Updated News From Kaup

ಸುಗ್ಗಿ ಮಾರಿಪೂಜೆಯಂದು ನಡೆಯಲಿರುವ ಶಿಲಾ ಪುಷ್ಪ ಸಮರ್ಪಣೆಯ ಪೂರ್ವಭಾವಿ ಸಮಾಲೋಚನಾ ಸಭೆ

Posted On: 23-02-2021 10:15PM

ಕಾಪು : ಮಾರ್ಚ್ 23/24 ರಂದು ನಡೆಯುವ ಸುಗ್ಗಿ ಮಾರಿಪೂಜೆಯಂದು ಜರಗಲಿರುವ ಶಿಲಾ ಪುಷ್ಪ ಸಮರ್ಪಣಾ ಬಗ್ಗೆ ಪೂರ್ವಭಾವಿ ಸಮಾಲೋಚನಾ ಸಭೆ ನಡೆಯಿತು.

ಎಲ್ಲೂರುದ ಉಲ್ಲಾಯೆ ತುಳು ಭಕ್ತಿಗೀತೆಯ ಸಿಡಿ ಬಿಡುಗಡೆ

Posted On: 23-02-2021 08:24PM

ಕಾಪು : ಕುಂಜೂರಿನ ಮೋಕೆದ ಕಲಾವಿದರು ಸಿದ್ಧಗೊಳಿಸಿದ ಎಲ್ಲೂರುದ ಉಲ್ಲಾಯೆ ತುಳು ಭಕ್ತಿಗೀತೆಯ ಸಿಡಿಯನ್ನು ಎಲ್ಲೂರು ಮಹತೋಭಾರ ದೇವರ ಸನ್ನಿಧಿಯಲ್ಲಿ ನೆರವೇರುತ್ತಿರುವ ಸೀಮೆಯ ರಾಶಿಪೂಜೆಯ ಸಂದರ್ಭ ಸೀಮೆಯ ತಂತ್ರಿಗಳಾದ ವೇ.ಮೂ . ಲಕ್ಷ್ಮೀನಾರಾಯಣ ತಂತ್ರಿಯವರು ಹಾಗೂ ಶ್ರೀ ಕೆ.ಎಲ್. ಕುಂಡತಾಯರವರು ಬಿಡುಗಡೆಗೊಳಿಸಿ ಹರಸಿದರು.

ರಾಜೇಶ್ ಆರ್.ಕೆ ಸಾಹಿತ್ಯದಲ್ಲಿ , ರತ್ನಾಕರ ಆಚಾರ್ಯ ಕುಂಜೂರು ಮತ್ತು ರವಿರಾಜ್ ಕುಲಾಲ್ ಎರ್ಮಾಳ್ ರವರ ಗಾಯನವಿದೆ.

ಸಿಡಿ ಬಿಡುಗಡೆ ಸಂದರ್ಭದಲ್ಲಿ ಎಲ್ಲೂರುಗುತ್ತು ಪ್ರಪುಲ್ಲ ಶೆಟ್ಟಿ, ನಡಿಮನೆ ದೇವರಾಜ್ ರಾವ್, ಎಲ್ಲೂರು ಯುವಕ ಮಂಡಲದ ಅಧ್ಯಕ್ಷರು ನಾಗರಾಜ್, ನಮ್ಮ ಕಾಪು ನ್ಯೂಸ್ ತಂಡದ ಉದಯ ಕುಲಾಲ ಉಪಸ್ಥಿತರಿದ್ದರು.

ಎಲ್ಲೂರು ಸೀಮೆಯ ವಾದ್ಯವಾದಕ ಶ್ರೀ ಲಕ್ಷ್ಮಣ ಸೇರಿಗಾರಗೆ ಸಮ್ಮಾನ

Posted On: 21-02-2021 09:00PM

ಕಾಪು : ಎಲ್ಲೂರು ಸೀಮೆಯ ಶ್ರೀ ವಿಶ್ವೇಶ್ವರ ದೇವಳದ ಪವಿತ್ರಪಾಣಿ ಮನೆತನದ ಶುಭ ಸಮಾರಂಭದಲ್ಲಿ ಎಲ್ಲೂರು ಸೀಮೆಯ ವಾದ್ಯವಾದಕ ಶ್ರೀ ಲಕ್ಷ್ಮಣ ಸೇರಿಗಾರ ಅವರನ್ನು ಕಟೀಲಿನ ಆನುವಂಶಿಕ ಅರ್ಚಕ ವೇ.ಮೂ. ಅನಂತ ಪದ್ಮನಾಭ ಆಸ್ರಣ್ಣ ಅವರು ಸಮ್ಮಾನಿಸಿದರು.

ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್, ಕೆ.ಎಲ್.ಕುಂಡಂತಾಯ, ಪುಷ್ಪಲತಾ ಎಲ್. ಕುಂಡಂತಾಯ , ಸತೀಶ ಕುಂಡಂತಾಯ, ಭಾರ್ಗವ ಎಲ್. ಕುಂಡಂತಾಯ ,ರಮ್ಯಾ ಬಿ. ಕುಂಡಂತಾಯ , ಶ್ರೀಕಾಂತ ಕುಂಡಂತಾಯ ಮುಂತಾದವರು ಉಪಸ್ಥಿತರಿದ್ದರು .

ಬಿರುವೆರ್ ಕಾಪು ಸೇವಾ ಟ್ರಸ್ಟ್ : ಜ್ಞಾನದೀವಿಗೆ ವಿದ್ಯಾರ್ಥಿವೇತನ ವಿತರಣೆ

Posted On: 21-02-2021 08:14PM

ಕಾಪು : ಸಮಾಜದಲ್ಲಿ ಜ್ಞಾನ ಸಂಪತ್ತನ್ನು ಹೊಂದಿರುವ ಪ್ರತಿಭೆಗಳಿಗೆ ಕೊರತೆಯಿಲ್ಲ. ಅವರ ಗುರುತಿಸುವಿಕೆ ಹಾಗೂ ಅವರಿಗೆ ಸರಿಯಾದ ಮಾರ್ಗದರ್ಶನವನ್ನು ಹೆತ್ತವರು,ಗುರುಗಳು ಮತ್ತು ಸಂಘ-ಸಂಸ್ಥೆಗಳು ಮಾಡಬೇಕಾಗಿದೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ, ಆಶಕ್ತರ ಪಾಲಿನ ಸೇವಾ ಸಂಸ್ಥೆಯಾಗಿ ದುಡಿಯುತ್ತಿರುವ ಬಿರುವೆರ್ ಕಾಪು ಸೇವಾ ಟ್ರಸ್ಟ್ ನ ಕಾರ್ಯ ಶ್ಲಾಘನೀಯ ಎಂದು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಹೇಳಿದರು. ಅವರು‌ ಬಿರುವೆರ್ ಕಾಪು ಸೇವಾ ಟ್ರಸ್ಟ್ ಆಶ್ರಯದಲ್ಲಿ ಕಾಪು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಜರಗಿದ ಕಾಪು ತಾಲೂಕಿನ ಪ್ರತಿಭಾವಂತ ಬಿಲ್ಲವ ಹಾಗೂ ಇತರ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ 2020-21ನೇ ಸಾಲಿನ ಜ್ಞಾನದೀವಿಗೆ ವಿದ್ಯಾರ್ಥಿವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಪಂಚಾಯತ್ ಸದಸ್ಯರಾದ ಗೀತಾಂಜಲಿ ಸುವರ್ಣ ಮಾತನಾಡಿ ಹೆತ್ತವರು ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿ ಮೂಲಕ ಅವರ ಭವಿಷ್ಯ ರೂಪಿಸಬೇಕಾಗಿದೆ. ಮಕ್ಕಳು ಕಲಿತು ಉದ್ಯೋಗ ಸೇರಿ ತಮಗೆ ಸಹಾಯ ನೀಡಿದ ಸಂಸ್ಥೆಗಳಿಗೆ ತಮ್ಮಿಂದಾದ ಸಹಾಯ ಮಾಡಬೇಕಾಗಿದೆ ಎಂದರು. ಕಲಿಕೆಯ ಹಂತದಲ್ಲಿಯೇ ಮುಂದಿನ ಗುರಿಯ ಬಗ್ಗೆ ದೃಢ ನಿರ್ಧಾರ ಮಕ್ಕಳಲ್ಲಿ ಇರಬೇಕು. ನಾಗರಿಕ ಸೇವಾ ಪರೀಕ್ಷೆಗಳ ಕಡೆಗೂ ಮಕ್ಕಳು ಗಮನಹರಿಸ ಬೇಕಾಗಿದೆ. ಕಲಿಕೆಯೊಂದಿಗೆ ವೃತ್ತಿಪರ ಕೌಶಲ್ಯವು ಇಂದು ಅನಿವಾರ್ಯ ಎಂದು ಶ್ರೀಗುರು ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ರಮೇಶ್ ಜಿ. ಅಂಚನ್ ಹೇಳಿದರು. ಕಾಪು ಪುರಸಭೆಯ ಅಧ್ಯಕ್ಷರಾದ ಅನಿಲ್ ಕುಮಾರ್ ಟ್ರಸ್ಟ್ ನ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.

ವಿದ್ಯಾರ್ಥಿ ವೇತನ ವಿತರಣೆ : ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಆರ್ಥಿಕವಾಗಿ ಹಿಂದುಳಿದ ಸುಮಾರು 40 ವಿದ್ಯಾರ್ಥಿಗಳಿಗೆ 1ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿವೇತನ ವಿತರಿಸಲಾಯಿತು. ಗೌರವ ವಂದನೆ : ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿ ಪಡೆದ ಮಕ್ಕಳಿಗೆ ಹಾಗೂ ಕಾರಣಿಕ ಕ್ಷೇತ್ರ ಶ್ರೀ ಪೊಯ್ಯ ಪೊಡಿಕಲ್ಲ ಗರಡಿಯ ಪಾತ್ರಿಗಳಾದ ಜಗ್ಗು ಪೂಜಾರಿ, ಶ್ರೀನಿವಾಸ ಪೂಜಾರಿ ಹಾಗೂ ಕಾಪುಕ್ಷೇತ್ರಕ್ಕೆ ಅಧಿಕಾರ ಪಟ್ಟದಲ್ಲಿರುವ ಶ್ರೀ ಧೂಮಾವತಿ ದೇವಸ್ಥಾನದ ಅರ್ಚಕರಾದ ಹರಿಶ್ಚಂದ್ರ ಕೋಟ್ಯಾನ್ ಮತ್ತು ವಿದ್ಯಾರ್ಥಿವೇತನಕ್ಕೆ ಧನ ಸಹಾಯ ಮಾಡಿದವರನ್ನು ಗೌರವಿಸಲಾಯತು. ಇದೇ ಸಂದರ್ಭ ಆರೋಗ್ಯ ಸಮಸ್ಯೆಯಿರುವ ವ್ಯಕ್ತಿಯೊರ್ವರಿಗೆ ಟ್ರಸ್ಟಿನಿಂದ ಆರ್ಥಿಕ ಸಹಾಯ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷರಾದ ವಿಕ್ರಂ ಕಾಪು ವಹಿಸಿದ್ದರು. ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷರಾದ ಪ್ರಭಾಕರ್ ಪೂಜಾರಿ, ಬಿರುವೆರ್ ಕಾಪು ಸೇವಾ ಟ್ರಸ್ಟ್ ನ ಅಡ್ಮಿನ್ ಸುಧಾಕರ ಸಾಲ್ಯಾನ್ ಹಾಗೂ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು. ಸುಧಾಕರ್ ಪೂಜಾರಿ ಸ್ವಾಗತಿಸಿ, ಅತಿಥ್ ಸುವರ್ಣ ಪಾಲಮೆ ಪ್ರಾರ್ಥಿಸಿ, ಚೇತನ್ ಶೆಟ್ಟಿ ನಿರೂಪಿಸಿದರು.

ಮುಂಡ್ಕೂರಿನ ವಿದ್ಯಾವರ್ಧಕ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಸುದರ್ಶನ ವೈ.ಎಸ್ ರವರಿಗೆ ಬೀಳ್ಕೊಡುಗೆ

Posted On: 21-02-2021 08:04PM

ಕಾರ್ಕಳ ತಾಲೂಕು ಮುಂಡ್ಕೂರಿನ ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನಲ್ಲಿ ಮೂವತ್ತು ವರ್ಷ ಉಪನ್ಯಾಸಕರಾಗಿ,ಆರು ವರ್ಷ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಸುದರ್ಶನ ವೈ.ಎಸ್.ಅವರನ್ನು ವಿದ್ಯಾವರ್ಧಕ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ , ವಿದ್ಯಾಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿ ಸಂಘ ಸಂಯೋಜಿಸಿರುವ ಸಮಾರಂಭದಲ್ಲಿ ಸಮ್ಮಾನಿಸಿ ಬೀಳ್ಕೊಡಲಾಯಿತು .

ಸೀತಾ ನದಿಗೆ ವಿಷವಿಕ್ಕುವ ಸ್ಥಿತಿಗೆ ಅಂತ್ಯ ಯಾವಾಗ ...?

Posted On: 19-02-2021 10:23PM

ಬ್ರಹ್ಮಾವರ ಮಾಬುಕಳ ಸೀತಾನದಿ ಸೇತುವೆಯ ಎರಡೂ ಬದಿಯಲ್ಲಿ ಕಸದ ರಾಶಿಯೇ ನಿಮಾ೯ಣವಾಗಿದೆ. ಈ ಕಸವು ಸಾವಿರಾರು ಜನರಿಗೆ ನೀರು ಒದಗಿಸುವ ಸೀತಾ ನದಿಗೆ ಸೇರುತ್ತಿರುವುದು ಅತ್ಯಂತ ದುಃಖದ ವಿಚಾರ.ಸಾವ೯ಜಿಕರು ಎಲ್ಲೆoದಲ್ಲಿ ಪ್ಯಾಸ್ಟಿಕ್ ಸಹಿತ ಕಸಬಿಸಾಡುವ ಸ್ಥಿತಿಯಿಂದ ಜಲಚರಗಳು ಸೇರಿದಂತೆ ಸಾವಿರಾರು ಜನರಿಗೆ ವಿಷ ಸೇರುತ್ತಿದೆ.

ಮೂರು ನಾಲ್ಕು ತಿಂಗಳ ಹಿಂದೆ ವಿವಿಧ ಸಂಘ ಸಂಸ್ಥೆಗಳು ಸೇರಿ ಸ್ವಚ್ಚತಾ ಕಾಯ೯ಕ್ರಮ ನಡೆಸಿ , ಸಾವ೯ಜನಿಕರಿಗೆ ಅರಿವು ಮೂಡಿಸಲು ಬ್ಯಾನರ್ ಅಳವಡಿಸಿದ್ದರು ಆದರೆ ಇದೀಗ ಬ್ಯಾನರ್ ಕಾಣಿಯಾಗಿದೆ ಈ ಸ್ಥಳದಲ್ಲಿ ಕಸದ ರಾಶಿಯೇ ನಿಮಾ೯ಣವಾಗಿದೆ! ಇಲ್ಲಿ ಬಿಸಾಡುವ ಕಸವನ್ನು ನಾಯಿಗಳು ರಸ್ತೆಯಲ್ಲಿ ಚೆಲ್ಲಾಡಿ ವಾಹನಗಳು ಸಂಚರಿಸಲು ಕಷ್ಟ ಪಡಬೇಕಾದ ಸ್ಥಿತಿ ನಿಮಾ೯ಣವಾಗಿದೆ. ಕಸದ ವಾಸನೆಯಿಂದ ರಸ್ತೆಯಲ್ಲಿ ನಡೆದಾಡುವವರು ಮೂಗು ಮುಚ್ಚಿ ಸಾಗಬೇಕಾದ ಪರಿಸ್ಥಿತಿಯಿದೆ.

ಕಸ ಬಿಸಾಡುವವರಿಗೆ ಸರಿಯಾದ ಶಿಕ್ಷೆಯಾಗಲಿ : ಈ ಪರಿಸರದಲ್ಲಿ ಸಿಸಿ ಟಿವಿ ಅಳವಡಿಸಿ ಕಸ ಬಿಸಾಡುವ ದುರುಳರಿಗೆ ಶಿಕ್ಷೆ ನೀಡಬೇಕು. ಸಾವ೯ಜನಿಕರು ಕಸ ಬಿಸಾಡುವವರನ್ನು ನೋಡಿದಾಗ ಅವರ ಭಾವಚಿತ್ರವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟು ಜನ ಜಾಗೃತಿ ಮೂಡಿಸಬೇಕು. ಜಿಲ್ಲಾಡಳಿತ ಸೇರಿದಂತೆ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರವು ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಈ ಪರಿಸರವನ್ನು ಅದೇ ರೀತಿ ನದಿಯನ್ನು ರಕ್ಷಣೆ ಮಾಡಬೇಕಾಗಿದೆ ಎಂದು ಲೇಖಕ, ಸಮಾಜ ಸೇವಕ ರಾಘವೇಂದ್ರ ಪ್ರಭು,ಕವಾ೯ಲು ಒತ್ತಾಯಿಸಿದ್ದಾರೆ.

ಉಡುಪಿ : ದೊಡ್ಡಣ್ಣಗುಡ್ಡೆ ಅಪೂರ್ವ ಕಾಂಪ್ಲೆಕ್ಸ್ ಎದುರುಗಡೆ ರಾಯಲ್ ಫಿಶ್ ಸೆಂಟರ್ ಶುಭಾರಂಭ

Posted On: 19-02-2021 03:06PM

ಉಡುಪಿ : ದೊಡ್ಡಣ್ಣಗುಡ್ಡೆ ಅಪೂರ್ವ ಕಾಂಪ್ಲೆಕ್ಸ್ ಎದುರುಗಡೆ ರಾಯಲ್ ಫಿಶ್ ಸೆಂಟರ್ ಶುಭಾರಂಭಗೊಂಡಿತು.

ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ದೊಡ್ಡನಗುಡ್ಡೆ ನಗರಸಭಾ ಸದಸ್ಯರಾದ ಪ್ರಭಾಕರ್ ದೊಡ್ಡನಗುಡ್ಡೆ, ಮಾಜಿ ನಗರಸಭಾ ಸದಸ್ಯರಾದ ಆರ್. ಕೆ. ರಮೇಶ್ ಪೂಜಾರಿ ಹಾಗೂ ಪೆರಂಪಳ್ಳಿ ನಗರ ಸಭಾ ಸದಸ್ಯರಾದ ಸೆಲಿನ್ ಕರ್ಕಡ, ಗಣೇಶ್ ಶೇರಿಗಾರ್, ಕಿಶೋರ್ ಪೂಜಾರಿ ಹಾಗೂ ವಸಂತಿ ಅನಿಲ್, ಮಾಲಕರಾದ ಸುನಿಲ್ ಕುಮಾರ್ ಉಪಸ್ಥಿತರಿದ್ದರು.

ಕುಲಶೇಖರ : ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರದ, ಬಾಲಾಲಯ ನಿರ್ಮಾಣದ ಭೂಮಿ ಪೂಜೆ

Posted On: 17-02-2021 07:10PM

ಮಂಗಳೂರು : ದ. ಕ. ಜಿಲ್ಲಾ ಮೂಲ್ಯರ ಯಾನೇ ಕುಲಾಲರ ಮಾತೃ ಸಂಘದ ಆಡಳಿತಕೊಳಪಟ್ಟ ಕುಲಶೇಖರ ಶ್ರೀವೀರನಾರಾಯಣ ದೇವಸ್ಥಾನ ಇದರ ಜೀರ್ಣೋದ್ದಾರ ಕೆಲಸ ಕಾರ್ಯಗಳು ಅತ್ಯಂತ ಸುಲಲಿತವಾಗಿ ನಡೆಯುತ್ತಿದ್ದು, ಫೆಬ್ರವರಿ 17, ಬುಧವಾರ ಬೆಳಗ್ಗೆ ಬಾಲಾಲಯ ನಿರ್ಮಾಣದ ಸಲುವಾಗಿ ಭೂಮಿ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ದಕ್ಷಿಣಕನ್ನಡ ಜಿಲ್ಲಾ ಮೂಲ್ಯರ ಸಂಘದ ಅಧ್ಯಕ್ಷರಾದ ಮಯೂರ ಉಲ್ಲಾಲ್, ದ.ಕ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪುರುಷೋತ್ತಮ ಕಲ್ಬಾವಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ ಬಂಗೇರ, ಸೇವಾ ಸಮಿತಿ ಅಧ್ಯಕ್ಷ ಸುಂದರ ಕುಲಾಲ್ ಶಕ್ತಿನಗರ, ಟ್ರಸ್ಟಿನ ಅಧ್ಯಕ್ಷ ಪ್ರೇಮನಂದ ಕುಲಾಲ್, ಸುಂದರ ಸಾಲ್ಯಾನ್, ಶ್ರೀಮತಿ ರೂಪ.ಡಿ.ಬಂಗೇರ, ಗಿರಿಧರ್ ಜೆ. ಮೂಲ್ಯ, ಅನಿಲ್‌ದಾಸ್ ಅಂಬಿಕಾ ರೋಡು,ಪ್ರವೀಣ್ ಬಸ್ತಿ, ಪ್ರದೀಪ್, ಕಿರಣ್,ಸದಾನಂದ ಕುಲಾಲ್,ಕೋಟೆಕಾರು ಪಟ್ಟಣ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶ್ರೀ ಅನಿಲ್ ಬಗಂಬಿಲ ಎಂ.ಪಿ. ಬಂಗೇರ, ಮುಂಬೈ ಕುಲಾಲ ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್ ಮಾಜಿ ಅಧ್ಯಕ್ಷ ಗಿರೀಶ ಸಾಲ್ಯಾನ್, ಮುಂಬಯಿ ಕುಲಾಲ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಮಮತಾ ಗುಜರನ್ ಹಾಗೂ ಜಿಲ್ಲೆಯ ಕುಲಾಲ ಸಮಾಜದ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಿರ್ವ : ಯೋಗಶಕ್ತ ರೋಗ ಮುಕ್ತ ಜೀವನ ಅಗತ್ಯ

Posted On: 16-02-2021 02:13PM

ಶಿರ್ವ:ಮಾನವ ಶರೀರವೇ ನಿಜವಾದ ಯೋಗ.ಅದನ್ನು ಸಮರ್ಪಕವಾದ ರೀತಿಯಲ್ಲಿ ಕಾಪಾಡಿಕೊಳ್ಳಬೇಕಾದುದು ಅತೀ ಅಗತ್ಯ.ತನ್ನ ಜೀವನ ಶೈಲಿಯಲ್ಲಿ ಉತ್ತಮ ಆಹಾರದೊಂದಿಗೆ ವ್ಯಾಯಾಮವನ್ನು ದಿನ ನಿತ್ಯ ರೂಢಿಸಿಕೊಂಡರೆ ದೇಹ ಸ್ವಸ್ಥವಾಗಿ ರೋಗದಿಂದ ಮುಕ್ತವಾಗಲು ಸಾಧ್ಯವೆಂದು ಸಂಪನ್ಮೂಲ ವ್ಯಕ್ತಿಯಾಗಿ ಬಂದ ಶ್ರೀರಂಜಿತ್ ಪುನರೂರು ಸಂತಮೇರಿ ಕಾಲೇಜಿನಲ್ಲಿ ಏರ್ಪಡಿಸಿದ ಮೂರು ದಿನದ ಯೋಗ ತರಬೇತಿ ಕಾರ್ಯಕ್ರಮದಲ್ಲಿ ನುಡಿದರು. ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ದೈಹಿಕ ಸಾಮಥ್ರ್ಯ ಮತ್ತು ಯೋಗ ಕೋಶ-ಎನ್.ಸಿ.ಸಿ.ಯ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಉತ್ತಮ ಸಮಾಜ ಸೇವಕ ರಾಜ್ಯ ಪ್ರಶಸ್ತಿ ಪಡೇದ ಶ್ರೀ ಪತಂಜಲಿ ಯೋಗ ಗುರುಗಳಾದ ಅನಂತರಾಯ್ ಶೆಣೈರವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ. ಹೆರಾಲ್ಡ್ ಐವನ್ ಮೋನಿಸ್‍ರವರು ಪ್ರಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು.

ಶ್ರೀ ಪತಂಜಲಿ ಯೋಗ ಗುರುಗಳಾದ ಅನಂತರಾಯ್ ಶೆಣೈ , ಶ್ರೀ ರಂಜಿತ್ ಪುನಾರ್, ಶ್ರೀ ಪ್ರಕಾಶ್ ಆಚಾರ್ಯ ಯೋಗಾಸನ ಶ್ಯೆಲಿಯನ್ನು ಪ್ರಾತ್ಯೆಕ್ಷೀಕೆಯ ಮೂಲಕ ಮಾಡಿತೋರಿಸಿದರು. ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಲೆಪ್ಟಿನೆಂಟ್ ಕೆ. ಪ್ರವೀಣ್ ಕುಮಾರ್, ದೈಹಿಕ ಸಾಮಥ್ರ್ಯ ಮತ್ತು ಯೋಗ ಕೋಶ ಸಂಯೋಜಕ ಜೆಫ್ ಸನ್ನಿ ಡಿಸೋಜಾ, ವಿದ್ಯಾರ್ಥಿಗಳು, ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ಉಪಸ್ಥಿತರಿದ್ದರು. ಕು. ದೀಪ್ತಿ ಮತ್ತು ಬಳಗ ಪ್ರಾರ್ಥಿಸಿ, ಕು. ನವ್ಯ ಆಚಾರ್ಯ ಸ್ವಾಗತಿಸಿ, ಮುಖ್ಯ ಅಥಿತಿಗಳನ್ನು ಪರಿಚಯಿಸಿದರು. ಕು. ಶ್ರಾವ್ಯ ವಂದಿಸಿ, ಕು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ: ಪುಲ್ವಾಮ ಹುತಾತ್ಮರ ಸ್ಮರಣಾರ್ಥ ಯೋಧ ನಮನ

Posted On: 14-02-2021 09:43PM

ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಸೈನಿಕರು ರಾಷ್ಟ್ರಕ್ಕಾಗಿ ಮಾಡಿದ ತ್ಯಾಗ ಬಲಿದಾನವನ್ನು ಸ್ಮರಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ್ ಫ್ರೆಂಡ್ಸ್, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ, ಉಡುಪ ರತ್ನ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡಿನ ಹುತಾತ್ಮ ಸೈನಿಕ ಯುದ್ಧ ಸ್ಮಾರಕದಲ್ಲಿ ಭಾನುವಾರ ಸಂಜೆ ಯೋಧ ನಮನ ಕಾರ್ಯಕ್ರಮ ನಡೆಯಿತು.

ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಸೈನಿಕ ಗಣೇಶ್ ರಾವ್ ಮಾತನಾಡುತ್ತಾ, ಯುವಜನರಿಗೆ ಸೇನೆಗೆ ಸೇರಲು ಇದೊಂದು ಸೂಕ್ತವಾದ ಸಂದರ್ಭ. ಸೇನೆಯಲ್ಲಿ ಸಿಗುವ ಆತ್ಮತೃಪ್ತಿ ಬೇರೆ ಯಾವುದರಲ್ಲಿಯೂ ಸಿಗಲು ಅಸಾಧ್ಯ. ಅರ್ಪಣಾ ಮನೋಭಾವದಿಂದ ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಿ ಬದುಕನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿದ ಹೆಮ್ಮೆಯ ಯೋಧರೇ ನಮಗೆಲ್ಲ ಸ್ಪೂರ್ತಿ. ದೇಶಕ್ಕಾಗಿ ಸೇವೆ ಸಲ್ಲಿಸಲು ಸಿಕ್ಕಿದ ಅವಕಾಶ ಎಂದಿಗೂ ಮರೆಯಲು ಅಸಾಧ್ಯ ಎಂದರು.

ಭೂಸೇನೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಸೈನಿಕ ವಾದಿರಾಜ ಹೆಗ್ಡೆ ಮಾತನಾಡುತ್ತಾ ಜೀವದ ಹಂಗು ತೊರೆದು ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಯೋಧರಿಂದ ಕಲಿಯುವುದು ಸಾಕಷ್ಟಿದೆ. ದೇಶದ ವಿಚಾರ ಬಂದಾಗ ಒಗ್ಗಟ್ಟಿನ ಧ್ವನಿ ಇರಬೇಕು ಎಂದರು. ನೆರೆದ ಎಲ್ಲರೂ ಹುತಾತ್ಮ ಯೋಧರಿಗೆ ಮೊಂಬತ್ತಿ ಬೆಳಗಿಸಿ ಪುಷ್ಪ ನಮನ ಸಮರ್ಪಿಸಿದರು. ಸಾಮೂಹಿಕ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಮಾಜಿ ಸೈನಿಕರುಗಳಾದ ಸೈಮನ್ ಡಿಸೋಜ, ಭೀಮಯ್ಯ, ವಕೀಲ ರಫೀಕ್ ಖಾನ್, ಉದಯ ನಾಯ್ಕ್, ನಾಗರಾಜ್ ಭಂಡಾರ್ಕರ್, ಲಕ್ಷ್ಮಣ ಬಿ ಕೋಲ್ಕಾರ, ಸವಿತಾ ನೋಟಗಾರ್, ಈರಪ್ಪ ಗೌಂಡಿ, ರಮೇಶ್ ಎಲಿಬಳ್ಳಿ, ಪಾಂಪೇಶ್, ಹನುಮಂತರಾಯ ಪೂಜಾರಿ, ಶರಣಪ್ಪ, ರಾಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಪ್ರಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ,ಗಣೇಶ್ ಪ್ರಸಾದ್ ಜಿ. ನಾಯಕ್ ಕಾರ್ಯಕ್ರಮ ನಿರೂಪಿಸಿ, ಜನಾರ್ದನ್ ಕೊಡವೂರು ವಂದಿಸಿದರು.