Updated News From Kaup

ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ಹಿಂಸಾಚಾರ ಖಂಡಿಸಿ ಪ್ರತಿಭಟನೆ

Thumbnail
Posted On: 22 Oct 2021, 08:33 PM

ಪಡುಬಿದ್ರಿ : ಬಾಂಗ್ಲಾದೇಶದ ಹಿಂದುಗಳ ಮೇಲೆ ನಡೆಯುತ್ತಿರುವ ವ್ಯಾಪಕ ಹಿಂಸಾಚಾರ ಖಂಡಿಸಿ ಕಾಪು ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಪಡುಬಿದ್ರಿಯಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ರಾಜೇಶ್ ಉಚ್ಚಿಲ, ತಾಲೂಕು ಅಧ್ಯಕ್ಷ ಶಶಿಧರ ಹೆಗ್ಡೆ ಅಡ್ವೆ, ತಾಲೂಕು ಉಪಾಧ್ಯಕ್ಷ ಲೋಕೇಶ್ ಪಲಿಮಾರು, ತಾಲೂಕು ಕಾರ್ಯದರ್ಶಿ ಗುರುಪ್ರಸಾದ್ ಸೂಡಾ, ಪಡುಬಿದ್ರಿ ವಲಯಾಧ್ಯಕ್ಷ ಪ್ರತೀಕ್ ನಂದಿಕೂರು, ಶಿರ್ವ ವಲಯ ಅಧ್ಯಕ್ಷ ರಕ್ಷಿತ್, ಹಿಂದು ಮುಖಂಡರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನೀತಾ ಗುರುರಾಜ್, ಶಿವಪ್ರಸಾದ್ ಶೆಟ್ಟಿ ಎರ್ಮಾಳ್, ಕೃಷ್ಣ ಕಂಚಿನಡ್ಕ, ಸುರೇಶ್ ಪೂಜಾರಿ ಪಾದೆಬೆಟ್ಟು, ಪಡುಬಿದ್ರಿ ವಲಯ ಉಪಾಧ್ಯಕ್ಷ ಉಮಾನಾಥ್ ಮೆಂಡನ್, ವಲಯ ಪ್ರಧಾನ ಕಾರ್ಯದರ್ಶಿ ಸುಹಾಸ್ ನಟವರ್ಯ, ಪಲಿಮಾರು ಘಟಕಾಧ್ಯಕ್ಷ ರಾಘವೇಂದ್ರ ಸುವರ್ಣ, ಉಪಾಧ್ಯಕ್ಷ ರಿತೇಶ್ ದೇವಾಡಿಗ, ನಂದಿಕೂರು ಘಟಕಾಧ್ಯಕ್ಷ ನಿತಿನ್ ಶೆಟ್ಟಿ, ಉಪಾಧ್ಯಕ್ಷ ಸುಕೇಶ್ ಕುಲಾಲ್, ಕಂಚಿನಡ್ಕ ಘಟಕಾಧ್ಯಕ್ಷ ಶಂಕರ್‌, ಉಪಾಧ್ಯಕ್ಷ ಶಿವು ಮತ್ತಿತರರು ಉಪಸ್ಥಿತರಿದ್ದರು.

ಕ್ಯಾನ್ಸರ್ ಬಾಧಿತರಿಗೆ ಕೇಶದಾನ ಮಾಡಿದ ಸುಧಾ ಪೂಜಾರಿ

Thumbnail
Posted On: 22 Oct 2021, 07:27 PM

ಸುರತ್ಕಲ್ : ಸದಾ ತೆರೆಮರೆಯಲ್ಲಿ ನಿಸ್ವಾರ್ಥ ಸೇವಾ ಚಟುವಟಿಕೆಯನ್ನು ಮಾಡುತ್ತಿರುವ, ಇದೀಗ ಕ್ಯಾನ್ಸರ್ ರೋಗದಿಂದ ತಲೆ ಕೂದಲು ನಷ್ಟವಾಗುವ ರೋಗಿಗಳಿಗೆ ವಿಗ್‌ ತಯಾರಿಸಲು ತನ್ನ ಕೇಶವನ್ನು ದಾನ ಮಾಡಿದ್ದಾರೆ ಸುರತ್ಕಲ್ ಚೆಲ್ಯಾರ್ ನ ಸುಧಾ ಪೂಜಾರಿ. ಈ ಕಾರ್ಯದ ಮೂಲಕ ಮಾನವೀಯತೆ ಮೆರೆದ ಸುಧಾ ಪೂಜಾರಿಯವರ ಸೇವಾ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಕಲ್ಯಾಣಪುರ ರೋಟರಿ ಕ್ಲಬ್ಬಿನಿಂದ ವಿವಿಧ ಸಾಮಾಜಿಕ ಚಟುವಟಿಕೆಗಳು

Thumbnail
Posted On: 22 Oct 2021, 07:19 PM

ಉಡುಪಿ : ರೋಟರಿ ಜಿಲ್ಲೆ 3182 ಇದರ ಗವರ್ನರ್ ರಾಮಚಂದ್ರ ಮೂರ್ತಿ ಹಾಗೂ ರೋಟರಿ ಜಿಲ್ಲಾ ಪ್ರಥಮ ಮಹಿಳೆ ಸುರೇಖಾ ಪ್ರಪ್ರಥಮ ಬಾರಿಗೆ ಕಲ್ಯಾಣಪುರ ರೋಟರಿ ಕ್ಲಬ್ಬಿಗೆ ಅಧಿಕೃತವಾಗಿ ಭೇಟಿ ನೀಡಿದರು. ಅಸಿಸ್ಟೆಂಟ್ ಗವರ್ನರ್, ಪದ್ಮನಾಭ ಕಾಂಚನ್ , ಅಧ್ಯಕ್ಷ ಶಂಭು ಶಂಕರ್, ಪೂರ್ಣಿಮಾ, ಕಾರ್ಯದರ್ಶಿ ಪ್ರಕಾಶ್, ಜಿಲ್ಲಾ ನಿಕಟಪೂರ್ವ ಗವರ್ನರ್ ರಾಜಾರಾಮ್ ಭಟ್, ನಿಕಟಪೂರ್ವ ಜಿಲ್ಲಾಕಾರ್ಯದರ್ಶಿ ಅಲೆನ್ ಲುಯಿಸ್, ವಲಯ ಸೇನಾನಿ ಬ್ರ್ಯಾನ್ ಡಿಸೋಜ ಹಾಗೂ ಸದಸ್ಯರು ಬರಮಾಡಿಕೊಂಡರು. ಸಂತೆಕಟ್ಟೆ ಗೊರೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಕಲ್ಯಾಣಪುರ ರೋಟರಿ ಕ್ಲಬ್ಬಿನಿಂದ ನೀಡಲಾದ ಡಯಾಲಿಸಿಸ್ ಸೆಂಟರ್ ಗೆ ಭೇಟಿ ಪರಿಶೀಲಿಸಿ ವೈದ್ಯರು ಮತ್ತು ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿದರು. ಹಾಗೂ ನಾಮ ಫಲಕವನ್ನು ಅನಾವರಣಗೊಳಿಸಿದರು. ನಂತರ ಮೌಂಟ್ ರೋಸಾರಿ ಹೈಸ್ಕೂಲ್ ಸಂತೆಕಟ್ಟೆ ಶಾಲೆಗೆ ಭೇಟಿ ನೀಡಿ ಸುಮಾರು ರೂ. 18,000 ಮೌಲ್ಯದ ಇನ್ಸಿನರೇಟರನ್ನು ಪ್ರಥಮ ಮಹಿಳೆ ಸುರೇಖ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೊಡುಗೆ ನೀಡಿದ ಬ್ಯಾಪ್ಟಿಸ್ಟ್ ಡಯಾಸ್ , ಶಾಲಾ ಮುಖ್ಯೋಪಾಧ್ಯಾಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ಸ್ವಚ್ಛವಾದ ಶಾಂತಿಗುಡ್ಡೆ ಪರಿಸರ - ತಕ್ಷಣ ಸ್ಪಂದಿಸಿದ ಶಿರ್ವ ಪಂಚಾಯತ್

Thumbnail
Posted On: 22 Oct 2021, 11:41 AM

ಶಿರ್ವ: ಕಾಪು-ಶಿರ್ವ ರಸ್ತೆಯ ಶಾಂತಿಗುಡ್ಡೆ ಎಂಬಲ್ಲಿ ಸಾರ್ವಜನಿಕರು ಘನ ಮತ್ತು ದ್ರವ ತ್ಯಾಜ್ಯಗಳು ಹಾಗು ಪ್ಲಾಸ್ಟಿಕ್ ವಸ್ತುಗಳನ್ನು ಮನ ಬಂದಂತೆ ರಸ್ತೆ ಬದಿಗೆ ಎಸೆಯುವುದರಿಂದ ಪರಿಸರದ ದನಕರುಗಳಿಗೆ ಮತ್ತು ಜನರಿಗೆ ತೊಂದರೆ ಉಂಟಾಗುವ ಬಗ್ಗೆ ಶಿರ್ವದ ಸಂತ ಮೇರಿ ಕಾಲೇಜಿನ ಉಪನ್ಯಾಸಕರಾದ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ನಮ್ಮ ಕಾಪು ವೆಬ್ ಪೋರ್ಟಲ್ ತಿಳಿಸಿದ ಹಿನ್ನೆಲೆಯಲ್ಲಿ ತಕ್ಷಣ ಸ್ಪಂದಿಸಿದ ಶಿರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೆ ಆರ್ ಪಾಟ್ಕರ್ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.

ಶಿರ್ವ: ಡಂಪಿಂಗ್ ಯಾರ್ಡ್ ಆಗುತ್ತಿದೆ ಶಾಂತಿಗುಡ್ಡೆ

Thumbnail
Posted On: 21 Oct 2021, 03:04 PM

ಶಿರ್ವ: ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಪು-ಶಿರ್ವ ರಸ್ತೆಯ ಶಾಂತಿಗುಡ್ಡೆ ಎಂಬಲ್ಲಿ ಸಾರ್ವಜನಿಕರು ಘನ ಮತ್ತು ದ್ರವ ತ್ಯಾಜ್ಯಗಳು ಹಾಗು ಪ್ಲಾಸ್ಟಿಕ್ ವಸ್ತುಗಳನ್ನು ಮನ ಬಂದಂತೆ ರಸ್ತೆ ಬದಿಗೆ ಎಸೆಯುವುದರಿಂದ ಪರಿಸರದ ದನಕರುಗಳಿಗೆ ಮತ್ತು ಜನರಿಗೆ ತೊಂದರೆ ಉಂಟಾಗುವುದರೊಂದಿಗೆ ಸಾಂಕ್ರಾಮಿಕ ಕಾಯಿಲೆಗಳ ಹಾವಳಿ ಜೋರಾಗಿದೆ. ಸುತ್ತ-ಮುತ್ತ ದಿನನಿತ್ಯ ಒಡಾಡುವ ನಾಗರಿಕರಿಗೆ ಕೆಟ್ಟ ವಾಸನೆಯಿಂದಾಗಿ ಮೂಗು ಮುಚ್ಚಿಕೊಂಡೇ ಹೋಗ ಬೇಕಾದ ಪರಿಸ್ಥಿತಿ ಬಂದೊದಗಿದೆ. ಸುತ್ತಲ ಫಲವತ್ತತೆ ಯ ಭೂಮಿ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ನಿಂದ ತುಂಬಿದೆ. ಇನ್ನು ಮುಂದಾದರು ನಾಗರಿಕ ಪ್ರಪಂಚ ಇತ್ತ ಗಮನ ಹರಿಸಬೇಕಾಗಿದೆ. ಇದಕ್ಕೆ ಸಂಬಂದಪಟ್ಟವರು ಸೂಕ್ತ ಕ್ರಮ ಕೈಗೊಂಡು ಪರಿಸರ ಮಾಲಿನ್ಯ ತಡೆಗಟುವಲ್ಲಿ ಶ್ರಮಿಸಬೇಕಾಗಿದೆ ಎಂದು ಸಂತ ಮೇರಿ ಕಾಲೇಜು, ಶಿರ್ವದ ಊಪನ್ಯಾಸಕರಾದ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಆಗ್ರಹಿಸಿದ್ದಾರೆ.

ಶ್ರೀ ಉಮಾ ಮಹೇಶ್ವರಿ ಭಜನ ಮಂಡಳಿ ಜರಿಮರಿ ಯ ಸದಸ್ಯರಿಂದ ತುಳುನಾಡಿನ ಪ್ರಸಿದ್ಧ ಕ್ಷೇತ್ರಗಳಲ್ಲಿ ಭಜನೆ ಕಾರ್ಯಕ್ರಮ.

Thumbnail
Posted On: 21 Oct 2021, 01:29 PM

ಕಾಪು : ಮುಂಬಯಿಯ ಪ್ರಸಿದ್ಧ ಭಜನ ಮಂಡಳಿಗಳಲ್ಲಿ ಒಂದಾದ ಶ್ರೀ ಉಮಾ ಮಹೇಶ್ವರಿ ಭಜನ ಮಂಡಳಿಯ ಸದಸ್ಯರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕ್ಷೇತ್ರಗಳಲ್ಲಿ ಅಕ್ಟೋಬರ್ 17 ರಿಂದ ಅಕ್ಟೋಬರ್ 21 ರ ತನಕ ಭಜನ ಸಂಕೀರ್ತನ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡ್ಕೂರ್, ಕಾರ್ಕಳ, ಶ್ರೀ ಅಖಿಲೇಶ್ವರ ದೇವಸ್ಥಾನ ಪೊಳಲಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು, ಶ್ರೀ ಅಬ್ಬಗ ಧಾರಗ ಶ್ರೀ ಬ್ರಹ್ಮಲಿಂಗೇಶ್ವರ ಕ್ಷೇತ್ರ ಕವಾತರು, ಶ್ರೀ ಆದಿ ಮಾರಿಯಮ್ಮ ದೇವಸ್ಥಾನ ಕೋಟೆಮನೆ ಕಾಪು, ಶ್ರೀ ಹೊಸ ಮಾರಿಗುಡಿ ಕಾಪು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಪ್ಪನಾಡು, ಶ್ರೀ ಭಗವತಿ ಕ್ಷೇತ್ರ ಸಸಿಹಿತ್ಲು, ಶ್ರೀ ಮಹಾಗಣಪತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪಡುಬಿದ್ರಿ, ಶ್ರೀ ಕೃಷ್ಣ ಮಠ ಉಡುಪಿ, ಶ್ರೀ ಆದಿ ಜನಾರ್ದನ ಮಹಾಕಾಳಿ ದೇವಸ್ಥಾನ ಅಂಬಲ್ಪಾಡಿ ಉಡುಪಿ, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪಲಿಮಾರು ಮುಂತಾದ ಪುಣ್ಯಕ್ಷೇತ್ರ ಗಳಲ್ಲಿ ಭಜನ ಕಾರ್ಯಕ್ರಮವನ್ನು ಭುವಾಜಿ ರವೀಂದ್ರ ಶಾಂತಿ ಯವರ ನೇತೃತ್ವದಲ್ಲಿ ನಡೆಸಿಕೊಟ್ಟರು. ಕಲಿಯುಗದಲ್ಲಿ ದೇವರನ್ನು ಒಲಿಸುವ ಸುಲಭ ಸಾಧನ ವೆಂಬ ಜ್ಞಾನಿಗಳ ವಾಣಿಯಂತೆ ಸತತ 8 ವರ್ಷ ಶ್ರೀ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಹರಿನಾಮ ಸಂಕೀರ್ತನೆ ಯನ್ನು ನಡೆಸಿರುವ ಭುವಾಜಿ ರವೀಂದ್ರ ಶಾಂತಿ ಯವರ ನೇತೃತ್ವದ ಶ್ರೀ ಉಮಾ ಮಹೇಶ್ವರಿ ಭಜನ ಮಂಡಳಿ ಜರಿಮರಿಯ ಸದಸ್ಯರು ಮುಂಬಯಿ ಮಹಾನಗರ ಮಾತ್ರವಲ್ಲದೆ ದೇಶದ ಹಲವಾರು ಪುಣ್ಯಕ್ಷೇತ್ರಗಳಲ್ಲಿ ಭಜನ ಕಾರ್ಯಕ್ರಮ ನಡೆಸಿ ಕೊಟ್ಟಿರುವರು. ಇದೀಗ ಭಜನೆಯಲ್ಲಿ ಯುವ ಪೀಳಿಗೆ ಆಸಕ್ತಿ ತೋರಲೆಂದು ಉಚಿತವಾಗಿ ಮನೆ ಮನೆ ಭಜನೆ ಸೇವೆಯನ್ನು ಕೂಡ ಮಾಡುತ್ತಿದ್ದು, ಇದೀಗ ತುಳುನಾಡಿನ ಉಭಯ ಜಿಲ್ಲೆಗಳ ಹಲವಾರು ಕ್ಷೇತ್ರಗಳಲ್ಲಿ ಭಜನ ಕಾರ್ಯಕ್ರಮವನ್ನು ಭಕ್ತಿ ಭಾವದಿಂದ ನಡೆಸಿಕೊಟ್ಟಿರುವರು.

ವಿಹಿಂಪ, ಭಜರಂಗದಳ : ಪ್ರತಿಭಟನೆ

Thumbnail
Posted On: 21 Oct 2021, 01:22 PM

ಉಡುಪಿ‌: ಯಾವೆಲ್ಲಾ ದೇಶದಲ್ಲಿ ಇಸ್ಲಾಂ ಇದೆಯೋ ಅಲ್ಲೆಲ್ಲಾ ಅಶಾಂತಿ ನೆಲೆಸಿದೆ. ಇಸ್ಲಾಂ ಇರುವಲ್ಲಿ ಭಯೋತ್ಪಾದಕತೆ ಇದೆ ಎಂದು ಭಜರಂಗದಳ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್ ಹೇಳಿದರು. ಬುಧವಾರ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕದಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ಹಿಂದು ದೇವಾಲಯಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಭಾರತದಲ್ಲಿಯೂ ಹಿಂದುಗಳು ಅಲ್ಪಸಂಖ್ಯಾತ ಇರುವಲ್ಲಿ ಇಸ್ಲಾಂ ಜಿಹಾದಿಗಳು ದೌರ್ಜನ್ಯ ನಡೆಸುತ್ತಿದ್ದಾರೆ. ಭಾರತದ ಹಿಂದುಗಳು ಸಂಘಟಿತರಾಗಬೇಕು, ಇವತ್ತು ಬಾಂಗ್ಲದೇಶಕ್ಕೆ ಬಂದ ಸ್ಥಿತಿ ನಾಳೆ ನಮಗೂ ಬರಬಹುದೆಂದು ಆತಂಕ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ವಿಹಿಂಪ ಮುಖಂಡ ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.

ಸ್ವಚ್ಛ ಶಿರ್ವ ನಮ್ಮ ಶಿರ್ವ : ಸ್ವಚ್ಛತೆ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ನೊಂದಿಗೆ ಸಹಕರಿಸಲು ಮನವಿ

Thumbnail
Posted On: 20 Oct 2021, 09:04 PM

ಕಾಪು : ಸ್ವಚ್ಛ ಶಿರ್ವ ನಮ್ಮ ಶಿರ್ವ ಕಾರ್ಯಕ್ರಮದಡಿ ಶಿರ್ವ ಪಂಚಾಯತ್ ವ್ಯಾಪ್ತಿಯಲ್ಲಿನ ಸ್ವಚ್ಛತೆಗಾಗಿ ಪಂಚಾಯತ್ ಸಿಬ್ಬಂದಿಯವರೊಂದಿಗೆ ದಿನಾ ಬೆಳಿಗ್ಗೆ 7.30 ರಿಂದ 9 ಗಂಟೆವರೆಗೆ ಶ್ರಮಿಸಲಾಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಸ , ತ್ಯಾಜ್ಯ ಬಿಸಾಡುವವರನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ. ಸಾರ್ವಜನಿಕವಾಗಿ ಉಗುಳುವುದು ಕಂಡುಬಂದಲ್ಲಿ ಅವರ ವಿರುದ್ದ ಸಾಂಕ್ರಾಮಿಕ ರೋಗಗಳ ತಡೆ ಮತ್ತು ನಿಯಂತ್ರಣ ಕಾಯಿದೆ ಅಡಿ ದಂಡ ವಿಧಿಸಲಾಗುತ್ತಿದೆ. ಕಸ ಬಿಸಾಡುವವರನ್ನೂ ಹಿಡಿದು ದಂಡವಿಧಿಸಲಾಗುತ್ತಿದೆ. ಕಸದ ರಾಶಿ ಕಂಡು ಬಂದಲ್ಲಿ ಅದರ ವಿಲೇವಾರಿ ಮಾಡಲಾಗುತ್ತಿದೆ. ಪಂಚಾಯತ್ ಸದಸ್ಯರು, ಸಾರ್ವಜನಿಕರು, ಗ್ರಾಮಸ್ಥರು, ಸಂಘ ಸಂಸ್ಥೆಗಳು ಸ್ವಚ್ಛತೆ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ನೊಂದಿಗೆ ಸಹಕರಿಸಲು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ ಆರ್ ಪಾಟ್ಕರ್ ಮನವಿ ಮಾಡಿಕೊಂಡಿದ್ದಾರೆ.

ಮಹರ್ಷಿ ವಾಲ್ಮೀಕಿ ಅವರ ಸಾಧನೆ ಎಲ್ಲರಿಗೂ ಪ್ರೇರಣೆ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

Thumbnail
Posted On: 20 Oct 2021, 07:58 PM

ಉಡುಪಿ : ಬೇಡನಾಗಿದ್ದ ವ್ಯಕ್ತಿ ತನ್ನ ಸತತ ಪರಿಶ್ರಮ ,ಅಚಲ ಸಾಧನೆಯಿಂದ ಮಹರ್ಷಿ ವಾಲ್ಮೀಕಿಯಾಗಿ ರೂಪುಗೊಂಡಿದ್ದು, ವಾಲ್ಮೀಕಿ ಅವರ ಈ ಸಾಧನೆ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು. ಅವರು ಇಂದು ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ನಗರಸಭೆ ಉಡುಪಿ,ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆ ಸಹಯೋಗದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹರ್ಷಿ ವಾಲ್ಮೀಕಿ ರಚನೆಯ ರಾಮಾಯಣವು ಎಲ್ಲರಿಗೂ ಅರ್ಥವಾಗುವ ಸರಳ ಭಾಷೆಯಿಂದ ಕೂಡಿದ್ದು, ವಿವಿಧ ಭಾಷೆಗಳಿಗೆ ಭಾಷಾಂತರವಾಗಿ, ಧಾರಾವಾಹಿ,ಚಲನಚಿತ್ರಗಳ ಮೂಲಕ ಪ್ರತಿಯೊಬ್ಬರ ಮನೆ ಮನಗಳನ್ನು ಮುಟ್ಟಿದೆ. ರಾಮಾಯಣದಲ್ಲಿನ ಮೌಲ್ಯಗಳು,ತತ್ವಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ಸತತ ಪರಿಶ್ರಮದಿಂದ ಯಾವುದೇ ವ್ಯಕ್ತಿ ಮಹಾನ್ ಸಾಧನೆ ಮಾಡಬಹುದು ಎನ್ನುವುದಕ್ಕೆ ವಾಲ್ಮೀಕಿ ಸಾಕ್ಷಿಯಾಗಿದ್ದಾರೆ. ಉಡುಪಿ ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಕಾರ್ಯಕ್ರಮ ಆರಂಭವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಪರಿಶಿಷ್ಟ ಪಂಗಡದ ಅಭಿವೃಧ್ದಿಗೆ ಸರ್ಕಾರ ರೂಪಿಸಿರುವ ಯೋಜನೆಗಳ ಪ್ರಯೋಜನವನ್ನು ಪ.ಪಂಗಡದ ಜನತೆ ಪಡೆಯಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಮಾತನಾಡಿ, ಅತ್ಯಂತ ಹಿಂದುಳಿದ ವರ್ಗದ ವ್ಯಕ್ತಿ ಜ್ಞಾನ ಪಡೆಯುವ ಮೂಲಕ ಆದಿಕವಿ ವಾಲ್ಮೀಕಿಯಾಗಿದ್ದಾರೆ, ಹಿಂದುಳಿದ ವರ್ಗದ ಜನತೆ ತಮ್ಮಲ್ಲಿನ ಕೀಳಿರಿಮೆ ತೊರೆದು,ವಿದ್ಯಾಭ್ಯಾಸ ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಈ ನಿಟ್ಟಿನಲ್ಲಿ ಸಂಘಟನೆಗಳ ಪಾತ್ರ ಅತ್ಯಂತ ಪ್ರಮುಖವಾದುದು ಎಂದರು. ಮಹರ್ಷಿ ವಾಲ್ಮೀಕಿಯವರ ವ್ಯಕ್ತಿತ್ವ ಮತ್ತು ಜೀವನದ ಬಗ್ಗೆ ಉಪನ್ಯಾಸ ನೀಡಿದ ಮಂಗಳೂರು ವಿವಿಯ ಸಂಶೋಧನಾ ವಿದ್ಯಾರ್ಥಿ ದಿನಕರ ಕೆಂಜೂರು ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಚಿಂತಕ ,ತತ್ವಜ್ಞಾನಿ,ಶಿಕ್ಷಣ ಪ್ರೇಮಿಯಾಗಿದ್ದರು,ರಾಮಾಯಣವನ್ನು ಜನಸಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ರಚಿಸಿದ್ದಾರೆ. ಅದರಲ್ಲಿನ ಪ್ರಕೃತಿ ಸೌಂದರ್ಯ, ಆದರ್ಶ ವ್ಯಕ್ತಿಯ ಚಿತ್ರಣ, ಕೌಟುಂಬಿಕ ಮೌಲ್ಯಗಳು, ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳು ಎಲ್ಲಾ ಕಾಲದಲ್ಲೂ ಪ್ರಸ್ತುತವಾಗಿವೆ,ವ್ಯಕ್ತಿ ತನ್ನಲ್ಲಿನ ನಕಾರಾತ್ಮಕ ಭಾವನೆಗಳನ್ನು ತೊಡೆದು,ಆತ್ಮ ವಿಶ್ವಾಸದಿಂದ ಮುನ್ನಡೆದರೆ ಉನ್ನತ ಸಾಧನೆಗಳನ್ನು ಮಾಡಲು ಸಾಧ್ಯ ಎಂಬುದಕ್ಕೆ ವಾಲ್ಮೀಕಿ ಅವರ ಜೀವನ ಚರಿತ್ರೆ ಸಾಕ್ಷಿಯಾಗಿದೆ ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು. ಸಮಗ್ರ ಗಿರಿಜನ ಅಭಿವೃದ್ದಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ದೂದ್ಪೀರ್ ಸ್ವಾಗತಿಸಿದರು, ವಿಶ್ವನಾಥ್ ವಂದಿಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಾದ ಪ್ರತಿಭಾ ನಾಯ್ಕ್, ಕಾವ್ಯಶ್ರೀ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶೀನ ನಾಯ್ಕ, ದೋಗು ಕೊರಗ,ಗುಲಾಬಿ ಗೌಡ್ತಿ ಅವರನ್ನು ಸನ್ಮಾನಿಸಲಾಯಿತು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ವಾಟ್ಸಾಪ್ ಬ್ರಾಡ್ ಕಾಸ್ಟ್ ಮೆಸೇಜ್ ಗೆ ಚಾಲನೆ

Thumbnail
Posted On: 20 Oct 2021, 06:24 PM

ಕಾಪು : ಇಲ್ಕಲ್ ಕೆಂಪು ಶಿಲೆಯಿಂದ ನವೀಕೃತ ವಾಗಿ ನಿರ್ಮಾಣಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿಯು ಭರದಿಂದ ಸಾಗುತ್ತಿದೆ. ಈ ನಿಟ್ಟಿನಲ್ಲಿ ದೇವಳದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳ ಬಗ್ಗೆ ಭಕ್ತಾದಿಗಳಿಗೆ ತ್ವರಿತವಾಗಿ ತಿಳಿಯುವಂತೆ ಮಾಡಲು ಈವರೆಗೆ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಉಪ ಸಮಿತಿಗಳಾದ ಪ್ರಚಾರ ಸಮಿತಿ ಮತ್ತು ಆರ್ಥಿಕ ಸಮಿತಿಯ ಮುಖಾಂತರ ಸಂಗ್ರಹಿಸಲಾದ 36,000 ಕ್ಕೂ ಅಧಿಕ ವಾಟ್ಸಾಪ್ ನಂಬರ್ ಗಳಿಗೆ ಏಕಕಾಲದಲ್ಲಿ ಬ್ರಾಡ್ ಕಾಸ್ಟ್ ಮೆಸೇಜ್ ಹಾಕಲಾಯಿತು. ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್. ವಿ. ಶೆಟ್ಟಿ ಬಾಲಾಜಿ, ಗೌರವ ಸಲಹೆಗಾರರಾದ ನಿರ್ಮಲ್ ಕುಮಾರ್ ಹೆಗ್ಡೆ, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರಾದ ಸುನೀಲ್. ಎಸ್. ಪೂಜಾರಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರವೀಂದ್ರ.ಎಮ್, ಆರ್ಥಿಕ ಸಮಿತಿಯ ಶೈಲಪುತ್ರಿ ತಂಡದ ಮುಖ್ಯ ಸಂಚಾಲಕರಾದ ವಿದ್ಯಾಧರ ಪುರಾಣಿಕ್, ಕಾಲರಾತ್ರಿ ತಂಡದ ಸಂಚಾಲಕರಾದ ಶ್ರೀನಿವಾಸ ಆಚಾರ್ಯ, ಸಿಬ್ಬಂದಿ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.