Updated News From Kaup

ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ಮುದರಂಗಡಿ : ಋಗುಪಾಕರ್ಮ ಯಜ್ಞೋಪವೀತ ಧಾರಣೆ

Thumbnail
Posted On: 20 Aug 2024, 10:28 AM

ಮುದರಂಗಡಿ : ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ಮುದರಂಗಡಿ ಇದರ ಆಶ್ರಯದಲ್ಲಿ ಸೋಮವಾರ ಜರುಗಿದ ಶ್ರಾವಣ ಪೌರ್ಣಮಿ ಋಗುಪಾಕರ್ಮ ಯಜ್ಞೋಪವೀತ ಧಾರಣೆ ಧಾರ್ಮಿಕ ಅನುಷ್ಠಾನಗಳನ್ನು ಶ್ರೀಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಳದ ವೈದಿಕರಾದ ವೇ.ಮೂ.ಶ್ರೀಕಾಂತ್ ಭಟ್ ನೆರವೇರಿಸಿದರು. ಸಂಘದ ಅಧ್ಯಕ್ಷ ವೈ.ಉಪೇಂದ್ರ ಪ್ರಭು, ಕಾರ್ಯದರ್ಶಿ ದೇವದಾಸ್ ಪಾಟ್ಕರ್, ಕೋಶಾಧಿಕಾರಿ ಕೇಶವ ನಾಯಕ್, ಸದಸ್ಯರು ಹಾಗೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ಮುಂಡಾಲ ಯುವ ವೇದಿಕೆ ಮತ್ತು ಮಹಾದೇಶ್ವರ ಭಜನಾ ಮಂಡಳಿಯಿಂದ ರಕ್ಷಾಬಂಧನ ಕಾರ್ಯಕ್ರಮ

Thumbnail
Posted On: 19 Aug 2024, 11:55 PM

ಪಡುಬಿದ್ರಿ : ಮುಂಡಾಲ ಯುವ ವೇದಿಕೆ (ರಿ.) ಪಡುಬಿದ್ರಿ ಮತ್ತು ಪಲಿಮಾರಿನ ಶ್ರೀ ಮಹಾದೇಶ್ವರ ಭಜನಾ ಮಂಡಳಿಯ ಸಹಯೋಗದಲ್ಲಿ ಸೋಮವಾರ ಶ್ರಾವಣ ಮಾಸದ ಹುಣ್ಣಿಮೆಯ ರಕ್ಷಾಬಂಧನ ಕಾರ್ಯಕ್ರಮ ದೀಪ ಪ್ರಜ್ವಲಿಸಿ ಭಜನಾ ಸಂಕೀರ್ತನೆಯೊಂದಿಗೆ ಆರಂಭದೊಂದಿಗೆ ಪರಸ್ಪರ ರಕ್ಷಾಬಂಧನ ಕಟ್ಟಿ ಆಶೀರ್ವಾದಿಸಲಾಯಿತು. ಮಹಾದೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಸುಧಾಕರ ಕೆ. ಕಾರ್ಯಕ್ರಮಕ್ಕೆ ಶುಭಹಾರೈಸಿದರು. ರಕ್ಷಾಬಂಧನದ ಮಹತ್ವ ಮತ್ತು ಮುಂಡಾಲ ವೇದಿಕೆಯ ಹಿನ್ನಲೆ ಹಾಗೂ ಭವಿಷ್ಯದ ಸಂಘಟನೆಯ ಬಗ್ಗೆ ಸಂತೋಷ್ ನಂಬಿಯಾರ್ ಸವಿಸ್ತಾರವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಪ್ಪ ಸಾಲ್ಯಾನ್ ವಹಿಸಿದ್ದರು. ಈ ಸಂಧರ್ಭದಲ್ಲಿ ಮಹಿಳಾ ಮಂಡಳಿಯ ಪುಷ್ಪ, ಸವಿತಾ, ಪ್ರಮುಖರಾದ ಭಾಸ್ಕರ್ ಪಲಿಮಾರು, ಶ್ರೀಧರ್ ಪಲಿಮಾರು, ಮಂಜುನಾಥ ಎರ್ಮಾಳು ಮೊದಲಾದವರು ಉಪಸ್ಥಿತರಿದ್ದರು. ಪ್ರಸನ್ನ ಪಡುಬಿದ್ರಿ ಪ್ರಾಸ್ತಾವನೆಗೈದರು. ಕಾರ್ಯದರ್ಶಿ ಸುರೇಶ್ ಪಡುಬಿದ್ರಿ ನಿರೂಪಿಸಿದರು.

ಹೆಜಮಾಡಿ : ಅಮಾಸೆ ಕರಿಯದಲ್ಲಿ ಸಮುದ್ರ ಪೂಜೆ

Thumbnail
Posted On: 19 Aug 2024, 09:22 PM

ಹೆಜಮಾಡಿ : ಏಳೂರು ಮೊಗವೀರ ಮಹಾಸಭಾ ವತಿಯಿಂದ ಹೆಜಮಾಡಿ ಮೊಗವೀರ ಸಭಾದ ಆಯೋಜನೆಯಲ್ಲಿ ಸೋಮವಾರ ಹೆಜಮಾಡಿಯ ಅಮಾಸೆ ಕರಿಯದಲ್ಲಿ ಸಮುದ್ರಕ್ಕೆ ಪೂಜೆ ಸಲ್ಲಿಸಿ ಹಾಲು, ಸೀಯಾಳ, ತೆಂಗಿನಕಾಯಿಯನ್ನು ಸಮರ್ಪಣೆ ಮಾಡಲಾಯಿತು. ಏಳು ಗ್ರಾಮಗಳ ಮೊಗವೀರ ಸಭಾದ ವತಿಯಿಂದ ಹೆಜಮಾಡಿಯ ವೀರ ಮಾರುತಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಭಜನೆಯ ಮೂಲಕ ಹೂವು, ಹಣ್ಣು, ಹಾಲನ್ನು ಹೆಜಮಾಡಿಯ ಅಮಾಸೆ ಕರಿಯ ಸಮುದ್ರ ಕಿನಾರೆಗೆ ತರಲಾಯಿತು. ಸಮುದ್ರ ಕಿನಾರೆಯಲ್ಲಿ ಸಾಮೂಹಿಕ ಪ್ರಾರ್ಥನೆ, ಪೂಜೆ ಸಲ್ಲಿಸಿದ ಬಳಿಕ ಸಮುದ್ರಕ್ಕೆ ಹೂ, ಹಣ್ಣು, ತೆಂಗಿನಕಾಯಿ ಹಾಗೂ ಹಾಲನ್ನು ಸಮರ್ಪಿಸಲಾಯಿತು. ಈ ಸಂದರ್ಭ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಏಳೂರು ಮೊಗವೀರ ಮಹಾಸಭಾದ ಅಧ್ಯಕ್ಷ ದಿವಾಕರ ಹೆಜಮಾಡಿ, ಕಾರ್ಯದರ್ಶಿ ಬಾಲಕೃಷ್ಣ ಸುವರ್ಣ, ಮಾಜಿ ಅಧ್ಯಕ್ಷರು ಗಳಾದ ಸದಾಶಿವ ಕೋಟ್ಯಾನ್, ವಿಜಯ ಕೋಟ್ಯಾನ್, ಎಚ್ ರವಿ ಕುಂದರ್, ಏಳು ಗ್ರಾಮಗಳ ಗುರಿಕಾರರು, ಅಧ್ಯಕ್ಷರು, ಸಮಿತಿ ಸದಸ್ಯರು, ಮಹಿಳಾ ಮಂಡಳಿಗಳ ಸದಸ್ಯೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಪು ವಲಯ : ವಿಶ್ವ ಛಾಯಾಗ್ರಹಣ ದಿನಾಚರಣೆ

Thumbnail
Posted On: 19 Aug 2024, 07:32 PM

ಕಾಪು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ದ.ಕ - ಉಡುಪಿ ಜಿಲ್ಲೆ ಇದರ ಕಾಪು ವಲಯದಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಸೋಮವಾರ ಕೆ1 ಹೋಟೆಲ್ ನ ಸಭಾಭವನದಲ್ಲಿ ಆಚರಿಸಲಾಯಿತು. ಸನ್ಮಾನ : ಹಿರಿಯ ಛಾಯಾಗ್ರಾಹಕ, ಪತ್ರಕರ್ತ ಬಾಲಕೃಷ್ಣ ಪೂಜಾರಿ ಉಚ್ಚಿಲ ಮತ್ತು ಛಾಯಾಗ್ರಾಹಕ ಪ್ರಭಾಕರ ದೇವಾಡಿಗರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತಾಡಿದ ಬಾಲಕೃಷ್ಣ ಪೂಜಾರಿ ಉಚ್ಚಿಲ, ಇಂದಿನ ತಂತ್ರಜ್ಞಾನ ಯುಗದಲ್ಲಿ ಛಾಯಾಗ್ರಾಹಕರ ಪರಿಸ್ಥಿತಿ ಕಠಿಣವಾಗಿದ್ದು, ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಅನಿವಾರ್ಯತೆಯಿದೆ. ಛಾಯಾಗ್ರಾಹಕರು ಛಾಯಾಗ್ರಹಣವನ್ನು ನಂಬಿ ಬದುಕುವ ಜೊತೆಗೆ ಸಹ ಉದ್ಯೋಗದ ಬಗ್ಗೆ ಚಿಂತಿಸಿ ಆರ್ಥಿಕ ಸದೃಢತೆಯನ್ನು ಕಾಪಾಡಿಕೊಳ್ಳಬೇಕಿದೆ ಎಂದರು. ಛಾಯಾಗ್ರಾಹಕ ಪ್ರಭಾಕರ ದೇವಾಡಿಗ ಮಾತನಾಡಿ, ಕಪ್ಪು ಬಿಳುಪಿನ ಕಾಲದಿಂದ ಕಲರ್ ಫುಲ್ ಯುಗದವರೆಗೂ ಫೋಟೋಗ್ರಫಿಗೆ ಮಾನ್ಯತೆಯಿದೆ. ತಾಳ್ಮೆಯ ವೃತ್ತಿ ಇದಾಗಿದೆ. ಇಂದು ಅಸಂಖ್ಯಾತ ಕಿರಿಯ ಛಾಯಾಗ್ರಾಹಕರು ಛಾಯಾಗ್ರಹಣ ಕ್ಷೇತ್ರಕ್ಕೆ ಬರುತ್ತಿರುವುದು ಸಂತಸದ ಸಂಗತಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ವಲಯದ ಅಧ್ಯಕ್ಷರಾದ ಸಚಿನ್ ಉಚ್ಚಿಲ ವಹಿಸಿದ್ದರು. ಈ ಸಂದರ್ಭ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಕೃಷ್ಣ ರಾವ್, ಕಾಪು ವಲಯದ ಉಪಾಧ್ಯಕ್ಷರುಗಳಾದ ಸಂತೋಷ್ ಕಾಪು ಮತ್ತು ಸತೀಶ್ ಎರ್ಮಾಳು, ಕಾಪು ವಲಯದ ಕಾರ್ಯದರ್ಶಿ ರಾಘವೇಂದ್ರ ಭಟ್, ಕೋಶಾಧಿಕಾರಿ ಕಿರಣ್ ಕಾಪು, ಕಾಪು ವಲಯದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಉದಯ ಕುಮಾರ್ ಮತ್ತು ರಾಘವೇಂದ್ರ ಭಟ್ ಸನ್ಮಾನ ಪತ್ರ ವಾಚಿಸಿದರು. ಕಾಪು ವಲಯದ ಅಧ್ಯಕ್ಷರಾದ ಸಚಿನ್ ಉಚ್ಚಿಲ ಸ್ವಾಗತಿಸಿದರು. ಉದಯ ಕುಮಾರ್ ನಿರೂಪಿಸಿದರು. ರಾಘವೇಂದ್ರ ಭಟ್ ವಂದಿಸಿದರು.

ಆಗಸ್ಟ್ 21 : ಕಂಚಿನಡ್ಕದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Thumbnail
Posted On: 19 Aug 2024, 06:55 PM

ಕಾಪು : ರಾಜ್ಯ ಪ್ರಸ್ತಾವಿತ ಕಂಚಿನಡ್ಕದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಟೋಲ್ ಗೇಟ್ ರದ್ದು ಮಾಡುವ ಬಗ್ಗೆ ಸರಕಾರದ ಗಮನ ಸೆಳೆಯುವ ಉದ್ದೇಶದೊಂದಿಗೆ‌ ಆಗಸ್ಟ್ 21 ರಂದು ಬೆಳಿಗ್ಗೆ 10 ಗಂಟೆಗೆ ಕಂಚಿನಡ್ಕದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಮಾಜಿ ಸಚಿವ ವಿನಯ್ ಕುಮಾರ್‌ ಸೊರಕೆ ಹೇಳಿದರು. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೃಹತ್ ಪ್ರತಿಭಟನೆಯ ಬಳಿಕ‌ ಆ.‌22 ರಂದು ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ವಿವಿಧ ಸಚಿವರನ್ನೊಳಗೊಂಡ ನಿಯೋಗದೊಂದಿಗೆ ಮುಖ್ಯಮಂತ್ರಿಗಳ ಬಳಿ ತೆರಳಿ ಮನವಿ ಸಲ್ಲಿಸಲಾಗುವುದು. ಪ್ರತಿಭಟನೆಗೆ ಸಾರ್ವಜನಿಕರ ಸಹಿತವಾಗಿ ಕಾಪು ಬ್ಲಾಕ್ ಕಾಂಗ್ರೆಸ್ ನ ದಕ್ಷಿಣ ಮತ್ತು‌ ಉತ್ತರ ವಿಭಾಗ, ಜಿಲ್ಲಾ ಕಾಂಗ್ರೆಸ್ ಮತ್ತು ಜಿಲ್ಲೆಯ‌ ಎಲ್ಲಾ‌ ಬ್ಲಾಕ್ ಗಳ‌ ಸಹಭಾಗಿತ್ವದೊಂದಿಗೆ ಈ ಪ್ರತಿಭಟನೆ ನಡೆಯಲಿದ್ದು ಈ ಮೂಲಕ ಸರಕಾರಕ್ಕೆ ಒತ್ತಡ ತರುವ ಪ್ರಯತ್ನ ನಡೆಸಲಾಗುವುದು ಎಂದರು.‌ ಯಡಿಯೂರಪ್ಪ ಸರಕಾರ ಇರುವಾಗ ಆರಂಭಗೊಂಡ ಪ್ರಕ್ರಿಯೆ ಇದಾಗಿದ್ದು ಬೆಳ್ಮಣ್ ನಲ್ಲಿ ಟೋಲ್ ಹೋರಾಟಗಾರರ ಪ್ರತಿಭಟನೆಗೆ ಮಣಿದು ಬೊಮ್ಮಾಯಿ ಸರಕಾರ ಅದನ್ನು ಕಂಚಿನಡ್ಕಕ್ಕೆ ರವಾನಿಸಿದೆ. ಈಗ ಇಲ್ಲಿಂದಲೇ ಓಡಿಸುವ‌ ಉದ್ದೇಶಕ್ಕಾಗಿ ಈ ಹೋರಾಟ ನಡೆಯಲಿದೆ ಎಂದರು. ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕೆಪಿಸಿಸಿ ಕಾರ್ಯದರ್ಶಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾಪು ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಜಿತೇಂದ್ರ ಪುರ್ಟಾಡೋ, ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಶರ್ಪುದ್ದೀನ್ ಶೇಖ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ಪಡುಬಿದ್ರಿ ಮೊದಲಾದವರು ಉಪಸ್ಥಿತರಿದ್ದರು.

ಕಂಚಿನಡ್ಕ ಟೋಲ್ ಗೇಟ್ ವಿರುದ್ದ ಪ್ರತಿಭಟನೆ : ಕಾಪು ತಾಲೂಕು ಕುಲಾಲ ಸಂಘ ಬೆಂಬಲ

Thumbnail
Posted On: 18 Aug 2024, 08:19 PM

ಕಾಪು : ತಾಲೂಕಿನ ಪಡುಬಿದ್ರಿಯ ಕಂಚಿನಡ್ಕದಲ್ಲಿ ಆಗಸ್ಟ್ 24 ರಂದು ನಡೆಯುವ ರಾಜ್ಯ ಸರಕಾರ ಪ್ರಸ್ತಾವಿತ ಟೋಲ್ ಗೇಟ್ ವಿರುದ್ಧದ ಹೋರಾಟಕ್ಕೆ ಕಾಪು ತಾಲೂಕು ಕುಲಾಲ ಸಂಘ ಬೆಂಬಲ‌ ನೀಡಲಿದ್ದೇವೆ ಎಂದು ಕಾಪು ತಾಲೂಕು ಸಂಘದ ಅಧ್ಯಕ್ಷ ಹರೀಶ್ ಕುಲಾಲ್ ತಿಳಿಸಿದ್ದಾರೆ.

ಉಚ್ಚಿಲ ರೋಟರಿ ಕ್ಲಬ್‌ ವತಿಯಿಂದ ವನಮಹೋತ್ಸವ

Thumbnail
Posted On: 18 Aug 2024, 08:11 PM

ಉಚ್ಚಿಲ : ಇಲ್ಲಿನ ರೋಟರಿ ಕ್ಲಬ್‌ ವತಿಯಿಂದ ಉಚ್ಚಿಲ ಹೆದ್ದಾರಿಯ ಡಿವೈಡರ್‌ನಲ್ಲಿ ವನಮಹೋತ್ಸವ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ನೆರವೇರಿತು. ಈ ಸಂದರ್ಭ ಉಚ್ಚಿಲ ರೋಟರಿಯ ಮಾಜಿ ಅಧ್ಯಕ್ಷ ಸತೀಶ್‌ ಶೆಟ್ಟಿ ಗುಡ್ಡೆಚ್ಚಿ ಮಾತನಾಡಿ, ಅಂತರ್‌ರಾಷ್ಟ್ರೀಯ ಸಂಸ್ಥೆಯಾದ ರೋಟರಿ ಕ್ಲಬ್‌ ಉಚ್ಚಿಲದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಂದಿನ ದಿಗಳಲ್ಲಿ ಇನ್ನಷ್ಟು ಸಮಾಜ ಸೇವೆ ಮಾಡುವ ಯೋಜನೆ ನಮ್ಮದಾಗಿದೆ ಎಂದರು. ಉಚ್ಚಿಲ ರೋಟರಿ ಕ್ಲಬ್‌ ಉಚ್ಚಿಲ ಇದರ ಅಧ್ಯಕ್ಷ ಇಬಾದುಲ್ಲ ರಫಿಕ್‌ ಅಹ್ಮದ್‌, ಕಾರ್ಯದರ್ಶಿ ಸತೀಶ್‌ ಕುಂಡಂತಾಯ, ನಿಕಟಪೂರ್ವ ಕಾರ್ಯದರ್ಶಿ ಅಚ್ಚುತ ಶೆಣೈ, ನಜ್ಮಾ ಇಬಾದುಲ್ಲ ಉಪಸ್ಥಿತರಿದ್ದರು.

ಕಾಪು : ದಿಕ್ರ್ ದುವಾ ಮಜ್ಲೀಸ್ ಕೊಯಾಮ್ಮ ತಂಗಳ್ ರ ಕುರ್ರತ್ತುಸ್ಸಾದತ್ ಪುಸ್ತಕ ಬಿಡುಗಡೆ

Thumbnail
Posted On: 18 Aug 2024, 04:14 PM

ಕಾಪು : ಸಯ್ಯದ್ ಫಝಲ್ ಕೊಯಮ್ಮ ತಂಗಲ್ ಅಲ್ ಬುಕಾರಿ ಕೂರತ್ ತಂಗಲ್ ರವರ ಕುರ್ರತುಸ್ಸಾದತ್ ಬದುಕು ಮತ್ತು ಬೋಧನೆಗಳ ಇಣುಕು ನೋಟ ಎಂಬ ಪುಸ್ತಕ ಬಿಡುಗಡೆಯನ್ನು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಾಮ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ರವರು ಕುರಾ ತಂಗಲ್ ರವರ ಆತ್ಮೀಯರಾದ ಹೆಜಮಾಡಿ ಗುಲಾಮ್ ಮೊಹಮ್ಮದ್ ರವರಿಗೆ ಪ್ರಥಮ ಪುಸ್ತಕ ನೀಡುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ವಿಧಾನಸಭಾಧ್ಯಕ್ಷ ಯು.ಟಿ ಖಾದರ್, ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ, ಕರ್ನಾಟಕ ವಖ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಶಾಫಿ ಸಹದಿ, ಅಸ್ಸಯ್ಯಿದ್ ಅಬ್ದುರಹ್ಮನ್ ಮಸ್ ಊದ್ ತಂಗಲ್ ಕೂರತ್ ಮತ್ತಿತರರು ಉಪಸ್ಥಿತರಿದ್ದರು.

ಪಡುಕುತ್ಯಾರು ಶ್ರೀ ದುರ್ಗಾ ಮಂದಿರದಲ್ಲಿ ವರಮಹಾಲಕ್ಷ್ಮಿ ವ್ರತ ಪೂಜೆ ಸಂಪನ್ನ

Thumbnail
Posted On: 18 Aug 2024, 03:18 PM

ಶಿರ್ವ : ಪಡುಕುತ್ಯಾರು ಶ್ರೀ ದುರ್ಗಾ ಮಂದಿರದಲ್ಲಿ ಶುಕ್ರವಾರ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ ನೆರವೇರಿತು. ಶ್ರೀ ದುರ್ಗಾಮಹಿಳಾ ಮಂಡಳಿ ಮತ್ತು ಪಡುಕುತ್ಯಾರು ಕೂಡುವಳಿಕೆಯ ಸದಸ್ಯರು ಹಾಗೂ ಕುಟುಂಬಸ್ಥರು ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಕಳ ಪ್ರಭಾರ ತಹಶೀಲ್ದಾರ್ ಆಗಿ ಪ್ರತಿಭಾ.ಆರ್ ಅಧಿಕಾರ ಸ್ವೀಕಾರ

Thumbnail
Posted On: 18 Aug 2024, 08:42 AM

ಕಾರ್ಕಳ : ಕಾಪು ತಾಲೂಕಿನ ತಹಶೀಲ್ದಾರ್ ಡಾ. ಪ್ರತಿಭಾ ಆ‌ರ್. ಕಾರ್ಕಳ ತಾಲೂಕು ಪ್ರಭಾರ ತಹಶೀಲ್ದಾರ್ ಆಗಿ ಶನಿವಾರದಂದು ಅಧಿಕಾರ ಸ್ವೀಕರಿಸಿದರು. ಕಾರ್ಕಳ ತಹಶೀಲ್ದಾ‌ರ್ ನರಸಪ್ಪ ಅವರು ಬಳ್ಳಾರಿಗೆ ವರ್ಗಾವಣೆಗೊಂಡಿದ್ದು, ನೂತನ ತಹಶೀಲ್ದಾ‌ರ್ ನಿಯೋಜನೆಯಾಗದ ಹಿನ್ನೆಲೆ ಪ್ರತಿಭಾ ಆ‌ರ್. ಪ್ರಭಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಉಪತಹಶೀಲ್ದಾರ್ ಮಂಜುನಾಥ್ ನಾಯಕ್, ಲಕ್ಷ್ಮೀ, ನಮಿತಾ, ಕಂದಾಯ ನಿರೀಕ್ಷಕರಾದ ಶಿವಪ್ರಸಾದ್, ರಿಯಾಜ್ ಅಹಮದ್ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.