Updated News From Kaup

ಸಂತ ಮೇರಿಕಾಲೇಜು ಶಿರ್ವ : 72ನೇ ಗಣರಾಜ್ಯೋತ್ಸವ ಆಚರಣೆ

Posted On: 26-01-2021 10:44PM

ಶಿರ್ವ: ದೇಶವು 72ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸುತ್ತಿದೆ.ಈ ದಿನವನ್ನು ಸಂವಿಧಾನ ರಚನಾ ದಿನವೆಂದೂ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ವಂದನೆಯನ್ನು ಸಲ್ಲಿಸುತ್ತಾ,ಸಂವಿಧಾನ ರಚನಾ ಸಮಿತಿಯ ಸದಸ್ಯರನ್ನು ನೆನೆಯುತ್ತಾ,ಈ ದಿನದ ಮಹತ್ವವನ್ನು ವಿವರಿಸುವ ಮೂಲಕ ನವಯುವಕರು ಮತ್ತು ಜನಪ್ರತಿನಿಧಿಗಳು ಸಂವಿಧಾನದ ಮೂಲಭೂತ ವಿಚಾರಗಳನ್ನು ಅರ್ಥೈಸಿಕೊಂಡು ನವಭಾರತದ ನಿರ್ಮಾಣದಲ್ಲಿ ಮಹತ್ವದ ಹೆಜ್ಜೆಗಳನ್ನು ಇಡಬೇಕೆಂದು ತಿಳಿಸುವ ಮೂಲಕ ರಾಷ್ಟ್ರ ಪ್ರಶ್ನೆ ಬಂದಾಗ ಧರ್ಮ,ಜಾತಿ,ಪ್ರಾಂತೀಯತೆಯನ್ನು ಮರೆತು ನಾವೆಲ್ಲರೂ ಭಾರತೀಯರೆಂಬ ವಿಶಾಲ ಮನೋಭಾವನೆಯನ್ನು ಜಗತ್ತಿನೆಲ್ಲೆಡೆಗೆ ಸಾರಿ,ಭವ್ಯ ಭಾರತದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಭಾರತದ ಕೀರ್ತಿಯನ್ನು ವಿಶ್ವ ಪಟದಲ್ಲಿ ಬೆಳಗಬೇಕೆಂದು ವಿದ್ಯಾರ್ಥಿ ಸಮುದಾಯಕ್ಕೆ ಮುಖ್ಯ ಅತಿಥಿಯಾಗಿ ಧ್ವಜಾರೋಹಣವನ್ನು ನೆರವೇರಿಸಿ ಶಿರ್ವ ಸಂತ ಮೇರಿ ಕಾಲೇಜಿನ ಪ್ರಾಂಶುಪಾಲರಾದ ಡಾ ಹೆರಾಲ್ಡ್ ಐವನ್ ಮೊನಿಸ್ ರವರು ಕರೆ ನೀಡಿದರು.

ರಾಷ್ರೀಯಯುವ ಸೇನಾದಳಗಳ ನೇತೃತ್ವದಲ್ಲಿಈ ಕಾರ್ಯಕ್ರಮವನ್ನು ಆಚರಿಸಲಾಯಿತು. ಪ್ರತಿಯೊಬ್ಬ ಭಾರತೀಯನೂ ಸ್ವಚ್ಛ ಭಾರತ ಪರಿಕಲ್ಪನೆಯ ಲ್ಲಿ ಶ್ರಮಿಸಿ ದೇಶದ ಪ್ರಗತಿಯಲ್ಲಿಕೈಜೋಡಿಸಬೇಕು. ಅಳಿದ ಮಹಾತ್ಮರ ಬಗ್ಗೆ ಗೌರವ, ಅಭಿಮಾನಅವರ ಸಾಧನೆಯಅರಿವು ಮಾಡಿಕೊಳ್ಳುವುದು ಅಗತ್ಯ ಆ ಮೂಲಕ ವೈಜ್ಞಾನಿಕ ಮನೋಭಾವ ಬೆಳಸಿಕೊಳ್ಳಬೇಕೇಂದು ಗಣರಾಜ್ಯೋತ್ಸವ ಸಂದೇಶ ನಿಡಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಿವಿಧ ಘಟಕಗಳ ನೇತ್ರತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಪರೇಡನ ಮುಂದಾಳತ್ವವನ್ನು ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ಭಟ್ ರಾಮ್ ದಾಸ್ ಸತೀಶ್ ಜೂನಿಯರ್ ಅಂಡರ್ ಆಫೀಸರ್ ಪ್ರವಿತಾ ಆಚಾರ್ಯ , ರಿಯೋನ್ ರಿಷಿ ಅಲ್ಫೊನ್ಸೊ, ಸಾರ್ಜೆಂಟ್ ಮೇಜರ್ ಪ್ರತೀಮಾ ಆಚಾರ್ಯ, ಸಾರ್ಜೆಂಟ್ ರೈನಾ ಅಂದ್ರಾದೆ ನೆರವೇರಿಸಿಕೊಟ್ಟರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ.ಐರಿನ್ ಮೆಂಡೋನ್ಸ, ಪ್ರೌಢಶಾಲೆಯ ಮುಖೋಪಾಧ್ಯಾಯರಾದ ಗಿಲ್ಬರ್ಟ್ ಪಿಂಟೋ,ಶ್ರೀಮತಿ ಪೌಲಿನ್ ಲೋಬೊ, ಕಾಲೇಜಿನ ವಿವಿಧ ಘಟಕಗಳ ಯೋಜಕರಾದ ಎನ್.ಎಸ್.ಎಸ್ ಶ್ರೀ ಪ್ರೇಮನಾಥ್, ಕು.ರಕ್ಷ, ರೋವರ್ಸ್ ಸ್ಕೌಟ್ ಲೀಡರ್ ಶ್ರೀಪ್ರಕಾಶ್,ರೇಂಜರ್ಸ್ ಲೀಡರ್ ಶ್ರೀಮತಿ ಸಂಗೀತಾ ಪೂಜಾರಿ,ವಿದ್ಯಾರ್ಥಿ ನಾಯಕರಾದ ಅಕ್ಷಯ್, ಸುರೇಖ, ಪ್ರಾಂಕ್ಲೀನ್ ಮಥಾಯಸ್, ಪ್ರತೀಕ್ಷ, ಕ್ಯಾಂಪಸ್‍ನ ಇತರ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪ್ರವೀಣ್‍ಕುಮಾರ್ ರವರು ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಸೆಕೆಂಡ್ ಆಫೀಸರ್ ಜಾನ್ ವಿಲಿಯಂರವರು ವಂದಿಸಿದರು.

ಕುತ್ಯಾರು : ಸೂರ್ಯ ಚೈತನ್ಯ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

Posted On: 26-01-2021 10:31PM

ಶಿಕ್ಷಣದ ಪ್ರಮುಖ ಉದ್ದೇಶವು ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನ ಬೆಳೆಸುವುದಾಗಿದೆ. ಯುವಜನತೆಯು ಸಮಾಜದ ಏಳಿಗೆಗೆ ಸದಾ ಶ್ರಮಿಸಬೇಕು. ಭಾರತದ ಉನ್ನತ ಪರಂಪರೆಯನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮದು. ಜನರ ತೆರಿಗೆ ಹಣದ ಸದ್ವಿನಿಯೋಗವಾಗಬೇಕು. ದೇಶದ ಸೈನಿಕರ ತ್ಯಾಗ ,ಬಲಿದಾನ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದು ಮಂಗಳೂರಿನ ನೀರು ಸರಬರಾಜು ಯೋಜನೆಯ ಡಿಸೈನ್ ಇಂಜಿನಿಯರ್ ಪ್ರಕಾಶ್ ಕಿಣಿ ಕುತ್ಯಾರು ಹೇಳಿದರು. ಅವರು ಕುತ್ಯಾರಿನ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸಂಸ್ಥೆಯಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ವಾನ್ ಶಂಭುದಾಸ್ ಗುರೂಜಿ ವಹಿಸಿ ಶುಭ ಹಾರೈಸಿದರು . ಸಂಸ್ಥೆಯ ಪ್ರಾಂಶುಪಾಲ ಗುರುದತ್ತ ಸೋಮಯಾಜಿ ಅತಿಥಿಗಳನ್ನು ಸ್ವಾಗತಿಸಿದರು. ಶ್ರುತಿ ರಾವ್ ಪರಿಚಯಿಸಿದರು. ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿ, ನಾಗರಾಜ್ ವಂದಿಸಿದರು.

ಹೇರೂರು : ಶ್ರೀರಾಮ ಮಂದಿರದ ಅಭಿಯಾನದ ಪ್ರಯುಕ್ತ ಭಾರತ ಮಾತಾಪೂಜಾ ಕಾರ್ಯಕ್ರಮ

Posted On: 26-01-2021 09:54PM

ಶ್ರೀರಾಮ ಮಂದಿರದ ಅಭಿಯಾನದ ಪ್ರಯುಕ್ತ ಇಂದು ಹೇರೂರು ದಿನೇಶ್ ದೇವಾಡಿಗ ರವರ ಮನೆಯಲ್ಲಿ ಭಾರತ ಮಾತಾಪೂಜಾ ಕಾರ್ಯಕ್ರಮ ನಡೆಯಿತು. ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಹೇರೂರು ಗ್ರಾಮಸ್ಥರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಜಯ ಶೆಟ್ಟಿ ಹೇರೂರು, ಶಂಕರ ದೇವಾಡಿಗ, ಶ್ರೀ ನಿತ್ಯಾನಂದ ಆಚಾರ್ಯ, ವರುಣ್ ಆಚಾರ್ಯ, ನಳಿನಾಕ್ಷಿ ಆಚಾರ್ಯ, ಶಶಿಕಲ ದೇವಾಡಿಗ, ಶೈಲಜಾ ಪೂಜಾರಿ, ಮಾಲತಿ ಆಚಾರ್ಯ, ಸುಮಿತ್ರ ದೇವಾಡಿಗ, ಸುಂದರಿರಾವ್, ಕಮಲ ದೇವಾಡಿಗ, ಉದಯ ದೇವಾಡಿಗ, ಭಾರತಿ ಆಚಾರ್ಯ, ಪವಿತ್ರ ರಾವ್, ಶಶಿಕಲಾ ಆಚಾರ್ಯ, ಶಾಂತ ಮೂಲ್ಯ, ಜಯ ಸೇರಿಗಾರ್, ಶ್ರೀನಿವಾಸ ದೇವಾಡಿಗ, ವಿನೋದ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

ಸಾಮೂಹಿಕವಾಗಿ ಶ್ರೀ ಹನುಮಾನ್ ಚಾಲೀಸ್ ಪಠಣ ಮಾಡಲಾಯಿತು. ಶ್ರೀ ಭಾರತಮಾತೆಗೆ ಪುಷ್ಪಾರ್ಚನ ಮಾಡಲಾಯಿತು. ಶ್ರೀ ದಿನೇಶ್ ದೇವಾಡಿಗರವರು ಕಾರ್ಯಕ್ರಮ ನಿರೂಪಿಸಿ, ಪ್ರೀತಿ ಆಚಾರ್ಯರವರು ವಂದಿಸಿದರು.

ಉಡುಪಿ : ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಹಾಗೂ ವಿಜಯ ಪೇಪರ್ಸ್ ಜಂಟಿಯಾಗಿ ಜಿಲ್ಲಾ ಆಸ್ಪತ್ರೆ ಮತ್ತು ಸ್ಪಂದನ ವಿಶೇಷ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ

Posted On: 26-01-2021 09:45PM

ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಹಾಗೂ ವಿಜಯ ಪೇಪರ್ಸ್ ಉಡುಪಿ ಜಂಟಿ ಯಾಗಿ ಗಣರಾಜ್ಯೋತ್ಸವದ ಪ್ರಯುಕ್ತ‌ ಇಂದು ಬೆಳಿಗ್ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಅನಾರೋಗ್ಯದಲ್ಲಿ ದಾಖಲಾಗಿರುವವರಿಗೆ ಹಾಗೂ ಉಪ್ಪುರು ಸ್ಪಂದನ ದ ವಿಶೇಷ ಮಕ್ಕಳಿಗೆ ಹಣ್ಣು ಹಂಪಲು ವಿತರಣ ಕಾರ್ಯಕ್ರಮ ನಡೆಸಲಾಯಿತು.

ಜಿಲ್ಲಾಧ್ಯಕ್ಷರಾದ ಎಮ್. ಮಹೇಶ್ ಕುಮಾರ್, ಗೌರವ ಸಲಹೆಗಾರರಾದ ಅಶೋಕ್ ಶೆಟ್ಟಿ, ವಿಜಯ ಪೇಪರ್ಸ್ ಮಾಲಕರಾದ ಮಹೇಶ್ ಶೆಣೈ, ಮಾಜಿ ಅಧ್ಯಕ್ಷರಾದ ರಮೇಶ್ ತಿಂಗಳಾಯ, ಕಾರ್ಯದರ್ಶಿ ಮನೋಜ್ ಕಡಬ, ಕೋಶಾಧಿಕಾರಿ ಸುಧೀರ್ ಡಿ. ಬಂಗೇರ, ಸಮಿತಿ ಸದಸ್ಯರಾದ ಶಿವರಾಮ್ ಆಚಾರ್ಯ, ರಮೇಶ್ ಕುಂದರ್, ಸದಸ್ಯರಾದ ಶಿವಪ್ರಸಾದ್ ಉಪಸ್ಥಿತರಿದ್ದರು.

ಇಂದಿಗೆ 200 ವರ್ಷ ಪೂರೈಸಿದ ಸಂಭ್ರಮದಲ್ಲಿ ಶ್ರೀವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆ ಅವರಾಲುಮಟ್ಟು

Posted On: 26-01-2021 06:11PM

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಲಿಮಾರು ಪಂಚಾಯಿತಿ ವ್ಯಾಪ್ತಿಯ ಹಲವಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಶಾಲೆ ಅನುದಾನಿತ ಶ್ರೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆ ಇಂದು‌ 200 ವರ್ಷ ಪೂರೈಸಿದ ಸಂಭ್ರಮದಲ್ಲಿದೆ.

1821 ಜನವರಿ 27ರಂದು ಆರಂಭವಾದ ಈ ಶಾಲೆಯು ಗ್ರಾಮೀಣ ಭಾಗದ ಮಕ್ಕಳಿಗೆ ಒಂದನೇ ತರಗತಿಯಿಂದ ಏಳನೇ ತರಗತಿವರೆಗಿನ ಶಿಕ್ಷಣದ ಕನಸನ್ನು ನನಸು ಮಾಡಿತ್ತು. ಇಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ವೃತ್ತಿ ನಿರತರಾಗಿದ್ದಾರೆ.

ಆಂಗ್ಲ ಮಾಧ್ಯಮದ ಭರಾಟೆಯಲ್ಲಿ ಅಪರೂಪವೆನ್ನುವಂತೆ ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮದ ಶಾಲೆಯೊಂದು 200 ವರ್ಷ ಪೂರೈಸಿರುವುದು ಅವರಾಲುಮಟ್ಟು ಗ್ರಾಮದ ಜನತೆಗೆ ಹೆಮ್ಮೆಯೊಂದಿಗೆ ಖುಷಿಯನ್ನು ಉಂಟುಮಾಡಿದೆ.

ಉಡುಪಿ : ಜಲಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಗಳ ಬಗ್ಗೆ ಕ್ಷೇತ್ರ ಮಟ್ಟದ ಕಾರ್ಯಕರ್ತರಿಗೆ ತರಬೇತಿ

Posted On: 25-01-2021 09:33AM

ಜಲಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಗಳ ಬಗ್ಗೆ ಕ್ಷೇತ್ರ ಮಟ್ಟದ ಕಾರ್ಯಕರ್ತರಿಗೆ ತರಬೇತಿ ಕಾರ್ಯಕ್ರಮ ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಶ್ರೀ ರಾಜಾರವರು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಜಲಜೀವನ್ ಮಿಷನ್ ಯೋಜನೆಯ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.

ಶ್ರೀ ಜೋಸೆಫ್ ರೆಬೊಲ್ಲೋ ಜಲ ಸಂರಕ್ಷರಣೆ ಹಾಗೂ ಅಂತರ್ಜಲ ಪುನಶ್ಚೇತನ ವಿಷಯದ ಬಗ್ಗೆ ತರಬೇತಿ ನಡೆಸಿಕೊಟ್ಟರು. ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಉಡುಪಿಯ ಪ್ರಯೋಗಶಾಲಾ ತಂತ್ರಜ್ಙರು FTK ಕಿಟ್ ಮೂಲಕ ಗ್ರಾ.ಪಂ ಮಟ್ಟದಲ್ಲಿ ನೀರಿನ ಗುಣಮಟ್ಟ ಪರೀಕ್ಷೆಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

80 ಬಡಗಬೆಟ್ಟು ಗ್ರಾ.ಪಂ ನ SLRM ಮೇಲ್ವಿಚಾರಕಿ ಶ್ರೀಮತಿ ನೀರಜಾ ರವರು ತ್ಯಾಜ್ಯ ವಿಂಗಡಣೆ ಹಾಗೂ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು. ಪುಣ್ಯಕೋಟಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಉಡುಪಿ ವಿಭಾಗದ ಮುಖ್ಯಸ್ಥ ಶ್ರೀ ಗಿರೀಶ್ ಟಿ.ವಿ ತರಬೇತಿಯಲ್ಲಿ ಸಮನ್ವಯಕಾರರಾಗಿ ಭಾಗವಹಿಸಿದರು.

ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಮೋಹನ್ ರಾಜ್, ಜಿಲ್ಲಾ ಪಂಚಾಯತ್ ಜಲಜೀವನ್ ಮಿಷನ್ ಯೋಜನಾ ವ್ಯವಸ್ಥಾಪಕ ಶ್ರೀ ಸುಧೀರ್ ಎ.ಕೆ, ಸ್ವಚ್ಛ ಭಾರತ್ ಮಿಷನ್ ವಿಭಾಗದ ಶ್ರೀ ಪ್ರದೀಪ್, ಪುಣ್ಯಕೋಟಿ ಸಂಸ್ಥೆಯ ಕಾರ್ಯದರ್ಶಿ ಶ್ರೀ ಲಕ್ಷ್ಮೀ ನರಸಿಂಹಯ್ಯ, ಶ್ರೀ ನರೇಂದ್ರಬಾಬು ಹಾಗೂ ಸಿಬ್ಬಂಧಿಯವರು ಭಾಗವಸಿದರು. ತರಬೇತಿ ಕಾರ್ಯಾಗಾರದಲ್ಲಿ ಉಡುಪಿ ಆಸುಪಾಸಿನ 8 ಗ್ರಾಮ ಪಂಚಾಯತ್ ಗಳ 40 ಮಂದಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ ನೀರು ನಿರ್ವಾಹಕರು ಪಾಲ್ಗೊಂಡರು.

ಉಂಡಾರು ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ತುಳು ಲಿಪಿ ನಾಮಫಲಕದ ಉದ್ಘಾಟನೆ

Posted On: 24-01-2021 07:51PM

ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ತುಳು ಲಿಪಿಯ ನಾಮಫಲಕವನ್ನು ಸೋದೆ ಶ್ರೀವಾದಿರಾಜ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಇದೇ ಸಂದರ್ಭ ಇನ್ನಂಜೆಯಲ್ಲಿ ನಡೆದ ತುಳುಲಿಪಿ ಕಲಿಕಾ ತರಬೇತಿಯಲ್ಲಿ ಪಾಲ್ಗೊಂಡು ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಶ್ರೀಗಳು ವಿತರಿಸಿದರು.

ಈ ಸಂದರ್ಭ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶ್ರೀಮತಿ ತಾರಾ ಆಚಾರ್ಯ, ಜೈ ತುಲುನಾಡ್ ಸಂಸ್ಥೆಯ ಅಧ್ಯಕ್ಷರಾದ ಸುದರ್ಶನ್ ಸುರತ್ಕಲ್, ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕರಾದ ವಿಷ್ಣುಮೂರ್ತಿ ಮಂಜಿತ್ತಾಯ, ಇನ್ನಂಜೆಯ ಯುವತಿ ಮಂಡಲದ ಅಧ್ಯಕ್ಷೆ ಕುಮಾರಿ ಅನಿತಾ ಆಚಾರ್ಯ ಇನ್ನಂಜೆ ಮತ್ತಿತರರು ಉಪಸ್ಥಿತರಿದ್ದರು.

ಜೇಸಿಐ ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ನಿಧಿ ಶೆಟ್ಟಿ ಪುಳಿಂಚ ಅವರಿಗೆ ಪ್ರಥಮ ಸ್ಥಾನ

Posted On: 23-01-2021 12:10PM

ಮಂಗಳೂರು : ಜೇಸಿಐ ಭಾರತದ 65ನೇ ರಾಷ್ಟ್ರೀಯ ಅಧಿವೇಶನದ ಪ್ರಯುಕ್ತ ಯುವ ಜೇಸಿ ಸದಸ್ಯರಿಗಾಗಿ ಆನ್ ಲೈನ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರ ಮಟ್ಟದ ಪ್ರತಿಭಾನ್ವೇಷಣಾ ಭಾಷಣ ಸ್ಪರ್ಧೆಯಲ್ಲಿ ಜೇಸಿಐ ಮಂಗಳೂರು ಇಂಪ್ಯಾಕ್ಟ್ ಘಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದ ನಿಧಿ ಶೆಟ್ಟಿ ಪುಳಿಂಚ ಅವರು ಪ್ರಥಮ ಸ್ಥಾನ ಗಳಿಸಿದ್ದಾರೆ.

ರಾಷ್ಟ್ರ ಮಟ್ಟದ ಪ್ರತಿಭಾನ್ವೇಷಣಾ ಭಾಷಣ ಸ್ಪರ್ಧೆಯಲ್ಲಿ ಜೇಸಿಐ ಮಂಗಳೂರು ಇಂಪ್ಯಾಕ್ಟ್ ಘಟಕದ ಪ್ರತಿನಿಧಿಯಾಗಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ನಿಧಿ ಶೆಟ್ಟಿ ಪುಳಿಂಚ ಅವರನ್ನು ಜೇಸಿಐ ಮಂಗಳೂರು ಇಂಪ್ಯಾಕ್ಟ್ ಮತ್ತು ಜೇಸಿಐ ಮಂಗಳೂರು ಇನ್ ಸ್ಪೈರ್ ಘಟಕದ ವತಿಯಿಂದ ಜಂಟಿಯಾಗಿ ಸನ್ಮಾನಿಸಲಾಯಿತು.

ಜೇಸಿಐ ಮಂಗಳೂರು ಇಂಪ್ಯಾಕ್ಟ್ ಘಟಕದ ಸ್ಥಾಪಕಾಧ್ಯಕ್ಷ ದೀಪಕ್ ಗಂಗೂಲಿ, 2020ರ ಅಧ್ಯಕ್ಷ ಸೂರಜ್ ಆರ್. ಶೆಟ್ಟಿ, ಮಂಗಳೂರು ಇನ್ ಸ್ಫೈರ್ ಘಟಕದ ಸ್ಥಾಪಕಾಧ್ಯಕ್ಷೆ ಸಾರಿಕಾ ಪೂಜಾರಿ, ಕೋಶಾಧಿಕಾರಿ ಪ್ರಾರ್ಥನಾ, ನಿಧಿ ಶೆಟ್ಟಿ ಅವರ ಹೆತ್ತವರಾದ ಶ್ರೀಧರ ಶೆಟ್ಟಿ ಪುಳಿಂಚ, ಪ್ರತಿಭಾ ಶೆಟ್ಟಿ ಪುಳಿಂಚ, ಸಹೋದರ ನಿನಾದ್ ಶೆಟ್ಟಿ ಉಪಸ್ಥಿತರಿದ್ದರು.

ಮಂಗಳೂರು ಬೆಂದೂರು ಸೈಂಟ್ ತೆರೆಸಾ'ಸ್ ಸ್ಕೂಲ್ ನ ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ವಲಯ ಮಟ್ಟದಲ್ಲಿ ಆಯೋಜಿಸಲಾಗಿದ್ದ ಅರ್ಹತಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ, ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದರು‌. ಪ್ರಸ್ತುತ ಗುಜರಾತ್ ನ ವಡೋಧರಾದಲ್ಲಿ ನಡೆಯುತ್ತಿರುವ 65 ನೇ ರಾಷ್ಟ್ರೀಯ ಸಮ್ಮೇಳನದ ಪ್ರಯುಕ್ತ ಆನ್ ಲೈನ್ ಮೂಲಕ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ದೇಶದ ವಿವಿಧೆಡೆಗಳಿಂದ ಯುವ ಜೇಸಿ ಸದಸ್ಯರು ಭಾಗವಹಿಸಿದ್ದರು.

ರೋಟರಿ ಕ್ಲಬ್ ಬೆಳ್ಮಣ್ ಗೆ ಇಂದು ರೋಟರಿ ಜಿಲ್ಲಾ ಗವರ್ನರ್ ಭೇಟಿ

Posted On: 23-01-2021 11:58AM

ಇಂದು ರೋಟರಿ ಕ್ಲಬ್ ಬೆಳ್ಮಣ್ ಕ್ಲಬ್ ಗೆ ರೋಟರಿ ಜಿಲ್ಲಾ ಗವರ್ನರ್ ರೋ. ರಾಜಾರಾಮ್ ಭಟ್ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಶಾಶ್ವತ ಯೋಜನೆಗಳು ಉದ್ಘಾಟಿಸಲಿದ್ದಾರೆ.

ಸಭಾಧ್ಯಕ್ಷತೆಯನ್ನು ಕ್ಲಬ್ ನ ಅಧ್ಯಕ್ಷರಾದ ರೋ.ಸುಭಾಷ್ ಕುಮಾರ್ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಜಿಲ್ಲಾ ಉಪ ಗವರ್ನರ್ ರೋ.ನವೀನ್ ಅಮೀನ್ , ವಲಯ ಸೇನಾನಿ ರೋ. ಸುರೇಶ್ ರಾವ್ ಭಾಗವಹಿಸಲಿದ್ದಾರೆ.

ಕಾಪು ತಾಲೂಕು ಗ್ರಾಮ ಪಂಚಾಯತ್ ಗಳ ಅಧ್ಯಕ್ಷ -ಉಪಾಧ್ಯಕ್ಷ ಮೀಸಲಾತಿಗಳ ಆಯ್ಕೆ ಪ್ರಕಟ

Posted On: 21-01-2021 04:25PM

ಕಾಪು ತಾಲೂಕಿನ 2020ನೇ ಸಾಲಿನ ಚುನಾವಣೆ ಮುಗಿದ 16 ಗ್ರಾಮಪಂಚಾಯತ್ ಗಳ 30 ತಿಂಗಳ ಮೊದಲನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಇಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ತಾಲೂಕಿನ ಗ್ರಾಮ ಪಂಚಾಯತಿಯ ಚುನಾಯಿತ ಸದಸ್ಯರ ಸಮ್ಮುಖದಲ್ಲಿ ಇಂದು ಉಚ್ಚಿಲ ಮಹಾಲಕ್ಷ್ಮಿ ಸಭಾ ಭವನದಲ್ಲಿ ನಡೆಯಿತು.

ಬೆಳ್ಳೆ : ಅಧ್ಯಕ್ಷ- ಹಿಂದುಳಿದ ವರ್ಗ ಅ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಕುರ್ಕಾಲು: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ. ಶಿರ್ವ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಇನ್ನಂಜೆ: ಅಧ್ಯಕ್ಷ- ಹಿಂದುಳಿದ ವರ್ಗ ಅ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ. ಕಟಪಾಡಿ: ಅಧ್ಯಕ್ಷ- ಹಿಂದುಳಿದ ವರ್ಗ ಅ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ. ಕೋಟೆ: ಅಧ್ಯಕ್ಷ -ಹಿಂದುಳಿದ ವರ್ಗ ಅ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ‌. ಮಜೂರು :ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ ವರ್ಗ ಅ. ಕುತ್ಯಾರು: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ. ಮುದರಂಗಡಿ: ಅಧ್ಯಕ್ಷ- ಹಿಂದುಳಿದ ವರ್ಗ ಬ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ. ಬೆಳಪು: ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ ವರ್ಗ ಅ. ಬಡಾ: ಅಧ್ಯಕ್ಷ -ಅನುಸೂಚಿತ ಜಾತಿ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ ವರ್ಗ ಅ ಮಹಿಳೆ‌. ಎಲ್ಲೂರು: ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ- ಅನುಸೂಚಿತ ಜಾತಿ ಮಹಿಳೆ. ಪಲಿಮಾರು: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ ವರ್ಗ ಬ ಮಹಿಳೆ. ತೆಂಕ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ. ಪಡುಬಿದ್ರಿ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಹೆಜಮಾಡಿ: ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ- ಹಿಂದುಳಿದ ವರ್ಗ ಅ ಮಹಿಳೆ.

ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಅಧಿಕಾರಿಗಳನ್ನು ನೇಮಿಸಿ ಏಳು ದಿನ ಮುಂಚಿತವಾಗಿ ಗ್ರಾಮ ಪಂಚಾಯತಿಗಳಿಗೆ ನೋಟಿಸ್ ನೀಡಲಾಗುವುದು. 15 ದಿನಗಳ ಒಳಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ಅಧ್ಯಕ್ಷ-ಉಪಾಧಕ್ಷರ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಈ ಸಂದರ್ಭ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.