Updated News From Kaup

ಶ್ರೀ ಸಿರಿ ಕುಮಾರ ಮಾಯಕಲ್ಲು : ಹುರುಳಿ (ಕುಡು) ಅಗೆಲ್ ಸೇವೆ

Posted On: 12-02-2021 12:02AM

ಉಡುಪಿ : ಕನರ ಗುಂಡಿ ಗರ್ಡೆ, ಲಕ್ಷ್ಮೀನಗರ ಶ್ರೀ ಸಿರಿ ಕುಮಾರ ಮಾಯಕಲ್ಲು ಕ್ಷೇತ್ರದಲ್ಲಿ ಹುರುಳಿ (ಕುಡು) ಅಗೆಲ್ ಸೇವೆ ಫೆಬ್ರವರಿ 12 ಶುಕ್ರವಾರ ಮಧ್ಯಾಹ್ನ 3ಗಂಟೆಗೆ ನಡೆಯಲಿದ್ದು, ಸೇವಾ ರೂಪದಲ್ಲಿ ಹುರುಳಿ (ಕುಡು) ನೀಡುವವರು 1 ಕಾಯಿ, ಬೆಲ್ಲದೊಂದಿಗೆ 2 ಗಂಟೆಯ ಒಳಗೆ ಶ್ರೀ ಕ್ಷೇತ್ರಕ್ಕೆ ತಲುಪಿಸಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಲ್ಲಾರು : ಮಹತೋಭಾರ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ ವಾರ್ಷಿಕ ಮಹೋತ್ಸವ

Posted On: 11-02-2021 11:44PM

ಕಾಪು ತಾಲೂಕಿನ ಮಲ್ಲಾರು ಗ್ರಾಮದ ಮಹತೋಭಾರ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ದೇವರ ಉತ್ಸವವು ಫೆಬ್ರವರಿ 12, ಶುಕ್ರವಾರದಿಂದ ಮೊದಲ್ಗೊಂಡು 18 ಗುರುವಾರ ಶ್ರೀ ಮನ್ಮಹಾರಥೋತ್ಸವ ಮತ್ತು ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಟ್ಟಾರು : ಹಿಂದೂ ಮಿಲನ, ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ

Posted On: 11-02-2021 08:55PM

ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ಮಟ್ಟಾರು ಘಟಕದ ನೇತೃತ್ವದಲ್ಲಿ ಹಿಂದೂ ಮಿಲನ ಕಾರ್ಯಕ್ರಮ ಫೆಬ್ರವರಿ 26, ಶುಕ್ರವಾರ ಮಟ್ಟಾರಿನಲ್ಲಿ ನಡೆಯಲಿದೆ.

ಸಂಜೆ ಗಂಟೆ 3 ರಿಂದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ಪ್ರಧಾನ ಅರ್ಚಕರಾದ ಶ್ರೀ ವಿಷ್ಣುಮೂರ್ತಿ ಉಪಾಧ್ಯಾಯರ ನೇತೃತ್ವದಲ್ಲಿ ಅಸ್ಟಮ ವರ್ಷದ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ನಡೆಯಲಿದೆ.

ಸಂಜೆ 6.30 ರಿಂದ 7.30 ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 7:30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಆಶೀರ್ವಚನ, ಮಂಗಳೂರು ವಿಭಾಗ ಧರ್ಮ ಜಾಗರಣ ಸಂಯೋಜಕರಾದ ಪ್ರಕಾಶ್ ಮಲ್ಪೆ ಇವರಿಂದ ದಿಕ್ಸೂಚಿ ಭಾಷಣ ಹಾಗೂ ರಾತ್ರಿ 9 ರಿಂದ ಅನ್ನಸಂತರ್ಪಣೆ ನಡೆಯಲಿದೆ.

9.30 ರಿಂದ ಕಲರ್ಸ್ ಕನ್ನಡ ಖ್ಯಾತಿಯ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕರುನಾಡ ಗಾನ ಗಂಧರ್ವ ಬಿರುದಾಂಕಿತ ಜಗದೀಶ್ ಆಚಾರ್ಯ ಪುತ್ತೂರು ಇವರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶಿರ್ವ : ಸಂತ ಮೇರಿ ಕಾಲೇಜಿನಲ್ಲಿ ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನ

Posted On: 11-02-2021 03:40PM

ಫೆಬ್ರವರಿ 11 ಸಂತ ಮೇರಿ ಕಾಲೇಜು, ಶಿರ್ವ ಇಲ್ಲಿ ಮಂಗಳೂರಿನ ಪ್ರತಿಷ್ಟಿತ ದಿಯಾ ಸಿಸ್ಟಮ್ ಸಂಸ್ಥೆ (ಗ್ಲೋ ಟಚ್ ಟೆಕ್ನಾಲಾಜಿಸ್)ಯು ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನವನ್ನು ಕಾಲೇಜಿನ ಗಣಕ ವಿಜ್ಞಾನ ವಿಭಾಗ, ವೃತ್ತಿ ಸಮಾಲೋಚನೆ ಮತ್ತು ನಿಯೋಜನೆ ಕೋಶವತಿಯಿಂದ ಏರ್ಪಡಿಸಲಾಯಿತು.

ಈಗಾಗಲೇ ಬಿ.ಸಿ.ಎ., ಡಿಪ್ಲೊಮಾ(ಸಿ.ಎಸ್.), ಬಿ.ಎಸ್ಸಿ (ಸಿ.ಎಸ್.), ಬಿ.ಎಸ್ಸಿ (ಐ.ಟಿ), ಬಿ.ಇ, ಎಂ.ಎಸ್ಸಿ, ಎಂ.ಸಿ.ಎ, ಸ್ನಾತಕೋತ್ತರ ಪದವಿ ಮುಗಿಸಿಕೊಂಡಿರುವ ಅಭ್ಯರ್ಥಿಗಳಿಗೆ ಪೂರ್ವಹ್ನ 9.30 ಗಂಟೆಗೆ ಕಾಲೇಜಿನ ಫಾ. ಹೆನ್ರಿ ಕ್ಯಾಸ್ತಲೀನೊ ಆಡಿಟೋರಿಯಂನಲ್ಲಿ ಮಂಗಳೂರಿನ ದಿಯಾ ಸಿಸ್ಟಮ್‍ನವರು ಕ್ಯಾಂಪಸ್ ಸಂದರ್ಶನವನ್ನು ನಡೆಸಿಕೊಟ್ಟರು. ನಮ್ಮ ಮುಂದೆ ಪೂರ್ವಯೋಜಿತ ಆಧುನಿಕ ತಾಂತ್ರಿಕತೆ ಇದ್ದರೂ ದೋಷಗಳು ಕಂಡುಬರುವುದು ಸಹಜ. ದೋಷಗಳನ್ನು ಕಂಡುಹಿಡಿದು ಅದಕ್ಕೆ ಸೂಕ್ತವಾದ ಪರಿಹಾರೋಪಾಯಗಳನ್ನು ಕಾಲೇಜಿನ ಕಲಿಕಾ ಸಂದರ್ಭದಲ್ಲಯೇ ಯುವಜನತೆ ತಾಂತ್ರಿಕ ಕೌಶಲ್ಯಗಳನ್ನು ಅರಿತುಕೊಂಡರೆ ಮುಂದೆ ಉದ್ಯೋಗವನ್ನು ಪಡೆದಾಗ ಕಂಪೆನಿಗೆ ಅದರಿಂದ ಮುಂದೆ ಅಭ್ಯರ್ಥಿಗೆ ಮತ್ತು ಕಂಪೆನಿಗೆ ಲಾಭವಾಗುತ್ತದೆ ಎಂದು ದಿಯಾ ಸಿಸ್ಟಮ್ಸ್ ಸೀನಿಯರ್ ಮ್ಯಾನೆಜರ್ ಶ್ರೀಶ್ರೀನಿವಾಸ ಭಟ್‍ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಹೆರಾಲ್ಡ್ ಐವನ್ ಮೋನಿಸ್‍ರವರು ಭವಿಷ್ಯದಲ್ಲಿ ಸೂಕ್ತವಾದ ಉದ್ಯೋಗವನ್ನು ಪಡೆದುಕೊಳ್ಳಲು ಇಂತಹ ಕ್ಯಾಂಪಸ್ ನೇರನೇಮಕಾತಿ ಕಾರ್ಯಕ್ರಮಗಳು ಹೆಚ್ಚು ಪ್ರಯೋಜನಕಾರಿ ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲಿ ಕ್ಯಾಂಪಸ್ ನೇರನೇಮಕಾತಿ ಕಾರ್ಯಕ್ರಮವನ್ನು ಹಮ್ಮಿಕೊಂಡ ದಿಯಾ ಸಿಸ್ಟಮ್ ಕಂಪೆನಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಅಭ್ಯರ್ಥಿಗಳಿಗೆ ನಡೆದ ಈ ಕ್ಯಾಂಪಸ್ ಸಂದರ್ಶನದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿಗಳು ಮತ್ತು ರಾಜ್ಯದ ವಿವಿಧ ಜಿಲ್ಲೆಗಳಾದ ಹುಬ್ಬಳ್ಳಿ, ಗದಗ, ಬೆಂಗಳೂರು, ಹಾಸನ, ಬಳ್ಳಾರಿ, ದಕ್ಷಿಣ ಕನ್ನಡ ಮತ್ತು ಉಡುಪಿ ಪರಿಸರದ ಕಾಲೇಜುಗಳ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಸುಮಾರು 190 ವಿದ್ಯಾರ್ಥಿಗಳು ನೊಂದಾಯಿಸಿ , ಭಾಗವಹಿಸಿದರು. ಇದರ ಸದುಪಯೋಗವನ್ನು ಪಡೆದುಕೊಂಡರು. ಈ ಕಾರ್ಯಕ್ರಮದಲ್ಲಿ ದಿಯಾ ಸಿಸ್ಟಮ್ಸ್ ಹಿರಿಯ ನೇಮಕಾತಿ ಕಾರ್ಯನಿರ್ವಾಹಕರಾದ ಶ್ರಿ. ಲಕ್ಷ್ಮಿಶ್ ಬಿ.ಎನ್, ಕು.ಸಮೃಧಿ, ಶ್ರೀರಾಘವೇಂದ್ರ, ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ಮಾಹಿತಿ ತಂತ್ರಜ್ಞಾನಕೋಶದ ನಿರ್ದೇಶಕರಾದ ಲೆಫ್ಟಿನೆಂಟ್ ಶ್ರಿ ಕೆ.ಪ್ರವೀಣ್ ಕುಮಾರ್, ವಿದ್ಯಾರ್ಥಿಗಳು, ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ಉಪಸ್ಥಿತರಿದ್ದರು. ಕು.ಚಂದನಾ ಮತ್ತು ಬಳಗ ಪ್ರಾರ್ಥಿಸಿ, ವೃತ್ತಿ ಸಮಾಲೋಚನೆ ಮತ್ತು ನಿಯೋಜನೆ ಕೋಶದ ಸಂಯೋಜಕಿ ತನುಜಾ ಎನ್ ಸುವರ್ಣ ವಂದಿಸಿ, ಉಪನ್ಯಾಸಕಿ ಸುಷ್ಮಾ ಸ್ವಾಗತಿಸಿ, ದಿವ್ಯಶ್ರಿ ಕಾರ್ಯಕ್ರಮ ನಿರೂಪಿಸಿದರು.

ಮಣಿಪಾಲ : 8 ಕೆ.ಜಿ ಗಾಂಜಾ ವಶ

Posted On: 10-02-2021 03:03PM

ಉಡುಪಿ ಜಿಲ್ಲಾ ಪೋಲೀಸ್ ಅಧೀಕ್ಷಕರಾದ ಶ್ರೀ. ವಿಷ್ಣುವರ್ಧನ್ ಐ.ಪಿ.ಎಸ್‌ರವರ ಮಾರ್ಗದರ್ಶನದಲ್ಲಿ ಮಣಿಪಾಲ ಪೊಲೀಸರು ಮಹಾರಾಷ್ಟ್ರದಿಂದ ಮಣಿಪಾಲಕ್ಕೆ ಮಾರಾಟ ಮಾಡಲು ತಂದಿದ್ದ 8 ಕೆ.ಜಿ ಗಾಂಜಾ ಮೌಲ್ಯ ಸುಮಾರು 2,66000/- ರೂ ಹಾಗೂ ಕೃತ್ಯಕ್ಕೆ ಬಳಸಿದ ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದು ಮಣಿಪಾಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮುದರಂಗಡಿ : ಬಿಲ್ಲವ ಸಂಘದ 8ನೇ ವರ್ಷದ ವರ್ಧಂತ್ಯುತ್ಸವ , ಪ್ರಭಾವಳಿ ಸಮರ್ಪಣೆ

Posted On: 09-02-2021 05:17PM

ಕಾಪು ತಾಲೂಕಿನ ಮುದರಂಗಡಿ ಬಿಲ್ಲವ ಸಂಘದ 8ನೇ ವರ್ಷದ ವರ್ಧಂತ್ಯುತ್ಸವ , ಪ್ರಭಾವಳಿ ಸಮರ್ಪಣೆಯು ಫೆಬ್ರವರಿ 20, ಶನಿವಾರದಂದು ನಡೆಯಲಿದೆ.

ಬೆಳಿಗ್ಗೆ 9:30ಕ್ಕೆ ಪ್ರಭಾವಳಿಯನ್ನು ಮುದರಂಗಡಿ ಅಶ್ವತ್ಥ ಕಟ್ಟೆಯಿಂದ ಶೋಭಾಯಾತ್ರೆಯ ಮೂಲಕ ನಾರಾಯಣಗುರುಗಳ ಮಂದಿರಕ್ಕೆ ತರಲಾಗುವುದು.

ಬೆಳಿಗ್ಗೆ 11 ರಿಂದ ಸಭಾ ಕಾರ್ಯಕ್ರಮ, 12:30ಕ್ಕೆ ಮಹಾಪೂಜೆ ಹಾಗೂ ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಫೆಬ್ರವರಿ 25 : ಸಾಂತೂರು ಕೊಡಂಗಲ ಶ್ರೀ ಬ್ರಹ್ಮ ಬೈದರ್ಕಳ ಗರಡಿ ವಾರ್ಷಿಕ ನೇಮೋತ್ಸವ

Posted On: 09-02-2021 05:02PM

ಸಾಂತೂರು ಕೊಡಂಗಲ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ವರ್ಷಂಪ್ರತಿ ಜರಗುವ ವಾರ್ಷಿಕ ನೇಮೋತ್ಸವವು ಫೆಬ್ರವರಿ 25, ಗುರುವಾರ ನಡೆಯಲಿದೆ.

23 ರಂದು ರಾತ್ರಿ ಗಂಟೆ 8:30ಕ್ಕೆ ಹಸಿರುವಾಣಿಯೊಂದಿಗೆ ಗರಡಿ ಪ್ರವೇಶ, 24 ರಂದು ಬೆಳಿಗ್ಗೆ 8ಕ್ಕೆ ನವಕ ಪ್ರಧಾನ ಹೋಮ, ರಾತ್ರಿ 6:30 ಕ್ಕೆ ಅಗೆಲು ಸೇವೆ. 25 ರಂದು ರಾತ್ರಿ 7ಕ್ಕೆ ವಾರ್ಷಿಕ ನೇಮೋತ್ಸವ, ರಾತ್ರಿ 8:30ಕ್ಕೆ ಶ್ರೀ ವಿಠಲ ಪೂಜಾರಿ ಮತ್ತು ಕರುಣಾಕರ ಪೂಜಾರಿ ಗರಡಿಮನೆ ಸಾಂತೂರು ಇವರ ವತಿಯಿಂದ ಸಾರ್ವಜನಿಕ ಅನ್ನಸಂತರ್ಪಣೆ, 26ರಂದು ಬೆಳಿಗ್ಗೆ 4ಕ್ಕೆ ಮಾಯಂದಾಲ್ ನೇಮೋತ್ಸವ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಪು : ಮನೆಗೋಡೆ ಕುಸಿತ, ಲಕ್ಷಾಂತರ ರೂಪಾಯಿ ನಷ್ಟ

Posted On: 09-02-2021 04:15PM

ಕಾಪು ಪಡು ಗ್ರಾಮದ ವನಜಾ ಪೂಜಾರ್ತಿಯವರ ಮನೆಯ ಹಿಂಭಾಗದ ಗೋಡೆ ಸೋಮವಾರ ಮುಂಜಾನೆ ಕುಸಿದಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ನಷ್ಟ ಅಂದಾಜಿಸಲಾಗಿದೆ.

ಈ ಸಂದರ್ಭ ಮನೆಯೊಡತಿ, ಅವರ ಗಂಡ ಮತ್ತು ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಶ್ರಯವಾಗಿದ್ದ ಮನೆಯ ಗೋಡೆ ಕುಸಿತಗೊಂಡಿದ್ದರಿಂದ ಈ ಕುಟುಂಬ ತೊಂದರೆಗೊಳಗಾಗಿದೆ.

ಉಡುಪಿಯ ಲಚ್ಚಿಲ್, ಪುತ್ತೂರಿನಲ್ಲಿ 13 ರಂದು ಮಂತ್ರ ದೇವತಾ ಸನ್ನಿಧಿಯಲ್ಲಿ ವಾರ್ಷಿಕ ನೇಮೋತ್ಸವ

Posted On: 09-02-2021 03:58PM

ಉಡುಪಿಯ ಲಚ್ಚಿಲ್, ಪುತ್ತೂರಿನ ಶ್ರೀ ಮಂತ್ರ ದೇವತಾ ಸನ್ನಿಧಿಯಲ್ಲಿ ಶನಿವಾರ ವಾರ್ಷಿಕ ನೇಮೋತ್ಸವ ಜರಗಲಿದೆ.

ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ಮತ್ತು ರಾತ್ರಿ ಗಂಟೆ 9 ರಿಂದ ನೇಮೋತ್ಸವ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ದೊಡ್ಡಣಗುಡ್ಡೆ ಪಂಚ ಜುಮಾದಿ ದೈವಸ್ಥಾನದ ಬಿಲ್ಲವ ಸಮುದಾಯದ ನೂತನ ಗುರಿಕಾರರಾಗಿ ನಿತಿನ್ ಪೂಜಾರಿ ಆಯ್ಕೆ

Posted On: 09-02-2021 03:42PM

ದೊಡ್ಡಣಗುಡ್ಡೆ ಪಂಚ ಜುಮಾದಿ ದೈವಸ್ಥಾನದ ಮಕರ ತಿಂಗಳ ಮಾರಿ ಪೂಜೆ, ಪಂಚ ಜುಮಾದಿ ದೈವದ ದರ್ಶನ ಸೇವೆ ಬೆಳಗ್ಗಿನಿಂದ ರಾತ್ರಿಯವರೆಗೆ ಊರು ಪರವೂರಿನ ಭಕ್ತಾದಿಗಳು ಗಂಧ ಪ್ರಸಾದವನ್ನು ಸ್ವೀಕರಿಸಿ ದೈವದ ಕೃಪೆಗೆ ಪಾತ್ರರಾಗುವ ಮೂಲಕ ಸಂಪನ್ನಗೊಂಡಿತು.

ಈ ಸಂದರ್ಭ ದೊಡ್ಡಣಗುಡ್ಡೆ ಪಂಚ ಜುಮಾದಿ ದೈವಸ್ಥಾನದ ಬಿಲ್ಲವ ಸಮುದಾಯದ ನೂತನ ಗುರಿಕಾರರಾಗಿ ನಿತಿನ್ ಪೂಜಾರಿ ಅವರನ್ನು ಎಲ್ಲರ ಒಪ್ಪಿಗೆಯ ಮೇರೆಗೆ ಆಯ್ಕೆ ಮಾಡಲಾಯಿತು. ದೈವದ ಅನುಗ್ರಹ ಮತ್ತು ಪ್ರಸಾದದೊಂದಿಗೆ ಅಧಿಕಾರ ಸ್ವೀಕಾರ ಮಾಡಿದರು.

ಈ ಸಂದರ್ಭದಲ್ಲಿ ಊರಿನ ಹಿರಿಯರು ಹಾಗೂ ಆಡಳಿತ ಮಂಡಳಿಯ ಮುಖ್ಯಸ್ಥರು ಯು. ಬಿ. ಅಜಿತ್ ಕುಮಾರ್, ಸದಸ್ಯರಾದ ಗೋಪಾಲ ಶೆಟ್ಟಿ, ಶಿವ ಪಾಲನ್, ಸುರೇಶ್ ಪೂಜಾರಿ, ಕೆ. ಯಾದವ್, ಯು. ಗಣೇಶ್, ಪ್ರಕಾಶ್ ಶೆಟ್ಟಿ, ನಿತ್ಯಾನಂದ ಜೋಗಿ, ದಿನೇಶ್ ಬಂಗೇರ, ಉದಯ ನಾಯ್ಕ್ ಹಾಗೂ ದೈವಸ್ಥಾನದ ಅರ್ಚಕರಾದ ವಿನೋದ್ ಶೆಟ್ಟಿ, ವಿಜಯ್ ಶೆಟ್ಟಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು