Updated News From Kaup
ಕಾಪು : ಹೊಸ ಮಾರಿಗುಡಿಯಲ್ಲಿ ಶಿಲಾ ಪುಷ್ಪ ಸಮರ್ಪಣೆಯ ಅಂಗವಾಗಿ ಶ್ರೀ ಲಕ್ಷ್ಮಿ ಜನಾರ್ಧನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ
Posted On: 02 Mar 2021, 10:28 AM
ಕಾಪು ಶ್ರೀ ಹೊಸಮಾರಿಗುಡಿಯಲ್ಲಿ ಸುಗ್ಗಿ ಮಾರಿಪೂಜೆಯಂದು ನಡೆಯಲಿರುವ ಶಿಲಾ ಪುಷ್ಪ ಸಮರ್ಪಣೆಯ ಪ್ರಯುಕ್ತ ಕಾಪು ಸಾವಿರ ಸೀಮೆಯ ಒಡೆಯ ಮಹತೋಭಾರ ಶ್ರೀ ಲಕ್ಷ್ಮಿ ಜನಾರ್ಧನ ದೇವರ ಸನ್ನಿಧಿಯಲ್ಲಿ ಹೊಸ ಮಾರಿಗುಡಿಯ ಆಡಳಿತ ಮಂಡಳಿ ಮತ್ತು ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಸೇರಿ ಪ್ರಾರ್ಥನೆ ನಡೆಸಲಾಯಿತು.
ಇಂದಿಗೂ ಭಕ್ತರ ಸೆಳೆಯುವ 45 ವರ್ಷಗಳ ಹಿಂದಿನ ವರ್ತೆ, ಕಲ್ಕುಡ ದೈವದ ವರ್ಣಚಿತ್ರ
Posted On: 01 Mar 2021, 09:02 PM
ಉಡುಪಿ : ಬನ್ನಂಜೆ ಕಲ್ಕುಡ ಮನೆ ದೈವಸ್ಥಾನದಲ್ಲಿ 1975ರಲ್ಲಿ ಕೆ. ಬಿ. ಗೋಪಾಲಕೃಷ್ಣರಾವ್ ರವರ ಕೈಚಳಕದಿ ಮೂಡಿದ ವರ್ತೆ-ಕಲ್ಕುಡ ದೈವದ ವರ್ಣಚಿತ್ರವು ಇಂದಿಗೂ ಕಾಣಸಿಗುತ್ತದೆ. ಸುಮಾರು 45 ವರ್ಷಗಳ ಹಿಂದಿನ ದೈವಗಳ ಮುಖಭಾವ ಇರುವ ಈ ವರ್ಣಚಿತ್ರವನ್ನು ಶ್ರೀಮತಿ ಶ್ರೀದೇವಿ ನಂಬಿಯಾರ್ ಇವರು ಸೇವಾ ರೂಪದಲ್ಲಿ ನೀಡಿದ್ದಾಗಿದೆ. ಸುಮಾರು ವರ್ಷಗಳ ಇತಿಹಾಸ ಇರುವ ಈ ದೈವಸ್ಥಾನದ ವಾರ್ಷಿಕ ನೇಮೋತ್ಸವ ಮಾರ್ಚ್ 7, ಆದಿತ್ಯವಾರದಂದು ನಡೆಯಲಿದೆ.
ಸಂತ ಮೇರಿ ಮಹಾವಿದ್ಯಾಲಯದಲ್ಲಿ ಮಿನಿ ಪ್ರಾಜೆಕ್ಟ್ ಅಭಿವೃದ್ದಿ ಕಾರ್ಯಗಾರ
Posted On: 01 Mar 2021, 08:44 PM
ಶಿರ್ವ: ಇಂದು ಆಧುನಿಕ ಜಗತ್ತು ಸಂಪೂರ್ಣವಾಗಿ ಡಿಜಿಟಲೀಕರಣವಾಗುತ್ತಿದೆ. ತಂತ್ರಜ್ಞಾನದ ಅಭಿವೃದ್ದಿಯು ಹೊಸ ಆಲೋಚನೆಗಳ ಆವಿಷ್ಕಾರಗಳು, ಉತ್ತಮ ಸೌಲಭ್ಯಗಳು ಮತ್ತು ಉತ್ತಮ ಐಷಾರಾಮಿ ಜೀವನ ಶೈಲಿಗಳಿಗೆ ಕಾರಣವಾಗಿದೆ. ಇಂಟರ್ನೆಟ್‍ಗೆ ಸಂಪರ್ಕ ಹೊಂದಿದ ಅನೇಕ ಸಾಧನೆಗಳು ಜೀವನದ ವಿಧಾನವನ್ನು ಬದಲಾಯಿಸಿದೆ ಹಾಗು ಇಂತಹ ತಂತ್ರಜ್ಞಾನದ ಕಲಿಕೆಯು ವಿದ್ಯಾರ್ಥಿ ದೆಸೆಯಲ್ಲಿ ರೂಢಿಸಿಕೊಳುವ ಮೂಲಕ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವನೆ ಹೆಚ್ಚಲು ಪೂರಕ ಎಂದು ಶಿರ್ವ ಸಂತಮೇರಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ‘ಮಿನಿ ಪ್ರಾಜೆಕ್ಟ್ ಅಭಿವೃದ್ದಿ ಕಾರ್ಯಗಾರದಲ್ಲಿ ಮುಖ್ಯಅಥಿತಿಯಾಗಿ ಆಗಮಿಸಿದ ಬಂಟಕಲ್ ಕಾಲೇಜಿನ ಡಾ| ರಾಘವೇಂದ್ರ ಎಸ್ ರವರು ಮಾತನಾಡಿದರು. ಪದವಿ ವ್ಯಾಸಂಗ ಮಾಡುವ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜತೆಗೆ ಉಚಿತ ತರಬೇತಿಗಳನ್ನು ನೀಡಿ, ಸೂಕ್ತ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಶ್ರೀ ಮಧ್ವವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್, ಬಂಟಕಲ್ ಹಾಗೂ ಶಿರ್ವ ಸಂತ ಮೇರಿ ಕಾಲೇಜು ಪರಸ್ಪರ ಒಡಂಬಡಿಕೆಯ ಅನುಸಾರ ಮಾರ್ಚ್ 1 ರಿಂದ 2 ರವರಗೆ ಕಾಲೇಜಿನ ಫಾ.ಹೆನ್ರಿ ಕ್ಯಾಸ್ತಲೀನೊ ಸಭಾಂಗಣದಲ್ಲಿ ಕಾರ್ಯಾಗಾರವನ್ನು ಏರ್ಪಡಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಂಟಕಲ್ ಕಾಲೇಜಿನ ಸಹ-ಪ್ರಾಧ್ಯಾಪಕಿ ಶ್ರೀಮತಿ ಸಹನಾರವರು ಮಾತನಾಡಿ ನಮ್ಮ ಜೀವನದ ಪ್ರತಿಯೊಂದು ವಿಚಾರವು ಒಂದಲ್ಲ ಒಂದು ರೀತಿಯಲ್ಲಿ ಕರಕುಶಲ ವಿಜ್ಞಾನಕ್ಕೆ ಸಂಬಂಧಿಸಿದೆ. ಪ್ರತಿ ವರ್ಷಗಳಲ್ಲಿ ತಂತ್ರಜ್ಞಾನವು ವಿಸ್ಮಯಕಾರಿಯಾಗಿ ಉಪಯುಕ್ತ ಸಂಪನ್ಮೂಲಗಳನ್ನು ರಚಿಸುವ ಜವಾಬ್ದಾರಿಯನ್ನು ಹೊಂದಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ವೆಬ್ ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡಿ ಪ್ರಾತ್ಯಕ್ಷಿಕೆಯನ್ನು ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್‍ರವರು ಈ ಕಾರ್ಯಾಗಾರವು ಐಟಿ ಉದ್ಯಮದಲ್ಲಿ ಬಳಸುತ್ತಿರುವ ಹೊಸ ಮತ್ತು ಇತ್ತೀಚಿನ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಸುಧಾರಿತ ತಂತ್ರಜ್ಞಾನವನ್ನು ರೂಪಿಸಲು ಸಹಾಯಕಾರಿಯೆಂದು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಈ ಕಾರ್ಯಗಾರದ ಮುಖ್ಯ ಉದ್ಧೇಶ ಗುಣಮಟ್ಟದ ಉಪಕರಣಗಳು ಮತ್ತು ಉದ್ಯಮದ ಯೋಜನೆಗಳಿಗೆ ಒಡ್ಡಿಕೊಳ್ಳುವ ಗುರಿಯನ್ನು ಹೊಂದಿದೆಂದು ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ಮಾಹಿತಿ ತಂತ್ರಜ್ಞಾನಕೋಶದ ನಿರ್ದೇಶಕರಾದ ಲೆಫ್ಟಿನೆಂಟ್ ಶ್ರಿ ಕೆ.ಪ್ರವೀಣ್ ಕುಮಾರ್ ರವರು ಪ್ರಾಸ್ತವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಉನ್ನತ್ ಭಾರತ್ ಅಭಿಯಾನ್ ಸಂಯೋಜಕರಾದ ಶರತ್‍ಕುಮಾರ್ ಉಪನ್ಯಾಸಕರಾದ ಪ್ರಕಾಶ್, ಸುಷ್ಮಾ, ದಿವ್ಯಶ್ರೀ,ಎಲ್ಲಾ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ಉಪಸ್ಥಿತರಿದ್ದರು. ಪ್ರಿಯಾಂಕ ವಂದಿಸಿದರು, ಪ್ರೀತಿಕಾ ಮತ್ತು ಬಳಗ ಪ್ರಾರ್ಥಿಸಿ, ಸೃಷ್ಟಿ ಸ್ವಾಗತಿಸಿದರು. ಫೈಜಾ ಭಾನು ಕಾರ್ಯಕ್ರಮ ನಿರೂಪಿಸಿದರು.
ಕಾಪು : ಶಿಲಾ ಪುಷ್ಪ ಸಮರ್ಪಣಾ ಬಗ್ಗೆ ಪೂರ್ವಭಾವಿ ಸಭೆ
Posted On: 28 Feb 2021, 09:10 PM
ಕಾಪುವಿನ ಮಾರಿಯಮ್ಮ ದೇವಳದಲ್ಲಿ ಮಾರ್ಚ್ 23/24 ಸುಗ್ಗಿ ಮಾರಿಪೂಜೆಯಂದು ಜರಗಲಿರುವ ಶಿಲಾ ಪುಷ್ಪ ಸಮರ್ಪಣಾ ಬಗ್ಗೆ ಪೂರ್ವಭಾವಿ ಸಮಾಲೋಚನಾ ಸಭೆಯು ಹೊಸ ಮಾರಿಗುಡಿಯಲ್ಲಿ ಇಂದು ನಡೆಯಿತು. ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿ ಮತ್ತು ಪ್ರಚಾರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಿರಿಗನ್ನಡ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರಾದ ಸಮಾಜ ಸೇವಕ ರಾಘವೇಂದ್ರ ಪ್ರಭು,ಕವಾ೯ಲು
Posted On: 28 Feb 2021, 07:49 PM
ಉಡುಪಿ : ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು, ಕನಾ೯ಟಕ ರಕ್ಷಣಾ ವೇದಿಕೆ ಸಪ್ತಸ್ವರ ಸಂಗೀತ ಕಲಾ ಬಳಗ ಬೆಳಗಾವಿ ಮತ್ತು ಮರಳ ಸಿದ್ದೇಶ್ವರ ಕಲಾ ಪೋಷಕ ಸಂಘ ವತಿಯಿoದ ಫೆ.28 ರಂದು ಬೆಳಗಾವಿಯಲ್ಲಿ ರಾಷ್ಟ್ರೀಯ ಕಲಾ ಉತ್ಸವ -2021 ಕಾಯ೯ಕ್ರಮ ನಡೆಯಿತು. ಈ ಸಂದಭ೯ದಲ್ಲಿ ಸಾಧಕರಿಗೆ ಗೌರವ ವಿಭಾಗದಲ್ಲಿ ಉಡುಪಿ ಜಿಲ್ಲೆಯ ರಾಘವೇಂದ್ರ ಪ್ರಭು,ಕವಾ೯ಲು ರವರು ಸಿರಿಗನ್ನಡ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾಯ೯ಕ್ರಮದಲ್ಲಿ ಆಧ್ಯಾತ್ಮ ಗುರು ಸ್ವಸ್ತಿ ಮಹಾರಾಜ್, ಜಿಲ್ಲಾ ಪೋಲಿಸ್ ಅಧೀಕ್ಷಕ ಸುರೇಶ್ ನಡಿವಾಳ ವಿವಿಧ ಮಠಾಧೀಶರು ಉಪಸ್ಥಿತರಿದ್ದರು. ಶ್ರೀಯುತರು ಸ್ವಚ್ಚ ಭಾರತ್ ಫ್ರ್oಡ್ಸ್ ಸಂಯೋಜಕರಾಗಿ ವಿವಿಧ ಸಮಾಜಮುಖಿ ಕಾಯ೯ಗಳಲ್ಲಿ ತೊಡಗಿಸಿಕೊಂಡಿದ್ದಾರೆ.
92 ಹೇರೂರು : ಉಚಿತ ಚೆಂಡೆ ತರಬೇತಿ ತರಗತಿ ಶುಭಾರಂಭ
Posted On: 28 Feb 2021, 07:44 PM
ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 92ನೇ ಹೇರೂರು ಒಕ್ಕೂಟ ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ ಹೇರೂರು, ಶ್ರೀ ಗುರುರಾಘವೇಂದ್ರ ಮಹಿಳಾ ಭಜನಾ ಮಂಡಳಿ ಹೇರೂರು, ದೇವಾಡಿಗರ ಸಂಘ ಹೇರೂರು ಬಂಟಕಲ್ಲು ಇವರ ಆಶ್ರಯದಲ್ಲಿ ಉಚಿತ ಚೆಂಡೆ ತರಬೇತಿ ತರಗತಿ ಇಂದು ಉದ್ಘಾಟನೆಗೊಂಡಿತು. ಉದ್ಘಾಟಕರಾಗಿ ಶ್ರೀ ಪುಂಡಲೀಕ ಮರಾಠ ನಿವೃತ್ತ ಶಿಕ್ಷಕರು ಹಾಗೂ ಹಿರಿಯ ಪತ್ರಕರ್ತರು ಬಂಟಕಲ್ಲು ಉದ್ಘಾಟಿಸಿ ಶುಭಹಾರೈಸಿದರು. ಹೇರೂರು ಗ್ರಾಮದ ಸುಮಾರು 60 ಜನ ಮಕ್ಕಳು ಮಹಿಳೆಯರು ಪುರುಷರು ಚೆಂಡೆ ತರಬೇತಿ ತರಗತಿಯಲ್ಲಿ ತರಗತಿಯಲ್ಲಿ ಪಾಲ್ಗೊಂಡರು. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿರ್ವ ವಲಯ ಮೇಲ್ವಿಚಾರಕರಾದ ಶ್ರೀಮತಿ ಪಲ್ಲವಿ ಶೆಟ್ಟಿ, ಚಂಡೆ ಹಾಗೂ ಭಜನಾ ತರಬೇತುದಾರರಾದ ರಾಘವೇಂದ್ರ ಭಟ್ ಮುಲ್ಕಾಡಿ ಪಂಜಿಮಾರು, ಶ್ರೀ ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿ ಅಧ್ಯಕ್ಷರಾದ ಶ್ರೀ ಸುಜಿತ್ ಕುಮಾರ್, ದೇವಾಡಿಗರ ಸಂಘ 92 ಹೇರೂರು ಬಂಟಕಲ್ಲು ಅಧ್ಯಕ್ಷರಾದ ಶ್ರೀ ಜಯ ಸೇರಿಗಾರ್, ಶ್ರೀ ಗುರುರಾಘವೇಂದ್ರ ಮಹಿಳಾ ಭಜನಾ ಮಂಡಳಿ ಹೇರೂರು ಅಧ್ಯಕ್ಷರಾದ ಶ್ರೀಮತಿ ವಸಂತಿ ಆಚಾರ್ಯ ಶುಭಹಾರೈಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 92 ಹೇರೂರು ಒಕ್ಕೂಟದ ಅಧ್ಯಕ್ಷರಾದ ಶ್ರೀ ದಿನೇಶ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಶ್ರೀ ದಿನೇಶ್ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು, ಪ್ರೀತಿ ಆಚಾರ್ಯರವರು ಪ್ರಾರ್ಥಿಸಿ, ಶ್ರೀಮತಿ ಸುಕನ್ಯಾ ಜೋಗಿಯವರು ಕಾರ್ಯಕ್ರಮ ನಿರೂಪಿಸಿ, ಉದಯ ದೇವಾಡಿಗ ವಂದಿಸಿದರು.
ಮಾನವೀಯ ನ್ಯಾಯಕ್ಕಾಗಿ ಪ್ರತಿಭಟನೆ : ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ
Posted On: 28 Feb 2021, 05:56 PM
ಉಡುಪಿ : ಸಾಮಾಜಿಕ ಹೋರಾಟವನ್ನು ಮಾಡುತ್ತಾ ಪತ್ನಿ, ಮೂವರು ಚಿಕ್ಕ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಶಂಕರ ಶಾಂತಿಗೆ ಮಾರಣಾಂತಿಕ ಹಲ್ಲೆಯಾಗಿದ್ದು ಈ ಕುರಿತು ಪೋಲಿಸ್ ಠಾಣೆಗೆ ಹಾಗೂ ವರಿಷ್ಠಾಧಿಕಾರಿಗೆ ದೂರು ದಾಖಲಿಸಿದ್ದರೂ ಯಾವುದೇ ಕ್ರಮಕೈಗೊಂಡಿರುವುದಿಲ್ಲ. ಆದುದರಿಂದ ಸಮಾನ ಮನಸ್ಕ ಬಿಲ್ಲವರನ್ನು ಕೂಡಿಕೊಂಡು ಮಾನವೀಯ ನೆಲೆಯಲ್ಲಿ ಶಂಕರ ಶಾಂತಿಗೆ ನ್ಯಾಯವನ್ನು ಆಗ್ರಹಿಸಿ ಮಾಚ್೯ 1, ಸಂಜೆ 3 ಗಂಟೆಗೆ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಬನ್ನಂಜೆ ಬಿಲ್ಲವ ಸಂಘದ ವಠಾರದಿಂದ ಎಸ್‌ಪಿ ಕಚೇರಿಯತ್ತ ತೆರಳಿದ್ದೇವೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಎಂ. ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪು ಜೇಸಿಐನ ವತಿಯಿಂದ ಮೆಸ್ಕಾಂನ ಹಿರಿಯ ಲೈನ್ ಮ್ಯಾನ್ ಸತೀಶ್ ರವರಿಗೆ ಸಮ್ಮಾನ
Posted On: 27 Feb 2021, 06:01 PM
ಕಾಪು : ಜೇಸಿಐ ಭಾರತದ ನಿರ್ದೇಶನದಂತೆ ಸೆಲ್ಯೂಟ್ ದಿ ಸೈಲಂಟ್ ವರ್ಕರ್ ಕಾರ್ಯಕ್ರಮದಡಿ ಕಾಪು ಜೇಸಿಐನ ವತಿಯಿಂದ ಮೆಸ್ಕಾಂನ ಹಿರಿಯ ಲೈನ್ ಮ್ಯಾನ್ ಸತೀಶ್ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು. ಮೆಸ್ಕಾಂನ ಸಹಾಯಕ ಕಾರ್ಯ ನಿವಾರ್ಹಕ ಇಂಜಿನಿಯರ್ ಹರೀಶ್ ಕುಮಾರ್, ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಕಾರ್ಯಕ್ರಮದ ರಾಷ್ಟ್ರೀಯ ಸಂಯೋಜಕಿ ಸೌಮ್ಯ ರಾಕೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಪು ಜೇಸಿಐ ಅಧ್ಯಕ್ಷೆ ಅರುಣಾ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಜೇಸಿಐನ ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು, ನಿಕಟಪೂರ್ವ ಅಧ್ಯಕ್ಷ ವಿನೋದ್ ಕಾಂಚನ್, ಕಾರ್ಯದರ್ಶಿ ಶ್ರುತಿ ಶೆಟ್ಟಿ, ಜೇಸಿರೆಟ್ ಅಧ್ಯಕ್ಷೆ ಗಾಯತ್ರಿ ಆಚಾರ್ಯ, ಪದಾಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು, ಸಿಬಂದಿಗಳು ಉಪಸ್ಥಿತರಿದ್ದರು.
