Updated News From Kaup

ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳ ಇತ್ಯರ್ಥ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Posted On: 16-04-2022 07:02PM

ಉಡುಪಿ : ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ಜಿಲ್ಲೆಯ ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೆ ತೆರಳಿ, ಅವರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ತಕ್ಷಣದಲ್ಲಿ ಸ್ಪಂದಿಸಿ, ಪರಿಹಾರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ನಿರ್ದೇಶನದಂತೆ ಪ್ರತೀ ತಿಂಗಳ 3 ನೇ ಶನಿವಾರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ, ಎಲ್ಲಾ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸಾರ್ವಜನಿಕರ ಸಮಸ್ಯೆಗಳನ್ನು ಅಲಿಸಿ, ಅವುಗಳಿಗೆ ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಹಾರ ಒದಗಿಸಲಾಗುತ್ತಿದ್ದು, ಸಾರ್ವಜನಿಕರೂ ಹಲವು ವರ್ಷಗಳಿಂದ ಬಾಕಿ ಇರುವ ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದು ಸೂಕ್ತ ಪರಿಹಾರ ಪಡೆಯುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಕಾರ್ಯಕ್ರಮದಲ್ಲಿ ಮಚ್ಚಟ್ಟು ಗ್ರಾಮದಲ್ಲಿ ಈ ಹಿಂದೆ ಎರಡು ಸರ್ಕಾರಿ ಬಸ್ಗಳನ್ನು ಓಡಿಸುತ್ತಿದ್ದು, ಹಲವು ದಿನಗಳಿಂದ ಈ ಸೇವೆ ಬಂದ್ ಆಗಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದು, ಕೂಡಲೇ ಈ ಹಿಂದಿನಂತೆ ಬಸ್ಗಳನ್ನು ಓಡಿಸುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಈ ಬಗ್ಗೆ ಕೂಡಲೇ ಪರಿಶೀಲಿಸಿ, ಸಾರ್ವಜನಿಕರಿಗೆ ಸರ್ಕಾರಿ ಬಸ್ ಸೇವೆ ಒದಗಿಸುವಂತೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ತೊಂಬಟ್ಟು ಎಂಬಲ್ಲಿ ರಸ್ತೆ ಕಾಮಗಾರಿ ಅಪೂರ್ಣವಾಗಿದ್ದು, ಕೂಡಲೇ ಇದನ್ನು ಪೂರ್ಣಗೊಳಿಸುವಂತೆ ಸಾರ್ವಜನಿಕರು ಕೋರಿದರು. ಸಂಬಂಧಪಟ್ಟ ರಸ್ತೆ ನಿರ್ಮಾಣ ಮಾಡುತ್ತಿರುವ ಅನುಷ್ಠಾನ ಇಲಾಖೆಯ ಅಧಿಕಾರಿಗಳು ತಕ್ಷಣವೇ ಆ ಸ್ಥಳಕ್ಕೆ ತೆರಳಿ, ಅಲ್ಲಿನ ಸ್ಥಿತಿಗತಿ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಹಲವು ವರ್ಷಗಳಿಂದ ಕೋಟೇಶ್ವರದಲ್ಲಿ ವಾಸವಿದ್ದು, ತಮಗೆ ಚುನಾವಣಾ ಗುರುತು ಚೀಟಿ, ಆಧಾರ್ ಕಾರ್ಡ್ ಮತ್ತು ನಿವೇಶನ ಒದಗಿಸುವಂತೆ ಲಿಂಗತ್ವ ಅಲ್ಪ ಸಂಖ್ಯಾತರು ಮನವಿ ಸಲ್ಲಿಸಿದರು. ಆರ್.ಟಿ.ಸಿ ಯಲ್ಲಿನ ಬದಲಾವಣೆ ಸೇರಿದಂತೆ 30 ಕ್ಕೂ ಅಧಿಕ ಅರ್ಜಿಗಳ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಸಮಸ್ಯೆಗಳಿಗೆ ವಿಳಂಬಕ್ಕೆ ಅವಕಾಶ ನೀಡದೇ ತ್ವರಿತಗತಿಯಲ್ಲಿ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ 94 ಸಿ ಹಕ್ಕು ಪತ್ರ ವಿತರಣೆ, ಅಂಗವಿಕಲರ ಪೋಷಣಾ ಭತ್ಯೆ, ಎಂಡೋಸಲ್ಫಾನ್ ಪೀಡಿತರಿಗೆ ನೆರವು, ಅಕ್ರಮ-ಸಕ್ರಮ ಸಾಗುವಳಿ ಚೀಟಿ, ಇಂದಿರಾ ಗಾಂಧೀ ರಾಷ್ಟ್ರೀಯ ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷೆ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವತಿಯಿಂದ, ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಫಲಾನುಭವಿಗಳಿಗೆ ಉಚಿತವಾಗಿ ಅಕ್ಕಿ ವಿತರಿಸಲಾಯಿತು.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ಹಾಲಾಡಿ ಗ್ರಾ.ಪಂ.ಅಧ್ಯಕ್ಷೆ ಸಾಧು, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ಕಿರಣ್ ಗೌರಯ್ಯ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ರಾಘವೇಂದ್ರ ವಂದಿಸಿದರು.

ಇನ್ನಂಜೆ ದಾಸ ಭವನದಲ್ಲಿ ಏಪ್ರಿಲ್ 18ರಂದು ಉಚಿತ ದಂತ ಚಿಕಿತ್ಸಾ ಶಿಬಿರ

Posted On: 16-04-2022 11:58AM

ಕಾಪು : ಯುವತಿ ಮಂಡಲ (ರಿ.) ಇನ್ನಂಜೆ ಇದರ ಆಶ್ರಯದಲ್ಲಿ ಸಮುದಾಯ ದಂತ ಚಿಕಿತ್ಸಾ ವಿಭಾಗ ಮಣಿಪಾಲ ಮತ್ತು ರಾಜರಾಜೇಶ್ವರಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಇನ್ನಂಜೆ ಇದರ ಸಹಯೋಗದೊಂದಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ಏಪ್ರಿಲ್ 18, ಸೋಮವಾರ ಇನ್ನಂಜೆ ದಾಸಭವನದಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1ಗಂಟೆವರೆಗೆ ಜರಗಲಿದೆ.

ಇನ್ನಂಜೆ ಯುವತಿ ಮಂಡಲದ ಅಧ್ಯಕ್ಷರಾದ ಆಶಾ ನಾಯಕ್ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮವನ್ನು ಇನ್ನಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುರೇಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ.

ಅತಿಥಿಗಳಾಗಿ ಸಮುದಾಯ ದಂತ ಚಿಕಿತ್ಸಾ ವಿಭಾಗ ಮಣಿಪಾಲದ ಡಾ| ತ್ರಿಷಾ ಹೆಗ್ಡೆ, ಉಡುಪಿ ಜಿಲ್ಲೆಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಡಾ| ರೋಷನ್ ಕುಮಾರ್, ಇನ್ನಂಜೆ ಯುವತಿಮಂಡಲದ ಗೌರವ ಸಲಹೆಗಾರರಾದ ಶ್ವೇತ ಎಲ್ ಶೆಟ್ಟಿ, ಇನ್ನಂಜೆ ರಾಜರಾಜಶ್ವರಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಪೂರ್ಣಿಮಾ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶ್ರೀ ದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು : 23ನೇ ವಾರ್ಷಿಕೋತ್ಸವ, ಯುಗಾದಿ ಸಂಭ್ರಮ 2022, ಸಮ್ಮಾನ

Posted On: 15-04-2022 07:27PM

ಪಲಿಮಾರು : ಶ್ರೀ ದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ಇದರ 23ನೇ ವಾರ್ಷಿಕೋತ್ಸವ ಹಾಗೂ ಯುಗಾದಿ ಸಂಭ್ರಮ 2022 ಏಪ್ರಿಲ್ 13ರಂದು ಅವರಾಲು ಶ್ರೀ ಮೂಕಾಂಬಿಕ ದೇವಸ್ಥಾನದ ಬಳಿ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಗುತ್ತಿನಾರ್ ಕೃಷ್ಣ ಶೆಟ್ಟಿ ಕಂಕಣಗುತ್ತು ಮಾತನಾಡಿ ಶ್ರೀ ದೇವಿ ಫ್ರೆಂಡ್ಸ್ ಕ್ಲಬ್ ನ ಚಟುವಟಿಕೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಮುಖ್ಯ ಅಥಿತಿಯಾದ ಬೆಂಗಳೂರಿನ ಉದ್ಯಮಿ ಗಣೇಶ್ ಗುಜರನ್ ಪಡುಬಿದ್ರಿ ಸಂಘಟನೆಯ ಸಾಮಾಜಿಕ ಕಾರ್ಯಗಳಿಂದ ಸಂತಸಗೊಂಡು ಮುಂದಿನ ಸಂಸ್ಥೆಯ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಲ್ಲುವ ಭರವಸೆ ನೀಡಿದರು. ಇನ್ನೋರ್ವ ಅಥಿತಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿ ಧರ್ಮ ಜಾಗೃತಿ, ಸಂಸ್ಕ್ರತಿಯ ರಕ್ಷಣೆಯ ಸಲುವಾಗಿ ಇನ್ನಷ್ಟು ಇಂತಹ ಸಂಘಟನೆಗಳು ಬೆಳಗಿ ಬರಲಿ ಎಂದು ಹಾರೈಸಿದರು.

ಸಮ್ಮಾನ : ಸಮಾರಂಭದಲ್ಲಿ ಸ್ಪೂರ್ತಿ ವಿಶೇಷ ಶಾಲೆ ಮೂಡುಬಿದರೆ ಇದರ ಸ್ಥಾಪಕರಾದ ಪ್ರಕಾಶ್ ಜೆ ಶೆಟ್ಟಿಗಾರ್ ಹಾಗೂ ಅವರಾಲು ವೆಂಕಟರಮಣ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಸಾವಿತ್ರಿ ಇವರನ್ನು ಸಮ್ಮಾನಿಸಲಾಯಿತು. ಪಲಿಮಾರು ಗ್ರಾ. ಪಂ. ಅಧ್ಯಕ್ಷರಾದ ಗಾಯತ್ರಿ ಡಿ ಪ್ರಭು ಮಾತನಾಡಿ ಸಂಸ್ಥೆಯ ಸೇವಾ ಕಾರ್ಯಗಳಲ್ಲಿನ ಉತ್ಸಾಹ ಮತ್ತು ಸದಸ್ಯರ ಪಾಲ್ಗೊಳ್ಳುವಿಕೆಯ ಬಗ್ಗೆ ಮೆಚ್ವುಗೆ ವ್ಯಕ್ತಪಡಿಸಿದರು. ಸಭೆಯಲ್ಲಿ ಅಥಿತಿಗಳಾಗಿ ಅಭಿನಂದನ್ ಜೈನ್ ಕಾರ್ಕಳ, ರೂಪ ಬಲ್ಲಾಳ್, ಜಯರಾಮ್ ಗುರಿಕಾರ, ಉದಯ್ ಹೆಗ್ಗಡೆ, ಸುರೇಶ್ ಪೂಜಾರಿ ಹಾಗೂ ಮಾರ್ಗದರ್ಶಕರಾದ ಪ್ರದೀಪ್ ಶಾಂತಿ, ತಂಡದ ಸದಸ್ಯರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಮುನ್ನ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಪ್ರತಾಪ್ ಸುವರ್ಣ ಪ್ರಸ್ತಾವಿಸಿದರು ಹಾಗೂ ಸುದರ್ಶನ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

ಕಾಪು ಬಿಜೆಪಿ ಕಚೇರಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜನ್ಮದಿನಾಚರಣೆ

Posted On: 14-04-2022 10:07PM

ಕಾಪು : ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜನ್ಮದಿನ ಆಚರಿಸಲಾಯಿತು.

ಶಾಸಕರಾದ ಲಾಲಾಜಿ ಆರ್ ಮೆಂಡನ್, ರಾಜ್ಯ ಕಾರ್ಯಕಾರಿಣಿ‌ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ರೈತ ಮೋರ್ಚ ಅಧ್ಯಕ್ಷರಾದ ಪ್ರವೀಣ್ ಗುರ್ಮೆ, ಮಂಡಲ ಉಪಾಧ್ಯಕ್ಷರಾದ ನವೀನ್ ಎಸ್ ಕೆ, ಮಂಡಲ ರೈತಮೋರ್ಚ ಅಧ್ಯಕ್ಷರಾದ ಗುರುನಂದನ್, ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಮಂಡಲ ಕಾರ್ಯದರ್ಶಿ ಮಾಲಿನಿ ಶೆಟ್ಟಿ, ಕಾಪು ಕ್ಷೇತ್ರದ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಕಾರ್ಯಕರ್ತರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸೌರಯುಗಾದಿ : ಬಿಸು - ವಿಷು ; ಕೃಷಿಗೆ ತೊಡಗುವ ಉತ್ಸಾಹ

Posted On: 14-04-2022 09:53PM

ಅದೋ ನೋಡಿ... ಅನ್ನದಾತ 'ಪುಂಡಿಬಿತ್ತ್ ಪಾಡ್‌ಗ, ನಾಲೆರು ಮಾದಾಗ’ ಅಂದರೆ 'ಹಿಡಿ ಬೀಜ ಬಿತ್ತೋಣ, ನೇಗಿಲುಕಟ್ಟಿ ಒಂದು ಸುತ್ತು ಉಳುಮೆ ಮಾಡೋಣ'ಎನ್ನುತ್ತಾ ನೇಗಿಲನ್ನು ಹೆಗಲೇರಿಸಿ ಕೋಣ ಅಥವಾ ಎತ್ತುಗಳನ್ನು ಅಟ್ಟುತ್ತಾ ಕೃಷಿ ಕಾಯಕಕ್ಕೆ ತೊಡಗಲು ಗದ್ದೆಗೆ ಹೊರಟಿದ್ದಾನೆ. ಹೌದು... ಇದು ಸೌರ ಯುಗಾದಿಯ ದಿನದ ರೈತನ ಆದ್ಯತೆಯ ಕಾಯಕ. ಸೌರ ಪದ್ಧತಿಯನ್ನು ಅಂಗೀಕರಿಸಿದವರಿಗೆಲ್ಲ ಹೊಸ ವರ್ಷ ಆರಂಭವಾಗುವುದು ಯುಗಾದಿಯಿಂದ . ಇಗಾದಿ, ಬಿಸು,ವಿಷು ಎಂಬಿತ್ಯಾದಿ ಹೆಸರಿನಿಂದ ಆಚರಿಸುವ ಪರ್ವದಿನ ಸನ್ನಿಹಿತವಾಗುವುದು ಮೇಷ ಸಂಕ್ರಮಣದ ಮರುದಿನದಿಂದ. ತುಳುವರ ಪಗ್ಗು ತಿಂಗಳ ಮೊದಲ ದಿನ 'ಇಗಾದಿ'. ನಿಸರ್ಗದಲ್ಲಿ ನಳನಳಿಸುವ ನಾವೀನ್ಯವನ್ನು ಕಾಣುತ್ತಾ ನಲವೇರಿ ನರ್ತಿಸುತ್ತಾ ಕೃಷಿಗೆ ಗಮನ ಹರಿಸಲು ಇದೇ ಸುಮುಹೂರ್ತವೆಂದು ಕೃಷಿಕ ಪರಿವರ್ತಿತ ಪ್ರಕೃತಿಯಿಂದ ಹೊಸ ಸಂದೇಶವನ್ನು ಸ್ವೀಕರಿಸಿ ಸೌರ ಯುಗಾದಿಯಂದು ಎಚ್ಚೆತ್ತು ಕೊಂಡಂತಿದೆ. ಪರಿಸರ ಪಲ್ಲವಿಸಿದೆ. ಚೈತ್ರಮಾಸ-ವಸಂತ ಋತು, ಸೌರಮೇಷ ತಿಂಗಳು ಸನ್ನಿಹಿತವಾಗಿದೆ. ಸೂರ್ಯನಿರಲಿ, ಚಂದ್ರನಾಗಲಿ ಪ್ರಾಕೃತಿಕ ಪರಿವರ್ತನೆಗೆ ನಿಯಾಮಕರು ತಾನೆ? ಈ ಬದಲಾವಣೆಯನ್ನು ಗಮನಿಸುತ್ತಾ ಮಾನವ ಕಾಲ ನಿರ್ಣಯಿಸಿದ, ಕೃಷಿ ಸಂಸ್ಕೃತಿ ಬೆಳೆಸಿದ, ಬದುಕು ಕಟ್ಟಿದ. ಆದುದರಿಂದಲೇ ಪ್ರಾಚೀನವೆಂದು ಸ್ವೀಕರಿಸಲ್ಪಟ್ಟ ಸೌರ ಪದ್ಧತಿ ಮಾನವ ಜೀವನಕ್ಕೆ ಸಮೀಪವೆಂದು ಸ್ವೀಕಾರ. ಆದರೆ ಚಂದ್ರನನ್ನು ಬಿಟ್ಟಿಲ್ಲ, ಸೂರ‍್ಯನ ಚಲನೆಯನ್ನು ಅನುಸರಿಸುವಮ ಸೌರಮಾನಿಗಳಿಗೆ ಎರಡೂ ವಿಧಾನವೂ ಮಾನ್ಯವೆ. ಆಚರಣೆಗೆ ಮಾತ್ರ ಸೂರ‍್ಯ ಪ್ರಧಾನವಾದ ಸೌರಮಾನ ವಿಧಾನ.

ಚಿಗುರು ನೆನಪಿಸುತ್ತದೆ ! ಗಿಡ, ಮರ, ಬಳ್ಳಿಗಳೆಲ್ಲ ಚಿಗುರುವ ತಿಂಗಳು. ಚಿಗುರು ಹೊಸತನ್ನು ಸಾಂಕೇತಿಸುತ್ತದೆ. ಈ ಹೊಸತು ಪ್ರಕೃತಿಯಿಂದ ಕಂಡ ಸತ್ಯ. ಹಾಗಿದ್ದರೆ ನಿಸರ್ಗದಿಂದ ಹೊಸದಾದುದನ್ನು ಪಡೆಯಬಹುದು. ಅದಕ್ಕೆ ಪ್ರಕೃತಿಯೇ ಕ್ಷೇತ್ರ. ಈ ಕ್ಷೇತ್ರದಿಂದ ಅಥವಾ ಗದ್ದೆ, ಕೃಷಿ ಭೂಮಿಯಿಂದಲೇ ಹೊಸ ಬೆಳೆ ತೆಗೆಯಬಹುದೆಂಬ ಸತ್ಯವನ್ನು ಸ್ಮರಿಸಿಕೊಳ್ಳುವ ಕಾಲ. ಕೃಷಿಕ ಸಿದ್ಧನಾಗು, ಎನ್ನುತ್ತಾ ಅಥವಾ ಪ್ರಕೃತಿಯ ಮೂಲಕ ಘೋಷಣೆ ಮೊಳಗಿಸುತ್ತಾ ಯುಗಾದಿ ಬರುತ್ತದೆ. ವಸಂತಾಗಮನವಾಗಿದೆ. ಕೋಗಿಲೆ ಸಹಜವಾಗಿ ಕುಹು... ಕುಹು ಎಂದು ಸುಸ್ವರದಿಂದ ಹಾಡುತ್ತಿದೆ. ಹೌದು, ಇದೆಲ್ಲ, ಈ ಸೂರ್ಯೋದಯದಿಂದಲೇ ಆರಂಭವೇ? ಅಲ್ಲ. ಪ್ರತಿದಿನವೂ ದಿನಮಣಿ ದಿನದ ಯಾತ್ರೆ ಆರಂಭಿಸುತ್ತಾನೆ. ಕ್ರಮಿಸುತ್ತಾನೆ. ಆದರೆ ಸೌರಯುಗಾದಿ ಅಥವಾ ಪಗ್ಗು ತಿಂಗಳ (ಮೇಷ ಮಾಸ) ತಿಂಗೊಡೆ, ಸಿಂಗೊಡೆ ಅಥವಾ ‘ತಿಂಗಳುದ್ಯೊ’ ದಂದು ಮಾತ್ರ ಸೂರ‍್ಯ ಹನ್ನೆರಡು ರಾಶಿಗಳ ಒಂದು ಚಕ್ರದ ಯಾತ್ರೆಯನ್ನು ಮುಗಿಸಿ ಮತ್ತೆ ಪ್ರಥಮದ ಮೇಷರಾಶಿಗೆ ಪ್ರವೇಶಿಸುತ್ತಾನೆ. ಒಮ್ಮೆ ಸಮಗ್ರ ಪ್ರಾಕೃತಿಕ ಸ್ಥಿತ್ಯಂತರ, ಮಾಸಗಳ ಬದಲಾವಣೆ, ಋತುಗಳ ವೈವಿಧ್ಯ, ಮಳೆ - ಚಳಿ - ಬೇಸಗೆ ಪರಿಣಾಮ ಬೀರಿಯಾಗಿದೆ. ಮತ್ತೆ ಹೊಸತಾಗಿ ಹನ್ನೆರಡು ತಿಂಗಳ ಅನಂತರ ಹೊಸ ಆವರ್ತನಕ್ಕೆ ಸೂರ‍್ಯ ಸಿದ್ಧವಾದ ದಿನ. ಈ ಪರ್ವ ಆಚರಣೆಯ ಸಂಪ್ರದಾಯ ನಮಗೆ ಪ್ರಕೃತಿಯನ್ನೊಮ್ಮೆ ದಿಟ್ಟಿಸಿ ನೋಡುವ ಪರ್ವವಾಗುತ್ತದೆ. 'ಪಗ್ಗುಡೆ ಎರುಕಟ್ ದ್ ದತ್ತೊನುಲ, ಬಗ್ಗ್ ದ್ ನೇಜಿ ಪಾಡೊನುಲ' (ಕೋಣಕಟ್ಟಿ ಉತ್ತುಕೊ, ಬಗ್ಗಿನೇಜಿ ಹಾಕಿಕೋ) ಎಂಬ ಮಾತು ಯುಗಾದಿ ಸಂಬಂಧಿಯಾಗಿದೆ. ಈ ದಿನದಿಂದಲೇ ಕೃಷಿ ಚಟುವಟಿಕೆಗಳು ಆರಂಭ ಎನ್ನುವಂತಿವೆ. ಇವು ಯುಗಾದಿ ಆಚರಣೆಯ ಅವಿಭಾಜ್ಯ ಅಂಗ (ಕೃಷಿಕರಿಗೆ ಮಾತ್ರ), ಕೃಷಿ-ಆಚರಣೆ-ಮಾನವ ಬಹುಕು ಏಕಸೂತ್ರದಂತೆ ಪರಸ್ಪರ ಸಂಬಂಧಿಯಾಗಿ ಕಾಣುವುದಿಲ್ಲವೆ?

ಭೂದೇವಿ ಸಿದ್ಧಳಾದಳು ..... ಮಕರ ಮಾಸದಲ್ಲಿ ಭೂಮಿ ದೇವಿ ರಜಸ್ವಲೆಯಾಗುವ ಸಂದೇಶವಿರುವ ‘ಕೆಡ್ಡಸ’ (ಭೂರಜಸ್ವಲಾ ದಿನಗಳು) ಆಚರಣೆ. ಮುಂದೆ ಬೇಸಗೆಕಾಲ. ಬಳಿಕದ ಮಳೆಗಾಲಕ್ಕೆ ಮೊದಲು ಋತುಸ್ನಾತೆಯಾದ ಭೂದೇವಿಯನ್ನು ಬೆಳೆ ಬೆಳೆಯುವ ಫಲವಂತಿಕೆಯನ್ನು ನೀಡುವ ಸಲುವಾಗಿ ಸಿದ್ಧಗೊಳಿಸುವ ಪ್ರಕ್ರಿಯೆಯಾಗಿ ನಮ್ಮ ಆಚರಣೆಗಳು ನೇರ್ಪುಗೊಂಡಿವೆ ಅನ್ನಿಸುತ್ತಿದೆ. ಆದರೆ ಕೃಷಿ ಕೃಶವಾಗುತ್ತಾ ಕೃಷಿ ಭೂಮಿ ಕಣ್ಮರೆಯಾಗುತ್ತಿದೆ. ಹಾಗಾಗಿ ಉಜ್ಜಲವಾಗಿ ಬೆಳೆದ ‘ಕೃಷಿ ಸಂಸ್ಕೃತಿ’ ಉಳಿಯುತ್ತದೋ ಗೊತ್ತಿಲ್ಲ. ಅಂತಹ ವಿವರವಾದರೂ ತಿಳಿದಿರಲಿ ಎಂಬುದು ಆಶಯ. ಕಪ್ಪುಗು ಎಡ್ಡೆನಾ, ಬೊಲ್ದುಗು ಎಡ್ಡೆನಾ ? ಕೋಲ, ಬಲಿ, ಅಂಕ, ಆಯನಗಳ ಉತ್ಸಾಹ, ನಾಗ - ಬಹ್ಮಲೋಕ, ದೈವಗಳ ಸಾಮ್ರಾಜ್ಯ ಸೃಷ್ಟಿಯಾಗುತ್ತಾ ಪ್ರತಿ ರಾತ್ರಿಯೂ ದಿವ್ಯವಾಗುವ ಶ್ರಾಯ. ಇದಕ್ಕೆ ಪೂರಕವಾಗಿ ಒದಗಿ ಬಂದಿರುತ್ತದೆ ವಸಂತ ಋತುವಿನ ಬಿನ್ನಾಣ. ಈ ನಡುವೆ ಕಾಲ ನಿಯಾಮಕ ಸೂರ್ಯ ಮೇಷ ರಾಶಿ ಪ್ರವೇಶಿಸಿ ಹೊಸ ಕ್ರಮಣ ಆರಂಭಿಸುವ ಪರ್ವ ಕಾಲ ‘ಸೌರಯುಗಾದಿ’ ಸಮನಿಸುತ್ತದೆ. ಗೌಜಿ - ಗದ್ದಲಗಳಿಲ್ಲದ, ಸಂಭ್ರಮದ ವಿಧಿಯಾಚರಣೆಗಳಿಲ್ಲದ ಹಬ್ಬ. ಜಾತ್ರೆ-ನೇಮಗಳ ಸಹಿತ ಶುಭ ಶೋಭನಾದಿಗಳ ಗುಂಗಿನಿಂದ ಹೊರ ಬಂದು ಕೃಷಿಗೆ ತೊಡಗು ಎಂಬ ಆಶಯವೂ ‘ಸೌರಯುಗಾದಿ’ಯ ಆಚರಣೆಯಲ್ಲಿದೆ. ಹೊಸ ವರ್ಷಾರಂಭವಾಗಿರುವುದರಿಂದ ಶುಭ ಪ್ರತೀಕ್ಷೆಯೂ ಸೌರಯುಗಾದಿಯ ಆಶಯವಾಗಿದೆ. ಕೃಷಿ ಮತ್ತು ಮುಂದಿನ ವರ್ಷದ ಜೀವನ ನಿರಾತಂಕವಾಗಿ ನಡೆಯಲಿ ಎಂಬ ಹರಕೆಯೊಂದಿಗೆ ‘ಕಣಿ’ ದರ್ಶನ. ಈ ಮೂಲಕ ನೂತನ ವರ್ಷದ ಮೊದಲ ದಿನ ಮಂಗಲದ್ರವ್ಯಗಳನ್ನು ಹೊಂದಿರುವ ‘ಕಣಿ’ಯನ್ನು ನೋಡುವುದು ಹಲವೆಡೆ ಪ್ರಧಾನ ವಿಧಿಯಾಗಿ ನಡೆಯುತ್ತದೆ. ದೇವಾಲಯಗಳಿಗೆ ಹೋಗುವುದು, ದೈವಗಳಿಗೆ ಸೇವೆ ಸಲ್ಲಿಸುವುದು ಮುಖ್ಯ ಆಚರಣೆಯಾಗುವ ಕ್ರಮವೂ ಚಾಲ್ತಿಯಲ್ಲಿದೆ. ತುಳುನಾಡಿನ ಉದ್ದಕ್ಕೂ ವೈವಿಧ್ಯದಿಂದ ನಡೆಯುವ ‘ಇಗಾದಿ’ ಅಥವಾ ‘ಯುಗಾದಿ’ ‘ವಿಷು' ಎಂದೇ ವಿಶೇಷವಾಗಿ ‘ಬಿಸು’ವಾಗಿ ಸ್ವೀಕರಿಸಲ್ಪಟ್ಟು ನಡೆಯತ್ತದೆ. ಆದರೆ ಕೃಷಿಕನ ಲಕ್ಷ್ಯವಿರುವುದು ಮುಂದಿನ ವರ್ಷದ ಬೇಸಾಯದ ಸ್ವರೂಪ ಹೇಗಿರಬೇಕು ಎಂದು ನಿರ್ಧರಿಸುವಲ್ಲಿ. ಅದಕ್ಕಾಗಿ ಆತ ‘ಯುಗಾದಿ ಫಲ’ ಕೇಳುವಲ್ಲಿ ಆಸಕ್ತನಿರುತ್ತಾನೆ. ಈ ವರ್ಷದ ಮಳೆ ಹೇಗೆ ಎಂದು ಪಂಚಾಂಗ ವಿವರಿಸುವ ‘ಯುಗಾದಿ ಫಲ’ವು ಮಳೆಯ ಪ್ರಮಾಣವನ್ನು ತಿಳಿಸುತ್ತದೆ. ಯಾವ ಬಣ್ಣದ ಧಾನ್ಯಗಳ ಬೆಳೆ ಹುಲುಸಾಗಿ ಬೆಳೆದೀತು ಎಂಬ ಭವುಷ್ಯವನ್ನು ತಿಳಿಯುವ ಕುತೂಹಲವು ರೈತನದ್ದಾಗಿರುತ್ತದೆ. ‘ಕಪ್ಪುಗು ಎಡ್ಡೆನಾ, ಬೊಲ್ದುಗು ಎಡ್ಡೆನಾ’ (ಕಪ್ಪು ಬಣ್ಣದ ಧಾನ್ಯ ಅಥವಾ ಅಕ್ಕಿಯಾಗುವ ಭತ್ತದ ತಳಿ ಆದೀತೋ ಬಿಳಿ ಬಣ್ಣದವು ಆದೀತೊ ಅಥವಾ ಯಾವುದು ಒಳ್ಳೆಯದಾದೀತು) ಎಂಬ ನಿರ್ಧಾರಕ್ಕೆ ಬಂದು ‘ಕಜೆಬಿದೆ’ - ಕುಚ್ಲು ಅಕ್ಕಿಯ ಬೀಜ ಅಥವಾ ‘ಮಡಿಬಿದೆ - ಬೆಳ್ತಿಗೆಯ ಬೀಜವನ್ನು ‘ಕೈಬಿತ್ತ್’ ( ಸಾಂಕೇತಿಕವಾಗಿ ಗದ್ದೆ ಮೂಲೆಯಲ್ಲಿ ಒಂದು ಹಿಡಿ ಪ್ರಮಾಣದಲ್ಲಿ ಹಾಕುವುದು) ಪಾಡುನಿ ಎಂಬ ಯುಗಾದಿಯಂದು ನಡೆಸಲಾಗುವ ಕೃಷಿ ಆರಂಭದ ಪ್ರಕ್ರಿಯೆಯಲ್ಲಿ ಒಂದು ಪರಂಪರೆಯಿಂದ ಸಾಗಿ ಬಂದ ಸಂಪ್ರದಾಯವಿದೆ.

ಬುಳೆಪು ಕಾಣಿಕೆ : ಭೂ ಸುಧಾರಣೆ ಕಾನೂನು ಅನುಷ್ಠಾನದ ಪೂರ್ವದಲ್ಲಿ ‘ಬೆನ್ನಿಬುಡ್ಪುನಿ ಮತ್ತು ಮಲ್ಪುನಿ’( ಸಾಗುವಳಿ ಮಾಡುತ್ತೇನೆ ಎಂದು ತೊಡಗುವ ಅಥವಾ ಸಾಗುವಳಿ ಬಿಡುತ್ತೇನೆ ಎಂದು ಒಕ್ಕಲು ಬಿಟ್ಟುಹೋಗುವ ಕ್ರಮ) ಎಂಬ ನಿರ್ಣಯಕ್ಕೆ ಯುಗಾದಿ ನಿಗದಿತ ದಿನವಾಗಿತ್ತು. ಏಕೆಂದರೆ ಕೃಷಿ ಆರಂಭವೇ ಇಲ್ಲಿಂದ ಆಗಿರುವುದರಿಂದ ಭೂ ಒಡೆತನ ಉಳುವವನದ್ದಾಗಿರವುದರಿಂದ ಭೂ ಒಡೆಯನಿಗೆ ಮುಂದಿನ ವರ್ಷದ ಅಥವಾ ಹೊಸ ವರ್ಷದಲ್ಲಿ ಕೃಷಿ ಮುಂದುವರಿಸಲು ‘ಬುಳೆಪು ಕಾಣಿಕೆ’ ( ತರಕಾರಿ,ಹಣ್ಣುಗಳನ್ನು ಭೂಮಾಲಕನಿಗೆ ಸಾಂಕೇತಿಕವಾಗಿ ಅರ್ಪಿಸುವುದು) ಸಲ್ಲಿಸಿ ಅಪ್ಪಣೆ ಕೇಳುವ ಕ್ರಮವೂ ಮರೆತುಹೋಗಿದೆ. ಆದರೆ ಊರ ದೇವಾಲಯಕ್ಕೆ ಈ ಕಾಣಿಕೆ ಸಂದಾಯದ ಸಂಪ್ರದಾಯ ಇಂದಿಗೂ ಕೆಲವೆಡೆ ಇದ್ದಂತಿದೆ. ಮನೆಯ ಹಿರಿಯರನ್ನು ಗೌರವದಿಂದ ಕಾಣುವ ಅಂದರೆ, ಅವರಿಗೆ ನಮಸ್ಕರಿಸುವುದೂ ಸತ್‌ಸಂಪ್ರದಾಯವಾಗಿದೆ. ಮನೆಮಂದಿಗೆ ಹಾಗೂ ಪೂರ್ಣ ಕಾಲಿಕ ಕೆಲಸದವರಿಗೂ ಹೊಸಬಟ್ಟೆ ಕೊಡುವ ಕ್ರಮವು ‘ಇಗಾದಿ’ಯಂದು ನಡೆಯುತ್ತದೆ. ಇಗಾದಿಯ ಅಂಗವಾಗಿ ‘ತಾರಾಯಿ ಕುಟ್ಟುನಿ’ ( ತೆಂಗಿನಕಾಯಿಯನ್ನು ಉಪಯೋಗಿಸಿ ಆಡುವ ಆಟ) ಒಂದು ಜನಪದ ಆಟ ಆಡುವ ಕ್ರಮವಿತ್ತು. ‘ಬಿಸುತ ಕಟ್ಟ’ ಎಂಬ ಕೋಳಿ ಅಂಕವೂ ‘ಬಿಸು’ ಅಂಗವಾಗಿ ನಡೆಯುವುದಿದೆ. ಹಬ್ಬಗಳ ಆಚರಣೆಯ ಗುರಿ ‘ಆನಂದ’ವನ್ನು ಪಡೆಯುವುದು. ಆದರೆ ಯುಗಾದಿ ಸರಳ, ಭಾವನಾತ್ಮಕ ಆಚರಣೆಯಾಗಿ ನೆರವೇರುತ್ತದೆ. ಇಲ್ಲಿ ಹಳೆಯ ಕಹಿಯನ್ನು ಮರೆಯುವ, ‘ಸಿಹಿ’ಯನ್ನು ಬಯಸುವ ನಿರೀಕ್ಷೆ ಇದೆ. ಕಹಿಯಲ್ಲೂ ಸಿಹಿಯನ್ನು ಆನಂದಿಸುವ ಅಧ್ಯಾತ್ಮವಿದೆ. ಒಟ್ಟಿನಲ್ಲಿ ‘ಕರ್ತವ್ಯ’ಕ್ಕೆ ಎಚ್ಚರಿಕೆ ಇದೆ. ‘ತೊಡಗು’ ಎಂಬ ಸಂದೇಶವಿದೆ. ಅದೇನಿದ್ದರೂ ಕೃಷಿ ಆರಂಭಕ್ಕೆ ಇಗಾದಿ (ಯುಗಾದಿ ಅಥವಾ ಬಿಸು) ಎಂಬ ಅನುಸಂಧಾನವಿದ್ದಾಗ ಮಾತ್ರ. ಆದರೆ ಈ ಕಾಲದಲ್ಲೂ ‘ಇಗಾದಿ’ ನೆನಪಿದೆ, ಯುಗಾದಿ ಆಚರಿಸಲ್ಪಡುತ್ತಿದೆ, ‘ಬಿಸು ಕಣಿ’ಯ ದರ್ಶನ ಸಂಭ್ರಮದಿಂದ ನಡೆಯುತ್ತಿದೆ ಎನ್ನುವುದು ಮಾತ್ರ ಸಂತಸದ ಸಂಗತಿ. ವೈವಿಧ್ಯಮಯ ಕಲ್ಪನೆಯೊಂದಿಗೆ ಸೂಕ್ತ ಅನುಸಂಧಾನ ವಿಧಾನದಿಂದ ‘ಸೌರಯುಗಾದಿ’ ನೆರವೇರುವುದು. ಇದರ ಹಿನ್ನೆಲೆ ಕೃಷಿ ಆಧಾರಿತ ಬದುಕಿನ ನೋಟ. • ಹಳೆಯ ಕಹಿಯನ್ನು ಮರೆತು ಮುಂದೆ ಅಡಿ ಇಡುವ ಸಂಭ್ರಮದ ನಡುವೆಯೂ ‘ಬಾಗುವ’ (ನಮಸ್ಕರಿಸುವ) ಸಂದೇಶವಿದೆ. • ‘ಕಣಿ’ ಎಂಬುದು ಹಣ್ಣು, ಕಾಯಿ, ಅಕ್ಕಿ, ಕನ್ನಡಿ, ಚಿನ್ನಾಭರಣ ಇತ್ಯಾದಿ ಮಂಗಳ ದ್ರವ್ಯಗಳನ್ನು ದೇವರ ಮುಂದೆ ಜೋಡಿಸಿಟ್ಟು ಯುಗಾದಿಯಂದು ಬೆಳಗ್ಗೆ ಎದ್ದೊಡನೆ ನೋಡುವ ಮಂಗಲದ್ರವ್ಯ ದರ್ಶನ ಪ್ರಕ್ರಿಯೆ. •‘ಕಣಿ’ಯಿಂದ ಶುಭಫಲ ನಿರೀಕ್ಷೆ ಇದೆ. ‘ವಿಷು'ಎಂಬುದು ‘ಸೌರಯುಗಾದಿ’. ಇದು ತುಳುವರಲ್ಲಿ ‘ಬಿಸು’ ಆಯಿತು. ಈ ಹೆಸರಿನಲ್ಲಿ ವಿವಿಧ ಸಾಮೂಹಿಕ ಆಚರಣೆಗಳು ಇತ್ತೀಚೆಗೆ ನಡೆಯುತ್ತಿವೆ. • ಉತ್ತರದಿಂದ ದಕ್ಷಿಣ ತುಳುನಾಡಿನತ್ತ ಗಮನಿಸಿದರೆ ನಾಲ್ಕೈದು ವಿಧದ ಸೌರ ಯುಗಾದಿಯ ಆಚರಣಾ ವೈವಿಧವಿದೆ. • ಸೌರಯುಗಾದಿಯಲ್ಲಿ ಜಾನಪದ - ಶಿಷ್ಟ ಸಂಸ್ಕೃತಿಗಳ ಸುಗಮ ಸಮಾಗದ ಆಚರಣಾ ವಿಧಾನವಿದೆ. • ‘ಕಣಿ’ಯೊಂದಿಗೆ ಅಟ್ಟದ ಮೇಲಿನ ‘ತಾಳೆಗರಿ’ಯ ಗ್ರಂಥಗಳನ್ನು ಸ್ವಚ್ಛಗೊಳಿಸಿ ಇಡುವ ಕ್ರಮವಿದೆ. ಇತ್ತೀಚೆಗೆ ಪಂಚಾಂಗ (ಹೊಸ)ವನ್ನು ಇಡುವುದು ರೂಢಿಯಾಗಿದೆ. ಲೇಖನ : ಕೆ.ಎಲ್. ಕುಂಡಂತಾಯ

ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿ.ಎಂ ಮಾರ್ಗದರ್ಶಿ ಕಾರ್ಯಕ್ರಮ : ಮುಖ್ಯಮಂತ್ರಿ ಬೊಮ್ಮಾಯಿ

Posted On: 12-04-2022 06:14PM

ಉಡುಪಿ : ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದ ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗುವಂತೆ ಈ ಬಾರಿಯ ಬಜೆಟ್ನಲ್ಲಿ ಸಿಎಂ ಮಾರ್ಗದರ್ಶಿ ಎಂಬ ಯೋಜನೆ ರೂಪಿಸಿದ್ದು, ಯುವಜನತೆ ಇದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ನಗರದ ಅಜ್ಜರಕಾಡು ಪುರಭವನದ ಬಳಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿದ್ಯಾ ವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ ಕಟ್ಟಡ ಡಿಜಿಟಲ್ ಗ್ರಂಥಾಲಯ ಹಾಗೂ ಡಾ.ಬನ್ನಂಜೆ ಗೋವಿಂದಾಚಾರ್ಯರವರ ಪುತ್ಥಳಿ ಅನಾವರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಿಎಂ ಮಾರ್ಗದರ್ಶಿ ಯೋಜನೆಯ ಮೂಲಕ, ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು, ಪರೀಕ್ಷಾ ವಿಧಾನ, ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಸಾಫ್ಟ್ವೇರ್ನಲ್ಲಿ ಅಳವಡಿಸಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತು ತಮ್ಮ ಕಂಪ್ಯೂಟರ್, ಮೊಬೈಲ್, ಲ್ಯಾಪ್ ಟಾಪ್ ಮೂಲಕ ಅಧ್ಯಯನ ಮಾಡಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿದೆ ಎಂದರು. ಇಂದಿನ ಯುವ ಜನತೆಯಲ್ಲಿ ಬಹಳಷ್ಟು ವಿಚಾರಗಳ ಬಗ್ಗೆ ಸ್ಪಷ್ಟತೆ ಇದೆ. ದೇಶದ ಬಗ್ಗೆ, ನಾಡಿನ ಬಗ್ಗೆ, ಬದುಕಿನ ಬಗ್ಗೆ, ಆದರ್ಶಗಳನ್ನು ತುಂಬಿಕೊAಡಿದ್ದಾರೆ. ಯುವಕರು ತಾವು ನಂಬಿರುವ ಆದರ್ಶಗಳನ್ನು ಎಂದಿಗೂ ಕೈ ಬಿಡಬಾರದು ಅವೇ ಅವರಿಗೆ ದಾರಿದೀಪ. ನಿಮ್ಮ ಮೇಲೆ ನಂಬಿಕೆ ಇಡಿ, ಯುವಕರು ತಮ್ಮ ಅಸ್ಥಿತ್ವ ಮತ್ತು ಸಾಧನೆ ಮೇಲೆ ನಂಬಿಕೆ ಇಟ್ಟುಕೊಂಡಲ್ಲಿ ಇಡೀ ಜಗತ್ತು ಗೆಲ್ಲಬಹುದು. ಚಾರಿತ್ರö್ಯವಂತ ಸಮಾಜ ನಿರ್ಮಾಣವಾದಲ್ಲಿ ದೇಶ ಸದೃಢವಾಗಲಿದೆ. ಆದ್ದರಿಂದ ಮಹನೀಯರ ಆಚರಣೆಗಳನ್ನು ಪಾಲಿಸಬೇಕು ಎಂದರು.

ತತ್ವಜ್ಞಾನ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ವಿಶ್ವದ ಬಹಳಷ್ಟು ವಿಜ್ಞಾನಿಗಳು ತತ್ವಜ್ಞಾನದಿಂದ ಪ್ರಭಾವಿತರಾಗಿ ಸಾಧನೆಗಳನ್ನು ಮಾಡಿದ್ದಾರೆ. ತತ್ವಜ್ಞಾನದ ಮೂಲಕ ಸರಿ ತಪ್ಪುಗಳು ಚಿಂತನೆ ಮೂಡಲಿದೆ. ಉಡುಪಿಯಲ್ಲಿ ಆರಂಭಿಸಿರುವ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಗ್ರಂಥಾಲಯದಲ್ಲಿ ತತ್ವಜ್ಞಾನ ಮತ್ತು ತಂತ್ರಜ್ಞಾನವನ್ನು ಒಟ್ಟಿಗೆ ಕಲಿಯುವ ಅವಕಾಶವಿದ್ದು, ಡಿಜಿಟಲ್ ಲೈಬ್ರರಿಯಲ್ಲಿನ ಸಾಫ್ಟ್ವೇರ್ ನಿರಂತರವಾಗಿ ಅಪ್ಡೇಟ್ ಆಗುತ್ತಿರುವಂತೆ ನೋಡಿಕೊಳ್ಳುವಂತೆ ಮುಖ್ಯಮಂತ್ರಿಗಳು ಹೇಳಿದರು. ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ಶ್ರೀಪಾದರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾಪು ಶಾಸಕ ಲಾಲಾಜಿ.ಆರ್.ಮೆಂಡನ್, ವಿಧಾನಪರಿಷತ್ ಶಾಸಕ ಮಂಜುನಾಥ ಭಂಡಾರಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್ ಕಲ್ಮಾಡಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಎಸ್. ಹೊಸಮನಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಎಸ್ಪಿ ವಿಷ್ಣುವರ್ಧನ್, ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ ಎಂ, ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ, ಬನ್ನಂಜೆ ಗೋವಿಂದಾಚಾರ್ಯರ ಪುತ್ರ ವಿನಯ ಭೂಷಣ ಆಚಾರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿ.ಎಂ ಮಾರ್ಗದರ್ಶಿ ಕಾರ್ಯಕ್ರಮ : ಮುಖ್ಯಮಂತ್ರಿ ಬೊಮ್ಮಾಯಿ

Posted On: 12-04-2022 06:13PM

ಉಡುಪಿ : ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದ ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗುವಂತೆ ಈ ಬಾರಿಯ ಬಜೆಟ್ನಲ್ಲಿ ಸಿಎಂ ಮಾರ್ಗದರ್ಶಿ ಎಂಬ ಯೋಜನೆ ರೂಪಿಸಿದ್ದು, ಯುವಜನತೆ ಇದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ನಗರದ ಅಜ್ಜರಕಾಡು ಪುರಭವನದ ಬಳಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿದ್ಯಾ ವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ ಕಟ್ಟಡ ಡಿಜಿಟಲ್ ಗ್ರಂಥಾಲಯ ಹಾಗೂ ಡಾ.ಬನ್ನಂಜೆ ಗೋವಿಂದಾಚಾರ್ಯರವರ ಪುತ್ಥಳಿ ಅನಾವರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಿಎಂ ಮಾರ್ಗದರ್ಶಿ ಯೋಜನೆಯ ಮೂಲಕ, ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು, ಪರೀಕ್ಷಾ ವಿಧಾನ, ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಸಾಫ್ಟ್ವೇರ್ನಲ್ಲಿ ಅಳವಡಿಸಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತು ತಮ್ಮ ಕಂಪ್ಯೂಟರ್, ಮೊಬೈಲ್, ಲ್ಯಾಪ್ ಟಾಪ್ ಮೂಲಕ ಅಧ್ಯಯನ ಮಾಡಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿದೆ ಎಂದರು. ಇಂದಿನ ಯುವ ಜನತೆಯಲ್ಲಿ ಬಹಳಷ್ಟು ವಿಚಾರಗಳ ಬಗ್ಗೆ ಸ್ಪಷ್ಟತೆ ಇದೆ. ದೇಶದ ಬಗ್ಗೆ, ನಾಡಿನ ಬಗ್ಗೆ, ಬದುಕಿನ ಬಗ್ಗೆ, ಆದರ್ಶಗಳನ್ನು ತುಂಬಿಕೊAಡಿದ್ದಾರೆ. ಯುವಕರು ತಾವು ನಂಬಿರುವ ಆದರ್ಶಗಳನ್ನು ಎಂದಿಗೂ ಕೈ ಬಿಡಬಾರದು ಅವೇ ಅವರಿಗೆ ದಾರಿದೀಪ. ನಿಮ್ಮ ಮೇಲೆ ನಂಬಿಕೆ ಇಡಿ, ಯುವಕರು ತಮ್ಮ ಅಸ್ಥಿತ್ವ ಮತ್ತು ಸಾಧನೆ ಮೇಲೆ ನಂಬಿಕೆ ಇಟ್ಟುಕೊಂಡಲ್ಲಿ ಇಡೀ ಜಗತ್ತು ಗೆಲ್ಲಬಹುದು. ಚಾರಿತ್ರö್ಯವಂತ ಸಮಾಜ ನಿರ್ಮಾಣವಾದಲ್ಲಿ ದೇಶ ಸದೃಢವಾಗಲಿದೆ. ಆದ್ದರಿಂದ ಮಹನೀಯರ ಆಚರಣೆಗಳನ್ನು ಪಾಲಿಸಬೇಕು ಎಂದರು.

ತತ್ವಜ್ಞಾನ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ವಿಶ್ವದ ಬಹಳಷ್ಟು ವಿಜ್ಞಾನಿಗಳು ತತ್ವಜ್ಞಾನದಿಂದ ಪ್ರಭಾವಿತರಾಗಿ ಸಾಧನೆಗಳನ್ನು ಮಾಡಿದ್ದಾರೆ. ತತ್ವಜ್ಞಾನದ ಮೂಲಕ ಸರಿ ತಪ್ಪುಗಳು ಚಿಂತನೆ ಮೂಡಲಿದೆ. ಉಡುಪಿಯಲ್ಲಿ ಆರಂಭಿಸಿರುವ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಗ್ರಂಥಾಲಯದಲ್ಲಿ ತತ್ವಜ್ಞಾನ ಮತ್ತು ತಂತ್ರಜ್ಞಾನವನ್ನು ಒಟ್ಟಿಗೆ ಕಲಿಯುವ ಅವಕಾಶವಿದ್ದು, ಡಿಜಿಟಲ್ ಲೈಬ್ರರಿಯಲ್ಲಿನ ಸಾಫ್ಟ್ವೇರ್ ನಿರಂತರವಾಗಿ ಅಪ್ಡೇಟ್ ಆಗುತ್ತಿರುವಂತೆ ನೋಡಿಕೊಳ್ಳುವಂತೆ ಮುಖ್ಯಮಂತ್ರಿಗಳು ಹೇಳಿದರು. ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ಶ್ರೀಪಾದರು ದಿವ್ಯ ಸಾನಿಧ್ಯ ವಹಿಸಿ ಮಾತನ

< controls src="https://nammakaup.in/application/upload/5403" alt="" --->

ಉಡುಪಿ : ಉಚಿತ ದಂತ ಪಂಕ್ತಿ ಜೋಡಣಾ ಶಿಬಿರ

Posted On: 11-04-2022 10:55PM

ಉಡುಪಿ : ರೋಟರಿ ಕ್ಲಬ್ ಕಲ್ಯಾಣಪುರ, ಜಿಲ್ಲಾ ಆಸ್ಪತ್ರೆ ಉಡುಪಿ, ಭಾರತೀಯ ದಂತ ವೈದ್ಯಕೀಯ ಸಂಘ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಎ.ಬಿ. ಶೆಟ್ಟಿ ದಂತ ಮಹಾವಿದ್ಯಾಲಯ ಮಂಗಳೂರು ತಜ್ಙ ದಂತ ವೈದ್ಯರಿಂದ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರವನ್ನು ಉಡುಪಿಯ ಸರ್ಕಾರಿ ದಂತ ಚಿಕಿತ್ಸಾ ಆಸ್ಪತ್ರೆ ವಠಾರದಲ್ಲಿ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಯಿತು.

ಡಾಕ್ಟರ್ ನಾಗಭೂಷಣ ಉಡುಪ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಇಂತಹ ಸೇವೆಗಳು ತಾಲೂಕು ಮತ್ತು ಸಮುದಾಯ ಆಸ್ಪತ್ರೆ ಕೇಂದ್ರಗಳ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ದಾನಿಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡಲ್ಲಿ ಇನ್ನೂ ಹೆಚ್ಚು ಫಲಾನುಭವಿಗಳಿಗೆ ಸಹಾಯ ಮಾಡಲು ಪ್ರಯತ್ನಿಸುವುದಾಗಿ ನುಡಿದರು. ಡಾಕ್ಟರ್ ಬೀಸು ನಾಯ್ಕ್, ಜಿಲ್ಲಾ ದಂತ ನೋಡಲ್ ಅಧಿಕಾರಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ದಂತ ಆರೋಗ್ಯ ರಕ್ಷಣೆ ಮಹತ್ವದ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷರಾದ ಶಂಭು ಶಂಕರ್ ರವರು ಸಂದರ್ಭೋಚಿತವಾಗಿ ಮಾತನಾಡಿ ಫಲಾನುಭವಿಗಳಿಗೆ ಶುಭ ಹಾರೈಸಿದರು.

ಡಾಕ್ಟರ್ ಚೇತನ್ ಹೆಗ್ಡೆ, ಎ.ಬಿ. ಶೆಟ್ಟಿ ದಂತ ಮಹಾವಿದ್ಯಾಲಯ ಮಂಗಳೂರು ಇವರು ಮಾತನಾಡಿ 33 ವರ್ಷಗಳಿಂದ ಜನ ಸಮುದಾಯದ ಶಿಬಿರಗಳಿಗೆ ತಜ್ಞ ವೈದ್ಯಕೀಯ ತಂಡದೊಂದಿಗೆ ತೆರಳಿ ಅಗತ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವ್ರತ್ತರಾಗಿರುವ ಸಂಸ್ಥೆಯಾಗಿದ್ದು ಸದಾ ಸೇವೆಗೆ ಲಭ್ಯವಿರುವುದಾಗಿ ತಿಳಿಸಿ ಶಿಬಿರದ ಆಯೋಜಕರಿಗೆ ಶುಭ ಕೋರಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾಕ್ಟರ್ ಮಧುಸೂದನ ನಾಯಕ್ ರವರು ಶಿಬಿರಕ್ಕೆ ಅರ್ಹ ಫಲಾನುಭವಿಗಳನ್ನು ಸಂಘಟಿಸಿ , ಪ್ರಯೋಜನವನ್ನು ಪಡೆದುಕೊಳ್ಳಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಮೈಸೂರು ವಲಯದ ವಿಭಾಗೀಯ ನೋಡಲ್ ಅಧಿಕಾರಿ ಡಾಕ್ಟರ್ ಸತ್ಯ ಪ್ರಕಾಶ್, ಉಡುಪಿ ಜಿಲ್ಲಾ ಆಸ್ಪತ್ರೆಯ ಡಾಕ್ಟರ್ ಚಂದ್ರಶೇಖರ್ ಅಡಿಗ, ಡಾಕ್ಟರ್ ಸುದೇಶ್ ಕುಮಾರ್, ಭಾರತೀಯ ದಂತ ವೈದ್ಯಕೀಯ ಸಂಘ ಉಡುಪಿ ಇದರ ಅಧ್ಯಕ್ಷರಾದ ಡಾಕ್ಟರ್ ರೋಶನ್ ಶೆಟ್ಟಿ ಹಾಗೂ ಪದಾಧಿಕಾರಿಗಳು, ರೋಟರಿ ಕಾರ್ಯದರ್ಶಿ ಪ್ರಕಾಶ್ ಕುಮಾರ್ ಮತ್ತಿತರ ರೋಟರಿ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಒಂದು ದಿನದ ಈ ವಿಶೇಷ ಶಿಬಿರದಲ್ಲಿ 50 ಕ್ಕೂ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ಉಚಿತವಾಗಿ ದಂತ ಪಂಕ್ತಿ ಜೋಡಣೆ ಮಾಡುವ ಮೂಲಕ ಯಶಸ್ವಿಯಾಗಿ ನಿರ್ವಹಿಸಲಾಯಿತು.

ಇಂಡಿಯನ್ ಜರ್ನಲಿಸ್ಟ್ ಕಾಂಪೆಡಿಯಂ ದೆಹಲಿ ವತಿಯಿಂದ ಜನಸೇವಾ ಸದ್ಭಾವನ ಪುರಸ್ಕಾರ್ ರಾಷ್ಟ್ರಿಯ ಪ್ರಶಸ್ತಿಗೆ ಮೊಹಮ್ಮದ್ ಫಾರೂಕ್ ಚಂದ್ರನಗರ, ದಿವಾಕರ ಬಿ ಶೆಟ್ಟಿ ಕಳತ್ತೂರು ಆಯ್ಕೆ

Posted On: 11-04-2022 10:36PM

ಕಾಪು : ಇಂಡಿಯನ್ ಜರ್ನಲಿಸ್ಟ್ ಕಾಂಪೆಡಿಯಂ ದೆಹಲಿ ವತಿಯಿಂದ ಏಪ್ರಿಲ್ 20 ರಂದು ಗೋವಾದ ಪಂಚಾತಾರ ಹೋಟೆಲ್ ವಿವಿಟಾ ತಾಜ್ ಸಭಾಂಗಣದಲ್ಲಿ ನಡೆಯುವ ಐ.ಜೆ.ಸಿ ಹಾಗೂ ಇ.ಜೆ.ಎಸ್.ಐ ರಾಷ್ಟ್ರೀಯ ಸಮ್ಮೇಳನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಮಾಜ ಸೇವಕರಿಗೆ ಕೊಡಮಾಡುವ ಜನಸೇವಾ ಸದ್ಭಾವನ ಪುರಸ್ಕಾರ್ ರಾಷ್ಟ್ರೀಯ ಪ್ರಶಸ್ತಿಗೆ ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಮತ್ತು ದಿವಾಕರ ಬಿ ಶೆಟ್ಟಿ ಕಳತ್ತೂರು ಆಯ್ಕೆಯಾಗಿದ್ದಾರೆ ಎಂದು ಇಂಡಿಯನ್ ಜರ್ನಲಿಸ್ಟ್ ಕಾಂಪೆಡಿಯಂ ಸಂಸ್ಥೆ ಇದರ ಅಧ್ಯಕ್ಷರಾದ ಗ್ಯಾನ್ ಪ್ರಕಾಶ್ ದೆಹಲಿ ಇವರು ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದ್ದಾರೆ.

ಮೊಹಮ್ಮದ್ ಫಾರೂಕ್ ಉದ್ಯಮಿಯಾಗಿದ್ದು ಸ್ನೇಹ ಜೀವಿಯಾಗಿ ಕಾಪು ಪರಿಸರದ ಸಮಾಜ ಸೇವಕರಾಗಿ ಎಲ್ಲರ ಗಮನ ಸೆಳೆದು ನೂರಾರು ಕಡೆ ಗೌರವ ಸನ್ಮಾನ ಪಡೆದುಕೊಂಡಿರುತ್ತಾರೆ. ಈಗಾಗಲೇ ಏಶ್ಯನ್ ಫೆಸಿಫಿಕ್ ಗೋಲ್ಡ್ ಸ್ಟಾರ್ ರಾಷ್ಟ್ರಿಯ ಪ್ರಶಸ್ತಿ, ಕರ್ನಾಟಕ ಸರಕಾರ ಕೊಡಮಾಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕೇರಳ-ಕರ್ನಾಟಕ ರಾಜ್ಯದ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯ ಜಾನಪದ ಪರಿಷತ್ ಬೆಂಗಳೂರು ವತಿಯಿಂದ ಸಾಧಕ ರತ್ನ ಪ್ರಶಸ್ತಿ, ಕಾಸರಗೋಡು ಕೈರಳಿ ಪ್ರಕಾಶನ ಇವರಿಂದ ಸಮಾಜ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದಿರುತ್ತಾರೆ.

ದಿವಾಕರ ಬಿ ಶೆಟ್ಟಿ ಕಳತ್ತೂರು ಇವರು ಕಳೆದ 30 ವರ್ಷಗಳಿಂದ ಕಾಪು ಕಳತ್ತೂರು ಪರಿಸರದಲ್ಲಿ 1000 ಕ್ಕೂ ಮಿಕ್ಕಿ ಸರಕಾರಿ ಸೌಲಭ್ಯ ಜನರಿಗೆ ತಲುಪುವ ವ್ಯವಸ್ಥೆ ಮಾಡಿರುವುದಲ್ಲದೆ ನೂರಾರು ವಿದ್ಯಾರ್ಥಿಗಳಿಗೆ ವಿವಿಧ ಸಂಸ್ಥೆಗಳಿಂದ ವಿದ್ಯಾರ್ಥಿ ವೇತನ,ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿರುತ್ತಾರೆ. ವಿವಿಧ ಸಂಘಟನೆಯಿಂದ ಬಡ ಜನರಿಗೆ ಮನೆ ಕಟ್ಟುವಲ್ಲಿ ಸಹಾಯ ಮಾಡಿರುತ್ತಾರೆ. ಬಡವರ ಕಷ್ಟ ದಲ್ಲಿ ಸದಾ ಭಾಗಿಯಾಗುತ್ತಾರೆ. ಹವ್ಯಾಸಿ ಪತ್ರಕರ್ತರಾಗಿದ್ದು, ಕಾಪು ದ್ವಾದಶಿ ಪಬ್ಲಿಸಿಟಿ ನ್ಯೂಸ್ ಸರ್ವಿಸ್ ಇದರ ಆಡಳಿತ ನಿರ್ದೇಶಕರಾಗಿದ್ದು, ಗ್ರಾಮೀಣ ಮಟ್ಟದ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಸೇವೆ ನಿರ್ವಹಿಸುತ್ತಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೋವಾದ ಸಚಿವರು ಕೇಂದ್ರ ಸಚಿವರು ಹಾಗೂ ಅನೇಕ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ತಿಳಿಸಿದ್ದಾರೆ.

ವಿಶ್ವ ಹಿಂದೂ‌ ಪರಿಷದ್ ಬಜರಂಗದಳ‌ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು : ದಶಮಾನೋತ್ಸವದ ಪ್ರಯುಕ್ತ ಶ್ರೀರಾಮ ನವಮಿ ಉತ್ಸವ ; ಸಾಮೂಹಿಕ ದೀಪ ಪ್ರಜ್ವಲನೆ ; ಮಂತ್ರ ಪಠಣ

Posted On: 11-04-2022 10:14PM

ಕಾಪು : ವಿಶ್ವ ಹಿಂದೂ‌ ಪರಿಷದ್ ಬಜರಂಗದಳ‌ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ವತಿಯಿಂದ ದಶಮಾನೋತ್ಸವದ ಪ್ರಯುಕ್ತ ಶ್ರೀರಾಮ ನವಮಿ ಉತ್ಸವ ಕಾರ್ಯಕ್ರಮ ಜರಗಿತು. ವಿಶ್ವ ಹಿಂದೂ ಪರಿಷದ್ ಮಟ್ಟಾರು ಉಪಾಧ್ಯಕ್ಷ ಜಗದೀಶ ಆಚಾರ್ಯ ಸಭಾಧ್ಯಕ್ಷತೆ ವಹಿಸಿದ್ದರು.

ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಸಾದ್ ಕುತ್ಯಾರು ಧಾರ್ಮಿಕ ಪ್ರವಚನ‌ ನೀಡಿದರು. ವಿಹಿಂಪ ಕಾಪು ಪ್ರಖಂಡ ಧರ್ಮಾಚಾರ್ಯ ಪ್ರಮುಖ್ ವೇದಮೂರ್ತಿ ಪ್ರಸನ್ನ ಭಟ್, ಮಾತೃಶಕ್ತಿ ಮಟ್ಟಾರು ಇದರ ಪ್ರಮುಖ್ ಸುಲೋಚನಾ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಶ್ವ ಹಿಂದೂ ಪರಿಷದ್ ಕಾಪು ಪ್ರಖಂಡ ಅಧ್ಯಕ್ಷ ಜಯಪ್ರಕಾಶ್ ಪ್ರಭು ಪ್ರಸ್ತಾವನೆಗೈದರು. ರಂಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ಸಾಮೂಹಿಕ ದೀಪ ಪ್ರಜ್ವಲನೆಗೆ ಅಯೋಧ್ಯಾ ಕರಸೇವಕರಾದ ರಮೇಶ್ ಪ್ರಭು ಮತ್ತು ದಿನೇಶ್ ಪಾಟ್ಕರ್ ಚಾಲನೆ ನೀಡಿದರು. ನೆರೆದಿರುವ ಎಲ್ಲರೂ ಸಾಮೂಹಿಕವಾಗಿ ಶ್ರೀರಾಮ ತಾರಕ ಮಂತ್ರ ಪಠಣ ಮಾಡಿದರು.