Updated News From Kaup
ಇನ್ನಂಜೆ : ಪುರಾತನˌ ಕಂಚಿನಕೆರೆˌ ನಾಗಬನದ ಪ್ರಶ್ನಾಚಿಂತನೆ

Posted On: 05-03-2021 10:08PM
ಇನ್ನಂಜೆ ಗ್ರಾಮದ ಉಂಡಾರು ದೇವಸ್ಡಾನ ದ ಈಶಾನ್ಯ ದಿಕ್ಕಿನಲ್ಲಿರುವ ಅತೀ ಪುರಾತನˌ ಕಂಚಿನಕೆರೆˌ ನಾಗಬನ ದ ಪ್ರಶ್ನಾಚಿಂತನೆಯು ಮಾಚ್೯ 14 ಆದಿತ್ಯವಾರ ಕಂಚಿನಕೆರೆ ಬನದ ಮುಂಭಾಗದಲ್ಲಿ ಜರಗಲಿರುವುದು.

ನಾಗಬನಕ್ಕೆ ಸಂಬಂಧಿಸಿದವರು, ಊರ ಹತ್ತು ಸಮಸ್ತರು ಹಾಗೂ ನಾಗಬನ ಇಲ್ಲದೆ ಇರುವವರು ಈ ಪ್ರಶ್ನಾ ಚಿಂತನೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಶ್ರೀ ವರ್ತೆಕಾಳಿ ಕಲ್ಕುಡ ದೈವಸ್ಥಾನ ಬನ್ನಂಜೆ, ಉಡುಪಿ ಕಾಲಾವಧಿ ಕೋಲ

Posted On: 05-03-2021 06:29PM
ಶ್ರೀ ವರ್ತೆಕಾಳಿ ಕಲ್ಕುಡ ದೈವಸ್ಥಾನ ಬನ್ನಂಜೆ, ಉಡುಪಿ ಕಾಲಾವಧಿ ಕೋಲವು ಮಾಚ್೯ 7, ಆದಿತ್ಯವಾರ ನಡೆಯಲಿದೆ.
ಮಧ್ಯಾಹ್ನ 12:30 ರಿಂದ 3 ರವರೆಗೆ ಅನ್ನಸಂತರ್ಪಣೆ, ರಾತ್ರಿ ಗಂಟೆ 7:30ಕ್ಕೆ ದರ್ಶನ ಮತ್ತು ಹೂವಿನ ಪೂಜೆ, ಪ್ರಸಾದ ವಿತರಣೆ ರಾತ್ರಿ 9:30ಕ್ಕೆ ದೈವಗಳ ಕೋಲ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕುತ್ಯಾರು : ಸಾಮೂಹಿಕ ಸತ್ಯನಾರಾಯಣ ಪೂಜೆ

Posted On: 05-03-2021 06:06PM
ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕುತ್ಯಾರು ಮಹಿಳಾ ಬಳಗದ ವತಿಯಿಂದ ಗ್ರಾಮ ಪಂಚಾಯತ್ ಕುತ್ಯಾರು, ಯುವಕ ಮಂಡಲ, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು, ಗ್ರಾಮ ನೈರ್ಮಲ್ಯ ಸಮಿತಿಯ ಸಹಯೋಗದಲ್ಲಿ ವೇದ ಮೂರ್ತಿ ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಕೇಂಜ ಭಾರ್ಗವ ತಂತ್ರಿ ನೇತೃತ್ವದಲ್ಲಿ ಮಾರ್ಚ್ 6, ಶನಿವಾರ ಕುತ್ಯಾರು ಯುವಕ ಮಂಡಲದ ವೇದಿಕೆಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ, ರಾತ್ರಿ ಅನ್ನಸಂತರ್ಪಣೆ, ನೃತ್ಯ ವೈವಿಧ್ಯ, ನಿಮಿಷ ಕಲಾವಿದರು ಕಟಪಾಡಿ ಇವರಿಂದ ಏರೆಗ್ ಏರಾ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂತ ಮೇರಿ ಕಾಲೇಜು, ಶಿರ್ವ ಜಲಸಂರಕ್ಷಣೆ ಮಾಹಿತಿ ಕಾರ್ಯಕ್ರಮ

Posted On: 03-03-2021 10:09PM
ಶಿರ್ವ: ಜಗತ್ತಿನಲ್ಲಿ ಮೂರನೇ ಯುದ್ಧ ಅಂತ ಹೆಸರಿಸುವುದಾದರೆ ಅದು ನೀರಿನ ಸಮಸ್ಯೆ.ಇಂದು ಪ್ರತಿವೊಂದು ರಾಷ್ಟ್ರವೂ ನೀರಿನ ಅಭಾವವನ್ನು ಅನುಭವಿಸುತ್ತಿದೆ. ನೀರಿನ ಸಮೃದ್ಧಿಯಲ್ಲಿ ಭಾರತವು ವಿಶ್ವದಲ್ಲಿ ಎರಡನೇ ದೇಶವಾಗಿದೆ. ಆದರೆ ಅದರ ಸರಿಯಾದ ಬಳಕೆ ಮತ್ತು ಸಂರಕ್ಷಣೆ ಇಲ್ಲದೆ ನೀರಿನ ಕ್ಷಾಮವನ್ನು ನಾವಿಂದು ಎದುರಿಸಬೇಕಾಗಿದೆ. ಇದರ ನಿವಾರಣೆಯಾಗಬೇಕಾದರೆ ನಾವಿಂದು ಮಳೆ ನೀರನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಿ ಮರು ಬಳಕೆ ಮಾಡುವುದು ಅನಿವಾರ್ಯವಾಗಿದೆ ಎಂದು ರತ್ನ ಶ್ರೀ ಜೋಸೆಫ್ ಜಿ. ರೆಬೆಲ್ಲೊ ಅವರು ನೀರಿನ ಸಂರಕ್ಷಣೆ ಮತ್ತು ಮರುಪೂರಣದ ಬಗ್ಗೆ ಸಂತ ಮೇರಿ ಕಾಲೇಜಿನಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಪ್ರಾಯೋಗಿಕ ವಿವರಣೆಯ ಮೂಲಕ ನೀರಿನ ಸಂರಕ್ಷಣೆಯ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.

ನೀರಿನ ಬಳಕೆ ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಶೇಖರಿಸಿ,ಮಿತವಾಗಿ ಬಳಸುವುದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇಂದಿನ ತುರ್ತುಗಳಲ್ಲಿ ಒಂದು. ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕೆಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್ರವರು ಅಭಿಪ್ರಾಯಪಟ್ಟರು. ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಜೆಸಿಂತ ಡಿ’ಸೋಜ ಮಾತನಾಡಿ ಇಂತಹ ಕಾರ್ಯಕ್ರಮಗಳು ಹೆಚ್ಚು ಜನರಿಗೆ ತಲುಪುವುದು ನೀರಿನ ಬಳಕೆಯನ್ನು ಸಮರ್ಪಕವಾಗಿ ಮಾಡಲು ಅನುಕೂಲವಾಗುತ್ತದೆ ಹಾಗೂ ಈ ಕಾರ್ಯಕ್ರಮವನ್ನು ಕಾಲೇಜು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಈ ಕಾರ್ಯಕ್ರಮವನ್ನು ಕಾಲೇಜಿನ ರಕ್ಷಕ-ಶಿಕ್ಷಕ ಸಂಘ ಮತ್ತು ಗ್ರೀನ್ ಟೀಚರ್ ಪೋರಂ ಸಹಯೋಗದಲ್ಲಿ ಎನೆಸೆಸ್,ಎನ್ಸಿಸಿ,ರೋವರ್ಸ ಮತ್ತು ರೇಂಜರ್ಸ್,ಯೂತ್ರೆಡ್ ಕ್ರಾಸ್, ಘಟಕಗಳು ಜಂಟಿಯಾಗಿ ಏರ್ಪಡಿಸಿದವು. ವೇದಿಕೆಯಲ್ಲಿ ಘಟಕದ ಸಂಯೋಜಕರಾದ ಉಪನ್ಯಾಸಕರುಗಳಾದ ಯಶೋದ, ವಿಠಲ್ ನಾಯಕ್, ಪ್ರವೀಣ್ ಕುಮಾರ್, ಪ್ರೇಮನಾಥ್, ಮುರಳಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಅಧ್ಯಾಪಕ ಮತ್ತು ಅಧ್ಯಾಪಕ ಬಂಧುಗಳು ಹಾಗೂ ವಿವಿಧ ಘಟಕದ ವಿದ್ಯಾಥಿಗಳು ಭಾಗವಹಿಸಿದ್ದರು. ಸೌಜನ್ಯ ಕಾರ್ಯಕ್ರಮ ನಿರೂಪಿಸಿ, ಸಹನಾ ಸ್ವಾಗತಿಸಿ,ದೀಪ್ತಿ ವಂದಿಸಿದರು.
ಕಾಪು ಶ್ರೀ ಹೊಸಮಾರಿಗುಡಿ ಶಿಲಾ ಪುಷ್ಪ ಸಮರ್ಪಣಾ ಸಮಿತಿಯಿಂದ ಹೆಜಮಾಡಿ ಮಹಾಲಿಂಗೇಶ್ವರ ದೇವಳದಲ್ಲಿ ಗ್ರಾಮ ಸಮಿತಿ ರಚನಾ ಸಭೆ

Posted On: 03-03-2021 01:20PM
ಕಾಪು ಶ್ರೀ ಹೊಸಮಾರಿಗುಡಿಯಲ್ಲಿ ಸುಗ್ಗಿ ಮಾರಿಪೂಜೆಯಂದು ನಡೆಯಲಿರುವ ಶಿಲಾ ಪುಷ್ಪ ಸಮರ್ಪಣೆಯ ಪ್ರಯುಕ್ತ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭ ಸಮಾಜ ಸೇವಕ ಲೀಲಾದರ ಶೆಟ್ಟಿ ಯವರ ನೇತೃತ್ವದಲ್ಲಿ ಗ್ರಾಮ ಸಮಿತಿಯನ್ನು ರಚಿಸುವ ಬಗ್ಗೆ ಚರ್ಚಿಸಲಾಯಿತು.
ಅರ್ಚಕ ಪದ್ಮನಾಭ ಅಚಾರ್ಯ, ಸಮಿತಿಯ ಸದಸ್ಯರುಗಳಾದ ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ನಾಗೇಶ್ ಸುವರ್ಣ, ಮೋಹನ್ ಕಲ್ಯಾ, ಹರೀಶ್ ನಾಯಕ್ , ಸುಧಾಕರ್ ಶೆಟ್ಟಿ ಹೆಜಮಾಡಿ, ಭುಜಂಗ ಶೆಟ್ಟಿ ಹೆಜಮಾಡಿ,ರವೀಂದ್ರ ಮಲ್ಲಾರ್, ವಿಶ್ವನಾಥ್ ಶೆಟ್ಟಿ ಮಜೂರ್,ದಿವಾಕರ್ ಹೆಜಮಾಡಿ, ಶ್ರೀನಿವಾಸ ಕೋಟಿಯಾನ್, ಶುಭ ಬಂಗೇರ ಹೆಜಮಾಡಿ, ಉಪಸ್ಥಿತರಿದ್ದರು.
ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಕೊರೊನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಅನ್ನದಾನ ಸೇವೆ ಇಂದಿನಿಂದ ಆರಂಭ

Posted On: 02-03-2021 02:42PM
ಕೊರೊನ ಮಹಾಮಾರಿಯ ಹಿನ್ನೆಲೆಯಲ್ಲಿ ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಅನ್ನದಾನ ಸೇವೆ ಸ್ಥಗಿತಗೊಂಡಿದ್ದು.. ಒಂದು ವರ್ಷದ ಬಳಿಕ ಇಂದು ಅನ್ನದಾನ ಸೇವೆಗೆ ಚಾಲನೆ ನೀಡಲಾಯಿತು..


ಈ ಸಂದರ್ಭದಲ್ಲಿ ಅನ್ನಪ್ರಸಾದ ಸೇವೆಗೆ ದಾನಿಗಳಾದ ಬೋರ್ಗಲ್ಲು ಗುಡ್ಡೆ ಮನೆ ಪದ್ಮಾವತಿ ಪೂಜಾರ್ತಿ ಮತ್ತು ಮಕ್ಕಳು 1000 ಸ್ಟಿಲ್ ಪ್ಲೆಟ್ ಗಳನ್ನು ನೀಡಿದ್ದಾರೆ.. ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ..
ಕಾಪು : ಹೊಸ ಮಾರಿಗುಡಿಯಲ್ಲಿ ಶಿಲಾ ಪುಷ್ಪ ಸಮರ್ಪಣೆಯ ಅಂಗವಾಗಿ ಶ್ರೀ ಲಕ್ಷ್ಮಿ ಜನಾರ್ಧನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ

Posted On: 02-03-2021 10:28AM
ಕಾಪು ಶ್ರೀ ಹೊಸಮಾರಿಗುಡಿಯಲ್ಲಿ ಸುಗ್ಗಿ ಮಾರಿಪೂಜೆಯಂದು ನಡೆಯಲಿರುವ ಶಿಲಾ ಪುಷ್ಪ ಸಮರ್ಪಣೆಯ ಪ್ರಯುಕ್ತ ಕಾಪು ಸಾವಿರ ಸೀಮೆಯ ಒಡೆಯ ಮಹತೋಭಾರ ಶ್ರೀ ಲಕ್ಷ್ಮಿ ಜನಾರ್ಧನ ದೇವರ ಸನ್ನಿಧಿಯಲ್ಲಿ ಹೊಸ ಮಾರಿಗುಡಿಯ ಆಡಳಿತ ಮಂಡಳಿ ಮತ್ತು ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಸೇರಿ ಪ್ರಾರ್ಥನೆ ನಡೆಸಲಾಯಿತು.
ಇಂದಿಗೂ ಭಕ್ತರ ಸೆಳೆಯುವ 45 ವರ್ಷಗಳ ಹಿಂದಿನ ವರ್ತೆ, ಕಲ್ಕುಡ ದೈವದ ವರ್ಣಚಿತ್ರ

Posted On: 01-03-2021 09:02PM
ಉಡುಪಿ : ಬನ್ನಂಜೆ ಕಲ್ಕುಡ ಮನೆ ದೈವಸ್ಥಾನದಲ್ಲಿ 1975ರಲ್ಲಿ ಕೆ. ಬಿ. ಗೋಪಾಲಕೃಷ್ಣರಾವ್ ರವರ ಕೈಚಳಕದಿ ಮೂಡಿದ ವರ್ತೆ-ಕಲ್ಕುಡ ದೈವದ ವರ್ಣಚಿತ್ರವು ಇಂದಿಗೂ ಕಾಣಸಿಗುತ್ತದೆ.

ಸುಮಾರು 45 ವರ್ಷಗಳ ಹಿಂದಿನ ದೈವಗಳ ಮುಖಭಾವ ಇರುವ ಈ ವರ್ಣಚಿತ್ರವನ್ನು ಶ್ರೀಮತಿ ಶ್ರೀದೇವಿ ನಂಬಿಯಾರ್ ಇವರು ಸೇವಾ ರೂಪದಲ್ಲಿ ನೀಡಿದ್ದಾಗಿದೆ.

ಸುಮಾರು ವರ್ಷಗಳ ಇತಿಹಾಸ ಇರುವ ಈ ದೈವಸ್ಥಾನದ ವಾರ್ಷಿಕ ನೇಮೋತ್ಸವ ಮಾರ್ಚ್ 7, ಆದಿತ್ಯವಾರದಂದು ನಡೆಯಲಿದೆ.
ಸಂತ ಮೇರಿ ಮಹಾವಿದ್ಯಾಲಯದಲ್ಲಿ ಮಿನಿ ಪ್ರಾಜೆಕ್ಟ್ ಅಭಿವೃದ್ದಿ ಕಾರ್ಯಗಾರ

Posted On: 01-03-2021 08:44PM
ಶಿರ್ವ: ಇಂದು ಆಧುನಿಕ ಜಗತ್ತು ಸಂಪೂರ್ಣವಾಗಿ ಡಿಜಿಟಲೀಕರಣವಾಗುತ್ತಿದೆ. ತಂತ್ರಜ್ಞಾನದ ಅಭಿವೃದ್ದಿಯು ಹೊಸ ಆಲೋಚನೆಗಳ ಆವಿಷ್ಕಾರಗಳು, ಉತ್ತಮ ಸೌಲಭ್ಯಗಳು ಮತ್ತು ಉತ್ತಮ ಐಷಾರಾಮಿ ಜೀವನ ಶೈಲಿಗಳಿಗೆ ಕಾರಣವಾಗಿದೆ. ಇಂಟರ್ನೆಟ್ಗೆ ಸಂಪರ್ಕ ಹೊಂದಿದ ಅನೇಕ ಸಾಧನೆಗಳು ಜೀವನದ ವಿಧಾನವನ್ನು ಬದಲಾಯಿಸಿದೆ ಹಾಗು ಇಂತಹ ತಂತ್ರಜ್ಞಾನದ ಕಲಿಕೆಯು ವಿದ್ಯಾರ್ಥಿ ದೆಸೆಯಲ್ಲಿ ರೂಢಿಸಿಕೊಳುವ ಮೂಲಕ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವನೆ ಹೆಚ್ಚಲು ಪೂರಕ ಎಂದು ಶಿರ್ವ ಸಂತಮೇರಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ‘ಮಿನಿ ಪ್ರಾಜೆಕ್ಟ್ ಅಭಿವೃದ್ದಿ ಕಾರ್ಯಗಾರದಲ್ಲಿ ಮುಖ್ಯಅಥಿತಿಯಾಗಿ ಆಗಮಿಸಿದ ಬಂಟಕಲ್ ಕಾಲೇಜಿನ ಡಾ| ರಾಘವೇಂದ್ರ ಎಸ್ ರವರು ಮಾತನಾಡಿದರು. ಪದವಿ ವ್ಯಾಸಂಗ ಮಾಡುವ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜತೆಗೆ ಉಚಿತ ತರಬೇತಿಗಳನ್ನು ನೀಡಿ, ಸೂಕ್ತ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಶ್ರೀ ಮಧ್ವವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್, ಬಂಟಕಲ್ ಹಾಗೂ ಶಿರ್ವ ಸಂತ ಮೇರಿ ಕಾಲೇಜು ಪರಸ್ಪರ ಒಡಂಬಡಿಕೆಯ ಅನುಸಾರ ಮಾರ್ಚ್ 1 ರಿಂದ 2 ರವರಗೆ ಕಾಲೇಜಿನ ಫಾ.ಹೆನ್ರಿ ಕ್ಯಾಸ್ತಲೀನೊ ಸಭಾಂಗಣದಲ್ಲಿ ಕಾರ್ಯಾಗಾರವನ್ನು ಏರ್ಪಡಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಂಟಕಲ್ ಕಾಲೇಜಿನ ಸಹ-ಪ್ರಾಧ್ಯಾಪಕಿ ಶ್ರೀಮತಿ ಸಹನಾರವರು ಮಾತನಾಡಿ ನಮ್ಮ ಜೀವನದ ಪ್ರತಿಯೊಂದು ವಿಚಾರವು ಒಂದಲ್ಲ ಒಂದು ರೀತಿಯಲ್ಲಿ ಕರಕುಶಲ ವಿಜ್ಞಾನಕ್ಕೆ ಸಂಬಂಧಿಸಿದೆ. ಪ್ರತಿ ವರ್ಷಗಳಲ್ಲಿ ತಂತ್ರಜ್ಞಾನವು ವಿಸ್ಮಯಕಾರಿಯಾಗಿ ಉಪಯುಕ್ತ ಸಂಪನ್ಮೂಲಗಳನ್ನು ರಚಿಸುವ ಜವಾಬ್ದಾರಿಯನ್ನು ಹೊಂದಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ವೆಬ್ ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡಿ ಪ್ರಾತ್ಯಕ್ಷಿಕೆಯನ್ನು ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ರವರು ಈ ಕಾರ್ಯಾಗಾರವು ಐಟಿ ಉದ್ಯಮದಲ್ಲಿ ಬಳಸುತ್ತಿರುವ ಹೊಸ ಮತ್ತು ಇತ್ತೀಚಿನ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಸುಧಾರಿತ ತಂತ್ರಜ್ಞಾನವನ್ನು ರೂಪಿಸಲು ಸಹಾಯಕಾರಿಯೆಂದು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಈ ಕಾರ್ಯಗಾರದ ಮುಖ್ಯ ಉದ್ಧೇಶ ಗುಣಮಟ್ಟದ ಉಪಕರಣಗಳು ಮತ್ತು ಉದ್ಯಮದ ಯೋಜನೆಗಳಿಗೆ ಒಡ್ಡಿಕೊಳ್ಳುವ ಗುರಿಯನ್ನು ಹೊಂದಿದೆಂದು ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ಮಾಹಿತಿ ತಂತ್ರಜ್ಞಾನಕೋಶದ ನಿರ್ದೇಶಕರಾದ ಲೆಫ್ಟಿನೆಂಟ್ ಶ್ರಿ ಕೆ.ಪ್ರವೀಣ್ ಕುಮಾರ್ ರವರು ಪ್ರಾಸ್ತವಿಕವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಉನ್ನತ್ ಭಾರತ್ ಅಭಿಯಾನ್ ಸಂಯೋಜಕರಾದ ಶರತ್ಕುಮಾರ್ ಉಪನ್ಯಾಸಕರಾದ ಪ್ರಕಾಶ್, ಸುಷ್ಮಾ, ದಿವ್ಯಶ್ರೀ,ಎಲ್ಲಾ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ಉಪಸ್ಥಿತರಿದ್ದರು. ಪ್ರಿಯಾಂಕ ವಂದಿಸಿದರು, ಪ್ರೀತಿಕಾ ಮತ್ತು ಬಳಗ ಪ್ರಾರ್ಥಿಸಿ, ಸೃಷ್ಟಿ ಸ್ವಾಗತಿಸಿದರು. ಫೈಜಾ ಭಾನು ಕಾರ್ಯಕ್ರಮ ನಿರೂಪಿಸಿದರು.
ಕಾಪು : ಶಿಲಾ ಪುಷ್ಪ ಸಮರ್ಪಣಾ ಬಗ್ಗೆ ಪೂರ್ವಭಾವಿ ಸಭೆ

Posted On: 28-02-2021 09:10PM
ಕಾಪುವಿನ ಮಾರಿಯಮ್ಮ ದೇವಳದಲ್ಲಿ ಮಾರ್ಚ್ 23/24 ಸುಗ್ಗಿ ಮಾರಿಪೂಜೆಯಂದು ಜರಗಲಿರುವ ಶಿಲಾ ಪುಷ್ಪ ಸಮರ್ಪಣಾ ಬಗ್ಗೆ ಪೂರ್ವಭಾವಿ ಸಮಾಲೋಚನಾ ಸಭೆಯು ಹೊಸ ಮಾರಿಗುಡಿಯಲ್ಲಿ ಇಂದು ನಡೆಯಿತು.

ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿ ಮತ್ತು ಪ್ರಚಾರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.