Updated News From Kaup
ವಿಶೇಷ ಆರ್ಥಿಕ ಪ್ಯಾಕೇಜ್ ಗಾಗಿ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದಿಂದ ಜಿಲ್ಲಾಧಿಕಾರಿಗೆ ಮನವಿ

Posted On: 10-06-2021 09:24PM
ಉಡುಪಿ : ಕೊರೊನ ಲಾಕ್ ಡೌನ್ ಸಂದರ್ಭದಲ್ಲಿ ದೈವ ಚಾಕ್ರಿ ವರ್ಗವು ಜೀವನ ನಡೆಸಲು ತುಂಬಾ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇವರಿಗೆ ಯಾವುದೇ ಸಂಪಾದನೆ ಇಲ್ಲ. ದೈವಾರಾಧನೆ ಮೂಲ ಕುಲಕಸುಬಾಗಿ ಅವಲಂಬಿಸಿದ್ದಾರೆ. ಇದರಿಂದ ಬರುವ ಸಂಭಾವನೆಯಲ್ಲಿ ಕುಟುಂಬವನ್ನು ನೀಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ (ರಿ. ) ಉಡುಪಿ ಜಿಲ್ಲೆಯ ಪದಾಧಿಕಾರಿಗಳು ಸರ್ವ ಸದಸ್ಯರ ಪರವಾಗಿ ಉಡುಪಿ ಜಿಲ್ಲಾಧಿಕಾರಿಯಾದ ಜಿ. ಜಗದೀಶ್ ಅವರನ್ನು ಭೇಟಿ ಮಾಡಿ ಮನವಿ ನೀಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ದೈವ ಚಾಕ್ರಿ ವರ್ಗದವರ ಸಮಸ್ಯೆಗಳನ್ನು ಹೇಳಿದರು. ಈಗಾಗಲೇ ಸರ್ಕಾರದ ಮೂರು ಬಾರಿಯ ಕೋವಿಡ್ ಪ್ಯಾಕೇಜಿನಲ್ಲಿ ಸರ್ಕಾರ ನಮ್ಮ ಕರಾವಳಿಯ ದೈವಾರಾಧನೆ ಕ್ಷೇತ್ರದಲ್ಲಿ ದುಡಿಯುವವರಿಗೆ ಈ ಲಾಕ್ ಡೌನ್ ತುರ್ತು ಸಂದರ್ಭದಲ್ಲಿ ಯಾವುದೇ ಪರಿಹಾರ ಒದಗಿಸಿಲ್ಲ. ಎರಡು ವರ್ಷದಿಂದ ಸರಿಯಾಗಿ ಯಾವುದೇ ಪೂಜೆ-ಪುರಸ್ಕಾರ, ವಾರ್ಷಿಕ ನೇಮೋತ್ಸವಗಳು, ಯಾವುದೇ ಇತರ ಕಾರ್ಯಗಳು ನಡೆಯಲಿಲ್ಲ. ಈ ಒಂದು ಸಂದರ್ಭದಲ್ಲಿ ಸರ್ಕಾರ ಸಂಪೂರ್ಣ ನಿಷೇಧಿಸಿದೆ.
ಸುಮಾರು ಉಡುಪಿ -ಮಂಗಳೂರಿನಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ದೈವ ಚಾಕ್ರಿ ವರ್ಗದವರಿದ್ದಾರೆ. ಲಾಕ್ ಡೌನ್ ತೆಗೆದ ನಂತರ ಮುಂದಿನ ದಿನಗಳಲ್ಲಿ 200 ಜನರ ಸೀಮಿತ ಅವಧಿಗೆ ಸರ್ಕಾರದ ಕಟ್ಟುನಿಟ್ಟಾದ ನಿಯಮ ಅನುಸಾರವಾಗಿ ದೈವಾರಾಧನೆಗೆ ಅನುಮತಿ ನೀಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ ಎಂದು ಒಕ್ಕೂಟದ ಸರ್ವ ಸದಸ್ಯರು ಜಿಲ್ಲಾಧಿಕಾರಿಗೆ ವಿನಂತಿ ಮಾಡಿಕೊಂಡರು.
ಮನವಿಯನ್ನು ಪಡೆದುಕೊಂಡು ಜಿಲ್ಲಾಧಿಕಾರಿ ಈ ದಿನವೇ ಮುಖ್ಯಮಂತ್ರಿಗಳಿಗೆ ನಿಮ್ಮ ಬೇಡಿಕೆಗಳ ಮನವಿಯನ್ನು ಕಳುಹಿಸಿಕೊಡುತ್ತೇನೆ ಎಂದು ಸರ್ವ ಸದಸ್ಯರಿಗೆ ಸ್ಪಂದಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ರವಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ, ಕೋಶಾಧಿಕಾರಿ ಶ್ರೀಧರ್ ಪೂಜಾರಿ, ಜೊತೆಗೆ ಕಾರ್ಯದರ್ಶಿ ರವೀಶ್ ಕಾಮತ್ ಹಾಗೂ ಗೌರವ ಹಿತೈಷಿಗಳಾದ ನವೀನ್ ಉಪಸ್ಥಿತಿಯಿದ್ದರು.
ಕೊರೊನಾ ಕಷ್ಟಕಾಲದಲ್ಲಿ ಅಸಹಾಯಕರ ಪಾಲಿಗೆ ನೆರವಾಗುತ್ತಿರುವ ಮೇಕ್ ಸಂಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡ

Posted On: 10-06-2021 08:56PM
ಕಾಪು : ಕೊರೋನದಿಂದಾಗಿ ನಮಗೆಲ್ಲ ತಿಳಿದಿರುವ ಹಾಗೆ ಬಹಳಷ್ಟು ಜನರ ಜೀವನದ ದಿಕ್ಕೇ ಬದಲಾಗಿದೆ, ಬದುಕಿಗೆ ಆಸರೆಯಾಗ ಬೇಕಿದ್ದವರೇ ಕೆಲಸವಿಲ್ಲದೇ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ, ಈ ಕಷ್ಟ ಕಾಲದಲ್ಲಿ ನಾವೆಲ್ಲರೂ ಒಂದಾಗಿ ಒಬ್ಬರಿಗೊಬ್ಬರು ನೆರವಾಗುವುದೇ ಜೀವನ. ಮೇಕ್ ಸಂಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡ ನಮ್ಮ ಕೈಯಲ್ಲಾದ ಕಿಂಚಿತು ಸಹಾಯವನ್ನು ಈ ಕೊರೋನದಿಂದ ತೊಂದರೆಯಾದ ಕುಟುಂಬಗಳಿಗೆ ನೀಡುತ್ತಾ ಬಂದಿರುತ್ತದೆ. ಹಾಗೇ ಈ ವರುಷ ಕೊರೋನ ಎರಡನೇ ಅಲೆಯ ಲಾಕ್ಡೌನ್ ಅವಧಿಯಲ್ಲಿ ಈ ತಂಡವು ಉಡುಪಿ ಜಿಲ್ಲೆಯಾದ್ಯಂತ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಕಿಟ್ ವಿತರಿಸುವ ಕಾರ್ಯವನ್ನು ಕೈಗೆತ್ತಿಗೊಂಡಿದೆ. ಸುಮಾರು 5ಲಕ್ಷ ರೂಪಾಯಿ ವೆಚ್ಚದಲ್ಲಿ 500 ಕ್ಕಿಂತ ಹೆಚ್ಚು ಕುಟುಂಬಗಳಿಗೆ ಜಿಲ್ಲೆಯಾದ್ಯಂತ, ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ, ತೀರಾ ಬಡವರಿಗೆ ಕಿಟ್ ವಿತರಿಸುವ ಕೆಲಸವನ್ನು ಕಳೆದ 10 ದಿನಗಳಿಂದ ಯಶಸ್ವಿಯಾಗಿ ಮಾಡುತ್ತ ಬಂದಿದೆ.

ಮೊದಲಿಗೆ ಸುಮಾರು ೧೦೦ ಕಿಟ್ಗಳನ್ನೂ ಕೊಡುವ ಉದ್ದೇಶದಿಂದ ಈ ಕಾರ್ಯಕ್ರಮ ಆರಂಭವಾಯಿತು ನಂತರ ತಂಡದ ಸದಸ್ಯರ ಉತ್ತಮ ಪ್ರತಿಕ್ರಿಯೆಯಿಂದ ಸುಮಾರು 500 ಕಿಟ್ಗಳನ್ನು ಈಗಾಗಲೇ ನೀಡಿ ಇನ್ನು ಹಲವು ಕುಟುಂಬಗಳಿಗೆ ಕಿಟ್ ವಿತರಿಸುವ ಉದ್ದೇಶ ಹೊಂದಿದ್ದಾರೆ. ಈ ಕಿಟ್ಗಳನ್ನೂ ವಿತರಿಸುವ ಸಂದರ್ಭದಲ್ಲಿ ಯಾವುದೇ ಕುಟುಂಬದ ಫೋಟೋಗಳನ್ನೂ ತೆಗೆಯದೆ ಕೇವಲ ಮನೆಗಳ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹೊಸ ಆರಂಭವನ್ನು ಆರಂಭಿಸಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಈ ತಂಡವು ಈಗಾಗಲೇ ಹಲವಾರು ಇಂತಹ ಜನ ಹಿತಕರವಾದ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಆ ಬಡ ಕುಟುಂಬಗಳ ಮನೆಯ ಬಾಗಿಲಿನಲ್ಲಿ ಕಿಟ್ಗಳನ್ನು ಇಟ್ಟು ,ಆ ಮನೆಮಂದಿಯ ಮುಖದಲ್ಲೊಂದು ಸಣ್ಣ ನಗು ತರಿಸುವ ಒಂದು ಪುಟ್ಟ ಪ್ರಯತ್ನ. ಮುಂದೆ ಖಂಡಿತವಾಗಿಯೂ ಅವರ ಕಷ್ಟಕ್ಕೆ ನಾವೆಲ್ಲರೂ ಆಸರೆಯಾಗುವೆವು ಎಂಬುದು ಈ ತಂಡದ ಸದಸ್ಯರ ಗುರಿ.

ಇದರ ಜೊತೆಗೆ ಕೆಲವು ಆಶ್ರಮಗಳಿಗೆ ಆಹಾರ ಸಾಮಗ್ರಿಗಳನ್ನು ಈ ಲಾಕ್ಡೌನ್ ಸಂದರ್ಭದಲ್ಲಿ ಪೂರೈಸಿದ್ದಾರೆ. ಬ್ರಹ್ಮಾವರದ ಅಪ್ಪ ಅಮ್ಮ ಅನಾಥಾಲಯ, ಕಾರ್ಕಳದ ಸುರಕ್ಷಾ ವೃದ್ಧಾಶ್ರಮ, ಮಂಗಳೂರಿನ ಸ್ನೇಹದೀಪ , ಮಣಿಪಾಲದ ಹೊಸಬೆಳಕು ಈ ನಾಲ್ಕು ಸಂಸ್ಥೆ ಗಳಿಗೆ ದಿನಸಿ ಸಾಮಗ್ರಿಗಳನ್ನೂ ಪೂರೈಸಿದೆ. ಹಲವು ಗ್ರಾಮ ಪಂಚಾಯತಿಯ ಆಶಾ ಕಾರ್ಯಕರ್ತರಿಗೆ ಸನ್ಮಾನ ಹಾಗು ಕಿಟ್ ವಿತರಣೆ, ಅರೋಗ್ಯ ಕೇಂದ್ರದ ದಾದಿಯರಿಗೆ ಸನ್ಮಾನ ಮತ್ತು ಕಿಟ್ಗಳನ್ನು , ವೈದ್ಯಾಧಿಕಾರಿಗಳಿಗೆ ಗೌರವಾರ್ಪಣೆ, ಇಂತಹ ವಿವಿಧ ಕಾರ್ಯಕ್ರಮ ಗಳನ್ನೂ ನಡೆಸಿದ್ದಾರೆ.
ಈ ಕೊರೋನ ಆದಷ್ಟು ಬೇಗ ನಮ್ಮೆಲ್ಲರ ಜೀವನದಿಂದ ದೂರವಾಗಿ ನಮೆಲ್ಲರ ಜೀವನದಲ್ಲಿ ಸುಖ,ಶಾಂತಿ, ನೆಮ್ಮದಿ , ಆರೋಗ್ಯ ಸಿಗಲೆಂದು ಆ ದೇವರಲ್ಲಿ ನಾವೆಲ್ಲರೂ ಪ್ರಾರ್ಥಿಸೋಣ. ಮೇಕ್ ಸಂಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡ (MAKESOME1SMILE HELPINGHAND) ಉಡುಪಿ /ದಕ್ಷಿಣಕನ್ನಡ/ಮುಂಬೈ. Follow us on Instagram/Facebook Makesome1smile_helpinghand Logon to: www.makesome1smile.com
ತಲ್ಮಕ್ಕಿ ಪರಿಶಿಷ್ಟ ಪಂಗಡದ ಸಮುದಾಯ ಭವನವೋ! ಇಲ್ಲ ಸಿಮೆಂಟ್ ಗೋದಾಮೋ?

Posted On: 10-06-2021 07:26PM
ಕುಂದಾಪುರ ಜೂ.9: ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯತ್ ತಲ್ಮಕ್ಕಿ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಪಂಗಡ ಸಮುದಾಯ ಭವನ ನಿರ್ಮಾಣಕ್ಕೆ ಕರ್ನಾಟಕ ಸರಕಾರ ಸರಿಸುಮಾರು ಅಂದಾಜು ವೆಚ್ಚ 12 ಲಕ್ಷ ವ್ಯಯಿಸಿ ಕೆ. ಆರ್.ಐ.ಡಿ. ಎಲ್., ಉಡುಪಿ ಅಡಿಯಲ್ಲಿ 2014-15ರಲ್ಲಿ ನಿರ್ಮಾಣ ಮಾಡಿತ್ತು.

ಆದರೆ ಈ ಸಮುದಾಯ ಭವನದ ಪ್ರಸ್ತುತ ಸ್ಥಿತಿಗತಿಗಳನ್ನು ನೋಡಿದಾಗ ಪರಿಶಿಷ್ಟ ಪಂಗಡದ ಭವನವೋ? ಇಲ್ಲ ಸಿಮೆಂಟ್ ಗೋದಾಮೋ? ಎನ್ನುವ ಪ್ರಶ್ನೆ ಕಾಡಿದೆ. ಸಮುದಾಯದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತಿದೆ, ಸಮುದಾಯ ಭವನದ ಹೊರಗಡೆ ಇರುವ ಸೋಲಾರ್ ದೀಪ ಕಾಣೆಯಾಗಿದೆ. ಸಮುದಾಯದ ಭವನದ ಒಳಗಡೆ ಸಹ ಯಾವುದೇ ಲೈಟ್ ಮತ್ತು ಫ್ಯಾನ್ ಕಾಣಿಸುತ್ತಿಲ್ಲ. ಸಮುದಾಯ ಭವನದ ಬಾಗಿಲಿನ ಚಿಲಕವನ್ನು ಮುರಿಯಲಾಗಿದ್ದು, ಕಬ್ಬಿಣದ ತಂತಿಯನ್ನು ಬಳಸಿ ಮುಚ್ಚಲಾಗಿದೆ. ಸ್ಥಳೀಯ ಗ್ರಾಮ ಪಂಚಾಯತ್ ಪಿಡಿಯೋ, ಗ್ರಾಮಲೆಕ್ಕಿಗ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು ಸ್ಥಳೀಯ ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆಯೇ?
ಸ್ಥಳೀಯರು ಹೇಳುವಂತೆ ಸಮುದಾಯ ಭವನದ ಒಳಗೆ ಕಬ್ಬಿಣದ ರಾಡ್, ಸಿಮೆಂಟ್ ಚೀಲಗಳ ದಾಸ್ತಾನು ಮಾಡಿದ್ದು ಹಲವು ತಿಂಗಳಿಂದ ಈ ಚಟುವಟಿಕೆ ನಡೆಯುತ್ತಿದ್ದೆ, ಆದರೂ ಎಲ್ಲಾ ಸಿಮೆಂಟ್ ಚೀಲಗಳು ಯಾರಿಗೆ ಸಂಬಂಧಪಟ್ಟಿದ್ದು? ಈ ಸಿಮೆಂಟ್ ಚೀಲಗಳನ್ನು ಇಲ್ಲಿ ಇರಿಸಲು ಅನುಮತಿ ನೀಡಿದವರಾರು? ಸಮುದಾಯ ಭವನದ ಬೀಗ ಮುರಿದರು ಇನ್ನೂ ಗ್ರಾಮ ಪಂಚಾಯತ್ ಗಮನಕ್ಕೆ ಬಾರದೆ ಇದ್ದಿದ್ದು ವಿಪರ್ಯಾಸವೇ ಸರಿ! ಆದಷ್ಟು ಬೇಗ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿದೆ. ವರದಿ : ಕಿರಣ್ ಕುಂದಾಪುರ
ಕುಂದಾಪುರ : ಲಾರಿ ಚಾಲಕರಿಗೆ ಊಟ ನೀಡಿದ ಶ್ರೀನಾರಾಯಣಗುರು ಯುವಕ ಮಂಡಲ ಕುಂದಾಪುರ

Posted On: 08-06-2021 08:37PM
ಕುಂದಾಪುರ ಜೂ.7 : ಕೋವಿಡ್ ಎರಡನೇ ಅಲೆಯಿಂದ ಜನ ಜೀವನ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಈ ಕೊರೋನ ಲಾಕ್ಡೌನ್ ಹಲವರ ತುತ್ತಿನ ಅನ್ನ ಕುಸಿದಿದೆ. ಅದರಲ್ಲೂ ಲಾರಿ ಚಾಲಕರ ಸ್ಥಿತಿಯಂತೂ ಅತೀ ದಾರುಣವಾಗಿದೆ. ಕೋವಿಡ್ ಕರ್ಫ್ಯೂ ಘೋಷಣೆ ಆದ ಬಳಿಕ ಹೆದ್ದಾರಿಯಲ್ಲಿ ಕೈ ಬೆರಳೆಣಿಕೆಯಷ್ಟೇ ಹೋಟೆಲ್ ತೆರೆಯದೇ ಇರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂದು ಶ್ರೀನಾರಾಯಣ ಗುರು ಯುವಕ ಮಂಡಲ (ರಿ.) ಕುಂದಾಪುರ ವತಿಯಿಂದ ಲಾರಿ ಚಾಲಕರಿಗೆ ಸರಿಸುಮಾರು 250 ಊಟವನ್ನು ಕುಂದಾಪುರ ಮಾಜಿ ಪುರಸಭಾಧ್ಯಕ್ಷ ಅಧ್ಯಕ್ಷೆ ಶ್ರೀಮತಿ ಗುಣರತ್ನರವರ ನೆರವಿನಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ನಾರಾಯಣ ಗುರು ಯುವಕ ಮಂಡಲ (ರಿ.) ಅಧ್ಯಕ್ಷ ಶ್ರೀನಾಥ್ ಕಡ್ಗಿ ಮನೆ, ಗೌರವಾಧ್ಯಕ್ಷರಾದ ಅಶೋಕ್ ಪೂಜಾರಿ, ಕಾರ್ಯದರ್ಶಿಯಾದ ವಿಜಯ ಕೋಣಿ, ಉಪಾಧ್ಯಕ್ಷರಾದ ಯೋಗೀಶ್ ಕೋಡಿ,ಅಜಿತ್ ಚರ್ಚ್ ರೋಡ್, ನಿರ್ದೇಶಕರದಂತಹ ಭಾಸ್ಕರ ವಿಠಲವಾಡಿ ರಾಜೇಶ್ ಕಡ್ಗಿ ಮನೆ ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವತಿಯಿಂದ ಕಾಪು ತಾಲೂಕಿನ ಸಿ ಪ್ರವರ್ಗದ ದೈವ - ದೇವಸ್ಥಾನಗಳ ಅರ್ಚಕ, ಸಿಬ್ಬಂದಿಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

Posted On: 08-06-2021 12:32PM
ಕಾಪು : ಸರಕಾರದ ಆದೇಶದಂತೆ ಕಾಪು ತಾಲೂಕಿನ ಸಿ ಪ್ರವರ್ಗದ 30 ಅಧಿಸೂಚಿತ ಸಂಸ್ಥೆ ದೈವ - ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಅಭಿವೃದ್ಧಿ (ಜಿರ್ಣೋದ್ದಾರ) ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ಕಾಪು ತಾಲೂಕಿನ ಉಪ ತಹಸೀಲ್ದಾರ್ ಶ್ರೀ ಚಂದ್ರಹಾಸ್ ಬಂಗೇರ, ವ್ಯವಸ್ಥಾಪನ ಸಮಿತಿಯ ಸರ್ವಸದಸ್ಯರು ಮತ್ತು ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿಯವರು ಉಪಸ್ಥಿತರಿದ್ದರು.
ಖಾಸಗಿ ಶಿಕ್ಷಕರಿಗೆ ಸಹಾಯ ಹಸ್ತ ನೀಡಿದ ನಟ ಲಿಖಿತ್ ಶೆಟ್ಟಿ

Posted On: 08-06-2021 11:26AM
ಕಾಪು : ಕೋವಿಡ್ ನಿಂದ ಅನೇಕ ಶಾಲಾ ಶಿಕ್ಷಕರಿಗೆ ಸಂಬಳ ಇಲ್ಲದಂತಹ ದಿನಗಳು ನಿರ್ಮಾಣವಾಗಿವೆ. ಕೆಲವರಿಗೆ ಅರ್ಧ ಸಂಬಳ, ಇನ್ನು ಕೆಲವರಿಗೆ ಸಮಯಕ್ಕೆ ಸರಿಯಾಗಿ ಸಂಬಳವೇ ತಲುಪುತ್ತಿಲ್ಲ. ತಮ್ಮವರನ್ನು ಕಳೆದುಕೊಂಡಿರುವ ಹಾಗೂ ಕೋವಿಡ್ ನಿಂದ ಅತಿಥಿ ಶಿಕ್ಷಕರಿಗೆ ಪರ್ಮನೆಂಟ್ ಕೆಲಸ ಆಗಲು ಇನ್ನೂ ಕಾಯಬೇಕಾದಂತಹ ಪರಿಸ್ಥಿತಿ.
ಇಂತಹ ಕಠಿಣ ಸಮಯದಲ್ಲಿ ಬೆಂಗಳೂರಿನ ಖಾಸಗಿ ಶಿಕ್ಷಕರ ಸಂಘದವರು ಅನೇಕರಿಗೆ ಮನವಿಯನ್ನು ನೀಡಿ ಸರಿಯಾದ ಸ್ಪಂದನೆ ಸಿಗದಿದ್ದಾಗ ಅದು ಹೇಗೋ ಅವರ ವಿಚಾರಗಳನ್ನು ತಿಳಿದುಕೊಂಡು ಬಹುತೇಕ 33ಕ್ಕೂ ಹೆಚ್ಚು ಶಿಕ್ಷಕರ ಕುಟುಂಬಗಳಿಗೆ ದಿನಸಿ ಸಾಮಾಗ್ರಿಯ ಕಿಟ್ ಅನ್ನು ಕಾಣಿಕೆಯಾಗಿ ನೀಡಿದ್ದಾರೆ.
ಶಿಕ್ಷಕರು ಸಮಾಜವನ್ನು ನಿರ್ಮಾಣ ಮಾಡುವವರು ಇಂತಹ ಸಮಯದಲ್ಲಿ ಅವರ ಜೊತೆ ನಿಲ್ಲುವುದು ನಮ್ಮ ಆದ್ಯ ಕರ್ತವ್ಯ ಎಂದು ಲಿಖಿತ್ ಶೆಟ್ಟಿ ಸ್ವತಃ ತಾವೇ ಶಿಕ್ಷಕರ ಸಂಘದ ಮುಖ್ಯಸ್ಥೆ ಆಯೆಷಾ ಶೇಖ್ ಬೆಂಗಳೂರು ಅವರಿಗೆ ಕರೆ ಮಾಡಿ ಕಿಟ್ ನ್ನು ಹಸ್ತಾಂತರಿಸಿದ್ದಾರೆ.
ನಟ ನಿರ್ಮಾಪಕ ಹಾಗೂ ಅನೇಕ ಉದ್ಯಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಒರಿಯರ್ದೊರಿ ಅಸಲ್(ತುಳು), ನಮ್ ದುನಿಯಾ ನಮ್ ಸ್ಟೈಲ್, ಪೆಟ್ರೋಲ್ ಹಾಗೂ ಸಂಕಷ್ಟಕರ ಗಣಪತಿ , ಫ್ಯಾಮಿಲಿ ಪ್ಯಾಕ್ ಸಿನಿಮಾಗಳ ನಾಯಕನಟ ಲಿಖಿತ್ ಶೆಟ್ಟಿ ಹೆಚ್ಚು ಸದ್ದುಗದ್ದಲವಿಲ್ಲದೆ ತಾವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದಾರೆ. ಲಿಖಿತ್ ಶೆಟ್ಟಿ ಯವರ ಎಲ್ಲಾ ಸಿನಿಮಾಗಳಿಗೆ , ಯೋಜನೆಗಳಿಗೆ ಶುಭವಾಗಲಿ.
ಕುಂದಾಪುರ ಅಂಬೇಡ್ಕರ್ ಕಾಲೋನಿ ನಿವಾಸಿಗಳಿಗೆ ಡೈನಾಮಿಕ್ ಇನ್ಫ್ರಾಟೆಕ್ ವತಿಯಿಂದ ಕಿಟ್ ವಿತರಣೆ

Posted On: 07-06-2021 03:19PM
ಕುಂದಾಪುರ, ಜೂ.7 : ಕೋವಿಡ್ ಮಹಾಮಾರಿ 2ನೇ ಅಲೆಗೆ ಜನಸಾಮಾನ್ಯರ ಬವಣೆ ಹೇಳತೀರದು, ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಅಂಬೇಡ್ಕರ್ ಕಾಲೋನಿ ಜನರ ಸಂಕಷ್ಟವನ್ನು ಅರಿತು ಉಡುಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯರಾದ ಪ್ರಭಾಕರ್ ವಿ. ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೇಖರ್ ಪೂಜಾರಿಯವರು, ಡೈನಾಮಿಕ್ ಇನ್ಫ್ರಾಟೆಕ್ ಸಂಸ್ಥೆಯ ಪಾಲುದಾರರಾದ ದಿನೇಶ್ ಅಮೀನ್, ಗಣೇಶ್ ಅಮೀನ್, ಧೀರಜ್ ಹೆಜ್ಮಾಡಿಯವರ ಸಹಭಾಗಿತ್ವದಲ್ಲಿ ನಿನ್ನೆ ಅಂಬೇಡ್ಕರ್ ಕಾಲೋನಿ ನಿವಾಸಿಗಳಿಗೆ ಸರಿಸುಮಾರು 25 ಫುಡ್ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕುಂದಾಪುರ ಮಾಜಿ ಅಧ್ಯಕ್ಷರಾದ ದೇವಕಿ ಸಣ್ಣಯ್ಯ, ಬಿಜೆಪಿ ಕುಂದಾಪುರ ಮಂಡಲ ಕ್ಷೇತ್ರ ಅಧ್ಯಕ್ಷರಾದ ಶಂಕರ್ ಅಂಕದಕಟ್ಟೆ, ಉಪಾಧ್ಯಕ್ಷರಾದ ಸಂದೀಪ್ ಖಾರ್ವಿ, ಉಡುಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯರಾದ ಪ್ರಭಾಕರ್ ವಿ., ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೇಖರ್ ಪೂಜಾರಿ, ಪುರಸಭೆ ಸದಸ್ಯರಾದ ಅಶ್ವಿನಿ ಪ್ರದೀಪ್, ಸಂತೋಷ್ ಶೆಟ್ಟಿ ಹಾಗೂ ಡೈನಾಮಿಕ್ ಇನ್ಫ್ರಾಟೆಕ್ ಸಂಸ್ಥೆಯ ದಿನೇಶ್ ಅಮೀನ್, ಧೀರಜ್ ಹೆಜಮಾಡಿ, ಗಣೇಶ್ ಅಮೀನ್, ಭಾಸ್ಕರ್ ಬಿಲ್ಲವ, ಕಮಲಾಕ್ಷ ಯು, ಭಾಸ್ಕರ ವಿಠಲವಾಡಿ, ಹರೀಶ್ ಕುಂದರ್, ದಿವಾಕರ್ ಕಡ್ಗಿಮನೆ, ಅಬ್ದುಲ್ ಅಜೀಜ್, ಹರೀಶ್ ಪುತ್ರನ್, ಅಂತರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿ ಉಪಸ್ಥಿತರಿದ್ದರು.
ಕಾಪು : ಶಾಲಾ ವಾಹನ ಚಾಲಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ದಿನಸಿ ಸಾಮಗ್ರಿಗಳ ವಿತರಣೆ

Posted On: 07-06-2021 03:13PM
ಕಾಪು : ಲಾಕ್ ಡೌನ್ ಸಂದರ್ಭದಲ್ಲಿ ಕಾಪು ಪರಿಸರದ ಶಾಲಾ ವಾಹನ ಚಾಲಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ನೀತಾ ಪ್ರಭು ಹಾಗೂ ಸ್ನೇಹಿತರ ಸಹಕಾರದೊಂದಿಗೆ 28 ಸಾವಿರ ಮೌಲ್ಯದ 35 ಕಿಟ್ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ನೀತಾ ಪ್ರಭು, ಪ್ರಶಾಂತ್ ಪೂಜಾರಿ ಕಾಪು, ಅರುಣ್ ಕಾಮತ್, ಯಾದವ್ ಪೂಜಾರಿ, ಪ್ರಜ್ವಲ್ ಶೆಟ್ಟಿ ಮಲ್ಲಾರ್, ಜೀವನ್ ಶೆಟ್ಟಿ ಮಲ್ಲಾರ್, ಶ್ರೀಕಾಂತ್ ನಾಯಕ್ ಅಲೆವೂರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ, ಜನಪ್ರತಿನಿಧಿಗಳಿಗೆ ದೈವ ಚಾಕ್ರಿ ವರ್ಗದ ಪರವಾಗಿ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದಿಂದ ಟ್ವಿಟರ್ ಅಭಿಯಾನ

Posted On: 07-06-2021 02:22PM
ಉಡುಪಿ : ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ ಅವರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ನಮ್ಮ ಕರಾವಳಿಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇರುವ ದೈವಾರಾಧನೆ ಕ್ಷೇತ್ರದಲ್ಲಿ ಸುಮಾರು 60 ಸಾವಿರಕ್ಕಿಂತಲೂ ಹೆಚ್ಚು ದೈವ ಚಾಕ್ರಿ ಮಾಡುವ ವರ್ಗದವರಿದ್ದಾರೆ.
ಅದರಲ್ಲಿ ಪರವ ಸಮುದಾಯ, ನಲಿಕೆ ಸಮುದಾಯ, ಪಂಬದ ಸಮುದಾಯ, ಕೊರಗ ಸಮುದಾಯ, ನಾಗಸ್ವರ ಬ್ಯಾಂಡ್ ವಾದಕರು, ದರ್ಶನ ಪಾತ್ರಿಗಳು, ಮಧ್ಯಸ್ಥರು, ಮುಕ್ಕಲಿ, ಮಡಿವಾಳರು, ಬಬ್ಬು ಸ್ವಾಮಿ, ಸ್ವಾಮಿ ಕೂಡುಕಟ್ಟು, ಮುಂಡಾಲ ಸಮುದಾಯ, ಗರಡಿ ಕೂಡುಕಟ್ಟು ಹೀಗೆ ಹಲವಾರು ದೈವ ಚಾಕ್ರಿ ವರ್ಗದವರಿದ್ದಾರೆ ಇವರಿಗೆ ದೈವಾರಾಧನೆ ಅಲ್ಲಿ ಬರುವ ಸಂಭಾವನೆಯಲ್ಲಿ ಕುಟುಂಬವನ್ನು ನಡೆಸ ಬೇಕಾಗಿರುತ್ತದೆ. ಲಾಕ್ ಡೌನ್ ಆದುದರಿಂದ ಯಾವುದೇ ಸೇವಾ ಕಾರ್ಯಗಳು ನಡೆಯುವುದಿಲ್ಲ ಆದ್ದರಿಂದ ಸಂಕಷ್ಟದಲ್ಲಿದ್ದಾರೆ.
ಕಳೆದ ಬಾರಿ, ಈ ಬಾರಿ ಸರ್ಕಾರಕ್ಕೆ ಎಷ್ಟು ಮನವಿ ಕೊಟ್ಟರು ಸರ್ಕಾರ ಸ್ಪಂದನೆಗೆ ಬೆಲೆ ಕೊಡುತ್ತಿಲ್ಲ. ಶಾಸಕರು, ಸಂಸದರು, ಉಸ್ತುವಾರಿ ಸಚಿವರು, ಧಾರ್ಮಿಕ ದತ್ತಿ ಇಲಾಖೆ ಸಚಿವರು ಮುಗ್ಧ ಮನಸಿನ ದೈವ ಚಾಕ್ರಿ ವರ್ಗದವರ ಬೆಂಬಲಕ್ಕೆ ಬರುವುದಿಲ್ಲ. ಯಾಕೆ ಇಷ್ಟು ದಿನ ಇದರ ಬಗ್ಗೆ ಮೌನವೆಂಬುದು ನನ್ನ ಪ್ರಶ್ನೆ. ಇನ್ನು ಮುಂದಿನ ದಿನದಲ್ಲಿ ಅದಕ್ಕೆ ಸೂಕ್ತ ಮನವಿಯನ್ನು ಕೊಡಬೇಕಾಗಿ ಎಲ್ಲಾ ರಾಜಕೀಯ ಮುಖಂಡರಿಗೆ ಮನವಿ ಮಾಡುತ್ತಿದ್ದೇನೆ.
ದೈವ ಚಾಕ್ರಿ ಪರವಾಗಿ ಯುವಸಮುದಾಯವನ್ನು ಹೋರಾಟ ಅಭಿಯಾನವನ್ನು ನಡೆಸುತ್ತಿದೆ. ಮೂರು ದಿವಸದ ಹೋರಾಟದಲ್ಲಿ ನೀವು ಮುಖ್ಯಮಂತ್ರಿಗಳಿಗೆ, ರಾಜಕೀಯ ನಾಯಕರಿಗೆ ಯುವ ಸಮುದಾಯದ ನೇತೃತ್ವದಲ್ಲಿ ನಡೆಯುವ ಟ್ವಿಟರ್ ಅಭಿಯಾನ ಚಳುವಳಿ ಟ್ವೀಟ್ ಮಾಡುವುದರ ಮೂಲಕ ದೈವ ಚಾಕ್ರಿ ಅವರಿಗೆ ನ್ಯಾಯ ಒದಗಿಸಿ ಕೊಡಬೇಕಾಗಿ ನಾನು ಬೆಂಬಲ ಕೇಳುತ್ತಿದ್ದೇನೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿರ್ವ: ಕುಬೇರ್ ಎಂಟರ್ಪ್ರೈಸಸ್ ವತಿಯಿಂದ ರೇಷನ್ ಕಿಟ್, ಮಾಸ್ಕ್ ವಿತರಣೆ

Posted On: 06-06-2021 11:01PM
ಕಾಪು : ಕುಬೇರ್ ಎಂಟರ್ಪ್ರೈಸಸ್ ವತಿಯಿಂದ ಸುಮಾರು 60 ಕ್ಕೂ ಹೆಚ್ಚು ಕುಟುಂಬಗಳಿಗೆ ರೇಷನ್ ಕಿಟ್ ವಿತರಣೆ ಮಾಡಲಾಯಿತು.

ಇದೇ ಸಂದರ್ಭ ಶಿರ್ವ ಪಂಚಾಯತ್, ಡಾಕ್ಟರ್ಸ್, ಮೆಸ್ಕಾಂ ಸಿಬ್ಬಂದಿ, ಶಿರ್ವ ಪೊಲೀಸ್ ಸಿಬ್ಬಂದಿಗಳಿಗೆ ಮತ್ತು ಆಶಾ ಕಾರ್ಯಕರ್ತರಿಗೆ ಮಾಸ್ಕ್ ವಿತರಣೆಯನ್ನು ಮಾಡಲಾಯಿತು.