Updated News From Kaup

ಬಡಾ ಎರ್ಮಾಳು ನಾತು ಪೂಜಾರಿ ನಿಧನ

Posted On: 10-05-2021 07:04PM

ಕಾಪು : ಬಡಾ ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಕುದ್ರೊಟ್ಟು ಬ್ರಹ್ಮಬೈದರ್ಕಳ ಗರಡಿಯ ಮಾಜಿ ಅಧ್ಯಕ್ಷರು ಹಾಗೂ ಬಡಾ ಎರ್ಮಾಳು ನಡಿಕರೆಯ ಗುರಿಕಾರರಾಗಿ ಸಮಾಜಮುಖಿ ಕಾರ್ಯಗಳಲ್ಲಿ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಇದ್ದುಕೊಂಡು ಜೀವನದ ಸುದೀರ್ಘ ಕಾಲ ಮೂರ್ತೆದಾರಿಕೆ ಮಾಡಿಕೊಂಡು ಜನಾನುರಾಗಿಯಾಗಿದ್ದ ಬಿಲ್ಲವ ಮುಖಂಡ ನಾತುಪೂಜಾರಿ ಸ್ವಗೃಹದಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ಕೊರೊನಾ ಸಮಯದಲ್ಲಿ ಊಟವ ನೀಡುವ ವೇದಶ್ರೀ ಕೋಟ್ಯಾನ್

Posted On: 09-05-2021 10:29AM

ಕಾಪು : ಕೊರೋನಾದಿಂದ ಇಡೀ ದೇಶವೇ ಮತ್ತೆ ತತ್ತರಿಸಿ ಹೋಗಿದೆ. ಪರಿಸ್ಥಿತಿ ಮೊದಲಿನಂತೆ ಬರಲು ಎಲ್ಲೆಡೆ ಲಾಕ್ ಡೌನ್ ನಿಯಮ ಜಾರಿಯಲ್ಲಿದೆ. ಎಲ್ಲರು ಮನೆಯಲ್ಲೇ ಇದ್ದು ತಮ್ಮ ತಮ್ಮ ಆರೋಗ್ಯ ಕಾಪಾಡಬೇಕಾಗಿದೆ.

ಕಾಪು : ವಲಸೆ ಬಂದಿದ್ದ 20 ಜನರನ್ನು ಊರಿಗೆ ಕಳುಹಿಸಿಕೊಡುವ ಸಲುವಾಗಿ ಆಸೀಫ್ ಆಪತ್ಭಾಂದವರ ಕೆಲಸ ಶ್ಲಾಘನೀಯ - ಕಾಪು ಠಾಣಾಧಿಕಾರಿ ರಾಘವೇಂದ್ರ. ಸಿ

Posted On: 08-05-2021 02:23PM

ಕಾಪು : ಮಹಾರಾಷ್ಟ್ರದಿಂದ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವಠಾರಕ್ಕೆ ಕಳೆದ ಜನತಾ ಕರ್ಫ್ಯೂ ಸಂದರ್ಭದಲ್ಲಿ ವಲಸೆ ಬಂದಿದ್ದವರನ್ನು ಅವರ ಊರಿಗೆ ತಲುಪಿಸಲು ಮೈಮುನಾ ಪೌಂಡೇಶನ್ ರಿ. ಕಾರ್ನಾಡ್ ಮೂಲ್ಕಿ ಇದರ ಸಂಸ್ಥಾಪಕರಾದ ಆಸೀಫ್ ಅಪತ್ಭಾಂದವ ಅವರು ಫೇಸ್ಬುಕ್ ಲೈವ್ ಮುಖಾಂತರ ದಾನಿಗಳ ಸಹಕಾರದಲ್ಲಿ ಕೇವಲ 5 ನಿಮಿಷದಲ್ಲಿ 10,000 ಸಾವಿರ ರೂಪಾಯಿಯನ್ನು ಸಂಗ್ರಹಿಸಿ. ತನ್ನ ಆಂಬುಲೆನ್ಸ್ ಮೂಲಕ ಅವರನ್ನು ಕಾಪುವಿನಿಂದ ಉಡುಪಿ ರೈಲ್ವೆ ನಿಲ್ದಾಣಕ್ಕೆ ತಲುಪಿಸಿ, ಟಿಕೆಟ್ ವ್ಯವಸ್ಥೆ ಮಾಡಿದರು.

ಇನ್ನಂಜೆ : ರಕ್ತದಾನ ಶಿಬಿರ

Posted On: 07-05-2021 10:08AM

ಕಾಪು : ವಿಶ್ವ ಹಿಂದು ಪರಿಷದ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಕಾಪು ತಾಲೂಕು ಮತ್ತು ರೆಡ್ ಕ್ರಾಸ್ ರಕ್ತನಿಧಿ ಕೇಂದ್ರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಮೇ 9, ಭಾನುವಾರ ಇನ್ನಂಜೆಯ ದಾಸ ಭವನದಲ್ಲಿ ನಡೆಯಲಿದೆ.

ಪುರಸಭೆಯ ಸಮಗ್ರ ಘನತ್ಯಾಜ್ಯ ನಿರ್ವಹಣೆಯ ಕನಸನ್ನು ಪೂರ್ಣಗೊಳಿಸುವ ಆಶಯಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ - ಅನಿಲ್ ಕುಮಾರ್ ಕಾಪು

Posted On: 06-05-2021 10:29PM

ಕಾಪು : ಕಾಪು ಪುರಸಭೆಯ ನೂತನ ಎಲ್ಲೂರು ಘನತ್ಯಾಜ್ಯ ಘಟಕದ ಪ್ರಗತಿ ಪರಿಶೀಲನೆ ನಡೆಸಲು ಕಾಪು ಪುರಸಭೆಯ ಅಧ್ಯಕ್ಷರಾದ ಅನಿಲ್ ಕುಮಾರ್ ಇವರು ಕಾಪು ಪುರಸಭೆಯ ಮುಖ್ಯಾಧಿಕಾರಿ ವೆಂಕಟೇಶ ನಾವಡ ಬಿ. ಹಾಗೂ ಸಿಬ್ಬಂದಿಗಳೊಂದಿಗೆ ಮೇ, 4ರಂದು ಭೇಟಿ ನೀಡಿರುತ್ತಾರೆ.

ಕಾಪು : ಪ್ರತಿದಿನ ಹಕ್ಕಿ ಪಿಕ್ಕಿ ಜನಾಂಗದವರ ಹಸಿವು ನೀಗಿಸುವ ತಂಡ

Posted On: 06-05-2021 04:54PM

ಕಾಪು : ಜನತಾ ಕಫ್ಯೂ೯ನ ಸಂದರ್ಭ ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನದ ವಠಾರದಲ್ಲಿರುವ ಹಕ್ಕಿ ಪಿಕ್ಕಿ ಜನಾಂಗದವರ ಹಸಿವು ನೀಗಿಸುವ ನಿಟ್ಟಿನಲ್ಲಿ ಪ್ರತಿದಿನ ಆಹಾರ ಒದಗಿಸುತ್ತಿರುವ ತಂಡವು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಇನ್ನಂಜೆ : ಮರ್ಕೊಡಿ ಪರಿಸರದ ತ್ಯಾಜ್ಯ ವಿಲೇವಾರಿ

Posted On: 06-05-2021 04:49PM

ಕಾಪು : ಇಂದು ಮರ್ಕೋಡಿ ಪರಿಸರದ ಶುಚಿತ್ವವು ಇನ್ನಂಜೆ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ರೋಕೆಶ್ ಮತ್ತು ತಂಡದಿಂದ ನಡೆಯಿತು.. ಗ್ರಾ.ಪಂ ಸದಸ್ಯರಾದ ನಿತೇಶ್ ಸಾಲ್ಯಾನ್ ಕಲ್ಯಾಲು, ಸ್ಥಳೀಯರಾದ ರಾಜ್ ಸಾಲ್ಯಾನ್ ಮತ್ತು ಬಾಲಕೃಷ್ಣ ಆರ್. ಕೋಟ್ಯಾನ್ ಕಾಪು ಉಪಸ್ಥಿತರಿದ್ದು ಮರ್ಕೊಡಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು.

ಹಿಂದು ಜಾಗರಣ ವೇದಿಕೆ ಕಾಪು ತಾಲೂಕು ವತಿಯಿಂದ ರಕ್ತದಾನ ಶಿಬಿರ

Posted On: 05-05-2021 09:31PM

ಕಾಪು : ಹಿಂದು ಜಾಗರಣ ವೇದಿಕೆ ಕಾಪು ತಾಲೂಕು ಮತ್ತು ಅಭಯಹಸ್ತ ಹೆಲ್ಪ್ ಲೈನ್ ಉಡುಪಿ ವತಿಯಿಂದ ಇಂದು ರಕ್ತದಾನ ಶಿಬಿರವು ಕಳತ್ತೂರು ಶೇಖರ ಶೆಟ್ಟಿಯವರ ಕುಶಲ ಶೇಖರ ಶೆಟ್ಟಿ ಇಂಟರ್ನ್ಯಾಷನಲ್ ಆಡಿಟೋರಿಯಂನಲ್ಲಿ ನಡೆಯಿತು. ಒಟ್ಟು 104 ಮಂದಿ ಕಾರ್ಯಕರ್ತರು ರಕ್ತದಾನ ಮಾಡಿದರು.

ಭಾರತ್ ಪ್ರೆಸ್ ಮಾಲಕ ದೇವದಾಸ್ ಪೈ ನಿಧನ

Posted On: 05-05-2021 06:10PM

ಉಡುಪಿ : ಭಾರತ್ ಪ್ರೆಸ್ ನ ಮಾಲಕರೂ ಉಡುಪಿ ಜಿಲ್ಲಾ ಮುದ್ರಣಾಲಯ ಗಳ ಮಾಲಕರ ಸಂಘ ದ ಮಾರ್ಗದರ್ಶಕರು ಧಾರ್ಮಿಕ ಚಿಂತಕರಾದ ದೇವದಾಸ್ ಪೈ ಯವರು ಏಪ್ರಿಲ್ 29 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.