Updated News From Kaup

ರಿಕ್ಷಾ ಚಾಲಕರ, ಮಾಲಕರ ಸಂಘ ಬಂಟಕಲ್ಲು ; ಸ್ವಾತಂತ್ರ್ಯ ದಿನಾಚರಣೆ ; ಪೊಲೀಸ್ ಚೌಕಿ ಉದ್ಘಾಟನೆ

Thumbnail
Posted On: 15 Aug 2024, 02:33 PM

ಶಿರ್ವ : ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಿ ಸಿ ರೋಡ್ ಬಂಟಕಲ್ಲು ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘದ ಗೌರವಾಧ್ಯಕ್ಷರಾದ ಕೆ ಆರ್ ಪಾಟ್ಕರ್ ಧ್ವಜಾರೋಹಣಗೈದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಸೇನಾನಿ ರಾಜೇಂದ್ರ ಪಾಟ್ಕರ್, ಡಾ. ಪ್ರಕಾಶ್ ಭಟ್, ಶೈಲಾಮತ ಯಸ್, ವಿನ್ಸೆಂಟ್ ಕಾಸ್ಟೆಲಿನೊ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ಸದಾಶಿವ ಸ್ವಾಗತಿಸಿದರು. ಕಾರ್ಯದರ್ಶಿ ರಾಕೇಶ್ ವಂದಿಸಿದರು. ಡೆನಿಸ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ನಂತರ ಇನ್ಫೋಟೆಕ್ ಟೆಕ್ನಾಲಜಿ ಶಿರ್ವ ಬಿಸಿ ರೋಡ್ ನಲ್ಲಿ ನಿರ್ಮಿಸಿದ ಪೊಲೀಸ್ ಚೌಕಿಯನ್ನು ಉದ್ಘಾಟಿಸಲಾಯಿತು. ಸಂಸ್ಥೆಯ ಮುಖ್ಯಸ್ಥರಾದ ಸುಧಾಂಶು ಸಿಂಗ್ ಉಪಸ್ಥಿತರಿದ್ದರು.

ಕಾಪು ತಾಲೂಕು ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ

Thumbnail
Posted On: 15 Aug 2024, 02:25 PM

ಕಾಪು : ತಾಲೂಕು ಆಡಳಿತದ ವತಿಯಿಂದ ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕಾಪು ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಚರಿಸಲಾಯಿತು. ಕಾಪು ದಂಡಾಧಿಕಾರಿ ಡಾ. ಪ್ರತಿಭಾ ಆರ್‌ರವರು ಧ್ವಜಾರೋಹಣಗೈದು,ಮಾತನಾಡಿದ ಅವರು ತಮ್ಮ ಸಂದೇಶದಲ್ಲಿ, ಇಂದು ನಾವು ಆಚರಿಸುತ್ತಿರುವ ಸ್ವಾತಂತ್ರ್ಯ ದಿನಾಚರಣೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ದೇಣಿಗೆಯಾಗಿದೆ.  ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಾಗರಿಕರಾದ ನಮಗಿದೆ ಎಂದರು. ಸಭಾಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿಯವರು ಮಹಾತ್ಮ ಗಾಂಧೀಜಿ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕೋಸ್ಕರ ಸಾವಿರಾರು ಮಂದಿ ವೀರ ಸೇನಾನಿಗಳು ಪ್ರಾಣಾರ್ಪಣೆ ಮಾಡಿದ್ದಾರೆ. 200 ವರ್ಷ ಬ್ರಿಟಿಷರ ದಾಸ್ಯದಿಂದ ಮುಕ್ತವಾದ ದಿನ ಇದಾಗಿದ್ದು,  ಮಾತೃ ಭೂಮಿಯ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನಗೈದವರ ಬಲಿದಾನ ನಿಷ್ಪ್ರಯೋಜಕವಾಗಬಾರದು. ನಾವು ದೇಶ ಕಟ್ಟುವ ಕೆಲಸ ಮಾಡಬೇಕು ಎಂದರು. ಇದೇ ಸಂದರ್ಭ ಕಾಪು ತಾಲೂಕಿನಲ್ಲಿ ಉತ್ತಮ ಅಂಕ ಗಳಿಸಿದರವರನ್ನು ಸನ್ಮಾನಿಸಲಾಯಿತು. ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ಕಾಪು ತಾಲೂಕು ಪಂಚಾಯತ್ ವಿಸ್ತರಣಾಧಿಕಾರಿ ಜೇಮ್ಸ್ ಡಿಸಿಲ್ವ,‌ ಪುರಸಭಾ ಮುಖ್ಯಾಧಿಕಾರಿ ನಾಗರಾಜ್, ಪೋಲಿಸ್ ವೃತ್ತ ನಿರೀಕ್ಷಕಿ ಜಯಶ್ರೀ ಎಸ್ ಮಾಣೆ, ಕಾಪು ಠಾಣಾಧಿಕಾರಿ ಅಬ್ದುಲ್ ಖಾದರ್, ಯುವಜನ ಸೇವಾ ಮತ್ತು ಕ್ರೀಡಾ ಅಧಿಕಾರಿ ರಿತೇಶ್ ಶೆಟ್ಟಿ ಸೂಡ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪುಂಡಲೀಕ ಮರಾಠೆ ಮತ್ತು ಪುರಸಭಾ ಸದಸ್ಯರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಗೋಪಾಲಕೃಷ್ಣ ಗಾಂವ್ಕರ್ ಸ್ವಾಗತಿಸಿ, ವಂದಿಸಿದರು. ಕಾಲೇಜು ಬೋಧಕಿ ಸುಚಿತ್ರ ನಿರೂಪಿಸಿದರು.

ಕಳತ್ತೂರು ಫ್ರೆಂಡ್ಸ್ ಗ್ರೂಪ್ : ಆಟಿಡೊಂಜಿ‌ ದಿನ ಕಾರ್ಯಕ್ರಮ

Thumbnail
Posted On: 15 Aug 2024, 02:11 PM

ಕಾಪು : ತುಳುನಾಡಿನ‌ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ನಾವು ಮರೆತಿರುವ ಹಿಂದಿನ‌ ತಲೆಮಾರಿನ ಜೀವನ‌ ಪದ್ಧತಿ, ಚಟುವಟಿಕೆಗಳನ್ನು ಮತ್ತೆ ನೆನಪಿಸಿ ಕೊಡುವಲ್ಲಿ ಆಟಿಡೊಂಜಿ‌ ದಿನ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಫ್ರೆಂಡ್ಸ್ ಗ್ರೂಪ್ ಕಳತ್ತೂರು ಇವರ ವತಿಯಿಂದ ಕುಶಲ ಶೇಖರ ಶೆಟ್ಟಿ ಸಭಾಂಗಣದಲ್ಲಿ ರವಿವಾರ ಜರಗಿದ ಆಟಿಡೊಂಜಿ‌ ದಿನ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದ ಹಿರಿಯ ಗ್ರಾಮೀಣ ಮಹಿಳೆಯರನ್ನು ಸಮ್ಮಾನಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಬದುಕಿನ ಹಳೇ ನೆನಪುಗಳನ್ನು ಮೆಲುಕು ಹಾಕಿಕೊಳ್ಳುವ ನಿಟ್ಟಿನಲ್ಲಿ ಆಟಿಡೊಂಜಿ‌ ದಿನ ಕಾರ್ಯಕ್ರಮ ಪೂರಕವಾಗಿದೆ. ತೆರೆಮರೆಗೆ ಸರಿಯುತ್ತಿರುವ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳನ್ನು ಮುನ್ನಲೆಗೆ ತರುವ ಪ್ರಯತ್ನ ಇದಾಗಿದೆ ಎಂದರು. ಮಾಜಿ ಶಾಸಕ ಲಾಲಾಜಿ‌ ಆರ್. ಮೆಂಡನ್, ಉದ್ಯಮಿ ಶೇಖರ್ ಬಿ. ಶೆಟ್ಟಿ ಮತ್ತು ಕುಶಲ ಶೇಖರ್ ಶೆಟ್ಟಿ ದಂಪತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಾದ ಸಮನ್ವಿ ಶೆಟ್ಟಿ, ಹರ್ಷಿತಾ ಶೆಟ್ಟಿ ಗಾರ್ ಮತ್ತು ದೀಕ್ಷಾ ಅವರನ್ನು ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಸಾಧಕರಾದ ಕಾವ್ಯ ರೋಹಿತ್ ಕುಮಾರ್, ಸಾನ್ವಿ ಶೆಟ್ಟಿ ಅವರನ್ನು ಗೌರವಿಸಲಾಯಿತು. ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು, ಕುತ್ಯಾರು ಗ್ರಾ.ಪಂ. ಅಧ್ಯಕ್ಷ ಜನಾರ್ದನ ಆಚಾರ್ಯ, ಕಾಪು ಪುರಸಭೆ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ಉಮೇಶ್ ಕರ್ಕೇರ, ಅನಿಲ್ ಕುಮಾರ್, ಗುತ್ತಿಗೆದಾರ ಕಿಶೋರ್ ಕುಮಾರ್ ಗುರ್ಮೆ, ಶಿರ್ವ ಮಹಿಳಾ ಮಂಡಳಿ ಗೌರವಾಧ್ಯಕ್ಷೆ ಬಬಿತಾ ಜಗದೀಶ್ ಅರಸ, ಕಾಪು ಮಹಿಳಾ ಮಂಡಳಿ ಅಧ್ಯಕ್ಷೆ ಜಯಲಕ್ಷ್ಮೀ ಸುರೇಶ್ ಶೆಟ್ಟಿ, ಹಿರಿಯರಾದ ವಿಶ್ವನಾಥ ಪೂಜಾರಿ ಗರಡಿಮನೆ, ವಳದೂರು ನಾರಾಯಣ ಶೆಟ್ಟಿ, ಸುಂದರ್ ಶೆಟ್ಟಿ ಕಳತ್ತೂರು, ಆನಂದಿ ವಾಸು ಶೆಟ್ಟಿ, ಫ್ರೆಂಡ್ಸ್ ಗ್ರೂಫ್ ಗೌರವಾಧ್ಯಕ್ಷ ರಂಗನಾಥ ಶೆಟ್ಟಿ ಕಳತ್ತೂರು, ಅಧ್ಯಕ್ಷ ರೋಹಿತ್ ಕುಮಾರ್ ಉಪಸ್ಥಿತರಿದ್ದರು. ಕಳತ್ತೂರು ಫ್ರೆಂಡ್ಸ್ ಗ್ರೂಫ್ ನ ಸದಸ್ಯರಾದ ಅಶ್ವಿನಿ ಸ್ವಾಗತಿಸಿ, ಸುನೀತಾ ರಂಗನಾಥ್ ಶೆಟ್ಟಿ ವಂದಿಸಿದರು. ರಚನಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.

ಇನ್ನಂಜೆ ಯುವಕ ಮಂಡಲದ ಪದಗ್ರಹಣ

Thumbnail
Posted On: 15 Aug 2024, 02:04 PM

ಇನ್ನಂಜೆ : ಯುವಕ ಮಂಡಲದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವು ಇನ್ನಂಜೆಯಲ್ಲಿ ಜರಗಿತು. ಯುವಕ ಮಂಡಲದ ನಿರ್ಗಮನ ಅಧ್ಯಕ್ಷ ದಿವೇಶ್ ಶೆಟ್ಟಿಯವರು ನಿಯೋಜಿತ ಅಧ್ಯಕ್ಷ ಮಧುಸೂಧನ್ ಆಚಾರ್ಯರವರಿಗೆ, ನಿರ್ಗಮನ ಕಾರ್ಯದರ್ಶಿ ಹರೀಶ್ ಪೂಜಾರಿಯವರು ನಿಯೋಜಿತ ಕಾರ್ಯದರ್ಶಿಯಾದ ಪವನ್ ಕುಮಾರ್ ರವರಿಗೆ ಅಧಿಕಾರ ಹಸ್ತಾಂತರಿಸಿದರು. ವೇದಿಕೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ನವೀನ್ ಶೆಟ್ಟಿˌ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ, ಪ್ರೈಮರಿ ದೈಹಿಕ ಶಿಕ್ಷಣ ಶಿಕ್ಷಕರಾದ ರವಿ, ಪಂಚಾಯತ್ ಸದಸ್ಯರುಗಳು, ನೂತನವಾಗಿ ಆಯ್ಕೆಯಾದ ಯುವಕ ಮಂಡಲದ 18 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಇನ್ನಂಜೆ ಯುವಕ ಮಂಡಲ, ರೋಟರಿ ಸಮುದಾಯ ದಳ : ಬ್ಯಾಡ್ಮಿಂಟನ್ ಕೋರ್ಟ್ ಕೊಡುಗೆ

Thumbnail
Posted On: 15 Aug 2024, 01:51 PM

ಕಾಪು : ತಾಲೂಕಿನ ಇನ್ನಂಜೆ ಯುವಕ ಮಂಡಲದ ಅಧ್ಯಕ್ಷರಾದ ದಿವೇಶ್ ಶೆಟ್ಟಿ ಹಾಗೂ ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಪ್ರಶಾಂತ್ ಆಚಾರ್ಯರವರು ಕೊಡುಗೆಯಾಗಿ ನೀಡಿದ ಬ್ಯಾಡ್ಮಿಂಟನ್ ಕೋರ್ಟ್ ನ್ನು ಇನ್ನಂಜೆ ಎಸ್ ವಿ ಎಚ್ ಶಾಲಾ ದೈಹಿಕ ಶಿಕ್ಷಕ ನವೀನ್ ಶೆಟ್ಟಿಯವರು ಉದ್ಘಾಟಿಸಿ ಯುವಕ ಮಂಡಲದ ನಿಯೋಜಿತ ಅಧ್ಯಕ್ಷರಾದ ಮಧುಸೂಧನ್ ಆಚಾರ್ಯರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ, ಪಂಚಾಯತ್ ಸದಸ್ಯರುಗಳು ಮತ್ತು ಯುವಕ ಮಂಡಲ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ಎರ್ಮಾಳು ತೆಂಕ ಅಟೋ ಯೂನಿಯನ್ : 78ನೇ ಸ್ವಾತಂತ್ರೋತ್ಸವ ಆಚರಣೆ

Thumbnail
Posted On: 15 Aug 2024, 01:41 PM

ಎರ್ಮಾಳು : 78ನೇ ಸ್ವಾತಂತ್ರೋತ್ಸವದ ಅಂಗವಾಗಿ ಎರ್ಮಾಳು ತೆಂಕ ಅಟೋ ಯೂನಿಯನ್ ವತಿಯಿಂದ ಆಚರಿಸಲ್ಪಟ್ಟ ಕಾರ್ಯಕ್ರಮದಲ್ಲಿ ಯೂನಿಯನ್ ಅಧ್ಯಕ್ಷ ಪತ್ರಕರ್ತ ಸುರೇಶ್ ಎರ್ಮಾಳು ಧ್ವಜಾರೋಹಣ ಗೈದರು. ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷ ರಾಜು ಪೂಜಾರಿ, ಕಾರ್ಯದರ್ಶಿ ಭರತ್ ಶೆಟ್ಟಿಗಾರ್, ಗ್ರಾ.ಪಂ.ಸದಸ್ಯರಾದ ಸಂತೋಷ್, ಮನೋಜ್ ಶೆಟ್ಟಿ, ಮೋಹನ್, ಕೇಶವ ಮೊಯಿಲಿ, ವಿನಿತ್ ತಲವಾರ್ ಸಹಿತ ಯೂನಿಯನ್ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಆಗಸ್ಟ್ 16 : ಶ್ರೀ ವಿಷ್ಣು ಕಲಾವೃಂದ ಗಾಂಧಿನಗರ, ಶಿರ್ವ - 11ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವೃತ

Thumbnail
Posted On: 15 Aug 2024, 01:36 PM

ಶಿರ್ವ : ಶ್ರೀ ವಿಷ್ಣು ಕಲಾವೃಂದ ಗಾಂಧಿನಗರ, ಶಿರ್ವ ಇದರ ವತಿಯಿಂದ ಆಗಸ್ಟ್ 16, ಶುಕ್ರವಾರ ಬೆಳಿಗ್ಗೆ ಗಂಟೆ 9 ರಿಂದ 11ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವೃತ ಪೂಜೆಯು ಗಾಂಧಿನಗರ ಕಲಾ ವೃಂದದ ವೇದಿಕೆಯಲ್ಲಿ ಜರಗಲಿದೆ. ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಕಲಶ ಪ್ರತಿಷ್ಠೆ, ಚೂಡಿ ಪೂಜೆ, ಕುಂಕುಮಾರ್ಚನೆ, ಭಜನಾ ಕಾರ್ಯಕ್ರಮ, ಮಂಗಳಾರತಿ ಮಹಾಪೂಜೆ, ಅನ್ನ ಸಂತರ್ಪಣೆಯು ನಡೆಯಲಿದೆ ಎಂದು ಶ್ರೀ ವಿಷ್ಣು ಕಲಾವೃಂದದ ಪ್ರಕಟಣೆ ತಿಳಿಸಿದೆ.

ಉಚ್ಚಿಲ : ಹಿಂದೂ ರಕ್ಷಾ ವೆಲ್‌ಫೇರ್ ಟ್ರಸ್ಟ್ ಮೂಳೂರು - ಮಧ್ಯರಾತ್ರಿ ಧ್ವಜಾರೋಹಣ

Thumbnail
Posted On: 15 Aug 2024, 01:23 PM

ಉಚ್ಚಿಲ : ಹಿಂದೂ ರಕ್ಷಾ ವೆಲ್‌ಫೇರ್ ಟ್ರಸ್ಟ್ ಮೂಳೂರು ವತಿಯಿಂದ 78ನೇ ಸ್ವಾತಂತ್ರ್ಯೋತ್ಸವವನ್ನು ಆಗಸ್ಟ್ 14 ರ ಮಧ್ಯರಾತ್ರಿ 12ಗಂಟೆಗೆ ಸದಸ್ಯರಾದ ಕಾರ್ತಿಕ್ ಸುವರ್ಣ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯ ದಿನ ಆಚರಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿ ಪ್ರತೀಕ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಧೀರೇಶ್ ಡಿ ಪಿ, ಸದಸ್ಯರಾದ ಸುಜಯ್ ಪೂಜಾರಿ, ಅಶೋಕ್ ಕರ್ಕೇರ ವಿಪಿನ್ ಮೊಗವೀರ, ರಾಜ್ ಪಡುಬಿದ್ರಿ, ಪ್ರಜೇಶ್, ವಿಕಾಸ್ ಪೂಜಾರಿ, ತಟಮನ್ವಿತ್ ಹವ್ಯಾಸ್ ಪೂಜಾರಿ, ಗಗನ್ ಮೆಂಡನ್ ಗುರುರಾಜ್, ತನೀಶ್ ಉಪಸ್ಥಿತರಿದ್ದರು.

ಕಾಪು : ರೋಟರಿ ಸಮುದಾಯದಳ ಇನ್ನಂಜೆ ಪದಪ್ರದಾನ

Thumbnail
Posted On: 13 Aug 2024, 10:07 PM

ಕಾಪು : ರೋಟರಿ ಸಮುದಾಯದಳ ಇನ್ನಂಜೆ ಇದರ ಪದಪ್ರದಾನ ಸಮಾರಂಭವು ರೋಟರಿ ಭವನ ಶಂಕರಪುರದಲ್ಲಿ ಜರುಗಿತು. ನೂತನ ಅಧ್ಯಕ್ಷರಾದ ಪ್ರಶಾಂತ್ ಆಚಾರ್ಯ ಮತ್ತು ನೂತನ ಕಾರ್ಯದರ್ಶಿಯಾದ ವಜ್ರೇಶ್ ಆಚಾರ್ಯ ಇವರಿಗೆ ಪದಪ್ರಧಾನವನ್ನು ರೋಟರಿ ಶಂಕರಪುರದ ಅಧ್ಯಕ್ಷರಾದ ಮಾಲಿನಿ ಶೆಟ್ಟಿ ಇವರು ನೆರವೇರಿಸಿದರು. ರೋಟರಿ ಸಮುದಾಯದಳ 3182 ರ ಜಿಲ್ಲಾ ಸಭಾಪತಿಯಾದ ಪುಂಡಲೀಕ ಮರಾಠೆ ಇವರು ಆರ್ ಸಿ ಸಿ ಬಗ್ಗೆ ಮಾಹಿತಿ ನೀಡಿದರು. ವಲಯ 5 ರ ಸಹಾಯಕ ಗವರ್ನರ್ ಅನಿಲ್ ಡೆಸಾ, ಆರ್ ಸಿ ಸಿ ಜಿಲ್ಲಾ ಪ್ರತಿನಿಧಿಯಾದ ಪ್ರಸಾದ್ ಪಾದೂರು ಉಪಸ್ಥಿತರಿದ್ದರು. ರವಿ ಪ್ರಸಾದ್ ಸ್ವಾಗತಿಸಿದರು. ಜೇಸುದಾಸ್ ಸೋನ್ಸ್ ವರದಿ ವಾಚಿಸಿದರು. ಕಾರ್ಯಕ್ರಮವನ್ನು ಚಂದ್ರ ಪೂಜಾರಿ ನಿರೂಪಿಸಿದರು.

ಆಗಸ್ಟ್ 15 : ಗ್ರಾಮೀಣ ಕಾಂಗ್ರೆಸ್ ಸಮಿತಿ ಪಡುಬಿದ್ರಿ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ

Thumbnail
Posted On: 13 Aug 2024, 10:02 PM

ಪಡುಬಿದ್ರಿ : ಗ್ರಾಮೀಣ ಕಾಂಗ್ರೆಸ್ ಸಮಿತಿ ಪಡುಬಿದ್ರಿ ವತಿಯಿಂದ ಆಗಸ್ಟ್ 15, ಗುರುವಾರ ಪೂರ್ವಾಹ್ನ 8 ಗಂಟೆಗೆ ಸರಿಯಾಗಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಪಂಡಿತ್ ತೋಮ ಪೂಜಾರಿ ಆಯುರ್ವೇದ ಸ್ಟೋರ್ ನ ಮುಂಭಾಗ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಧ್ವಜಸ್ತಂಭದಲ್ಲಿ ಮಾಜಿ ಸಚಿವ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ ಕುಮಾರ್ ಸೊರಕೆರವರ ಉಪಸ್ಥಿತಿಯಲ್ಲಿ ಜರುಗಲಿದೆ ಎಂದು ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕರುಣಾಕರ್ ಎಮ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.