Updated News From Kaup

ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ 102ನೇ ದಿನದ ಪ್ರದಕ್ಷಿಣೆ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Posted On: 23-09-2024 11:35AM

ಕಟಪಾಡಿ : ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ 102ನೇ ದಿನದ ಪ್ರದಕ್ಷಿಣೆಗೆ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.

ಈ ಸಂದರ್ಭ ದೇವಸ್ಥಾನದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ , ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತು ಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಲಾಯಿತು.

ಈ ಸಂದರ್ಭ ಗೀತಾಂಜಲಿ ಎಮ್. ಸುವರ್ಣ, ಸತೀಶ್ ದೇವಾಡಿಗ, ಶಶಾಂಕ್, ಆರ್ಯನ್ ಹಾಗೂ ಅಭಿಮಾನಿ ಭಕ್ತರು ಉಪಸ್ಥಿತರಿದ್ದರು.

ಸೆ. 29 : ವಿಶ್ವ ಹಿಂದೂ ಪರಿಷದ್ ಷಷ್ಠಿಪೂರ್ತಿ ವರ್ಷ - ಕಾಪು ತಾಲೂಕು ವಿಶ್ವ ಹಿಂದೂ ಪರಿಷದ್ ವತಿಯಿಂದ ಪಡುಬಿದ್ರಿಯಲ್ಲಿ ಹಿಂದೂ ಸಮಾವೇಶ

Posted On: 23-09-2024 10:41AM

ಕಾಪು : ವಿಶ್ವ ಹಿಂದೂ ಪರಿಷದ್‌ನ ಷಷ್ಠಿಪೂರ್ತಿ ವರ್ಷದ ಪ್ರಯುಕ್ತ ವಿಶ್ವ ಹಿಂದೂ ಪರಿಷದ್ ಕಾಪು ತಾಲೂಕು ವತಿಯಿಂದ ಸೆಪ್ಟೆಂಬರ್ 29, ಭಾನುವಾರ ಸಂಜೆ 3 ಗಂಟೆಗೆ ಬಂಟರ ಭವನ ಪಡುಬಿದ್ರಿ ಇಲ್ಲಿ ಹಿಂದೂ ಸಮಾವೇಶ ಜರಗಲಿದೆ.

ಸಂಜೆ ಗಂಟೆ 3:30ರಿಂದ ಧಾರ್ಮಿಕ ಚಿಂತಕ ಶಶಿಧರ ಶೆಟ್ಟಿ ಎರ್ಮಾಳು ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ಜರಗಲಿದ್ದು ಶ್ರೀಮದ್‌ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠದ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ವಿಶ್ವ ಹಿ೦ದೂ ಪರಿಷದ್ ರಾಜ್ಯ ಕಾರ್ಯಕಾರಿಣಿ ಸದಸ್ಯ ರಘು ಸಕಲೇಶಪುರ ಇವರ ದಿಕ್ಸೂಚಿ ಭಾಷಣ ಮಾಡಲಿದ್ದು, ಅತಿಥಿಗಳಾಗಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ (ರಿ.) ಉಡುಪಿ ಜಿಲ್ಲಾ ಉಪಾಧ್ಯಕ್ಷ ಗೋಪಾಲ ಪೂಜಾರಿ ಶಿರ್ವ, ದೈವ ನರ್ತಕ ಸುಧಾಕರ ಪಾಣಾರ ಮೂಡುಬೆಳ್ಳೆ, ಕಾಪು ತಾಲೂಕು ಭಜನಾ ಮಂಡಳಿಗಳ ಒಕ್ಕೂಟದ ಉಪಾಧ್ಯಕ್ಷ ಅಪ್ಪಿಸಾಲ್ಯಾನ್, ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಭಾಗವಹಿಸಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷದ್ ಕಾಪು ತಾಲೂಕು (ಪ್ರಖಂಡ) ಅಧ್ಯಕ್ಷರಾದ ಜಯಪ್ರಕಾಶ್ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಡುಬಿದ್ರಿ : 60 ಕ್ಕೂ ಅಧಿಕ ನೂತನ ಸದಸ್ಯರ ಸೇರ್ಪಡೆಯೊಂದಿಗೆ ಮುಂಡಾಲ ಮಹಾಬಾಂಧವ್ಯ

Posted On: 22-09-2024 11:41PM

ಪಡುಬಿದ್ರಿ : ಮುಂಡಾಲ ಯುವ ವೇದಿಕೆ (ರಿ.) ಪಡುಬಿದ್ರಿ ಇದರ ವತಿಯಿಂದ ಭಾನುವಾರ ಪಡುಬಿದ್ರಿ ಸಾಯಿ ಆರ್ಕೇಡ್ ನಲ್ಲಿ ಮುಂಡಾಲ ಮಹಾ ಬಾಂಧವ್ಯ ಕಾರ್ಯಕ್ರಮ ನಡೆಯಿತು.

ಮುಂಡಾಲ ವೇದಿಕೆಗೆ ನೂತನವಾಗಿ ಸೇರ್ಪಡೆಗೊಂಡ ಸುಮಾರು 60 ಸದಸ್ಯರನ್ನು ಬರಮಾಡಿಕೊಳ್ಳುವ ವಿಶೇಷ ಕಾರ್ಯಕ್ರಮವನ್ನು ಮುಂಡ್ಕೂರು ಜಿ.ಕೆ ಲಕ್ಷ್ಮಣ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಂದಿನ ಡಿಸೆಂಬರ್ ನಲ್ಲಿ ಆಯೋಜಿಸಲಾಗಿರುವ "ತುಳುವೆರೆ ಗೊಬ್ಬುಲ್ನ ಬುಲೆಚ್ಚಿಲ್" ಕಾರ್ಯಕ್ರಮದ ಫಲಕವನ್ನು ಅನಾವರಣ ಮಾಡಲಾಯಿತು.

ಈ ಸಂದರ್ಭದಲ್ಲಿ ಭಾಸ್ಕರ್ ಪಡುಬಿದ್ರಿ, ಸುಧಾಕರ್.ಕೆ, ದಿನೇಶ್ ಪಲಿಮಾರ್, ಭಾಸ್ಕರ್ ಪಲಿಮಾರ್, ವೇದಿಕೆಯ ಅಧ್ಯಕ್ಷರಾದ ಶಿವಪ್ಪ ಸಾಲ್ಯಾನ್, ಮಂಜುನಾಥ ಎರ್ಮಾಳು, ಸವಿತಾ ಶಿವಪ್ಪ ಉಪಸ್ಥಿತರಿದ್ದರು.

ಸಂತೋಷ್ ನಂಬಿಯಾರ್ ಪ್ರಾಸ್ತಾವಿಕ ಮಾತನ್ನಾಡಿದರು. ಸುರೇಶ್ ಪಡುಬಿದ್ರಿ ಸ್ವಾಗತಿಸಿ, ನಿರ್ವಹಿಸಿದರು. ಪ್ರಸನ್ನ ಪಡುಬಿದ್ರಿ ವಂದಿಸಿದರು.

ಬೆಳಕು ಫ್ರೆಂಡ್ಸ್ ‌ತಿರ್ಲಪಲ್ಕೆ, ಸಮಾಜ ಸೇವಕ ನಟೇಶ್ ತಿರ್ಲಪಲ್ಕೆ ನೇತೃತ್ವದಲ್ಲಿ ವೇಷಧಾರಣೆ ; ರೂ. 1,81,322 ಸಂಗ್ರಹ ; 2 ಕುಟುಂಬಗಳಿಗೆ ಹಸ್ತಾಂತರ

Posted On: 22-09-2024 11:28PM

ಕಾಪು : ಬೆಳಕು ಫ್ರೆಂಡ್ಸ್ ‌ತಿರ್ಲಪಲ್ಕೆ ಹಾಗೂ ಸಮಾಜ ಸೇವಕರಾದ ನಟೇಶ್ ತಿರ್ಲಪಲ್ಕೆ ಇವರ ನೇತೃತ್ವದಲ್ಲಿ ಸಮಾಜ ಸೇವೆಯ ಉದ್ದೇಶದಿಂದ ಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶ ಚತುರ್ಥಿಯ ಸಮಯ ವಿಶೇಷ ವೇಷ ಧರಿಸಿ ರೂ. 1,81,322 ಸಂಗ್ರಹಿಸಿ ಎರಡು ಕುಟುಂಬಗಳಿಗೆ ಹಸ್ತಾಂತರಿಸಲಾಯಿತು.

ಮಟ್ಟಾರು ನಿವಾಸಿಗಳಾದ ಸುಮತಿ ಮತ್ತು ಪ್ರಕಾಶ್ ದಂಪತಿಗಳ ಮಕ್ಕಳಾದ ಪ್ರತಿಜ್ಞಾ (15) ಮತ್ತು ವೇದಾನಂದ (20) ಇವರು ವಿಕಲಚೇತನ ಮಕ್ಕಳಾಗಿದ್ದು ಇವರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಮತ್ತು ಮೂಡುಬೆಳ್ಳೆ ನಿವಾಸಿಯಾದ ಸುರೇಶ್‌ ಪೂಜಾರಿ ರಿಕ್ಷಾ ಚಾಲಕರಾಗಿದ್ದು ಭೀಕರ ರಿಕ್ಷಾ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು ಎರಡು ಕೈಕಾಲುಗಳಿಗೂ ಪೆಟ್ಟಾಗಿದ್ದೂ ಇವರು ಹಾಸಿಗೆ ಹಿಡಿಯುವ೦ತಾಗಿದೆ. ಸಂಗ್ರಹವಾದ ರೂ. 1,81,322 ರಲ್ಲಿ ಎರಡು ಕುಂಟುಬಗಳಿಗೆ ತಲಾ ₹90,661 ಗಳನ್ನು ಸರಿಸಮಾನವಾಗಿ ಹಸ್ತಾಂತರಿಸಲಾಯಿತು.

ನ.30 ಮತ್ತು ಡಿ.1 : ವೀರ ಮಾರುತಿ ಕ್ರಿಕೆಟರ್ಸ್ ಪಡುಬಿದ್ರಿ ಆಶ್ರಯದಲ್ಲಿ ಹನುಮ ಟ್ರೋಫಿ -2024

Posted On: 22-09-2024 10:01PM

ಪಡುಬಿದ್ರಿ : ವೀರ ಮಾರುತಿ ಕ್ರಿಕೆಟರ್ಸ್ ಪಡುಬಿದ್ರಿ ಇದರ ಆಶ್ರಯದಲ್ಲಿ ನವೆಂಬರ್ 30 ಹಾಗೂ ಡಿಸೆಂಬರ್ 01 ರಂದು ನಡೆಯುವ ಕಡಲ ತೀರದ ಮುಗ್ಗೆರ್ಕಳ ಸಮಾಜ ಬಾಂಧವರ "ಹನುಮ ಟ್ರೋಫಿ -2024" ಸಮಾಜ ಬಾಂಧವರ ಒಗ್ಗಟ್ಟಿಗಾಗಿ ಕ್ರಿಕೆಟ್ ಪಂದ್ಯಾಟ ಇದರ ಓನರ್, ಐಕಾನ್, ಕ್ಯಾಪ್ಟನ್ ಹಾಗೂ ಎಲ್ಲಾ ಆಟಗಾರರ ಸಭೆಯ ಉದ್ಘಾಟನೆ ಹಾಗೂ ಪೋಸ್ಟರ್ ಅನಾವರಣ ಭಾನುವಾರ ಜರಗಿತು.

ಈ ಸಂದರ್ಭ ಅಧ್ಯಕ್ಷರಾದ ಜೀವನ್ ಪ್ರಕಾಶ್, ಗೌರವ ಅಧ್ಯಕ್ಷ ವಿಠ್ಠಲ್ ಮಾಸ್ಟರ್, ಉಪಾಧ್ಯಕ್ಷ ದಿನೇಶ್ ಪಾತ್ರಿ, ತಂಡದ ಮಾಲಕರುಗಳಾದ ರಾಜ್ ಶೇಖರ್ ಮಟ್ಟು, ವಿಶ್ವನಾಥ್ ಮುಕ್ಕ, ಕೃಷ್ಣ ಮೂಳೂರು, ಶಶಿಕಾಂತ್ ಪಡುಬಿದ್ರಿ, ಶಶಿಕುಮಾರ್ ಮಟ್ಟು, ಸಂಜೀವ ಮಾಸ್ಟರ್ ಹೆಜಮಾಡಿ, ಎಲ್ಲಾ ತಂಡದ ಐಕಾನ್ ಮತ್ತು ಕ್ಯಾಪ್ಟನ್ ಹಾಗೂ ಆಟಗಾರರು ಉಪಸ್ಥಿತರಿದ್ದರು.

ಚೇತನ್ ಪಡುಬಿದ್ರಿ, ಸುಕೇಶ್ ಹೆಜಮಾಡಿ, ನಿತಿನ್ ಹೆಜಮಾಡಿ, ಧನಂಜಯ ಮಟ್ಟು ಪಂದ್ಯಾಟದ ಬಗ್ಗೆ ವಿವರಿಸಿ, ನಿರೂಪಿಸಿದರು.

ಕಾಪು : ಪ್ರವಾದಿ ಮುಹಮ್ಮದ್ (ಸ) ಲೇಖನ ಸಂಕಲನ ಬಿಡುಗಡೆ, ವಿಚಾರ ಮಂಡನೆ

Posted On: 22-09-2024 03:15PM

ಕಾಪು : ಯಾವ ವ್ಯಕ್ತಿ ಚಾರಿತ್ರ್ಯವಂತನಾಗಿರುತ್ತನೋ, ಅವರ ವ್ಯಕ್ತಿತ್ವ ಉನ್ನತ ಮಟ್ಟದಲ್ಲಿ ಇರುತ್ತದೆ. ಇದಕ್ಕೆ ಉದಾಹರಣೆ 1500 ವರ್ಷಗಳ ಹಿಂದೆ ಅರೇಬಿಯಾದಲ್ಲಿ, ಪ್ರವಾದಿಯಾಗಿ ಮುಹಮ್ಮದ್ ರವರು ನಿಯುಕ್ತಿಗೊಂಡು ಬಾಳಿ, ಬದುಕಿ, ಜನರನ್ನು ಅಂಧಕಾರದಿಂದ ಬೆಳಕಿಗೆ ತಂದು ಸಮಾಜದ ಜನರ ಬದುಕನ್ನು ಬದಲಾಯಿಸಿದ ಕೀರ್ತಿ ಮತ್ತು ಹೆಸರು ಇಂದಿನ ತನಕವೂ ಅಜರಾಮರವಾಗಿದೆ. ಆ ನಿಟ್ಟಿನಲ್ಲಿ ಅಜಾನ್ ಆದಾಗ ಹೆಗಲಿಗೆ ಹೆಗಲು ಕೊಟ್ಟು ಒಂದುಗೂಡಿಸಲು ಕಲಿಸಿದ ಧರ್ಮ ಪ್ರಜಾಪ್ರಭುತ್ವದ ಧರ್ಮ ಆಗಿದೆ. ಅದೇ ಇಸ್ಲಾಮ್ ಧರ್ಮ ಎಂದು ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಹೇಳಿದರು. ಅವರು ಜಮಾ ಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ವತಿಯಿಂದ ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಸೀರತ್ ಅಭಿಯಾನದ ಅಂಗವಾಗಿ ಕಾಪು ಹೋಟೆಲ್ ಕೆ. ಒನ್ ಸಭಾಂಗಣದಲ್ಲಿ, ಪ್ರವಾದಿ ಮುಹಮ್ಮದ್ ಸ. ಲೇಖನ ಸಂಕಲನ ಪುಸ್ತಕ ಬಿಡುಗಡೆಯ ವಿಚಾರ ಮಂಡನೆಯ ಸಭೆಯಲ್ಲಿ ಹೇಳಿದರು.

ಮಣಿಪಾಲ ಎಮ್. ಐ. ಟಿಯ ಅಸೋಸಿಯೇಟ್ ಪ್ರೊಫೆಸರ್ ಡಾ | ಜಮಾಲುದ್ದಿನ್ ಹಿಂದಿರವರು ಮಾತನಾಡಿ, ಈ ಹಿಂದೆ ಜನರ ಕಲ್ಯಾಣಕ್ಕಾಗಿ ಆಗಮನಿಸಿದ ಮಹಾ ಪುರುಷರ ಸಂದೇಶಗಳನ್ನು ಪಾಲಿಸುವುದು ಬಿಟ್ಟು ಅವರನ್ನು ಆರಾಧಿಸತೊಡಗಿದರು. ಇದರ ಅಂಗವಾಗಿ ವರ್ಷಕೊಮ್ಮೆ ಅವರ ಜಯಂತಿ ಮಾಡಿ ಪುಣ್ಯ ಸಂಪಾದಿಸಿದೆವು ಎಂದು ತಿಳಿದುಕೊಂಡ ಕಾರಣ , ಸಮಾಜದಲ್ಲಿ ಯಾವುದೇ ನೈತಿಕತೆ, ನ್ಯಾಯ, ಆದರ್ಶ,ನಿಬಂಧನೆ ಉಳಿದಿಲ್ಲ. ಆ ಕಾರಣ ಇಂದಿನ ಪೀಳಿಗೆಗೆ ಯಾರೂ ರೋಲ್ ಮಾಡೆಲ್ ಗಳು ಸಿಗದೆ ತಮ್ಮ ಬದುಕನ್ನು ಕತ್ತಲೆಯೆಡೆಗೆ ಕೊಂಡೊಯ್ಯುತಿದ್ದಾರೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಪ್ರವಾದಿ ಮುಹಮ್ಮದ್ ಸ. ಅ. ಸ. ರವರ ಜೀವನ ಮತ್ತು ಸಂದೇಶದ ಪರಿಚಯ ಆಗ ಬೇಕಾಗಿದೆ. ಈ ಕೆಲಸವನ್ನು ಜಮಾ ಅತೆ ಇಸ್ಲಾಮೀ ಹಿಂದ್ ಭಾರತಾದ್ಯಾದಂತ ಮಾಡುತ್ತಾ ಬರುತ್ತಿದೆ ಎಂದರು.

ಜಮೀಯತುಲ್ ಫಲಾಹ್ ಕಾಪು ಘಟಕದ ಅಧ್ಯಕ್ಷರಾದ ಶಬೀಹ್ ಅಹಮದ್ ಕಾಝೀ ಯವರು, ಪ್ರವಾದಿ ಮುಹಮ್ಮದ್ (ಸ ) ರ ಲೇಖನ ಸಂಕಲನ ಬಿಡುಗಡೆಗೊಳಿಸಿದರು.

ಜಮಾ ಅತೆ ಇಸ್ಲಾಮೀ ಹಿಂದ್ ಉಡುಪಿ ಜಿಲ್ಲಾ ಸಂಚಾಲಕರು ಆದ ಡಾ | ಅಬ್ದುಲ್ ಅಜಿಜ್ ರವರು ಮಾತನಾಡಿದರು. ಮುಹಮ್ಮದ್ ರಾಯಿಫ್ ರವರ ಕುರ್ ಆನ್ ಪಠಿಸಿ ಅನುವಾದ ಓದಿದರು. ಬ್ರದರ್ ಮುಹಮ್ಮದ್ ಮುಯೀಸ್ ರವರು ಸ್ವಾಗತಿಸಿದರು. ಜ. ಇ. ಹಿಂದ್ ಕಾಪು ವರ್ತುಲದ ಅಧ್ಯಕ್ಷರು ಅನ್ವರ್ ಅಲಿ ಕಾಪು ಪ್ರಸ್ತಾವನೆಗೈದರು. ಜ. ಇ. ಹಿಂದ್ ಕಾಪು ವರ್ತುಲದ ಕಾರ್ಯದರ್ಶಿ, ಮುಹಮ್ಮದ್ ಇಕ್ಬಾಲ್ ಸಾಹೇಬ್ ವಂದಿಸಿದರು. ಬ್ರದರ್ ಅಬ್ದುಲ್ ಖಾಲಿದ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ, ಬಿಡುಗಡೆಗೊಂಡ ಪುಸ್ತಕವನ್ನು ಉಚಿತವಾಗಿ ನೀಡಲಾಯಿತು.

ಪೆರ್ಡೂರು ಬುಕ್ಕಿಗುಡ್ಡೆ ಕುಲಾಲ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

Posted On: 22-09-2024 01:02PM

ಉಡುಪಿ : ಪೆರ್ಡೂರು ಬುಕ್ಕಿಗುಡ್ಡೆ ಕುಲಾಲ ಸಂಘ (ರಿ.) ಇದರ ನೂತನ ಅಧ್ಯಕ್ಷರಾಗಿ ಕಾಳು ಕುಲಾಲ್ ಪೆರ್ಡೂರು ಹಾಗೂ ಪ್ರಧಾನ ಕಾರ್ಯದರ್ಶಿ ಗಣೇಶ್ ಕುಲಾಲ್ ಪಕ್ಕಾಲು ಅವರು ಆಯ್ಕೆಯಾಗಿದ್ದಾರೆ. ಪೆರ್ಡೂರು ಬುಕ್ಕಿಗುಡ್ಡೆ ಕುಲಾಲ ಸಂಘದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.

ಗೌರವಾಧ್ಯಕ್ಷರಾಗಿ ರಾಮ ಕುಲಾಲ್ ಪಕ್ಕಾಲು, ಐತು ಕುಲಾಲ್ ಕನ್ಯಾನ, ಗೌರವ ಸಲಹೆಗಾರರಾಗಿ ಕೃಷ್ಣಪ್ಪ ಕುಲಾಲ್ ಹಿರಿಯಡ್ಕ ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಯೋಗೀಶ್ ಕುಲಾಲ್ ಬೋಳುಗುಡ್ಡೆ, ಜೊತೆ ಕಾರ್ಯದರ್ಶಿಯಾಗಿ ಅಶೋಕ್ ಕುಲಾಲ್ ವಾಂಟ್ಯಾಳ, ಕೋಶಾಧಿಕಾರಿಯಾಗಿ ಹರೀಶ್ ಕುಲಾಲ್ ಹಂದಿಬೆಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ಕೃಷ್ಣ ಕುಲಾಲ್ ಕುಂಟಾಲ್ ಕಟ್ಟೆ, ಜೊತೆ ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ಕುಲಾಲ್ ಕುಕ್ಕೆಹಳ್ಳಿ ಅವರು ಆಯ್ಕೆಯಾಗಿದ್ದಾರೆ.

ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಂಕರ್ ಕುಲಾಲ್ ಪೆರಂಪಳ್ಳಿ, ರಾಜೇಶ್ ಕುಲಾಲ್ ಅಂಬಾಗಿಲು, ಸುಧಾಕರ್ ಕುಲಾಲ್ ಪಟ್ಲ, ಅಶೋಕ್ ಕುಲಾಲ್ ಕಂಚಿಗುಂಡಿ, ದಿನೇಶ್ ಕುಲಾಲ್ ಪೊಲ್ಯದೊಟ್ಟು, ದಿನೇಶ್ ಕುಲಾಲ್ ಪಟ್ಲ ಅವರನ್ನು ನೇಮಿಸಲಾಗಿದೆ.

ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದಿನೇಶ್ ಕುಲಾಲ್ ಪಟ್ಲ, ಕ್ರೀಡಾ ಕಾರ್ಯದರ್ಶಿಯಾಗಿ ಸಂತೋಷ್ ಕುಲಾಲ್ ಪಕ್ಕಾಲು, ಮಾಧ್ಯಮ ಕಾರ್ಯದರ್ಶಿಯಾಗಿ ಮಹಿಳಾ ಘಟಕದ ಅಧ್ಯಕ್ಷೆ ರತ್ನ ಕುಲಾಲ್ ಕುಕ್ಕೆಹಳ್ಳಿ, ಸಭಾಭವನದ ವ್ಯವಸ್ಥಾಪಕರಾಗಿ ಸುರೇಶ್ ಕುಲಾಲ್ ಗುಂಡ್ಯಡ್ಕ, ಆಂತರಿಕ ಲೆಕ್ಕ ಮೇಲ್ವಿಚಾರಕರಾಗಿ ಲಿಂಗಪ್ಪ ಕುಲಾಲ್ ಕುಕ್ಕಿಕಟ್ಟೆ ಆಯ್ಕೆಯಾಗಿದ್ದಾರೆ.

ಅ. 5 ಮತ್ತು 6 : ಅಯೋಧ್ಯ ಟೈಗಸ್೯ ಇದರ ಪ್ರಥಮ ವರ್ಷದ ಪಿಲಿ ಪಜ್ಜೆ ; ಊದು ಕಾರ್ಯಕ್ರಮ, ಲೋಬನ ಸೇವೆ

Posted On: 20-09-2024 06:57PM

ಕಾಪು : ಅಯೋಧ್ಯ ಟೈಗಸ್೯ ಇದರ ಅಬ್ಬರದ ಪ್ರಥಮ ವರ್ಷದ ಪಿಲಿ ಪಜ್ಜೆಯ ಊದು ಕಾರ್ಯಕ್ರಮ ಅಕ್ಟೋಬರ್ 5, ಸಂಜೆ ಗಂಟೆ 6:30 ಕ್ಕೆ ಮತ್ತು ಅಕ್ಟೋಬರ್ 6, ಸಂಜೆ 8 ಗಂಟೆಗೆ ಲೋಬನ ಸೇವೆಯು ಕಾಪುವಿನ ಪೊಲಿಪು ಶ್ರೀ ಲಕ್ಷ್ಮೀನಾರಾಯಣ ಸಭಾ ಮಂಟಪದಲ್ಲಿ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಜಿ ಕೆ. ಉಮ್ಮರಬ್ಬ ಚಂದ್ರನಗರ ಇವರಿಗೆ ನುಡಿ ನಮನ

Posted On: 19-09-2024 10:36PM

ಕಾಪು : ಚಂದ್ರನಗರ ಕಳತ್ತೂರಿನಲ್ಲಿ ಸುಮಾರು 35 ವರ್ಷಗಳಿಂದ ಜನರಲ್ ಸ್ಟೋರ್ ನಡೆಸುತ್ತಿದ್ದ ಸರಳ ಸಜ್ಜನ ವ್ಯಕ್ತಿ ಸಾಮಾಜಿಕ ಧಾರ್ಮಿಕ ಮುಖಂಡ ಬಟರ್ ಫ್ಲೈ ಗೆಸ್ಟ್ ಹೌಸ್ ನ ನಿರ್ದೇಶಕ ಹಾಜಿ ಕೆ. ಉಮ್ಮರಬ್ಬ ಇತ್ತೀಚಿಗೆ ನಿಧನರಾಗಿದ್ದು, ಆವರ ನುಡಿ ನಮನ ಕಾರ್ಯಕ್ರಮವು ಕಳತ್ತೂರು ಚಂದ್ರನಗರದ ಲೋಕೇಶ್ ಭಟ್ ಹಾಗೂ ದಿನೇಶ್ ಆಚಾರ್ಯ ಐಶ್ವರ್ಯ ಇವರ ನೇತೃತ್ವದಲ್ಲಿ ನುಡಿನಮನ ಕಾರ್ಯಕ್ರಮವು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಇವರ ಅಧ್ಯಕ್ಷತೆಯಲ್ಲಿ ಕುಶಲ ಶೇಖರ್ ಶೆಟ್ಟಿ ಇಂಟರ್ ನ್ಯಾಷನಲ್ ಅಡಿಟೋರಿಯಮ್ ನಲ್ಲಿ ನಡೆಯಿತು.

ವಿನಯ ಕುಮಾರ್ ಸೊರಕೆ ಮಾತನಾಡಿ ಹಾಜಿ ಉಮ್ಮರಬ್ಬನವರ ಜೀವನ ಪ್ರತಿಯೊಬ್ಬರನ್ನು ಆತ್ಮೀಯತೆಯಿಂದ ಕಂಡು ಸಮಾಜದಲ್ಲಿ ಶಾಂತಿ ನೆಮ್ಮದಿಗೆ ಅವರು ಇನ್ನೊಂದು ಹೆಸರು ತಪ್ಪಾಗಲಾರದು. ಅವರ ಸಮಾಜ ಸೇವೆಯನ್ನು ಗುರುತಿಸಿ ಗುಣಗಾನ ಮಾಡಿದರು. ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ನಾವು ಒಂದೇ ಊರಿನವರಾಗಿ ಬಾಲ್ಯದ ಒಡನಾಟದ ಬಗ್ಗೆ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ. ಗಣೇಶ್ ಗಂಗೊಳ್ಳಿ, ಬದ್ರಿಯಾ ಜುಮ್ಮಾ ಮಸೀದಿ ಮಜೂರು ಮಲ್ಲಾರು ಧರ್ಮ ಗುರುಗಳಾದ ಅಬ್ದುಲ್ ರಶೀದ್ ಸಖಾಪಿ, ಕೊಟ್ಟಾರಿ ಕಟ್ಟೆ ಅಶ್ವಥ ಕಟ್ಟೆ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್ ಕಳತ್ತೂರು, ಜನ ಸೇವಾ ಜನ ಸಂಪರ್ಕ ವೇದಿಕೆ ಕಾಪು ಅಧ್ಯಕ್ಷರಾದ ದಿವಾಕರ್ ಬಿ ಶೆಟ್ಟಿ, ಜೀವ ವಿಮಾ ಪ್ರತಿನಿಧಿ ದಿವಾಕರ್ ಡಿ ಶೆಟ್ಟಿ, ಬಳಕೆದಾರರ ವೇದಿಕೆ ಗೌರವ ಅಧ್ಯಕ್ಷರಾದ ಹಾಜಿ ಕೆ.ಅಬೂಬಕ್ಕರ್ ಪರ್ಕಳ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷರಾದ ಶರ್ಪುದ್ದಿನ್ ಶೇಖ್, ಅಯ್ಯಣ್ಣ ಹಿರಿಯ ಪ್ರಾರ್ಥಮಿಕ ಶಾಲೆ ಸಂಚಾಲಕರಾದ ಪ್ರವೀಣ್ ಕುಮಾರ್ ಗುರ್ಮೆ, ಕುತ್ಯಾರು ಗ್ರಾಮ ಪಂಚಾಯತ್ ಸದಸ್ಯ ಸ್ಲಾನಿ ಲೆಸ್ ಕೊರ್ದಾ, ಅನಿವಾಸಿ ಭಾರತಿಯ ಉದ್ಯಮಿ ರಜಬ್ ಪರ್ಕಳ, ಉಮಾತ್ಮ ಇದಿನಬ್ಬ ಫ್ಯಾಮಿಲಿ ಮಜೂರು ನಿರ್ದೇಶಕರಾದ ಬಾವು ಚಂದ್ರನಗರ, ಹಾಜಿ ಉಮ್ಮರಬ್ಬನವರ ಪುತ್ರ ಸಮಾಜ ಸೇವಕ ಡಾ. ಮೊಹಮ್ಮದ್ ಫಾರೂಕ್ ಚಂದ್ರನಗರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಭಿನಂದನಾ ಸಮಿತಿ ಸದಸ್ಯರಾದ ರಾಜೇಶ್ ಮೂಲ್ಯ, ಕೃಷ್ಣ ಕುಲಾಲ್ ಕುತ್ಯಾರು, ಜಾನ್ಸನ್ ಕರ್ಕಡ, ಶಶಿಕಾಂತ್ ಆಚಾರ್ಯ,ಅಲ್ವಿನ್ ಕುತ್ಯಾರು, ಗ್ಲಾಡಿಸ್ ಅಲ್ಮೆಡ ಕಳತ್ತೂರು ಸಭೆಯ್ಲಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕರಾದ ನಿರ್ಮಲ್ ಕುಮಾರ್ ಹೆಗ್ಡೆ ನಿರೂಪಿಸಿದರು.

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಶಿಕ್ಷಕರ ದಿನಾಚರಣೆ

Posted On: 19-09-2024 09:46PM

ಕಟಪಾಡಿ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ಉದ್ಯಾವರದ ಸರಕಾರಿ ಪ್ರೌಢಶಾಲೆ, ಪ್ರಾಥಮಿಕ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ನಡೆಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗ್ರಾಮ ಪಂಚಾಯತ್ ಹಿರಿಯ ಸದಸ್ಯ ಲಾರೆನ್ಸ್ ಡೇಸ ಮಾತನಾಡಿ, ಶಿಕ್ಷಕರ ದಿನಾಚರಣೆಯ ಮೂಲಕ ಶಿಕ್ಷಕರನ್ನು ಅಭಿನಂದಿಸುವುದು ಅತ್ಯಂತ ಶ್ರೇಷ್ಠ ಕೆಲಸ. ವಿದ್ಯಾರ್ಥಿ ಜೀವನದಲ್ಲಿ ಮಕ್ಕಳನ್ನು ತಿದ್ದಿ ಬೆಳೆಸಿದ ಗುರುಗಳು ಪ್ರತಿಯೊಬ್ಬ ವಿದ್ಯಾರ್ಥಿಗೆ ಒಂದು ದಾರಿದೀಪ. ಸಮಾಜದಲ್ಲಿ ಶ್ರೇಷ್ಠ ನಾಗರಿಕನಾಗಿ ಬೆಳೆಯಲು ಶಿಕ್ಷಕರ ಪಾತ್ರ ಮಹತ್ವದ್ದು. ಸರಕಾರಿ ಶಾಲೆಗಳಲ್ಲಿ ಹಲವು ಸವಾಲುಗಳಿದ್ದರೂ, ಶಿಕ್ಷಕರು ಆ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ವಿದ್ಯಾರ್ಥಿಗಳಲ್ಲಿ ಶ್ರೇಷ್ಠ ಫಲಿತಾಂಶ ಬರಲು ಪ್ರಯತ್ನ ಮಾಡುತ್ತಿರುವುದು ಮೆಚ್ಚುವಂಥದ್ದು ಎಂದರು.

ಸರಕಾರಿ ಪ್ರಾಥಮಿಕ, ಪ್ರೌಢಶಾಲೆ ಸಹಿತ ಪದವಿಪೂರ್ವ ಕಾಲೇಜಿನ ಉಪನ್ಯಾಸಕರನ್ನು ಒಟ್ಟು 29 ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಅಭಿನಂದಿಸಿ, ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಶಾಲಾಡಳಿತ ಮಂಡಳಿಯ ಪ್ರಮುಖರಾದ ಹರಿಶ್ಚಂದ್ರ, ಸಂತೋಷ ಸುವರ್ಣ ಬೊಳ್ಜೆ, ವಿಜಯ್ ಕುಮಾರ್ ಉದ್ಯಾವರ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಗುರುಪ್ರಸಾದ್, ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಮುಖಾಂಬೆ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಕೋಶಾಧಿಕಾರಿ ಲ. ಅನಿಲ್ ಮಿನೇಜಸ್, ಕಾರ್ಯಕ್ರಮದ ನಿರ್ದೇಶಕರಾದ ಲ. ವಿವಿಯನ್ ಪಿರೇರಾ, ಲ. ಜೋನ್ ಗೋಮ್ಸ್ ಉಪಸ್ಥಿತರಿದ್ದರು. ಅಧ್ಯಕ್ಷ ಲ. ರೊನಾಲ್ಡ್ ರೆಬೆಲ್ಲೊ ಸ್ವಾಗತಿಸಿದರು. ಕಾರ್ಯದರ್ಶಿ ಲ. ಜೆರಾಲ್ಡ್ ಪಿರೇರಾ ವಂದಿಸಿದರು. ಲ. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.