Updated News From Kaup

ಕುಡಿಯುವ ನೀರು ಪೋಲು ಕೇಳುವವರು ಯಾರು ಇಲ್ಲವೇ ?

Posted On: 30-09-2020 09:55PM

ಹಿರಿಯಡಕ -ಉಡುಪಿ ಮುಖ್ಯ ರಸ್ತೆಯಲ್ಲಿ (ಅಂಜಾರು ಕ್ರಾಸ್) ಸ್ಯಾಬ್ ಒಡೆದು ಕಳೆದ 10 ದಿನದಿಂದ ನಿರಂತರವಾಗಿ ಕುಡಿಯುವ ನೀರು ಚರಂಡಿ ಸೇರುತ್ತಿದೆ. ಸ್ಥಳೀಯರ ಪ್ರಕಾರ ದಿನಕ್ಕೆ ಅಂದಾಜು ಹತ್ತು ಸಾವಿರ ಲೀಟರ್ ನೀರು ಚರಂಡಿಗೆ ಹೋಗುತ್ತಿದೆ.ಈ ರಸ್ತೆಯ ಪಕ್ಕದಲ್ಲಿ ನಿರಂತರವಾಗಿ ನೀರು ಹರಿಯುತ್ತಿರುದರಿಂದ ಕೆಸರು ಉಂಟಾಗಿ ರಸ್ತೆಯಲ್ಲಿ ನಡೆದಾಡುವ ಪಾದಚಾರಿಗಳಿಗೂ ತೊಂದರೆಯಾಗಿದೆ.

ಈ ಬಾರಿ ಮಳೆ ಬಂದ ಕಾರಣ ನೀರಿನ ಸಮಸ್ಯೆ ಉಂಟಾಗಲಾರದು ಆದರೆ ಈ ರೀತಿಯಲ್ಲಿ ಶುದ್ದ ನೀರು ಪೋಲಾಗುತ್ತಿರುದನ್ನು ನೋಡಿಯೂ ಗಮನ ಹರಿಸದ ಗ್ರಾಮ ಪಂಚಾಯತ್ ನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಅತೀ ಶೀಘ್ರದಲ್ಲಿ ನೀರಿನ ಸ್ಲಾಬ್ ದುರಸ್ತಿಗೊಳಿಸಿ ಕುಡಿಯುವ ನೀರು ಹಾಳಾಗದಂತೆ ಮಾಡಬೇಕಾಗಿದೆ.

ವರದಿ : ರಾಘವೇಂದ್ರ ಪ್ರಭು ಕರ್ವಾಲು
ನಮ್ಮ ಕಾಪು ನ್ಯೂಸ್

ಅಕ್ಟೋಬರ್ 19ರವರೆಗೆ 20% ರಿಯಾಯಿತಿ ದರದಲ್ಲಿ ಮೂಡುಬಿದ್ರಿಯ ತೆನಸ್ ರೆಸ್ಟೋರೆಂಟ್

Posted On: 30-09-2020 01:36PM

ಪಿಜ್ಜಾಪ್ರಿಯರಿಗೆ ಶುಭಸುದ್ದಿ.ಮೂಡಬಿದ್ರೆ ಪರಿಸರದ ಜನತೆ ಇನ್ನುಮುಂದೆ ಸುಪೀರಿಯರ್ ಕ್ವಾಲಿಟಿ ಯ ಪ್ಯಾನ್ ಪಿಜ್ಜಾದ ರುಚಿ ಸವಿಯಲು ದೂರದ ಮಂಗಳೂರಿಗೋ ಇಲ್ಲ ಬೇರಾವುದೋ ಊರಿಗೆ ಹೋಗಬೇಕಾಗಿಲ್ಲ.ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿ ಇಟ್ಟುಕೊಂಡು , ಕೈಗೆಟುಕುವ ದರದಲ್ಲಿ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ಒದಗಿಸುವ ಉದ್ದೇಶದೊಂದಿಗೆ ಮೂಡುಬಿದಿರೆ ನಗರದ ಹೃದಯಭಾಗದಲ್ಲಿರುವ ಸಿಟಿ ಪಾಯಿಂಟ್ ಕಾಂಪ್ಲೆಕ್ಸ್(ಬದ್ರಿಯಾ ಜುಮ್ಮಾ ಮಸೀದಿ ಬಳಿ) ನಲ್ಲಿ ನೂತನ ಪಿಜ್ಜಾ ರೆಸ್ಟೋರೆಂಟ್ ‘ತೆನಸ್’ ಶುಭಾರಂಭಗೊಂಡಿದೆ.

ಸ್ವಚ್ಛತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಗ್ರಾಹಕರಿಗೆ 100% ಪ್ಯಾನ್ ಪಿಜ್ಜಾ ಒದಗಿಸುವುದು ಮತ್ತು ಪಿಜ್ಜಾ ಡೊ, ಸಾಸ್ ಇತ್ಯಾದಿಗಳನ್ನು ದಿನಂಪ್ರತಿ ತಾಜಾವಾಗಿ ರೆಸ್ಟೋರೆಂಟ್ ನ ಕಿಚನ್ ನಲ್ಲಿಯೇ ತಯಾರಿಸುವುದು ಇಲ್ಲಿನ ವಿಶೇಷ.
ರುಚಿರುಚಿಯಾದ ಪಿಜ್ಜಾದೊಂದಿಗೆ ಬರ್ಗರ್, ಪಾಸ್ತಾ, ಮೊಮೋಸ್, ಐಸ್ ಕ್ರೀಮ್ , ಜ್ಯೂಸ್ ಸೇರಿದಂತೆ ವಿವಿಧ ವೈರೈಟಿಯ ರುಚಿಕರ ಆಹಾರತಿನಿಸುಗಳು ರೆಸ್ಟೋರೆಂಟ್ ನಲ್ಲಿ ಲಭ್ಯವಿದೆ. ಗೆಳೆಯರ ಜೊತೆ ಇಲ್ಲ ಫ್ಯಾಮಿಲಿ ಜೊತೆ ಬಂದು ರೆಸ್ಟೋರೆಂಟ್ ನಲ್ಲೆ ಕುಳಿತು, ಹರಟೆಯೊಡೆಯುತ್ತ ‘ತೆನಸ್’ ನ ಫ್ರೆಶ್ ಅಂಡ್ ಹಾಟ್ ಫುಡ್ ಸವಿಯಬೇಕೆನ್ನುವರಿಗೆ ಆರಾಮದಾಯಕ ಆಸನದ ವ್ಯವಸ್ಥೆಇದೆ ಮಾತ್ರವಲ್ಲ ವಾಹನದ ಪಾರ್ಕಿಂಗ್ ವ್ಯವಸ್ಥೆ ಕೂಡ ಇದೆ.

ಉದ್ಘಾಟನಾ ಕೊಡುಗೆಯಾಗಿ ಆಹಾರ ತಿನಿಸುಗಳ ಬಿಲ್ ಮೇಲೆ ಅಕ್ಟೋಬರ್ 19 ರವರೆಗೆ ಶೇ.20ರ ನೇರ ರಿಯಾಯಿತಿ ಕೂಡ ಲಭ್ಯ ಎಂಬುದಾಗಿ ರೆಸ್ಟೋರೆಂಟ್ ಮಾಲಕರು ತಿಳಿಸಿದ್ದಾರೆ. ಇನ್ನು, ಮನೆಯಿಂದಲೇ ಆರ್ಡರ್ ಮಾಡುವಿರಾದರೆ 3 ಕಿ.ಮೀ ವ್ಯಾಪ್ತಿಯಲ್ಲಿ ಉಚಿತ ಹೋಂ ಡೆಲಿವಿರಿ ವ್ಯವಸ್ಥೆ ರೆಸ್ಟೋರೆಂಟ್ ಕಡೆಯಿಂದ ದೊರಕುತ್ತದೆ.

‘ತೆನಸ್’ ರುಚಿಕರ, ತಾಜಾ, ವೈರೈಟಿ ತಿನಿಸುಗಳು ಮಾತ್ರವಲ್ಲದೇ ತಮ್ಮ ರೆಸ್ಟೋರೆಂಟ್ ನ ಬೋರ್ಡ್, ಸ್ಟಿಕ್ಕರ್ಸ್, ವಿಸಿಟಿಂಗ್ ಕಾರ್ಡ್ ನಲ್ಲಿ ತುಳುಲಿಪಿ ಬಳಸುವ ಮೂಲಕ ಗಮನಸೆಳೆದಿದೆ.ಈ ಮೂಲಕ ನಾವು ತುಳುವಿನ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದೇವೆ ಎನ್ನುತ್ತಾರೆ ರೆಸ್ಟೋರೆಂಟ್ ಮಾಲಕರು.
Source: News Bhandara/ನ್ಯೂಸ್ ಭಂಡಾರ

ಕುಂಜೂರಿನಲ್ಲಿ ತುಳು ಬರೆಕ ಅಭಿಯಾನ, ತುಳು ಲಿಪಿ ಫಲಕ ಅಳವಡಿಕೆಗೆ ಚಾಲನೆ

Posted On: 30-09-2020 11:49AM

ಕಾಪು : ತುಳು ಭಾಷೆ - ಸಂಸ್ಕೃತಿಯ ಮೂಲ ಮೌಲ್ಯವನ್ನು ತಿಳಿಯುವ ಉದ್ದೇಶದಿಂದ 'ತುಳು ಲಿಪಿ‌' ಕಲಿಯಬೇಕು. ಜನರಿಗೆ ಕಲಿಸಬೇಕು, ತುಳುಲಿಪಿಯಲ್ಲಿ ಬರೆಯಲಾದ ಸಾಹಿತ್ಯವನ್ನು ಓದಬೇಕು ಎಂಬ ಉದ್ದೇಶಗಳಿಂದ ತುಳುವಾಸ್ ಕೌನ್ಸಿಲ್ ಆಯೋಜಿಸಿರುವ "ತುಳು ಬರೆಕ" ಅಭಿಯಾನಕ್ಕೆ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಚಾಲನೆ ನೀಡಲಾಯಿತು.

"ತುಳು ಬರೆಕ" ಅಭಿಯಾನದ ಅಂಗವಾಗಿ‌ ಕುಂಜೂರು ಶ್ರೀ ದುರ್ಗಾದೇವಸ್ಥಾನದ "ನಾಮ ಫಲಕ"ವನ್ನು ತುಳು ಲಿಪಿಯಲ್ಲಿ ಬರೆಯಿಸಿ‌ ಅಳವಡಿಸಲಾಯಿತು .

ಪವಿತ್ರಪಾಣಿ ಕೆ. ಎಲ್.‌ ಕುಂಡಂತಾಯ ಮಾತನಾಡಿ, ತುಳು ಬರೆಯುವ ಅಭಿಯಾನದ ಮೊದಲ ಹೆಜ್ಜೆಯಾಗಿ ಕುಂಜೂರಿನ ಯುವಕರು ಕುಂಜೂರು ದೇಗುಲದ ನಾಮಫಲಕವನ್ನು ತುಳುವಿನಲ್ಲೇ ಬರೆಯಿಸಿ ಮಾತೃ ಭಾಷೆಯನ್ನು ಗೌರವಿಸಿದ್ದಾರೆ. ತುಳುವಾಸ್ ಕೌನ್ಸಿಲ್ ಸಂಘಟನೆಯ ಪ್ರಯತ್ನ ಮಾದರಿಯಾಗಿದೆ ಎಂದರು.
ತುಳುವಾಸ್ ಕೌನ್ಸಿಲ್ ನಿರ್ದೇಶಕ ಅವಿನಾಶ್ ಶೆಟ್ಟಿ ಕುಂಜೂರು ಮಾತನಾಡಿ, ತುಳು ಬರೆಕ ಅಭಿಯಾನದ ಅಂಗವಾಗಿ‌ ಕುಂಜೂರು ಶ್ರೀ ದುರ್ಗಾ ದೇವಸ್ಥಾನದ "ನಾಮ ಫಲಕ"ವನ್ನು ತುಳು ಲಿಪಿಯಲ್ಲಿ ಬರೆಯಿಸಿ‌ ಅಳವಡಿಸಲಾಗಿದ್ದು, ಅಭಿಯಾನದ ಮೂಲಕ ಪ್ರತೀ ಮನೆ ಮನೆಗೂ ತುಳು ನಾಮ ಫಲಕ ಅಳವಡಿಸಲು ಯೋಚಿಸಲಾಗಿದೆ ಎಂದರು.

ಶ್ರೀ ದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ದೇವರಾಜ ರಾವ್ ನಡಿಮನೆ, ಆಡಳಿತ ಮಂಡಳಿ ಸದಸ್ಯ ಶ್ರೀವತ್ಸ ರಾವ್, ಅರ್ಚಕ ವೇ.ಮೂ. ಚಕ್ರಪಾಣಿ ಉಡುಪ, ಪ್ರಬಂಧಕ ರಾಘವೇಂದ್ರ ಶೆಟ್ಟಿ, ಶ್ರೀ ದುರ್ಗಾ ಮಿತ್ರವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ವಿಶ್ವನಾಥ ಉಡುಪ, ಸುಬ್ರಹ್ಮಣ್ಯ ಭಟ್, ಶ್ರೀಧರ ಮಂಜಿತ್ತಾಯ, ಅನಂತರಾಮ ರಾವ್, ರಘುಪತಿ ಉಡುಪ, ರಾಕೇಶ್ ಕುಂಜೂರು, ಪುಷ್ಪರಾಜ ಶೆಟ್ಟಿ, ಭಾರ್ಗವ ಕುಂಡಂತಾಯ, ಕೌಶಿಕ್ ಉಡುಪ ಮೊದಲಾದವರು ಉಪಸ್ಥಿತರಿದ್ದರು.

ಮಾನವೀಯತೆ ಮೆರೆದ ಸುರತ್ಕಲ್ ನ ವೆಂಕಟೇಶ್

Posted On: 30-09-2020 10:08AM

ಪಲಿಮಾರು ಗ್ರಾಮದ ಅವರಾಲುಮಟ್ಟು ನಿವಾಸಿ ಸುನೀತ ಇವರು ಮೂರು ಸಾವಿರದಷ್ಟು ಹಣ, ದಾಖಲೆಗಳಿರುವ ಪರ್ಸ್ ನ್ನು ಮೂರು ಕಾವೇರಿ ಬಳಿ ಕಳೆದುಕೊಂಡಿದ್ದರು. ಈ ಪಸ್೯ ಸುರತ್ಕಲ್ ನ ಪಡ್ರೆ ಪುಣೋಡಿ ಮನೆಯ ವೆಂಕಟೇಶ್ ಗೆ ಸಿಕ್ಕಿತ್ತು. ಅದರಲ್ಲಿದ್ದ ಮಾಹಿತಿಯ ಆಧಾರದ ಮೇಲೆ ಪರ್ಸನ್ನು ಸುನೀತಾರವರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಕಾಪು ಹಳೆಮಾರಿಗುಡಿಯಲ್ಲಿ ಲೋಕಕಲ್ಯಾಣಾರ್ಥಕ್ಕಾಗಿ ವಿಶೇಷ ಚಂಡಿಕಾಯಾಗ

Posted On: 29-09-2020 02:36PM

ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ,ಕಾಪು, ಅಧಿಕ ಆಶ್ವೀಜ ಪುರುಷೋತ್ತಮ ಮಾಸ ಅಂಗವಾಗಿ ಶ್ರೀ ದೇವಳದಲ್ಲಿ ಲೋಕಕಲ್ಯಾಣಾರ್ಥಕ್ಕಾಗಿ ವಿಶೇಷ ಚಂಡಿಕಾಯಾಗ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಇಂದು ಜರಗಿತು.

ಉಚ್ಚಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವರಿಗೆ ಅಪ್ಪ ಸೇವೆ

Posted On: 29-09-2020 01:35PM

ಉಚ್ಚಿಲ ಮಹಾಲಿಂಗೇಶ್ವರ, ಮಹಾಗಣಪತಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಅಪ್ಪ ಸೇವೆಯು ದಿನಾಂಕ 28.9.2020 ನೇ ಸೋಮವಾರ ನಡೆಯಿತು. ಒಟ್ಟು 1115 ಅಪ್ಪ ಸೇವೆಯು ಭಕ್ತರಿಂದ ಬಂದಿದ್ದು. (ಸುಮಾರು 13,000 ಅಪ್ಪ ತಯಾರಿಸಲಾಗಿತ್ತು)

ದೇವಸ್ಥಾನದ ಪ್ರಧಾನ ತಂತ್ರಿಗಳಾದ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ, ಅರ್ಚಕ ಯು. ಸೀತಾರಾಮ ಭಟ್, ಗೋವಿಂದ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ದ್ಯುಮಣಿ ಭಟ್, ಸಮಿತಿ ಸದಸ್ಯರು ಮತ್ತು ವ್ಯವಸ್ಥಾಪಕರು ಸಂತೋಷ ಪುತ್ರನ್ ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವರದಿ : ವಿಕ್ಕಿ ಪೂಜಾರಿ ಮಡುಂಬು (ನಮ್ಮ ಕಾಪು ನ್ಯೂಸ್)

ಬಂಟಕಲ್ಲು ಶರ್ಮರ ತೋಟದಲ್ಲಿ ಸಮಗ್ರ ಕೃಷಿ ಮಾಹಿತಿ ಮತ್ತು ಪ್ರಾತ್ಯಕ್ಷತೆ

Posted On: 29-09-2020 01:59AM

ವೈಜ್ಞಾನಿಕ ಕೃಷಿ ಪದ್ದತಿಯಿಂದ ಯಶಸ್ವಿ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಶರ್ಮ.
ಪ್ರಸ್ತುತ ದಿನಗಳಲ್ಲಿ ಕೃಷಿಕರು ವೈಜ್ಞಾನಿಕ ಕೃಷಿ ಪದ್ದತಿಯನ್ನು ಅಳವಡಿಸುವುದರಿಂದ ಕೃಷಿಯಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಶ್ರೀ ರಾಮಕೃಷ್ಣ ಶರ್ಮರವರು ತಿಳಿಸಿದರು. ಬಂಟಕಲ್ಲು ನಾಗರೀಕ ಸೇವಾ ಸಮಿತಿ(ರಿ) ಆಶ್ರಯದಲ್ಲಿ ಇಂದು ಬಂಟಕಲ್ಲು ಶರ್ಮರವರ ಕೃಷಿ ತೋಟದಲ್ಲಿ ನಡೆದ ಸಮಗ್ರ ಕೃಷಿ ಮಾಹಿತಿ ಮತ್ತು ಪ್ರಾತ್ಯಕ್ಷತೆ ಕಾರ್ಯಕ್ರಮದಲ್ಲಿ ಕೃಷಿ ಮಾಹಿತಿ ನೀಡಿ ಮಾತನಾಡುತಿದ್ದರು. ಮಲ್ಲಿಗೆ ಕೃಷಿ, ತೆಂಗು, ಕಂಗು ಕೃಷಿಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ನಾ.ಸೇ ಸಮಿತಿಯ ಅಧ್ಯಕ್ಷ ಶ್ರೀ ಕೆ.ಆರ್ ಪಾಟ್ಕರ್ ರವರು ಮಲ್ಲಿಗೆ ಕೃಷಿಕರಾದ ಶ್ರೀಮತಿ ಅನಿತಾ ಮೆಂಡೋನ್ಸಾರವರಿಗೆ ಮಲ್ಲಿಗೆ ಗಿಡವನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಾಗರಿಕ ಸೇವಾ ಸಮಿತಿಯ ಧೇಯ ಉದ್ದೇಶಗಳ ಬಗ್ಗೆ ತಿಳಿಸಿ ತುರ್ತು ಸಂಧರ್ಭದಲ್ಲಿ ಸಮಿತಿಯು ಅಂಬುಲೆನ್ಸ್ ಉಚಿತ ಸೇವೆಯ ಬಗ್ಗೆ ಮಾಹಿತಿ ನೀಡಿ ಕೃಷಿಕರ ಸಹಾಯಕ್ಕೆ ನಾಗರಿಕ ಸಮಿತಿಯು ಸದಾ ಸಿದ್ದವಿದೆ ಎಂದು ತಿಳಿಸಿದರು. ನಿವೃತ್ತ ಶಿಕ್ಷಕ ಬಂಟಕಲ್ಲು ಶ್ರೀ ರಮಾನಾಥ ಪಾಟ್ಕರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಅನೇಕ ಕೃಷಿಕ ಭಾಂಧವರು , ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉಡುಪಿಯ ಈಸೀ ಲೈಫ್ ನವರು ಅಡಿಕೆ ಮರ ಹತ್ತುವ ಟ್ರೀ ಬೈಕ್ ನ ಪ್ರಾತ್ಯಕ್ಷತೆ ನೀಡಿದರು. ಸಮಿತಿಯ ಉಪಾಧ್ಯಕ್ಷರಾದ ಶ್ರೀ ಪುಂಡಲೀಕ ಮರಾಠೆ, ಸಮಿತಿಯ ಸದಸ್ಯರು, ಬಂಟಕಲ್ಲು ದೇವಸ್ಥಾನದ ಆಡಳಿತ ಮಂಡಳಿಯ ಆಡಳಿತೆ ಮೊಕ್ತೇಸರರಾದ ಶ್ರೀ ಶಶಿಧರ ವಾಗ್ಲೆ, ಕೃಷಿಕರಾದ ಶ್ರೀ ಸುಂದರ ಪಾಟ್ಕರ್, ಶಿವರಾಮ ಕಾಮತ್ , ಆಲ್ಬರ್ಟ್ ಕಸ್ತಲೀನೊ,ಫೆಲಿಕ್ಸ್ ಡಯಾಸ್, ಆಲ್ಬರ್ಟ್ ಡಿ'ಸೋಜ , ರವೀಂದ್ರ ಕುಲಾಲ್ ಮುಂತಾದವರು ಭಾಗವಹಿಸಿದ್ದರು. ನಾ.ಸೇ ಸಮಿತಿಯ ಕಾರ್ಯದರ್ಶಿ ಶ್ರೀ ದಿನೇಶ್ ದೇವಾಡಿಗರವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ವರದಿ : ಕೆ. ಆರ್. ಪಾಟ್ಕರ್ ಬಂಟಕಲ್ಲು

ವಿಶ್ವ ಹೃದಯ ದಿನದಂದು ನಮ್ಮ ಹೃದಯಕ್ಕೆ ಹತ್ತಿರವಾಗಿರೋಣ

Posted On: 29-09-2020 01:46AM

ಪ್ರತಿವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಇದು ಹೃದಯ ಕಾಯಿಲೆ ಮತ್ತು ಸಂಬಂಧಿತ ಆರೋಗ್ಯ ಸಮಸ್ಯೆಗಳ ವ್ಯಾಪ್ತಿಯ ಬಗ್ಗೆ ಜನರ ಗಮನವನ್ನು ಸೆಳೆಯುವ ಗುರಿಯನ್ನು ಹೊಂದಿದೆ. ಹೃದಯಾಘಾತ, ಹೃದಯ ವೈಫಲ್ಯ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಹೃದಯ ಸಂಬಂಧಿ ಕಾಯಿಲೆಗಳನ್ನು ತಪ್ಪಿಸಲು, ವಿಭಿನ್ನ ತಡೆಗಟ್ಟುವ ಕ್ರಮಗಳು ಮತ್ತು ಜೀವನಶೈಲಿಯ ಬದಲಾವಣೆಗಳನ್ನು ಉತ್ತೇಜಿಸಲು ಈ ದಿನವನ್ನು ಸ್ಮರಿಸಲಾಗುತ್ತದೆ.
ಹಾರ್ಟ್ ಫಾರ್ ಲೈಫ್, ” ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತ ಹೃದಯ ಕಾಯಿಲೆಗಳು ಬರದಂತೆ ಸಂಗೀತ ಕಚೇರಿಗಳು, ಕ್ರೀಡಾಕೂಟಗಳಂತಹ ಚಟುವಟಿಕೆಗಳು. ಜಾಗೃತಿ ಘಟನೆಗಳು ಆರೋಗ್ಯ ತಪಾಸಣೆ. ನಡಿಗೆಗಳು, ಮತ್ತು ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ವಿಶ್ವದಲ್ಲಿ ಪ್ರತಿ ವರ್ಷ ಸರಾಸರಿ 17 ದಶಲಕ್ಷಕ್ಕೂ ಹೆಚ್ಚು ಜನರು ಹೃದಯ ಸಂಬಂಧಿತ ಕಾಯಿಲೆಗಳಿಂದ ಸಾಯುತ್ತಾರೆ. ಇದು ಎಚ್‌ಐವಿ, ಮಲೇರಿಯಾ ಮತ್ತು ಕ್ಯಾನ್ಸರ್ ನಿಂದ ಸಾಯುವ ಜನರಿಗಿಂತ ಹೆಚ್ಚಾಗಿರುವುದು ದುಃಖದ ವಿಷಯವಾಗಿದೆ.

ವಿಶ್ವ ಹೃದಯ ದಿನದ ಇತಿಹಾಸ
ಈ ಕಾಯ೯ಕ್ರಮವನ್ನು ವರ್ಲ್ಡ್ ಹಾರ್ಟ್ ಫೆಡರೇಶನ್ 2000 ರಲ್ಲಿ ವಾರ್ಷಿಕ ಕಾರ್ಯಕ್ರಮವಾಗಿ ಪ್ರಾರಂಭಿಸಿತು, ಇದನ್ನು ಸೆಪ್ಟೆಂಬರ್‌ನ ಪ್ರತಿ ಕೊನೆಯ ಭಾನುವಾರ ನಡೆಯಲು ಯೋಜಿಸಲಾಗಿತ್ತು. ಆದಾಗ್ಯೂ, ಸೆಪ್ಟೆಂಬರ್ 29 ರ ಪ್ರತಿ ದಿನವೂ ಅದನ್ನು ಸರಿಪಡಿಸಲು ಅವರು ನಿರ್ಧರಿಸಿದರು ಮತ್ತು ಅಂದಿನಿಂದಲೂ ಅದನ್ನು ಆಚರಿಸಲಾಗುತ್ತದೆ.ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಈ ದಿನವನ್ನು ಜಗತ್ತಿನ ಎಲ್ಲೆಡೆಯಿಂದ ಆಚರಿಸುತ್ತವೆ. ಮ್ಯಾರಥಾನ್‌ಗಳು, ನಡಿಗೆಗಳು, ಸಾರ್ವಜನಿಕ ಮಾತುಕತೆಗಳು, ಫಿಟ್‌ನೆಸ್ ಸೆಷನ್‌ಗಳು, ಪ್ರದರ್ಶನಗಳು ಮತ್ತು ವಿಜ್ಞಾನ ಮೇಳಗಳಂತಹ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಈ ಕಾಯ೯ಕ್ರಮವನ್ನು ಮಾಡುತ್ತಾರೆ. ಕೆಲವು ಹೆಗ್ಗುರುತುಗಳು, ಸ್ಮಾರಕಗಳು ಮತ್ತು ಪ್ರಸಿದ್ಧ ಕಟ್ಟಡಗಳು ಹೃದಯರಕ್ತನಾಳದ ಕಾಯಿಲೆಯ ಅರಿವಿನ ಪ್ರದರ್ಶನವಾಗಿ ಈ ದಿನ ಕೆಂಪು ಬಣ್ಣಕ್ಕೆ ಹೋಗಲು ಆಯ್ಕೆಮಾಡುತ್ತವೆ. ಈ ದಿನವನ್ನು ಆಚರಿಸಲು ಆಸಕ್ತಿ ಹೊಂದಿರುವ ಯಾವುದೇ ವ್ಯಕ್ತಿಯು ಅವರ ಹೃದಯದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಲು ಸೂಚಿಸಲಾಗುತ್ತದೆ. ದೈಹಿಕ ವ್ಯಾಯಾಮದಲ್ಲಿ ಪಾಲ್ಗೊಳ್ಳುವುದು, ಧೂಮಪಾನವನ್ನು ನಿಲ್ಲಿಸುವುದು, ಆಲ್ಕೊಹಾಲ್ ತ್ಯಜಿಸುವುದು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದನ್ನು ಪ್ರಾರಂಭಿಸುವುದು ಸೇರಿದಂತೆ ಹಲವಾರು ಮಾರ್ಗಗಳಿವೆ. ಅಲ್ಲದೆ, ನಿಮ್ಮ ಹೃದಯ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ಆಗಾಗ್ಗೆ ಪರೀಕ್ಷಿಸಿ.. ನಿಮ್ಮ ಹೃದಯವನ್ನು ಆರೋಗ್ಯವಾಗಿಡಿ ಮತ್ತು ಇತರರಿಗೂ ಅದೇ ರೀತಿ ಮಾಡಲು ಸಹಾಯ ಮಾಡಿ. ಜಗತ್ತಿನಾದ್ಯಂತ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತದಲ್ಲಿ ಸರಾಸರಿ 40 ರಿಂದ 45 ವಯಸ್ಸಿನವರೇ ಹೃದಯಾಘಾತದಿಂದ ಮರಣಹೊಂದುತ್ತಿರುವುದು ಯೋಚಿಸಬೇಕಾದ ವಿಚಾರವಾಗಿದೆ. ಮೊದಲು ಶ್ರೀಮಂತರು, ನಗರವಾಸಿಗಳು, ಪುರುಷರು ಹಾಗೂ ಧೂಮಪಾನ ವ್ಯಸನಿಗಳನ್ನಷ್ಟೇ ಕಾಡುತ್ತಿದ್ದ ಈ ಕಾಯಿಲೆ ಇಂದು ಬಡವ-ಶ್ರೀಮಂತ, ಲಿಂಗ ಭೇದವಿಲ್ಲದೆ ಎಳೆಯ ಮಕ್ಕಳು, ರೈತರು ಹಾಗೂ ಮಹಿಳೆಯರನ್ನೂ ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ, ಹೆಚ್ಚುತ್ತಿರುವ ನಗರೀಕರಣ, ಆಹಾರ ಪದ್ಧತಿಯಲ್ಲಿ ಬದಲಾವಣೆ, ಮಾಲಿನ್ಯ, ವ್ಯಾಯಾಮ ಚಟುವಟಿಕೆಗಳಿಲ್ಲದ ಜೀವನ ಶೈಲಿ ಹೃದ್ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಾಗಿದೆ.

ಏನಿದುಹೃದಯ ಸಂಬಂಧಿ ಕಾಯಿಲೆ?
ಮಾನವನ ದೇಹದಲ್ಲಿರುವ ಅತ್ಯಂತ ಮಹತ್ವದ ಅಂಗ ಈ ಹೃದಯ . ಅಂತಹ ಹೃದಯ ಭಾಗಕ್ಕೆ ರಕ್ತ ಪೂರೈಕೆಯಲ್ಲಿಅಡೆತಡೆ ಉಂಟಾದರೆ ಹೃದಯದ ಜೀವಕೋಶಗಳು ನಾಶಗೊಳ್ಳುತ್ತವೆ. ಇದರ ಪರಿಣಾಮವೇ ಹೃದಯಾಘಾತ ಮತ್ತು ಹೃದಯ ಸಂಬಂಧಿ ಕಾಯಿಲೆಗಳು. ಕೆಲವರಲ್ಲಿರೋಗದ ಲಕ್ಷಣಗಳು ಕಂಡು ಬಂದರೆ ಕೆಲವರಲ್ಲಿಮುನ್ಸೂಚನೆ ಇಲ್ಲದೇ ಹೃದಯಾಘಾತ ಸಂಭವಿಸುತ್ತದೆ.
ಸಾಮಾನ್ಯ ಹೃದಯಾಘಾತ ಚಿಹ್ನೆಗಳು ಮತ್ತು ಲಕ್ಷಣಗಳು:
ನಿಮ್ಮ ಎದೆ ಅಥವಾ ತೋಳುಗಳಲ್ಲಿ ಒತ್ತಡ, ಬಿಗಿತ, ನೋವು, ಅಥವಾ ನಿಮ್ಮ ಕುತ್ತಿಗೆ, ದವಡೆ ಅಥವಾ ಬೆನ್ನಿಗೆ ಹರಡುವಂತಹ ಸಂವೇದನೆ. ವಾಕರಿಕೆ, ಅಜೀರ್ಣ, ಎದೆಯುರಿ ಅಥವಾ ಹೊಟ್ಟೆ ನೋವು. ಉಸಿರಾಟದ ತೊಂದರೆ. ಶೀತ ಬೆವರು. ಆಯಾಸ. ಲಘು ತಲೆನೋವು ಅಥವಾ ಹಠಾತ್ ತಲೆತಿರುಗುವಿಕೆ. ಮುಖ್ಯವಾದವುಗಳು.

ಹೃದಯ ರೋಗಿಗಳಿಗೆ ಹಾಗೂ ಹೃದಯ ರೋಗ ತಡೆಗಟ್ಟುಲು ಪಾಲನೆ ಮಾಡಬೇಕಾದ ನಿಯಮಗಳು
1.ಹೆಚ್ಚು ಸಸ್ಯಾಹಾರ ಸೇವನೆ ಕೊಬ್ಬು ಹೆಚಿರುವ ಮಾಂಸಾಹಾರ ಸೇವನೆ ಬೇಡ
2.ಕಾಫಿ ಸಿಗರೇಟು ಮದ್ಯಪಾನದಂತ ದುಷ್ಚ್ತಾಗಳಿಂದ ದೂರ ಇರುವ ಪ್ರಯತ್ನ ಮಾಡಿ
3 ನಿಯಮಿತ ವ್ಯಾಯಾಮ,ಯೋಗ ಪ್ರಾಣಾಯಾಮ ಗಳಿಂದ ಮಾನಸಿಕ ಒತ್ತಡ ನಿಯಂತ್ರಣ
4 ಹೆಚ್ಚು ತರಕಾರಿ ತಾಜಾ ಹಣ್ಣು ಗಳ ಸೇವನೆ
5 ಆರೋಗ್ಯ ತಪಾಸಣೆ
ಈ ಮುಂತಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಮ್ಮ ಹೃದಯ ವನ್ನು ಕಾಪಾಡಬಹುದು .ಈ ದಿನವನ್ನು ಕೇವಲ ಆಚರಣೆ ಮಾಡದೆ ನಮ್ಮ ಹೃದಯವನ್ನು ತಿಳಿಯುವ ಪ್ರಯತ್ನ ಮಾಡೋಣ.
ಮಾಹಿತಿ : ಡಾII ವಿಜಯ್ ನೆಗಳೂರು
ಪ್ರಾಧ್ಯಾಪಕರು, ತಜ್ಞ ವೈದ್ಯರು ಎಸ್.ಡಿ.ಎಂ ಆಯುವೇ೯ದ ಕಾಲೇಜು ಉದ್ಯಾವರ
ಪ್ರಥಮ್ ಕ್ಲಿನಿಕ್ ಕೆಮ್ಮಣ್ಣು

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಲ್ಪೆ ವತಿಯಿಂದ ಆರ್ಥಿಕ ಸಹಕಾರ

Posted On: 28-09-2020 09:48AM

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಮಲ್ಪೆ ಇದರ ವತಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಶ್ರೀ ರಾಜೇಶ್ ಪೈ ಇವರಿಗೆ ಗಣೇಶೋತ್ಸವ ಸಮಿತಿಯ ಸದಸ್ಯರ ಸಹಕಾರದಿಂದ ನೀಡಲಾದ ಆರ್ಥಿಕ ಸಹಕಾರದ ಚೆಕ್ಕನ್ನು ಅವರ ಧರ್ಮಪತ್ನಿ ಶ್ರೀಮತಿ ಫ್ಲೋರಾ ಇವರಿಗೆ ಹಸ್ತಾಂತರಿಸಲಾಯಿತು. ಹಾಗೂ ಸಮಿತಿಯ ಮಾಜಿ ಕಾರ್ಯದರ್ಶಿ ಶ್ರೀ ನಾರಾಯಣ ಟಿ. ಕಿಣಿಯವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಶ್ರೀ ಕಾಂತಪ್ಪ ಕರ್ಕೇರ, ಶ್ರೀ ಶ್ಯಾಮ ಅಮೀನ್, ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಮೈಂದನ್, ಉಪಾಧ್ಯಕ್ಷರಾದ ಶ್ರೀ ಮಹೇಶ್ ಬಂಗೇರ, ಪ್ರಧಾನ ಕಾರ್ಯದರ್ಶಿ ಶಿವರಾಮ ಕಲ್ಮಾಡಿ, ಕೋಶಾಧಿಕಾರಿ ಶ್ರೀ ಸುರೇಶ್ ಕರ್ಕೇರ ಮತ್ತು ಸದಸ್ಯರಾದ ಶ್ರೀಮತಿ ಪುಷ್ಪಾ ಶಶಿಧರ್ ಉಪಸ್ಥಿತರಿದ್ದರು.

ಆಸರೆ ಹೆಲ್ಪಿoಗ್ ಹ್ಯಾoಡ್ಸ್ ಉಡುಪಿ ಗೋವಿಗಾಗಿ ಮೇವು ಅಭಿಯಾನ

Posted On: 27-09-2020 10:58PM

ಉಡುಪಿ : ಆಸರೆ ಹೆಲ್ಪಿoಗ್ ಹ್ಯಾoಡ್ಸ್ ಉಡುಪಿ ಇದರ ವತಿಯಿಂದ ಗೋವಿಗಾಗಿ ಮೇವು ಅಭಿಯಾನ ಸೆ.27ರಂದು ನೀಲಾವರ ಗೋ ಶಾಲೆಯಲ್ಲಿ ನಡೆಯಿತು. ಈ ಸಂದಭ೯ದಲ್ಲಿ ಆಶೀವ೯ಚನ ನೀಡಿದ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀಥ೯ ಶ್ರೀಪಾದರು, ಗೋವಿಗೆ, ಮೇವು ಕೊಡುವುದು ಪುಣ್ಯದ ಕಾಯ೯. ನಾವು ಬೆಳಿಗ್ಗೆ ಹಾಲು ಕುಡಿದಾಗ ಅದು ಯಾವ ದನದ ಹಾಲು ಎಂದು ತಿಳಿಯಲು ಅಸಾಧ್ಯ ಅದೇ ರೀತಿ ನಾವು ಹಿoದಿನ ಜನ್ಮದಲ್ಲಿ ಏನಾಗಿದ್ದೇವು ಗೊತ್ತಿಲ್ಲ ಹೀಗಾಗಿ ಪುಣ್ಯಕೋಟಿಗೆ ಆಹಾರ ನೀಡಿದರೆ ನಮ್ಮ ಜನ್ಮ ಸಾಥ೯ಕವಾಗಲು ಸಾಧ್ಯ ಎಂದರು.

ಅಭಿಯಾನದ ಪ್ರಮುಖರಾದ ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿ ಶುಭ ಹಾರೈಸಿದರು.ಸಂಸ್ಥೆಯ ಪ್ರಮುಖರಾದ ಡಾII ಕೀತಿ೯ ಪಾಲನ್, ಜಗದೀಶ್ , ಬೇಬಿ ಶೆಟ್ಟಿ ಮುಂತಾದವರಿದ್ದರು. ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು,ಕವಾ೯ಲು ವಂದಿಸಿದರು.