Updated News From Kaup

ರಾಜಕೀಯ ಪಕ್ಷಗಳಿಂದ ಕುಲಾಲರ ಬಗ್ಗೆ ನಿರ್ಲಕ್ಷ್ಯ ಸಲ್ಲದು -ಕಾಪು ಕುಲಾಲ ಸಂಘದ ಅಧ್ಯಕ್ಷ ಸಂದೀಪ್ ಬಂಗೇರ.

Posted On: 07-12-2020 07:59AM

ಕಾಪು :(06/12/2020)ಕುಲಾಲ ಸಂಘ (ರಿ) ಕಾಪು ವಲಯದ ಸಾಮಾನ್ಯ ಸಭೆಯಲ್ಲಿ ಸಂಘದ ಅಧ್ಯಕ್ಷ ಸಂದೀಪ್ ಬಂಗೇರ ಮಾತನಾಡಿ ಕುಲಾಲ ಸಮುದಾಯವನ್ನು ರಾಜಕೀಯವಾಗಿ ಬಳಸಿ ನಮ್ಮ ಸತತ ಮನವಿಗೆ ರಾಜಕೀಯ ಪಕ್ಷಗಳು ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ತಿಳಿಸಿದರು. ಸಭೆಯಲ್ಲಿ ಕಾಪು ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ಉದಯ ಕುಲಾಲ್, ಕೋಶಧಿಕಾರಿ ಯೋಗೀಶ್ ಕುಲಾಲ್ ಉಳ್ಳೂರು, ಸಂಘದ ಮಾಜಿ ಅಧ್ಯಕ್ಷರು ರಾಜೇಶ್ ಕುಲಾಲ್ ಬೊಬ್ಬೆಟ್ಟು, ಮಹಿಳಾ ಘಟಕದ ಅಧ್ಯಕ್ಷರು ಗೀತಾ ಕುಲಾಲ್ ಶಿರ್ವ, ಕಾರ್ಯದರ್ಶಿ ಸುಮಲತಾ ಇನ್ನಂಜೆ ಸಂಘದ ಸಕ್ರಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು..

ಕಾಪು ಕಾಳಿಕಾಂಬಾ ದೇವಸ್ಥಾನದಲ್ಲಿ ರಾಜ್ಯಮಟ್ಟದ ಸರಸ್ವತೀ ಪ್ರಶಸ್ತಿ ಪುರಸ್ಕೃತೆ ವೈ.ಯು.ಯಶಸ್ವಿ ಆಚಾರ್ಯಳಿಗೆ ಸನ್ಮಾನ

Posted On: 06-12-2020 08:10PM

ಕಾಪು : ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ 2019-20ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.98.24 ಅಂಕಗಳೊಂದಿಗೆ ದಾವಣಗೆರೆಯಲ್ಲಿ ಸರಸ್ವತೀ ಪುರಸ್ಕಾರ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಸಾಧಕಿ ಕಾಪು ದಂಡತೀರ್ಥ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ವೈ.ಯು. ಯಶಸ್ವಿ ಆಚಾರ್ಯಳಿಗೆ ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಡಿ.5ರಂದು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆ. ಉಮೇಶ್ ತಂತ್ರಿ ಮಂಗಳೂರು, ಅಡಳಿತ ಮೊಕ್ತೇಸರ ಶೇಖರ ಆಚಾರ್ಯ, 2ನೇ ಮೊಕ್ತೇಸರ ಅಚ್ಚುತ ಆಚಾರ್ಯ, 3ನೇ ಮೊಕ್ತೇಸರ ಗಂಗಾಧರ ಆಚಾರ್ಯ ದಿಂಡಿಬೆಟ್ಟು, ಅಡಳಿತ ಮಂಡಳಿ, ಕ್ಷೇತ್ರದ ಪ್ರಧಾನ ಅರ್ಚಕ ಭಾಸ್ಕರ್ ಪುರೋಹಿತ್, ಯಶಸ್ವಿ ಆಚಾರ್ಯಳ ಪೋಷಕರು ವೈ. ಉಮೇಶ್ ಆಚಾರ್ಯ, ಶೀಲಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಬಬ್ಬರ್ಯ ಯುವ ಸೇವಾ ಸಮಿತಿ : ಸ್ವಚ್ಛತಾ ಕಾರ್ಯ

Posted On: 06-12-2020 06:35PM

ಉಡುಪಿ : ಬಬ್ಬರ್ಯ ಯುವಸೇವಾ ಸಮಿತಿಯಿಂದ ಇಂದು ಬೆಳಿಗ್ಗೆ ದೈವಸ್ಥಾನ ಸ್ವಚ್ಛತಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ಕೊಡಲಾಯಿತು.

ಜನಸಾಮಾನ್ಯ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕಾರ್ಯಪ್ರವೃತ್ತರಾಗಿ : ಡಾ.ಎಂ.ಟಿ ರೇಜು

Posted On: 05-12-2020 08:49PM

ಉಡುಪಿ : ಕೋವಿಡ್‌ನಿಂದಾಗಿ ಪ್ರಸ್ತುತ ಸಾಲಿನ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಅನುಷ್ಠಾನ ನಿಗದಿತ ಗುರಿ ಸಾಧಿಸಿಲ್ಲ. ಡಿಸೆಂಬರ್ ಹಾಗೂ ಜನವರಿ ಮಾಹೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಂ.ಟಿ ರೇಜು ತಿಳಿಸಿದರು. ಅವರು ಇಂದು ನಗರದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಕಾರ ಪ್ರಸ್ತುತ ಬಜೆಟ್‌ನಲ್ಲಿ ಜನಸಾಮಾನ್ಯ ಕಲ್ಯಾಣ ಯೋಜನೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನೇಕ ಯೋಜನೆಗಳು, ಕಾರ್ಯಕ್ರಮಗಳನ್ನು ರೂಪಿಸಿದೆ. ಇವುಗಳ ಅನುಷ್ಟಾನ ಕೋವಿಡ್ ಸಾಂಕ್ರಾಮಿಕ ರೋಗದಿಂದ ನಿಗದಿತ ಮಟ್ಟದಲ್ಲಿ ಆಗಿಲ್ಲ. ಡಿಸೆಂಬರ್ ಹಾಗೂ ಜನವರಿ ಮಾಹೆಯಲ್ಲಿ ಸಂಪೂರ್ಣಗೊಳಿಸಲು ಕಾರ್ಯಪ್ರವೃತರಾಗಬೇಕು ಎಂದರು.

ಇನ್ನಂಜೆ : ನೆರವಿನ ನಿರೀಕ್ಷೆಯಲ್ಲಿ ರಾಘವೇಂದ್ರ ಶೆಟ್ಟಿ ಕುಟುಂಬ

Posted On: 05-12-2020 09:28AM

ಇನ್ನಂಜೆ ಮಂಡೇಡಿ ಮೂಡು ಮೇಲ್ಮನೆ ಕಿಟ್ಟಿ ಶೆಟ್ಟಿಯ ಮಗನಾದ ರಾಘವೇಂದ್ರ ಶೆಟ್ಟಿ (ರಾಘು) ಕಳೆದ ಹದಿನೈದು ವರ್ಷಗಳಿಂದ ಹೊಟ್ಟೆಪಾಡಿಗಾಗಿ ಮುಂಬೈಯಲ್ಲಿ ದುಡಿಯುತ್ತಿದ್ದರು. ಕಳೆದ ಒಂದು ವರ್ಷದಿಂದ ತನ್ನ ಮಗುವಿನ ಅನಾರೋಗ್ಯ ಕಾರಣದಿಂದಾಗಿ ಊರಿನಲ್ಲಿ ಇದ್ದು ಮಗುವಿನ ಆರೋಗ್ಯ ಸುಧಾರಣೆಗಾಗಿ ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಇವರ ದುರಾದೃಷ್ಟವೆಂಬಂತೆ ಈಗ ರಾಘವೇಂದ್ರ ಶೆಟ್ಟಿಯವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಅನ್ನನಾಳದಲ್ಲಿ ಗೆಡ್ಡೆಯಾಗಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು ಆರು ಲಕ್ಷದವರೆಗೆ ಖರ್ಚು ಆಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಬೆಳಪು : ಜಾರಂದಾಯ ಬೋಟಿಂಗ್ ಪಾಯಿಂಟ್ ಗೆ ಚಾಲನೆ

Posted On: 04-12-2020 02:52PM

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಗ್ರಾಮದಲ್ಲಿ ಪ್ರವಾಸೋದ್ಯಮಕೆ ಉತ್ತೇಜನ ನೀಡುವ ಸಲುವಾಗಿ ಜಾರಂದಾಯ ಬೋಟಿಂಗ್ ಪಾಯಿಂಟ್ ಗೆ ಬೆಳಪು ಗ್ರಾಮಾಭಿವೃದ್ಧಿ ಯ ರೂವಾರಿ ಡಾ| ಬೆಳಪು ದೇವಿಪ್ರಸಾದ್ ಶೆಟ್ಟಿಯವರು ಚಾಲನೆ ನೀಡಿದರು ಈ ಸಂದರ್ಭದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಉಡುಪಿಯಲ್ಲಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ರಹಿತ ಚಿಕಿತ್ಸೆ

Posted On: 04-12-2020 12:13PM

ವೆರಿಕೋಸ್ ವೇಯ್ನ್ ಗೆ ಆಪರೇಷನ್ ರಹಿತ ಆಯುರ್ವೇದ ಪರಿಹಾರ ಉಡುಪಿ ಯಲ್ಲಿ, ದಿನಾಂಕ 6/12/2020 ರ ಭಾನುವಾರ ಹಾಗೂ ಪ್ರತಿ ತಿಂಗಳ 2 ನೇಯ ಭಾನುವಾರ, ಡೆಂಟಾ ಕೇರ್ ಸಹಯೋಗದಲ್ಲಿ.

ನಿಸ್ವಾರ್ಥ ಸೇವಾ ಚತುರ ಅಮಿತ್ ರಾಜ್ ಕೋಡಿಕಲ್

Posted On: 03-12-2020 11:43PM

ಹಿಂದೂ ಸಂಘಟನೆಯಲ್ಲಿ ನಾನಾ ಜವಾಬ್ದಾರಿ ನಿರ್ವಹಿಸಿದ್ದು ರಾಜಕೀಯ ಪಕ್ಷದಲ್ಲೂ ದುಡಿಯುತ್ತಿದ್ದಾರೆ. ಸಾಕಷ್ಟು ಕಡೆ ಅಮಿತ್ ರಾಜ್ ಅನ್ನೋ ಹೆಸರನ್ನ ನೀವು ಕೇಳಿರುವಿರಿ. ಅದೆಷ್ಟೋ ಜನ ಅಮಿತ್ ರಾಜ್ ರವರ ಬಗ್ಗೆ ಹೇಳುವ ಮಾತು... ಅವರೊಂದು ಶಕ್ತಿ. ಹಿಂದುತ್ವಗೋಸ್ಕರ ದುಡಿಯುವಂತಹ ಪ್ರಾಮಾಣಿಕ ನಾಯಕ ಹಾಗೆ ಬಡವರ ಸೇವೆ ಮಾಡುವಂತಹ ಸಮಾಜಸೇವಕ. ತನ್ನ ಬಾಲ್ಯಜೀವನದಿಂದಲೇ "ರಾಷ್ಟ್ರೀಯ ಸ್ವಯಂ ಸೇವಕ ಸಂಘದ " ಸಂಘ ಶಿಕ್ಷಣ ಪಡೆದು ಸ್ವಯಂ ಸೇವಕರಾಗಿದ್ದು, ಸಂಘದ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡವರು. ಬಾಲ್ಯದಿಂದಲೇ ಒಂದು ಆಸೆಯನ್ನ ತನ್ನೊಳಗೆ ಬಚ್ಚಿಟ್ಟುಕೊಂಡಿದ್ದರು. ಸಮಾಜದಲ್ಲಿ ನಾನು ಮತ್ತೊಬ್ಬರಿಗೆ ಒಳ್ಳೆಯದನ್ನ ಮಾಡಬೇಕು, ಸಮಾಜಕ್ಕೆ ಒಳಿತಿನ ಹಸ್ತವಾಗಿ ದುಡಿಯಬೇಕು ಎಂಬ ಮನಸ್ಥಿತಿಯಲ್ಲಿ ಬೆಳೆದು ತಾನು ಅಂದುಕೊಂಡ ಹಾಗೆ ಬದುಕುತ್ತಿದ್ದಾರೆ.

ಸೈಂಟ್ ಜೋನ್ಸ್ ಶಾಲೆ : ವಾರ್ಷಿಕ ಮಹಾಸಭೆ

Posted On: 03-12-2020 08:23PM

ಸೈಂಟ್ ಜೋನ್ಸ್ ಶಾಲೆ ಹಳೆ ವಿದ್ಯಾರ್ಥಿ ಸಂಘ ಶಂಕರಪುರ ಇದರ ವಾರ್ಷಿಕ ಮಹಾಸಭೆ ದಿನಾಂಕ 06/12/2020 ಭಾನುವಾರ ಬೆಳಿಗ್ಗೆ 9: 30 ಕ್ಕೆ ಸೈಂಟ್ ಜೋನ್ಸ್ ಹೈಸ್ಕೂಲ್ ಶಂಕರಪುರ ಇಲ್ಲಿ ನಡೆಯಲಿದೆ.

ಕಟಪಾಡಿ : ಪಾಡ್ದನ ಕಲಾವಿದೆ ಗೋಪಿ ಪಾಣಾರರಿಗೆ ಜಾನಪದ ಸಿರಿ ಪ್ರಶಸ್ತಿ ಪ್ರದಾನ

Posted On: 03-12-2020 06:42PM

ತಂತ್ರಜ್ಞಾನದ ಅತಿಯಾದ ಬಳಕೆಯನ್ನು ಯುವ ಸಮುದಾಯ ಮಾಡುತ್ತಿದ್ದು ಇದರಿಂದ ನಮ್ಮ ಸಂಸ್ಕೃತಿ, ಜಾನಪದ ವಿಚಾರಗಳ ಕಡೆಗೆ ನಿರಾಸಕ್ತರಾಗುತ್ತಿದ್ದಾರೆ. ಮಕ್ಕಳಲ್ಲಿ ಇವೆಲ್ಲದರ ಪರಿಚಯ ಮಾಡಿಕೊಡಬೇಕಾದ ಅನಿವಾರ್ಯತೆಯಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸಖರಾಮ ಹಾವಂಜೆ ಹೇಳಿದರು. ಕಟಪಾಡಿಯ ಎಸ್ ವಿ ಎಸ್ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ತು, ಬೆಂಗಳೂರು ಕನ್ನಡ ಜಾನಪದ ಪರಿಷತ್ತು, ಉಡುಪಿ ಜಿಲ್ಲಾ ಘಟಕ ಮತ್ತು ಕನ್ನಡ ಜಾನಪದ ಪರಿಷತ್ತು, ಕಾಪು ತಾಲೂಕು ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಜರಗಿದ ಕನಕದಾಸ ಜಯಂತಿ ಆಚರಣೆ, ಕನಕದಾಸರ ಗೀತೆಗಳ ಗಾಯನ, ಜಾನಪದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.