Updated News From Kaup
ಶಿರ್ವ: ವಿಶ್ವ ಪರಿಸರ ದಿನಾಚರಣೆ

Posted On: 05-06-2021 03:03PM
ಶಿರ್ವ : ಸಂತ ಮೇರಿ ಮಹಾವಿದ್ಯಾಲಯ ಶಿರ್ವದ ಎನ್‌ಸಿಸಿ ಘಟಕವು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿಗಳನ್ನು ಅವರವರ ಮನೆಯ ಅಂಗಳಗಳಲ್ಲಿ ನೆಡುವ ಮೂಲಕ ಆಚರಿಸಲಾಯಿತು.
ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಅವರು ಔಷಧ ಗಿಡಗಳನ್ನು ಸಾಂಕೇತಿಕವಾಗಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಎಲ್ಲರಿಗೂ ಶುಭಹಾರೈಸಿದರು.
ಎನ್‌ಸಿಸಿ ಘಟಕದ ಸಹ ಸಂಯೋಜಕಿ ಯಶೋದ, ಸೀನಿಯರ್ ಕ್ಯಾಡೆಟ್ ಅಂಡರ್ ಆಫೀಸರ್ ರಾಮದಾಸ್, ಜೂನಿಯರ್ ಅಂಡರ್ ಆಫೀಸರ್ ಪ್ರವಿತ ಮತ್ತು ರಿಯಾನ್ ರಿಷಿ ಅಲ್ಫೋನ್ಸೋ ಹಾಗೂ ಎಲ್ಲಾ ಕ್ಯಾಡೆಟ್ ಗಳು ಸಹಕರಿಸಿದರು.
ಪಾದೆಬೆಟ್ಟು : 50 ಕುಟುಂಬಗಳಿಗೆ ದಿನಸಿ ಸಾಮಾಗ್ರಿ, ಹಾಲು ವಿತರಣೆ

Posted On: 04-06-2021 09:33PM
ಪಡುಬಿದ್ರಿ : ಶ್ರೀ ಸುಬ್ರಹ್ಮಣ್ಯ ಯುವಕ-ಯುವತಿ ವೃಂದ ಪಾದೆಬೆಟ್ಟು, ಪಡುಬಿದ್ರಿ ಇದರ ಆಶ್ರಯದಲ್ಲಿ ಕೊರೊನ ಪೀಡಿತರು ಮತ್ತು ತೀರ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ನ್ನು ಮಲಬಾರ್ ಗೋಲ್ಡ್ & ಡೈಮಂಡ್ ಮತ್ತು ಸುಬ್ರಹ್ಮಣ್ಯ ಆಚಾರ್ಯ ದಂಪತಿಗಳ ಸಹಾಯದಿಂದ ಸುಮಾರು 50 ಕುಟುಂಬಗಳಿಗೆ ದಿನಸಿ ಸಾಮಾಗ್ರಿ ಮತ್ತು ದೀಪಕ್ ಎಲ್ಲೂರ್ ಕೊಡ ಮಾಡಿದ 80 ಲೀಟರ್ ಹಾಲನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ರವಿ ಶೆಟ್ಟಿ, ಸದಸ್ಯರಾದ ಅಶೋಕ್ ಪೂಜಾರಿ, ಶಿವಮ್ಮ, ಗೀತಾ ಪ್ರಭಾಕರ್, ಶೋಭಾ ಜೆ. ಶೆಟ್ಟಿ, ಸಂದೇಶ್ ಶೆಟ್ಟಿ, ಯುವಕ ವೃಂದದ ಗೌರವಾಧ್ಯಕ್ಷರಾದ ಜೀತ್ಹೇಂದ್ರ ಶೆಟ್ಟಿ, ವಿಷ್ಣುಮೂರ್ತಿ ಆಚಾರ್ಯ, ಹರೀಶ್ ಕುಮಾರ್ ಶೆಟ್ಟಿ, ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾರ್ಯದರ್ಶಿ ಸುರೇಶ್ ಪೂಜಾರಿ, ಯುವತಿ ವೃಂದ ಕಾರ್ಯದರ್ಶಿ ಸೌಮ್ಯ ಎಚ್. ಆಚಾರ್ಯ, ಶ್ರೀಮತಿ ಸುನಿತಾ ಆಚಾರ್ಯ ಸದಾನಂದ ಪೂಜಾರಿ, ರಾಘವೇಂದ್ರ ಆಚಾರ್ಯ, ದಿನೇಶ್ ಶೆಟ್ಟಿ, ಯೋಗೀಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಸರಕಾರವು ಗರೋಡಿಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ವಿವಿಧ ವರ್ಗದವರಿಗೆ ಸಹಾಯಧನವನ್ನು ನೀಡಬೇಕು : ದಾಮೋದರ ಕಲ್ಮಾಡಿ

Posted On: 04-06-2021 06:26PM
ಉಡುಪಿ : ತುಳುನಾಡಿನಲ್ಲಿ ಸಾಮಾಜಿಕ ನ್ಯಾಯ, ಸತ್ಯ , ಪ್ರಮಾಣಿಕತೆ ಹಾಗೂ ಸ್ವಾಭಿಮಾನದ ಸಂಕೇತವಾದ ಅವಳಿ ವೀರರಾದ ಶ್ರೀ ಕೋಟಿ ಚೆನ್ನಯ್ಯರ ಆರಾಧನಾ ಕೇಂದ್ರಗಳಾದ ಗರೋಡಿಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಂಡು ಬರುತ್ತಿರುವ ಪೂ-ಪೂಜನೆಯ ಪೂಜಾರಿಗಳು, ದರ್ಶನ ಪೂಜಾರಿಗಳು, ವಾದ್ಯ ವರ್ಗದವರು, ನೃತ್ಯ ವಿಶಾರದ ಪಂಬಂದ ಪರವರು, ಮಡಿವಾಳರುಗಳು ಸೇವೆಯನ್ನು ಸಲ್ಲಿಸಿಕೊಂಡು ಬರುತ್ತಿದ್ದಾರೆ.
ಈ ಎಲ್ಲಾ ವರ್ಗದವರು ಯಾವುದೇ ನಿಯಮಿತವಾದ ಉದ್ಯೋಗಗಳು ಇರುವುದಿಲ್ಲ. ಕೋವಿಡ್-19 ರ ಲಾಕ್‍ಡೌನ್ ಕಾರಣದಿಂದ ಈ ಎಲ್ಲಾ ವರ್ಗದವರಿಗೆ ಜೀವನವನ್ನು ನಡೆಸಲು ಕಷ್ಟ ಸಾಧ್ಯವಾಗುತ್ತಿದ್ದು, ಈವರೆಗೆ ಇವರಿಗೆ ಯಾವುದೇ ತರವಾದ ಸೌಲಭ್ಯಗಳು ಲಭ್ಯವಿರುವುದಿಲ್ಲ. ದಯಾಳುಗಳಾದ ತಾವು ಮುಜುರಾಯಿ ಇಲಾಖೆಯ ಅರ್ಚಕರಿಗೆ ಹಾಗೂ ಅಡುಗೆಯವರಿಗೆ ಮಸೀದಿಯ ಮೌಲ್ವಿಗಳಿಗೆ ಸಹಾಯ ಹಸ್ತವನ್ನು ನೀಡಿರುವುದು ಸಂತಸದ ವಿಷಯವಾಗಿರುತ್ತದೆ.
ಸದ್ಯ ಜೀವನ ನಿರ್ವಹಣೆ ಮಾಡಲು ಅಸಾಹಾಯಕ ಪರಿಸ್ಥಿತಿಯಲ್ಲಿರುವ ಪೂ-ಪೂಜನೆಯ ಪೂಜಾರಿಗಳು, ದರ್ಶನ ಪೂಜಾರಿಗಳು, ವಾದ್ಯ ವರ್ಗದವರು, ನೃತ್ಯ ವಿಶಾರದ ಪಂಬಂದ ಪರವರು, ಮಡಿವಾಳರುಗಳಿಗೆ ಮಾಸಿಕ ಕನಿಷ್ಠ 10000-00 ಸಹಾಯಧನವಾಗಿ ನೀಡಬೇಕೆಂದು ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆದಿ ಉಡುಪಿ ಇದರ ಅಧ್ಯಕ್ಷರಾದ ದಾಮೋದರ ಕಲ್ಮಾಡಿಯವರು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಮುದ್ರಣಕಾರರ ಕೂಗು ಸರಕಾರಕ್ಕೆ ಕೇಳಲಿಲ್ಲವೇ? - ಎಮ್. ಮಹೇಶ್ ಕುಮಾರ್

Posted On: 04-06-2021 02:27PM
ಉಡುಪಿ : ಚುನಾವಣೆ ಗಳು ಬಂದಾಗ ಮಾತ್ರ ಮುದ್ರಕರು ಜನ ಪ್ರತಿನಿಧಿಗಳ ಕಣ್ಣಿಗೆ ಕಾಣುವುದೇ? ಚುನಾವಣಾ ಸಂದರ್ಭದಲ್ಲಿ ಹಗಲು ರಾತ್ರಿ ಊಟ ತಿಂಡಿ ಎನ್ನದೆ ಮುದ್ರಣ ಮಾಡಿ ಕೊಡುವ ಕಾಯಕ ನಮ್ಮದು. ಒಬ್ಬ ಮುದ್ರಣ ಮಾಲಕನನ್ನು ಅವನ ಕುಟುಂಬ. ಕೆಲಸಗಾರರು ಅವಲಂಬಿತಾರಾಗಿರುತ್ತಾರೆ ಸುಮಾರು ಒಂದೂವರೆ ವರ್ಷ ದಿಂದ ನಿರಂತರ ವಾಗಿ ಕಷ್ಟ ದಿಂದ ಸಾಗುವ ಉದ್ಯಮ ಪ್ರಿಂಟಿಂಗ್ ಪ್ರೆಸ್ ಸಮಾಜ ದಲ್ಲಿ ಶುಭಕಾರ್ಯ. ಧಾರ್ಮಿಕ ಕಾರ್ಯಕ್ರಮ. ಸಭೆ ಸಮಾರಂಭ ಹಾಗೂ ಅರೋಗ್ಯ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು. ಮುದ್ರಣ ಬೆಳಿಗ್ಗೆ ಎದ್ದ ಕೂಡಲೇ ನ್ಯೂಸ್ ಪೇಪರ್ ಸಿಗದೇ ಹೋದಾಗ ಎಷ್ಟು ಕಿರಿ ಕಿರಿ ಅಲ್ವಾ. ಈಗ ಡಿಜಿಟಲ್ ಮಾಧ್ಯಮ ಇರಬಹುದು ಆದರೆ ಜನರ ಮನಸಿಗೆ ಮುಟ್ಟುವ ಕೆಲಸ ಮುದ್ರಿತ ವಸ್ತುವಿನಿಂದ ಮಾತ್ರ ಸಾಧ್ಯ. ಯಾರು ಕೂಡ ನಮ್ಮ ಕಷ್ಟ ವನ್ನು ಕೇಳುವವರಿಲ್ಲದೆ ಹೋಯಿತೇ ಎನ್ನುವ ಸ್ಥಿತಿ ಮುದ್ರಕರಿಗೆ ಬಂದೊದಗಿದೆ.
ಉಡುಪಿ ಜಿಲ್ಲೆ ಯಲ್ಲಿ ಸುಮಾರು 180ರಷ್ಟು ಸಣ್ಣ ಸಣ್ಣ ಮುದ್ರಣ ಸಂಸ್ಥೆ ಗಳಿದ್ದು 1200 ರಷ್ಟು ಕಾರ್ಮಿಕ ವರ್ಗದವರಿದ್ದಾರೆ. ಕರ್ನಾಟಕ ರಾಜ್ಯ ದಲ್ಲಿ ಸುಮಾರು 15000 ದ ವರೆಗೆ ಸಣ್ಣ ಅತಿ ಸಣ್ಣ ಮುದ್ರಣ ಸಂಸ್ಥೆ ಗಳಿವೆ ವರ್ಷ ಕ್ಕೆ ರಾಜ್ಯ ಕ್ಕೆ 2000 ಕೋಟಿ ಯಷ್ಟು GST ಯನ್ನು ಸಂದಾಯ ಮಾಡುವ ಉದ್ಯಮ ನಮ್ಮದು.
ಇನ್ನಾದರೂ ಕೂಡ ನಮ್ಮ ಜಿಲ್ಲೆ ಯ ಮಾನ್ಯ ಶಾಸಕರು. ಮಾನ್ಯ ಸಂಸದರು ಸರಕಾರ ದ ಗಮನಕ್ಕೆ ತಂದು ನಮಗೆ ಮತ್ತು ನಮ್ಮನ್ನೇ ನಂಬಿರುವ ಕೆಲಸ ಗಾರರಿಗೆ ಒಂದು ಪ್ಯಾಕೇಜ್ ನ್ನು ನೀಡಬೇಕು ಎಂದು ಉಡುಪಿ ಜಿಲ್ಲಾ ಮಮುದ್ರಣಲಯಕರ ಮಾಲಕರ ಸಂಘ ಉಡುಪಿ ಅಧ್ಯಕ್ಷರಾದ ಎಮ್. ಮಹೇಶ್ ಕುಮಾರ್ ಒತ್ತಾಯಿಸಿದ್ದಾರೆ.
ಬೆಳ್ಮಣ್ : ಕಾರ್ಕಳ ಬಿಳಿಬೆಂಡೆಯ ಬೀಜ ವಿತರಣೆ

Posted On: 03-06-2021 10:14PM
ಕಾಪು : ರೋಟರಿ ಕ್ಲಬ್ ಬೆಳ್ಮಣ್ ಇದರ ನೇತೃತ್ವದಲ್ಲಿ ಹಾಗೂ ಬೆಳ್ಮಣ್ ಹಾಗೂ ನಂದಳಿಕೆ ಪರಿಸರದ ವಿವಿಧ ಸಂಘ- ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಂದು ನಂದಳಿಕೆ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಕಾರ್ಕಳ ಬಿಳಿಬೆಂಡೆಯ ಬೀಜ ವಿತರಣೆಯ ಕಾರ್ಯಕ್ರಮವನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಜನಪ್ರೀಯ ಶಾಸಕ ಹಾಗೂ ಕರ್ನಾಟಕ ಸರಕಾರದ ಆಡಳಿತ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಇವರು ಬಿಳಿಬೆಂಡೆಯ ಬೀಜ ವಿತರಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು ಅತ್ಯಧಿಕ ಪೌಷ್ಠಿಕಾಂಶವುಳ್ಳ ಬಿಳಿಬೆಂಡೆಯನ್ನು ಎಲ್ಲರೂ ತಮ್ಮ ಮನೆಯಂಗಳದಲ್ಲಿ ಬೆಳೆಸಿ ಎನ್ನುವ ಪ್ರೋತ್ಸಾಹಕ ಮಾತುಗಳನ್ನಾಡಿದರು, ಅಲ್ಲದೇ ಮುಂದಿನ ದಿನಗಳಲ್ಲಿ ಕಾರ್ಕಳ ಬಿಳಿಬೆಂಡೆ ಹೆಸರಲ್ಲಿ ವ್ಯವಸ್ಥಿತ ಮಾರುಕಟ್ಟೆ ಒದಗಿಸುವ ಕಾರ್ಯಯೋಜನೆ ಮಾಡಲಾಗಿದೆ ಎಂದು ನುಡಿದರು.
ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ರೇಷ್ಮಾ ಉದಯಕುಮಾರ್ ಶೆಟ್ಟಿ ಶಾಸಕರ ಕನಸಿನ ಯೋಜನೆಯಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಕೈಜೋಡಿಸಿ ಕಾರ್ಯಪ್ರವೃತ್ತರಾದಲ್ಲಿ ಕಾರ್ಕಳ ಕ್ಷೇತ್ರವನ್ನು ಸ್ವರ್ಣ ಕಾರ್ಕಳ ಕ್ಷೇತ್ರವಾಗಿ ಪರಿವರ್ತಿಸುವುದು ಕಷ್ಟದ ವಿಷಯವೇ ಅಲ್ಲ ಎಂದು ನುಡಿದರು.
ವೇದಿಕೆಯಲ್ಲಿ ಬೆಳ್ಮಣ್ ರೋಟರಿಯ ಸ್ಥಾಪಕಾಧ್ಯಕ್ಷ ರೋ| ಸೂರ್ಯಕಾಂತ ಶೆಟ್ಟಿ, ಹಾಗೂ ರೋಟರಿ ಬೆಳ್ಮಣ್ಣೀನ ಪೂರ್ವಾಧ್ಯಕ್ಷ ರೋ| ದೇವೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್, ಜೇಸಿ ಐ, ಬೆಳ್ಮಣ್ ಸ್ಪೋರ್ಟ್ಸ್ ಕ್ಲಬ್, ಗುರುದುರ್ಗಾ ಮಿತ್ರ ಮಂಡಳಿ, ಕವಿ ಮುದ್ದಣ್ಣ ಮಿತ್ರ ಮಂಡಳಿ ನಂದಳಿಕೆ ಹಾಗೂ ಬೆಳ್ಮಣ್ ಹಾಗೂ ನಂದಳಿಕೆ ಪರಿಸರದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಬೆಳ್ಮಣ್ ನ ಅಧ್ಯಕ್ಷ ರೋ| ಸುಭಾಷ್ ಕುಮಾರ್ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ರೋ| ರವಿರಾಜ್ ಶೆಟ್ಟಿ ವಂದಿಸಿದರು.
ಲಾಕ್‌ಡೌನ್: ಉಡುಪಿಯಲ್ಲಿ ಹಸಿದ ಬೀದಿನಾಯಿಗಳಿಗೆ ನಿತ್ಯ ಅನ್ನದಾಸೋಹ!

Posted On: 03-06-2021 05:08PM
ದಿನನಿತ್ಯದ ಆತಂಕರಹಿತ ಜೀವನ ಶೈಲಿಯಲ್ಲಿ ತೊಡಗಿಸಿಕೊಂಡಿದ್ದ ಮನುಷ್ಯನಿಗೆ 2019 ರಲ್ಲಿ ದುತ್ತೆಂದು ವಕ್ಕರಿಸಿದ ಚೀನಾ ಮೂಲದ ಎಂದು ಹೇಳಲಾಗುವ ಕೊರೋನಾ ವೈರಸ್ ದೊಡ್ಡ ಶಾಕ್ ನೀಡಿದೆ. ಕೊರೋನಾ ಎಂಬ ಮಹಾಮಾರಿ ನಾವೆಂದೂ ಊಹಿಸಿರದ ನಮ್ಮ ಜೀವನದ ಸಂಪೂರ್ಣ ಶೈಲಿಯನ್ನೇ ಬದಲಾಯಿಸಿದೆ. ಸದಾ ಚಟುವಟಿಕೆಯಿಂದ, ಆಸಕ್ತಿಯಿಂದ, ಹೊಸ ವಿಚಾರಗಳ ಕಡೆ ಹೊಸ - ಹೊಸ ಅನ್ವೇಷಣೆಗಳ ಕಡೆಗೆ ಹೊರಟ ನಮ್ಮ ಪಯಣಕ್ಕೆ ಈಗ ಬ್ರೇಕ್ ಬಿದ್ದಿದೆ, ಕಣ್ಣಿಗೆ ಕಾಣದ ಈ ಸೂಕ್ಷ್ಮಾಣು ವೈರಸ್ ಮನುಷ್ಯನ ದೇಹವನ್ನು ಹೊಕ್ಕು ಆತನ ಹೃದಯ ಬಡಿತವನ್ನು ನಿಲ್ಲಿಸಿ ಸಾವಿನೆಡೆಗೆ ಕರೆದೊಯ್ಯುತ್ತಿದೆ. ಈ ರೋಗದಿಂದ ಜನರನ್ನು ಮುಕ್ತರನ್ನಾಗಿ ಮಾಡಲು ಸರ್ಕಾರ ಮತ್ತು ಜನಪ್ರತಿನಿಧಿಗಳು ಹರಸಾಹಸ ಪಡುತ್ತಿದ್ದಾರೆ, ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿ, ಜನರಿಗೆ ಮನೆಯಲ್ಲಿಯೇ ಸುರಕ್ಷಿತವಾಗಿರುವಂತೆ ತಿಳಿಸಿ, ಅವರ ಆರೋಗ್ಯ ಕಾಪಾಡಲು ಪ್ರಯತ್ನಿಸುತ್ತಿದೆ.
ಆದರೆ ಈ ಕ್ರಮ ಅನಿವಾರ್ಯವಾದರೂ, ಸಂಪೂರ್ಣವಾಗಿ ಒಳ್ಳೆಯ ಬೆಳವಣಿಗೆ ಅಲ್ಲ, ಏಕೆಂದರೆ ದಿನಗೂಲಿ ಮಾಡಿ ಅಂದಿನ ದುಡಿಮೆಯಿಂದ ಅಂದು ಜೀವನ ನಡೆಸುತ್ತಿರುವ ಅದೆಷ್ಟೋ ಬಡಜನರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇಂತಹ ಕಷ್ಟದ ಸಂದರ್ಭದಲ್ಲಿ ಉಳ್ಳವರು ಇಲ್ಲದವರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ, ಜಾತಿ ಧರ್ಮಗಳ ಸಂಕೋಲೆಯಿಂದ ಹೊರಬಂದು ಅನೇಕ ಮಠ-ಮಾನ್ಯಗಳು ಬಡಜನರಿಗೆ ತಮ್ಮಿಂದಾದ ಸಹಾಯ ಮಾಡುತ್ತಿದ್ದಾರೆ. ಅನೇಕ ಸಂಘ-ಸಂಸ್ಥೆಗಳು ಸಹಾಯ ಮಾಡುತ್ತಿವೆ. ಬಡ ಜನರಿಗೆ ಉಚಿತವಾಗಿ ಆಹಾರ ವಿತರಣೆ ಮಾಡುತ್ತಿದ್ದಾರೆ, ಆಸ್ಪತ್ರೆಯ ಬಿಲ್ಲುಗಳನ್ನು ಕಟ್ಟುತ್ತಿದ್ದಾರೆ. ಇದರಿಂದಾಗಿ ತಮ್ಮ ಮಾನವೀಯತೆಯನ್ನು ಮೆರೆಯುತ್ತಿದ್ದಾರೆ, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಸಾಮಾನ್ಯ ಜನರೂ ಸಹ ಸಹಕಾರ ನೀಡುತ್ತಿದ್ದಾರೆ. ಆದರೇ ಇಂತಹ ಸಂಕಷ್ಟದ ಸನ್ನಿವೇಶದಲ್ಲಿ ಮಾತನಾಡಲು ಬಾರದ ಮೂಕ ಪ್ರಾಣಿಗಳಾದ ಬೀದಿ ನಾಯಿಗಳು, ಆಕಳುಗಳು ದನಗಳು ಪಕ್ಷಿಗಳು ಅದರಲ್ಲೂ ವಿಶೇಷವಾಗಿ ನಿಯತ್ತಿಗೆ ಅನ್ವರ್ಥಕ ನಾಮವಾದ ಬೀದಿನಾಯಿಗಳ ಹಸಿವಿನ ಪಾಡನ್ನು ಕೇಳುವವರು ಯಾರು ? ಶ್ರೀಮಂತರ ಮನೆಯ ನಾಯಿಗಳೆನೋ ವೈಭವೋಪೇತ ಬದುಕು ಬಾಳುತ್ತವೆ ಆದರೆ ಬಡ ಬೀದಿ ನಾಯಿ ಪಾಡು ಕೇಳುವವರು ಯಾರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಅದೇನೋ ಹಿರಿಯರು ಹೇಳುತ್ತಾರಲ್ಲ ಈ ಭೂಮಿ ಮೇಲೆ ಜೀವಿಯನ್ನು ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೇ ಎಂದು ಹಾಗೆ ಒಂದು ವಿಚಿತ್ರವಾದರೂ ಸಚಿತ್ರ ಘಟನೆಯ ಮೂಲಕ ಈ ಸಂಕಷ್ಟದ ಸ್ಥಿತಿಗೆ ಆ ದೈವವೋ ಅಥವಾ ಸುಕೃತ ಮನಸ್ಸುಗಳ ಸಂಕಲ್ಪವೋ ಎನ್ನುವಂತೆ ಪರಿಹಾರ ಕಾಣುತ್ತಿದೆ. ಅಂತಹ ಸಚಿತ್ರ ಘಟನೆಯ ಹಿನ್ನೆಲೆ ಏನೆಂದರೆ, ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆಯಾದಾಗ, ಈ ಕೊರೊನಾ ಸಂಕಷ್ಟದ ಕಾಲದಲ್ಲಿ ಬಡ ಹಸಿದ ಮನುಷ್ಯರಿಗೆ ಊಟ ನೀಡುವ ಸುಕೃತ ಕಾರ್ಯವೆಸಗಲು ತೀರ್ಮಾನಿಸಿದ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಅನಂತ ಇನ್ನಂಜೆ ಇವರು ತಮ್ಮ 10 ಜನ ಗೆಳೆಯರ ಹಾಗು ಸಮಾನ ಮನಸ್ಕರೊಂದಿಗೆ ಜೊತೆಗೂಡಿ "Feed A stray Dog Feed The voiceless Just @ ₹20 " ಎನ್ನುವ ಸಂಕಲ್ಪದೊಂದಿಗೆ ಕ್ರಿಯಾಶೀಲವಾಗಿ ಮತ್ತು ಸೃಜನಶೀಲವಾಗಿ ಯೋಚಿಸಿ ಚರ್ಚಿಸಿ ಬೀದಿ ನಾಯಿಗಳ ಹಸಿವು ನೀಗಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅನೇಕ ಜನರ ಸಹಕಾರದೊಂದಿಗೆ ಉಡುಪಿಯಲ್ಲಿ ಪ್ರತಿದಿನ 200 ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ.
ಹಸ್ತಪ್ರದ ಟ್ರಸ್ಟ್ ನ ಸದಸ್ಯರು ಬರುವುದನ್ನು ಬಹು ದೂರದಿಂದಲೇ ಗುರ್ತಿಸಿ ಬಾಲ ಹೊರಳಿಸಿ ನಾಯಿಗಳು ದೈನ್ಯತೆಯಿಂದ ತಮ್ಮ ಕೃತಜ್ಞತೆ ವ್ಯಕ್ತಪಡಿಸುತ್ತವೆ ಎನ್ನುತ್ತಾರೆ ಹಸ್ತಪ್ರದ ಟ್ರಸ್ಟ್ ನ ಯುವ ಸದಸ್ಯರು. ಈ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರು ಬಹಳ ವ್ಯವಸ್ಥಿತವಾಗಿ ವಿವಿಧ ಕೆಲಸ ಕಾರ್ಯಗಳನ್ನು ಹಂಚಿಕೊಂಡಿದ್ದಾರೆ ಅದು ಅಡುಗೆ ಮಾಡಲು ಬೇಕಾದ ಸಾಮಗ್ರಿ ತರುವುದಾಗಿರಬಹುದು, ಅಡುಗೆ ಕೋಣೆ ಸ್ವಚ್ಚ ಮಾಡುವ ಕಾರ್ಯ, ಅಡುಗೆ ತಯಾರಿಸುವ ಕಾರ್ಯ, ಆಹಾರ ಪ್ಯಾಕ್ ಮಾಡಿಕೊಂಡು ನಗರದ ವಿವಿಧ ಓಣಿಗಳಿಗೆ ತೆರಳಿ ಹಂಚುವ ಕಾರ್ಯಗಳನ್ನು ಸೇವಾ ಮನೋಭಾವದಿಂದ, ಸ್ವಸಂತೋಷದಿಂದ, ನಿಷ್ಠೆಯಿಂದ ಮಾಡುತ್ತಾರೆ , ಅಲ್ಲದೆ ತಮಗೆ ದೇಣಿಗೆ ನೀಡಿದ ವ್ಯಕ್ತಿಗಳ ಹೆಸರನ್ನು ಆಹಾರದ ಪೊಟ್ಟಣದಲ್ಲಿ ಇರಿಸಿ ಅವರಿಗೆ ಆ ಚಿತ್ರವನ್ನು ಕಳಿಸುವ ಮೂಲಕ ಧನ್ಯತಾ ಭಾವವನ್ನು ತೋರುತ್ತಾರೆ. ಆಹಾರ ಸಿಗದೇ ಕಂಗಾಲಾದ ಬೀದಿ ನಾಯಿಗಳು ವೃಧ ಬಿಕ್ಷುಕಿಯೊಬ್ಬಳ ಮೇಲೆ ಹಲ್ಲೆ ನಡೆಸಿ ಆಕೆಯನ್ನು ತಿಂದು ಹಾಕಿರುವ ಮನ ಕಲಕುವ ವಿಷಯ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ, ಮುಂದೆ ನಾಯಿಗಳು ತಮ್ಮ ಹಸಿವಿಗಾಗಿ ಮಾನವರನ್ನು ಬಲಿ ಪಡೆದುಕೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ವಿಶ್ವಾಸಿ ಪ್ರಾಣಿಗಳೊಂದಿಗೆ ವಿಶ್ವಾಸದಿಂದ ನಡೆದುಕೊಂಡು ಅವುಗಳಿಗೆ ಪ್ರಕೃತಿ ಕೊಟ್ಟಿರುವ ಬದುಕುವ ಹಕ್ಕನ್ನು ಪೋಷಿಸಿ, ಮಾನವೀಯತೆಯಿಂದ ಮನುಷ್ಯರಿಗಷ್ಟೇ ಅಲ್ಲದೆ ಪ್ರಾಣಿಗಳಿಗೂ ನೇರವಾಗಬೇಕು. ಈ ಸಂಕಷ್ಟಕರ ಸಂದರ್ಭದಲ್ಲಿ ನಮ್ಮನ್ನು ನಾವು ಸುರಕ್ಷಿತವಾಗಿಟ್ಟುಕೊಳ್ಳುವುದರ ಜೊತೆಗೆ ಪ್ರಾಣಿ - ಪಕ್ಷಿಗಳನ್ನು ಸಹ ಕಾಪಾಡಿಕೊಳ್ಳಬೇಕಿದೆ. ಎಲ್ಲ ಜೀವಿಗಳಿಗೂ ಭೂಮಿಯ ಮೇಲೆ ಜೀವಿಸುವ ಹಕ್ಕನ್ನು ಪ್ರಕೃತಿಮಾತೆ ನೀಡಿದ್ದಾಳೆ. ಅದರಲ್ಲೂ ಬುದ್ಧಿವಂತ ಜೀವಿಯಾದ ಮಾನವ ತನ್ನೊಂದಿಗೆ ಜೀವಿಗಳನ್ನು ಸಹ ರಕ್ಷಿಸಿ, ಪೋಷಣೆ ಮಾಡಿ, ತಾನೂ ತಿಂದು ಒಂದು ತುತ್ತನ್ನು ಆ ಜೀವಿಗಳಿಗೂ ನೀಡಿ ಸಹೃದಯತೆಯಿಂದ ಬಾಳಿದಾಗ ಮನುಷ್ಯನ ಬಾಳು ಸಾರ್ಥಕವಾಗುತ್ತದೆ.
ಈ ಲೇಖನ ಓದಿದ ಸಹೃದಯೀ ನಾಗರಿಕರು ಸ್ವತಃ ತಾವಾಗಲಿ ತಮ್ಮ ಸ್ನೇಹಿತರಾಗಲಿ ಅಥವಾ ಇತರೇ ಯಾವುದೇ ತರಹದ ವಾಣಿಜ್ಯ ಸಂಸ್ಥೆಗಳು ಇಡೀ ಒಂದು ದಿನ ಅಥವಾ ಒಂದು ವಾರದ ಆಹಾರದ ಸಾಮಗ್ರಿ ಅಥವಾ ವೆಚ್ಚವನ್ನು ಪ್ರಾಯೋಜಿಸಲು ಸೂಚಿಸಬಹುದು ಮತ್ತು ದಾನಿಗಳ ಹೆಸರನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಾಯೋಜಕರೆಂದು ಪ್ರಕಟಿಸಲಾಗುವದು ಎಂದು ಅನಂತ ಇನ್ನಂಜೆ ತಿಳಿಸಿರುತ್ತಾರೆ. Donate : https://rzp.Io/l/hasthapradhacti ಆಸಕ್ತರು ಹಸ್ತಪ್ರದ ಕಾರ್ಯಚಟುವಟಿಕೆ ಕುರಿತು ತಿಳಿದುಕೊಳ್ಳಲು ಈ ಕೆಳಗೆ ತಿಳಿಸಿದ ಸಾಮಾಜಿಕ ಜಾಲ ತಾಣಗಳಿಗೆ ಭೇಟಿ ನೀಡಬಹುದು: ಇನ್ ಸ್ಟಾಗ್ರಾಂ : https://instagram.com/hasthapradha?utm_medium=copy_link ಫೇಸ್ ಬುಕ್ : https://m.facebook.com/hasthapradhacti/ ಯ್ಯೂಟೂಬ್ : https://youtube.com/channel/UC63gMgUT7yNSzKqYjmZZm7g
ಶಿರ್ವ: ವೃತ್ತಿಜೀವನದಂತೆ ಸೈಬರ್ ಸುರಕ್ಷತೆ, ನೈತಿಕ ಹ್ಯಾಕಿಂಗ್ ಮತ್ತು ಸೈಬರ್ ಸುರಕ್ಷತೆ ಕುರಿತು ವರ್ಚುವಲ್ ಕಾರ್ಯಾಗಾರ

Posted On: 02-06-2021 04:26PM
ಶಿರ್ವ: ಡಾಟಾ ಸ್ಪೇಸ್ ಸೆಕ್ಯುರಿಟಿ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಶಿರ್ವ ಕಂಪ್ಯೂಟರ್ ಸೈನ್ಸ್ ವಿಭಾಗದ ಸೇಂಟ್ ಮೇರಿಸ್ ಕಾಲೇಜು, ಸೈಬರ್ ಸೆಕ್ಯುರಿಟಿ, ಎಥಿಕಲ್ ಹ್ಯಾಕಿಂಗ್ ಮತ್ತು ಸೈಬರ್ ಸೆಕ್ಯುರಿಟಿ ಕುರಿತು ವರ್ಚುವಲ್ ಕಾರ್ಯಾಗಾರವನ್ನು ಆಯೋಜಿಸಿತು.
ಮೊದಲ ಅಧಿವೇಶನವನ್ನು ಸಂಪನ್ಮೂಲ ವ್ಯಕ್ತಿ, ಸಮಿರನ್ ಸಾಂತ್ರಾ ಸಿಇಒ ಮತ್ತು ಎಥಿಕಲ್ ಹ್ಯಾಕಿಂಗ್‌ನಲ್ಲಿ ಡಾಟಾ ಸ್ಪೇಸ್ ಸೆಕ್ಯುರಿಟಿ ಎಕ್ಸ್‌ಪರ್ಟ್‌ನ ಸಂಸ್ಥಾಪಕರು ಚರ್ಚಿಸಿದ್ದಾರೆ. ತಮ್ಮ ಭಾಷಣದಲ್ಲಿ ಅವರು ಸೈಬರ್ ಸುರಕ್ಷತೆ ಮತ್ತು ಸೈಬರ್ ಸುರಕ್ಷತೆಯ ಬಗ್ಗೆ ಒತ್ತಿಹೇಳಿದರು, ಇದು ಸಮಯದ ಅವಶ್ಯಕತೆಯಾಗಿದೆ ಮತ್ತು ನೈತಿಕ ಹ್ಯಾಕಿಂಗ್ ಪ್ರಸ್ತುತ ಹೆಚ್ಚು ಬೇಡಿಕೆಯ ಮತ್ತು ಲಾಭದಾಯಕ ವೃತ್ತಿ ಆಯ್ಕೆಯಾಗಿದೆ. ಇದು ನಮ್ಮ ಸೈಬರ್ ಜಾಗೃತಿ ಕಾರ್ಯಕ್ರಮದ ಒಂದು ಭಾಗವಾಗಿದೆ .ಪ್ರತಿ ವಿದ್ಯಾರ್ಥಿಗೆ ಈ ಪ್ರದೇಶದಲ್ಲಿ ವ್ಯಾಪಕವಾದ ಉದ್ಯೋಗಾವಕಾಶಗಳಿವೆ. ಸೈಬರ್ ಪ್ರಪಂಚದ ಮುಂಬರುವ ದಿನಗಳಲ್ಲಿ ತಜ್ಞರ ಅಗತ್ಯತೆಯ ಬಗ್ಗೆ ಅವರು ಒತ್ತಿ ಹೇಳಿದರು. ಅಧಿವೇಶನವು ಮುಖ್ಯವಾಗಿ ಸ್ಮಾರ್ಟ್-ಫೋನ್ ಹ್ಯಾಕಿಂಗ್ ಮೇಲೆ ಕೇಂದ್ರೀಕರಿಸಿದೆ ಮತ್ತು ಇದು ತಡೆಗಟ್ಟುವಿಕೆ, ಸಾಮಾಜಿಕ ಮಾಧ್ಯಮ ಹೇಗೆ ಹೊಂದಾಣಿಕೆ ಮಾಡುತ್ತದೆ ಮತ್ತು ಅದು ಸರಿಯಾದ ಉಪಯೋಗಗಳು, ಎಸ್ಕ್ಯೂಎಲ್ - ಇಂಜೆಕ್ಷನ್ ಎಂದರೇನು? ಲೈವ್ ಪ್ರದರ್ಶನ, ವ್ಯವಸ್ಥೆಯನ್ನು ಹೇಗೆ ಹೊಂದಾಣಿಕೆ ಮಾಡಲಾಗುವುದು, ಲೈವ್ ಪ್ರದರ್ಶನ, ವಾಟ್ಸಾಪ್ ಹ್ಯಾಕಿಂಗ್ ಮತ್ತು ಸರಿಯಾದ ಉಪಯೋಗಗಳು, ಬೆದರಿಕೆಗಳನ್ನು ತಡೆಗಟ್ಟುವುದು ರಾಟ್ ಇತ್ಯಾದಿಗಳನ್ನು. ಪ್ರಸ್ತುತ ಪ್ರಪಂಚದ ಸವಾಲಿನ ಸಮಸ್ಯೆಗಳನ್ನು ತೆಗೆದುಕೊಳ್ಳಲು ಅವರು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

ಎರಡನೇ ಅಧಿವೇಶನವನ್ನು ಮೌತುಲಿ ಮಿತ್ರ ಮುಖ್ಯ ವ್ಯವಹಾರ ಅಭಿವೃದ್ಧಿ ಅಧಿಕಾರಿ ಚರ್ಚಿಸಿದರು.ಡೇಟಾ ಸ್ಪೇಸ್ ಸೆಕ್ಯುರಿಟಿ ಪ್ರೈ. ಲಿಮಿಟೆಡ್. ಅಧಿವೇಶನವು ವಿವಿಧ ವೃತ್ತಿಜೀವನದ ಭವಿಷ್ಯವನ್ನು ಅರ್ಥಮಾಡಿಕೊಳ್ಳುವ ವಿಷಯಗಳನ್ನು ಒಳಗೊಂಡಿತ್ತು. ಸೈಬರ್ ಭದ್ರತಾ ಕ್ಷೇತ್ರದಲ್ಲಿ ವೃತ್ತಿಜೀವನದ ಭವಿಷ್ಯದ ಚಿತ್ರವನ್ನು ಅವರು ವಿವರವಾಗಿ ನೀಡಿದರು. ಈ ಪ್ರದೇಶದಲ್ಲಿನ ವ್ಯತ್ಯಾಸಗಳು ಮತ್ತು ಈ ಕ್ಷೇತ್ರದಲ್ಲಿ ಲಭ್ಯವಿರುವ ಸಂಬಳ ಪ್ಯಾಕೇಜ್‌ಗಳನ್ನು ವಿವಿಧ ಭಾಗಗಳಲ್ಲಿ ವಿವರಿಸುವ ಮೂಲಕ ಅವರು ತಮ್ಮ ಅಧಿವೇಶನವನ್ನು ಮುಕ್ತಾಯಗೊಳಿಸಿದರು. ಭಾರತ ಮತ್ತು ವಿದೇಶಗಳಲ್ಲಿ. ಈ ಕಾರ್ಯಕ್ರಮದಲ್ಲಿ ಬಿಸಿಎ ವಿದ್ಯಾರ್ಥಿಗಳು, ವಿಭಾಗದ ಅಧ್ಯಾಪಕ ಸದಸ್ಯರು ಉಪಸ್ಥಿತರಿದ್ದರು.ಮೌತುಲಿ ಮಿತ್ರ ಎಲ್ಲರನ್ನು ಸ್ವಾಗತಿಸಿದರು. ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಕೆ.ಪ್ರವೀಣ್ ಕುಮಾರ್ ಅವರು ಧನ್ಯವಾದಗಳನ್ನು ಪ್ರಸ್ತಾಪಿಸಿದರು ಮತ್ತು ಕಾರ್ಯಾಗಾರವನ್ನು ಸಂಯೋಜಿಸಿದ್ದರು.
ಕಾಪು ತಾಲೂಕಿನ ಪಡುಬಿದ್ರಿ, ಶಿರ್ವ, ಬೆಳ್ಳೆ, ಬೆಳಪು ಗ್ರಾಮಗಳು 5 ದಿನ ಸಂಪೂರ್ಣ ಲಾಕ್ಡೌನ್

Posted On: 01-06-2021 07:48PM
ಕಾಪು : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಸಂವಾದದ ನಿರ್ಣಯದಂತೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿ, ಶಿರ್ವ, ಬೆಳ್ಳೆ, ಬೆಳಪು ಗ್ರಾಮಗಳಲ್ಲಿ 50ಕ್ಕಿಂತ ಹೆಚ್ಚಿನ ಕೋವಿಡ್ ಪಾಸಿಟಿವ್ ಪ್ರಕರಣಗಳು ಬಂದಂತಹ ಹಿನ್ನೆಲೆಯಲ್ಲಿ ಐದು ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಮಾಡಲು ಆಯಾಯ ಗ್ರಾಮಪಂಚಾಯಿತಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜೂನ್ 2, ಬುಧವಾರ ಬೆಳಿಗ್ಗೆ 6ರಿಂದ ಜೂನ್ 7, ಸೋಮವಾರ ಬೆಳಿಗ್ಗೆ 6ರ ತನಕ ಸಂಪೂರ್ಣ ಲಾಕ್ಡೌನ್ ಇರಲಿದೆ.
ಆಸ್ಪತ್ರೆ, ಮೆಡಿಕಲ್ ಸ್ಟೋರ್ ಗಳಿಗೆ, ಈಗಾಗಲೇ ಅನುಮತಿ ಪಡೆದಿರುವ ಮದುವೆ ಸಮಾರಂಭಕ್ಕೆ ಅವಕಾಶ, ಹಾಲು ಹೋಂ ಡೆಲಿವರಿ, ಡೈರಿಗೆ ನೀಡಲು ಅವಕಾಶ, ಅಗತ್ಯ ತುರ್ತು ವೈದ್ಯಕೀಯ ಸೇವಾ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಸಂಪೂರ್ಣ ಲಾಕ್ ಡೌನ್ ಇರುವ ಗ್ರಾಮಗಳಲ್ಲಿ ಇಂದು ಬೆಳಿಗ್ಗೆ 6ರಿಂದ 11ರವರೆಗೆ ದಿನಸಿ ಸಾಮಗ್ರಿ ಕೊಳ್ಳಲು ಅನುಮತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪಡುಬಿದ್ರಿ ಮಾರ್ಕೆಟ್ನಲ್ಲಿ ಜನಜಂಗುಳಿ ಅತಿಯಾಗಿದ್ದು, ಜನರಲ್ಲಿ ಸಾಮಾಜಿಕ ಅಂತರ ಇಲ್ಲವಾಗಿದ್ದು ಸಂಬಂಧಿತ ಇಲಾಖೆಗಳು ಯಾವುದೇ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿರದ್ದು ಕಂಡುಬಂದಿದೆ.
ಕಾಪು : ಮಳೆಗೆ ಬೀಚ್ ರಸ್ತೆಯ ಬೃಹತ್ ಮರ ಬಿದ್ದು ವಿದ್ಯುತ್ ಕಂಬಗಳು ಧರೆಗೆ, ತಕ್ಷಣ ಸ್ಪಂದಿಸಿದ ಪುರಸಭಾ ಅಧ್ಯಕ್ಷರು

Posted On: 31-05-2021 10:53PM
ಕಾಪು : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಂದು ಸಾಯಂಕಾಲ ಸುಮಾರು 4 ಗಂಟೆಗೆ ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ 10 ರ ಹೊಸ ಮಾರಿಗುಡಿ ದೇವಸ್ಥಾನದ ಹತ್ತಿರ ಕಾಪು ಬೀಚ್ ಗೆ ಹೋಗುವ ರಸ್ತೆಯ ಪಕ್ಕದಲ್ಲಿದ ಬೃಹತ್ ಮರ ಒಂದು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಇದಲ್ಲದೆ ಎರಡು ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು ಮೆಸ್ಕಾಂಗೆ ಸಾವಿರಾರು ರೂಪಾಯಿಗಳು ನಷ್ಟ ಉಂಟಾಗಿದೆ.

ಈ ಸಂದರ್ಭದಲ್ಲಿ ಮರ ತೆರವು ಮಾಡುವಲ್ಲಿ ಕಾಪು ಪುರಸಭಾ ಅಧ್ಯಕ್ಷರು ಅನಿಲ್ ಕುಮಾರ್ ರವರು ಅರಣ್ಯ ಇಲಾಖೆಗೆ ಮತ್ತು ಮೆಸ್ಕಾಂ ವಿಭಾಗಕ್ಕೆ ವಿಷಯ ತಿಳಿಸಿ ಇದರ ಮುತುವರ್ಜಿ ವಹಿಸಿದರು.

ಇವರೊಂದಿಗೆ ಸ್ಥಳೀಯ ಶ್ರೀ ದೇವಿ ಕ್ರಿಕೆಟ್ ಕ್ಲಬ್ ನ ಸದಸ್ಯರು ಮರ ತೆರವು ಮಾಡುವಲ್ಲಿ ಸಹಕರಿಸಿದರು.
ಪಾದೂರು : ಬೋನಿಗೆ ಬಿದ್ದ ಚಿರತೆ

Posted On: 31-05-2021 05:06PM
ಕಾಪು : ಕಾಪು ತಾಲೂಕಿನ ಪಾದೂರು ಗ್ರಾಮದ ಕುರಲ್ ರೆನ್ನಿ ಕುಂದರ್ ಎಂಬುವವರ ಮನೆಯ ಹತ್ತಿರ ಕಾಣಿಸಿಕೊಂಡ ಚಿರತೆಯನ್ನು ಬೋನಿನ ಮೂಲಕ ಅರಣ್ಯ ಇಲಾಖೆಯ ಸಿಬ್ಬಂದಿಯ ಸಹಾಯದಿಂದ ಹಿಡಿಯಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಡಿವೈ ಆರ್ ಎಫ್ ಒ ಜೀವನ್ ದಾಸ್ ಶೆಟ್ಟಿ, ಡಿವೈ ಆರ್ ಎಫ್ ಗುರುಪ್ರಸಾದ್, ಎಸಿಎಫ್ಒ ಕ್ಲಿಫಡ್೯ ಲೋಬೋ, ಫಾರೆಸ್ಟ್ ಗಾಡ್೯ಗಳಾದ ಎಚ್ ಜಯರಾಮ್ ಶೆಟ್ಟಿ, ಅಭಿಲಾಷ್, ಪರಶುರಾಮ್ ಭಾಗವಹಿಸಿದ್ದರು.