Updated News From Kaup

ಕುಂಜೂರು : ಶ್ರೀದುರ್ಗಾಮಾತೆಯ ಸನ್ನಿಧಿಯಲ್ಲಿ ತ್ರಿಕಾಲ ಪೂಜೆ, ಅನ್ನಸಂತರ್ಪಣೆ

Posted On: 27-02-2021 02:05PM

ಕಾಪು ತಾಲೂಕಿನ ಶ್ರೀ ದುರ್ಗಾ ಸೇವಾ ಸಮಿತಿ ಕುಂಜೂರು ಇವರ ಮುಂದಾಳತ್ವದಲ್ಲಿ ಮಾರ್ಚ್ 1, ಸೋಮವಾರದಂದು ಶ್ರೀದುರ್ಗಾಮಾತೆಯ ಸನ್ನಿಧಿಯಲ್ಲಿ ದಿನದ ತ್ರಿಸಂಧ್ಯಾ ಕಾಲಗಳಲ್ಲಿ ಶ್ರೀ ದುರ್ಗಾಮಾತೆಗೆ ವಿಸ್ತೃತ ವಿಧಿ-ವಿಧಾನ, ಅರ್ಚನೆ-ಪಾರಾಯಣ, ವಿಶೇಷ ಸಮರ್ಪಣೆ, ಬಾಗಿನದಾನ-ಕನ್ನಿಕಾ ಪೂಜೆ, ಅನ್ನಸಂತರ್ಪಣೆ ಮುಂತಾದ ವಿವಿಧ ಉಪಾಸನಾ ಅನುಷ್ಠಾನಗಳೊಂದಿಗೆ ನೆರವೇರುವ ಆರಾಧನೆಯಾದ ತ್ರಿಕಾಲ ಪೂಜೆ ನಡೆಯಲಿದೆ. ಅದೇ ರೀತಿ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಫೆಬ್ರವರಿ 28 : ಗೆಜ್ಜೆಗಿರಿ ಕ್ಷೇತ್ರದಲ್ಲಿ ಐತಿಹಾಸಿಕ ಚಲನಚಿತ್ರ ದೇಯಿ ಬೈದೆತಿ ಗೆಜ್ಜೆಗಿರಿ ನಂದನೊಡು ಪ್ರದರ್ಶನ

Posted On: 27-02-2021 01:33PM

ತುಳುನಾಡ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದ ಐತಿಹಾಸಿಕ ಚಲನಚಿತ್ರ "ದೇಯಿ ಬೈದೆತಿ ಗೆಜ್ಜೆಗಿರಿ ನಂದನೊಡು" ಚಲನಚಿತ್ರವು ದಿನಾಂಕ 28.02.2021ನೇ ಭಾನುವಾರ ಸಂಜೆ ಗಂಟೆ 6ಗೆ ಗೆಜ್ಜೆಗಿರಿ ಕ್ಷೇತ್ರದ ಸತ್ಯ ಧರ್ಮ ಚಾವಡಿಯಲ್ಲಿ ಪ್ರದರ್ಶನ ಗೊಳ್ಳಲಿದೆ.

ಸಂಕ್ರಿ ಮೋಷನ್ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಂಡು "ಸೂರ್ಯೋದಯ ಪೆರಂಪಳ್ಳಿಯವರ" ನಿರ್ದೇಶನದ ದೇಯಿ ಬೈದೆತಿಯು ಈಗಾಗಲೇ ಮೂಡುಬಿದಿರೆ, ಮುಲ್ಕಿ, ತೋನ್ಸೆ, ಉಡುಪಿಗಳಲ್ಲಿ ಪ್ರದರ್ಶನಗೊಳ್ಳಲು ತಯಾರಿ ನಡೆಸಿದೆ.

ಅಪರೂಪದ ಈ ಅದ್ಭುತ ಚಲನಚಿತ್ರವು ಭಾಸ್ಕರ್ ರಾವ್'ರವರ ಸಂಗೀತ ಹಾಗೂ ಕಲಾವತಿ ದಯಾನಂನಂದ್'ರವರ ಸುಮಧುರ ಕಂಠದಲ್ಲಿ ಮೂಡಿ ಬಂದ ಸುಮಧುರ ಹಾಡುಗಳು ತುಳುನಾಡಿಗರನ್ನು ಮತ್ತೊಮ್ಮೆ ರಂಜಿಸಲಿದೆ ನಿಮ್ಮ ಊರಿನಲ್ಲಿ ಕೂಡಾ ಪ್ರದರ್ಶನ ವಾಗಬೇಕೆಂದರೆ ನಮ್ಮನ್ನು ಸಂಪರ್ಕಿಸಿ +91 92428 30302 8217679743

ಮಾನವೀಯ ನೆಲೆಯಲ್ಲಿ ಆರ್ ಟಿ ಐ ಕಾರ್ಯಕರ್ತ ಶಂಕರ ಶಾಂತಿಗೆ ನ್ಯಾಯ ದೊರಕಿಸುವಲ್ಲಿ ಮುಂದಿನ ಹೋರಾಟ : ಸಮಾನ ಮನಸ್ಕ ಬಿಲ್ಲವರು

Posted On: 27-02-2021 11:16AM

ಉಡುಪಿ : ಮಾರಣಾಂತಿಕವಾಗಿ ಹಲ್ಲೆಗೊಳಗಾದ ಬಾರಕೂರಿನ ಆರ್ ಟಿ ಐ ಕಾರ್ಯಕರ್ತ ಶಂಕರ ಶಾಂತಿಯವರು‌‌ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರಿಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ಮತ್ತು ಪದಾಧಿಕಾರಿಗಳಿಂದ ಫೆಬ್ರವರಿ 25ರಂದು ಮನವಿ ಸಲ್ಲಿಸಲಾಗಿದ್ದರೂ ದುಷ್ಕರ್ಮಿಗಳನ್ನು ಇನ್ನೂ ಬಂಧಿಸದಿರುವುದರಿಂದ ಇಂದು ಉಡುಪಿ ಬನ್ನಂಜೆ ಬಿಲ್ಲವ ಸಂಘದಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ನೇತೃತ್ವದಲ್ಲಿ ಸಮಾನ ಮನಸ್ಕರು ಜೊತೆಯಾಗಿ ಸಭೆ ಸೇರಿದರು.

ಈ ಸಂದರ್ಭ ಮಾತನಾಡಿದ ಉಡುಪಿ ಜಿಲ್ಲಾ ನಗರ ಸಭೆಯ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಸಂಘಟಿತ ಹೋರಾಟದ ಮೂಲಕ ನಾವು ಮುಂದಿನ ಹೆಜ್ಜೆ ಇಡಬೇಕಾಗಿದೆ. ಹತಾಶೆ ಭಾವನೆಯನ್ನು ಬಿಟ್ಟು ಧನಾತ್ಮಕತೆಯಲ್ಲಿ ನಾವು ಮುನ್ನಡೆಯುವ ಎಂದರು. ರಾಮ ಮಾಸ್ಟರ್ ಶಂಕರ್ ಶಾಂತಿಯವರಿಗೆ ಧೈರ್ಯ ತುಂಬುವ ಕಾರ್ಯದೊಂದಿಗೆ ದುಷ್ಕರ್ಮಿಗಳನ್ನು ಪೋಲಿಸ್ ಇಲಾಖೆ ಬಂಧಿಸಿ ಸರಿಯಾದ ಶಿಕ್ಷೆ ಸಿಗುವವರೆಗೆ ಹೋರಾಡಬೇಕಿದೆ ಎಂದರು.

ಸಮಾನ ಮನಸ್ಕರಾದ ಕಿರಣ್ ಮಾತನಾಡಿ ಶಂಕರ್‌ ಪೂಜಾರಿ ನಿಸ್ವಾರ್ಥ ಸಮಾಜ ಸೇವಕರಾಗಿ ಸಮಾಜದಲ್ಲಿಯ ಭೃಷ್ಟರ ಭೃಷ್ಟಾಚಾರವನ್ನು ಬಯಲಿಗೆಳೆಯುವ ಕಾರ್ಯ ಮಾಡುತ್ತಿದ್ದು ಅದರಿಂದ ಸಾರ್ವಜನಿಕರಿಗೆ ಉಪಯೋಗವಾಗಿದೆ. ಆದರೆ ಭೃಷ್ಟರಿಗೆ ಕಂಟಕವಾಗಿದೆ. ಹಲ್ಲೆ ಪೂರ್ವನಿಯೋಜಿತವಾಗಿದ್ದು, ಶಂಕರ ಶಾಂತಿಯವರಿಗೆ ನ್ಯಾಯ ಸಿಗುವವರೆಗೆ ಹೋರಾಡುವ ಎಂದರು. ಬಿಲ್ಲವ ಚಿಂತಕ‌ ದಯಾನಂದ ಉಗ್ಗೆಲ್ ಬೆಟ್ಟು ಮಾತನಾಡಿ ಸಮಾಜದಲ್ಲಿಯ ಅನ್ಯಾಯಕ್ಕೆ ತುಡಿಯುವ ಮನಸ್ಥಿತಿಯ ಶಂಕರ್ ಶಾಂತಿಯವರ ಹೋರಾಟ ಮುಂದೆಯೂ ಸಾಗಲು ನಾವೆಲ್ಲ ಅವರಿಗೆ ಧೈರ್ಯ ತುಂಬಬೇಕಾಗಿದೆ. ಕೆಲವು ಕ್ಷುಲ್ಲಕ ಮನಸಿನ ವ್ಯಕ್ತಿಗಳು ಈ ಹೋರಾಟದ‌ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದು

ಸಭೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ವಹಿಸಿ ಮಾತನಾಡಿ ಘಟನೆ ನಡೆದು 6 ದಿವಸವಾದರೂ ಇನ್ನೂ ದುಷ್ಕರ್ಮಿಗಳನ್ನು ಬಂಧಿಸದಿರುವುದು ಪೋಲಿಸ್ ಇಲಾಖೆಯ ಮೇಲೆ ನಮಗೆ ಅನುಮಾನ ಮೂಡಿಸುತ್ತಿದೆ. ಒಂದು ವೇಳೆ ಬಂಧಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಉಪಸ್ಥಿತರಿದ್ದ ಸಮಾಜ ಬಾಂಧವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಪದಾಧಿಕಾರಿಗಳು, ಬಿಲ್ಲವ ಸಮಾಜದ ಸಮಾನ ಮನಸ್ಕರು ಉಪಸ್ಥಿತರಿದ್ದರು.

ಕೆಮ್ರಾಲ್ ನಲ್ಲಿ ಜೆಜೆಎಮ್ ವತಿಯಿಂದ ಕ್ಷೇತ್ರ ಮಟ್ಟದ ಕಾರ್ಯಕರ್ತರಿಗೆ ತರಬೇತಿ

Posted On: 26-02-2021 10:54PM

ಮಂಗಳೂರು : ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಪ್ ಚಾಲಕರ ಸಮೇತ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವವರ ಪಾತ್ರ ತುಂಬಾ ಮಹತ್ವದ್ದು ಎಂದು ಕೆಮ್ರಾಲ್ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅರುಣ್ ಶ್ಲಾಘಿಸಿದರು.ಅವರಿಂದು ದ.ಕ ಜಿಲ್ಲಾ ಪಂಚಾಯತ್ ,ಗ್ರಾಮೀಣ ಕುಡಿಯುವ ನೀರು ಮತ್ತು ಗ್ರಾಮ ನೈರ್ಮಲ್ಯ ಇಲಾಖೆ ಮಂಗಳೂರು ,ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ ಸಮುದಾಯ ವತಿಯಿಂದ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಲ್ಕಿ ರಾಮಕೃಷ್ಣ ಪುಂಜ ಐಟಿಐ ಸಂಸ್ಥೆಯ ಕಿರಿಯ ತರಬೇತುದಾರ ವಿಲ್ಫ್ರೇಡ್ ಅವರು ಪಂಪ್ ಆಪರೇಟಿಂಗ್ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ನಂತರ ನಿರ್ಮಿತಿ ಕೇಂದ್ರದ ನವೀತ್ ಅವರು ವಾಟರ್ ಮೀಟರ್ ಕುರಿತು ವಿಷಯ ಮಂಡಿಸಿದರು. ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀ ನರೇಂದ್ರ ಸಿ.ಆರ್ ಅವರು ಸಮಗ್ರ ಕುಡಿಯುವ ನೀರು ಸರಬರಾಜಿನ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಜಲಜೀವನ್ ಮಿಷನ್ ಇದರ ಸಮುದಾಯ ಸಂಸ್ಥೆಯ ಐಇಸಿ/ಹೆಚ್.ಆರ್.ಡಿ ಮುಖ್ಯಸ್ಥ ಶಿವರಾಮ್ ಪಿ.ಬಿ ಅವರು ಜೆಜೆಎಮ್ ಧ್ಯೇಯೋದ್ದೇಶಗಳ ಕುರಿತು ತಿಳಿಸಿದರು. ಇದೇ ಸಂದರ್ಭ ಸ್ವಚ್ಛ ಭಾರತ್ ಮಿಷನ್ ಇದರ ಶ್ರೀ ನವೀನ್ ಅವರು ನೀರು ನೈರ್ಮಲ್ಯದ ಕುರಿತು ಅರಿವು ಮೂಡಿಸಿದರು.

ಈ ಸಂದರ್ಭ ಮಂಗಳೂರು ತಾಲೂಕಿನ 10 ಗ್ರಾಮ ಪಂಚಾಯತಿಗಳ ಕ್ಷೇತ್ರ ಮಟ್ಟದ ಕಾರ್ಯಕರ್ತರು, ಕೆಮ್ರಾಲ್ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾ,ಉಪಾಧ್ಯಕ್ಷರು,ಸರ್ವ ಸದಸ್ಯರು, ಸ್ವಚ್ಛ ಭಾರತ್ ಮತ್ತು ಜೆಜೆಎಮ್ ಐಇಸಿ ಸಂಯೋಜಕರಾದ ಶ್ರೀ ಡೊಂಬಯ್ಯ ಮತ್ತು ಮಹಾಂತೇಶ್ ಹಿರೇಮಠ ಉಪಸ್ಥಿತರಿದ್ದರು. ಜೆಜೆಎಮ್ ಹೆಚ್.ಆರ್.ಡಿ ಫಲಹಾರೇಶ್ ಮಣ್ಣೂರಮಠ ಕಾರ್ಯಕ್ರಮ ಆಯೋಜಿಸಿದ್ದರು.

ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ರಕ್ಷಕ-ಶಿಕ್ಷಕ ಸಭೆ

Posted On: 26-02-2021 10:48PM

ಶಿರ್ವ: ಸಂತ ಮೆರಿ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ ರಕ್ಷಕ-ಶಿಕ್ಷಕ ಸಭೆಯ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್‍ರವರು ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸುವಲ್ಲಿ ಹೆತ್ತವರು ಹಾಗೂ ಅಧ್ಯಾಪಕರ ಪಾತ್ರ ಬಹಳ ಪ್ರಾಮುಖ್ಯವಾಗಿದೆ. ಇಂದಿನ ಯುವ ಜನತೆಯನ್ನು ಮಾಗದರ್ಶನ ಮಾಡುವಾಗ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾದ ಅನಿವಾರ್ಯತೆ ಇದೆ. ಯುವಜನತೆಯ ಮನಸ್ಸನ್ನು ಇಂದಿನ ಜಗತ್ತು ನಾನಾ ದುಶ್ಚ್ಯಟಗಳಿಗೆ ಸೆಳೆಯುತ್ತಿದೆ ಇದರಿಂದ ದೂರವಿರಿಸಿ ಆರೋಗ್ಯಪೂರ್ಣ ಜೀವನದ ಕಡೆ ಕೊಂಡೊಯ್ಯುವಲ್ಲಿ ಹೆತ್ತವರು ಹಾಗೂ ಅಧ್ಯಾಪಕರು ತಮ್ಮ ಹೆಚ್ಚಿನ ಗಮನವನ್ನು ನೀಡಬೇಕಾದುದು ಅಗತ್ಯ ಎಂದರು. ಕಳೆದ ಬಾರಿ ಗಣಕ ವಿಜ್ಞಾನ ವಿಭಾಗದಲ್ಲಿ ತುಂಬಾ ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆ ಮತ್ತು ಉನ್ನತ ವಿದ್ಯಾಬ್ಯಾಸ ಮಾಡುತ್ತಿರುವುದು ವಿಭಾಗಕ್ಕೆ ಒಂದು ಹೆಮ್ಮೆಯ ಗರಿಯಂತೆ ಎಂದು ತಿಳಿಸಿದರು. ಈ ಬಾರಿಯೂ ವಿವಿಧ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಗಳು ಬಿಸಿಎ ವಿಭಾಗದ ವಿದ್ಯಾರ್ಥಿಗಳಿಗೆ ಇಂದಿನ ಸಂಕಷ್ಟದ ಕಾಲದಲ್ಲಿಯೂ ಇರುವುದು ಗಮನಾರ್ಹ ಎಂದು ಪ್ರಶಂಸನೀಯವಾದ ಮಾತುಗಳನ್ನಾಡಿದರು.

ಇದೇ ಸಂಧರ್ಭದಲ್ಲಿ ಹೆತ್ತವರಿಗೆ ವಿದ್ಯಾರ್ಥಿಗಳ ಪ್ರಗತಿ ಪತ್ರದ ಪರಿಶೀಲನೆ ಮತ್ತು ಹಾಜರಾತಿ ವಿವರಗಳನ್ನು ವಿಭಾಗದ ವತಿಯಿಂದ ನೀಡಲಾಯಿತು.

ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ಮಾಹಿತಿ ತಂತ್ರಜ್ಞಾನ ಕೋಶದ ನಿರ್ದೇಶಕರಾದ ಲೆಫ್ಟಿನೆಂಟ್ ಕೆ.ಪ್ರವೀಣ್ ಕುಮಾರ್, ಉಪನ್ಯಾಸಕರಾದ ಶ್ರೀಮತಿ ದಿವ್ಯಶ್ರಿ, ಶ್ರೀಮತಿ ಸುಷ್ಮಾ, ಪ್ರಕಾಶ್, ಹೆತ್ತವರು ಹಾಗೂ ಪೋಷಕರು, ವಿದ್ಯಾರ್ಥಿಗಳು, ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ಉಪಸ್ಥಿತರಿದ್ದರು. ಪ್ರಿಯಾಂಕ ಮತ್ತು ಬಳಗದವರು ಪ್ರಾರ್ಥಿಸಿದರು. ಕೃಪಾ ಸ್ವಾಗತಿಸಿ, ಶೋಭಿತ ವಂದಿಸಿ, ದಾಕ್ಷಾಯನಿ ಕಾರ್ಯಕ್ರಮ ನಿರೂಪಿಸಿದರು.

ಕಾಪು ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ರಮೇಶ್ ಹೆಗ್ಡೆ

Posted On: 26-02-2021 10:27PM

ಕಾಪು ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ರಮೇಶ್ ಹೆಗ್ಡೆ ಕಲ್ಯಾರವರನ್ನು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಯವರು ಸನ್ಮಾನಿಸಿದರು.

ಪ್ರಚಾರ ಸಮಿತಿಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಶ್ರೀಕರ್ ಶೆಟ್ಟಿ ಕಲ್ಯಾ, ಹರೀಶ್ ನಾಯಕ್ ಕಾಪು,ಗೋವರ್ಧನ್ ಶೇರಿಗಾರ್, ಲಕ್ಷ್ಮಣ್ ಶೆಟ್ಟಿ, ಹಾಗೂ ಇತರರು ಉಪಸ್ಥಿತರಿದ್ದರು.

ರಾಘವೇಂದ್ರ ಪ್ರಭು,ಕವಾ೯ಲು - ಸಿರಿಗನ್ನಡ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ಗೆ ಆಯ್ಕೆ

Posted On: 25-02-2021 03:42PM

ಉಡುಪಿ : ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು, ಕನಾ೯ಟಕ ರಕ್ಷಣಾ ವೇದಿಕೆ' ಸಪ್ತಸ್ವರ ಸಂಗೀತ ಕಲಾ ಬಳಗ ಬೆಳಗಾವಿ ಮತ್ತು ಮರಳ ಸಿದ್ದೇಶ್ವರ ಕಲಾ ಪೋಷಕ ಸಂಘ ವತಿಯಿoದ ಫೆ.28 ರಂದು ಬೆಳಗಾವಿಯಲ್ಲಿ ನಡೆಯುವ ರಾಷ್ಟ್ರೀಯ ಕಲಾ ಉತ್ಸವ -2021 ಕಾಯ೯ಕ್ರಮದಲ್ಲಿ ಸಾಧಕರಿಗೆ ಗೌರವ ವಿಭಾಗದಲ್ಲಿ ಉಡುಪಿ ಜಿಲ್ಲೆಯ ರಾಘವೇಂದ್ರ ಪ್ರಭು,ಕವಾ೯ಲು ರವರು ಸಿರಿಗನ್ನಡ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ. ಸ್ವಚ್ಚ ಭಾರತ್ ಫ್ರ್oಡ್ಸ್ ಸಂಯೋಜಕರಾಗಿರುವ ಇವರು ಸಮಾಜಮುಖಿ ಕಾಯ೯ಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕುರ್ಕಾಲು : ಡಿಜಿಟಲ್ ಗ್ರಂಥಾಲಯ ಉದ್ಘಾಟನೆ

Posted On: 25-02-2021 03:38PM

ಕಾಪು :ಕುರ್ಕಾಲು ಗ್ರಾಮ ಪಂಚಾಯತ್ ನ ಕಟ್ಟಡದಲ್ಲಿರುವ ಸಾರ್ವಜನಿಕ ಗ್ರಂಥಾಲಯವನ್ನು ಡಿಜಿಟಲ್ ಗ್ರಂಥಾಲಯವನ್ನಾಗಿ ಪರಿವರ್ತಿಸಲಾಗಿದ್ದು ದಿನಾಂಕ 24/02/2021ರಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಹೇಶ್ ಶೆಟ್ಟಿ ಹಾಗೂ ಕಾಪು ತಾಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿಯವರಾದ ಶ್ರೀ ವಿವೇಕಾನಂದ ಗಾಂವ್ಕರ್ ಉದ್ಘಾಟನೆ ಮಾಡಿದರು.

ತಾರಾ ಪ್ರಕಾಶನ, ಬೆಂಗಳೂರು ಇದರ ಟ್ರಸ್ಟಿಯವರಾದ ಅಮೇರಿಕಾದಲ್ಲಿ ಪ್ರಾಧ್ಯಾಪಕರಾಗಿರುವ ಮುಕುಂದ್ ರವರು ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿರುವ ಕಂಪ್ಯೂಟರ್ ನ್ನು ಅಳವಡಿಸಿದ್ದು, ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನ ಆಡಳಿತಾಧಿಕಾರಿಯವರಾಗಿದ್ದ ಕಾಪು ತಾಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿಯವರಾದ ಶ್ರೀ ವಿವೇಕಾನಂದ ಗಾಂವ್ಕರ್ ರವರನ್ನು ಸನ್ಮಾನಿಸಲಾಯಿತು.

ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀಮತಿ ಮಾರ್ಗರೇಟ್ ಸೀಮಾ ಡಿ ಸೋಜ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಸುದರ್ಶನ ರಾವ್, ಸರಿತ, ನಥಾಲಿಯ ಮಾರ್ಟಿಸ್, ಸರೋಜ, ಸ್ವಪ್ನ, ವಿನ್ಸೆಂಟ್ ರೋಡ್ರಿಗಸ್, ಶೋಭಾ, ಮಹೇಶ್ ಶೆಟ್ಟಿ, ಪ್ರಶಾಂತ್, ಸಿಂಧೂ ಪೂಜಾರ್ತಿ, ಪ್ರವೀಣ್, ಮಲ್ಲಿಕಾ, ಗ್ರಂಥಾಲಯ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಶ್ರೀಮತಿ ಪುಷ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಕಲಾ, ಕಾರ್ಯದರ್ಶಿ ಗಾಯತ್ರಿ, ಪಂಚಾಯತ್ ಸಿಬ್ಬಂದಿಗಳಾದ ಶ್ರೀ ಸತೀಶ್, ಶ್ರೀ ಹೇಮನಾಥ್ ಉಪಸ್ಥಿತರಿದ್ದರು.

ಅಸಮಾನ್ಯರಾಗಿ ಬೆಳೆದು ನಿಂತ ಮೇರು ವ್ಯಕ್ತಿ ಸತೀಶ್ ಕುಮಾರ್ ಅಂಚನ್, ಬಜಾಲ್

Posted On: 24-02-2021 02:53PM

ಶ್ರೀ ಸತೀಶ್ ಕುಮಾರ್ ಬಜಾಲ್ , ಸೌದಿ ಅರೇಬಿಯಾ ಮೂಲತ: ಅಂಚನ್ಸ್ ಹೌಸ್ ಕಂಕನಾಡಿ ಪಕ್ಕಲಡ್ಕ ಬಜಾಲ್ ನವರು. ತಂದೆ ದಿ! ಚಂದ್ರಶೇಖರ್ ಕುಂದರ್ ಕೊಡಿಯಲ್ ಬೈಲ್, ತಾಯಿ ದಿ! ಶಾರದ ಅಂಚನ್, ಕಂಕನಾಡಿ ಪಕ್ಕಲಡ್ಕ, ಬಜಾಲ್. 3ಗಂಡು ಮಕ್ಕಳಲ್ಲಿ ಕಿರಿಯವನು ಸತೀಶ್ ಕುಮಾರ್ ಬಜಾಲ್. ತನ್ನ 3ನೇ ವಯಸಿನಲ್ಲೇ ತಾಯಿಯನ್ನು ಕಳೆದುಕೊಂಡು ನಂತರ ತನ್ನ ಅಜ್ಜಿ ಹಾಗೂ ಮಾವ ಶ್ರೀ ರಾಘವ ಅಂಚನ್ ಆರೈಕೆಯಲ್ಲಿ -ಬಜಾಲ್ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಹಾಗೂ ರೋಸಾರಿಯೊ ಹೈಸ್ಕೂಲ್ ನಲ್ಲಿ ಪ್ರೌಢಶಿಕ್ಷಣ. ಸಂತ ಅಲೋಸಿಯಸ್ ಕಾಲೇಜಿನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಸಂತ ಅಲಾಸಿಯಸ್ ಸಂಧ್ಯಾ ಕಾಲೇಜ್. ಅಂತಿಮ B.A ಕಲಿಯುತ್ತಿರುವಾಗ ಅಲ್ಲಿನ ಆಡಳಿತ ಮಂಡಳಿ ಸಂಧ್ಯಾ ಕಾಲೇಜನ್ನು ಸರಕಾರಿ ಅನುದಾನವಿಲ್ಲದ ಕಾರಣ ಮುಚ್ಚುವ ನಿರ್ಧಾರ ಮಾಡಿ, ಮೊದಲು ಪ್ರಥಮ ಪಿಯುಸಿ, ಪ್ರಥಮ ಪದವಿ ಕಾಲೇಜನ್ನು ನಿಲ್ಲಿಸಿದಾಗ ಎಲ್ಲಾ ವಿದ್ಯಾರ್ಥಿ ಸಂಘಗಳನ್ನು ಒಗ್ಗೂಡಿಸಿ ಹಾಗೂ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ 50 ದಿನಗಳ ಅವಿರತ ಹೋರಾಟದ ಫಲವಾಗಿ ಸರಕಾರದಿಂದ ಕಾಲೇಜಿಗೆ ಅನುದಾನ ಬಿಡುಗಡೆ. ಹಾಗೂ 1991-92 ಸಾಲಿನ ಕಾಲೇಜು ವಿದ್ಯಾರ್ಥಿ ಸಂಘಕ್ಕೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆ. ಕಾಲೇಜಿನ 25 ವರ್ಷದ ಬೆಳ್ಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ. ಸರ್ವ ಕಾಲೇಜು ವಿದ್ಯಾರ್ಥಿ ಸಂಘಕ್ಕೆ ಉಪಾಧ್ಯಕ್ಷಾರಾಗಿ ಆಯ್ಕೆ. ಸರ್ವ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಘಕ್ಕೆ-3 ವರ್ಷಗಳ ಸತತವಾಗಿ ಸಂಚಾಲಕಾರಾಗಿ ಆಯ್ಕೆ. ನಂತರ ಸಲಹೆಗರರಾಗಿ ಸೇವೆಸಲ್ಲಿಸಿ.

ವೃತ್ತಿಪರ ಕಾಲೇಜು ಶಿಕ್ಷಣ ವಿದ್ಯಾರ್ಥಿ ಸಂಘದ ಸಂಚಾಲಕಾರಾಗಿ ಹಾಗು ಭಾರತ ವಿದ್ಯಾರ್ಥಿ ಫೆಡರೇಶ್ ಮಂಗಳೂರು ಅಧ್ಯಕ್ಷರಾಗಿ, ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ. ಹಲವು ಹೋರಾಟ ಚಳುವಳಿಗಳಿಗೆ ನಾಯಕತ್ವವನ್ನು ನೀಡಿದ್ದಾರೆ. ದ.ಕ ಜಿಲ್ಲೆಯಲ್ಲಿ ತ್ರೋಬಾಲ್ ಅಸೋಷ್ಷಯೇಷನ್ ಸ್ಥಾಪಕಲ್ಲಿ ಒಬ್ಬರಾಗಿದ್ದಾರೆ ತನ್ನ ಊರಿನ ಪಕ್ಕಲಡ್ಕ ಯುವಕ ಮಂಡಲದ (ರಿ) ಇದರ ಕಾರ್ಯದರ್ಶಿಯಾಗಿರುವಾಗ ಇಡೀ ಬಜಾಲ್ ಗ್ರಾಮವನ್ನು ಸಾಕ್ಷರತ ಅಂದೋಲನದ ಸಮಯ ದತ್ತು ಸ್ವೀಕಾರ ಮಾಡಿ. ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಬಜಾಲ್, ಕಂಕನಾಡಿ ಮತ್ತು ಜಪ್ಪಿನ ಮೊಗರು ಗ್ರಾಮದಲ್ಲಿ ಪ್ರಥಮ ಬಾರಿಗೆ ಲೋಕ ಅದಾಲತ್ ಕಾರ್ಯಕ್ರಮವನ್ನು PYM ಮತ್ತು SDM ಕಾಲೇಜಿನ ಸಹಯೋಗದಿಂದ ಆಗಿನ ಜಿಲ್ಲಾಧಿಕಾರಿ ಭರತ್ ಲಾಲ್ ಮೀನರಿಂದ ಉದ್ಘಾಟಿಸಿ. ಜಿಲ್ಲಾ ಮಾಜಿಸ್ಟೇಟ್, ಅಸಿಸ್ಟೆಂಟ್ ಕಮಿಷನರ್ ತಹಸೀಲ್ದಾರ್, ಇನ್ನಿತರ ಎಲ್ಲಾ ಅಧಿಕಾರಿಗಳನ್ನು-ಬಜಾಲಿನ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಸೇರಿಸಿ ಒಂದೇ ದಿನ 460ಅರ್ಜಿಗಳನ್ನು ಸ್ವೀಕರಿಸಿ ಅದೇ ದಿನ 270 ಅರ್ಜಿಗಳ ಸಮಸ್ಯೆಗಳನ್ನು ಪರಿಹರಿಸಿ ಇನ್ನುಳಿದ ಅರ್ಜಿಗಳ ಸೊಕ್ತ ದಾಖಲೆಗಳು ಬಟ್ಟುಗೂಡಿಸಿ ನಂತರ ದಿನಗಳಲ್ಲಿ ಸರಿಪಡಿಸಿದ ಪರಿಹರಿಸಿ ಬಗೆಹರಿಸುವುದರಲ್ಲಿ ಇವರು ಶ್ರಮಿಸಿದ್ದಾರೆ. ರಾಜ್ಯದಲ್ಲಿ ಪ್ರಥಮ ಬಾರಿ ಬಜಾಲ್ ಗ್ರಾಮದ 48 ಸ್ಥಳಗಳನ್ನು ಗುರುತಿಸಿ ಒಂದೇ ದಿನ ಒಂದೇ ಸಮಯದಲ್ಲಿ -ಪಕ್ಕಲಡ್ಕ ಯುವಕ ಮಂಡಲ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಎಲ್ಲಾ ಕಾಲೇಜಿನ NSS ವಿದ್ಯಾರ್ಥಿಗಳು ಹಾಗೂ ಊರಿನ ಸಂಘ ಸಂಸ್ಥೆಯ ಯುವಕರನ್ನು ಸೇರಿಸಿ ಬ್ರಹತ್ ಶ್ರಮದಾನ ಆಂದೋಲನವನ್ನು ಮಾಡಿದ ಕೀರ್ತಿ ಅವರದು. ಅದಕ್ಕೆ ಆಗಿನ ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಶಾಲಿನಿ ಗೋಯಲ್, ಜಿಲ್ಲಾಧಿಕಾರಿ ಭರತ್ ಲಾಲ್ ಮೀನರಿಂದ ಪ್ರಶಂಸೆಗೆ ಪಾತ್ರ.

ಜಲ್ಲಿಗುಡ್ಡೆ ಮಾರಿಯಮ್ಮ ಸೇವಾ ಮಂದಿರದಲ್ಲಿ ಹಲವು ಕಂದಾಯ ಶಿಬಿರ ಹಾಗೂ ಲಯನ್ಸ್ ಕ್ಲಬ್ ಮಂಗಳಾದೇವಿ ಇದರ ಸಹಯೋಗದಿಂದ ಹಲವು ನೇತ್ರ ಚಿಕಿತ್ಸೆ, ವೈದ್ಯಕೀಯ ಶಿಬಿರಗಳನ್ನು ಮಾಡಿ ಹಲವರಿಗೆ, ನೇತ್ರ ಶಸ್ತಚಿಕಿತ್ಸೆ, ಕನ್ನಡಕ್ಕ ನೀಡುವಲ್ಲಿ ನೆರವಾಗಿದ್ದಾರೆ. ಗ್ರಾಮೀಣ ಯುವಕರಿಗೆ ಕಲಾ ಪ್ರತಿಭೆಗೆ ಪೋತ್ಸಾಹಿಸಲು PYM ಡಾನ್ಸ್ ಗ್ರೂಪ್ ಸ್ಥಾಪನೆ -ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದಿರುತ್ತಾರೆ. ಹಲವು ಬಾರಿ ಯುವಕ ಮಂಡಲ ಹಾಗೂ ಶಾಲೆಗಳಲ್ಲಿ ರಕ್ತದಾನ ಶಿಬಿರವನ್ನು ಮಾಡಿ ಹಾಗೂ ಇತರ ಸಮಯದಲ್ಲಿ ರಕ್ತದಾನಿಗಳನ್ನು ಸಂಪರ್ಕಿಸಿ ರಕ್ತದ ವ್ಯವಸ್ಥೆ ಮಾಡುತಿದ್ದ ಮಂಗಳೂರಿನ 24*7 ಆಗಿದ್ದ ಅಸಮಾನ್ಯ ವ್ಯಕ್ತಿ. ಸಂದೇಶ ಬಜ್ಜೋಡಿ ನಂತೂರು, ಹಾಗೂ ದ. ಕ. ಪತ್ರಕರ್ತರ ಸಂಘದ ವತಿಯಿಂದ -ಪತ್ರಿಕೋದ್ಯಮ ತರಬೇತಿಯನ್ನು ಪಡೆದು ಅದರ ಪ್ರಮಾಣ ಪತ್ರವನ್ನು -ಸಂತ-ಮದರ್ ತೆರೇಸಾರವರ ದಿವ್ಯಹಸ್ತದಿಂದ ಆಶೀರ್ವಾದ ಪಡೆದಿರುತ್ತಾರೆ. ನಂತರ ಮಂಗಳೂರು ಮಿತ್ರ, ಕರಾವಳಿ ಮಾರುತ ಇದರ ವರದಿಗಾರರಾಗಿ. ಹಾಗೂ ಮಂಗಳೂರು ಯೂನಿಟಿ ಹೆಲ್ತ್ ಕಾಂಪ್ಲೆಕ್ಸ್ ನಲ್ಲಿ 3 ವರ್ಷಗಳ ಕಾಲ Front Office incharge ಹಾಗೂ A.M.O ರವರ ಆಪ್ತಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿರುತ್ತಾರೆ. ಮಧ್ಯಮ ಕುಟುಂಬದಿಂದ ಬಂದು- ತನ್ನ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಮನಗಂಡು ತನ್ನ ಗೆಳೆಯರು ಮತ್ತು ಕುಟುಂಬಸ್ತರ ಒತ್ತಾಯದ ಮೇರೆಗೆ -1996ಕ್ಕೆ ಸೌಧಿ ಅರೇಬಿಯಾಕ್ಕೆ ಉದ್ಯೋಗ ನಿಮಿತ್ತ ಪ್ರಯಾಣ. -ಸೌಧಿಯ ಜಿದ್ದ ,ರಿಯಾದ್ ,ದಮ್ಮಾಮ್ ಅಲ್ ಹಸಾ ರಲ್ಲಿ , Reginal Sales Manager/Business Development Manager, Brach Manager ಆಗಿ -ಒಟ್ಟು 12 ವರ್ಷಗಳ ಸೇವೆ ಮಾಡಿ ನಂತರ. ದಮ್ಮಾಮ್ ನಲ್ಲಿ ತನ್ನ ಸ್ವಂತ ಉದ್ದಿಮೆಯಲ್ಲಿ ತೊಡಗಿರುತ್ತಾರೆ. ಸೌದಿಯಲ್ಲಿ 2010ರಲ್ಲಿ ಊರಿನ ಯುವಕರು ಮತ್ತು ಮಕ್ಕಳ ಕಲಾಪ್ರತಿಭೆಯನ್ನು ಪೋತ್ಸಾಹಿಸುವ ನಿಟ್ಟಿನಲ್ಲಿ -ಕುಡ್ಲ ಅಡ್ವೆಂಚರ್ ದಮ್ಮಮ್ (KAD)ನ್ನು ಸ್ಥಾಪಿಸಿದವರಲ್ಲಿ ಪ್ರಮುಖರು 2015ರಲ್ಲಿ (ಯಕ್ಷಗಾನ ಕಲಾವಿದರಿಗೆ ಪೋತ್ಸಾಹಿಸುವ ನಿಟ್ಟಿನಲ್ಲಿ) ಹವ್ಯಾಸಿ ಕಲಾವಿದರು ಸೌದಿ ಅರೇಬಿಯಾ ತಂಡದ ಸ್ಥಾಪಕರಲ್ಲೊಬ್ಬರು ಹಾಗೂ ಪ್ರಧಾನಕಾರ್ಯದರ್ಶಿಯಾಗಿದ್ದರು. ಅದರಿಂದ 3 ಬಾರಿ ಯಕ್ಷಗಾನ ಪ್ರದರ್ಶನವನ್ನು ಬಹರೈನ್ ನಲ್ಲಿ ಕನ್ನಡ ಸಂಘ ಬಹರೈನ್ ಸಹಕಾರದಿಂದ ಮಾಡಿಸಿರುತ್ತಾರೆ. 2016ರಲ್ಲಿ-(Damman Jubail )ದಮ್ಮಮ್ ಜುಬೈಲ್ ಬಿಲ್ಲವಾಸ್ ನ ಮುಖ್ಯ ಸಂಸ್ಥಾಪಕರಲ್ಲೊಬ್ಬರು. 2010ರಿಂದ ಸೌದಿ ಅರೇಬಿಯಾದ ಪ್ರತಿಸ್ಥಿತ charity organisation, ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ (MASA)ದ ಸಂಸ್ಕೃತಿಕ ಕಾರ್ಯದರ್ಶಿ, ಉಪ ಖಜಾಂಚಿ, ಸಹ ಕಾರ್ಯದರ್ಶಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಹಾಗೂ 2020 ನೇ ಇಸವಿಯಲ್ಲಿ MASA ವರ್ಷದ ವ್ಯಕ್ತಿ (Man Of The Year ) ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇದು ಅವರ ಸಮಾಜ ಸೇವೆಗೆ ಸಂದ ಗೌರವ ಸೌದಿ ಅರೇಬಿಯಾದ ದಮ್ಮಮ್ ನಲ್ಲಿ 24*7 ಲಭ್ಯವಾಗುವ ಆಶ್ತರ ಪಾಲಿಗೆ ಆಸರೆಯಾಗುವ ಏಕೈಕ ವ್ಯಕ್ತಿ -ಸದಾ ಸಮಾಜ ಸೇವೆಗೆ ತನ್ನನ್ನು ತಾನು ತೊಡಗಿಸಿಕೊಂಡಿರುವರು. ಇವರು ಉದ್ಯೋಗ ಕಳೆದುಕೊಂಡವರಿಗೆ ಉದ್ಯೋಗ ದೊರಕಿಸಿ ಕೊಡುವಲ್ಲಿ ಮಹತ್ಥರ ಪಾತ್ರ, ಕಾನೂನು ಸಲಹೆ ಸಹಕಾರ ಹಾಗೂ ಮುಖ್ಯವಾಗಿ Dead Body ಯನ್ನು ತನ್ನ ಹುಟ್ಟುರಿಗೆ ಕಳುಹಿಸಿ ಕೊಡುವ ಪುಣ್ಯದ ಕೆಲಸವನ್ನು ಯಾವುದೇ ಪ್ರತಿಫಲ, ಅಪೇಕ್ಷೆಯಿಲ್ಲದೆ ಸದಾ ಮಾಡುತಿರುತ್ತಾರೆ. Covid-19 ಸಂಧಿಗ್ದ ಸಮಯದಲ್ಲಿ ದಮ್ಮಮ್ ಹಾಗೂ ಊರಿನಲ್ಲಿ ಆಹಾರ ಕಿಟ್ ಹಂಚುವ ವ್ಯವಸ್ಥೆ ಹಾಗೂ ಸೌದಿ ಯಿಂದ ಊರಿಗೆ ಹೋಗುವ ನಮ್ಮ ಸಮುದಾಯದವರಿಗೆ ಸಹಕಾರ, ಪ್ರಯಾಣ ವ್ಯವಸ್ಥೆಯನ್ನು ಮಾಡಿ ಎಲ್ಲರಾ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ಇತ್ತಿಚೆಗೆ CARDTS Pompwel ಏಡ್ಸ್ ಪೀಡಿತ ಮಕ್ಕಳ ಆರೈಕೆ ಮಾಡಲು ದಾನಿಗಳ ಕೊರತೆ ಇದ್ದಾಗ ತನ್ನನ್ನು ಸಂಪರ್ಗಿಸಿದ ತಕ್ಷಣವೇ ಸ್ಪಂದಿಸಿ ಸೌದಿಯ ಮಾಸ ಸಂಸ್ಥೆಯ ಹಾಗು ಇತರ ದಾನಿಗಳನ್ನು ಒಟ್ಟುಸೇರಿಸಿ ದೋಡ್ಡ ಮೊತ್ತದ ಧನಸಹಾಯ ನೀಡಿ ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ. ತನ್ನ ಹುಟ್ಟುರಿನಲ್ಲಿ ಇರುವ ಬಡ ವಿಧ್ಯಾರ್ಥಿಗಳು ಮತ್ತು ಬಡ ರೋಗಿಗಳ ಚಿಕಿಸ್ಸ್ತಯ ಆರ್ಥಿಕ ನೆರವಿಗಾಗಿ ಊರಿನ ಸಂಘ ಸಂಸ್ಥಗಳಿಂದ ಬಂದ ವಿನಂತಿ ಪತ್ರಗಳಿಗೆ ಸ್ಪಂದಿಸಿ ಸೌದಿಯ ಮುಖ್ಯವಾಗಿ MASA ಹಾಗೂ ಇನ್ನಿತರ ಸಂಸ್ಥೆಗಳ ಮೂಲಕ ಪ್ರತೀ ವರ್ಷವೂ ನೆರವನ್ನು ನೀಡುತಿದ್ದಾರೆ. ಹಾಗೂ ಕಂಕನಾಡಿ ವಲಯ ಬಂಟರ ಸಂಘದ (ಅಳಪೆ,ಕಂಕನಾಡಿ,ಬಜಾಲ್ )ವತಿಯಿಂದ ಸಂತ ಜೋಸೆಫ್ ರ ಪ್ರೌಡ ಶಾಲೆಯಲ್ಲಿ ನಡೆದ ವಾರ್ಪಿಕೋತ್ಸವ ಹಾಗೂ ಕಾರ್ಯಕ್ರಮದಲ್ಲಿ ಇವರು ಮಾಡುತ್ತಿರುವ ಸಮಾಜ ಮುಖಿ ಕೆಲಸಗಳನ್ನು ಗುರುತಿಸಿ 2017 ರಲ್ಲಿ ಸನ್ಮಾನಿಸಲಾಗಿದೆ. ಇಂತಹ ಮೇರು ವ್ಯಕ್ತಿತ್ವ ಕೊಡುಗೈ ಧಾನಿಗಳು, ನಿಸ್ವಾರ್ಥ ಸೌದಿ ಅರೇಬಿಯಾದ ಪ್ರತಿಸ್ಥಿತ charity organisation, ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ (MASA)ದ ಸಂಸ್ಕೃತಿಕ ಕಾರ್ಯದರ್ಶಿ, ಉಪ ಖಜಾಂಚಿ, ಸಹ ಕಾರ್ಯದರ್ಶಿ, ಉಪಾಧ್ಯಕ್ಷ) ಸೇವೆ ಸಲ್ಲಿಸಿರುತ್ತಾರೆ. ಹಾಗೂ 2020 ನೇ ಇಸವಿಯಲ್ಲಿ MASA ವರ್ಷದ ವ್ಯಕ್ತಿ (Man Of The Year ) ಪ್ರಶಸ್ತಿಯನ್ನು ಪಡೆದಿರುತ್ತಾರೆ.ಸೌದಿ ಅರೇಬಿಯಾದ ಪ್ರತಿಷ್ಠಿತ Charity Organization ಮಂಗಳೂರು ಆಸೋಷಿಯೇಷನ್ (ರಿ) (MASA) ಇದರ ವತಿಯಿದ ನಡೆದ ವಾರ್ಷಿಕ ಮಹಾ ಸಭೆಯಲ್ಲಿ COVID-19 ಸಮಯದಲ್ಲಿ ಅವರು ಮಾಡುತ್ತಿರುವ ಸಕ್ರೀಯ ಸೇವೆಯನ್ನು ಗುರುತಿಸಿ COVID-19 Warriors ಪ್ರಶಸ್ತಿಯನ್ನು 28/09/2021 ರಂದು ನೀಡಿ ಗೌರವಿಸಲಾಯಿತು.ಹಾಗೂ Charity Organization ಮಂಗಳೂರು ಆಸೋಷಿಯೇಷನ್ (ರಿ) (MASA) ನೂತನ ಅಧ್ಯಕ್ಷರಾಗಿ ಸರ್ವಾನು ಮತದಿಂದ ಅವಿರೋದವಾಗಿ ಆಯ್ಕೆಯಾದ

ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಹಲವಾರು ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಸಹಕಾರವನ್ನು ನೀಡಿದ ಕೊಡುಗೈ ದಾನಿ. ಮಂಗಳೂರಿನ ಹೃದಯ ಭಾಗದಲ್ಲಿರುವ ಕಾರಣಿಕದ ಪುಣ್ಯ ಕ್ಷೇತ್ರ ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರ ಮತ್ತು ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್’ಲ್ ಇದರ ಕ್ಷೇತ್ರಾಭಿವೃದ್ಧಿಗೆ ತನ್ನ ಕೈಲಾದಷ್ಟು ಸಹಕಾರ ನೀಡಿದಲ್ಲದೆ ಇತರರನ್ನು ಒಗ್ಗೂಡಿಸಿ ಕ್ಷೇತ್ರದ ಬಗ್ಗೆ ಮನವರಿಕೆ ಮಾಡುವುದರೊಂದಿಗೆ ಧನ ಸಂಗ್ರಹ ಮಾಡಿ ಕ್ಷೇತ್ರಕ್ಕೆ ಸಮರ್ಪಿಸಿದ್ದಾರೆ. ಶ್ರೀಯುತರು ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ ಸಮಿತಿಯ ಸೌದಿ ಅರೇಬಿಯಾದ ಸಂಚಾಲಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಶ್ರೀಯುತರ ಧರ್ಮ ಪತ್ನಿ ಶ್ರೀಮತಿ ಸುಚಿತ್ರ ಸತೀಶ್ ಬಜಾಲ್ ಮತ್ತು ಇಬ್ಬರು ಮಕ್ಕಳು ಶ್ರೀನಿಧಿ & ಶ್ರೇಯ ಅವರೊಂದಿಗೆ ದಮ್ಮಾಮ್ ಸೌದಿ ಅರೇಭಿಯ ದಲ್ಲಿ ಸುಖಿ ಜೀವನವನ್ನು ನಡೆಸುತ್ತಿದ್ದಾರೆ. ಇಂತಹ ಮೇರು ವ್ಯಕ್ತಿತ್ವ ಕೊಡುಗೈ ಧಾನಿಗಳು, ನಿಸ್ವಾರ್ಥ ಸಮಾಜ ಸೇವಕರು ಸಮಾಜಕ್ಕೆ ಮಾದರಿ. ಇವರ ನಿಸ್ವಾರ್ಥ ಸೇವೆಗೆ ಡೊಡ್ಡ ಸಲಾಂ.

ಆರ್ ಟಿ ಐ ಕಾರ್ಯಕರ್ತ ಶಂಕರ್ ಶಾಂತಿ ಮೇಲೆ ಮಾರಣಾಂತಿಕ ಹಲ್ಲೆ

Posted On: 23-02-2021 10:25PM

ಬಾರ್ಕೂರು : ಜನಸಾಮಾನ್ಯರಿಗಾಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟಗಳನ್ನು ರೂಪಿಸುತ್ತಾ ಕಾನೂನು, ನಿಯಮ ಪಾಲನೆ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಶಂಕರ ಶಾಂತಿಯವರ ಮೇಲೆ ದಿನಾಂಕ ಫೆಬ್ರವರಿ 20, ಆದಿತ್ಯವಾರದಂದು ಮನೆಯ ಸಮೀಪದ ಸಭಾಭವನದ ಅಡುಗೆ ಕೋಣೆಯಲ್ಲಿ ಕೂಡಿ ಹಾಕಿ, ಚಿತ್ರ ಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಅದೇ ಸಮಯಕ್ಕೆ ಬೊಬ್ಬೆ ಕೇಳಿ ಸ್ಥಳಕ್ಕಾಗಮಿಸಿದ ಶಂಕರ ಶಾಂತಿಯವರ ಹೆಂಡತಿ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತನ್ನ ಗಂಡನನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದಾರೆ.

RTI ಕಾರ್ಯಕರ್ತನಾಗಿ ಸಾಮಾಜಿಕ ನೆಲೆಯಲ್ಲಿ ತನ್ನ ಊರಿನಲ್ಲಿ ಹಾಗೂ ಸುತ್ತಮುತ್ತ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದವರು ಶಂಕರ ಶಾಂತಿ. ರಸ್ತೆ ಸಾರಿಗೆ ಸುರಕ್ಷತೆ ವಿಷಯ, ಕಾಂಕ್ರೀಟ್ ರಸ್ತೆ ಕಳಪೆ ವಿಷಯ, ಬಾರ್ಕೂರು ಜೈನ ಬಸದಿ ಆಕ್ರಮಣ ತೆರವು, ಹೊಸಾಳ ಗರಡಿಯಲ್ಲಿ ವೈದಿಕನೋರ್ವನ ಅನಾಚಾರ ಪ್ರಶ್ನಿಸುವಿಕೆ, ಇಂತಹದ್ದೆ ಅನೇಕ ಜನಪರ ಸೇವೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದವರು ಶಂಕರ ಶಾಂತಿ.

ರಸ್ತೆ ಬದಿಯಲ್ಲಿ ಬ್ಯಾನರ್ ಅಳವಡಿಸಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರ ಕುರಿತು ಕ್ರಮ ಕೈಗೊಂಡಿದ್ದರಿಂದ ದುಷ್ಕರ್ಮಿಗಳಾದ ಪ್ರವೀಣ ಆಚಾರ್ಯ, ಪ್ರಸಾದ್ ಆಚಾರ್ಯ, ಶಾಂತರಾಮ ಶೆಟ್ಟಿ, ಮಂಜಪ್ಪ ಪೂಜಾರಿ, ದಿವಾಕರ ಒಟ್ಟು ಸೇರಿ ಕಬ್ಬಿಣದ ರಾಡ್‌ನಿಂದ ಕೊಲೆಯತ್ನ ನಡೆಸಿರುವುದು ದುಷ್ಟಕೂಟದ ರಾಜಕೀಯ ಪ್ರೇರಿತ ದುಷ್ಟಕೃತಕ್ಕೆ ಈ ಪ್ರಕರಣ ಪುರಾವೆ ಒದಾಗಿಸಿದೆ. ಮನುಷ್ಯತ್ವವಿಲ್ಲದ ವರ್ತನೆಯಾಗಿದೆ ಇದರಲ್ಲಿ ಅವರ ಸಂಬಂಧಿಯಾದ ಮಂಜಪ್ಪ ಪೂಜಾರಿ ಇತರರ ಜೊತೆ ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಶಂಕರ ಶಾಂತಿಯವರ ಹೆಂಡತಿಯವರು ಬಾರದೆ ಹೋದಲ್ಲಿ ಶಂಕರ ಶಾಂತಿ ಶಿವನ ಪಾದ ಸೇರುತ್ತಿದ್ದರೇನೋ? ಸಾಧ್ಯ ಶಂಕರ ಶಾಂತಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆಯುತ್ತಿದ್ದು, ಈ ಹಲ್ಲೆ ಪ್ರಕರಣ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2021 ಕಲಂ: 143, 147, 148, 341, 323, 324, 326, 307, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಸ್ವಾರ್ಥ ಸಾಧನೆಯಿಂದ ತಪ್ಪು ಯಾರೇ ಮಾಡಿರಲಿ ಅದಕ್ಕೆ ಶಿಕ್ಷೆಯಾಗಲಿ ಎನ್ನುವುದೇ ನಮ್ಮ ಇರಾದೆ. ತಪ್ಪುಗಳನ್ನು, ಸಾರ್ವಜನಿಕ ಅನ್ಯಾಯಗಳನ್ನು ಪ್ರಶ್ನಿಸಿದಾಕ್ಷಣ ಕೊಲೆ ಮಾಡುವ ಮಟ್ಟಕ್ಕೆ ತಲುಪಿರುವುದು ಈ ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತವೆ ಸರಿ. ಇದೀಗ ಅಗರ್ಭ ಶ್ರೀಮಂತಿಕೆಯ ಮತ್ತು ರಾಜಕೀಯ ಪ್ರಭಾವ ಬಳಸಿ ತಪ್ಪಿತಸ್ಥರು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಇವರನ್ನು ಬಂಧಿಸಿ ಸೂಕ್ತ ಶಿಕ್ಷೆ ವಿಧಿಸಬೇಕು. ಇಂತಹ ಸಮಾಜ ದ್ರೋಹಿ ಕೆಲಸಮಾಡುವವರನ್ನು ಸುಮ್ಮನೆ ಬಿಟ್ಟರೆ ಮುಂದೆ ಇನ್ನಷ್ಟು ಲೋಕಕಂಠಕರಾಗಿ ಅದೆಷ್ಟೋ ಪಾಪದವರ ಮನೆ ಹಾಳುಮಾಡಲು ಹಿಂಜರಿಯುವುದಿಲ್ಲ‌. ಸಮಾಜಸೇವಕ, ಬಿಲ್ಲವ ಸಮಾಜದ ಹೋರಾಟಗಾರ ಬಾರ್ಕೂರು ಶಂಕರ ಶಾಂತಿಯ ಮೇಲಾದ ಮಾರಣಾಂತಿಕ ಹಲ್ಲೆ ಖಂಡನೀಯ. ಈ ದುಷ್ಕೃತ್ಯವೆಸಗಿದ ಎಲ್ಲಾ ಆರೋಪಿಗಳಿಗೂ ಶಿಕ್ಷೆಯಾಗಲಿ. ಪೋಲಿಸ್ ಇಲಾಖೆ ಮತ್ತು ಜನಪ್ರತಿನಿಧಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಶಂಕರ ಶಾಂತಿಗೆ ನ್ಯಾಯ ಒದಗಿಸುವಂತಾಗಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.