ್ ‌ಹಾಗೂ ಕಿವಿಗೆ ಹೆಡ್ಫೋನ್ ಧರಿಸಿದಂತೆ ಅಸಭ್ಯವಾಗಿ ಚಿತ್ರಿಸಲಾಗಿದೆ.

ಈ ಚಿತ್ರ ಕೋಟ್ಯಾಂತರ ಧರ್ಮಾಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದ್ದಲ್ಲದೆ ನೆಟ್ಟಿಗರು ಈ ಘಟನೆಯನ್ನು ಖಂಡಿಸಿದ್ದಾರೆ. ಇನ್ನಾದರೂ ಸರ್ಕಾರ ಇಂತಹ ಸಂಸ್ಥೆ ಅಥವಾ ವ್ಯಕ್ತಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿದೆ. ಅಭಿಷೇಕ್ ರಾವ್ TECH NEWS Click Here To Watch YOUTUBE Video