Updated News From Kaup

ಪ್ರಕಟನೆ - ವ್ಯಕ್ತಿ ಕಾಣೆಯಾಗಿದ್ದಾರೆ

Thumbnail
Posted On: 14 Sep 2021, 09:48 AM

ಕಾಪು : ನಿಟ್ಟೆ ಗ್ರಾಮದ 65 ವರ್ಷ ಪ್ರಾಯದ ಶಾಮ ಕೋಟ್ಯಾನ್ ಕಾಣೆಯಾಗಿದ್ದಾರೆ. ಬೆಳಿಗ್ಗೆ 6 ಗಂಟೆಗೆ ಹೊರಟಿದ್ದು, ಕ್ರೀಮ್ ಕಲರ್ ಶರ್ಟ್, ಕಪ್ಪು ಲುಂಗಿ, ಮುಖ ಬಣ್ಣ ಕಪ್ಪು, ಹಣೆಯಲ್ಲಿ ಚುಕ್ಕೆಯಿದ್ದು, ಇವರು ತುಳು, ಕನ್ನಡ, ಹಿಂದಿ ಭಾಷೆ ಬಲ್ಲವರಾಗಿದ್ದಾರೆ‌. ಕಂಡವರು ಕೂಡಲೇ ಸಂಪರ್ಕಿಸಿ : Mo number : 9768219432 Sunil Poojary: 7977228500 ವಿಳಾಸ : ಅಖಿಲ ನಿವಾಸ ಮಜಲು ಮನೆ ನಿಟ್ಟೆ ಗ್ರಾಮ ಕಾರ್ಕಳ ತಾಲೂಕು

ವಿವಿಧ ಬೇಡಿಕೆಗಳ ಈಡೇರಿಕೆಗೆ ಸ್ವಿಗ್ಗಿ ಆಹಾರ ಪೂರೈಕೆ ನೌಕರರ ಪ್ರತಿಭಟನೆ

Thumbnail
Posted On: 13 Sep 2021, 05:54 PM

ಉಡುಪಿ : ಆಹಾರ ಡೆಲಿವರಿ ಸಂಸ್ಥೆಯಾದ ಸ್ವಿಗ್ಗಿಯ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದು ಇಂದ್ರಾಳಿಯ ಸ್ವಿಗ್ಗಿ ಸಂಸ್ಥೆಯ ಬಳಿ ಪ್ರತಿಭಟಿಸಿದರು. ತಮ್ಮ ಬೇಡಿಕೆಗಳಾದ ದೈನಂದಿನ ಪ್ರೋತ್ಸಾಹಧನ ಹೆಚ್ಚಳ, ಸಾಪ್ತಾಹಿಕ ಪ್ರೋತ್ಸಾಹಧನ ಹೆಚ್ಚಳ, ನಕಲಿ ಜಿಪಿಎಸ್ ಸ್ಥಳವನ್ನು ಸರಿಪಡಿಸಿ, ಗ್ರಾಹಕರ ರೇಟಿಂಗ್‌ಗಳ ಆಧಾರದ ಮೇಲೆ ನೀಡುವ ಪ್ರೋತ್ಸಾಹವನ್ನು ತೆಗೆದುಹಾಕಿ, ದೈನಂದಿನ ಪ್ರೋತ್ಸಾಹಕ್ಕಾಗಿ ಗುರಿಯನ್ನು ಸಾಧಿಸಲು ಯಾವುದೇ ಸಮಯದ ಮಿತಿಯಿಲ್ಲ, ಫ್ಲೋಟಿಂಗ್ ನಗದು ಮಿತಿ ಹೆಚ್ಚಳ ಇತ್ಯಾದಿ 13 ಬೇಡಿಕೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿದ್ದಾರೆ.

ಎರ್ಮಾಳು : ಸಾಮೂಹಿಕ ಹೂವಿನ ಪೂಜೆ

Thumbnail
Posted On: 13 Sep 2021, 04:30 PM

ಪಡುಬಿದ್ರಿ : ಸಂದು ದಾಂತಿ ಗರೋಡಿ ಎಂದು ಐತಿಹ್ಯವುಳ್ಳ ಎರ್ಮಾಳು ತೆಂಕ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಸಾಮೂಹಿಕ ಹೂವಿನ ಪೂಜೆಯು ಇಂದು ನೆರವೇರಿತು.

ಇನ್ನಂಜೆ : ಯುವಕ ಮಂಡಲದ 2021 -22 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

Thumbnail
Posted On: 13 Sep 2021, 04:22 PM

ಕಾಪು : ಕಾಪು ತಾಲೂಕಿನ ಇನ್ನಂಜೆ ಯುವಕ ಮಂಡಲದ 2021 -22 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ಇನ್ನಂಜೆ ಯುವಕ ಮಂಡಲದ ಅಧ್ಯಕ್ಷರಾದ ದಿವೇಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಇನ್ನಂಜೆ ಶಾಲಾ ದಾಸ ಭವನದಲ್ಲಿ ಜರಗಿತು. ಪದಪ್ರಧಾನ ಸಮಾರಂಭವನ್ನು ಡಾ. ರಮೇಶ್ ಮಿತ್ತಂತಾಯ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ, S V H ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ನಂದನ್ ಕುಮಾರ್, ಇನ್ನಂಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಮಲ್ಲಿಕ ಆಚಾರ್ಯ, ಇನ್ನಂಜೆ ಗ್ರಾಮಪಂಚಾಯತ್ ನ ಮಾಜಿ ಅಧ್ಯಕ್ಷರಾದ ರವಿವರ್ಮ ಶೆಟ್ಟಿ ಇನ್ನಂಜೆ, ಯುವಕ ಮಂಡಲದ ಸಲಹಾ ಸಮಿತಿಯ ಸದಸ್ಯರಾದ ಶ್ರೀಶ ಭಟ್ ಮೊದಲಾದವರು ಉಪಸ್ಥಿತರಿದ್ದರು. ನೂತನ ಅಧ್ಯಕ್ಷ ಉಮೇಶ್ ಆಚಾರ್ಯರಿಗೆ ನಿರ್ಗಮನ ಅಧ್ಯಕ್ಷರಾದ ದಿವೇಶ್ ಶೆಟ್ಟಿ ಇವರು ಅಧಿಕಾರ ಹಸ್ತಾಂತರ ಮಾಡಿದರು. ಎಲ್ಲ ನೂತನ ಪದಾಧಿಕಾರಿಗಳಿಗೆ ಸಭೆಯಲ್ಲಿ ಯು. ನಂದನ್ ಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು. ಸಂಘದ ಕಾರ್ಯದರ್ಶಿ ತರುಣ್ ಕುಮಾರ್ ಇವರು 2020-21 ನೇ ಸಾಲಿನ ವರದಿಯನ್ನು ಮಂಡಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಮಧುಸೂದನ ಆಚಾರ್ಯ ಇವರು ಕಾರ್ಯಕ್ರಮ ನಿರೂಪಿಸಿ, ನೂತನ ಕಾರ್ಯದರ್ಶಿ ಹರೀಶ್ ಪೂಜಾರಿ ವಂದಿಸಿದರು.

ಶಿರಿಯಾರ : ರೋಟರಿ ಕ್ಲಬ್ ವತಿಯಿಂದ ಸೋಲಾರ್ ಲೈಟ್ ಸೆಟ್ ಕೊಡುಗೆ

Thumbnail
Posted On: 13 Sep 2021, 10:33 AM

ಉಡುಪಿ : ರೋಟರಿ ಕ್ಲಬ್ ಸೈಬರಕಟ್ಟೆ (RI ಜಿಲ್ಲೆ 3182) ಮತ್ತು ರೋಟರಿ ಕ್ಲಬ್ ಸ್ಮಾರ್ಟ್ ಹೈದರ್ಬಾದ್ (RI Dist 3150) ಜಂಟಿ ಕ್ಲಬ್ ಅಂತರ ಜಿಲ್ಲಾ ಕಾರ್ಯಕ್ರಮದ ಅಡಿಯಲ್ಲಿ ರೋಟರಿ ಯೋಜನೆ "ರೋಶ್ನಿ" 3 ಬಲ್ಬ್ ನ ಸೋಲಾರ್ ಲೈಟ್ ಸೆಟ್ ನ್ನು ಪಡುಮುಂಡ್ ಶಿರಿಯಾರ ಗ್ರಾಮದಲ್ಲಿ ವೇದಾವತಿ ಎನ್ನುವ ಬಡ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಬ್ರಾನ್ ಡಿ ಸೋಜಾ, ವಿಜಯಕುಮಾರ್ ಶೆಟ್ಟಿ, ಸೈಬರಕಟ್ಟೆ ಅಧ್ಯಕ್ಷ ಯು. ಪ್ರಸಾದ್ ಭಟ್, ಕಾರ್ಯದರ್ಶಿ ಅಣ್ಣಯ್ಯದಾಸ್, ಶಿರಿಯಾರ್ ಪಂಚಾಯತ್ PDO ಸತೀಶ್ ಮತ್ತು ಸೈಬರಕಟ್ಟೆ ಸದಸ್ಯರು ಮತ್ತು ಸಾರ್ವಜನಿಕರು ಭಾಗಿಯಾಗಿದ್ದರು.

ರೋಟರಿ ಕ್ಲಬ್ ಸೈಬರಕಟ್ಟೆಯಿಂದ ಹೌರಾಲ್ ಶ್ರೀ ಮಹಾಲಿಂಗೇಶ್ವರ ದೇವಳದ ಬೀದಿಗೆ ಸೌರವಿದ್ಯುತ್ ದಾರಿ ದೀಪ ಅಳವಡಿಕೆ

Thumbnail
Posted On: 12 Sep 2021, 08:13 PM

ಉಡುಪಿ : ರೋಟರಿ ಕ್ಲಬ್ ಸೈಬರಕಟ್ಟೆಯಿಂದ ಹೌರಾಲ್ ಶ್ರೀ ಮಹಾಲಿಂಗೇಶ್ವರ ದೇವಳದ ಬೀದಿ ಯಲ್ಲಿ ರಾತ್ರಿ ಭಕ್ತರಿಗೆ ಬೆಳಕಿನ ಅನುಕೂಲತೆ ಮನಗಂಡು ಸೌರವಿದ್ಯುತ್ ದಾರಿ ದೀಪ ಅಳವಡಿಸಲಾಯಿತು. ಅದರ ಉದ್ಘಾಟನೆಯನ್ನು ವಲಯ 3 ರ ಸಹಾಯಕ ಗವರ್ನರ್ ಕೆ. ಪದ್ಮನಾಭ್ ಕಾಂಚನ್ ನೆರವೇರಿಸಿದರು. ಈ ಸಂದರ್ಭ ರೋಟರಿ ಅಧ್ಯಕ್ಷ ಯು. ಪ್ರಸಾದ್ ಭಟ್, ವಲಯ ಸೇನಾನಿ ವಿಜಯಕುಮಾರ್ ಶೆಟ್ಟಿ, ಕಾರ್ಯದರ್ಶಿ ಅಣ್ಣಯ್ಯ ದಾಸ್, ದೇವಸ್ಥಾನದ ಮೊಕ್ತೇಸರ ಉದಯಕುಮಾರ್ ಶೆಟ್ಟಿ, ಆಡಳಿತ ಸದಸ್ಯರು, ಸಾರ್ವಜನಿಕರು ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು. ರೋಟರಿ ಸದಸ್ಯ ನೀಲಕಂಠ ರಾವ್ ಮನೆಯಲ್ಲಿ ಹೊರಾಂಗಣ ವಾರದ ಸಭೆ ಕೂಡ ಉಪಹಾರದ ಫೆಲೋಶಿಪ್ ನೊಂದಿಗೆ ನಡೆಸಲಾಯಿತು.

ಇನ್ನಂಜೆ ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಉಮೇಶ್ ಆಚಾರ್ಯ

Thumbnail
Posted On: 12 Sep 2021, 10:26 AM

ಕಾಪು : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಯುವಕ ಮಂಡಲ (ರಿ.) ಇನ್ನಂಜೆಯ ನೂತನ ಅಧ್ಯಕ್ಷರಾಗಿ ಉಮೇಶ್ ಆಚಾರ್ಯ ಮತ್ತು ಕಾರ್ಯದರ್ಶಿಯಾಗಿ ಹರೀಶ್ ಪೂಜಾರಿ ಆಯ್ಕೆಯಾಗಿದ್ದಾರೆ.

ಶಿರ್ವ ಸಂತ ಮೇರಿ ಮಹಾವಿದ್ಯಾಲಯ ಫಿಟ್ ಇಂಡಿಯಾ ಫ್ರೀಡಂ ಓಟ - ಅಭಿಯಾನ

Thumbnail
Posted On: 11 Sep 2021, 12:27 PM

ಶಿರ್ವ: ಸದೃಢ ಭಾರತ ಕಾರ್ಯಕ್ರಮವು ದೇಶದಲ್ಲಿ ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆ, ಕ್ರೀಡೆಯಲ್ಲಿ ತೊಡಗಿಸಿಕೊಂಡು ಆರೋಗ್ಯವಂತರಾಗಬೇಕು ಎಂಬುದು ಈ ಅಭಿಯಾನದ ಮೂಲ ಉದ್ದೇಶ. ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲು, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ವತಿಯಿಂದ ಫಿಟ್ ಇಂಡಿಯಾ ಫ್ರೀಡಮ್ ರನ್ 2.0 ರ ಅಭಿಯಾನಕ್ಕೆ ರಾಷ್ಟ್ರವ್ಯಾಪಿ ಚಾಲನೆ ನೀಡಿದ್ದಾರೆ. ಯುವ ಜನಾಂಗ ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳದೇ ಇರುವ ಕಾರಣ ವಿವಿಧ ಕಾಯಿಲೆಗೆ ತುತ್ತಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ದೇಶವನ್ನು ಉತ್ತಮ ಆರೋಗ್ಯದತ್ತ ಕೊಂಡೊಯ್ಯಲು ಈ ಅಭಿಯಾನ ಇಂದಿನ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಅಕ್ಟೋಬರ್ 2 ರವರೆಗೆ, ಪ್ರತಿ ಜಿಲ್ಲೆ ಮತ್ತು ಪ್ರತಿ ಹಳ್ಳಿಯ ಜನರು ಈ ಚಳವಳಿಯಲ್ಲಿ ಭಾಗವಹಿಸುತ್ತಾರೆ. ಪ್ರತಿಮನೆಯ ನಾಗರಿಕರನ್ನು ಸದೃಢವಾಗಿಡಲು 'ಆರೋಗ್ಯವೇ ಭಾಗ್ಯ' ಮಂತ್ರವನ್ನು ಸದಸ್ಯರು ತಪ್ಪದೇ ಪಾಲಿಸಿ, ದೈಹಿಕ ಚಟುವಟಿಕೆಯ ಮೂಲಕ ಯುವಕರು ಜನಾಂದೋಲನ ಮಾಡಬೇಕೆಂದು ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಹೇಳಿದರು. ಅವರು ಸೆಪ್ಟಂಬರ್ 11ರಂದು ಶಿರ್ವ ಸಂತ ಮೇರಿ ಮಹಾವಿದ್ಯಾಲಯ ಎನ್.ಸಿ.ಸಿ ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಉಡುಪಿ ಜಂಟಿಯಾಗಿ ಏರ್ಪಡಿಸಿದ್ದ ಫಿಟ್ ಇಂಡಿಯ ಫ್ರೀಡಂ ಓಟ ಅಭಿಯಾನದಲ್ಲಿ ಭಾಗವಹಿಸಿ,ಪ್ರತಿಜ್ಞಾವಿಧಾನವನ್ನು ಭೋಧಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಫಿಟ್ ಇಂಡಿಯಾ ಫ್ರೀಡಂ ರನ್ 2.0 ನ ಪ್ರಮುಖ ಚಟುವಟಿಕೆಗಳಲ್ಲಿ ಪ್ರತಿಜ್ಞೆ, ರಾಷ್ಟ್ರಗೀತೆ, ಸ್ವಾತಂತ್ರ್ಯದ ಓಟ, ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಯುವ ಸ್ವಯಂಸೇವಕರಲ್ಲಿ ಜಾಗೃತಿ ಮತ್ತು ಅವರ ಗ್ರಾಮಗಳಲ್ಲಿ ಇದೇ ರೀತಿಯ ಸ್ವಾತಂತ್ರ್ಯದ ಓಟಗಳನ್ನು ಆಯೋಜಿಸುವುದು. ಭಾರತ ಸೇನೆಯ ಶೌರ್ಯ ಪರಾಕ್ರಮರಾದ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ವೀರ ಮರಣ ಹೊಂದಿರುವ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಪರಮವೀರಚಕ್ರ ಅವರ ಸ್ಮರಣಾರ್ಥ ಈ ಓಟದ ಅಭಿಯಾನವನ್ನು ಆಯೋಜಿಸಲಾಯಿತು ಎಂದು ಕಂಪನಿ ಕ್ವಾರ್ಟರ್ ಮಾಸ್ಟರ್ ರೈನ್ ಅಂದ್ರಾದೆ, ಕಾರ್ಯಕ್ರಮದ ಮುಖ್ಯ ಉದ್ದೇಶ ಮತ್ತು ಮಹತ್ವವನ್ನು ತಿಳಿಸಿದರು.ಬಳಿಕ ಕಾಲೇಜಿನಿಂದ ಹೊರಟ ಈ ಓಟ ಶಿರ್ವ ಕಾಪು ರಸ್ತೆಯ ಸುಮಾರು ಎರಡು ಕಿಲೋಮೀಟರ್ ಸಾಗಿದೆ ಹಾಗೂ 28 ಕ್ಯಾಡೆಟ್ ಗಳು ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಶ್ರೀ ಕೆ.ಪ್ರವೀಣ್‌ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ಸಂಯೋಜಿಸಿದರು. ಕಂಪನಿ ಸಾರ್ಜೆಂಟ್ ಚನ್ನಬಸವಯ್ಯ,ಎಲ್ಲಾ ಕೆಡೆಟ್ ಗಳು,ಕಾಲೇಜಿನ ವಿದ್ಯಾರ್ಥಿಗಳು,ಎಲ್ಲಾ ಭೋಧಕ ಹಾಗು ಭೋಧಕೇತರ ವೃಂದದವರು ಉಪಸ್ಥಿತರಿದ್ದರು.ಎನ್.ಸಿ.ಸಿ ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ಭಟ್ ರಾಮದಾಸ್ ಸತೀಶ್ ಸ್ವಾಗತಿಸಿ ಕ್ಯಾಡೆಟ್ ಜೂನಿಯರ್ ಅಂಡರ್ ಆಫೀಸರ್ ರಿಯಾನ್ ರಿಷಿ ಆಲ್ಫೋನ್ಸೋ ವಂದಿಸಿದರು.

ಸೆಪ್ಟೆಂಬರ್ 12 : ಇನ್ನಂಜೆ ಯುವಕ ಮಂಡಲದ ನೂತನ ಪದಾಧಿಕಾರಿಗಳ ಪದ ಪ್ರಧಾನ

Thumbnail
Posted On: 11 Sep 2021, 12:16 PM

ಕಾಪು : ಇನ್ನಂಜೆ ಯುವಕ ಮಂಡಲದ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ಇನ್ನಂಜೆಯ ದಾಸ ಭವನದಲ್ಲಿ ಆದಿತ್ಯವಾರ (ಸೆಪ್ಟೆಂಬರ್ 12) ಬೆಳಿಗ್ಗೆ 10:30ಕ್ಕೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ನಿಟ್ಟೆ ಎಜುಕೇಶನ್ ಟ್ರಸ್ಟ್ ನಿವೃತ್ತ ಉಪಪ್ರಾಂಶುಪಾಲರಾದ ಡಾ| ರಮೇಶ್ ಮಿತ್ತಂತ್ತಾಯ, ಇನ್ನಂಜೆ ಎಸ್.ವಿ.ಹೆಚ್, ಪ.ಪೂ. ಕಾಲೇಜು ನಿವೃತ್ತ ಉಪನ್ಯಾಸಕರಾದ ನಂದನ್ ಕುಮಾರ್, ಇನ್ನಂಜೆ ಯುವಕ ಮಂಡಲದ ಗೌರವ ಸಲಹೆಗಾರಾದ ಚಂದ್ರಹಾಸ ಗುರುಸ್ವಾಮಿ, ನವೀನ್ ಅಮೀನ್, ಇನ್ನಂಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರವಿವರ್ಮ ಶೆಟ್ಟಿ, ಇನ್ನಂಜೆ ಯುವಕ ಮಂಡಲದ ಸಲಹಾ ಸಮಿತಿ ಸದಸ್ಯರಾದ ಶ್ರೀಶ ಭಟ್‌, ಸುರೇಶ್‌ ಎನ್‌. ಪೂಜಾರಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಇನ್ನಂಜೆ ಯುವಕ ಮಂಡಲದ ಅಧ್ಯಕ್ಷರಾದ ದಿವೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ಗಣೇಶ ಚತುರ್ಥಿ ಆಚರಣೆ

Thumbnail
Posted On: 11 Sep 2021, 10:11 AM

ಪಡುಬಿದ್ರಿ : ಧರ್ಮ ಮೀರಿ ಸೌಹಾರ್ದದತೆಯಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಅಂತಹ ಕಾರ್ಯವನ್ನು ಪಡುಬಿದ್ರಿ ರೋಟರಿ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ. ಮಾನವೀಯತೆ ಹಾಗೂ ಮನುಷ್ಯತ್ವದ ಸೇವೆಯಲ್ಲಿ ಭಗವಂತನನ್ನು ಕಾಣಬಹುದು. ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಮಾಡಿದ‌ ಕಾರ್ಯ ನಿರ್ವಿಘ್ನ ವಾಗಿ ನಡೆಯುವುದು ಎಂದು ರಾಜ ಪುರೋಹಿತರಾದ ನಂದ‌ ಕುಮಾರ್ ರವರು ಹೇಳಿದರು. ಅವರು ಪಡುಬಿದ್ರಿ ರೋಟರಿ ಕ್ಲಬ್ ಇದರ ವತಿಯಿಂದ ರೋಟರಿ ಕಛೇರಿಯಲ್ಲಿ ನಡೆದ ಗಣೇಶ ಚತುರ್ಥಿ ಆಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪಡುಬಿದ್ರಿ ರೋಟರಿ ಅಧ್ಯಕ್ಷ ಮಹಮ್ಮದ್ ನಿಯಾಜ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ರೋಟರಿ ವಲಯ ಸಂಯೋಜಕ ರಮೀಜ್ ಹುಸೇನ್ ,‌ ರೋಟರಿ ಪೂರ್ವ ಅಧ್ಯಕ್ಷ ರಿಯಾಜ್ ಮುದರಂಗಡಿ, ನಿಯೋಜಿತ ಅಧ್ಯಕ್ಷತೆ ಗೀತಾ ಅರುಣ್, ನಿಯೋಜಿತ ಕಾರ್ಯದರ್ಶಿ ತಸ್ನೀನ್ ಅರ್ಹ ಉಪಾಧ್ಯಕ್ಷ ‌ಸಂತೋಷ್ ಪಡುಬಿದ್ರಿ, ಕೋಶಾಧಿಕಾರಿ ಪುಷ್ಪಲತಾ ಆಚಾರ್ಯ ಉಪಸ್ಥಿತರಿದ್ದರು. ಮಹಮ್ಮದ್ ನಿಯಾಜ್ ಸ್ವಾಗತಿಸಿ, ಸುಧಾಕರ್ ಕೆ. ನಿರೂಪಿಸಿ, ಕಾರ್ಯದರ್ಶಿ ಬಿ. ಯಸ್. ಆಚಾರ್ಯ ವಂದಿಸಿದರು.