Updated News From Kaup
ಜಲಜೀವನ್ ಮಿಷನ್ ಯಶಸ್ವಿ ಅನುಷ್ಠಾನ ನಮ್ಮೆಲ್ಲರ ಗುರಿ: ನವೀನ್ ಭಂಡಾರಿ

Posted On: 29-01-2021 08:30PM
ಪುತ್ತೂರು : ಪ್ರತಿ ಮನೆಗೆ, ವ್ಯಕ್ತಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಜನಜೀವನ್ ಮಿಷನ್ನಿನ ಮುಖ್ಯ ಗುರಿಯಾಗಿದೆ ಎಂದು ಪುತ್ತೂರು ತಾಲೂಕು ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿ ಶ್ರೀ ನವೀನ್ ಭಂಡಾರಿ ಹೇಳಿದರು.

ಪುತ್ತೂರು ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಕ್ಷೇತ್ರ ಮಟ್ಟದ ಕಾರ್ಯಕರ್ತರಿಗೆ ಪುತ್ತೂರು ತಾ.ಪಂ.ನಲ್ಲಿ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಕಾರ್ಯತ್ಮಕ ನಳ ಸಂಪರ್ಕ, ಕುಡಿಯುವ ನೀರು ಪೂರೈಕೆ ಜಲಜೀವನ್ ಮಿಷನ್ ಯೋಜನೆ ಉದ್ದೇಶವಷ್ಟೇ ಅಲ್ಲದೇ ಅಂತರ್ಜಲ ಮರುಪೂರಣವೂ ಆಗಿದೆ. ಈಗಾಗಲೇ ತಾಲೂಕಿನಲ್ಲಿ ಇಂಗುಗುಂಡಿಗಳ ನಿರ್ಮಾಣ ಬಹುತೇಕ ಯಶಸ್ವಿ ಕಂಡಿದೆ ಎಂದವರು ಹೇಳಿದರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀ ಭರತ್ ಅವರು ಮಾತನಾಡಿದ ಜಲಜೀವನ್ ಮಿಷನ್ ಕಾರ್ಯನುಷ್ಠಾನ ಮತ್ತು ತಾಂತ್ರಿಕ ಅಡೆತಡೆಗಳ ಬಗೆಹರಿಸುವಿಕೆ ಕುರಿತು ಸ್ಪಷ್ಟ ಮಾಹಿತಿ ನೀಡಿದರು. ನೀರು ಪರೀಕ್ಷಾ ವಿಧಾನದ ಕುರಿತು ತಜ್ಞರಾದ ಕೃಷ್ಣ ಅವರು ಪ್ರಾತ್ಯಕ್ಷಿಕೆ ಮಾಡಿದರು.
ಜಲಜೀವನ್ ಮಿಷನ್ ದ್ಯೇಯೋದ್ದೇಶಗಳ ಕುರಿತು ಜೆಜೆಎಮ್ ಜಿಲ್ಲಾ ಮುಖ್ಯಸ್ಥ ಶಿವರಾಮ್ ಪಿ.ಬಿ ಅವರು ಮಾತನಾಡಿದರು. ಸ್ವಚ್ಛ ಭಾರತ್ ಇದರ ಜಿಲ್ಲಾ ಐಇಸಿ ಡೊಂಬಯ್ಯ ಅವರು ತ್ಯಾಜ್ಯ ವಿಂಗಡನೆ ಬಗ್ಗೆ ಅರಿವು ಮೂಡಿಸಿದರು. ಜಲಜೀವನ್ ಮಿಷನ್ ಅಡಿಯಲ್ಲಿ ಹಮ್ಮಿಕೊಂಡ ಚಟುವಟಿಕೆಗಳ ಕುರಿತು ಡಬ್ಲ್ಯೂಎಸ್.ಇ ಎಂಜಿನಿಯರ್ ಅಶ್ವಿನ್ ಕುಮಾರ್ ಮತ್ತು ಜಿಲ್ಲಾ ಐಇಸಿ ಮಹಾಂತೇಶ್ ಹಿರೇಮಠ್ ತಿಳಿಸಿದರು. ಜೆಜೆಎಮ್ ಸಿಬ್ಬಂದಿಗಳಾದ ದಯಾನಂದ ಮಯ್ಯಾಳ ಮತ್ತು ಈಶ್ವರ್ ಅವರು ಸಹಕರಿಸಿದರು.ದ.ಕ ಜಿಲ್ಲಾ ಪಂಚಾಯತ್, ಜಿಲ್ಲಾ ಗ್ರಾ.ಕು.ನೀ,ನೈ ಇಲಾಖೆ, ಪುತ್ತೂರು ತಾಲೂಕು ಪಂಚಾಯತ್ ಮತ್ತು ಸಮುದಾಯ ಸಂಸ್ಥೆಯ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತರಬೇತಿಯಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳ ಸುಮಾರು 150 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
ಜನವರಿ 31ರಂದು ಕುತ್ಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಜನಾ ಮಂಗಳೋತ್ಸವ

Posted On: 28-01-2021 03:44PM
ಕಾಪು ತಾಲೂಕಿನ ಕುತ್ಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಟ್ಟಡದ ಸುವರ್ಣ ಮಹೋತ್ಸವದ ಪ್ರಯುಕ್ತ ಭಜನಾ ಮಂಗಳೋತ್ಸವವು ಜನವರಿ 31ರಂದು ದೇವಸ್ಥಾನದಲ್ಲಿ ನಡೆಯಲಿದೆ.

ಬಳಿಕ ರಾತ್ರಿ ನಡೆಯುವ ಧಾರ್ಮಿಕ ಸಮಾರಂಭದಲ್ಲಿ ಶ್ರೀ ಆನೆಗುಂದಿ ಮಠಾಧೀಶರಾದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಶೀರ್ವಚನ ನೀಡಲಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.30 ರಂದು ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಪೈಲಟ್ ಕಾರ್ಯಕ್ರಮ : ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು

Posted On: 28-01-2021 12:42PM
ಉಡುಪಿ : ಜನವರಿ 30 ರಂದು ಬ್ರಹ್ಮಾವರ ತಾಲೂಕಿನ ನೆಂಚೂರು ಮತ್ತು ನಾಲ್ಕೂರು ಗ್ರಾಮಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಭೇಟಿ ನೀಡಿ, ವಾಸ್ತವ್ಯ ಮಾಡಿ, ಸದ್ರಿ ಗ್ರಾಮಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಸ್ಥಳದಲ್ಲೇ ಪರಿಹಾರ ಒದಗಿಸಲಿದ್ದಾರೆ, ಇಡೀ ರಾಜ್ಯದಲ್ಲಿ ಇದು ಪ್ರಥಮ ಪೈಲಟ್ ಕಾರ್ಯಕ್ರಮವಾಗಿ ಉಡುಪಿ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಗ್ರಾಮ ವಾಸ್ತವ್ಯ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು, ಜಿಲ್ಲೆಯ ಎಲ್ಲಾ ತಹಸೀಲ್ದಾರ್‌ಗಳು ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನವರಿ 30 ರಂದು ಗ್ರಾಮ ವಾಸ್ತವ್ಯ ನಡೆಯುವ ನೆಂಚೂರು ಮತ್ತು ನಾಲ್ಕೂರು ಗ್ರಾಮಗಳ ಸಾರ್ವಜನಿಕರ ಕುಂದು ಕೊರತೆಗಳ ಕುರಿತಂತೆ ಸಂಬAದಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳು 3 ದಿನಗಳ ಮುಂಚಿತವಾಗಿಯೇ ಅರ್ಜಿಗಳನ್ನು ಸ್ವೀಕರಿಸಿ, ಅಗತ್ಯ ಕ್ರಮ ಕೈಗೊಳ್ಳಿ. ಸದ್ರಿ ಗ್ರಾಮ ವಾಸ್ತವ್ಯದ ದಿನ ಫಲಾನುಭವಿಗಳಿಗೆ ಅರ್ಜಿಗೆ ಸಂಬAಧಿಸಿAತೆ ಸೂಕ್ತ ಸೌಲಭ್ಯ ಒದಗಿಸುವ ಕುರಿತು ಕ್ರಮ ಕೈಗೊಳ್ಳಿ. ಸಂಬಂದಪಟ್ಟ ತಾಲೂಕಿನ ತಹಸೀಲ್ದಾರ್‌ಗಳು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಎಲ್ಲಾ ಅಧಿಕಾರಿಗಳು ವಾಸ್ತವ್ಯ ಕಾರ್ಯಕ್ರಮದಲ್ಲಿ ಹಾಜರಿರುವಂತೆ ಅಪರ ಜಿಲ್ಲಾಧಿಕಾರಿ ಸೂಚಿಸಿದರು.
ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಗ್ರಾಮದಲ್ಲಿನ ಎಲ್ಲಾ ಪಹಣಿಯಲ್ಲಿನ ಲೋಪದೋಷಗಳು ಮತ್ತು ಆಕಾರ್ ಬಂದ್ ತಾಳೆ ಹೊಂದುವ ಕುರಿತು ಖಚಿತಪಡಿಸಿಕೊಳ್ಳಬೇಕು. ಪೌತಿ ಹೊಂದಿದ ಖಾತೆದಾರರ ಹೆಸರನ್ನು, ನೈಜ ವಾರಿಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮ ಕೈಗೊಳ್ಳಬೇಕು. ಗ್ರಾಮದ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ದೊರೆಯುತ್ತಿರುವ ಬಗ್ಗೆ ಪರಿಶೀಲನೆ, ಬಿಟ್ಟು ಹೋದಂತಹ ಅರ್ಹ ಪ್ರಕರಣಗಳಿಗೆ ಸ್ಥಳದಲ್ಲಿಯೇ ಆದೇಶ ನೀಡುವುದು, ಗ್ರಾಮದಲ್ಲಿನ ಸ್ಮಶಾನ ಲಭ್ಯತೆ ಬಗ್ಗೆ ಪರಿಶೀಲನೆ, ಆಶ್ರಯ ಯೋಜನೆಗೆ ಸಂಬAಧಿಸಿದAತೆ ಅಗತ್ಯ ಜಮೀನು ಕಾದಿರಿಸಲು ಕ್ರಮ ಕೈಗೊಳ್ಳುವುದು, ಸರ್ಕಾರಿ ಜಮೀನಿನ ಅಕ್ರಮ ಒತ್ತುವರಿ ತೆರವು, ಆಧಾರ್ ಕಾರ್ಡ್ ಅನುಕೂಲತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಮತದಾರರ ಪಟ್ಟಿ ಪರಿಷ್ಕರಣೆ, ಅತಿವೃಷ್ಠಿ/ಅನಾವೃಷ್ಠಿ ಎದುರಿಸಲು ಮುಂಜಾಗ್ರತಾ ಕ್ರಮಗಳು, ಬರ/ಪ್ರವಾಹ ಇದ್ದಲ್ಲಿ ಪರಿಹಾರ, ಶಾಲೆ ಹಾಗೂ ಅಂಗನವಾಡಿಗಳಿಗೆ ಭೇಟಿ ನೀಡಿ, ಆಹಾರ, ಕಲಿಕಾ ಕ್ರಮಗಳ ಬಗ್ಗೆ ಪರಿಶೀಲನೆ, ಗ್ರಾಮದಲ್ಲಿನ ವಸತಿ ನಿಲಯಗಳಿಗೆ ಭೇಟಿ ನೀಡಿ, ಸುಸ್ಥಿತಿಯಲ್ಲಿರುವ ಕುರಿತು ಪರಿಶೀಲನೆ, ಗ್ರಾಮದ ಎಲ್ಲಾ ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಪಡೆದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು ಹಾಗೂ ಅನರ್ಹರು ಬಿ.ಪಿ.ಎಲ್ ಕಾರ್ಡ್ ಪಡೆದಿದ್ದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳುವುದು, ಗುಡಿಸಲು ಇರುವ ವಾಸದ ಮನೆಗಳನ್ನು ಪತ್ತೆ ಹಚ್ಚಿ ಸರ್ಕಾರದ ವಿವಿಧ ಯೋಜನೆಯಡಿ ಮನೆ ಕಟ್ಟಲು ಅನುದಾನ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವುದು ಹಾಗೂ ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯುವ ಸವಲತ್ತುಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಸದಾಶಿವ ಪ್ರಭು ತಿಳಿಸಿದರು.
ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಸಂಬಂದಪಟ್ಟ ಗ್ರಾಮದ ಪಿಡಿಓಗಳು ಮತ್ತು ಪಂಚಾಯತ್‌ಗಳ ಆಡಳಿತಾಧಿಕಾರಿಗಳು, ಕಂದಾಯ ಸಿಬ್ಬಂದಿ ಕಡ್ಡಾಯವಾಗಿ ಸ್ಥಳದಲ್ಲಿ ಹಾಜರಿರಬೇಕು. ಸಾರ್ವಜನಿಕರು ತಮ್ಮ ಕುಟುಂಬದ ವ್ಯಕ್ತಿ ಮರಣ ಹೊಂದಿದ್ದಲ್ಲಿ ಸಂಬಂದಪಟ್ಟ ಇಲಾಖೆಯಿಂದ ಮರಣ ಪ್ರಮಾಣ ಪತ್ರ ಪಡೆದು, ಪೌತಿ ಖಾತೆ ಬದಲಾವಣೆ ಮಾಡಿಕೊಳ್ಳಬೇಕು. ಸಾಮಾಜಿಕ ಭದ್ರತಾ ಯೋಜನೆಯಗಳಡಿಯಲ್ಲಿ ಪಿಂಚಣಿ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟಲ್ಲಿ ಕೂಡಲೇ ಮಾಹಿತಿ ನೀಡಿ, ಅನವಶ್ಯಕವಾಗಿ ಪಿಂಚಣಿ ಹಣ ಅನರ್ಹರಿಗೆ ತಲುಪಿ ದುರುಪಯೋಗವಾಗದಂತೆ ಎಚ್ಚರವಹಿಸಬೇಕು, ಇಲ್ಲವಾದಲ್ಲಿ ಮೃತರ ಹೆಸರಿನಲ್ಲಿ ಪಿಂಚಣಿ ಪಡೆದವರಿಂದಲೇ ಮೊತ್ತವನ್ನು ವಸೂಲಿ ಮಾಡಲಾಗುವುದು ಮತ್ತು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಚ್ಚರಿಸಿದರು. ಪ್ರತೀ ತಿಂಗಳ 3 ನೇ ಶನಿವಾರ ಜಿಲ್ಲಾಧಿಕಾರಿಗಳು, ಭೂ ದಾಖಲೆಗಳ ಉಪ ನಿರ್ದೇಶಕರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಉಪ ವಿಭಾಗದ ಸಹಾಯಕ ಆಯುಕ್ತರು, ಸಂಬಂದಪಟ್ಟ ತಹಸೀಲ್ದಾರ್ ಮತ್ತು ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರೊಂದಿಗೆ ಗ್ರಾಮ ವಾಸ್ತವ್ಯ ನಡೆಯಲಿದ್ದು, ಜಿಲ್ಲಾಧಿಕಾರಿ ಭೇಟಿ ನೀಡುವ ತಾಲೂಕಿನ ತಹಸೀಲ್ದಾರ್ ಹೊರತುಪಡಿಸಿ, ಉಳಿದ ತಾಲೂಕುಗಳ ತಹಸೀಲ್ದಾರ್‌ಗಳು ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮ ವಾಸ್ತವ್ಯ ಮಾಡಲಿದ್ದು, ಬೆಳಗ್ಗೆ 10 ರಿಂದ 5 ಗಂಟೆಯವರೆಗೆ ವಾಸ್ತವ್ಯ ಮಾಡಲಿದ್ದಾರೆ ಎಂದರು. ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಕಾಪು ದೀಪಸ್ತಂಭ 5 ತಿಂಗಳ ಹಿಂದೆ ಹಾನಿಯಾದ ಮೆಟ್ಟಿಲು, ಗೋಡೆ ಇನ್ನೂ ದುರಸ್ತಿಯಾಗಿಲ್ಲ ಪ್ರವಾಸೋದ್ಯಮ ಇಲಾಖೆಯ ಜಾಣ ಮೌನ

Posted On: 28-01-2021 12:36PM
ಉಡುಪಿ ಜಿಲ್ಲೆಯ ಕಾಪು ಕಡಲ ಕಿನಾರೆಯಲ್ಲಿರುವ ಬ್ರಿಟಿಷ್ ಕಾಲದಲ್ಲಿ ನಿರ್ಮಿಸಲ್ಪಟ್ಟ ಕಾಪು ದೀಪಸ್ತಂಭ ವೀಕ್ಷಿಸಲು ದಿನನಿತ್ಯ ಅಸಂಖ್ಯಾತ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

ಇಂತಹ ಸಂದರ್ಭದಲ್ಲಿ ಇತ್ತೀಚಿನ ಮಳೆಯ ಸಂದರ್ಭ ದೀಪಸ್ತಂಭದ ಆರಂಭದ ಮೆಟ್ಟಿಲುಗಳು ಮತ್ತು ಗೋಡೆ ಹಾನಿಗೊಂಡಿದೆ. 5 ತಿಂಗಳಿಂದ ಈ ರೀತಿಯ ಅವಸ್ಥೆ ಇದ್ದರೂ ಈವರೆಗೂ ದುರಸ್ತಿ ಕಂಡಿಲ್ಲ.

ಈ ಬಗ್ಗೆ ಕೆಳ ತಿಂಗಳ ಹಿಂದೆ ಪತ್ರಿಕೆಯಲ್ಲಿ ವರದಿ ಪ್ರಕಟವಾದರೂ ಇನ್ನೂ ಎಚ್ಚೆತ್ತು ಕೊಳ್ಳದ ಪ್ರವಾಸೋದ್ಯಮ ಇಲಾಖೆ ಸುಂದರ ಪ್ರವಾಸಿ ತಾಣವಾದ ಈ ಸ್ಥಳದ ಇಂತಹ ಸ್ಥಿತಿಯನ್ನು ಈವರೆಗೂ ಗಮನಿಸದಂತಿದ್ದು, ಆದಷ್ಟು ಬೇಗ ಸರಿಪಡಿಸಬೇಕಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುತ್ಯಾರು : ಭಾರತ ಮಾತಾ ಪೂಜನಾ ಕಾರ್ಯಕ್ರಮ

Posted On: 27-01-2021 07:37PM
ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ಭಾರತಮಾತಾ ಪೂಜನಾ ಕಾರ್ಯಕ್ರಮವು ಪಡು ಕುತ್ಯಾರು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ಜರಗಿತು.

ಹಿಂದುಗಳು ಬಿಂದು ಬಿಂದುವಾಗಿ ಸಂಘಟಿತರಾಗಿ ಆದರ್ಶಪುರುಷ ಶ್ರೀರಾಮನ ತತ್ವ, ಪರಸ್ಪರ ಪ್ರೇಮ, ಸ್ನೇಹ, ಸದ್ಭಾವ, ಕರುಣೆ, ಮಮತೆ, ಬಂಧುತ್ವ, ಆರೋಗ್ಯಗಳಿಂದ ಕೂಡಿದ ಸಂತೃಪ್ತ ಜೀವನ ನಡೆಸುವಂತಾಗಲಿ. ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಲಿ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮಾತೃ ಮಂಡಳಿಯ ಪ್ರಮುಖ್ ಶ್ರೀಮತಿ ರಾಜಲಕ್ಷ್ಮಿ ಸತೀಶ್ ಕರೆ ನೀಡಿದರು.

ಈ ಸಂದರ್ಭ ಕುತ್ಯಾರು ಗ್ರಾಮ ಪಂಚಾಯತ್ ಸದಸ್ಯರಾದ ದೇವರಾಜ್ ಬಿ. ಶೆಟ್ಟಿ, ಸಂಪತ್ ಕುಮಾರ್, ಭಾರತಿ ರಾಘವೇಂದ್ರ, ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಹರಿಶ್ಚಂದ್ರ ಆಚಾರ್ಯ ಹಾಗೂ ಪದಾಧಿಕಾರಿಗಳು, ಸ್ಥಳೀಯ ಪ್ರಮುಖರಾದ ಪವನ್ ಶೆಟ್ಟಿ ಕೇಂಜ, ಸುಂದರಿ ಕುಲಾಲ್, ಪ್ರವೀಣ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಗಂಗಾಧರ ಆಚಾರ್ಯ ಸ್ವಾಗತಿಸಿ, ಶಶಿರಾಜ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಸುಶಾಂತ್ ಶೆಟ್ಟಿ ವಂದಿಸಿದರು.
ಕುತ್ಯಾರು ಗ್ರಾಮಪಂಚಾಯತ್ ನಲ್ಲಿ ಗಣರಾಜ್ಯೋತ್ಸವ

Posted On: 27-01-2021 07:19PM
ಕುತ್ಯಾರು ಗ್ರಾಮಪಂಚಾಯತ್ ಆಡಳಿತಾಧಿಕಾರಿ ಅರುಣ್ ಕುಮಾರ್ ಹೆಗ್ಡೆ ಧ್ವಜಾರೋಹಣ ಮಾಡುವ ಮೂಲಕ ಕುತ್ಯಾರು ಗ್ರಾಮ ಪಂಚಾಯತ್ ನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಂದರ್ಭ ನೂತನ ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಪಿಡಿಒ ರಜನಿ ಭಟ್ ಸ್ವಾಗತಿಸಿ, ವಂದಿಸಿದರು.
ಕಳತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ

Posted On: 27-01-2021 07:15PM
ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಿವೃತ್ತ ಶಿಕ್ಷಕರಾದ ಶ್ರೀಕರಯ್ಯ ಧ್ವಜಾರೋಹಣ ಮಾಡಿದರು.
ಈ ಸಂದರ್ಭ ಕುತ್ಯಾರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಅರುಣ್ ಕುಮಾರ್ ಹೆಗ್ಡೆ, ಪಿಡಿಒ ರಜನಿ ಭಟ್, ಗ್ರಾಮ ಪಂಚಾಯಿತಿ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಮಟ್ಟಾರು : ಶ್ರೀರಾಮ ನಾಮ ಜಪದೊಂದಿಗೆ ಶ್ರೀರಾಮೋತ್ಸವ

Posted On: 27-01-2021 06:42PM
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನದ ಪ್ರಯುಕ್ತ ವಿಶ್ವ ಹಿಂದು ಪರಿಷದ್ ಬಜರಂಗದಳ ಮಾತೃಶಕ್ತಿ ಮಟ್ಟಾರು ಘಟಕದ ನೇತೃತ್ವದಲ್ಲಿ ಶ್ರೀರಾಮೋತ್ಸವ ಜರಗಿತು. ಸಾಮೂಹಿಕವಾಗಿ ದೀಪ ಪ್ರಜ್ವಲನೆಯೊಂದಿಗೆ ಶ್ರೀರಾಮ ನಾಮ ಜಪ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯ ಕರಸೇವಕರಾದ ಪಾಂಡುರಂಗ ಶ್ಯಾನಭಾಗ್ ಮಾರ್ಗದರ್ಶನ ಮಾಡಿದರು. ಕರಾವಳಿ ಅಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ,ಅಯೋಧ್ಯೆ ಕರಸೇವಕರಾದ ರಮೇಶ ಪ್ರಭು, ದಿನೇಶ ಪಾಟ್ಕರ್, ವಿಶ್ವ ಹಿಂದು ಪರಿಷದ್ ಮಟ್ಟಾರು ಘಟಕದ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.

ವಿಶ್ವ ಹಿಂದು ಪರಿಷದ್ ಕಾಪು ತಾಲೂಕು ಧರ್ಮಾಚಾರ್ಯ ಪ್ರಮುಖ್ ವೇದಮೂರ್ತಿ ಪ್ರಸನ್ನ ಭಟ್ ಶ್ರೀರಾಮ ನಾಮ ಮಂತ್ರ ಭೋಧಿಸಿದರು.ವಿಶ್ವ ಹಿಂದು ಪರಿಷದ್ ಕಾಪು ತಾಲೂಕು ಕಾರ್ಯದರ್ಶಿ ಜಯಪ್ರಕಾಶ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸುಮಾರು 200 ರಷ್ಟು ಜನರು ಸಾಮೂಹಿಕವಾಗಿ ಶ್ರೀರಾಮ ನಾಮ ಜಪ ಮಾಡಿದರು.
92 ಹೇರೂರು ಗ್ರಾಮದಲ್ಲಿ ಕಳ್ಳರ ಕಾಟ

Posted On: 27-01-2021 10:54AM
ಹಲವು ದಿನಗಳಿಂದ ಕಳ್ಳರ ಕಾಟ ಉಡುಪಿಯಲ್ಲಿ ಹೆಚ್ಚಾಗುತ್ತಿದ್ದು, ಉಡುಪಿ ಜಿಲ್ಲೆಯ ಕಾಪು ತಾಲೂಕಿನ 92 ಹೇರೂರು ಗ್ರಾಮದಲ್ಲಿ ಕಳ್ಳರ ಕಾಟ ಹೆಚ್ಚಾಗಿದ್ದು, ರಾತ್ರಿ ವಿದ್ಯುತ್ ಕಡಿತಗೊಂಡಾಗ, ನಾಯಿಗಳ ಬೊಗಳುವಿಕೆ ಜಾಸ್ತಿ ಆಗುತ್ತೆ, ಇದೆ ಹೊತ್ತಿನಲ್ಲಿ ಕಳ್ಳರು ಈ ಪರಿಸರದಲ್ಲಿ ತಿರುಗಾಡುವುದರ ಬಗ್ಗೆ ಹಲವರ ಅನಿಸಿಕೆಯಾಗಿದೆ.
ಈ ಬಗ್ಗೆ ಊರಿನ ಜನಪ್ರತಿನಿಧಿಗಳಿಗೆ ಗೊತ್ತಿದ್ದರು ಸುಮ್ಮನಿರುವುದು ಗ್ರಾಮಸ್ಥರಿಗೆ ಬೇಸರದ ವಿಷಯ. ಈ ಕಳ್ಳರ ಕಾಟಕ್ಕೆ ಗ್ರಾಮಸ್ಥರೆ ಎಚೆತ್ತುಕೊಳ್ಳ ಬೇಕೇ? ಎಂದು ಸ್ಥಳೀಯರಾದ ಜಗದೀಶ್ ಬಂಟಕಲ್ಲ್ ಪ್ರಶ್ನಿಸಿದ್ದಾರೆ.
ವಿಜೇತ ವಿಶೇಷ ಶಾಲೆ : ಗಣರಾಜ್ಯೋತ್ಸವ ದಿನಾಚರಣೆ, ಮೇಕ್ ಸಂ ಒನ್ ಸ್ಮೈಲ್ ತಂಡದಿಂದ ಶಾಲಾ ಗೋಡೆಯಲ್ಲಿ ಇಂಡಿಯಾ ಬಾರ್ಡರ್ ಚಿತ್ರಗಳ ಅನಾವರಣ, ದೇಶದ ಸೈನಿಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ.

Posted On: 27-01-2021 10:46AM
ವಿಜೇತ ವಿಶೇಷ ಶಾಲೆಯಲ್ಲಿ 72ನೇ ವರ್ಷದ ಗಣರಾಜ್ಯೋತ್ಸವ ಹಾಗೂ ಮೇಕ್ ಸಂ ಒನ್ ಸ್ಮೈಲ್ ತಂಡದ ವತಿಯಿಂದ ವಿಜೇತ ವಿಶೇಷ ಶಾಲಾ ಗೋಡೆಯಲ್ಲಿ ಚಿತ್ರಿಸಿದ ಇಂಡಿಯಾ ಬಾರ್ಡರ್ (ಭಾರತ ದ ಗಡಿ ಪ್ರದೇಶ) ಚಿತ್ರಣವನ್ನು ವಿಜೇತ ವಿಶೇಷ ಶಾಲೆಗೆ ಸಮರ್ಪಿಸಿ, ದೇಶದ ಸೈನಿಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ದ್ವಜಾರೋಹಣವನ್ನು ಶ್ರೀ ಮೋಹನ್ ಶೆಣೈ ಮತ್ತು ಶ್ರೀಮತಿ ಅರುಣಾ ಎಂ. ಶೆಣೈ ದಂಪತಿಗಳು ನೆರವೇರಿಸಿದರು. ಜಿಲ್ಲಾ ನಕ್ಸಲ್ ನಿಗ್ರಹ ದಳದ ಎಸ್.ಪಿ, (ಐ ಪಿ ಎಸ್.) ಅಧಿಕಾರಿ ಶ್ರೀ ನಿಖಿಲ್ ಬುಲ್ಲವರ್ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಶಶಿಧರ್ ಜಿ. ಎಸ್, ಕೆ.ಎಂ.ಇ.ಎಸ್ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ರಾಮಚಂದ್ರ ನೆಲ್ಲಿಕಾರ್, ಮೇಕ್ ಸಮ್ ಒನ್ ಸ್ಮೈಲ್ ತಂಡದ ಪ್ರಖ್ಯಾತ ಕಲಾವಿದರು ಹಾಗೂ ದಂತವೈದ್ಯರು ಡಾ.ವರ್ಣೋಧರ್, ದುರ್ಗಾ ವಿದ್ಯಾ ಸಂಘದ ಅಧ್ಯಕ್ಷರು ಶ್ರೀ ರಾಧಾಕೃಷ್ಣ ಶೆಟ್ಟಿ, ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಅದ್ಯಕ್ಷರು ಶ್ರೀ ರತ್ನಾಕರ್ ಅಮೀನ್, ಟ್ರಸ್ಟಿ ಶ್ರೀ ಸಿಯಾ ಸಂತೋಷ್ ನಾಯಕ್, ಶ್ರೀ ಕಿರಣ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೇಕ್ ಸಂ ಒನ್ ಸ್ಮೈಲ್ ತಂಡದ ವತಿಯಿಂದ ಡಾ. ವರ್ನೋಧರ್ ಹಾಗೂ ಆರ್ಟಿಸ್ಟ್ ಶ್ರೀ ನವೀನ್ ಅವರನ್ನು ಗೌರವಿಸಲಾಯಿತು. ಶ್ರೀ ಮೋಹನ್ ಶೆಣೈ ದಂಪತಿಗಳು ಶಾಲಾ ಮಕ್ಕಳಿಗೆ ಸಿಹಿ ತಿಂಡಿ ಪ್ಯಾಕ್ ವಿತರಿಸುವ ಜತೆಗೆ ಸಂಸ್ಥೆಗೆ ದೇಣಿಗೆ ನೀಡಿ ಸಹಕರಿಸಿದರು. ಮೇಕ್ ಸಂ ಒನ್ ಸ್ಮೈಲ್ ತಂಡದ ಸದಸ್ಯರು ಉಪಸ್ಥಿತರಿದ್ದರು. ವಿಶೇಷ ಶಿಕ್ಷಕಿ ಶ್ರೀಮತಿ ಹರ್ಷಿತಾ ಕಿರಣ್ ಕಾರ್ಯಕ್ರಮ ನಿರೂಪಿಸಿ, ಕು.ವಿದ್ಯಾ ನಾಯ್ಕ್ ವಂದಿಸಿದರು.