Updated News From Kaup
ಏಪ್ರಿಲ್ 3 : ಇನ್ನಂಜೆಯ ವಿಠೋಭ ಭಜನಾ ಮಂಡಳಿ ವಾರ್ಷಿಕ ವರ್ಧಂತ್ಯೋತ್ಸವ, ಆಶ್ಲೇಷಾ ಬಲಿ, ಭಜನಾ ಮಂಗಳೋತ್ಸವ

Posted On: 02-04-2021 05:36PM
ಕಾಪು : ಇನ್ನಂಜೆ ಗೋಳಿಕಟ್ಟೆಯ ಶ್ರೀ ವಿಠೋಭ ಭಜನಾ ಮಂಡಳಿ (ರಿ.) ಇದರ ವಾರ್ಷಿಕ ವರ್ಧಂತ್ಯೋತ್ಸವ, ಆಶ್ಲೇಷಾ ಬಲಿ, ಭಜನಾ ಮಂಗಳೋತ್ಸವ ಮತ್ತು ಅನ್ನಸಂತರ್ಪಣೆಯು ಏಪ್ರಿಲ್ 3, ಶನಿವಾರ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತರಾದ ಸೆನ್ ಅಪರಾಧ ಪೋಲಿಸ್ ಠಾಣೆ ಉಡುಪಿಯ ರಾಮಚಂದ್ರ ನಾಯಕ್

Posted On: 02-04-2021 04:43PM
ಕಾಪು : ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಸೆನ್ ಅಪರಾಧ ಪೊಲೀಸ್ ಠಾಣೆ ಉಡುಪಿಯ ಪೊಲೀಸ್ ನಿರೀಕ್ಷಕರಾಗಿರುವ ರಾಮಚಂದ್ರ ನಾಯಕ್ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತರಾಗಿದ್ದಾರೆ.

ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ಹಲವಾರು ಅಪರಾಧ ಕೃತ್ಯಗಳನ್ನು ಭೇದಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ ಹೆಗ್ಗಳಿಕೆ ಇವರದು.
ಬ್ರಹ್ಮಾವರ ತಾಲೂಕಿನ ಬಾರಕೂರಿನ ನಿವಾಸಿಯಾಗಿರುವ ಇವರು 1993 ಕೆಲಸಕ್ಕೆ ಸೇರಿ, 2003ರಲ್ಲಿ ಪೊಲೀಸ್ ಉಪ ನಿರೀಕ್ಷಕರಾಗಿ, 2011ರಲ್ಲಿ ಪೊಲೀಸ್ ನಿರೀಕ್ಷಕರಾಗಿ ಶಿವಮೊಗ್ಗ, ಮೂಡಬಿದ್ರೆ, ಮುಲ್ಕಿ ಪೊಲೀಸ್ ಠಾಣೆಯಲ್ಲಿ ಮತ್ತು ಕಾರವಾರ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಾರೆ.
ಪಡುಬಿದ್ರಿ : ಕೊರೊನಾ ತಡೆಗೆ ಉಚಿತ ಲಸಿಕೆ ನೀಡುವ ಕಾರ್ಯಕ್ರಮ

Posted On: 02-04-2021 03:49PM
ಕಾಪು : ಪ್ರಾಥಮಿಕ ಆರೋಗ್ಯ ಕೇಂದ್ರ ಪಡುಬಿದ್ರಿ, ಗ್ರಾಮ ಪಂಚಾಯತ್ ಪಡುಬಿದ್ರಿ, ನವಶಕ್ತಿ ಮಹಿಳಾ ಮಂಡಳಿ ಮತ್ತು ಭಜನಾ ಮಂಡಳಿ ಪಡುಬಿದ್ರಿ, ನವಶಕ್ತಿ ವಿಮೆನ್ಸ್ ವೆಲ್ಫೇರ್ ಸೊಸೈಟಿ (ರಿ.) ಪಡುಬಿದ್ರಿ ಸಂಯುಕ್ತ ಆಶ್ರಯದಲ್ಲಿ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಏಪ್ರಿಲ್ 5, ಸೋಮವಾರ ಪಡುಬಿದ್ರಿ ಗಣಪತಿ ಪ್ರೌಢಶಾಲೆಯಲ್ಲಿ 9.30 ರಿಂದ ಮಧ್ಯಾಹ್ನ 1ರವರೆಗೆ ಕೊರೊನಾ ತಡೆಗೆ ಲಸಿಕೆಯೇ ಶ್ರೀರಕ್ಷೆ ಅಭಿಯಾನದನ್ವಯ ಉಚಿತ ಲಸಿಕೆ ನೀಡುವ ಕಾರ್ಯಕ್ರಮ ಜರಗಲಿದೆ.
ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು, ಆಸಕ್ತರು ಬರುವಾಗ ಕಡ್ಡಾಯವಾಗಿ ಆಧಾರ್ ಕಾಡ್೯ ತರಬೇಕು ಹಾಗೂ ಮೊಬೈಲ್ ನಂಬರ್ ನೀಡಬೇಕು, 28 ದಿನಗಳ ಬಳಿಕ ಎರಡನೆಯ ಹಂತದ ಲಸಿಕೆಯನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಏಪ್ರಿಲ್ 4 ರಂದು ಬಲೆ ತುಲು ಲಿಪಿ ಕಲ್ಪುಗ ಶಿಬಿರ

Posted On: 02-04-2021 03:28PM
ಕಾಪು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್ (ರಿ.), ಜೇಸಿಐ ಕಾಪು, ಯುವವಾಹಿನಿ (ರಿ.) ಕಾಪು ಘಟಕ, ನಮ್ಮ ಕಾಪು ನ್ಯೂಸ್ ಸಂಯುಕ್ತ ಆಶ್ರಯದಲ್ಲಿ ಉಚಿತವಾಗಿ ಬಲೆ ತುಲು ಲಿಪಿ ಕಲ್ಪುಗ ಶಿಬಿರವು ಏಪ್ರಿಲ್ 4, ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಕಾಪು ಸಿ.ಎ ಬ್ಯಾಂಕ್ ಕನ್ನಡ ಭಾಸ್ಕರ ಸೌಧ ಸಭಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮವನ್ನು ಕಾಪು ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ಕಾಪು ಇದರ ಅಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಆಕಾಶ್ ರಾಜ್ ಜೈನ್ ಮತ್ತು ತಾರಾ ಉಮೇಶ್ ಆಚಾರ್ಯ, ಜೇಸಿಐ ವಲಯ 15ರ ಉಪಾಧ್ಯಕ್ಷರಾದ ಜೇಸಿ ಗಿರೀಶ್ ಎಸ್. ಪಿ, ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಉಪಾಧ್ಯಕ್ಷರಾದ ಉದಯ ಅಮೀನ್ ಮಟ್ಟು ಭಾಗವಹಿಸಲಿದ್ದಾರೆ.
ತುಳು ಶಿಕ್ಷಕರಾದ ರಾಜೇಶ್ ತುಳುವೆ, ಅಕ್ಷತಾ ಕುಲಾಲ್, ಪೂರ್ಣಿಮಾ ದಕ್ಷ, ನೀತಾ ಕೆಮ್ತೂರು ಮಾರ್ಗದರ್ಶನದಲ್ಲಿ ಏಪ್ರಿಲ್ ತಿಂಗಳ ಪ್ರತಿ ಆದಿತ್ಯವಾರದಂದು ಮಧ್ಯಾಹ್ನ 2.30 ರಿಂದ ಸಂಜೆ 5ರವರೆಗೆ ತರಗತಿಗಳು ನಡೆಯಲಿದ್ದು, ವಾರದ ನಿರ್ಧಿಷ್ಟ ದಿನಗಳಲ್ಲಿ ಆನ್ಲೈನ್ ಮೂಲಕ ಪುನರಾವಲೋಕನ ನಡೆಯಲಿದೆ. ಶಿಬಿರದಲ್ಲಿ ಪಾಲ್ಗೊಂಡು ತೇರ್ಗಡೆಯಾದವರಿಗೆ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಸರ್ಟಿಫಿಕೆಟ್ ನೀಡಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9448501172
ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಗೇಟ್ ನಿರ್ಮಾಣ ಮಾಡಲು ವಾಹನಗಳ ಗುಪ್ತ ಸರ್ವೆ : ಸಾರ್ವಜನಿಕರಿಂದ ಆಕ್ರೋಶ

Posted On: 02-04-2021 12:43PM
ಕಾಪು : ಪಡುಬಿದ್ರಿ ಸಮೀಪದ ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕ ಸಮೀಪ ಟೋಲ್ ಗೇಟ್ ನಿರ್ಮಾಣ ಮಾಡಲು ವಾಹನಗಳ ಸರ್ವೆ ಮಾಡುತ್ತಿದ್ದ ತಂಡವೊಂದನ್ನು ಸಾರ್ವಜನಿಕರು ತಡೆದ ಘಟನೆ ನಡೆದಿದೆ.
ಗುಪ್ತವಾಗಿ ವಾಹನಗಳ ಸರ್ವೆ ನಡೆಸುತ್ತಿದ್ದ ತಂಡದ ಬಗ್ಗೆ ಸಂಶಯಗೊಂಡ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರೋರ್ವರು ಅವರನ್ನು ವಿಚಾರಿಸಿದಾಗ ಸತ್ಯ ವಿಚಾರ ಬಾಯ್ಬಿಟ್ಟಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪಡುಬಿದ್ರಿ ಪೊಲೀಸರು ತಂಡವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ರಾಜ್ಯ ಹೆದ್ದಾರಿಯ ಟೋಲ್ಗೇಟ್ ನಿರ್ಮಾಣದ ಬಗ್ಗೆ ಮತ್ತು ಗುಪ್ತವಾಗಿ ಸರ್ವೆ ಮಾಡುತ್ತಿದ್ದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿವರ್ಷವೂ ಕೋಮು ಸೌಹಾರ್ದತೆಗೆ ಸಾಕ್ಷಿಯಾಗುತ್ತಿರುವ ಉದ್ಯಾವರ ಸಂಪಿಗೆ ನಗರದ ಉರೂಸ್ ಮುಬಾರಕ್

Posted On: 02-04-2021 12:23PM
ಕಾಪು : ಸರ್ವ ಧರ್ಮ ಭಾವೈಕ್ಯತೆಗೆ ಸಾಕ್ಷಿಯಾದ ಇತಿಹಾಸ ಪ್ರಸಿದ್ಧ ಸೂಫಿ ಶಹೀದ್ ಹಝ್ರತ್ ಫಖ್ರು ಶಹೀದ್ ವಲೀಯುಲ್ಲಾಹೀ ದರ್ಗಾ ಶರೀಫ್ ಉದ್ಯಾವರ ಸಂಪಿಗೆ ನಗರದ ಉರೂಸ್ ಮುಬಾರಕ್ ಏಪ್ರಿಲ್ 3 ಮತ್ತು 4 ರಂದು ಡಾ| ಖಾಝಿ ರಫಿಲ್ ಸಾಹೇಬ್ ಹಾಗೂ ಮುಕ್ತರ್ ಅಹಮ್ಮದ್ ಸಾಹೇಬ್, ಅಧ್ಯಕ್ಷರು ದರ್ಗಾ ಕಮಿಟಿ, ಸಂಪಿಗೆ ನಗರ ಉದ್ಯಾವರ ಇವರ ನೇತೃತ್ವದಲ್ಲಿ ನಡೆಯಲಿದೆ.
ಏಪ್ರಿಲ್ 3, ಶನಿವಾರ ಮಧ್ಯಾಹ್ನ 2ಕ್ಕೆ ಬೃಹತ್ ಝಿಕ್ರ್ ಮಜ್ಲೀಸ್, ಸಂಜೆ 3ಕ್ಕೆ ಸಂದಲ್, ಮಗ್ರಿಬ್ ನಮಾಜಿನ ನಂತರ ಫಕ್ರೆ ಆಲಂ ರಝ್ವಿ ಮುಂಬಾಯಿ ಇವರಿಂದ (ನಾಥೇ ಶರೀಫ್) ಮಹ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ, ದಾರುಲ್ ಮುಸ್ತಫ ಮೋರಲ್ ಅಕಾಡಮಿ ನಚ್ಚಬೆಟ್ಟು ಇವರಿಂದ ಪ್ರವಚನ ಅಲ್ ಹಾಜಿ ಸೆಲೀಂ ಮದನಿ ದಾರುಲ್ ಅಮಾನ್ ಎಲ್ಲೂರು ದುವಾ ಮಾಡಲಿದ್ದಾರೆ.
ಏಪ್ರಿಲ್ 4, ಆದಿತ್ಯವಾರ ಬೆಳಿಗ್ಗೆ 10ಕ್ಕೆ ಮಜ್ಲೀಸ್ ಮೌಲೂದ್, ಮಧ್ಯಾಹ್ನ 12 ರಿಂದ ಸಂಜೆ 3ರವರೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಪ್ರತಿ ವರ್ಷವು ಆರ್ ಜೆ ಎರೋಲ್ ಕುಟುಂಬಸ್ಥರಿಗೆ ಸೇರಿದ ಜಾಗದಲ್ಲಿ ಈ ಸೇವೆಯು ನಡೆಯುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಖಾಸಗಿ ಬಸ್ಸಿನಲ್ಲಿ ಅನ್ಯಕೋಮಿನ ಜೋಡಿ ಪತ್ತೆ ಪೋಲಿಸರಿಗೆ ಒಪ್ಪಿಸಿದ ಬಜರಂಗದಳ ಕಾರ್ಯಕರ್ತರು

Posted On: 02-04-2021 11:13AM
ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಅನ್ಯಕೋಮಿನ ಯುವಕ ಯುವತಿಯನ್ನು ಸುರತ್ಕಲ್ ಬಳಿ ಬಜರಂಗದಳದ ಕಾರ್ಯಕರ್ತರು ಪೋಲಿಸರಿಗೆ ಒಪ್ಪಿಸಿದ ಘಟನೆ ನಿನ್ನೆ ನಡೆದಿದೆ.

ಉಡುಪಿಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಈ ಜೋಡಿಯನ್ನು ಪೋಲಿಸರಿಗೆ ಒಪ್ಪಿಸಿ ಮಾತನಾಡಿದ ಬಜರಂಗದಳ ಪ್ರಮುಖರು ಲವ್ ಜಿಹಾದ್ ನಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಾದರೆ ನೇರವಾಗಿ ಕಾರ್ಯಾಚರಣೆಗೆ ಇಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ನಿತ್ಯ - ನಿರಂತರವಾಗಿ ಶಿಲಾಸೇವೆ ನೀಡಲು ಅವಕಾಶ

Posted On: 01-04-2021 03:34PM
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಉಪ ಸಮಿತಿಯಾದ ಆರ್ಥಿಕ ಸಮಿತಿಯಲ್ಲಿ 9 ತಂಡಗಳಿದ್ದು ಒಂಬತ್ತು ತಂಡಗಳಲ್ಲಿ ಒಂದಾದ ಶೈಲಪುತ್ರಿ ತಂಡವು ಇಂದಿನಿಂದ ಒಂದು ವಾರದವರೆಗೆ ಕಾರ್ಯಚರಿಸಲಿದ್ದು ಶಿಲಾಸೇವಾ ಕೌಂಟರ್ ಗೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಶ್ರೀ ರಮೇಶ್ ಹೆಗ್ಡೆ ಕಲ್ಯಾ ಹಾಗೂ ಶೈಲಪುತ್ರಿ ತಂಡದ ಮುಖ್ಯ ಸಂಚಾಲಕರಾದ ಶ್ರೀ ವಿದ್ಯಾಧರ ಪುರಾಣಿಕ್ ಉಪಸ್ಥಿತರಿದ್ದರು.

ಇಂದಿನಿಂದ ಶಿಲಾಸೇವಾ ಕೌಂಟರ್ ನಲ್ಲಿ ಕಾರ್ಯ ನಿರ್ವಹಿಸಲಿರುವ ತಂಡಗಳ ವಿವರ ಇಂತಿದೆ (ಸಮಯ ಪೂರ್ವಾಹ್ನ ಗಂಟೆ 09:00 ರಿಂದ ಅಪರಾಹ್ನ ಗಂಟೆ 07:00ರ ವರೆಗೆ) 01-04-2021 : 06-04-2021 ಶೈಲಪುತ್ರಿ 07-04-2021 : 13-04-2021 ಬ್ರಹ್ಮಚಾರಿಣಿ 14-04-2021 : 20-04-2021 ಚಂದ್ರಘಂಟಾ 21-04-2021 : 27-04-2021 ಕುಷ್ಮಾಂಡ 28-04-2021 : 04-05-2021 ಸ್ಕಂದಮಾತಾ 05-05-2021 : 11-05-2021 ಕತ್ಯಾಯಿನಿ 12-05-2021 : 18-05-2021 ಕಾಲರಾತ್ರಿ 19-05-2021 : 25-05-2021 ಮಹಾಗೌರಿ 26-05-2021 : 01-06-2021 ಸಿದ್ದಿದಾತ್ರಿ
ಪ್ರತಿ ದಿನವೂ ಭಕ್ತರಿಗಾಗಿ ಆರ್ಥಿಕ ಸಮಿತಿಯ ಸೇವಾ ಕೌಂಟರ್ ತೆರೆದಿರುವುದರಿಂದ ಭಕ್ತರು ನಿತ್ಯ ನಿರಂತರವಾಗಿ ಶಿಲಾ ಸೇವೆಯನ್ನು ನೀಡಲು ಕ್ಷೇತ್ರಕ್ಕೆ ಬರಬಹುದು ದೇವಳದ ಅಭಿವೃದ್ಧಿ ಕಾರ್ಯದ ಆರ್ಥಿಕ ಕ್ರೋಡಿಕರಣಕ್ಕೆ ವಾರಕ್ಕೊಂದು ತಂಡವು ದೇವಸ್ಥಾನದ ಮುಂಭಾಗದಲ್ಲಿರುವ ಕೌಂಟರ್ ನಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ. ವಾಸುದೇವ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊನೆಗೂ ಮಣಿದ ಟೋಲ್ ಅಧಿಕಾರಿಗಳು, ಹೆಜಮಾಡಿ ಗ್ರಾಮ ಪಂಚಾಯತಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

Posted On: 31-03-2021 05:52PM
ಹೆಜಮಾಡಿ ಗ್ರಾಪಂ ಸದಸ್ಯರಿಂದ ಟೋಲ್ ವಿನಾಯತಿಗೆ ಆಗ್ರಹಿಸಿ ಪರ್ಯಾಯ ರಸ್ತೆ ನಿರ್ಮಾಣ, ಮಾತಿನ ಚಕಮಕಿ ನಡೆಯಿತು. ಹೆಜಮಾಡಿ ಗ್ರಾಮದ ಸ್ಥಳೀಯರಿಗೆ ಟೋಲ್‌ನಿಂದ ವಿನಾಯಿತಿ ನೀಡದ ಕಾರಣ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ ಸಹಿತ ಎಲ್ಲಾ ಸದಸ್ಯರು ಜೊತೆಗೂಡಿ ಟೋಲ್ ಬಳಿ ಪ್ರತ್ಯೇಕ ರಸ್ತೆ ನಿರ್ಮಿಸಿ ವಾಹನವನ್ನು ಕಳುಹಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಘಟಿಸಿದೆ.

ಹೆಜಮಾಡಿ ಗ್ರಾಮ ಪಂಚಾಯತ್‌ನ ಎಲ್ಲಾ ೨೧ ಸದಸ್ಯರು ವಾರದ ಹಿಂದೆ ಟೋಲ್ ಅಧಿಕಾರಿ ಶಿವಪ್ರಸಾದ್ ರೈಯವರಿಗೆ ಮನವಿ ನೀಡಿ, ಹೆಜಮಾಡಿ ಗ್ರಾಮದ ವಾಹನಗಳಿಗೆ ಮತ್ತು ಮುಲ್ಕಿ ಶಾಲೆಗೆ ತೆರಳುವ ಬಸ್ಸ್ಗಳಿಗೆ ಟೋಲ್‌ನಲ್ಲಿ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು. ಆದರೆ ವಾರದ ಬಳಿಕವೂ ಟೋಲ್ ಅಧಿಕಾರಿಗಳು ಸ್ಪಂದಿಸದ ಕಾರಣ ಗ್ರಾಮ ಪಂಚಾಯತ್ ಸದಸ್ಯರು ಸೇರಿ ಪ್ರತ್ಯೇಕ ರಸ್ತೆ ನಿರ್ಮಿಸಿ, ವಾಹನಗಳನ್ನು ಬಿಡಲಾಯಿತು.

ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಟೋಲ್ ಅಧಿಕಾರಿಗಳ ಮಧ್ಯೆ ಮಾತುಕತೆಯೂ ಜರಗಿತು. ಪಡುಬಿದ್ರಿ ಠಾಣಾಧಿಕಾರಿ ದಿಲೀಪ್‌ರವರು ಸ್ಥಳಕ್ಕೆ ಆಗಮಿಸಿ ಸಂಧಾನ ಮಾಡಲು ಪ್ರಯತ್ನಿಸಿದರಾದರೂ, ಮೊದಲಿಗೆ ಒಮ್ಮತ ಆಗಿಲ್ಲ. ಕಡೆಗೆ ಟೋಲ್ ಅಧಿಕಾರಿಗಳು ಲಿಖಿತವಾಗಿ ಭರವಸೆ ನೀಡುವ ತನಕ ಪ್ರತ್ಯೇಕ ರಸ್ತೆಯಲ್ಲಿ ಹೋಗುವುದೆಂದು ತೀರ್ಮಾನಿಸಲಾಯಿತು.
ಟೋಲ್ ಮೆನೇಜರ್ ಶಿವಪ್ರಸಾದ್‌ರವರು ಉನ್ನತ ಅಧಿಕಾರಿಗಳೊಂದಿಗೆ ದೂರವಾಣಿ ಕರೆ ಮಾಡಿ ಲಿಖಿತವಾಗಿ ಬರೆದು ಕೊಟ್ಟ ಬಳಿಕ ಟೊಲ್‌ಗೇಟಿನ ರಸ್ತೆಯಲ್ಲಿಯೇ ವಾಹನಗಳು ಸಂಚರಿಸಿದವು. ಪ್ರತಿಭಟನೆಯ ನೇತೃತ್ವವನ್ನು ಹೆಜಮಾಡಿ ಗ್ರಾಪಂ ಅಧ್ಯಕ್ಷ ಪ್ರಾಣೇಶ್ ಹೆಜ್ಮಾಡಿ ವಹಿಸಿದ್ದು, ಗ್ರಾಮದ ಎಲ್ಲಾ ೨೧ ಸದಸ್ಯರೂ ಭಾಗಿಯಾಗಿದ್ದರು. ಪಡುಬಿದ್ರಿ ಠಾಣಾಧಿಕಾರಿ ಸೂಕ್ತ ಬಂದೋಬಸ್ತನ್ನು ವಹಿಸಿದ್ದರು.
ಬಿರುವೆರ್ ಬ್ರದಸ್೯ ಹೆಜಮಾಡಿ ತಂಡದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಹೆಜಮಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

Posted On: 29-03-2021 05:39PM
ಅಧಿಕಾರ ವಿಕೇಂದ್ರೀಕರಣದ ಮೂಲಕ ಸಾಮಾನ್ಯ ಜನರಿಗೂ ಜನಸೇವೆಯ ಭಾಗ್ಯ ನೀಡಿದೆ ಗ್ರಾಮಪಂಚಾಯತ್. ಆಯ್ಕೆಯಾದ ಸದಸ್ಯರು ತಮ್ಮ ಕಾರ್ಯ ವ್ಯಾಪ್ತಿಗೆ ಅನುಸಾರವಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಆ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಹಿಂದೂ ಧಾರ್ಮಿಕ ಧರ್ಮದಾಯ ದತ್ತಿ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಹೆಜಮಾಡಿ ಬಿಲ್ಲವ ಸಂಘದ ವಠಾರದಲ್ಲಿ ಜರಗಿದ ಬಿರುವೆರ್ ಬ್ರದಸ್೯ ಹೆಜಮಾಡಿ ತಂಡದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಹೆಜಮಾಡಿ ಗ್ರಾಮ ಪಂಚಾಯತ್ ನ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಸದಸ್ಯರಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಶುಭಕೋರಿ ಮಾತನಾಡಿದರು.

ಸನ್ಮಾನ : ಹೆಜಮಾಡಿ ಗ್ರಾಮ ಪಂಚಾಯತ್ ನ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಸದಸ್ಯರನ್ನು, ಪುಷ್ಪರಾಜ್ ಅಮೀನ್ ನಡಿಕುದ್ರು ವಾಯು ಮತ್ತು ಜಲ ಬಲ ವಿಜ್ಞಾನ ಸಂಶೋಧಕ, ಮಂಗಳೂರು ವಿಶ್ವವಿದ್ಯಾನಿಲಯದ 2020 ಸೆಪ್ಟೆಂಬರ್ ನಲ್ಲಿ ನಡೆಸಿದ ಬಿಸಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ 6ನೇ ರ‍್ಯಾಂಕ್ ಗಳಿಸಿದ ಪ್ರತಿಮಾ ಪಿ. ಕೋಟ್ಯಾನ್, ಬಿರುವೆರ್ ಬ್ರದಸ್೯ ಹೆಜಮಾಡಿಯ ಸ್ಥಾಪಕ ಅಧ್ಯಕ್ಷರಾದ ಶ್ರೀಧರ್ ಸುವರ್ಣರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹೆಜಮಾಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ತಾಲೂಕು ಪಂಚಾಯತ್ ಸದಸ್ಯರಾದ ನೀತಾ ಗುರುರಾಜ್, ಬಿರುವೆರ್ ಬ್ರದಸ್೯ ಹೆಜಮಾಡಿಯ ಸ್ಥಾಪಕ ಅಧ್ಯಕ್ಷರಾದ ಶ್ರೀಧರ್ ಸುವರ್ಣ, ಮಂಗಳೂರು ಬಿರುವೆರ್ ಕುಡ್ಲದ ವಕ್ತಾರ ಲಕ್ಷ್ಮೀಶ್, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಲೋಕೇಶ್ ಅಮೀನ್, ಹೆಜಮಾಡಿಯ ಉದ್ಯಮಿ ಸಂದೇಶ್ ಶೆಟ್ಟಿ, ಬಿಜೆಪಿ ಕಾಪು ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಹೆಜಮಾಡಿ ನಾರಾಯಣಗುರು ಮಂದಿರದ ಅರ್ಚಕರಾದ ಹರೀಶ್ ಶಾಂತಿ ಮುಂಬೈ, ಪಡುಬಿದ್ರಿ ಬಿಜೆಪಿ ಯುವ ಮೋರ್ಚಾ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಕೀರ್ತನ್ ಪೂಜಾರಿ, ಬಿರುವೆರ್ ಬ್ರದಸ್೯ ಹೆಜಮಾಡಿಯ ನೂತನ ಅಧ್ಯಕ್ಷರಾದ ರೀತೇಶ್ ಉಪಸ್ಥಿತರಿದ್ದರು.

ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ, ವಿಠಲ ನಾಯಕ್ ಕಲ್ಲಡ್ಕರಿಂದ ಗೀತ ಸಾಹಿತ್ಯ ಸಂಭ್ರಮ ಜರಗಿತು. ನೀಲೇಶ್ ಹೆಜಮಾಡಿ ಸ್ವಾಗತಿಸಿ, ಮನೋಹರ್ ಹೆಜಮಾಡಿ ಪ್ರಾಸ್ತಾವಿಕ ಮಾತನಾಡಿ, ಮೋಹನ್ ಸುವರ್ಣ ಮುಲ್ಕಿ ನಿರೂಪಿಸಿ, ಗುರುಪ್ರಸಾದ್ ವಂದಿಸಿದರು.