Updated News From Kaup

ಉಚ್ಚಿಲ ಸರಸ್ವತಿ ಮಂದಿರ ಶಾಲೆ ಹಳೆ ವಿದ್ಯಾರ್ಥಿ ಸಂಘದಿಂದ ಕೆಸರು ಗದ್ದೆ ಕ್ರೀಡಾಕೂಟ

Posted On: 30-06-2024 07:57PM

ಉಚ್ಚಿಲ : ಇಲ್ಲಿನ ಸರಸ್ವತಿ ಮಂದಿರ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಕೆಸರುಗದ್ದೆ ಕ್ರೀಡಾಕೂಟವನ್ನು ಭಾನುವಾರ ಉಚ್ಚಿಲ ಬದ್ದಿಂಜೆ ಮಠದ ಬಳಿಯ ಗದ್ದೆಯಲ್ಲಿ ಆಯೋಜಿಸಲಾಯಿತು.

ಕ್ರೀಡಾಕೂಟವನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದ್ಯುಮಣಿ ಆರ್ ಭಟ್ ಮತ್ತು ಗಣ್ಯರು ದೀಪ ಪ್ರಜ್ವಲಿಸಿ, ಕೆಸರು ಗದ್ದೆಗೆ ಹಾಲು, ಸಿಯಾಳ ನೀರು ಹಾಗೂ ದೇವರ ಪ್ರಸಾದವನ್ನು ಹಾಕುವ ಮೂಲಕ ಚಾಲನೆ ನೀಡಿದರು. ಉಚ್ಚಿಲ ಸರಸ್ವತಿ ಮಂದಿರ ಕನ್ನಡ ಶಾಲೆ ಹಾಗೂ ಸ್ಥಳೀಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಮುಕ್ತ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಧ್ಯುಮಣಿ ಭಟ್‌, ಪ್ರಾಥಮಿಕ ಶಾಲಾ ಸಂಚಾಲಕ ಮೋಹನದಾಸ ಶೆಟ್ಟಿ, ಗೌರವಾಧ್ಯಕ್ಷರುಗಳಾದ ಬಾಲಕೃಷ್ಣ ಪೂಜಾರಿ ಉಚ್ಚಿಲ, ಧೀರಜ್‌ ಹುಸೈನ್‌, ಲಕ್ಷ್ಮೀ ಟೀಚರ್‌, ಸರಸ್ವತಿ ಮಂದಿರ ಪ್ರೌಡ ಶಾಲಾ ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ, ಮಾಜಿ ತಾಪಂ ಉಪಾಧ್ಯಕ್ಷ ಯುಸಿ ಶೇಕಬ್ಬ, ಲಕ್ಷ್ಮೀಶ ಭಟ್‌, ಸಂಘಟನಾ ಕಾರ್ಯದರ್ಶಿ ಕಾಂತಿ ಆಚಾರ್ಯ, ಕಾರ್ಯದರ್ಶಿ ಸತೀಶ್‌ ಕುಲಾಲ್‌, ಕೋಶಾಧಿಕಾರಿ ಅನಿತ್‌ ಸಾಲ್ಯಾನ್‌ ಮತ್ತಿತರು ವೇದಿಕೆಯಲ್ಲಿದ್ದರು.

ಉಚ್ಚಿಲ ಸರಸ್ವತಿ ಮಂದಿರ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್‌ ಕುಲಾಲ್‌ ಮತ್ತು ವಿದ್ಯಾಪ್ರಭೋಧಿನಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರಸಾದ್‌ ಕ್ರೀಡೆಯಲ್ಲಿ ಸಹಕರಿಸಿದರು. ಚಂದ್ರ ಶೇಖರ ಶೆಟ್ಟಿ ಪೊಲ್ಯ ಸ್ವಾಗತಿಸಿ, ನಿರೂಪಿಸಿದರು. ಸತೀಶ್‌ ಕುಲಾಲ್‌ ವಂದಿಸಿದರು.

ದ್ವಾರಕಾಮಯಿ ಮಠದ ಪೀಠಾಧಿಪತಿ ಶ್ರೀ ಸಾಯಿ ಈಶ್ವರ ಗುರೂಜಿ108 ದಿನಗಳಲ್ಲಿ 108 ಕ್ಷೇತ್ರ ಪ್ರದಕ್ಷಣೆ : ಬಂಟಕಲ್ಲು ಕ್ಷೇತ್ರ ಭೇಟಿ

Posted On: 30-06-2024 12:59PM

ಕಟಪಾಡಿ : ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ದ್ವಾರಕಾಮಯಿ ಮಠದ ಪೀಠಾಧಿಪತಿ ಶ್ರೀ ಸಾಯಿ ಈಶ್ವರ ಗುರೂಜಿ ಅವರ 108 ದಿನಗಳಲ್ಲಿ 108 ಕ್ಷೇತ್ರ ಪ್ರದಕ್ಷಣೆ ಅಂಗವಾಗಿ 17 ದಿನದ ಪ್ರದಕ್ಷಿಣೆ ಜೂನ್ 30ರಂದು ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಧಮ೯ದಶಿ೯ ಶಶಿಧರ ವಾಗ್ಲೆ, ಗುರೂಜಿಯವರನ್ನು ಬರಮಾಡಿಕೊಂಡರು. ಈ ಸಂದಭ೯ದಲ್ಲಿ ದೇವಳದಲ್ಲಿ ನಡೆದ ಶ್ರೀ ರಾಮ ತಾರಕ ಯಜ್ಞ ಕಾರ್ಯಕ್ರಮವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದಭ೯ದಲ್ಲಿ ದೇವಸ್ಥಾನದ ಪುರೋಹಿತರಾದ ಸಂದೇಶ ಭಟ್, ವೆಂಕಟೇಶ್ ಭಟ್, ಶಿವಾನಂದ ಭಟ್, ರಾಘವೇಂದ್ರ ಪ್ರಭು, ಕವಾ೯ಲು, ಶಿಲ್ಪಾ ಮಹೇಶ್, ಸತೀಶ್ ದೇವಾಡಿಗ, ನಿಲೇಶ್, ಪ್ರದೀಪ್ ಪೂಜಾರಿ, ಶಶಾಂಕ್ ಬಂಗೇರ, ನಿಮಿಶ್ ಜತ್ತನ್ ಮುಂತಾದವರು ಉಪಸ್ಥಿತರಿದ್ದರು.

ಕಾಪು : ಶ್ರೀ ಅಯ್ಯಣ್ಣ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರ ನಿವೃತ್ತಿ ಬೀಳ್ಕೊಡುಗೆ

Posted On: 29-06-2024 06:44PM

ಕಾಪು : ಶ್ರೀ ಅಯ್ಯಣ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಹೊರ್ತಿ ಅಮಗೊಂಡ ಇವರ ನಿವೃತ್ತಿ ಬೀಳ್ಕೊಡುಗೆ ಶನಿವಾರ ಜರಗಿತು.

ಈ ಸಂದರ್ಭ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಶಾಲಾ ಸಂಚಾಲಕರಾದ ಪ್ರವೀಣ್ ಕುಮಾರ್ ಗುರ್ಮೆ, ಕಿಶೋರ್ ಕುಮಾರ್ ಗುರ್ಮೆ, ಪಿ.ಕೆ.ಎಸ್ ಪ್ರೌಢ ಶಾಲೆಯ ಶಿಕ್ಷಕರಾದ ಚಂದ್ರಕಾಂತ್ ಮಾಣಿ ನಾಯ್ಕ್, ಹಳೆ ವಿದ್ಯಾರ್ಥಿಗಳಾದ ಯೋಗೀಶ್ ಆಚಾರ್ಯ, ವಿನೇಶ್ವರಿ, ಗಣೇಶ್ ಶೆಟ್ಟಿ, ಅನಿಲ್ ಶೆಟ್ಟಿ, ರೋಹಿತ್, ಸಿಆರ್ ಪಿ ಸರಿತಾ ಹಾಗೂ ಶಾಲಾ ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದರು.

ಕಟಪಾಡಿ ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜು ಅಮೃತ ಮಹೋತ್ಸವ ಉದ್ಘಾಟನೆ

Posted On: 29-06-2024 06:37PM

ಕಟಪಾಡಿ : ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜು ಕಟಪಾಡಿ ಇದರ "ಅಮೃತ ಮಹೋತ್ಸವ" ಕಾರ್ಯಕ್ರಮವನ್ನು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು.

ಜನರೇಟರ್ ಹಸ್ತಾಂತರ : ಕೆನರಾ ಬ್ಯಾಂಕ್ ಕಟಪಾಡಿ ಶಾಖೆ ವತಿಯಿಂದ ಕಾಲೇಜಿಗೆ ಕೊಡಮಾಡಿದ ಜನರೇಟರ್ ನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಅಮೃತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ. ಸತ್ಯೇಂದ್ರ ಪೈ, ಕಟಪಾಡಿ ಕೆನರಾ ಬ್ಯಾಂಕ್ ಪ್ರಬಂಧಕರಾದ ಸುಶ್ಮಿತಾ ಪಿ, ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕೆ. ವಸಂತ್ ಮಾಧವ್ ಭಟ್, ರವೀಂದ್ರನಾಥ ಶೆಟ್ಟಿ, ಎ. ಲಕ್ಮೀ ಬಾಯಿ ಹಾಗೂ ಉಪಾಧ್ಯಕ್ಷರು, ಸರ್ವ ಸದಸ್ಯರು ಉಪಸ್ಥಿತರಿದ್ದರು.

ಮಳೆ ಮುಂಜಾಗ್ರತಾ ಕ್ರಮ : ನಾಳೆ (ಜೂ.28) ದ.ಕ. ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ

Posted On: 27-06-2024 07:28PM

ಮಂಗಳೂರು : ದ.ಕ.ಜಿಲ್ಲೆಯಲ್ಲಿ ಮಳೆ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ (ಜೂ.28) ಶುಕ್ರವಾರ ಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ರಜೆ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶುಕ್ರವಾರ ರಜೆ ಸಾರಲಾಗಿದೆ.

ಕಾರ್ಕಳ : ಮುಂಡ್ಕೂರುವಿನಲ್ಲಿ ಬೆಂಕಿಗಾಹುತಿಯಾದ ಮನೆ

Posted On: 27-06-2024 05:51PM

ಕಾರ್ಕಳ : ಇಲ್ಲಿನ ಮುಂಡ್ಕೂರು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅನಾಹುತದಿಂದ ಮನೆ ಹಾಗೂ ಮನೆಯಲ್ಲಿ ವಸ್ತುಗಳು ಸುಟ್ಟು ಕರಕಲಾದ ಘಟನೆ ಇಂದು ನಡೆದಿದೆ.

ಮುಂಡ್ಕೂರು ಗ್ರಾಮದ ಹಳೆ ಮನೆ ಪುರುಷೋತ್ತಮ ಶೆಟ್ಟಿಯವರ ಮನೆ ಇದಾಗಿದ್ದು ಬೆಲೆಬಾಳುವ ವಸ್ತುಗಳ ಸಹಿತ ಇನ್ನಿತರ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಅಂದಾಜು 5 ಲಕ್ಷಕ್ಕೂ ಅಧಿಕ ಮೊತ್ತದ ನಷ್ಟ ಉಂಟಾಗಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ.

ಘಟನೆ ನಡೆದ ಸ್ಥಳಕ್ಕೆ ಜನಪ್ರತಿನಿಧಿಗಳು, ಪಂಚಾಯತ್ ಮಟ್ಟದ ಅಧಿಕಾರಿಗಳಾಗಲಿ ಇಷ್ಟರವರೆಗೆ ಭೇಟಿ ನೀಡಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖರಾದ ಸಂತೋಷ್ ನಮ್ಮ‌ ಕಾಪು‌ ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.

ಕಾಪು ತಾಲೂಕಿನಲ್ಲಿ ಮಳೆಯಿಂದಾಗಿ ಮನೆಗಳಿಗೆ ಹಾನಿ

Posted On: 27-06-2024 04:17PM

ಕಾಪು : ಕರಾವಳಿಯಲ್ಲಿ ಮುಂಗಾರು ಮಳೆ ಬಿರುಸುಗೊಂಡಿದ್ದು ಕಾಪು ತಾಲೂಕಿನ ಕೆಲವೆಡೆ ಮನೆಗಳಿಗೆ ಹಾನಿಯಾಗಿದೆ.

ಮಳೆಯಿಂದಾಗಿ ಕಾಪು ತಾಲೂಕಿನ ತೆಂಕಗ್ರಾಮದ ಭಾಸ್ಕರ್ ಅವರ ವಾಸ್ತವ್ಯದ ಮನೆಗೆ ಹಾನಿ ಸಂಭವಿಸಿದೆ. ಶಿರ್ವದ ಲಕ್ಷ್ಮಣ ಆಚಾರಿಯವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ನಂದಿಕೂರು ಗ್ರಾಮದ ಸಂತೋಷ್ ಪೂಜಾರಿಯವರ ಮನೆಗೂ ಹಾನಿಯಾಗಿದೆ.

ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮಳೆ ಹಿನ್ನಲೆ; ಉಡುಪಿ ಜಿಲ್ಲೆಯಲ್ಲಿ (ಜೂ. 27) ಶಾಲೆಗಳಿಗೆ ರಜೆ ಇಲ್ಲ – ಡಾ. ವಿದ್ಯಾ ಕುಮಾರಿ

Posted On: 26-06-2024 08:20PM

ಉಡುಪಿ: ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ದಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಣೆ ಮಾಡಿದ್ದು ಉಡುಪಿ ಜಿಲ್ಲೆಯಲ್ಲಿ ಮಳೆ ಕಡಿಮೆ ಇರುವ ಕಾರಣ ಶಾಲಾ ಕಾಲೇಜುಗಳಿಗೆ ರಜೆ ಇರುವುದಿಲ್ಲ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ತಿಳಿಸಿದ್ದಾರೆ.

ಮಳೆ ಪ್ರಮಾಣ ಹೆಚ್ಚಾದರೆ ಮುಂದಿನ ಪರಿಸ್ಥಿತಿ ಅವಲೋಕಿಸಿ ರಜೆ ಘೋಷಿಸುವ ಸಾಧ್ಯತೆ ಇದೆ. ಆದರೆ ಸದ್ಯಕ್ಕೆ ಉಡುಪಿ ಜಿಲ್ಲೆಗೆ ರಜೆಯಿರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಜೇಸಿಐ ಉಡುಪಿ ಸಿಟಿ : ವೈಯಕ್ತಿಕ ಸ್ಪಚ್ಚತೆ ಕಾರ್ಯಕ್ರಮ

Posted On: 26-06-2024 07:18PM

ಉಡುಪಿ : ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಕಡಿಯಾಳಿ ಕಮಲಾಬಾಯಿ ಪ್ರೌಢ ಶಾಲೆಯಲ್ಲಿ ವಿದ್ಯಾಥಿ೯ನಿಯರಿಗೆ ವೈಯಕ್ತಿಕ ಸ್ಪಚ್ಚತೆ ಬಗ್ಗೆ ಕಾಯ೯ಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಡಾ| ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಮತ್ತು ಆಪ್ತ ಸಮಾಲೋಚಕಿ ಸೌಜನ್ಯ ಶೆಟ್ಟಿ ಆಗಮಿಸಿ ತರಬೇತಿ ನೀಡಿದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಉಡುಪಿ ಸಿಟಿ ಮಹಿಳಾ ಸಂಯೋಜಕಿ ನಯನ ಉದಯ್ ನಾಯ್ಕ್ ವಹಿಸಿದ್ದರು.

ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ಸುದಶ೯ನ ನಾಯಕ್, ಜೇಸಿ ಅಧ್ಯಕ್ಷೆ ಡಾ| ಹರಿಣಾಕ್ಷಿ ಕಕೇ೯ರ , ಜೇಜೆಸಿ ವೈಷ್ಣವಿ ಭಟ್ ಮುಂತಾದವರಿದ್ದರು.

ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ

Posted On: 26-06-2024 07:13PM

ಅದಮಾರು : ಇಲ್ಲಿನ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಎನ್ಎಸ್ಎಸ್ ಹಾಗೂ ಪಡುಬಿದ್ರಿ ಪೊಲೀಸ್ ಠಾಣೆಯ ಜಂಟಿ ಆಶ್ರಯದಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.

ಪಡುಬಿದ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಪ್ರಸನ್ನ ಎಂ.ಎಸ್ ರವರು, "ಮಾದಕ ವಸ್ತು ಸೇವನೆ ವಿದ್ಯಾರ್ಥಿಗಳ ಬಾಳನ್ನೇ ಹಾಳು ಮಾಡುತ್ತದೆ. ಕೆಲವೊಮ್ಮೆ ಮಾದಕ ವಸ್ತುಗಳ ಮಾರಾಟಗಾರರು ಮಕ್ಕಳ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ದಯವಿಟ್ಟು ಮಾದಕ ವಸ್ತುಗಳಿಗೆ ಬಲಿಯಾಗಬೇಡಿ. ಹಾಗೆಯೇ ತಂಬಾಕು ಉತ್ಪನ್ನ ಗಳನ್ನು ಕೂಡಾ ಸೇವಿಸಬೇಡಿ. ನಿಮ್ಮ ಆರೋಗ್ಯ ಉತ್ತಮವಾಗಿದ್ದರೆ, ಮುಂದೆ ಏನನ್ನು ಬೇಕಾದರೂ ಸಾಧಿಸಬಹುದು" ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕನ್ನಡ ಉಪನ್ಯಾಸಕರಾದ ದೇವಿ ಪ್ರಸಾದ್ ರವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಪ್ರತಿನಿಧಿಗಳಾದ ಪ್ರೊಫೆಸರ್ ನಿತ್ಯಾನಂದರವರು ಮಾತನಾಡಿ "ವಿದ್ಯಾರ್ಥಿ ಜೀವನದಲ್ಲಿ ನೀವು ಸರಿಯಾಗಿದ್ದರೆ ಜೀವನದ ಕೊನೆತನಕ ಸರಿಯಾಗಿರುತ್ತೀರಿ. ಯಾವುದೇ ಕಾರಣಕ್ಕೂ ದುಷ್ಚಟಗಳಿಗೆ ಬಲಿಯಾಗಬೇಡಿ. ಸ್ನೇಹದ ಹೆಸರಿನಲ್ಲಿ ಮೋಸ ಮಾಡುವವರಿದ್ದಾರೆ. ಅಂತವರಿಂದ ಆದಷ್ಟು ದೂರವಿರಿ" ಎಂದು ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂಜೀವ್ ನಾಯಕ್ ರವರು, ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂದರು.

ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಕಾಂತ್ ರಾವ್ ರವರು ಉಪಸ್ಥಿತರಿದ್ದರು. ಕು. ಸಿರಿ ಮಹಿದಾಸ್ ಸ್ವಾಗತಿಸಿದರು. ಕು.ಫಾತಿಮಾ ಸಹನ ಧನ್ಯವಾದವಿತ್ತಳು. ಕು. ನಿತೀಶಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದಳು.